ಪುತ್ತೂರು

ಶಾರ್ಟ್ ಸರ್ಕ್ಯೂಟ್‍ ನಿಂದ ಬೇಕರಿಗೆ ಬೆಂಕಿ : ಸಂಪೂರ್ಣ ಭಸ್ಮ

ಉಪ್ಪಿನಂಗಡಿ: ಬೇಕರಿಯೊಂದಕ್ಕೆ ಶಾರ್ಟ್‍ ಸರ್ಕ್ಯೂಟ್‍ ನಿಂದ ಬೆಂಕಿ ಬಿದ್ದ ಪರಿಣಾಮ ಬೇಕರಿ ಸಂಪೂರ್ಣ ಭಸ್ಮವಾದ ಘಟನೆ ಉಪ್ಪಿನಂಗಡಿ ಬಸ್ ನಿಲ್ದಾಣದ ಬಳಿ ನಡೆದಿದೆ. ಬಸ್ ನಿಲ್ದಾಣದ ಬಳಿಯಿರುವ ಸಮತ ಬೇಕರಿಗೆ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿದೆ. ಅಂಗಡಿ ಸಂಪೂರ್ಣ ಸುಟ್ಟಿದ್ದು ಬೆಂಕಿ ನಂದಿಸುವ ಪ್ರಯತ್ನ ಅಗ್ನಿ ಶಾಮಕ ದಳದ ಸಿಬ್ಬಂದಿಗಳಿಂದ ನಡೆಯುತ್ತಿದೆ ಎಂದು ತಿಳಿದು ಬಂದಿದೆ.

ಶಾರ್ಟ್ ಸರ್ಕ್ಯೂಟ್‍ ನಿಂದ ಬೇಕರಿಗೆ ಬೆಂಕಿ : ಸಂಪೂರ್ಣ ಭಸ್ಮ Read More »

ಹಿರೇಬಂಡಾಡಿ ಗ್ರಾಮದಲ್ಲಿ ಕಾಡಾನೆ ದಾಳಿ | ಕಾಡಾನೆಯಿಂದ  ಹಾನಿಗೊಳಗಾದ ಕೃಷಿ ಪ್ರದೇಶಕ್ಕೆ ಮಾಜಿ ಶಾಸಕ ಸಂಜೀವ ಮಠಂದೂರು ಬೇಟಿ

ಪುತ್ತೂರು : ಹಿರೇಬಂಡಾಡಿ ಗ್ರಾಮ ಕರೆಂಕಿ ಎಂಬಲ್ಲಿ ಕಾಡಾನೆ ಸಂಚರಿಸಿದ್ದು, ಗ್ರಾಮಸ್ಥರು ಆತಂಕ ಪಟ್ಟಿದ್ದಾರೆ. ಕಾಡಾನೆ ಸಂಚರಿಸಿದ ಹಿನ್ನಲೆ ಬೆಳಿಯಪ್ಪ   ಗೌಡ ಜಾಲುರವರ ತೋಟದಲ್ಲಿ ತೆಂಗಿನ ಮರ ಮತ್ತು ಬಾಳೆಗಿಡಗಳಿಗೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ. ಈ ಸಂದರ್ಭ ಸ್ಥಳಕ್ಕೆ ಭೇಟಿ  ನೀಡಿದ ಪುತ್ತೂರಿನ ಮಾಜಿ ಶಾಸಕ ಸಂಜೀವ ಮಠಂದೂರು ಅರಣ್ಯಾಧಿಕಾರಿಗಳು ಸೂಕ್ತ ಮುಂಜಾಗ್ರತಾ ಕ್ರಮ ವಹಿಸುವಂತೆ ತಿಳಿಸಿದ್ದಾರೆ. ಗ್ರಾ.ಪಂ. ಮಾಜಿ ಸದಸ್ಯರಾದ ವಿಶ್ವನಾಥ ಕೆಮ್ಮಾಜೆ ಉಪಸ್ಥಿತರಿದ್ದರು.

ಹಿರೇಬಂಡಾಡಿ ಗ್ರಾಮದಲ್ಲಿ ಕಾಡಾನೆ ದಾಳಿ | ಕಾಡಾನೆಯಿಂದ  ಹಾನಿಗೊಳಗಾದ ಕೃಷಿ ಪ್ರದೇಶಕ್ಕೆ ಮಾಜಿ ಶಾಸಕ ಸಂಜೀವ ಮಠಂದೂರು ಬೇಟಿ Read More »

ಗ್ರಾಮಜನ್ಯ ಹೊಸ ಆಡಳಿತ ಕಚೇರಿ ಉದ್ಘಾಟನೆ, ನಿರಖು ಠೇವಣಿ ಸೌಲಭ್ಯಕ್ಕೆ ಚಾಲನೆ

ಪುತ್ತೂರು: ಗ್ರಾಮಜನ್ಯ ತನ್ನ ಹೊಸ ಆಡಳಿತ ಕಚೇರಿ ಗುರುವಾರ ಪುತ್ತೂರಿನ ರಾಧಾಕೃಷ್ಣ ಕಾಂಪ್ಲೆಕ್ಸ್ ನಲ್ಲಿ ಉದ್ಘಾಟನೆಗೊಂಡಿತು. ಪ್ರಮುಖ ಉದ್ಯಮಿ ಬಲರಾಮ ಆಚಾರ್ಯ ಉದ್ಘಾಟಿಸಿ ಮಾತನಾಡಿ, ನವೀನ ವ್ಯವಹಾರ ಮಾದರಿಗಳ ಮೂಲಕ ಕೃಷಿಯನ್ನು ಆಧುನೀಕರಿಸುವ ಅಗತ್ಯವನ್ನು ಒತ್ತಿ ಹೇಳಿದರು. ಭಾರತದ 45% ರಷ್ಟು ಉದ್ಯೋಗಿಗಳು ಕೃಷಿಯಲ್ಲಿ ತೊಡಗಿಸಿಕೊಂಡಿದ್ದರೂ, ಈ ವಲಯವು ಜಿಡಿಪಿಗೆ ಕೇವಲ 17% ಕೊಡುಗೆ ನೀಡುತ್ತದೆ, ಇದು ಕಡಿಮೆ ಉತ್ಪಾದಕತೆ ಮತ್ತು ಆದಾಯದ ಮಟ್ಟವನ್ನು ಪ್ರತಿಬಿಂಬಿಸುತ್ತದೆ. ಕೃಷಿ ವ್ಯವಹಾರದಲ್ಲಿ ವಾಣಿಜ್ಯ ಮಾದರಿಗಳನ್ನು ಅಳವಡಿಸಿಕೊಳ್ಳುವ ಮಹತ್ವವನ್ನು ಒತ್ತಿ ಹೇಳಿದ

ಗ್ರಾಮಜನ್ಯ ಹೊಸ ಆಡಳಿತ ಕಚೇರಿ ಉದ್ಘಾಟನೆ, ನಿರಖು ಠೇವಣಿ ಸೌಲಭ್ಯಕ್ಕೆ ಚಾಲನೆ Read More »

ಇಂದು ಪುತ್ತೂರಿಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಭೇಟಿ

ಪುತ್ತೂರು : ಇಂದು ಪುತ್ತೂರು ಮತ್ತು ಮಂಗಳೂರಿಗೆ ಖಾಸಗಿ ಕಾರ್ಯಕ್ರಮಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಭೇಟಿ ನೀಡಲಿದ್ದಾರೆ. ಸಂಜೆ 6.30ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದು ಅಲ್ಲಿಂದ  ರಸ್ತೆ ಮಾರ್ಗವಾಗಿ ಪುತ್ತೂರಿಗೆ 8 ಗಂಟೆಗೆ ತಲುಪಲಿದ್ದಾರೆ. ಪುತ್ತೂರಿನಲ್ಲಿ ಸುಪ್ರೀಂ ಕೋರ್ಟಿನ ಅಡಿಷನಲ್ ಸೋಲಿಸಿಟರ್ ಜಿನರಲ್ ಈಶ್ವರಮಂಗಲದ ಹನುಮಗಿರಿಯ ಕೆ.ಎಂ.ನಟರಾಜ್ ಅವರ ನೂತನ ಗೃಹ ಪ್ರವೇಶ ಇತ್ತಿಚೆಗೆ ನಡೆದಿದ್ದು, ಕೆ.ಎಂ.ನಟರಾಜ್ ಅವರ ಮನೆಗೆ ವಿಜಯೇಂದ್ರ ಭೇಟಿ ನೀಡಲಿದ್ದಾರೆ. ಅಲ್ಲಿಂದ 8.30 ಕ್ಕೆ ಹೊರಟು ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್

ಇಂದು ಪುತ್ತೂರಿಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಭೇಟಿ Read More »

ಆಟೋಗೆ ಗೋವನ್ನು ಕಟ್ಟಿ ಎಳೆದೊಯಿದ ಚಾಲಕ

ಪುತ್ತೂರು : ಆಟೋಗೆ ಗೋವನ್ನು ಕಟ್ಟಿ ಎಳೆದೊಯ್ಯುವ ಘಟನೆ ಕೃತ್ಯ  ಡಿ.26ರಂದು ಸವಣೂರಿನಲ್ಲಿ ನಡೆದಿದೆ. ಆಟೋಗೆ ಗೋವನ್ನು ಕಟ್ಟಿ ಎಳೆದೊಯ್ಯುದ ಚಾಲಕನ ದುಷ್ಟ ಬುದ್ದಿಯ ವಿಡಿಯೋ ವೈರಲ್ ಆಗಿದೆ. ಪುತ್ತೂರು ಬೆಳ್ಳಾರೆ ಠಾಣಾ ವ್ಯಾಪ್ತಿಯ ಸವಣೂರಿನಲ್ಲಿ KA21 B 4123 ನಂಬರಿನ ಆಟೋ ಎಂದು ತಿಳಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ, ರಾತ್ರಿ ಹೊತ್ತು ಈ ಘಟನೆ ನಡೆದಿದ್ದು ಕಾರಣ ಇನ್ನು ತಿಳಿದುಬಂದಿಲ್ಲ,

ಆಟೋಗೆ ಗೋವನ್ನು ಕಟ್ಟಿ ಎಳೆದೊಯಿದ ಚಾಲಕ Read More »

ಸಮುದಾಯ ಭವನ ಸಮಾಜದ ಸ್ವಾಭಿಮಾನ ಸಂಕೇತ : ಶ್ರೀ ಡಾ.ಧರ್ಮಪಾಲನಾಥ ಸ್ವಾಮೀಜಿ | ಒಗ್ಗಟಿದ್ದರೆ ಸಮಾಜಮುಖಿ ಕೆಲಸಗಳಿಗೆ ಪ್ರೇರಣೆ ಸಿಗುತ್ತದೆ : ಯತೀಶ್‍ ಕುಮಾರ್ | ಒಕ್ಕಲಿಗ ಸಮಾಜವು ಮಾನವ ಕುಲಕ್ಕೆ ದಾರಿದೀಪವಾಗಿದೆ : ಪ್ರದೀಪ್‍ ಆರ್.ಗೌಡ | ಸಮುದಾಯ ಭವನ ಶ್ರೀಮಂತರ ಭವನ ಆಗದೆ ಸಮಾಜದ ಪ್ರತಿಯೊಬ್ಬರಿಗೂ ಉಪಯೋಗಕ್ಕೆ ಸಿಗಬೇಕು : ಸುರೇಶ್ ಬೈಲು | ಯಾವುದೇ ಫಲಾಪೇಕ್ಷೆ ಇಲ್ಲದೆ ಸಂಘದ ಮುನ್ನಡೆ : ಕೇಶವ ಅಮೈ | ಕಡಬ ಒಕ್ಕಲಿಗ ಗೌಡ ಸೇವಾ ಸಂಘದ ನೂತನ ಸಮುದಾಯ ಭವನದಲ್ಲಿ ಸಂಘ ಆಡಳಿತ ಕಚೇರಿ ಉದ್ಘಾಟನೆ | ಕಡಬ ತಾಲೂಕು ಮಟ್ಟದ ವಾರ್ಷಿಕ ಕ್ರೀಡಾಕೂಟ

ಕಡಬ: ಒಕ್ಕಲಿಗ ಗೌಡ ಸೇವಾ ಸಂಘ ಕಡಬ ತಾಲೂಕು ವತಿಯಿಂದ ಕಡಬ ಹೊಸಮಠದಲ್ಲಿ ನಿರ್ಮಾಣ ಹಂತದಲ್ಲಿರುವ ನೂತನ ಸಮುದಾಯ ಭವನದಲ್ಲಿ ಸಂಘದ ಆಡಳಿತ ಕಚೇರಿಯ ಉದ್ಘಾಟನೆ ಹಾಗೂ ಕಡಬ ತಾಲೂಕು ಮಟ್ಟದ ವಾರ್ಷಿಕ ಕ್ರೀಡಾಕೂಟ ಡಿ.25 ರಂದು ಕಡಬ ಹೊಸಮಠದಲ್ಲಿ ನಡೆಯಿತು. ಸಮುದಾಯ ಭವನ ಸಮಾಜದ ಸ್ವಾಭಿಮಾನ ಸಂಕೇತ : ಶ್ರೀ ಡಾ.ಧರ್ಮಪಾಲನಾಥ ಸ್ವಾಮೀಜಿ ಆಡಳಿತ ಕಚೇರಿ ಉದ್ಘಾಟಿಸಿ ಅನುಗ್ರಹ ಸಂದೇಶ ನೀಡಿದ ಶ್ರೀ ಆದಿಚುಂಚನಗಿರಿ ಮಂಗಳೂರು ಕಾವೂರು ಶಾಖಾ ಮಠದ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿ,

ಸಮುದಾಯ ಭವನ ಸಮಾಜದ ಸ್ವಾಭಿಮಾನ ಸಂಕೇತ : ಶ್ರೀ ಡಾ.ಧರ್ಮಪಾಲನಾಥ ಸ್ವಾಮೀಜಿ | ಒಗ್ಗಟಿದ್ದರೆ ಸಮಾಜಮುಖಿ ಕೆಲಸಗಳಿಗೆ ಪ್ರೇರಣೆ ಸಿಗುತ್ತದೆ : ಯತೀಶ್‍ ಕುಮಾರ್ | ಒಕ್ಕಲಿಗ ಸಮಾಜವು ಮಾನವ ಕುಲಕ್ಕೆ ದಾರಿದೀಪವಾಗಿದೆ : ಪ್ರದೀಪ್‍ ಆರ್.ಗೌಡ | ಸಮುದಾಯ ಭವನ ಶ್ರೀಮಂತರ ಭವನ ಆಗದೆ ಸಮಾಜದ ಪ್ರತಿಯೊಬ್ಬರಿಗೂ ಉಪಯೋಗಕ್ಕೆ ಸಿಗಬೇಕು : ಸುರೇಶ್ ಬೈಲು | ಯಾವುದೇ ಫಲಾಪೇಕ್ಷೆ ಇಲ್ಲದೆ ಸಂಘದ ಮುನ್ನಡೆ : ಕೇಶವ ಅಮೈ | ಕಡಬ ಒಕ್ಕಲಿಗ ಗೌಡ ಸೇವಾ ಸಂಘದ ನೂತನ ಸಮುದಾಯ ಭವನದಲ್ಲಿ ಸಂಘ ಆಡಳಿತ ಕಚೇರಿ ಉದ್ಘಾಟನೆ | ಕಡಬ ತಾಲೂಕು ಮಟ್ಟದ ವಾರ್ಷಿಕ ಕ್ರೀಡಾಕೂಟ Read More »

ಕೌಡಿಚ್ಚಾರು : ಶ್ರೀ ಅಯ್ಯಪ್ಪ ಸ್ವಾಮಿ ದೀಪೋತ್ಸವ

ಅರಿಯಡ್ಕ : ಶ್ರೀ ಅಯ್ಯಪ್ಪ ಸೇವಾ ಸಮಿತಿ ಕೌಡಿಚ್ಚಾರು ಅರಿಯಡ್ಕ ಇದರ ನೇತೃತ್ವದಲ್ಲಿ ಮತ್ತು ಶ್ರೀ ಕೃಷ್ಣ ಭಜನಾ ಮಂದಿರ (ರಿ) ಕೌಡಿಚ್ಚಾರು -ಅರಿಯಡ್ಕ ಇದರ ಸಹಕಾರದೊಂದಿಗೆ ಶ್ರೀ ಅಯ್ಯಪ್ಪ ಸ್ವಾಮಿಯ ದೀಪೋತ್ಸವ ಡಿ 20 ರಂದು ವಿಜೃಂಭಣೆಯಿಂದ ಶ್ರೀ ಕೃಷ್ಣ ಭಜನಾ ಮಂದಿರದಲ್ಲಿ ನಡೆಯಿತು. ಡಿ.20ರಂದು ಬೆಳಿಗ್ಗೆ ಗಣಪತಿ ಹೋಮ, ನಾಗ ತಂಬಿಲ, ಶ್ರೀ ಕೃಷ್ಣ ದೇವರಿಗೆ ವಿಶೇಷ ಪೂಜೆ ಪ್ರಾರ್ಥನೆ, ಭಜನಾ ಸಂಕೀರ್ತನೆ ನಡೆಯಿತು. ಭವ್ಯ ಮೆರವಣಿಗೆ ಶ್ರೀ ಅಯ್ಯಪ್ಪ ಭಜನ ಮಂದಿರ ಪೆರಿಗೇರಿಯವರ

ಕೌಡಿಚ್ಚಾರು : ಶ್ರೀ ಅಯ್ಯಪ್ಪ ಸ್ವಾಮಿ ದೀಪೋತ್ಸವ Read More »

ದ. ಕ. ಜಿಲ್ಲಾ. ಪಂಚಾಯತ್‍. ಉನ್ನತ. ಹಿರಿಯ. ಪ್ರಾಥಮಿಕ ಸತ್ತಿಕ್ಕಲ್ಲು ಶಾಲಾ  ಮಕ್ಕಳಿಗೆ  ಡೆಸ್ಕ್ ಮತ್ತು ಬೆಂಚು ವಿತರಣೆ

ಕೆದಿಲ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಪೆರ್ನೆ ವಲಯದ ಕೆದಿಲ ಕಾರ್ಯಕ್ಷೇತ್ರದ  ಸಮುದಾಯ ಅಭಿವೃದ್ಧಿ ಕಾರ್ಯಕ್ರಮದಿಂದ  ಸತ್ತಿಕ್ಕಲ್ಲಿನ ದ. ಕ. ಜಿ. ಪಂ. ಉ. ಹಿ. ಪ್ರಾಥಮಿಕ ಶಾಲೆಯ ಮಕ್ಕಳಿಗೆ  5 ಡೆಸ್ಕ್ ಮತ್ತು 5 ಬೆಂಚನ್ನು ನೀಡಲಾಯಿತು. ಶಾಲಾ  ಮುಖ್ಯೋಪಾಧ್ಯಯ ಮಂಜುನಾಥ ಮತ್ತು  ಅಧ್ಯಾಪಕ ವೃಂದ ಹಾಗೂ  ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ನಿಯಾಝ್,  ಉಪಾಧ್ಯಕ್ಷ ಶ್ವೇತರವರಿಗೆ  ಪೆರ್ನೆ ವಲಯ ಮೇಲ್ವಿಚಾರಕಿ ಶಾರದಾ 5 ಡೆಸ್ಕ್ ಮತ್ತು 5 ಬೆಂಚನ್ನು ವಿತರಿಸಿದರು. ಈ ಸಂದರ್ಭದಲ್ಲಿ

ದ. ಕ. ಜಿಲ್ಲಾ. ಪಂಚಾಯತ್‍. ಉನ್ನತ. ಹಿರಿಯ. ಪ್ರಾಥಮಿಕ ಸತ್ತಿಕ್ಕಲ್ಲು ಶಾಲಾ  ಮಕ್ಕಳಿಗೆ  ಡೆಸ್ಕ್ ಮತ್ತು ಬೆಂಚು ವಿತರಣೆ Read More »

ದನದ ಕಾಲು ಕಡಿದ ಅನ್ಯಕೋಮಿನ ವ್ಯಕ್ತಿ | ಆರೋಪಿ ವಿರುದ್ಧ ಪ್ರಕರಣ ದಾಖಲು

ರಾಮಕುಂಜ: ಮೇಯಲು ಬಿಟ್ಟಿದ್ದ ದನದ ಕಾಲಿಗೆ ಪಕ್ಕದ ಮನೆಯ ವ್ಯಕ್ತಿಯೋರ್ವರು ಕತ್ತಿಯಿಂದ ಕಡಿದು ಗಂಭೀರ ಗಾಯಗೊಳಿಸಿದ ಘಟನೆ ರಾಮಕುಂಜ ಗ್ರಾಮದ ಕೊಂಡ್ಯಾಡಿ ಎಂಬಲ್ಲಿ ನಡೆದಿದೆ. ಕೊಂಡ್ಯಾಡಿ ನಿವಾಸಿ ದನ ಮಾಲಕಿ, ರಾಜೀವಿ ಎಂಬವರು ಕಡಬ ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿ ಅಬ್ಬಾಸ್ ಎಂದು ತಿಳಿದು ಬಂದಿದೆ. ಡಿ.22ರಂದು ಮಧ್ಯಾಹ್ನ 2 ಗಂಟೆಗೆ ಕೊಟ್ಟಿಗೆಯಿಂದ ದನವನ್ನು ತೋಟಕ್ಕೆ ಮೇಯಲು ಬಿಟ್ಟಿದ್ದು, ದನ ಸಂಜೆಯಾದರೂ ಮರಳಿ ಮನೆಗೆ ಬಾರದೇ ಇದ್ದದನ್ನು ಕಂಡು ದನವನ್ನು ಹುಡುಕಾಡಿದಾಗ ಪಕ್ಕದ ಮನೆಯ ಅಬ್ಬಾಸ್ ಎಂಬವರ

ದನದ ಕಾಲು ಕಡಿದ ಅನ್ಯಕೋಮಿನ ವ್ಯಕ್ತಿ | ಆರೋಪಿ ವಿರುದ್ಧ ಪ್ರಕರಣ ದಾಖಲು Read More »

ರಾಷ್ಟ್ರ ಮಟ್ಟದಲ್ಲಿ ಬಹುಮಾನ ಗಳಿಸಿದ ಅಂಬಿಕಾ ವಿದ್ಯಾರ್ಥಿನಿಗೆ ಅಭಿನಂದನೆ

ಪುತ್ತೂರು: ಸ್ಕೂಲ್ ಗೇಮ್ ಫೆಡರೇಶನ್ ಆಫ್ ಇಂಡಿಯಾ ಸಂಸ್ಥೆಯು ಗುಜರಾತ್‌ ನ ರಾಜಕೋಟ್‌ ನಲ್ಲಿ ಏಳು ದಿನಗಳ ಕಾಲ ನಡೆಸಿದ 68ನೇ ರಾಷ್ಟ್ರೀಯ ಈಜು ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದ ಪುತ್ತೂರಿನ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಪ್ರತೀಕ್ಷಾ ಶೆಣೈ ಅವರನ್ನು ಸಂಸ್ಥೆಯ ವತಿಯಿಂದ ಗುರುವಾರ ಅಭಿನಂದಿಸಿ ಸನ್ಮಾನಿಸಲಾಯಿತು. ಪುತ್ತೂರಿನ ನರಸಿಂಹ ಶೆಣೈ ಮತ್ತು ಶ್ರೀಲಕ್ಷ್ಮೀ ಎನ್. ಶೆಣೈಯವರ ಪುತ್ರಿಯಾದ ಅವರು ರಾಜ್‌ಕೋಟ್‌ ನ ಸರ್ದಾರ್ ವಲ್ಲಭಬಾಯಿ ಪಟೇಲ್ ಈಜುಕೊಳದಲ್ಲಿ ನಡೆದ ಸ್ಪರ್ಧೆಯಲ್ಲಿ  50

ರಾಷ್ಟ್ರ ಮಟ್ಟದಲ್ಲಿ ಬಹುಮಾನ ಗಳಿಸಿದ ಅಂಬಿಕಾ ವಿದ್ಯಾರ್ಥಿನಿಗೆ ಅಭಿನಂದನೆ Read More »

error: Content is protected !!
Scroll to Top