ಪುತ್ತೂರು

ಮುರ ಶಿವಸದನದಲ್ಲಿ ದಿವ್ಯಾಂಗಜನ ಸಾಹಿತ್ಯ ಸಂಭ್ರಮ

ಪುತ್ತೂರು: ವಿಶ್ವ ವಿಕಲಚೇತನರ ದಿನಾಚರಣೆ ಪ್ರಯುಕ್ತ ದಿವ್ಯಾಂಗಜನ ಸಾಹಿತ್ಯ ಸಂಭ್ರಮ ಮುರ ಶಿವಸದನ ಹಿರಿಯ ನಾಗರಿಕರ ಹಾಗೂ ವಿಕಲಚೇತನರ ಪುನರ್ವಸತಿ ಕೇಂದ್ರದಲ್ಲಿ ಜರಗಿತು. ವಿಕಲಚೇತನರ ಸುಪ್ತ ಪ್ರತಿಭೆಯನ್ನು‌  ಹಾಗೂ ಸಾಹಿತ್ಯ ಪ್ರತಿಭೆಯನ್ನು ಹೊರತರುವ ನಿಟ್ಟಿನಲ್ಲಿ ಹಾಗೂ ಸೂಕ್ತ ವೇದಿಕೆಯನ್ನು ನೀಡಿ ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಈ ವಿನೂತನ ಕಾರ್ಯಕ್ರಮ ಜರಗಿತು. ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕ, ರೋಟರಿ ಕ್ಲಬ್ ಪುತ್ತೂರು ಯುವದ ಜಂಟಿ ಆಶ್ರಯದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮತ್ತು […]

ಮುರ ಶಿವಸದನದಲ್ಲಿ ದಿವ್ಯಾಂಗಜನ ಸಾಹಿತ್ಯ ಸಂಭ್ರಮ Read More »

ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ದಶಮಾನೋತ್ಸವ ಸಂಭ್ರಮ| ಪಾಲ್ತಾಡಿ ಗ್ರಾಮದ 50 ವರ್ಷ ದಾಂಪತ್ಯ ಜೀವನ ಪೂರೈಸಿದ ಮಾದರಿ ದಂಪತಿಗಳಿಗೆ ಸನ್ಮಾನ

ಪುತ್ತೂರು : ಒಕ್ಕಲಿಗ ಸ್ವಸಹಾಯ ಟ್ರಸ್ಟ್ ಪುತ್ತೂರು ದಶಮಾನೋತ್ಸವ ಸಮಿತಿಯ  ಸಹಯೋಗದೊಂದಿಗೆ ಒಕ್ಕಲಿಗ ಸ್ವಸಹಾಯ ಸಂಘಗಳ ಒಕ್ಕೂಟ, ಯುವ ಘಟಕ, ಮಹಿಳಾ ಘಟಕ, ಗ್ರಾಮ ಸಮಿತಿಯ ಸಹಕಾರದೊಂದಿಗೆ ಒಕ್ಕಲಿಗ ಸ್ವಸಹಾಯ ಟ್ರಸ್ಟ್ ನ ದಶಮಾನೋತ್ಸವ ಸಂಭ್ರಮದ ಅಂಗವಾಗಿ ಸ್ವಸಹಾಯ ಸಂಘಗಳಿರುವ ಎಲ್ಲಾ ಗ್ರಾಮಗಳಲ್ಲಿ ದಾಂಪತ್ಯ ಜೀವನದ 50 ವರ್ಷ ಪೂರೈಸಿದ ಮಾದರಿ ದಂಪತಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಪಾಲ್ತಾಡಿ ಗ್ರಾಮದ ಶ್ರೀಧರ ಗೌಡರ ಶ್ರೀ ಗುರು ನಿಲಯದಲ್ಲಿ ಐದು ಜೊತೆ ದಂಪತಿಗಳಿಗೆ ಸನ್ಮಾನ ಕಾರ್ಯಕ್ರಮ ಡಿ.16 ರಂದು

ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ದಶಮಾನೋತ್ಸವ ಸಂಭ್ರಮ| ಪಾಲ್ತಾಡಿ ಗ್ರಾಮದ 50 ವರ್ಷ ದಾಂಪತ್ಯ ಜೀವನ ಪೂರೈಸಿದ ಮಾದರಿ ದಂಪತಿಗಳಿಗೆ ಸನ್ಮಾನ Read More »

ಸುದೇಶ್ ಕುಮಾರ್ ಬೂತ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ

ಪುತ್ತೂರು: ಕೊಂಬೆಟ್ಟು ಬೂತ್ ಅಧ್ಯಕ್ಷರಾಗಿದ್ದ ಸುದೇಶ್ ಕುಮಾರ್ ಬೂತ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮಹಾಲಿಂಗೇಶ್ವರ ದೇವಳದ ನೂತನ ಸಮಿತಿ ಘೋಷಣೆಯಾಗುತ್ತಿದ್ದಂತೆ ರಾಜೀನಾಮೆ ಪತ್ರವನ್ನು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪ್ರಸಾದ್ ಆಳ್ವರಿಗೆ ನೀಡಿದ್ದಾರೆ. ತಾನು ಕಳೆದ 35 ವರ್ಷಗಳಿಂದ ಕಾಂಗ್ರೆಸ್ ಕಾರ್ಯಕರ್ತನಾಗಿ ಕೊಂಬೆಟ್ಟು ವಾರ್ಡ್ ನಲ್ಲಿ ದುಡಿಯುತ್ತಿದ್ದು ಪಕ್ಷದ ಎಲ್ಲಾ ಚಟುವಟಿಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದೆ. ಪಕ್ಷದ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದೇನೆ. ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ನಾಮ ನಿರ್ದೇಶನಕ್ಕೆ ಅರ್ಜಿ ಸಲ್ಲಿಸಿದ್ದು ಪ್ರಬಲ

ಸುದೇಶ್ ಕುಮಾರ್ ಬೂತ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ Read More »

ಡಿ.20-21 : ಕೌಡಿಚ್ಚಾರಿನಲ್ಲಿ  ಶ್ರೀ ಅಯ್ಯಪ್ಪ ಸ್ವಾಮಿಯ ದೀಪೋತ್ಸವ

ಪುತ್ತೂರು : ಕೌಡಿಚ್ಚಾರು ಶ್ರೀ ಅಯ್ಯಪ್ಪ ಸೇವಾ ಸಮಿತಿ ಹಾಗೂ ಶ್ರೀ ಕೃಷ್ಣ ಭಜನಾ ಮಂದಿರದ ವತಿಯಿಂದ ಶ್ರೀ ಅಯ್ಯಪ್ಪ ಸ್ವಾಮಿಯ ದೀಪೋತ್ಸವ ಡಿ.20 ಹಾಗೂ 21 ರಂದು ಚಾಣ ಗುರುಸ್ವಾಮಿ ಆಲಂತಾಯ ಅವರ  ಹಿರಿತನದಲ್ಲಿ ಬಾಬು ಗುರುಸ್ವಾಮಿ ಕಲ್ಲಡ್ಕ ಅವರ ಉಪಸ್ಥಿತಿಯಲ್ಲಿ ಮೊದಲ ಬಾರಿಗೆ ಕೌಡಿಚ್ಚಾರು ಶ್ರೀ ಕೃಷ್ಣ ಮಂದಿರದಲ್ಲಿ ನಡೆಯಲಿದೆ ಎಂದು ಶ್ರೀ ಕೃಷ್ಣ ಭಜನಾ ಮಂದಿರದ  ಕೋಶಾಧಿಕಾರಿ ತಿಲಕ್ ರೈ ಕುತ್ಯಾಡಿ ಹಾಗೂ ಅಯ್ಯಪ್ಪ ಸೇವಾ ಸಮಿತಿಯ ಅಧ್ಯಕ್ಷ  ಬಾಬು ಟಿ. ತಿಳಿಸಿದ್ದಾರೆ.

ಡಿ.20-21 : ಕೌಡಿಚ್ಚಾರಿನಲ್ಲಿ  ಶ್ರೀ ಅಯ್ಯಪ್ಪ ಸ್ವಾಮಿಯ ದೀಪೋತ್ಸವ Read More »

ಉಪ್ಪಿನಂಗಡಿಯ ಸರಕಾರಿ ಪದವಿ ಪೂರ್ವ ಕಾಲೇಜು ಹಾಗೂ ಪ್ರೌಢಶಾಲಾ ವಿಭಾಗದ ಹಿರಿಯ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಆಯ್ಕೆ

ಉಪ್ಪಿನಂಗಡಿ : ಸರಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ )ಉಪ್ಪಿನಂಗಡಿ ಸಂಗಮ ಹಿರಿಯ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ನೂತನವಾಗಿ  ರಚಿತವಾದ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ನವೀನ್ ಬ್ರಾಗ್ಸ್, ಕಾರ್ಯಾಧ್ಯಕ್ಷರಾಗಿ  ಮಾಜಿ ಶಾಸಕ ಸಂಜೀವ  ಮಠಂದೂರು,  ಗೌರವಾಧ್ಯಕ್ಷರಾಗಿ ಉಪಪ್ರಾಂಶುಪಾಲೆ ದೇವಕಿ ಡಿ.,ಉಪಾಧ್ಯಕ್ಷರಾಗಿ ಜಯಕುಮಾರ ಪೂಜಾರಿ  ಇಳoತಿಲ,  ಹಾಗೂ ಚಂದ್ರಶೇಖರ ಮಡಿವಾಳ ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿ  ಝಕರಿಯ ಕೊಡಿಪಾಡಿ, ಜೊತೆ ಕಾರ್ಯದರ್ಶಿಗಳಾಗಿ ಪ್ರಜ್ಞಾ ಶೆಟ್ಟಿ, ವೈಶಾಲಿ ಕುಂದರ್,  ಸವಿತಾ ಮಸ್ಕರೇನಸ್,  ಕೋಶಾಧಿಕಾರಿಯಾಗಿ ಹ್ಯಾಪಿ ಟೈಮ್ಸ್ 

ಉಪ್ಪಿನಂಗಡಿಯ ಸರಕಾರಿ ಪದವಿ ಪೂರ್ವ ಕಾಲೇಜು ಹಾಗೂ ಪ್ರೌಢಶಾಲಾ ವಿಭಾಗದ ಹಿರಿಯ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಆಯ್ಕೆ Read More »

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ನೂತನ ಸದಸ್ಯರಿಂದ ಅಧಿಕಾರ ಸ್ವೀಕಾರ | ಅಧ್ಯಕ್ಷರಾಗಿ ಪಂಜಿಗುಡ್ಡೆ ಈಶ್ವರ ಭಟ್

ಪುತ್ತೂರು: ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಸದಸ್ಯರ ಪಟ್ಟಿ ಪ್ರಕಟ ಗೊಂಡಿದ್ದು, ಡಿ.18 ರಂದು ದೇವಳದ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು. ನೂತನ ಸಮಿತಿ ಸದಸ್ಯರಾಗಿ ಸಾಮೆತ್ತಡ್ಕ ನಿವಾಸಿ ಈಶ್ವರ್ ನಾಯ್ಕ, ಮಂಜಲಡ್ಡು ನಿವಾಸಿ ಕೃಷ್ಣವೇಣಿ, ಸಾಮತ್ತಡ್ಕ ನಿವಾಸಿ ನಳಿನಿ ಪಿ ಶೆಟ್ಟಿ, ಪಂಜಿಗುಡ್ಡೆ ನಿವಾಸಿ ಈಶ್ವರ್ ಭಟ್, ಮುರ ನಿವಾಸಿ ದಿನೇಶ್ ಕುಲಾಲ್ ಪಿ ವಿ, ವಳತ್ತಡ್ಕ ನಿವಾಸಿ ಮಹಾಬಲ ರೈ ವಳತ್ತಡ್ಕ, ಕಲ್ಲಿಮಾರ್ ನಿವಾಸಿ ಸುಭಾಷ್ ರೈ ಬೆಳ್ಳಿಪ್ಪಾಡಿ, ನರಿಮೊಗರು ನಿವಾಸಿ ವಿನಯ್ ಕುಮಾರ್

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ನೂತನ ಸದಸ್ಯರಿಂದ ಅಧಿಕಾರ ಸ್ವೀಕಾರ | ಅಧ್ಯಕ್ಷರಾಗಿ ಪಂಜಿಗುಡ್ಡೆ ಈಶ್ವರ ಭಟ್ Read More »

ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಸದಸ್ಯರ ಆಯ್ಕೆ

ಪುತ್ತೂರು: ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಸದಸ್ಯರ ಪಟ್ಟಿ ಪ್ರಕಟ ಗೊಂಡಿದೆ. ರಾಜ್ಯ ಧಾರ್ಮಿಕ ಪರಿಷತ್ತು, ಸದಸ್ಯ ಕಾರ್ಯದರ್ಶಿ ಡಾ|| ಎಂ.ವಿ. ವೆಂಕಟೇಶ್‍  ಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯರ ಪಟ್ಟಿಯನ್ನು ಘೋಷಿಸಿದ್ದಾರೆ. ಸಮಿತಿ ಸದಸ್ಯರಾಗಿ ಸಾಮೆತ್ತಡ್ಕ ನಿವಾಸಿ ಈಶ್ವರ್ ನಾಯ್ಡ್, ಮಂಜಲಡ್ಡು ನಿವಾಸಿ ಕೃಷ್ಣವೇಣಿ, ಸಾಮೆತ್ತಡ್ಕ ನಿವಾಸಿ ನಳಿನಿ ಪಿ ಶೆಟ್ಟಿ, ಪಂಜಿಗುಡ್ಡೆ ನಿವಾಸಿ ಈಶ್ವರ್ ಭಟ್, ಮುರ ನಿವಾಸಿ ದಿನೇಶ್ ಕುಲಾಲ್ ಪಿ ವಿ, ವಳತ್ತಡ್ಕ ನಿವಾಸಿ ಮಹಾಬಲ ರೈ, ಕಲ್ಲಿಮಾರ್ ನಿವಾಸಿ

ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಸದಸ್ಯರ ಆಯ್ಕೆ Read More »

ಬನ್ನೂರು ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ

ಪುತ್ತೂರು: ಬನ್ನೂರಿನ ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಕ್ರೀಡಾಕೂಟ ನಡೆಯಿತು. ಮಾಜಿ ಕ್ರೀಡಾ ಮತ್ತು ಯುವಜನ ಸಬಲೀಕರಣ ನಿರ್ದೇಶಕ ಮಾಧವ ಬಿ. ಕೆ.  ಧ್ವಜಾರೋಹಣ ನೆರವೇರಿಸಿ, ದೀಪ ಬೆಳಗಿಸಿ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿ, ಮಕ್ಕಳಿಗೆ ಪಠ್ಯದೊಂದಿಗೆ ದೈಹಿಕ ಶಿಕ್ಷಣಕ್ಕೂ ಮಹತ್ವವನ್ನು ನೀಡಬೇಕು. ಆಗಾದಾಗ ಮಗುವಿನ ದೈಹಿಕ ,ಮಾನಸಿಕ, ಬೌದ್ಧಿಕ ಬೆಳವಣಿಗೆಯಾಗಿ ಸರ್ವತೋಮುಖ ವಿಕಸನ ಸಾಧ್ಯ ಎಂದರು. ಅತಿಥಿಯಾಗಿ ದೈಹಿಕ ಶಿಕ್ಷಣ ಶಿಕ್ಷಕ ಮಾಧವ ಪೆರಿಯತೋಡಿ ಕ್ರೀಡಾಕೂಟ ನಿರ್ವಹಿಸಿದರು.    ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ವೆಂಕಟರಮಣ ಗೌಡ

ಬನ್ನೂರು ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ Read More »

ಬಂಟ್ವಾಳ : ರೈಲ್ವೆ ಹಳಿಯಲ್ಲಿ ನೆಟ್ಟಣ ವ್ಯಕ್ತಿಯ ಶವ ಪತ್ತೆ

ಕಡಬ: ಬಂಟ್ವಾಳ ತಾಲೂಕಿನ ಪುದು ಗ್ರಾಮದ ನೆತ್ತರಕೆರೆ ಸಮೀಪದ ರೈಲ್ವೆ ಹಳಿಯ ಬದಿಯ ಪೊದೆಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದೆ. ಇದು ಬಿಳಿನೆಲೆ ಗ್ರಾಮದ ನೆಟ್ಟಣ ನಿವಾಸಿ ದಿ. ಚಂದನ್ ಎಂಬವರ ಪುತ್ರ ಶಶಿಕುಮಾರ್ ಎಸ್.(40ವ.) ಎಂದು ಗುರುತಿಸಲಾಗಿದೆ. ಬಂಟ್ವಾಳ ನಗರ ಪೊಲೀಸರು ಹಾಗೂ ಮಂಗಳೂರು ರೈಲ್ವೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ವ್ಯಕ್ತಿಯ ತಲೆಯ ಮೇಲೆ ಗಾಯವಾದ ಕುರುಹುಗಳು ಕಂಡುಬಂದಿದ್ದು, ರಕ್ತಸಿಕ್ತ ಮಾದರಿಯಲ್ಲಿರುವ ಶವವನ್ನು ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಶಶಿಕುಮಾರ್ ಅವರು

ಬಂಟ್ವಾಳ : ರೈಲ್ವೆ ಹಳಿಯಲ್ಲಿ ನೆಟ್ಟಣ ವ್ಯಕ್ತಿಯ ಶವ ಪತ್ತೆ Read More »

ಅಕ್ಷಯ ಕಾಲೇಜಿನಲ್ಲಿ ಎನ್ ಎಸ್ ಎಸ್ ಸಹಯೋಗದಿಂದ ಸೇವಾಧಾಮ ಸೇವಾಭಾರತಿ ಪುನರ್ವಸತಿ ಮಾಹಿತಿ ಕಾರ್ಯಾಗಾರ

ಪುತ್ತೂರು : ಅಕ್ಷಯ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಸಹಯೋಗದಲ್ಲಿ ಸೇವಾಧಾಮ ಸೇವಾಭಾರತಿ  ಪುನರ್ವಸತಿ ಮಾಹಿತಿ ಕಾರ್ಯಾಗಾರ ನಡೆಯಿತು. ಸೇವಾಭಾರತಿ  ಪುನರ್ವಸತಿ ಕೇಂದ್ರ ವತಿಯಿಂದ  ಬೆನ್ನೆಲುಬು  ಸಂಬಂಧಿಸಿದ  ಸಮಸ್ಯೆಗಳು  , ಅಂಗವಿಕಲತೆ, ಬೆನ್ನುರಿಗೆ  ಕಾರಣಗಳು  ಮತ್ತು  ಪರಿಹಾರದ  ಬಗ್ಗೆ ಮಾಹಿತಿ  ಕಾರ್ಯಗಾರ ಆಯೋಜಿಸಲಾಗಿತ್ತು.         ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಹಿರಿಯ ವ್ಯವಸ್ಥಾಪಕ ಸೇವಾಭಾರತಿ  ಸೇವಾಧಾಮ ಚರಣ್ ಕುಮಾರ್ ರವರು ಸೇವಾಭಾರತಿ  ಪುನರ್ವಸತಿ ಕೇಂದ್ರ ವತಿಯಿಂದ ಲಭ್ಯ ವಾಗುವ ಸೇವೆಗಳ  ಕುರಿತು ಮಾಹಿತಿ ಕಾರ್ಯಾಗಾರ  ನಡೆಸಿದರು. ಈ ಸಂದರ್ಭದಲ್ಲಿ ಅಧ್ಯಕ್ಷತೆಯನ್ನು ರಾಷ್ಟ್ರೀಯ ಸೇವಾ

ಅಕ್ಷಯ ಕಾಲೇಜಿನಲ್ಲಿ ಎನ್ ಎಸ್ ಎಸ್ ಸಹಯೋಗದಿಂದ ಸೇವಾಧಾಮ ಸೇವಾಭಾರತಿ ಪುನರ್ವಸತಿ ಮಾಹಿತಿ ಕಾರ್ಯಾಗಾರ Read More »

error: Content is protected !!
Scroll to Top