ರಾಜಕೀಯ

ಶೇ.100 ಮುಸ್ಲಿಂ ಮತದಾರರಿರುವ ವಾರ್ಡ್‌ನಲ್ಲಿ ಹಿಂದೂ ಮಹಿಳೆಗೆ ಗೆಲುವು

ಗುಜರಾತ್‌ ಸ್ಥಳೀಯ ಚುನಾವಣೆಯಲ್ಲಿ ಸಾಮರಸ್ಯದ ಸಂದೇಶ ಸಾರಿದ ಅಪರೂಪದ ಫಲಿತಾಂಶ ಗುಜರಾತ್: ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಶೇ.100 ಮುಸ್ಲಿಂ ಮತದಾರರಿರುವ ಗೋಧ್ರಾದ ವಾರ್ಡ್‌ನಲ್ಲಿ ಹಿಂದೂ ಸಮುದಾಯದ ಸ್ವತಂತ್ರ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಸ್ವತಂತ್ರ ಹಿಂದೂ ಮಹಿಳಾ ಅಭ್ಯರ್ಥಿ ಅಪೇಕ್ಷಾಬೆನ್ ನೈನೇಶ್‌ಭಾಯ್ ಸೋನಿ ಅವರು ವಾರ್ಡ್ ಸಂಖ್ಯೆ 7ರಿಂದ ಅದ್ಭುತ ಗೆಲುವು ಸಾಧಿಸಿದ್ದಾರೆ. ಈ ಕ್ಷೇತ್ರವು ಶೇ.100 ಮುಸ್ಲಿಂ ಸಮುದಾಯಕ್ಕೆ ಸೇರಿದೆ. ಆ ಮೂಲಕ ಸಾಮಾಜಿಕ ಸಾಮರಸ್ಯದ ಪ್ರಬಲ ಸಂದೇಶ ಸಾರಲಾಗಿದೆ. ಅಪೇಕ್ಷಾಬೆನ್ ಸೋನಿ ಅವರ ಗೆಲುವು ಈ […]

ಶೇ.100 ಮುಸ್ಲಿಂ ಮತದಾರರಿರುವ ವಾರ್ಡ್‌ನಲ್ಲಿ ಹಿಂದೂ ಮಹಿಳೆಗೆ ಗೆಲುವು Read More »

ಚುನಾವಣೆ ನಡೆದ 3 ವರ್ಷದ ಬಳಿಕ ಶೃಂಗೇರಿ ವಿಧಾನಸಭೆ ಕ್ಷೇತ್ರದ ಅಂಚೆ ಮತಗಳ ಮರುಎಣಿಕೆ

ಹೈಕೋರ್ಟ್‌ ಆದೇಶದಂತೆ ಮೇ 2ರಂದು ನಡೆಯಲಿದೆ ಮತಗಳ ಮರುಎಣಿಕೆ ಬೆಂಗಳೂರು: ಶೃಂಗೇರಿ ವಿಧಾನಸಭೆ ಚುನಾವಣೆಯ ಅಂಚೆ ಮತಗಳ ಮರು ಎಣಿಕೆ ಚುನಾವಣೆ ನಡೆದ ಮೂರು ವರ್ಷಗಳ ಬಳಿಕ ನಡೆಯಲಿರುವುದು ರಾಜ್ಯಾದ್ಯಂತ ಕುತೂಹಲ ಮೂಡಿಸಿದೆ. ಹೈಕೋರ್ಟ್ ನಿರ್ದೇಶನ ಹಿನ್ನೆಲೆಯಲ್ಲಿ ಶೃಂಗೇರಿ ವಿಧಾನಸಭಾ ಚುನಾವಣೆಯ ಅಂಚೆ ಮತಗಳ ಮರು ಎಣಿಕೆ ಕಾರ್ಯ ಮೇ 2ರಂದು ಐಡಿಎಸ್‌ಜಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಲಿದೆ. ಕಾಲೇಜು ಆವರಣದಲ್ಲಿ ಮರುಎಣಿಕೆ ಪ್ರಕ್ರಿಯೆಗೆ ಜಿಲ್ಲಾಡಳಿತ ಸಮಗ್ರ ವ್ಯವಸ್ಥೆ ಮಾಡಿಕೊಂಡಿದೆ. ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ

ಚುನಾವಣೆ ನಡೆದ 3 ವರ್ಷದ ಬಳಿಕ ಶೃಂಗೇರಿ ವಿಧಾನಸಭೆ ಕ್ಷೇತ್ರದ ಅಂಚೆ ಮತಗಳ ಮರುಎಣಿಕೆ Read More »

ಬಿಜೆಪಿಗೆ ಆಸ್ತಿಯಾಗುತ್ತಾರಾ ರಾಘವ್‌ ಚಡ್ಡಾ?

ಬಿಜೆಪಿ ಸೇರ್ಪಡೆ ಬೆನ್ನಲ್ಲೇ ಬಿಜೆಪಿಯಲ್ಲಿ ಅವರ ಪಾತ್ರದ ಬಗ್ಗೆ ಚರ್ಚೆ ಹೊಸದಿಲ್ಲಿ : ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾ ಸೇರಿ ಆಪ್‌ನ ಏಳು ರಾಜ್ಯಸಭಾ ಸದಸ್ಯರು ಬಿಜೆಪಿ ಸೇರ್ಪಡೆಯಾಗಿರುವುದು ಆಮ್‌ ಆದ್ಮಿ ಪಾರ್ಟಿಗೆ (ಆಪ್‌) ಆಗಿರುವ ಭಾರಿ ಹಿನ್ನಡೆ ಎಂದು ಭಾವಿಸಲಾಗಿದೆ. ರಾಜ್ಯಸಭೆಯಲ್ಲಿ ಆಮ್‌ ಆದ್ಮಿ ಪಾರ್ಟಿಯ ನಾಯಕರಾಗಿದ್ದ ರಾಘವ್‌ ಚಡ್ಡಾ ಬಿಜೆಪಿ ಸೇರುವ ಸುಳಿವು ಮೊದಲೇ ಇತ್ತು. ಆದರೆ ಅವರು ತನ್ನೊಂದಿಗೆ ಇನ್ನೂ ಆರು ಮಂದಿಯನ್ನು ಕರೆದುಕೊಂಡು ಹೋಗುತ್ತಾರೆ ಎಂದು ಆಪ್‌ ಪರಮೋಚ್ಚ ನಾಯಕ ಅರವಿಂದ

ಬಿಜೆಪಿಗೆ ಆಸ್ತಿಯಾಗುತ್ತಾರಾ ರಾಘವ್‌ ಚಡ್ಡಾ? Read More »

ಕಲ್ಲು ತೂರಾಟ ಮಾಡಿದವರನ್ನು ಬಿಡುಗಡೆ ಮಾಡಲು ಖಾದರ್‌ ಪತ್ರ : ಹಿಂದೂ ಮುಖಂಡರ ಆಕ್ರೋಶ

ಆಳಂದದಲ್ಲಿ ಹಿಂದೂ ಮುಖಂಡರು, ಡಿಸಿ, ಎಸ್ಪಿ ಮೇಲೆ ಕಲ್ಲು ತೂರಿದ ಪ್ರಕರಣ ಬೆಂಗಳೂರು: ಕಲಬುರಗಿಜಿಲ್ಲೆಯ ಆಳಂದದ ಲಾಡ್ಲೆ ಮಶಾಕ್ ದರ್ಗಾ ಗಲಭೆ ಪ್ರಕರಣದಲ್ಲಿ ಬಂಧಿತರಾಗಿರುವ ಮುಸ್ಲಿಂ ಯುವಕರನ್ನು ಬಿಡುಗಡೆ ಮಾಡುವಂತೆ ಸ್ಪೀಕರ್‌ ಯು.ಟಿ. ಖಾದರ್ ಗೃಹ ಸಚಿವ ಜಿ.ಪರಮೇಶ್ವರ್​ಗೆ ಬರೆದಿರುವ ಪತ್ರ ತೀವ್ರ ವಿವಾದಕ್ಕೆ ಕಾರಣವಾಗಿದೆ. ಸ್ಪೀಕರ್ ಅವರ ಈ ನಡೆಯನ್ನು ಹಿಂದೂ ಸಂಘಟನೆಗಳು, ಸರ್ಕಾರದ ವಿರುದ್ಧ ಹೋರಾಟದ ಎಚ್ಚರಿಕೆ ನೀಡಿವೆ. ಆಳಂದ ಪಟ್ಟಣದ ಲಾಡ್ಲೆ ಮಶಾಕ್ ದರ್ಗಾದಲ್ಲಿರುವ ಶ್ರೀ ರಾಘವ ಚೈತನ್ಯ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು

ಕಲ್ಲು ತೂರಾಟ ಮಾಡಿದವರನ್ನು ಬಿಡುಗಡೆ ಮಾಡಲು ಖಾದರ್‌ ಪತ್ರ : ಹಿಂದೂ ಮುಖಂಡರ ಆಕ್ರೋಶ Read More »

ಪಶ್ಚಿಮ ಬಂಗಾಳ, ತಮಿಳುನಾಡಿನಲ್ಲಿ ಮತದಾನ ದಾಖಲೆಗಳೆಲ್ಲ ಧೂಳೀಪಟ

ಸ್ವಾತಂತ್ರ್ಯ ನಂತರ ಇಷ್ಟು ಮತದಾನ ಇದೇ ಮೊದಲು ನವದೆಹಲಿ: ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ದಾಖಲೆ ಪ್ರಮಾಣದ ಮತದಾನವಾಗಿದ್ದು ಈ ಬಗ್ಗೆ ಕೇಂದ್ರ ಚುನಾವಣಾ ಆಯೋಗ ಮತದಾರರಿಗೆ ಧನ್ಯವಾದ ಹೇಳಿದೆ. ವಿಧಾನಸಭಾ ಚುನಾವಣೆಯ ಮತದಾನ ಗುರುವಾರ ಸಂಜೆ 6 ಗಂಟೆಗೆ ಮುಕ್ತಾಯವಾಗಿದ್ದು, ಎರಡೂ ರಾಜ್ಯಗಳಲ್ಲಿ ದಾಖಲೆಯ ಮತದಾನ ನಡೆದಿದೆ. ಸಂಜೆ 6 ಗಂಟೆಯವರೆಗೆ ತಮಿಳುನಾಡಿನಲ್ಲಿ ಸುಮಾರು ಶೇ. 84.51 ರಷ್ಟು ಮತದಾನವಾಗಿದ್ದರೆ, ಪಶ್ಚಿಮ ಬಂಗಾಳದಲ್ಲಿ ಶೇ.91.78ರಷ್ಟು ಮತದಾನವಾಗಿದೆ. ಸ್ವಾತಂತ್ರ್ಯದ ನಂತರ ಪಶ್ಚಿಮ ಬಂಗಾಳ ಮತ್ತು

ಪಶ್ಚಿಮ ಬಂಗಾಳ, ತಮಿಳುನಾಡಿನಲ್ಲಿ ಮತದಾನ ದಾಖಲೆಗಳೆಲ್ಲ ಧೂಳೀಪಟ Read More »

ಹದಗೆಟ್ಟ ಸಚಿವ ಡಿ.ಸುಧಾಕರ್‌ ಆರೋಗ್ಯ : ಐಸಿಯುನಲ್ಲಿ ಚಿಕಿತ್ಸೆ

ಶಸ್ತ್ರಚಿಕಿತ್ಸೆ ಬಳಿಕ ಶ್ವಾಸಕೋಶದ ಸೋಂಕಿಗೊಳಗಾಗಿರುವ ಸಚಿವ ಬೆಂಗಳೂರು: ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಡಿ.ಸುಧಾಕರ್ ಅವರ ಆರೋಗ್ಯ ಹದಗೆಟ್ಟಿದ್ದು, ಇಲೆಕ್ಟ್ರಾನಿಕ್ ಸಿಟಿಯ ಕಿಮ್ಸ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಕೆಲ ದಿನಗಳ ಹಿಂದೆ ಸಚಿವ ಸುಧಾಕರ್ ಅವರು ಸಾಮಾನ್ಯ ಮೊಣಕಾಲು ಶಸ್ತ್ರಚಿಕಿತ್ಸೆಗಾಗಿ ಯಶವಂತಪುರದ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ಆಪರೇಷನ್ ಯಶಸ್ವಿಯಾದ ನಂತರದ ದಿನಗಳಲ್ಲಿ ಅವರಿಗೆ ಹಠಾತ್ತನೆ ಶ್ವಾಸಕೋಶದ ಸೋಂಕು ಕಾಣಿಸಿಕೊಂಡಿತು. ಮಣಿಪಾಲ್ ಆಸ್ಪತ್ರೆಯಲ್ಲಿ ಸೋಂಕಿಗೆ ಚಿಕಿತ್ಸೆ ನೀಡಲಾಯಿತಾದರೂ, ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿರಲಿಲ್ಲ.

ಹದಗೆಟ್ಟ ಸಚಿವ ಡಿ.ಸುಧಾಕರ್‌ ಆರೋಗ್ಯ : ಐಸಿಯುನಲ್ಲಿ ಚಿಕಿತ್ಸೆ Read More »

ಪಶ್ಚಿಮ ಬಂಗಾಳದಲ್ಲಿ ಮತದಾನದ ವೇಳೆ ಬಾಂಬ್‌ ದಾಳಿ : ಹಲವರಿಗೆ ಗಾಯ

ಅಪರಿಚಿತ ದುಷ್ಕರ್ಮಿಗಳಿಂದ ಕಚ್ಚಾ ಬಾಂಬ್‌ ದಾಳಿ ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯನ್ನು ಶಾಂತಿಯುತವಾಗಿ ನಡೆಸುವ ಸಲುವಾಗಿ ಚುನಾವಣಾ ಆಯೋಗ ಅಭೂತಪೂರ್ವ ಬಂದೋಬಸ್ತಿನ ವ್ಯವಸ್ಥೆ ಮಾಡಿದ್ದರೂ ಹಿಂಸಾಚಾರದ ಘಟನೆಗಳು ನಡೆಯುತ್ತಿವೆ. ಮತದಾನ ನಡೆಯುತ್ತಿದ್ದ ಮುರ್ಷಿದಾಬಾದ್‌ ಜಿಲ್ಲೆಯಲ್ಲಿ ಕೆಲವು ಅಪರಿಚಿತ ವ್ಯಕ್ತಿಗಳು ಕಚ್ಚಾ ಬಾಂಬ್‌ ದಾಳಿ ನಡೆಸಿದ್ದಾರೆ. ಜಿಲ್ಲೆಯ ನೌಡಾದಲ್ಲಿ ಘಟನೆ ನಡೆದಿದ್ದು, ಹಲವರು ಗಾಯಗೊಂಡಿದ್ದಾರೆ. ಇದು ಸ್ಥಳೀಯರಲ್ಲಿ ಭೀತಿ ಹೆಚ್ಚಿಸಿದೆ. ಬಾಂಬ್‌ ದಾಳಿಯ ಬಳಿಕ ಹಿಂಸಾಚಾರ ಪೀಡಿತವಾಗಿರುವ ಮುರ್ಷಿದಾಬಾದ್‌ ಜಿಲ್ಲೆಯಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಕಳೆದ ತಿಂಗಳು ಜಿಲ್ಲೆಯ

ಪಶ್ಚಿಮ ಬಂಗಾಳದಲ್ಲಿ ಮತದಾನದ ವೇಳೆ ಬಾಂಬ್‌ ದಾಳಿ : ಹಲವರಿಗೆ ಗಾಯ Read More »

ಇಂದು ತಮಿಳುನಾಡು, ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ

ಪಶ್ಚಿಮ ಬಂಗಾಳದಲ್ಲಿ ಶಾಂತಿಯುತ ಮತದಾನಕ್ಕಾಗಿ ಅಭೂತಪೂರ್ವ ಬಂದೋಬಸ್ತು ನವದೆಹಲಿ: ಇಂದು ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ತಮಿಳುನಾಡಿನಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಪಶ್ಚಿಮ ಬಂಗಾಳದಲ್ಲಿ ಮೊದಲ ಹಂತದ ಮತದಾನ ನಡೆಯಲಿದೆ. ತಮಿಳುನಾಡಿನಲ್ಲಿ 234 ವಿಧಾನಸಭಾ ಕ್ಷೇತ್ರಗಳಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಡಿಎಂಕೆ-ಕಾಂಗ್ರೆಸ್ ನೇತೃತ್ವದ ಇಂಡಿ ಒಕ್ಕೂಟ ಮತ್ತು ಎಐಎಡಿಎಂಕೆ – ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟದ ನಡುವೆ ನೇರ ಸ್ಪರ್ಧೆ ನಡೆಯಲಿದೆ. ಇದೇ ಮೊದಲ ಬಾರಿಗೆ ತಮಿಳು ಸೂಪರ್ ಸ್ಟಾರ್

ಇಂದು ತಮಿಳುನಾಡು, ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ Read More »

ಮೋದಿಯನ್ನು ಭಯೋತ್ಪಾದಕ ಎಂದ ಖರ್ಗೆ ವಿರುದ್ಧ ಭಾರಿ ಆಕ್ರೋಶ

ಬಿಜೆಪಿ ನಾಯಕರಿಂದ ಕಟು ಟೀಕೆ ; ಸೋಷಿಯಲ್‌ ಮೀಡಿಯಾದಲ್ಲಿ ತಿರುಗೇಟು ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿಯನ್ನು ಭಯೋತ್ಪಾದಕ ಎಂದಿರುವ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮೇಲೆ ಬಿಜೆಪಿ ನಾಯಕರು ಮುಗಿಬಿದ್ದಿದ್ದಾರೆ. ಖರ್ಗೆ ಹೇಳಿಕೆ ತೀವ್ರ ವಿವಾದದ ಸ್ವರೂಪ ಪಡೆದುಕೊಂಡಿದ್ದು, ಸೋಷಿಯಲ್‌ ಮೀಡಿಯಾದಲ್ಲೂ ಈ ಬಗ್ಗೆ ಟೀಕೆ ಮತ್ತು ಆಕ್ರೋಶ ವ್ಯಕ್ತವಾಗುತ್ತಿದೆ. ತಾನು ಭಯೋತ್ಪಾದಕ ಎಂದು ಕರೆದಿಲ್ಲ, ಮೋದಿ ವಿಪಕ್ಷಗಳನ್ನು ಭಯಪಡಿಸುತ್ತಿದ್ದಾರೆ ಎಂದು ಹೇಳಿದ್ದೇನೆ ಎಂಬುದಾಗಿ ಖರ್ಗೆ ಬಳಿಕ ತೇಪೆ ಹಾಕಲು ಯತ್ನಿಸಿದರೂ ಅವರ ವಿರುದ್ಧ ಆಕ್ರೋಶ ಕಡಿಮೆಯಾಗಿಲ್ಲ.

ಮೋದಿಯನ್ನು ಭಯೋತ್ಪಾದಕ ಎಂದ ಖರ್ಗೆ ವಿರುದ್ಧ ಭಾರಿ ಆಕ್ರೋಶ Read More »

ಮಹಿಳೆಯರ ಹಕ್ಕುಗಳನ್ನು ಕಸಿದುಕೊಂಡು ಸಂಭ್ರಮಿಸಿದ ಕಾಂಗ್ರೆಸ್‌ : ಮೋದಿ ವಾಗ್ದಾಳಿ

ಮಹಿಳಾ ಮೀಸಲಾತಿ ಮಸೂದೆಗೆ ಸೋಲಾಗಿರುವುದಕ್ಕೆ ಮಹಿಳೆಯರ ಕ್ಷಮೆ ಕೇಳಿದ ಪ್ರಧಾನಿ ನವದೆಹಲಿ: ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಗೆ ಸೋಲಾಗಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ದೇಶದ ಮಹಿಳೆಯರಲ್ಲಿ ಕ್ಷಮೆ ಕೇಳಿದ್ದಾರೆ. ಶನಿವಾರ ರಾತ್ರಿ ದೇಶವನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಕಾಂಗ್ರೆಸ್, ಡಿಎಂಕೆ, ಸಮಾಜವಾದಿ ಪಕ್ಷಗಳ ಸ್ವಾರ್ಥ ರಾಜಕಾರಣದಿಂದ ಸೋಲಾಗಿದೆ. ದೇಶದ ಮಾತೆಯರಿಗೆ ವಿಪಕ್ಷಗಳು ಅಪಮಾನ ಮಾಡಿವೆ. ಮಸೂದೆ ವಿಫಲವಾದ ಬೆನ್ನಲ್ಲೇ ಎಲ್ಲ ವಿಪಕ್ಷ ಸದಸ್ಯರು ಖುಷಿಯಿಂದ ಚಪ್ಪಾಳೆ ತಟ್ಟಿದರು ಎಂದು ಬೇಸರ ವ್ಯಕ್ತಪಡಿಸಿದರು. ಈ ಮಸೂದೆಯನ್ನು ಸೋಲಿಸುವ ಮೂಲಕ

ಮಹಿಳೆಯರ ಹಕ್ಕುಗಳನ್ನು ಕಸಿದುಕೊಂಡು ಸಂಭ್ರಮಿಸಿದ ಕಾಂಗ್ರೆಸ್‌ : ಮೋದಿ ವಾಗ್ದಾಳಿ Read More »

error: Content is protected !!
Scroll to Top