ಪುತ್ತೂರು

ಮಹಿಳಾ ಪೊಲೀಸ್ ಠಾಣೆ ಬಳಿ ಮುಖ್ಯರಸ್ತೆಯಲ್ಲಿ ಕುಳಿತು ಸುಗಮ ಸಂಚಾರ, ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಹಿನ್ನೆಲೆ | ಪ್ರತಿಭಟನಾಕಾರರ ವಿರುದ್ಧ ಪ್ರಕರಣ ದಾಖಲು

ಪುತ್ತೂರು: ಪುತ್ತೂರು ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಯವರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪಿಯನ್ನು ಬಂಧಿಸುವಂತೆ ಆಗ್ರಹಿಸಿ ಎ.26 ರಂದು ಬೆಳಗ್ಗೆ ಪುತ್ತೂರು ಮಹಿಳಾ ಪೊಲೀಸ್ ಠಾಣೆಯ ಬಳಿ ಮುಖ್ಯರಸ್ತೆಯ ಮಧ್ಯದಲ್ಲಿ ಕುಳಿತು ಸುಗಮ ಸಂಚಾರಕ್ಕೆ ಮತ್ತು ಇತರ ವೈದ್ಯಕೀಯ ತುರ್ತು ಸೇವೆಗೆ ಅಡ್ಡಿ ಸಹಿತ ಪೊಲೀಸರ ಕರ್ತವ್ಯಕ್ಕೂ ಅಡ್ಡಿಪಡಿಸಿರುವ ಆರೋಪದ ಮೇರೆಗೆ ಪ್ರತಿಭಟನಾಕಾರರ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎ.25ರಂದು ಪುತ್ತೂರು ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಅಶಾಜ್ಯೋತಿ ಕೆ ಪುತ್ತೂರಾಯ ಅವರ […]

ಮಹಿಳಾ ಪೊಲೀಸ್ ಠಾಣೆ ಬಳಿ ಮುಖ್ಯರಸ್ತೆಯಲ್ಲಿ ಕುಳಿತು ಸುಗಮ ಸಂಚಾರ, ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಹಿನ್ನೆಲೆ | ಪ್ರತಿಭಟನಾಕಾರರ ವಿರುದ್ಧ ಪ್ರಕರಣ ದಾಖಲು Read More »

ಹಿಂದೂ ಧಾರ್ಮಿಕ ಶಿಕ್ಷಣ ಪ್ರಕಲ್ಪದಡಿ ‘ಕುಂಕುಮ ಮಹತಿ’ ಕೃತಿ ಲೋಕಾರ್ಪಣೆ

ಪುತ್ತೂರು: ಹಿಂದೂ ಧಾರ್ಮಿಕ ಶಿಕ್ಷಣ ಪ್ರಕಲ್ಪದ ಸಂಚಾಲಕಿ ಕೃಷ್ಣವೇಣಿ ಮುಳಿಯ ಅವರ ಮುತುವರ್ಜಿಯಲ್ಲಿ, ಕಾಸರಗೋಡಿನ  ಲೇಖಕಿ  ಶೀಲಾ ಲಕ್ಷ್ಮೀ ಅವರು ಬರೆದ ಕೃತಿ ‘ಕುಂಕುಮ ಮಹತಿ’ ಯು ಭಾನುವಾರ  ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕಚೇರಿ ಸಭಾಂಗಣ ದಲ್ಲಿ ಲೋಕಾರ್ಪಣೆ ಗೊಂಡಿತು. ದೇವಾಲಯ ಸಂವರ್ಧನ  ಸಮಿತಿ ಮಂಗಳೂರು ವಿಭಾಗ, ಮುಳಿಯ ಪ್ರತಿಷ್ಠಾನ ಪುತ್ತೂರು ಸಹಯೋಗದಲ್ಲಿ , ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಸಹಕಾರದಲ್ಲಿ  ಕೃತಿ ಲೋಕಾರ್ಪಣಾ ಕಾರ್ಯಕ್ರಮ ನಡೆಯಿತು. ಧಾರ್ಮಿಕ ಚಿಂತಕ ಕಶೆಕೋಡಿ ಸೂರ್ಯನಾರಾಯಣ ಭಟ್ ಕೃತಿ ಲೋಕಾರ್ಪಣೆ

ಹಿಂದೂ ಧಾರ್ಮಿಕ ಶಿಕ್ಷಣ ಪ್ರಕಲ್ಪದಡಿ ‘ಕುಂಕುಮ ಮಹತಿ’ ಕೃತಿ ಲೋಕಾರ್ಪಣೆ Read More »

ನಾಳೆ ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ, ಪರಿವಾರ ದೈವಗಳ ನೇಮೋತ್ಸವ | ಸ್ವರ್ಣದ ಮಲ್ಲಿಗೆಯ ಮೊಗ್ಗಿನ ಹಾರ, ಬೆಳ್ಳಿಯ ಗಗ್ಗರ ಸಮರ್ಪಣೆ

ಪುತ್ತೂರು: ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ಹಾಗೂ ಪರಿವಾರ ದೈವಗಳ ವರ್ಷಾವಧಿ ನೇಮ ನಡಾವಳಿ ಏ.28 ಸೋಮವಾರ ನಡೆಯಲಿದೆ. ನಡಾವಳಿಯ ಪೂರ್ವಭಾವಿಯಾಗಿ ಇಂದು ಮಧ್ಯಾಹ್ನ ಬಲ್ನಾಡು ಶ್ರೀ ವಿನಾಯಕ ದೇವಸ್ಥಾನದಲ್ಲಿ ದೇವತಾ ಪ್ರಾರ್ಥನೆ, ವಿಶೇಷ ಮಹಾಪೂಜೆ, ಸಂಜೆ ರಂಗಪೂಜೆ, ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದಲ್ಲಿ ಮಕರತೋರಣರೋಹಣ, ಶ್ರೀ ದೈವಗಳ ಭಂಡಾರ ತೆಗೆದು ಮೂಲಸ್ಥಾನದಿಂದ ನೇಮ್ ನಡೆಯುವ ದೈವಸ್ಥಾನಕ್ಕೆ ಆಗಮನ, ತಂಬಿಲ ಸೇವೆಗಳು ನಡೆದ ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ಎ.28ರಂದು ಬೆಳಿಗ್ಗೆ ದೈವಸ್ಥಾನದಲ್ಲಿ ಗಣಪತಿ ಹೋಮ ನಡೆದ ಬಳಿಕ

ನಾಳೆ ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ, ಪರಿವಾರ ದೈವಗಳ ನೇಮೋತ್ಸವ | ಸ್ವರ್ಣದ ಮಲ್ಲಿಗೆಯ ಮೊಗ್ಗಿನ ಹಾರ, ಬೆಳ್ಳಿಯ ಗಗ್ಗರ ಸಮರ್ಪಣೆ Read More »

ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಘಟನೆ : ವಿವೇಕಾನಂದ ವಿದ್ಯಾವರ್ಧಕ ಸಂಘದಿಂದ ಜಾಥಾ

ಪುತ್ತೂರು: ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಅಮಾಯಕ ಹಿಂದೂ ಪ್ರವಾಸಿಗರ ಮೇಲೆ ಧರ್ಮಾಂಧರು ನಡೆಸಿದ ಗುಂಡಿನ ದಾಳಿಯನ್ನು ಪ್ರತಿಭಟಿಸಿ ವಿವೇಕಾನಂದ ವಿಧ್ಯಾವರ್ಧಕ ಸಂಘ, ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿ ಮತ್ತು ಇಂಜಿನಿಯರಿಂಗ್ ಕಾಲೇಜಿನ ಎಬಿವಿಪಿ ಘಟಕ ಇದರ ಸಂಯುಕ್ತ ಆಶ್ರಯದಲ್ಲಿ ಜಾಥಾ ಹಮ್ಮಿಕೊಳ್ಳಲಾಯಿತು. ಕಾಲೇಜಿನ ವಿಧ್ಯಾರ್ಥಿಗಳು, ವಿಭಾಗ ಮುಖ್ಯಸ್ಥರು, ಪ್ರಾಧ್ಯಾಪಕರು ಮತ್ತು ಸಿಬ್ಬಂದಿಗಳು ಪ್ರಾಂಶುಪಾಲ ಡಾ.ಮಹೇಶ್‌ಪ್ರಸನ್ನ ಅವರ ಮುಂದಾಳುತ್ವದಲ್ಲಿ ಕಾಲೇಜು ಆವರಣದಿಂದ ನೆಹರೂ ನಗರದ ವರೆಗೆ ಘಟನೆಯನ್ನು ಖಂಡಿಸುವ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆಯಲ್ಲಿ ಸಾಗಿದರು. ನೆಹರೂ

ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಘಟನೆ : ವಿವೇಕಾನಂದ ವಿದ್ಯಾವರ್ಧಕ ಸಂಘದಿಂದ ಜಾಥಾ Read More »

ಮೇ1 : ಕೆಂಪು ಕೇಪುಲಾಜೆ  ಬೆಮ್ಮೆರೆ ಗುಂಡ ಮತ್ತು ಶ್ರೀ ಮೊಗೇರ ದೈವಸ್ಥಾನ ಪುನರ್ ನಿರ್ಮಾಣಕ್ಕೆ ಶಿಲಾನ್ಯಾಸ

ಪುತ್ತೂರು: ಕೆಂಪು ಕೇಪುಲಾಜೆ  ಬೆಮ್ಮೆರೆ ಗುಂಡ ಮತ್ತು ಶ್ರೀ ಮೊಗೇರ ದೈವಸ್ಥಾನ ಪುನರ್ ನಿರ್ಮಾಣಕ್ಕೆ ಶಿಲಾನ್ಯಾಸ ಕಾರ್ಯಕ್ರಮ ಮೇ1 ರಂದು ನಿಡ್ಪಳ್ಳಿಯ ಬ್ರಹ್ಮರ ಗುಂಡದಲ್ಲಿ ನಡೆಯಲಿದೆ ಎಂದು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ತಿಳಿಸಿದ್ದಾರೆ. ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಸುಮಾರು 300 ವರ್ಷಗಳ ಇತಿಹಾಸವಿರುವ ಬೆಮ್ಮೆರಗುಂಡ ಮೂಲಸ್ಥಾನ ಇದುವರೆಗೆ ತಿಳಿದು ಬಂದಿಲ್ಲವಿತ್ತು. ಈ ನಿಟ್ಟಿನಲ್ಲಿ ಆಲಂಕಾರು ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ಸಾಂಸ್ಕೃತಿಕ ಅಧ್ಯಯನ ಟ್ರಸ್ಟ್ ಕಳೆದ ಹಲವಾರು ವರ್ಷಗಳಿಂದ ಅಧ್ಯಯನ ನಿರತವಾಗಿತ್ತು. ಇದೀಗ ಮೂಲಸ್ಥಾನ

ಮೇ1 : ಕೆಂಪು ಕೇಪುಲಾಜೆ  ಬೆಮ್ಮೆರೆ ಗುಂಡ ಮತ್ತು ಶ್ರೀ ಮೊಗೇರ ದೈವಸ್ಥಾನ ಪುನರ್ ನಿರ್ಮಾಣಕ್ಕೆ ಶಿಲಾನ್ಯಾಸ Read More »

ಕರ್ತಕೋಡಿ ಧನ್ಯತಾ ಸಾಲ್ಯಾನ್‍ ಕುಟುಂಬಸ್ಥರ ದೈವಗಳ ಗಗ್ಗರ ಸೇವೆ

ಬಂಟ್ವಾಳ: ತಾಲೂಕಿನ ಬರಿಮಾರು ಕರ್ತಕೋಡಿ ಧನ್ಯತಾ ಸಾಲ್ಯಾನ್‍ ಕುಟುಂಬಸ್ಥರ ದೈವಗಳ ಗಗ್ಗರ ಸೇವೆ ಶುಕ್ರವಾರ ರಾತ್ರಿ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ಜರಗಿತು. ಶುಕ್ರವಾರ ಬೆಳಿಗ್ಗೆ ಗಣಹೋಮ, ನಾಗತಂಬಿಲ, ಮುಡಿಪು ಕಟ್ಟುವುದು, ಮಧ್ಯಾಹ್ನ ಅನ್ನಸಂತರ್ಪಣೆ ಜರಗಿತು. ಸಂಜೆ 5 ಗಂಟೆಗೆ ಭಂಡಾರ ಇಳಿದು ರಾತ್ರಿ ಅನ್ನಸಂತರ್ಪಣೆ ಜರಗಿತು. ಬಳಿಕ ಸತ್ಯದೇವತೆ ಕಲ್ಲುರ್ಟಿ ಪಂಜುರ್ಲಿ, ಚಾಮುಂಡಿ-ಗುಳಿಗ ರಾಹು-ಗುಳಿಗ ದೈವಗಳಿಗೆ ಗಗ್ಗರ ಸೇವೆ ನಡೆಯಿತು. ಈ ಸಂದರ್ಭದಲ್ಲಿ ಧನ್ಯತಾ ಸಾಲ್ಯಾನ್‍ ಕುಟುಂಬಸ್ಥರು, ಸ್ಥಳೀಯರು ಉಪಸ್ಥಿತರಿದ್ದರು. ಇಂದು ರಾತ್ರಿ ದೈವಗಳಿಗೆ ವರ್ಷಾವಧಿ ಅಗೇಲು

ಕರ್ತಕೋಡಿ ಧನ್ಯತಾ ಸಾಲ್ಯಾನ್‍ ಕುಟುಂಬಸ್ಥರ ದೈವಗಳ ಗಗ್ಗರ ಸೇವೆ Read More »

 “ಫ್ರಮ್ ಆಲ್ಜಿಬ್ರಟು ಇಂಟೆಲಿಜೆನ್ಸ್: ದ ಮ್ಯಾಥಮೆಟಿಕಲ್ ಹಾರ್ಟ್ ಆಫ್ ಎಐ”- ಅತಿಥಿ ಉಪನ್ಯಾಸ

ಪುತ್ತೂರು: ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ) ಇದರ, ಗಣಿತಶಾಸ್ತ್ರ ವಿಭಾಗ (ಯುಜಿ ಮತ್ತು ಪಿಜಿ) ಗಣಿತ ಹಾಗೂ ಕೃತಕ ಬುದ್ಧಿಮತ್ತೆ ನಡುವಿನ ಅಂತರ ಸಂಬಂಧವನ್ನು ಅರ್ಥೈಸುವ “ಫ್ರಮ್ ಆಲ್ಜಿಬ್ರ ಟು ಇಂಟೆಲಿಜೆನ್ಸ್: ದ ಮ್ಯಾಥಮೆಟಿಕಲ್ ಹಾರ್ಟ್ ಆಫ್ ಎಐ”- ಅತಿಥಿ ಉಪನ್ಯಾಸವನ್ನು ವಿದ್ಯಾರ್ಥಿಗಳಿಗೆ ಆಯೋಜಿಸಿತು. ಸಂಪನ್ಮೂಲ ವ್ಯಕ್ತಿಗಳಾಗಿ ವಾಮಂಜೂರು ಸಂತ ಜೋಸೆಫ್‍ ಇಂಜಿನಿಯರಿಂಗ್‍ ಕಾಲೇಜು ಪ್ರಾಧ್ಯಾಪಕ ಡಾ ರಮಾನಂದ ಎಚ್.ಎಸ್ ಉಪನ್ಯಾಸ ನೀಡಿ, ಹೇಗೆ ಕೃತಕ ಬುದ್ಧಿಮತ್ತೆ ನಮ್ಮ ದೈನಂದಿನ ಜೀವನದಲ್ಲಿ ತಿಳಿದೋ ತಿಳಿಯದೆಯೋ ಒಳಗೊಂಡಿದೆ ಎಂಬುದನ್ನು

 “ಫ್ರಮ್ ಆಲ್ಜಿಬ್ರಟು ಇಂಟೆಲಿಜೆನ್ಸ್: ದ ಮ್ಯಾಥಮೆಟಿಕಲ್ ಹಾರ್ಟ್ ಆಫ್ ಎಐ”- ಅತಿಥಿ ಉಪನ್ಯಾಸ Read More »

ಪುತ್ತೂರು ಸರಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿಗಳ ಜೊತೆ ಅನುಚಿತ ವರ್ತನೆ, ಹಲ್ಲೆಗೆ ಯತ್ನ | ಪುತ್ತೂರು ಮಹಿಳಾ ಪೊಲೀಸ್ ಠಾಣೆ ಎದುರು ಭಾರತೀಯ ವೈದ್ಯಕೀಯ ಸಂಘದ ಪುತ್ತೂರು ಶಾಖೆಯ ಪದಾಧಿಕಾರಿಗಳಿಂದ ಪ್ರತಿಭಟನೆ | ರಸ್ತೆ ತಡೆ ನಡೆಸಿ ಪ್ರತಿಭಟನೆ

ಪುತ್ತೂರು: ಪುತ್ತೂರು ಸರಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಮೇಲೆ ಅನುಚಿತ ವರ್ತನೆ ಹಾಗೂ ಹಲ್ಲೆಗೆ ಯತ್ನಿಸಿದ ಯುವಕನನ್ನು ಇಂದು ಸಂಜೆ 6 ಗಂಟೆ ಒಳಗೆ ಬಂಧಿಸದಿದ್ದಲ್ಲಿ ತಾಲೂಕಿನ ಎಲ್ಲಾ ಆಸ್ಪತ್ರೆಗಳು ಬಂದ್‍ ಆಗಲಿದೆ ಎಂಬ ಎಚ್ಚರಿಕೆಯನ್ನು ಭಾರತೀಯ ವೈದ್ಯಕೀಯ ಸಂಘದ ಪುತ್ತೂರು ಶಾಖ ಎಚ್ಚರಿಕೆ ನೀಡಿದೆ. ಪುತ್ತೂರು ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಗಳ ಮೇಲೆ ವ್ಯಕ್ತಿಯೋರ್ವ ಅನುಚಿತ ವರ್ತನೆ, ಹಲ್ಲೆಗೆ ಯತ್ನಿಸಿದ ಘಟನೆ ಶುಕ್ರವಾರ ರಾತ್ರಿ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ನಡೆದಿದ್ದು, ಈ ನಿಟ್ಟಿನಲ್ಲಿ ವೈದ್ಯರು ಹಾಗೂ ಬಿಜೆಪಿ ಮುಖಂಡರು

ಪುತ್ತೂರು ಸರಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿಗಳ ಜೊತೆ ಅನುಚಿತ ವರ್ತನೆ, ಹಲ್ಲೆಗೆ ಯತ್ನ | ಪುತ್ತೂರು ಮಹಿಳಾ ಪೊಲೀಸ್ ಠಾಣೆ ಎದುರು ಭಾರತೀಯ ವೈದ್ಯಕೀಯ ಸಂಘದ ಪುತ್ತೂರು ಶಾಖೆಯ ಪದಾಧಿಕಾರಿಗಳಿಂದ ಪ್ರತಿಭಟನೆ | ರಸ್ತೆ ತಡೆ ನಡೆಸಿ ಪ್ರತಿಭಟನೆ Read More »

ವೈದ್ಯಾಧಿಕಾರಿ ಮೇಲೆ ಹಲ್ಲೆ : ಇಂದು ಮಹಿಳಾ ಠಾಣೆ ಎದುರು ಪ್ರತಿಭಟನೆ

ಪುತ್ತೂರು: ಶುಕ್ರವಾರ ನಡೆದ ವೈದ್ಯಾಧಿಕಾರಿ ಮೇಲಿನ ಹಲ್ಲೆಗೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸದ ಕಾರಣ ಇಂದು ಪುತ್ತೂರಿನಲ್ಲಿ ಅಗತ್ಯ ಸೇವೆಗಳು ಲಭ್ಯವಿರುದಿಲ್ಲ ಮತ್ತು ಆಸ್ಪತ್ರೆಗಳಲ್ಲಿ ತುರ್ತು ಸೇವೆಗಳು ಮುಂದುವರಿಯಲಿದೆ. ಈ ಕುರಿತು ಐಎಂಎ ನ ಕಾರ್ಯದರ್ಶಿ ಡಾ. ಗಣೇಶ್ ಪ್ರಸಾದ್‌ ಮುದ್ರಾಜೆ ಪ್ರಕಟಣೆ ನೀಡಿದ್ದಾರೆ. ಇಂದು ಬೆಳಿಗ್ಗೆ 10 ಗಂಟೆಗೆ ಪುತ್ತೂರು ಮಹಿಳಾ ಠಾಣೆಯ ಎದುರು ಪ್ರತಿಭಟನೆ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.

ವೈದ್ಯಾಧಿಕಾರಿ ಮೇಲೆ ಹಲ್ಲೆ : ಇಂದು ಮಹಿಳಾ ಠಾಣೆ ಎದುರು ಪ್ರತಿಭಟನೆ Read More »

ಏ.27 : ಬಿಎಸ್‌ಎಫ್ ಕ್ಷೇಮಾಭಿವೃದ್ಧಿ ಸಂಘದ ರೂಪುರೇಶೆ ರಚನೆ ಕುರಿತು ಸಮಾರಂಭ | ಮಾಜಿ ಬಿಎಸ್‍ ಎಫ್‍ ಡೆಪ್ಯುಟಿ ಕಮಾಡೆಂಟ್‍ ಡಿ.ಚಂದಪ್ಪ ಮೂಲ್ಯ ಭಾಗಿ

ಪುತ್ತೂರು: ಕರಾವಳಿ ಪ್ರದೇಶದ ಮಾಜಿ ಬಿಎಸ್‌ಎಫ್ ಯೋಧರ ಮತ್ತು ಅವರ ಕುಟುಂಬಗಳ ಕ್ಷೇಮಾಭಿವೃದ್ಧಿ ಹಾಗೂ ಕಲ್ಯಾಣಕ್ಕಾಗಿ ಸರಕಾರದಿಂದ ಮಾಜಿ ಯೋಧರಿಗೆ ಮತ್ತು ವಿಧವೆಯರಿಗೆ ಸಿಗುವ ಸವಲತ್ತುಗಳನ್ನು ಒದಗಿಸುವ ಸದುದ್ದೇಶದಿಂದ, ಬಿಎಸ್‌ಎಫ್ ಕ್ಷೇಮಾಭಿವೃದ್ಧಿ ಸಂಘದ ರೂಪುರೇಶಗಳನ್ನು ರಚಿಸುವ ಉದ್ದೇಶದಿಂದ ಸಮಾರಂಭವನ್ನು ಏ.27 ಭಾನುವಾರ ಬಿ.ಸಿ.ರೋಡು ಲಯನ್ಸ್ ಸೇವಾ ಮಂದಿರದಲ್ಲಿ ಆಯೋಜಿಸಲಾಗಿದೆ. ಬೆಂಗಳೂರು ಮಾಜಿ ಬಿಎಸ್‍ ಎಫ್‍ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ, ಮಾಜಿ ಬಿಎಸ್‍ ಎಫ್‍ ಡೆಪ್ಯುಟಿ ಕಮಾಡೆಂಟ್‍ ಡಿ.ಚಂದಪ್ಪ ಮೂಲ್ಯ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಬಿ.ಸಿ.ರೋಡಿನ ಸಾಮಾಜಿಕ ಕಾರ್ಯಕರ್ತ,

ಏ.27 : ಬಿಎಸ್‌ಎಫ್ ಕ್ಷೇಮಾಭಿವೃದ್ಧಿ ಸಂಘದ ರೂಪುರೇಶೆ ರಚನೆ ಕುರಿತು ಸಮಾರಂಭ | ಮಾಜಿ ಬಿಎಸ್‍ ಎಫ್‍ ಡೆಪ್ಯುಟಿ ಕಮಾಡೆಂಟ್‍ ಡಿ.ಚಂದಪ್ಪ ಮೂಲ್ಯ ಭಾಗಿ Read More »

error: Content is protected !!
Scroll to Top