ಪುತ್ತೂರು

ಜನಮಂಗಲ ಕಾರ್ಯಕ್ರಮದ  ಯೋಜನೆಯಡಿಯಲ್ಲಿ ವ್ಹೀಲ್ ಚೇರ್ ವಿತರಣೆ

ಕೆದಿಲ : ಬಂಟ್ವಾಳ  ತಾಲೂಕು,ಕೆದಿಲ ಗ್ರಾಮದ ಆನಡ್ಕ (ಕರಿಮಜಲು) ಗಂಗಾಧರ ಸಪಲ್ಯರು  ಅಸೌಖ್ಯವಾಗಿದ್ದರಿಂದ ಶ್ರೀ ಕ್ಷೇತ್ರ ಧರ್ಮಸ್ಥಳ  ಗ್ರಾಮಾಭಿವೃದ್ಧಿ  ಯೋಜನೆಯ ಜನಮಂಗಲ ಕಾರ್ಯಕ್ರಮದ  ಯೋಜನೆಯಡಿಯಲ್ಲಿ  ಡಿ. ರಂದು ಶೌಚಾಲಯಕ್ಕೆ  ಅನುಕೂಲಕ್ಕಾಗಿ  ಕೊಮೋಡೋ  ವೀಲ್ ಚೇರನ್ನು ವಿತರಿಸಲಾಯಿತು. ವಿಟ್ಲ ತಾಲೂಕು ಕೃಷಿ ಅಧಿಕಾರಿಯಾದ ಚಿದಾನಂದ ಮತ್ತು ಪೆರ್ನೆ ವಲಯ  ಮೇಲ್ವಿಚಾರಕಿ ಶಾರದಾ ವ್ಹೀಲ್‍ ಚೇರ್‍ ನ್ನು ವಿತರಿಸಿದ್ದಾರೆ.  ಈ ಸಂದರ್ಭದಲ್ಲಿ  ಕೆದಿಲ “A” ಒಕ್ಕೂಟದ ಸೇವಾಪ್ರತಿನಿಧಿ  ಶಾರದ, ಪೆರ್ನೆ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯ ಜಗದೀಶ ಕೆದಿಲ, […]

ಜನಮಂಗಲ ಕಾರ್ಯಕ್ರಮದ  ಯೋಜನೆಯಡಿಯಲ್ಲಿ ವ್ಹೀಲ್ ಚೇರ್ ವಿತರಣೆ Read More »

ಡಿ.28-29 : ಪುತ್ತೂರಿನಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ | ಭರದಿಂದ ಸಾಗುತ್ತಿದೆ ಸಕಲ ಸಿದ್ಧತೆಗಳು, ಒಂದು ಲಕ್ಷ ಮಂದಿ ಪಾಲ್ಗೊಳ್ಳುವ ನಿರೀಕ್ಷೆ

ಪುತ್ತೂರು: ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಹಾಗೂ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಸಾರಥ್ಯದಲ್ಲಿ ಡಿ.28 ಹಾಗೂ 29 ರಂದು ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ನಡೆಯಲಿರುವ ಶ್ರೀನಿವಾಸ ಕಲ್ಯಾಣೋತ್ಸವದ ಸಕಲ ಸಿದ್ಧತೆಗಳು ಭರದಿಂದ ಸಾಗುತ್ತಿದೆ ಎಂದು ಸಮಿತಿ ಸಂಚಾಲಕ ಅರುಣ್ ಕುಮಾರ್‍ ಪುತ್ತಿಲ ತಿಳಿಸಿದ್ದಾರೆ. ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಶ್ರೀನಿವಾಸ ಕಲ್ಯಾಣೋತ್ಸವ ಧಾರ್ಮಿಕ ಕಾರ್ಯಕ್ರಮಕ್ಕಾಗಿ ಈಗಾಗಲೇ 53 ಚದರ ಅಡಿಯ ಪೆಂಡಾಲ್‍ ಹಾಗೂ ಅನ್ನ ಸಂತರ್ಪಣೆಗಾಗಿ 20 ಸಾವಿರ ಚದರ ಅಡಿಯ ಬೃಹತ್

ಡಿ.28-29 : ಪುತ್ತೂರಿನಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ | ಭರದಿಂದ ಸಾಗುತ್ತಿದೆ ಸಕಲ ಸಿದ್ಧತೆಗಳು, ಒಂದು ಲಕ್ಷ ಮಂದಿ ಪಾಲ್ಗೊಳ್ಳುವ ನಿರೀಕ್ಷೆ Read More »

ಜ.4 : ಪಾಂಗಳಾಯಿ ಶ್ರೀ ಅರಸು ಮುಂಡ್ಯತ್ತಾಯ ದೈವಸ್ಥಾನದಲ್ಲಿ ವರ್ಷಾವಧಿ ನೇಮೋತ್ಸವ

ಪುತ್ತೂರು : ನಗರದ ಪಾಂಗಳಾಯಿ ಶ್ರೀ ಅರಸು ಮುಂಡ್ಯತ್ತಾಯ ದೈವಸ್ಥಾನ ವರ್ಷಾವಧಿ ಪೂಜೆ ಹಾಗೂ ಗ್ರಾಮದೈವ ಹಾಗೂ ಪರಿವಾರ ದೈವಗಳ ನೇಮೋತ್ಸವ ಜ.4 ರಂದು ವಿವಿಧ ವೈದಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ದೈವಸ್ಥಾನ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ನಾಯ್ಕ ಎ. ಕಲ್ಲಿಮಾರ್ ತಿಳಿಸಿದ್ದಾರೆ. ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಸುಮಾರು 800 ವರ್ಷಗಳ ಇತಿಹಾಸ ಹೊಂದಿರುವ ದೈವಸ್ಥಾನ ಅಂದಿನ ಕಾಲದಲ್ಲಿ ವಿಜೃಂಭಣೆಯಿಂದ ನೇಮ ನಡಾವಳಿಗಳು ಜರಗುತ್ತಿದ್ದವು. ಅನಂತರ ದಿನಗಳಲ್ಲಿ ಬೇರೆ ಬೇರೆ ಕಾರಣಗಳಿಂದ ನೇಮೋತ್ಸವ

ಜ.4 : ಪಾಂಗಳಾಯಿ ಶ್ರೀ ಅರಸು ಮುಂಡ್ಯತ್ತಾಯ ದೈವಸ್ಥಾನದಲ್ಲಿ ವರ್ಷಾವಧಿ ನೇಮೋತ್ಸವ Read More »

ಜ.4 : ಒಕ್ಕಲಿಗ ಗೌಡ ಸೇವಾ ಸಂಘದ ವಾರ್ಷಿಕ ಕಾರ್ಯಕ್ರಮ, ಒಕ್ಕಲಿಗ ಸ್ವಸಹಾಯ ಟ್ರಸ್ಟ್ ನ ದಶಮಾನೋತ್ಸವ ಸಂಭ್ರಮ

ಪುತ್ತೂರು : ಒಕ್ಕಲಿಗ ಗೌಡ ಸೇವಾ ಸಂಘದ ಆತಿಥ್ಯದಲ್ಲಿ ವಾರ್ಷಿಕ ಕಾರ್ಯಕ್ರಮ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಒಕ್ಕಲಿಗ ಸ್ವಸಹಾಯ ಟ್ರಸ್ಟ್ ನ ದಶಮಾನೋತ್ಸವ ಸಂಭ್ರಮ ಜ.4 ರಂದು ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆಯಲಿದೆ ಎಂದು ಪುತ್ತೂರು ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ರವಿ ಮುಂಗ್ಲಿಮನೆ ತಿಳಿಸಿದ್ದಾರೆ. ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಸಭಾ ಕಾರ್ಯಕ್ರಮದಲ್ಲಿ ತಾಲೂಕಿನಲ್ಲಿ ಸಾಧನೆ ಮಾಡಿದ ಹಿರಿಯ, ಯುವ ಮತ್ತು ಮಹಿಳಾ ಹೀಗೆ ಆಯ್ದ ಮೂರು

ಜ.4 : ಒಕ್ಕಲಿಗ ಗೌಡ ಸೇವಾ ಸಂಘದ ವಾರ್ಷಿಕ ಕಾರ್ಯಕ್ರಮ, ಒಕ್ಕಲಿಗ ಸ್ವಸಹಾಯ ಟ್ರಸ್ಟ್ ನ ದಶಮಾನೋತ್ಸವ ಸಂಭ್ರಮ Read More »

ರಾಜ್ಯ ಒಕ್ಕಲಿಗ ಸಂಘದ ಉಪಾಧ್ಯಕ್ಷರಾದ ಡಾ.ಕೆ.ವಿ.ರೇಣುಕಾ ಪ್ರಸಾದ್ ಪ್ರೇರಣಾ ಮತ್ತು ನ್ಯೂಸ್ ಪುತ್ತೂರು ಸಂಸ್ಥೆಗೆ ಭೇಟಿ | ಪ್ರೇರಣಾ ಸಂಸ್ಥೆಯಿಂದ ಸನ್ಮಾನ

ಪುತ್ತೂರು : 2ನೇ ಬಾರಿಗೆ ರಾಜ್ಯ ಒಕ್ಕಲಿಗ ಸಂಘದ ಉಪಾಧ್ಯಕ್ಷರಾಗಿ ಆಯ್ಕೆಯಾದ ಡಾ.ಕೆ.ವಿ.ರೇಣುಕಾ ಪ್ರಸಾದ್ ಅವರಿಗೆ ಪ್ರತಿಷ್ಠಿತ ‘ಪ್ರೇರಣಾ’ ಸಂಸ್ಥೆಯಿಂದ ಗೌರವಾರ್ಪಣೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಡಾ.ಕೆ.ವಿ.ರೇಣುಕಾ ಪ್ರಸಾದ್ ಮಾತನಾಡಿ, ಮೂರು ವರ್ಷದ ಹಿಂದೆ ಐದು ಮಂದಿ ನಿರ್ದೇಶಕರ ಮೂಲಕ ನನ್ನ ಉಪಸ್ಥಿತಿಯಲ್ಲಿ ಉದ್ಘಾಟನೆಗೊಂಡು ಈ ವರೆಗೆ ಬಹಳ  ಉತ್ತಮ ಕಾರ್ಯವನ್ನು ಮಾಡುತ್ತಿದೆ. ಐದು ಮಂದಿ ಪ್ರಾರಂಭಿಸಿದ ಪ್ರೇರಣಾ ಸಂಸ್ಥೆಗೆ ನನ್ನಿಂದಾಗುವ ಹಾಗೂ ರಾಜ್ಯ ಒಕ್ಕಲಿಗ ಸಂಘದಿಂದ ನೀಡುವ ಎಲ್ಲಾ ಸಹಕಾರವನ್ನು ನೀಡುತ್ತೇನೆ. ಪ್ರೇರಣಾ ಸಂಸ್ಥೆ ಅನೇಕ

ರಾಜ್ಯ ಒಕ್ಕಲಿಗ ಸಂಘದ ಉಪಾಧ್ಯಕ್ಷರಾದ ಡಾ.ಕೆ.ವಿ.ರೇಣುಕಾ ಪ್ರಸಾದ್ ಪ್ರೇರಣಾ ಮತ್ತು ನ್ಯೂಸ್ ಪುತ್ತೂರು ಸಂಸ್ಥೆಗೆ ಭೇಟಿ | ಪ್ರೇರಣಾ ಸಂಸ್ಥೆಯಿಂದ ಸನ್ಮಾನ Read More »

ಕಾಲು ಜಾರಿ ಬಿದ್ದು ವ್ಯಕ್ತಿ ಮೃತ್ಯು

ಬೆಳ್ತಂಗಡಿ : ಕಾಡಿಗೆ ಸೊಪ್ಪು ತರಲು ಹೋದ ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ ಮಾಲ್ಯಳ ಕಾಡಿನಲ್ಲಿ ನಡೆದಿದೆ. ಪೊದಿಂಬಿಲ ನಿವಾಸಿ ರಾಜೇಶ್ ಆಚಾರ್ಯ (36) ಮೃತಪಟ್ಟವರು. ಸೋಮವಾರ ಮಾಲ್ಯಳ ಕಾಡಿಗೆ ಮಕ್ಕಳಿಗೆ ಮದ್ದಿನ ಸೊಪ್ಪು ತರಲು ಹೋದ ವ್ಯಕ್ತಿ ವಾಪಾಸು ಮನೆಗೆ ಬಾರದ ಹಿನ್ನಲೆಯಲ್ಲಿ ಮನೆಯವರು ಮತ್ತು ಸಾರ್ವಜನಿಕರು ಹುಡುಕಾಟ ನಡೆಸಿದಾಗ ಕಲ್ಲಿನ ಸೆರೆಯಲ್ಲಿ ಸಿಲುಕಿದ ರೀತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಮೃತರು ತಂದೆ ಆನಂದ ಆಚಾರ್ಯ ಅವರನ್ನು ಅಗಲಿದ್ದಾರೆ. ಮೃತರು ಬೆಳ್ತಂಗಡಿಯ ಸಂತೆಕಟ್ಟೆಯಲ್ಲಿ

ಕಾಲು ಜಾರಿ ಬಿದ್ದು ವ್ಯಕ್ತಿ ಮೃತ್ಯು Read More »

ವಿವೇಕಾನಂದ ಕಾಲೇಜಿನಲ್ಲಿ ಉದ್ಯಮಶೀಲತೆಯಲ್ಲಿ ಯಶಸ್ಸು ಮಾಹಿತಿ ಕಾರ್ಯಾಗಾರ

ಪುತ್ತೂರು: ವಿವೇಕಾನಂದ ಕಲಾವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ (ಸ್ವಾಯತ್ತ)  ಸ್ನಾತಕೋತ್ತರ  ವಾಣಿಜ್ಯ ವಿಭಾಗ ಐಕ್ಯೂಎಸಿ, ಎಚ್ ಇಎಫ್ ಮಹಿಳಾ ಘಟಕ ಮತ್ತು ರೇಡಿಯೋ ಪಾಂಚಜನ್ಯದ  ಸಂಯುಕ್ತ ಆಶ್ರಯದಲ್ಲಿ ಉದ್ಯಮಶೀಲತೆಯಲ್ಲಿ ಯಶಸ್ಸು ಮಾಹಿತಿ ಕಾರ್ಯಗಾರ ಮತ್ತು ಸಂವಾದ ಕಾರ್ಯಕ್ರಮ ಪಿಜಿ ಸೆಮಿನಾರ್ ಹಾಲ್ ನಲ್ಲಿ ನಡೆಯಿತು. ಸ್ನಾತಕೋತ್ತರ  ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಎಚ್. ಜಿ ಶ್ರೀಧರ್ ಕಾರ್ಯಾಗಾರ ಉದ್ಘಾಟಿಸಿದರು. ಸ್ನಾತಕೋತ್ತರ ವಿಭಾಗದ ಡೀನ್ ಡಾ. ವಿಜಯ ಸರಸ್ವತಿ , ರವಿನಾರಾಯಣ ಎಂ, ಗಿರೀಶ್ ಎಂ, ಕೇಶವ ಪ್ರಸಾದ್ ಮುಳಿಯ, 

ವಿವೇಕಾನಂದ ಕಾಲೇಜಿನಲ್ಲಿ ಉದ್ಯಮಶೀಲತೆಯಲ್ಲಿ ಯಶಸ್ಸು ಮಾಹಿತಿ ಕಾರ್ಯಾಗಾರ Read More »

ಅರೇಲ್ತಡಿ ಉಳ್ಳಾಕುಲು ಮತ್ತು ಕೆಡೆಂಜೊಡಿತ್ತಾಯಿ ದೈವಸ್ಥಾನದಲ್ಲಿ ಶಿಲಾನ್ಯಾಸ ಕಾರ್ಯಕ್ರಮ | ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರಿಂದ ಆಶೀರ್ವಚನ

ಕಡಬ: ಕಡಬ ಗ್ರಾಮದ ಸವಣೂರು ಅರೇಲ್ತಡಿ ಉಳ್ಳಾಕುಲು ಮತ್ತು ಕೆಡೆಂಜೊಡಿತ್ತಾಯಿ ದೈವಸ್ಥಾನದ ಜೀರ್ಣೋದ್ಧಾರದ ಅಂಗವಾಗಿ ಶಿಲಾನ್ಯಾಸ ಕಾರ್ಯಕ್ರಮ ಸೋಮವಾರ ನಡೆಯಿತು. ಕ್ಷೇತ್ರದ ತಂತ್ರಿ ಬ್ರಹ್ಮಶ್ರೀ ನೀಲೇಶ್ವರ ಆರೋತ್ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ 12 ಗಂಟೆಗೆ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿದರು. ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್‍, ಸವಣೂರು

ಅರೇಲ್ತಡಿ ಉಳ್ಳಾಕುಲು ಮತ್ತು ಕೆಡೆಂಜೊಡಿತ್ತಾಯಿ ದೈವಸ್ಥಾನದಲ್ಲಿ ಶಿಲಾನ್ಯಾಸ ಕಾರ್ಯಕ್ರಮ | ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರಿಂದ ಆಶೀರ್ವಚನ Read More »

ಪ್ರತಿಷ್ಠಿತ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್‍ ನಲ್ಲಿ ವಜ್ರಾಭರಣಗಳ ಉತ್ಸವ “ಗ್ಲೋ ಫೆಸ್ಟ್” ಗೆ ಚಾಲನೆ

ಪುತ್ತೂರು: ಪುತ್ತೂರಿನ ಮುಖ್ಯ ರಸ್ತೆಯಲ್ಲಿರುವ ಪ್ರತಿಷ್ಟಿತ ಚಿನ್ನಾಭರಣಗಳ ಮಳಿಗೆ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ ನಲ್ಲಿ ಡಿ.23 ರಿಂದ ಜ.26 ರ ವರೆಗೆ ವಜ್ರಾಭರಣಗಳ ಪ್ರದರ್ಶನ ಹಾಗೂ ಮಾರಾಟ ಗ್ಲೋ ಫೆಸ್ಟ್ ಅಯೋಜಿಸಲಾಗಿದೆ. ಸಮಾರಂಭವನ್ನು ಗಣೇಶ್ ಟ್ರೇಡರ್‍ಸ್ ಮಾಲಕ ವಾಮನ ಪೈ ಅವರ ಪತ್ನಿ ಅನುರಾಧ ವಾಮನ ಪೈ, ದಕ್ಷ ಕನ್ಸಲ್ಟೇನ್ಸಿ ಮಾಲಕ ಉಷಾ ರವೀಂದ್ರ, ಸ್ನೇಹಾ ಟೆಕ್ಸ್‌ಟೈಲ್ಸ್‌ನ ಮಾಲಕ ಸತೀಶ್ ಅವರ ಪತ್ನಿ ಹರಿಣಿ ಸತೀಶ್ ಹಾಗೂ ವಿವೇಕಾನಂದ ಸ್ನಾತಕೋತ್ತರ ವಿಭಾಗದ ಡೀನ್ ವಿಜಯ ಸರಸ್ವತಿ ನೇರವೇರಿಸಿದರು.

ಪ್ರತಿಷ್ಠಿತ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್‍ ನಲ್ಲಿ ವಜ್ರಾಭರಣಗಳ ಉತ್ಸವ “ಗ್ಲೋ ಫೆಸ್ಟ್” ಗೆ ಚಾಲನೆ Read More »

ಡಿ.28-29 : ಶ್ರೀನಿವಾಸ ಕಲ್ಯಾಣೋತ್ಸವ – ಧರ್ಮಸಂಗಮ | ಕಾರ್ಯಕರ್ತರ ಮಹಾಸಭೆ

ಪುತ್ತೂರು : ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ  ಮುಂಭಾಗ ಡಿ.28 – 29 ರಂದು ಜರಗುವ ಶ್ರೀನಿವಾಸ ಕಲ್ಯಾಣೋತ್ಸವ ಮತ್ತು ಧರ್ಮಸಂಗಮ ಕಾರ್ಯಕ್ರಮಕ್ಕೆ ಆನ್ ಲೈನ್ ನಲ್ಲಿ ನೊಂದಾಯಿತ ಕಾರ್ಯಕರ್ತರ ಮಹಾಸಭೆ ಭಾನುವಾರ ಸಂಜೆ ಸುಭದ್ರ ಕಲ್ಯಾಣ ಮಂಟಪದಲ್ಲಿ ನಡೆಯಿತು. ಸಭೆಯಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿಯ ಸಂಚಾಲಕ ಅರುಣ್  ಕುಮಾರ್ ಪುತ್ತಿಲ ಮಾತನಾಡಿ, ಈ  ಬಾರಿ ಕಾರ್ಯಕ್ರಮಕ್ಕೆ ಭಾರಿ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸುವ ನಿರೀಕ್ಷೆ ಇದ್ದು ಕಾರ್ಯಕ್ರಮದ ಅಚ್ಚುಕಟ್ಟಾದ ನಿರ್ವಹಣೆಗೆ ಕಾರ್ಯಕರ್ತರ ಪಾತ್ರ ಮಹತ್ವದ್ದಾಗಿದೆ. ಯಾವುದೇ ಸೂಚನೆ

ಡಿ.28-29 : ಶ್ರೀನಿವಾಸ ಕಲ್ಯಾಣೋತ್ಸವ – ಧರ್ಮಸಂಗಮ | ಕಾರ್ಯಕರ್ತರ ಮಹಾಸಭೆ Read More »

error: Content is protected !!
Scroll to Top