ಪುತ್ತೂರು

ಸುಳ್ಯದ ಯುವಕ ನೇಣು ಬಿಗಿದು ಆತ್ಮಹತ್ಯೆ

ಸುಳ್ಯ: ಮೊಬೈಲ್‍ ನಲ್ಲಿ ಸ್ಟೇಟಸ್ ಹಾಕಿಕೊಂಡು ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಳ್ಯದಲ್ಲಿ ನಡೆದಿದೆ. ಮಂಡೆಕೋಲು ಶಿವಾಜಿನಗರ ನಿವಾಸಿ ಪುರುಷೋತ್ತಮ(30) ಆತ್ಮಹತ್ಯೆ ಮಾಡಿಕೊಂಡವರು. ಕೂಲಿ ಕೆಲಸ ಮಾಡಿ ಜೀವನ ಮಾಡಿಕೊಂಡಿದ್ದ ಪುರುಷೋತ್ತಮ್ ತನ್ನ ಮೊಬೈಲ್ ಸ್ಟೇಟಸ್ ನಲ್ಲಿ “ಓಂ ಶಾಂತಿ ಎನ್ನ ಜೋಕ್ಲೆನ್ ಸೋಕುಡು ತೂವೆನ್ಲೆ ಅಣ್ಣ” ಎಂದು ಬರೆದು ಹಾಕಿ ಮನೆಯ ಪಕ್ಕದ ಗುಡ್ಡೆಯಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.

ಸುಳ್ಯದ ಯುವಕ ನೇಣು ಬಿಗಿದು ಆತ್ಮಹತ್ಯೆ Read More »

ಸಾಧಕರ ಸಾಧನೆ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಲಿ : ಪಿ.ಜಿ. ಸತ್ಯನಾರಾಯಣ ಪ್ರಸಾದ್ | ಜಿಲ್ಲಾ ಮಟ್ಟದ ಜ್ಯೂನಿಯರ್ ಚೆಸ್ ಪಂದ್ಯಾಟ

ಪುತ್ತೂರು: ಚದುರಂಗದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಮಂದಿ ಸಾಧನೆಯನ್ನು ಮೆರೆದಿದ್ದಾರೆ. ಇದಕ್ಕೆ ಡಿ. ಗುಕೇಶ್ ಅವರು ಜಲ್ವಂತ ಸಾಕ್ಷಿಯಾಗಿದ್ದಾರೆ. ಸಾಧಕರನ್ನು ಆದರ್ಶವಾಗಿಟ್ಟುಕೊಂಡು ವಿದ್ಯಾರ್ಥಿಗಳು ಚದುರಂಗಾಟದಲ್ಲಿ ಶೌರ್ಯವನ್ನು ಮೆರೆಯಬೇಕು ಎಂದು ಸುಳ್ಯದ ಕಲ್ಮಡದ ಬಿ ಎಫ್ ಸಿ ಎ ನಿರ್ದೇಶಕ ಪಿ. ಜಿ. ಸತ್ಯನಾರಾಯಣ ಪ್ರಸಾದ್ ಹೇಳಿದರು. ಅವರು ವಿವೇಕಾನಂದ  ಕಲಾ, ವಿಜ್ಞಾನ ಮತ್ತು ವಾಣಿಜ್ಯ (ಸ್ವಾಯತ್ತ) ಕಾಲೇಜಿನ ದೈಹಿಕ ಶಿಕ್ಷಣ ಮತ್ತು ಐಕ್ಯುಎಸಿ ಘಟಕ ಹಾಗೂ ಸುಳ್ಯದ ಕಲ್ಮಡ್ಕದ ಬಾಬಿ ಫಿಶರ್ಸ್ ಚೆಸ್ ಅಸೋಸಿಯೇಶನ್ ನ ಆಶ್ರಯದಲ್ಲಿ

ಸಾಧಕರ ಸಾಧನೆ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಲಿ : ಪಿ.ಜಿ. ಸತ್ಯನಾರಾಯಣ ಪ್ರಸಾದ್ | ಜಿಲ್ಲಾ ಮಟ್ಟದ ಜ್ಯೂನಿಯರ್ ಚೆಸ್ ಪಂದ್ಯಾಟ Read More »

ಮಾಡ್ನೂರ್ ಗ್ರಾಮದಲ್ಲಿ ಕಾಡಾನೆಯಿಂದ  ಕೃಷಿತೋಟಗಳಿಗೆ ಹಾನಿ l ಹಾನಿಗೊಳಗಾದ ಪ್ರದೇಶಕ್ಕೆ ಮಾಜಿ ಶಾಸಕ ಸಂಜೀವ ಮಠಂದೂರು ಭೇಟಿ

ಪುತ್ತೂರು : ಕೆಲವು ದಿನಗಳಿಂದ ಅರಿಯಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಡ್ನೂರ್ ನ ಚಾಕೋಟೆ, ಪುವಂದೂರು  ವಿವಿಧ ಪ್ರದೇಶಗಳಲ್ಲಿ ಆನೆಗಳು ಕೃಷಿ ಹಾನಿ ಮಾಡಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದು,.  ಪುತ್ತೂರಿನ ಮಾಜಿ ಶಾಸಕ ಸಂಜೀವ ಮಠಂದೂರು ಪುವಂದೂರಿಗೆ  ಭೇಟಿ ನೀಡಿ ಪರಿಶೀಲಿಸಿದರು. ಪುವಂದೂರಿನ ಸ್ವಾತಿ ಭಟ್,  ರೇವತಿ ಭಟ್  ಅವರ ಕೃಷಿ ತೋಟಗಳಿಗೆ ಕಳೆದ ಒಂದು ವಾರದಿಂದ ಆನೆಗಳು ದಾಳಿ ಮಾಡಿ ಕೃಷಿ ಹಾನಿಗೊಳಿಸಿದೆ. ಕೃಷಿಕರು  ಹನಿ ನೀರಾವರಿಗೆ ಹಾಕಿರುವ ಪೈಪ್ ಲೈನ್ ಗಳಿಗೆ ಹಾನಿ ಮಾಡಿದೆ.

ಮಾಡ್ನೂರ್ ಗ್ರಾಮದಲ್ಲಿ ಕಾಡಾನೆಯಿಂದ  ಕೃಷಿತೋಟಗಳಿಗೆ ಹಾನಿ l ಹಾನಿಗೊಳಗಾದ ಪ್ರದೇಶಕ್ಕೆ ಮಾಜಿ ಶಾಸಕ ಸಂಜೀವ ಮಠಂದೂರು ಭೇಟಿ Read More »

ಪುತ್ತೂರು ನಗರಸಭೆ ಅರ್ಹ ಫಲಾನುಭವಿಗಳಿಗೆ ಪಾವತಿಯಾಗದ ಹಣ – ರಾಜ್ಯ ಸರಕಾರದ ವಿರುದ್ಧ ಬಿಜೆಪಿ ಬ್ರಹತ್ ಪ್ರತಿಭಟನೆ.

ಪುತ್ತೂರು: ಪುತ್ತೂರು ನಗರಸಭೆಯಲ್ಲಿ 2022ನೇ ಸಾಲಿನಲ್ಲಿ ಹಿಂದಿನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಅವಧಿಯಲ್ಲಿ ನಗರೋತ್ಥಾನ ಹಂತ 4 ಯೋಜನೆಯಲ್ಲಿ ಬಡವರಿಗಾಗಿ ವೈಯುಕ್ತಿಕ ಕಾಮಗಾರಿ ನಡೆದಿದೆ. ದುರಾದೃಷ್ಟಕರ ಸರಕಾರ ಬದಲಾಗಿ ಕಾಂಗ್ರೆಸ್ ಸರಕಾರ ಆ ಫಲಾನುವಿಗಳಿಗೆ ಇನ್ನೂ ಹಣ ಪಾವತಿ ಮಾಡಿಲ್ಲ. ಕಾಂಗ್ರೆಸ್ ವಿರೋಧಿ ನೀತಿಯನ್ನು ಮುಂದಿಟ್ಟು ಬಿಜೆಪಿ ಸರಕಾರ ತಂದ ಯೋಜನೆಗಳಿಗೆ ತಡೆಹಿಡಿದಿದೆ. ಫಲಾನುಭವಿಗಳಿಗೆ ಇನ್ನೂ ಹಣ ಪಾವತಿ ಮಾಡದಿದ್ದರೆ ಫಲಾನುಭವಿಗಳನ್ನು ಸೇರಿಸಿಕೊಂಡು ದೊಡ್ಡಮಟ್ಟದ ಹೋರಾಟ ಮಾಡಲಾಗುವುದು ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರಾಕೇಶ್‌ ರೈ

ಪುತ್ತೂರು ನಗರಸಭೆ ಅರ್ಹ ಫಲಾನುಭವಿಗಳಿಗೆ ಪಾವತಿಯಾಗದ ಹಣ – ರಾಜ್ಯ ಸರಕಾರದ ವಿರುದ್ಧ ಬಿಜೆಪಿ ಬ್ರಹತ್ ಪ್ರತಿಭಟನೆ. Read More »

ಶ್ರೀನಿವಾಸ ಕಲ್ಯಾಣೋತ್ಸವ ಮತ್ತು ಧರ್ಮಸಂಗಮ : ಚಪ್ಪರ ಮುಹೂರ್ತ – ಬೃಹತ್ ಭಗವಧ್ವಜಾರೋಹಣ

ಪುತ್ತೂರು : ಶ್ರೀನಿವಾಸ ಕಲ್ಯಾಣೋತ್ಸವದ ಮೂಲಕ  ಹಿಂದೂ ಸಮುದಾಯದ ಕಲ್ಯಾಣ ಕಾರ್ಯ ನಡೆಯುತ್ತಿದೆ : ಪುತ್ತೂರಿನ ಕಾರ್ಯಕ್ರಮ ಇತಿಹಾಸ ಸೃಷ್ಟಿಸಲಿದೆ – ಪುತ್ತಿಲ ಪರಿವಾರ ಹಿಂದೂ ಸಮಾಜದ ಒಳಿತಿಗಾಗಿ ದುಡಿಯುತ್ತಿರುವುದು ಶ್ಲಾಘನೀಯ- ಮಾಣಿಲ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಪುತ್ತೂರು ಹಾಗೂ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಇದರ ಸಾರಥ್ಯದಲ್ಲಿ ಪುತ್ತೂರು ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ಡಿ.28 ,29 ರಂದು ಜರಗುವ ದ್ವಿತೀಯ ವರ್ಷದ ಶ್ರೀನಿವಾಸ ಕಲ್ಯಾಣೋತ್ಸವ ಹಾಗೂ ಧರ್ಮಸಂಗಮ ಕಾರ್ಯಕ್ರಮದ ಚಪ್ಪರ ಮುಹೂರ್ತ

ಶ್ರೀನಿವಾಸ ಕಲ್ಯಾಣೋತ್ಸವ ಮತ್ತು ಧರ್ಮಸಂಗಮ : ಚಪ್ಪರ ಮುಹೂರ್ತ – ಬೃಹತ್ ಭಗವಧ್ವಜಾರೋಹಣ Read More »

ಪಡುಮಲೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಸಹಶಿಕ್ಷಕ ದೇವಿಪ್ರಸಾದ್ ಕೆ.ಸಿ. ನಿಧನ

ಬಡಗನ್ನೂರು : ಪಡುಮಲೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಸಹಶಿಕ್ಷಕ ದೇವಿಪ್ರಸಾದ್ ಕೆ.ಸಿ. ದೀರ್ಘ ಕಾಲದ ಅನಾರೋಗ್ಯದಿಂದ ನಿಧನರಾಗಿದ್ದಾರೆ. ದೇವಿಪ್ರಸಾದ್ ಅವರು ಕಳೆದ ಹಲವು ಸಮಯಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದ ಅವರು ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ನಿಧನಾಗಿದ್ದಾರೆ. ದೇವಿಪ್ರಸಾದ್ ಕೆ.ಸಿ.ಅವರು ಕರ್ನೂರು ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಪ್ರಾರಂಭಿಸಿದರು. ಬಳಿಕ ಕುಂಬ್ರ ಕ್ಲನ್ನರ್ ಸಿಆರ್‌ಪಿಯಾಗಿ ಸೇವೆಗೈದಿದ್ದಾರೆ. ತದನಂತರ  ಮುಖ್ಯ ಶಿಕ್ಷಕರಾಗಿ ಪಡುಮಲೆ ಸರಕಾರಿ ಹಿ.ಪ್ರಾ.ಶಾಲೆಗೆ ವರ್ಗಾವಣೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಪಡುಮಲೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಸಹಶಿಕ್ಷಕ ದೇವಿಪ್ರಸಾದ್ ಕೆ.ಸಿ. ನಿಧನ Read More »

ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ದಶಮಾನೋತ್ಸವ ಸಂಭ್ರಮ | ಶಾಂತಿಗೋಡು ಗ್ರಾಮದ 50 ವರ್ಷ ದಾಂಪತ್ಯ ಜೀವನ ಪೂರೈಸಿದ ಮಾದರಿ ದಂಪತಿಗಳಿಗೆ ಸನ್ಮಾನ

ಪುತ್ತೂರು : ಒಕ್ಕಲಿಗ ಸ್ವಸಹಾಯ ಟ್ರಸ್ಟ್ ಪುತ್ತೂರು ದಶಮಾನೋತ್ಸವ ಸಮಿತಿಯ ಸಹಯೋಗದೊಂದಿಗೆ ಒಕ್ಕಲಿಗ ಸ್ವಸಹಾಯ ಸಂಘಗಳ ಒಕ್ಕೂಟ, ಯುವ ಘಟಕ, ಮಹಿಳಾ ಘಟಕ, ಗ್ರಾಮ ಸಮಿತಿಯ ಸಹಕಾರದೊಂದಿಗೆ ಒಕ್ಕಲಿಗ ಸ್ವಸಹಾಯ ಟ್ರಸ್ಟ್ ನ ದಶಮಾನೋತ್ಸವ ಸಂಭ್ರಮದ ಅಂಗವಾಗಿ ಸ್ವಸಹಾಯ ಸಂಘಗಳಿರುವ ಎಲ್ಲಾ ಗ್ರಾಮಗಳಲ್ಲಿ ದಾಂಪತ್ಯ ಜೀವನ 50 ವರ್ಷ ಪೂರೈಸಿದ ಮಾದರಿ ದಂಪತಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು,  ಶಾಂತಿಗೋಡು ಗ್ರಾಮದ ಹೊಸ ಮನೆ ಮೇದಪ್ಪ ಗೌಡರ ಮನೆಯಲ್ಲಿ  ಆರು ಜೊತೆ ದಂಪತಿಗಳಿಗೆ ಸನ್ಮಾನ ಕಾರ್ಯಕ್ರಮವು ಡಿ.15 ರಂದು

ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ದಶಮಾನೋತ್ಸವ ಸಂಭ್ರಮ | ಶಾಂತಿಗೋಡು ಗ್ರಾಮದ 50 ವರ್ಷ ದಾಂಪತ್ಯ ಜೀವನ ಪೂರೈಸಿದ ಮಾದರಿ ದಂಪತಿಗಳಿಗೆ ಸನ್ಮಾನ Read More »

ಉಪ್ಪಿನಂಗಡಿಯಲ್ಲಿ ಭಾಗವತ ಲೀಲಾವತಿ ಬೈಪಾಡಿತ್ತಾಯರಿಗೆ ನುಡಿನಮನ ಮತ್ತು ತಾಳಮದ್ದಳೆ

ಉಪ್ಪಿನಂಗಡಿ : ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘದ  50ನೇ ವರ್ಷದ ನಿಮಿತ್ತ ನಡೆಸಲಾಗುತ್ತಿರುವ ಶ್ರೀ ಮಹಾಭಾರತ ಸರಣಿಯಲ್ಲಿ 57ನೇ ತಾಳಮದ್ದಳೆಯಾಗಿ ಜಟಾಸುರ -ಮಣಿಮಾನ್ಯ ಕಾಳಗ ಜರಗಿತು. ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದಲ್ಲಿ ನಡೆದ ತಾಳಮದ್ದಳೆಯಲ್ಲಿ ಭಾಗವತರಾಗಿ ಪದ್ಮನಾಭ ಕುಲಾಲ್,ಮಲ್ಲಿಕಾ ಶೆಟ್ಟಿ ಸಿದ್ದಕಟ್ಟೆ, ಸುರೇಶ ರಾವ್. ಬಿ, ನಿತೀಶ್ ಕುಮಾರ್. ವೈ ಹಿಮ್ಮೇಳದಲ್ಲಿ ದಿವಾಕರ ಆಚಾರ್ಯ ನೇರೆಂಕಿ, ಶ್ರೀಪತಿ ಭಟ್ ಉಪ್ಪಿನಂಗಡಿ, ಚಂದ್ರಶೇಖರ ಆಚಾರ್ಯ ಗೇರುಕಟ್ಟೆ, ಪ್ರಚೇತ್ ಆಳ್ವ ಬಾರ್ಯ,  ಅರ್ಥಧಾರಿಗಳಾಗಿ ಪೂರ್ಣಿಮ ರಾವ್ ಬೆಳ್ತಂಗಡಿ(ಧರ್ಮರಾಯ

ಉಪ್ಪಿನಂಗಡಿಯಲ್ಲಿ ಭಾಗವತ ಲೀಲಾವತಿ ಬೈಪಾಡಿತ್ತಾಯರಿಗೆ ನುಡಿನಮನ ಮತ್ತು ತಾಳಮದ್ದಳೆ Read More »

ಬಹುಮುಖ ಸಾಧಕಿ ಡಾ. ಅನುರಾಧಾ ಕುರುಂಜಿಯವರು ಪ್ರತಿಷ್ಠಿತ “ಚೈತನ್ಯ ಶ್ರೀ- 2024”   ಮಹಿಳಾ ಸಾಧಕಿ ಪ್ರಶಸ್ತಿಗೆ ದ.ಕ ಜಿಲ್ಲೆಯಿಂದ ಆಯ್ಕೆ | ರಾಜ್ಯಮಟ್ಟದ ನಾಲ್ಕನೇ ವೈಜ್ಞಾನಿಕ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರಧಾನ

ಸುಳ್ಯ: ವೃತ್ತಿಯಲ್ಲಿ ಉಪನ್ಯಾಸಕಿಯಾಗಿದ್ದು ಪ್ರವೃತ್ತಿಯಲ್ಲಿ ತರಬೇತುದಾರರು,  ಸಂಘಟಕಿ  ಹಾಗೂ ಬರಹಗಾರ್ತಿಯಾಗಿರುವ ಬಹುಮುಖ ಪ್ರತಿಭೆ ಸುಳ್ಯದ ಡಾ. ಅನುರಾಧಾ ಕುರುಂಜಿಯವರು ಕರ್ನಾಟಕ ರಾಜ್ಯ ವೈಜ್ಞಾನಿಕ ಪರಿಷತ್ತುನವರು ಅತ್ಯುತ್ತಮ ಸಾಧನೆಗೈದ ಮಹಿಳೆಯರಿಗೆ ಪ್ರಪ್ರಥಮ ಬಾರಿಗೆ ಕೊಡ ಮಾಡಿದ ರಾಜ್ಯಮಟ್ಟದ “ಪ್ರತಿಷ್ಠಿತ “ಚೈತನ್ಯ ಶ್ರೀ- 2024”  ಪ್ರಶಸ್ತಿಗೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಆಯ್ಕೆಯಾಗಿದ್ದಾರೆ. ಎನ್ ಎಸ್ ಎಸ್, ಸ್ಕೌಟ್- ಗೈಡ್, ಜೇಸೀಸ್, ರೆಡ್ ಕ್ರಾಸ್ ಮೊದಲಾದ ಸಂಸ್ಥೆಗಳಲ್ಲಿ ಹಲವು ಪ್ರಥಮಗಳೊಂದಿಗೆ ಕೆಲವು ಶಾಶ್ವತ ದಾಖಲೆಗಳನ್ನು ನಿರ್ಮಿಸಿರುವ ಡಾ. ಅನುರಾಧಾ ಕುರುಂಜಿಯವರು ಶಿಕ್ಷಣದ

ಬಹುಮುಖ ಸಾಧಕಿ ಡಾ. ಅನುರಾಧಾ ಕುರುಂಜಿಯವರು ಪ್ರತಿಷ್ಠಿತ “ಚೈತನ್ಯ ಶ್ರೀ- 2024”   ಮಹಿಳಾ ಸಾಧಕಿ ಪ್ರಶಸ್ತಿಗೆ ದ.ಕ ಜಿಲ್ಲೆಯಿಂದ ಆಯ್ಕೆ | ರಾಜ್ಯಮಟ್ಟದ ನಾಲ್ಕನೇ ವೈಜ್ಞಾನಿಕ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರಧಾನ Read More »

ಬೈಕ್‍—ಖಾಸಗಿ ಬಸ್ ಡಿಕ್ಕಿ | ಬೈಕ್‍ ಸವಾರ ಸ್ಥಳದಲ್ಲೇ ಮೃತ್ಯು

ಕೊಕ್ಕಡ: ಖಾಸಗಿ ಬಸ್ ಹಾಗೂ ಬೈಕ್‍ ಡಿಕ್ಕಿ ಹೊಡೆದುಕೊಂಡು ಬೈಕ್‍ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಕೌಕ್ರಾಡಿ ಗ್ರಾಮದ ಕಾಪಿನಬಾಗಿಲು ಎಂಬಲ್ಲಿ ಭಾನುವಾರ ಸಂಜೆ ನಡೆದಿದೆ. ಕೊಕ್ಕಡ ಸಮೀಪದ ಕೌಕ್ರಾಡಿ ಗ್ರಾಮದ ಮೂಡುಬೈಲು ನಿವಾಸಿ ಮಾಧವ ಆಚಾರಿ (52) ಮೃತಪಟ್ಟ ಬೈಕ್‍ ಸವಾರ . ಆಂಧ್ರಪ್ರದೇಶದಿಂದ ಅಯ್ಯಪ್ಪ ವೃತಧಾರಿಗಳನ್ನು ಶಬರಿಮಲೆ ಯಾತ್ರೆಗೆ ಕೊಂಡೊಯ್ಯುವ ಖಾಸಗಿ ಬಸ್ಸು ಧರ್ಮಸ್ಥಳದಿಂದ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದು, ಬೈಕ್ ಸವಾರ ಕೊಕ್ಕಡದಿಂದ ಕಾಪಿನಬಾಗಿಲಿಗೆ ಬರುತ್ತಿದ್ದಾಗ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಬೈಕ್‍—ಖಾಸಗಿ ಬಸ್ ಡಿಕ್ಕಿ | ಬೈಕ್‍ ಸವಾರ ಸ್ಥಳದಲ್ಲೇ ಮೃತ್ಯು Read More »

error: Content is protected !!
Scroll to Top