ಪುತ್ತೂರು

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಟ್ಲ ತಾಲೂಕಿನ ಸೇವಾ ಪ್ರತಿನಿಧಿಗಳಿಗೆ ಸಾಮರ್ಥ್ಯಾಭಿವೃದ್ಧಿ ತರಬೇತಿ

ವಿಟ್ಲ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಟ್ಲ ತಾಲೂಕಿನ ಸೇವಾ ಪ್ರತಿನಿಧಿಗಳಿಗೆ ಸಾಮರ್ಥ್ಯಾಭಿವೃದ್ಧಿ ತರಬೇತಿ ಡಿ.20 ರಂದು ನಡೆಯಿತು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ ವಿಟ್ಲ ವ್ಯಾಪ್ತಿಯ   64 ಕಾರ್ಯ ಕ್ಷೇತ್ರದ 64 ಸೇವಪ್ರಾತಿನಿಧಿಗಳಿಗೆ ತಮ್ಮ ಕಾರ್ಯಕ್ಷೇತ್ರದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಲು ಸಾಮರ್ಥ್ಯ ಅಭಿವೃದ್ಧಿ ತರಬೇತಿ ಹಮ್ಮಿಕೊಂಡಿದ್ದು ಈ ತರಬೇತಿ ಕಾರ್ಯ ಗಾರ ವನ್ನೂ ಕೇಂದ್ರ ಕಚೇರಿ ಸೇವಪ್ರತಿ ವಿಭಾಗದ ಯೋಜನಾಧಿಕಾರಿ  ಶಿವಪ್ರಸಾದ್ ವಿಧಿವತ್ತಾಗಿ ಉದ್ಘಾಟಿಸಿದರು. ದರುಯೋಜನೆಯ ಜಿಲ್ಲಾ ನಿರ್ದೇಶಕರಾದ ಪ್ರವೀಣ್ […]

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಟ್ಲ ತಾಲೂಕಿನ ಸೇವಾ ಪ್ರತಿನಿಧಿಗಳಿಗೆ ಸಾಮರ್ಥ್ಯಾಭಿವೃದ್ಧಿ ತರಬೇತಿ Read More »

ಮುರದಲ್ಲಿ ಅವೈಜ್ಙಾನಿಕ ರಸ್ತೆ ಕಾಮಗಾರಿ | ಸ್ಥಳೀಯರಿಂದ ತೀವ್ರ ಪ್ರತಿಭಟನೆ | ರಸ್ತೆ ಸರಿಪಡಿಸುವಂತೆ ಇಲಾಖೆಗೆ ಮನವಿ

ಪುತ್ತೂರು : ಪುತ್ತೂರು ಕಬಕ ಗ್ರಾಮದ ಮುರ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ ಮತ್ತು ಕೆದಿಲ ಮುರ ಸಂಪರ್ಕವಿರುವ ರಸ್ತೆ ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿದ್ದರಿಂದ ಸರಾಸರಿಯಾಗಿ ಅಪಘಾತಗಳು ಸಂಭವಿಸುವುದರಿಂದ ಅನೇಕ ಸಾವು ನೋವುಗಳು ಉಂಟಾಗಿದೆ. ಜನರು ಭಯಭೀತರಾಗಿ ರಸ್ತೆಯನ್ನು ಉಪಯೋಗಿಸುವಂತಾಗಿದೆ. ಇದಕ್ಕೆ ಸಂಬಂಧಪಟ್ಟಂತೆ ಇಲಾಖೆಗಳು ಅವೈಜ್ಞಾನಿಕವಾಗಿ ನಿರ್ಮಿಸಿದ ರಸ್ತೆ ಮತ್ತು ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇದೇ ಸ್ಥಳದಲ್ಲಿ ಡಿ.19 ರಂದು ಮಧ್ಯಾಹ್ನ ನಡೆದ ಬಸ್ ಮತ್ತು ಬೈಕ್ ಅಪಘಾತದಲ್ಲಿ ಸ್ಥಳೀಯ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆಯಿಂದ

ಮುರದಲ್ಲಿ ಅವೈಜ್ಙಾನಿಕ ರಸ್ತೆ ಕಾಮಗಾರಿ | ಸ್ಥಳೀಯರಿಂದ ತೀವ್ರ ಪ್ರತಿಭಟನೆ | ರಸ್ತೆ ಸರಿಪಡಿಸುವಂತೆ ಇಲಾಖೆಗೆ ಮನವಿ Read More »

ಬೀರಿಗ ಅಂಗನವಾಡಿಯಲ್ಲಿ ಬಾಲಮೇಳ ಮತ್ತು ಅಕ್ಷರೋತ್ಸವ

ಪುತ್ತೂರು: ಬನ್ನೂರು ಗ್ರಾಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜನಶಿಕ್ಷಣ ಟ್ರಸ್ಟ್, ಮಾದರಿ ಗ್ರಾಮ ವಿಕಾಸ ಕೇಂದ್ರ, ಒಕ್ಕೂಟ, ಹಿರಿಯ ವಿದ್ಯಾರ್ಥಿಗಳ ಸಂಘ, ಬೀರಿಗ ನವಸಾಕ್ಷರರ ಸಹಯೋಗದಲ್ಲಿ ಅಕ್ಷರೋತ್ಸವ ಮತ್ತು ಬಾಲಮೇಳ ಕಾರ್ಯಕ್ರಮ ಬೀರಿಗ ಅಂಗನವಾಡಿ ಕೇಂದ್ರದಲ್ಲಿ ನಡೆಯಿತು. ಅಂಗನವಾಡಿ ಪುಟಾಣಿಗಳು ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜಿಲ್ಲಾ ಸ್ವಚ್ಚತಾ ರಾಯಭಾರಿ ಶೀನ ಶೆಟ್ಟಿ ಮತ್ತು ಜನಶಿಕ್ಷಣ ಟ್ರಸ್ಟ್‌ನ ನಿರ್ದೇಶಕ ಕೃಷ್ಣಮೂಲ್ಯ ಅವರು ಶೂನ್ಯ ಕಸ ನಿರ್ವಹಣೆ, ಕಸಮುಕ್ತ ಮನೆ ನಿರ್ಮಾಣ ಬಗ್ಗೆ

ಬೀರಿಗ ಅಂಗನವಾಡಿಯಲ್ಲಿ ಬಾಲಮೇಳ ಮತ್ತು ಅಕ್ಷರೋತ್ಸವ Read More »

ಬೈಕ್‍-ಸರಕಾರಿ ಬಸ್ ಡಿಕ್ಕಿ : ಬೈಕ್‍ ಸವಾರ ಮೃತ್ಯು

ಪುತ್ತೂರು: ಸರಕಾರಿ ಬಸ್ ಹಾಗೂ ಬೈಕ್‍ ಡಿಕ್ಕಿ ಹೊಡೆದುಕೊಂಡ ಪರಿಣಾಮ ಬೈಕ್‍ ಸವಾರ ಮೃತಪಟ್ಟ ಘಟನೆ ಇದೀಗ ಮುರದಲ್ಲಿ ನಡೆದಿದೆ. ಪಡ್ನೂರು ನಿವಾಸಿ ಅಬ್ದುಲ್ ಕುಂಞಿ (65) ಮೃತಪಟ್ಟ ಬೈಕ್‍ ಸವಾರ. ಮುರದಲ್ಲಿ ಮೆಡಿಕಲ್‍ ಒಂದಕ್ಕೆ ಬಂದು  ವಾಪಾಸ್ ರಸ್ತೆ ದಾಟಿ ಕೆದಿಲ ರಸ್ತೆಯತ್ತ ಬೈಕ್ ಚಲಾಯಿಸಿದಾಗ ಮಾಣಿ ಕಡೆಯಿಂದ ಬಂದ ಬಸ್‍ ಡಿಕ್ಕಿಯಾಗಿದೆ ಎನ್ನಲಾಗಿದೆ.

ಬೈಕ್‍-ಸರಕಾರಿ ಬಸ್ ಡಿಕ್ಕಿ : ಬೈಕ್‍ ಸವಾರ ಮೃತ್ಯು Read More »

ವಿದ್ಯಾರಶ್ಮಿಯಲ್ಲಿ ಸಮ್ಮಾನ ರಶ್ಮಿ ವಾರ್ಷಿಕೋತ್ಸವ: ಬಹುಮಾನ ವಿತರಣಾ ಸಮಾರಂಭ

ಸವಣೂರು : ಸವಣೂರಿನ ವಿದ್ಯಾರಶ್ಮಿ ವಿದ್ಯಾಲಯದಲ್ಲಿ ವಾರ್ಷಿಕೋತ್ಸವದ ಅಂಗವಾಗಿ ಬಹುಮಾನ ವಿತರಣಾ ಸಮಾರಂಭದ ಸಮ್ಮಾನ ರಶ್ಮಿ ಸಮಾರಂಭವು ವಿಜೃಂಭಣೆಯಿಂದ ನಡೆಯಿತು. ಸುಬ್ರಹ್ಮಣ್ಯದ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸೋಮಶೇಖರ ನಾಯಕ್ ಮುಖ್ಯ ಅತಿಥಿ ನೆಲೆಯಿಂದ ಮಾತನಾಡಿ, ಸಮಯವನ್ನು ಗೌರವಿಸುವವರನ್ನು ಮತ್ತು ಅಧ್ಯಯನ ಮಾಡುವವರನ್ನು ಲೋಕವೇ ಗೌರವಿಸುತ್ತದೆ ಎಂದು ಅಭಿಪ್ರಾಯಪಟ್ಟರು. ಇದಕ್ಕೆ ಸವಣೂರು ಸೀತಾರಾಮ ರೈಯವರೇ ಸಾಕ್ಷಿ ಎಂದರು. ಇದರ ಜೊತೆಗೆ ಮಾನಸಿಕ ಸ್ವಾಸ್ಥ್ಯವನ್ನು ಕಾಪಾಡಿಕೊಂಡು ಸೋಲುವುದನ್ನು ಕಲಿತುಕೊಂಡರೆ ನಾವು ನಾಯಕರಾಗುತ್ತೇವೆ ಎಂದು ಕಿವಿಮಾತು ಹೇಳಿದರು. ಸವಣೂರು

ವಿದ್ಯಾರಶ್ಮಿಯಲ್ಲಿ ಸಮ್ಮಾನ ರಶ್ಮಿ ವಾರ್ಷಿಕೋತ್ಸವ: ಬಹುಮಾನ ವಿತರಣಾ ಸಮಾರಂಭ Read More »

ಡಿ.21 ರಿಂದ 25 : ಧರ್ಮನಗರ ವೈದ್ಯನಾಥ ಮಲರಾಯ ಸಪರಿವಾರ ದೈವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ

ವಿಟ್ಲ : ವೈದ್ಯನಾಥ ಮಲರಾಯ ಸಪರಿವಾರ ದೈವಗಳ ದೈವಸ್ಥಾನದಲ್ಲಿ ಬ್ರಹ್ಮಕಲಶಾಭಿಷೇಕ ಮತ್ತು ನೇಮೋತ್ಸವ ಡಿ.21 ರಿಂದ ಡಿ. 25ರ ತನಕ ನಡೆಯಲಿದೆ. ಡಿ.21 ರಂದು ಬೆಳಗ್ಗೆ 7 ಗಂಟೆಗೆ ಶ್ರೀ ಅಡ್ಯಲಾಯ ದೈವಸ್ಥಾನ ಕಬಕದಿಂದ ಹಸಿರು ಹೊರೆಕಾಣಿಕೆಯ ಭವ್ಯ ರಥಯಾತ್ರೆ ನಡೆಯಲಿದ್ದು, ಅಡ್ಯಲಾಯ ದೈವಸ್ಥಾನದ ಅಧ್ಯಕ್ಷ ಸತೀಶ್ ರೈ ಡಿಂಬ್ರಿಗುತ್ತು ಉಪಸ್ಥಿತಿಯಲ್ಲಿ, ಬಿಜೆಪಿ ಮುಖಂಡ ಅರುಣ್ ಕುಮಾರ್‍ ಪುತ್ತಿಲ ಭವ್ಯ ರಥಯಾತ್ರೆಗೆ ಚಾಲನೆ ನೀಡಲಿದ್ದಾರೆ. ಬಳಿಕ ಧಾರ್ಮಿಕ ಸಭಾ ಕಾರ್ಯಕ್ರಮ ಡಿ.21 ಹಾಗೂ ಡಿ.22 ರಂದು ಜರುಗಲಿದೆ.

ಡಿ.21 ರಿಂದ 25 : ಧರ್ಮನಗರ ವೈದ್ಯನಾಥ ಮಲರಾಯ ಸಪರಿವಾರ ದೈವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ Read More »

ಕೆ ಎಸ್ ಆರ್ ಟಿಸಿ ಬಸ್ ಮತ್ತು ಬೈಕ್  ಡಿಕ್ಕಿ

ಪುತ್ತೂರು: ಕೆ ಎಸ್ ಆರ್ ಟಿಸಿ ಬಸ್ ಮತ್ತು ಬೈಕ್ ನಡುವೆ ಡಿಕ್ಕಿಯಾದ  ಘಟನೆ ಮುರದಲ್ಲಿ ನಡೆದಿದೆ. ಘಟನೆ ಪರಿಣಾಮ ಬೈಕ್ ಸಂಪೂರ್ಣ ನುಜ್ಜು ಗುಜ್ಜಾಗಿದ್ದು, ಸವಾರನಿಗೆ ಗಂಭೀರ ಗಾಯಗಳಾಗಿದೆ. ಆತನನ್ನು ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಪುತ್ತೂರು ಸಂಚಾರಿ ಠಾಣಾ ಪೊಲೀಸರು ಧಾವಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

ಕೆ ಎಸ್ ಆರ್ ಟಿಸಿ ಬಸ್ ಮತ್ತು ಬೈಕ್  ಡಿಕ್ಕಿ Read More »

ವಿದ್ಯಾರಶ್ಮಿಯಲ್ಲಿ ಅತ್ಯಾಧುನಿಕ ಸ್ಮಾರ್ಟ್ ಬೋರ್ಡ್ ಉದ್ಘಾಟನೆ

ಸವಣೂರು : ಸವಣೂರು ಸೀತಾರಾಮ ರೈ ಅವರ ನೇತೃತ್ವದ ವಿದ್ಯಾರಶ್ಮಿ ವಿದ್ಯಾಲಯದಲ್ಲಿ ಆಧುನಿಕ ಮಾದರಿಯ ಸ್ಮಾರ್ಟ್ ಬೋರ್ಡ್ ಮತ್ತು ಟಿ. ವಿ.ಯನ್ನು ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸೋಮಶೇಖರ ನಾಯಕ್  ಉದ್ಘಾಟಿಸಿದರು. ಸುಮಾರು 1.75 ಲಕ್ಷ ರೂ. ವೆಚ್ಚದ ಈ ಉಪಕರಣವು ಕಂಪ್ಯೂಟರ್, ಟಿ.ವಿ., ರೇಡಿಯೋ, ಕರಿ ಹಲಗೆ, ನೋಟ್ ಪುಸ್ತಕ, ಯೂ ಟ್ಯೂಬ್ ಹಾಗೂ ಇತರ ಆಧುನಿಕ ವ್ಯವಸ್ಥೆಗಳನ್ನು ಒಳಗೊಂಡಿದೆ. ಈ ಸಂದರ್ಭದಲ್ಲಿ ಆಡಳಿತಾಧಿಕಾರಿ ಅಶ್ವಿನ್ ಎಲ್ ಶೆಟ್ಟಿ, ನಿರ್ದೇಶಕ ಎನ್. ಸುಂದರ ರೈ,

ವಿದ್ಯಾರಶ್ಮಿಯಲ್ಲಿ ಅತ್ಯಾಧುನಿಕ ಸ್ಮಾರ್ಟ್ ಬೋರ್ಡ್ ಉದ್ಘಾಟನೆ Read More »

ಬೈಕ್‍-ಟೆಂಪೋ ಅಪಘಾತ : ಬೈಕ್‍ ಸವಾರ ಮೃತ್ಯು

ಮಾಣಿ: ಬೈಕ್‍ ಹಾಗೂ ಟೆಂಪೋ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಸೂರಿಕುಮೇರ್ ನಲ್ಲಿ ಬುಧವಾರ ರಾತ್ರಿ ನಡೆದಿದೆ. ಸುಳ್ಯ ನಿವಾಸಿ, ಸೂರಿಕುಮೇರು ಸಮೀಪದ ಕೋಸ್ಕಲ್ ಕೋಳಿ ಫಾರ್ಮ್ ಕೆಲಸಗಾರ ಪುನೀತ್ ಮೃತಪಟ್ಟ ಬೈಕ್ ಸವಾರ, ಕಂಪೆನಿಯಲ್ಲಿ ಕೆಲಸ ಮುಗಿಸಿ ಸುಳ್ಯದ ತನ್ನ ಮನೆಗೆ ಹೊರಟಿದ ವೇಳೆ ಅಪಘಾತ ನಡೆದಿದೆ. ಸೂರಿಕುಮೇರು ಜಂಕ್ಷನ್ ನಲ್ಲಿ ಬೈಕ್ ಹಾಗೂ ಟೆಂಪೊ ಪರಸ್ಪರ ಢಿಕ್ಕಿ ಹೊಡೆದಿದ್ದು, ಅಪಘಾತದ ತೀವ್ರತೆಗೆ ಸವಾರ ರಸ್ತೆಗೆ ಉರುಳಿ ಬಿದ್ದು ಗಂಭೀರ

ಬೈಕ್‍-ಟೆಂಪೋ ಅಪಘಾತ : ಬೈಕ್‍ ಸವಾರ ಮೃತ್ಯು Read More »

ಮುರ ಶಿವಸದನದಲ್ಲಿ ದಿವ್ಯಾಂಗಜನ ಸಾಹಿತ್ಯ ಸಂಭ್ರಮ

ಪುತ್ತೂರು: ವಿಶ್ವ ವಿಕಲಚೇತನರ ದಿನಾಚರಣೆ ಪ್ರಯುಕ್ತ ದಿವ್ಯಾಂಗಜನ ಸಾಹಿತ್ಯ ಸಂಭ್ರಮ ಮುರ ಶಿವಸದನ ಹಿರಿಯ ನಾಗರಿಕರ ಹಾಗೂ ವಿಕಲಚೇತನರ ಪುನರ್ವಸತಿ ಕೇಂದ್ರದಲ್ಲಿ ಜರಗಿತು. ವಿಕಲಚೇತನರ ಸುಪ್ತ ಪ್ರತಿಭೆಯನ್ನು‌  ಹಾಗೂ ಸಾಹಿತ್ಯ ಪ್ರತಿಭೆಯನ್ನು ಹೊರತರುವ ನಿಟ್ಟಿನಲ್ಲಿ ಹಾಗೂ ಸೂಕ್ತ ವೇದಿಕೆಯನ್ನು ನೀಡಿ ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಈ ವಿನೂತನ ಕಾರ್ಯಕ್ರಮ ಜರಗಿತು. ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕ, ರೋಟರಿ ಕ್ಲಬ್ ಪುತ್ತೂರು ಯುವದ ಜಂಟಿ ಆಶ್ರಯದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮತ್ತು

ಮುರ ಶಿವಸದನದಲ್ಲಿ ದಿವ್ಯಾಂಗಜನ ಸಾಹಿತ್ಯ ಸಂಭ್ರಮ Read More »

error: Content is protected !!
Scroll to Top