ಪುತ್ತೂರು

ಮಹಡಿಯಿಂದ ಬಿದ್ದು ಯುವಕ ಸಾವು

ಬಂಟ್ವಾಳ: ಯುವಕನೊಬ್ಬ ಮನೆಯ ಮಹಡಿಯಿಂದ ಬಿದ್ದು ಸಾವನ್ನಪ್ಪಿದ ಘಟನೆ ಮೂಡುನಡುಗೋಡು ಗ್ರಾಮದಲ್ಲಿ ನಡೆದಿದೆ. ಪ್ರವೀಣ್ (26) ಎಂಬವರೇ ಮೃತ ದುರ್ದೈವಿ. ಪ್ರವೀಣ್ ಅವರು ಊಟ ಮುಗಿಸಿ ಮಹಡಿಯ ಮೇಲೆ ತೆರಳಿ ಫೋನಿನಲ್ಲಿ ಮಾತನಾಡುತ್ತಿದ್ದರು. ಈ ವೇಳೆ ಕೆಳಕ್ಕೆ ಅಯ ತಪ್ಪಿ ಬಿದ್ದ ಅವರು ಪ್ರಜ್ಞೆ ಕಳೆದುಕೊಂಡಿದ್ದರು. ತಕ್ಷಣವೇ ಅವರನ್ನು ಬಂಟ್ವಾಳದ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ಯಲಾಯಿತು. ಆದರೆ ತಲೆಗೆ ಗಂಭೀರ ಪ್ರಮಾಣದಲ್ಲಿ ಗಾಯಗಳಾದ ಕಾರಣ ಅದಾಗಲೇ ಅವರು ನಿಧನರಾಗಿದ್ದರು ಎಂದು ತಿಳಿದು ಬಂದಿದೆ. ಬಂಟ್ವಾಳ ಪೊಲೀಸರು ಪ್ರಕರಣ […]

ಮಹಡಿಯಿಂದ ಬಿದ್ದು ಯುವಕ ಸಾವು Read More »

ಪುತ್ತೂರು : ನಿವೃತ್ತ ಪ್ರಾಂಶುಪಾಲರ ಮನೆಯಲ್ಲಿ ದರೋಡೆಗೆ ಯತ್ನಿಸಿದ ದಂಪತಿ ಬಂಧನ

ಪುತ್ತೂರು: ನಿವೃತ್ತ ಪ್ರಾಂಶುಪಾಲರ ಮನೆಗೆ ಮಧ್ಯರಾತ್ರಿ ನುಗ್ಗಿ ದರೋಡೆಗೆ ಯತ್ನಿಸಿ, ದಂಪತಿಯನ್ನು ಬೆದರಿಸಿದ ಪ್ರಕರಣದಲ್ಲಿ ಪುತ್ತೂರು ನಗರ ಪೊಲೀಸರು ಆರೋಪಿಗಳಾದ ಆರ್ಚಕ ಹಾಗೂ ಆತನ ಪತ್ನಿಯನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದಿದ್ದಾರೆ. ಕಾರ್ತಿಕ್ ರಾವ್(31) ಹಾಗೂ ಅವನ ಪತ್ನಿ ಸ್ವಾತಿ ರಾವ್ ಬಂಧಿತ ಆರೋಪಿಗಳು. ಪುತ್ತೂರು ಕಸಬಾ ನಿವಾಸಿ ನಿವೃತ್ತ ಪ್ರಾಂಶುಪಾಲ ಎ.ವಿ.ನಾರಾಯಣ(84) ಅವರು ನೀಡಿದ ದೂರಿನಂತೆ ಡಿ.17ರ ಮಧ್ಯರಾತ್ರಿ ಇಬ್ಬರು ಅಪರಿಚಿತರು ಹೆಲೈಟ್ ಧರಿಸಿಕೊಂಡು ಮುಖಚಹರೆಯನ್ನು ಮರೆಮಾಚಿ ಮನೆ ಹಿಂಬಾಗಿಲಿನಿಂದ ಪ್ರವೇಶಿಸಿ

ಪುತ್ತೂರು : ನಿವೃತ್ತ ಪ್ರಾಂಶುಪಾಲರ ಮನೆಯಲ್ಲಿ ದರೋಡೆಗೆ ಯತ್ನಿಸಿದ ದಂಪತಿ ಬಂಧನ Read More »

ಗೇರುಕಟ್ಟೆ ಶ್ರೀ ಪತಂಜಲಿ ಯೋಗ ಶಾಖೆಯಲ್ಲಿ ವೈಕುಂಠ ಏಕಾದಶಿ ಆಚರಣೆ

ಗೇರುಕಟ್ಟೆ: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ರಿ. ಕರ್ನಾಟಕ ಕೇಂದ್ರ ಕಚೇರಿ ತುಮಕೂರು, ನೇತ್ರಾವತಿ ವಲಯ ಮಂಗಳೂರು ಇದರ ಕಳಿಯ ಗೇರುಕಟ್ಟೆ ಕ್ಷೀರಸಂಗಮ ಶಾಖೆಯಲ್ಲಿ ವೈಕುಂಠ ಏಕಾದಶಿಯ ಆಚರಣೆಯನ್ನು ಭಜನೆ, ವಿಷ್ಣು ನಾಮ ಸಂಕೀರ್ತನೆ ಮತ್ತು ವಿಷ್ಣು ನಮಸ್ಕಾರದ ಮೂಲಕ ಆಚರಿಸಲಾಯಿತು. ಯೋಗ ಬಂಧು ದಿವಾಕರ ಆಚಾರ್ಯ ಗೇರುಕಟ್ಟೆ ಮಾತನಾಡಿ, ಭಗವತ್ ಪ್ರೀತಿ ಮತ್ತು ಭಗವತ್ ಪ್ರಾಪ್ತಿಗಾಗಿ ಮಾಡುವ ಸತ್ಕರ್ಮಗಳಿಂದ ಪಡೆಯುವ ಪುಣ್ಯ ವಿಶೇಷದಿಂದ ಭಗವಂತನ ಸಾನಿಧ್ಯವನ್ನು ಪಡೆಯಬಹುದು. ಸಮರ್ಪಣ ಭಾವದಿಂದ ಮಾಡುವ ಕರ್ಮಾಚರಣೆಯಿಂದ ಜ್ಞಾನವನ್ನು

ಗೇರುಕಟ್ಟೆ ಶ್ರೀ ಪತಂಜಲಿ ಯೋಗ ಶಾಖೆಯಲ್ಲಿ ವೈಕುಂಠ ಏಕಾದಶಿ ಆಚರಣೆ Read More »

‘ಹಿನ್ನೋಟ – ಇದು ನೆನಪಿನ ಬುತ್ತಿ’ ಕೃತಿ ಅನಾವರಣ

ಸುಳ್ಯ: ಅರಂತೋಡಿನ ನಿವೃತ್ತ ರೇಂಜರ್ ಹೂವಯ್ಯ ಗೌಡ ಉಳುವಾರು ಅವರ ಬದುಕು ಹಾಗೂ ವೃತ್ತಿ ಬದುಕನ್ನು ಪರಿಚಯಿಸುವ ಅಭಿನಂದನಾ ಗ್ರಂಥ “ಹಿನ್ನೋಟ- ಇದು ನೆನಪಿನ ಬುತ್ತಿ” ಯ ಅನಾವರಣ ಕಾರ್ಯಕ್ರಮವು ಸಾಂದೀಪ್ ವಿಶೇಷ ಮಕ್ಕಳ ಶಾಲೆಯಲ್ಲಿ ನಡೆಯಿತು. ಅಧ್ಯಕ್ಷತೆಯನ್ನು ಬಾಲಕೃಷ್ಣ ಗೌಡ ಮೂಲೆಮನೆ ವಹಿಸಿದ್ದರು. ಕಾರ್ಯಕ್ರಮವನ್ನು ನಿವೃತ್ತ ಪ್ರಾಂಶುಪಾಲ ಕೆ ಆರ್ ಗಂಗಾಧರ ಉದ್ಘಾಟಿಸಿದರು. ಎಂ. ಬಿ. ಫೌಂಡೇಶನ್ ಅಧ್ಯಕ್ಷ ಎಂ. ಬಿ. ಸದಾಶಿವ ಕೃತಿಯನ್ನು ಅನಾವರಣಗೊಳಿಸಿದರು. ಮುಖ್ಯ ಅತಿಥಿಗಳಾಗಿ ಕೃತಿಯ ಸಂಪಾದಕಿ ಡಾ. ಅನುರಾಧಾ ಕುರುಂಜಿ,

‘ಹಿನ್ನೋಟ – ಇದು ನೆನಪಿನ ಬುತ್ತಿ’ ಕೃತಿ ಅನಾವರಣ Read More »

ಮಗು ಕರುಣಿಸಿದ ಪ್ರಕರಣ : ಕಾನೂನು ಹೋರಾಟಕ್ಕೆ ಮುಂದಾದ ಕುಟುಂಬದವರು

ಮದುವೆಯಾಗುವ ಭರವಸೆ ಉಳಿಸಿಕೊಳ್ಳದ ಹಿನ್ನೆಲೆಯಲ್ಲಿ ಕಾನೂನು ಮೂಲಕ ಪರಿಹಾರ ಕಂಡುಕೊಳ್ಳಲು ಯತ್ನ ಮಂಗಳೂರು : ಪುತ್ತೂರಿನಲ್ಲಿ ಬಿಜೆಪಿ ಮುಖಂಡ ಜಗನ್ನಿವಾಸ್ ರಾವ್ ಪುತ್ರ ಕೃಷ್ಣ ಜೆ.ರಾವ್ ಯುವತಿಯೊಬ್ಬಳನ್ನು ಪ್ರೀತಿಸಿ, ಮದುವೆಯಾಗುವುದಾಗಿ ನಂಬಿಸಿ ಗರ್ಭವತಿಯನ್ನಾಗಿ ಮಾಡಿದ್ದ ಪ್ರಕರಣ ಈಗ ಮತ್ತಷ್ಟು ಜಟಿಲಗೊಂಡಿದ್ದು, ಈಗ ಕಾನೂನು ಹೋರಾಟದತ್ತ ಹೊರಳಿದೆ. ಈ ಕುರಿತು ಸೋಮವಾರ ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಶ್ವಕರ್ಮ ಸಮುದಾಯದ ಮುಖಂಡ ಹಾಗೂ ಮಾಜಿ ಎಂಎಲ್‌ಸಿ ಕೆ.ಪಿ.ನಂಜುಂಡಿ ಎಲ್ಲ ಸಂಧಾನಗಳು ವಿಫಲವಾಗಿರುವುದರಿಂದ ಈಗ ಕಾನೂನು ಹೋರಾಟವೊಂದೇ ಉಳಿದಿರುವ ದಾರಿ ಎಂದಿದ್ದಾರೆ.

ಮಗು ಕರುಣಿಸಿದ ಪ್ರಕರಣ : ಕಾನೂನು ಹೋರಾಟಕ್ಕೆ ಮುಂದಾದ ಕುಟುಂಬದವರು Read More »

ಪುತ್ತೂರು: ಸರ ಕಳ್ಳಿಯರ ಬಂಧನ

ಪುತ್ತೂರು: ದೇಗುಲದಲ್ಲಿ ಮಹಿಳೆಯೊಬ್ಬರ ಚಿನ್ನದ ಸರವನ್ನು ಕಳ್ಳತನ ಮಾಡಿದ ಮೂವರು ಕಳ್ಳಿಯರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಗಳನ್ನು ತಮಿಳುನಾಡು ಮೂಲದ ಮಾರಿ, ಕಾಳಿಯಮ್ಮ ಯಾನೆ ಭಗವತಿ, ಶೀತಲ್ ಯಾನೆ ಪ್ರಿಯಾ ಎಂದು ಗುರುತಿಸಲಾಗಿದೆ. ಕೆಮ್ಮಿಂಜೆಯ ಯಮುನಾ ಎಂಬವರ ‌ಸರವನ್ನು ಕೆಮ್ಮಿಂಜೆ ಗ್ರಾಮದ ದೇವಸ್ಥಾನದಲ್ಲಿ ಕಳ್ಳತನ ಮಾಡಲಾಗಿತ್ತು. ಸುಮಾರು 14 ಗ್ರಾಂ ತೂಕದ ಸರವನ್ನು ಅವರು ಊಟ ಮಾಡಿ ಕೈ ತೊಳೆಯುವ ಸಮಯದಲ್ಲಿ ಕದಿಯಲಾಗಿತ್ತು. ಈ ಸಂಬಂಧ ಅವರು ಪೊಲೀಸರಿಗೆ ದೂರು ನೀಡಿದ್ದರು. 60 ಸಾವಿರ ಮೌಲ್ಯದ

ಪುತ್ತೂರು: ಸರ ಕಳ್ಳಿಯರ ಬಂಧನ Read More »

ಡಿ. 27: ಕಾರ್ಗಿಲ್ ಹುಲಿ, ಪರಮವೀರಚಕ್ರ ಪುರಸ್ಕೃತ ಯೋಧ ಗೌ. ಲೆ. ಸಂಜಯ್ ಕುಮಾರ್ ಪುತ್ತೂರಿಗೆ

ಪುತ್ತೂರು: ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಯ ಬೆಳ್ಳಿ ಹಬ್ಬದ ಪ್ರಯುಕ್ತ ,ಪುತ್ತೂರಿನ ಮಾಜಿ ಸೈನಿಕರ ಸಂಘದ ಸಹಯೋಗದಲ್ಲಿ ಪರಮವೀರಚಕ್ರ ಪುರಸ್ಕೃತ ಕಾರ್ಗಿಲ್ ಹುಲಿ, ವೀರ ಯೋಧ ಗೌ. ಲೆ. ಸಂಜಯ್ ಕುಮಾರ್ ಅವರಿಗೆ ಸಾರ್ವಜನಿಕ ಅಭಿನಂದನಾ ಸಭೆ ಡಿ. 27 ರಂದು ಬಪ್ಪಳಿಗೆಯ ಶ್ರೀ ಶಂಕರ ಸಭಾಭವನದಲ್ಲಿ ನಡೆಯಲಿದೆ. ಬೆಳಗ್ಗೆ 9 ಗಂಟೆಗೆ ಗೌ. ಲೆ. ಸಂಜಯ್ ಕುಮಾರ್ ಅವರನ್ನು ದರ್ಬೆ ವೃತ್ತದಿಂದ ಕಿಲ್ಲೆ ಮೈದಾನದ ಅಮರ್ ಜವಾನ್ ಜ್ಯೋತಿ ಸ್ಮಾರಕದವರೆಗೆ ಭವ್ಯ ಮೆರವಣಿಗೆಯ ಮೂಲಕ ಕರೆತರಲಾಗುವುದು.

ಡಿ. 27: ಕಾರ್ಗಿಲ್ ಹುಲಿ, ಪರಮವೀರಚಕ್ರ ಪುರಸ್ಕೃತ ಯೋಧ ಗೌ. ಲೆ. ಸಂಜಯ್ ಕುಮಾರ್ ಪುತ್ತೂರಿಗೆ Read More »

ಎವಿಜಿ ಶಾಲೆಯಲ್ಲಿ ಪೋಷಕರ ದಿನಾಚರಣೆ

ಪುತ್ತೂರು: ಭರವಸೆಯ ಶಿಕ್ಷಣ ಸಂಸ್ಥೆಯಾದ ಇಲ್ಲಿನ ಬನ್ನೂರಿನ ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್’ನಲ್ಲಿ ಪೋಷಕರ ದಿನಾಚರಣೆಯನ್ನು ಆಚರಿಸಲಾಯಿತು. ದಿಕ್ಸೂಚಿ ಭಾಷಣಸುಳ್ಯದ ಎಂ.ಬಿ. ಫೌಂಡೇಷನ್’ನ ಅಧ್ಯಕ್ಷರಾದ ಪೂರ್ವ ಲಯನ್ಸ್ ಗವರ್ನರ್ ಲಯನ್ ಎಂ.ಬಿ. ಸದಾಶಿವ ಅವರು ತಮ್ಮ ದಿಕ್ಸೂಚಿ ಭಾಷಣದಲ್ಲಿ ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್ ಭಾರತೀಯ ಮೌಲ್ಯಗಳನ್ನು ನೈಜತೆಯೊಂದಿಗೆ ಅನುಷ್ಠಾನಿಸುತ್ತಿದೆ ಎಂದು ಹೇಳಿದರು. ಮನಃಪರಿವರ್ತನೆಯ ಮೂಲಕ ಸಾಮಾಜಿಕ ಪರಿವರ್ತನೆ ಆಗಬೇಕಿದೆ ಮತ್ತು ಅದು ಈ ಶಾಲೆಯಲ್ಲಿ ಆಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ನಮ್ಮ ಮಕ್ಕಳನ್ನು ಸ್ವತಂತ್ರರಾಗಿರುವಂತೆ ಪ್ರೇರೇಪಿಸಬೇಕು.

ಎವಿಜಿ ಶಾಲೆಯಲ್ಲಿ ಪೋಷಕರ ದಿನಾಚರಣೆ Read More »

ಎನ್.ಎಸ್.ಎಸ್. ಸೇವಾ ಸಂಗಮ ಟ್ರಸ್ಟ್ (ರಿ.), ಸುಳ್ಯ : ದಶಮಾನೋತ್ಸವದ ಆಮಂತ್ರಣ ಪತ್ರಿಕೆ ಅನಾವರಣ

ಸುಳ್ಯ: ಎನ್.ಎಸ್.ಎಸ್ ಸೇವಾ ಸಂಗಮ ಟ್ರಸ್ಟ್ (ರಿ.), ಸುಳ್ಯ ಇದರ ದಶಮಾನೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಅನಾವರಣ ಕಾರ್ಯಕ್ರಮ ತಾಲೂಕಿನ ಸ. ಹಿ. ಪ್ರಾಥಮಿಕ ಶಾಲೆ, ಮುಳ್ಯ ಅಟ್ಲೂರಿನಲ್ಲಿ ನಡೆಯಿತು. ಟ್ರಸ್ಟ್‌ನ ಗೌರವ ಅಧ್ಯಕ್ಷ ಬಾಲಕೃಷ್ಣ ಬೊಳ್ಳೂರು ಅಧ್ಯಕ್ಷತೆ ವಹಿಸಿದ್ದರು. ಗೌರವ ಸಲಹೆಗಾರ ಫಾಲಚಂದ್ರ ವೈ.ವಿ, ಸಲಹಾ ಸಮಿತಿ ಸದಸ್ಯೆೋೋ ಡಾ. ಅನುರಾಧಾ ಕುರುಂಜಿ, ಸ್ಥಳೀಯ ಸಮಿತಿಯ ಗೌರವ ಸಂಚಾಲಕ ಶಿವರಾಮ್ ಕೇನಾಜೆ, ಸಂಚಾಲಕ ನಾಗರಾಜ್ ಮುಳ್ಯ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕಿರಣ್ ಅಟ್ಲೂರು, ಶಾಲಾ

ಎನ್.ಎಸ್.ಎಸ್. ಸೇವಾ ಸಂಗಮ ಟ್ರಸ್ಟ್ (ರಿ.), ಸುಳ್ಯ : ದಶಮಾನೋತ್ಸವದ ಆಮಂತ್ರಣ ಪತ್ರಿಕೆ ಅನಾವರಣ Read More »

ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ವಾರ್ಷಿಕ ಕ್ರೀಡಾಕೂಟ

ಪುತ್ತೂರು: ಸಂಪ್ಯದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಯ ವಾರ್ಷಿಕ ಕ್ರೀಡಾಕೂಟ ಪುತ್ತೂರು ತಾಲ್ಲೂಕು ಕ್ರೀಡಾಂಗಣದಲ್ಲಿ ನಡೆಯಿತು. ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳ ಪಥಸಂಚಲನ ಮಾಡಿ ಕ್ರೀಡಾ ಸಾಧನೆ ಮಾಡಿದ ವಿದ್ಯಾರ್ಥಿಗಳು ತಂದ ಕ್ರೀಡಾ ಜ್ಯೋತಿಯಿಂದ ಗಣ್ಯರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಧ್ವಜಾರೋಹಣಗೈದು ಮಾತನಾಡಿದ ಶ್ರೀನಿವಾಸ ಗೌಡ (NCC ಆಫೀಸರ್ ನೇವಿ ವಿಂಗ್ ವಿಠಲ ಪಿಯು ಕಾಲೇಜು ವಿಟ್ಲ), ಕ್ರೀಡೆ ಮತ್ತು ಶಿಕ್ಷಣ ಎರಡು ಕೂಡ ಜೀವನಕ್ಕೆ ಅತ್ಯಗತ್ಯ. ಸಮಾಜದಲ್ಲಿ ಕೆಟ್ಟ

ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ವಾರ್ಷಿಕ ಕ್ರೀಡಾಕೂಟ Read More »

error: Content is protected !!
Scroll to Top