ದೇಶ

ಚಿನ್ನದ ಬೆಲೆ ಎರಡು ದಿನದಲ್ಲಿ 5 ಸಾವಿರ ರೂ. ಹೆಚ್ಚಳ

ನವದೆಹಲಿ: ಅಮೆರಿಕದ ಸುಂಕ ಸಮರದ ಹಿನ್ನೆಲೆಯಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಉಂಟಾದ ತಲ್ಲಣದಿಂದಾಗಿ ಕೆಲವು ದಿನಗಳಿಂದ ಇಳಿಯುತ್ತಿದ್ದ ಚಿನ್ನದ ಬೆಲೆ ಕಳೆದೆರಡು ದಿನಗಳಿಂದ ಮತ್ತೆ ಏರಿಕೆಯಾಗತೊಡಗಿದೆ. ಶುಕ್ರವಾರ ಒಂದೇ ದಿನ 2000 ರೂ. ಏರಿಕೆಯಾಗಿದೆ. ಗುರುವಾರವೂ 2940 ರೂ. ಹೆಚ್ಚಳವಾಗಿತ್ತು. ಇದರಿಂದ ಎರಡೇ ದಿನದಲ್ಲಿ ಚಿನ್ನದ ಬೆಲೆ ಸುಮಾರು 5,000 ರೂ.ಯಷ್ಟು ಏರಿದಂತಾಗಿದೆ. ಬೆಲೆ ಇಳಿಕೆಯಿಂದ ತುಸು ಖುಷಿಯಾಗಿದ್ದ ಚಿನ್ನಪ್ರಿಯರಿಗೆ ಮತ್ತೆ ಬೆಲೆ ಏರಿಕೆಯ ಚಿಂತೆ ಕಾಡಲಾರಂಭಿಸಿದೆ.ಮುಂಬಯಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 87,450 ರೂ.ಗೆ […]

ಚಿನ್ನದ ಬೆಲೆ ಎರಡು ದಿನದಲ್ಲಿ 5 ಸಾವಿರ ರೂ. ಹೆಚ್ಚಳ Read More »

ಉಗ್ರ ತಹಾವುರ್‌ ರಾಣಾ 18 ದಿನ ಎನ್‌ಐಎ ಕಸ್ಟಡಿಗೆ

ತಡರಾತ್ರಿ ತನಕ ವಿಚಾರಣೆ ನಡೆಸಿ ಮುಂಜಾನೆ ಆದೇಶ ನೋಡಿದ ಕೋರ್ಟ್‌ ನವದೆಹಲಿ: ಮುಂಬೈ ದಾಳಿಯ ಸಂಚುಕೋರ, 64 ವರ್ಷ ವಯಸ್ಸಿನ ತಹವುರ್‌ ರಾಣಾನನ್ನು ದೆಹಲಿಯ ವಿಶೇಷ ನ್ಯಾಯಾಲಯ 18 ದಿನಗಳ ಮಟ್ಟಿಗೆ ರಾಷ್ಟ್ರೀಯ ತನಿಖಾ ಸಂಸ್ಥೆಯ ವಶಕ್ಕೊಪ್ಪಿಸಿದೆ. ಅಮೆರಿಕದಿಂದ ಗಡಿಪಾರುಗೊಂಡಿದ್ದ ಉಗ್ರ ರಾಣಾನನ್ನು ಗುರುವಾರ ಸಂಜೆ 6.30ಕ್ಕೆ ಭಾರತಕ್ಕೆ ಕರೆತರಲಾಗಿತ್ತು.ದೆಹಲಿಯ ಪಾಲಂ ವಿಮಾನ ನಿಲ್ದಾಣದಲ್ಲಿ ಬಂದಿಳಿದ ವಿಶೇಷ ವಿಮಾನದಿಂದ ರಾಣಾನನ್ನು ಇಳಿಸಿದ ಕೂಡಲೇ ವಿಮಾನ ನಿಲ್ದಾಣದಲ್ಲೇ ಅವನ ಬಂಧನದ ಔಪಚಾರಿಕತೆಯನ್ನು ಪೂರೈಸಿ ಪಟಿಯಾಲ ಹೌಸ್‌ನ ಕೋರ್ಟ್‌ನ ಎನ್‌ಐಎ

ಉಗ್ರ ತಹಾವುರ್‌ ರಾಣಾ 18 ದಿನ ಎನ್‌ಐಎ ಕಸ್ಟಡಿಗೆ Read More »

ಇನ್ನು ಎಲ್ಲೆಡೆಗೆ ಆಧಾರ್‌ ಕಾರ್ಡ್‌ ಕೊಂಡೊಯ್ಯುವ ಅಗತ್ಯವಿಲ್ಲ

ಡೇಟಾ ಸೋರಿಕೆ ತಡೆಗಟ್ಟಲು ಹೊಸ ಆಧಾರ್‌ ಆ್ಯಪ್ ಬಿಡುಗಡೆ ಮಾಡಿದ ಸರಕಾರ ನವದೆಹಲಿ: ಈಗ ಪ್ರತಿಯೊಂದಕ್ಕೂ ಕೆಲಸಕ್ಕೂ ಆಧಾರ್ ಕಾರ್ಡ್ ಪ್ರಮುಖ ದಾಖಲೆಯಾಗಿದೆ. ಸರಕಾರಿ ಮಾತ್ರವಲ್ಲದೆ ಕೆಲವು ಖಾಸಗಿ ಸಂಸ್ಥೆಗಳ ಕೆಲಸಗಳಿಗೂ ಆಧಾರ್‌ ಕೊಡಬೇಕಾಗುತ್ತದೆ. ಇಂಥ ಸಂದರ್ಭದಲ್ಲಿ ಆಧಾರ್‌ ಮಾಹಿತಿ ದುರುಪಯೋಗವಾಗುವ ಭೀತಿ ಇರುತ್ತದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಸಂಪೂರ್ಣ ಸುರಕ್ಷಿತವಾಗಿರುವ ಆಧಾರ್‌ ಆ್ಯಪ್ ಒಂದನ್ನು ಅಭಿವೃದ್ಧಿಪಡಿಸಿದ್ದು, ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಬುಧವಾರ ಹೊಸ ಆ್ಯಪ್ ಬಿಡುಗಡೆ ಮಾಡಿದ್ದಾರೆ. ಈ ಆ್ಯಪ್ ಇದ್ದರೆ ಆಧಾರ್

ಇನ್ನು ಎಲ್ಲೆಡೆಗೆ ಆಧಾರ್‌ ಕಾರ್ಡ್‌ ಕೊಂಡೊಯ್ಯುವ ಅಗತ್ಯವಿಲ್ಲ Read More »

ಯಾಸಿನ್‌ ಭಟ್ಕಳ್‌ ಸಹಿತ ಐವರು ಉಗ್ರರ ಗಲ್ಲುಶಿಕ್ಷೆ ಕಾಯಂಗೊಳಿಸಿದ ಹೈಕೋರ್ಟ್‌

2013ರಲ್ಲಿ ಹೈದರಾಬಾದ್‌ನಲ್ಲಿ ಸಂಭವಿಸಿದ ಬಾಂಬ್‌ ಸ್ಫೋಟ ಪ್ರಕರಣದ ಅಪರಾಧಿಗಳು ಹೈದರಾಬಾದ್‌: ಹೈದರಾಬಾದ್‌ನಲ್ಲಿ 2013ರಲ್ಲಿ ಸಂಭವಿಸಿದ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಇಂಡಿಯನ್‌ ಮುಜಾಹಿದಿನ್‌ ಉಗ್ರ ಯಾಸಿನ್ ಭಟ್ಕಳ್ ಸೇರಿ ಐವರು ಅಪರಾಧಿಗಳಿಗೆ ನೀಡಿದ್ದ ಮರಣದಂಡನೆಯನ್ನು ತೆಲಂಗಾಣ ಹೈಕೋರ್ಟ್ ಎತ್ತಿಹಿಡಿದಿದೆ. ನಿಷೇಧಿತ ಭಯೋತ್ಪಾದಕ ಸಂಘಟನೆ ಇಂಡಿಯನ್ ಮುಜಾಹಿದ್ದೀನ್‌ನ ಈ ಐವರು ಭಯೋತ್ಪಾದಕರು 2013ರಲ್ಲಿ ಹೈದರಾಬಾದ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿದ್ದರು. ಈ ಸ್ಫೋಟದಲ್ಲಿ 18 ಮಂದಿ ಸಾವನ್ನಪ್ಪಿ, 131 ಜನರು ಗಾಯಗೊಂಡಿದ್ದರು. ನ್ಯಾಯಮೂರ್ತಿಗಳಾದ ಲಕ್ಷ್ಮಣ್ ಮತ್ತು ಪಿ. ಶ್ರೀಸುಧಾ

ಯಾಸಿನ್‌ ಭಟ್ಕಳ್‌ ಸಹಿತ ಐವರು ಉಗ್ರರ ಗಲ್ಲುಶಿಕ್ಷೆ ಕಾಯಂಗೊಳಿಸಿದ ಹೈಕೋರ್ಟ್‌ Read More »

ಮುಂಬಯಿ ಭಯೋತ್ಪಾದಕ ದಾಳಿಯ ರೂವಾರಿ ತಹಾವುರ್‌ ರಾಣಾ ಭಾರತಕ್ಕೆ ಗಡಿಪಾರು

ಬಿಗುಭದ್ರತೆಯಲ್ಲಿ ಕರೆತರುತ್ತಿರುವ ಅಧಿಕಾರಿಗಳು, ತಡರಾತ್ರಿ ಬಂದಿಳಿಯುವ ಸಾಧ್ಯತೆ ನವದೆಹಲಿ : ವಾಣಿಜ್ಯ ನಗರಿ ಮುಂಬಯಿ ಮೇಲೆ 2008ರಲ್ಲಾದ ಭಯೋತ್ಪಾದಕ ದಾಳಿಯ ರೂವಾರಿ ತಹಾವುರ್‌ ರಾಣಾ ಕೊನೆಗೂ ಅಮೆರಿಕದಿಂದ ಗಡಿಪಾರು ಆಗಿದ್ದು, ಇಂದು ಅಧಿಕಾರಿಗಳು ಅವನನ್ನು ಭಾರತಕ್ಕೆ ಕರೆತರುತ್ತಿದ್ದಾರೆ. ತನಿಖಾಧಿಕಾರಿಗಳ ಜೊತೆ ವಿಶೇಷ ಭದ್ರತಾ ತಂಡವೊಂದು ತಹಾವುರ್‌ ರಾಣಾನನ್ನು ಭಾರತಕ್ಕೆ ಕರೆತರುತ್ತಿದೆ. ತಡರಾತ್ರಿ ಅಥವಾ ನಾಳೆ ನಸುಕಿನ ಹೊತ್ತು ಅವರ ವಿಮಾನ ಭಾರತದಲ್ಲಿ ಬಂದಿಳಿಯಲಿದೆ. ತಹಾವುರ್‌ ರಾಣಾನನ್ನು ಯಾವ ಜೈಲಿನಲ್ಲಿಡಲಾಗುತ್ತದೆ ಎಂಬ ಮಾಹಿತಿ ಇನ್ನೂ ಬಹಿರಂಗವಾಗಿಲ್ಲ. ಆದರೆ ದಿಲ್ಲಿಯ

ಮುಂಬಯಿ ಭಯೋತ್ಪಾದಕ ದಾಳಿಯ ರೂವಾರಿ ತಹಾವುರ್‌ ರಾಣಾ ಭಾರತಕ್ಕೆ ಗಡಿಪಾರು Read More »

ಮದುವೆಗೆ 9 ದಿನ ಬಾಕಿಯಿರುವಾಗ ಭಾವಿ ಅಳಿಯನ ಜೊತೆ ಅತ್ತೆ ಪರಾರಿ!

ಮಗಳ ಮದುವೆಗೆ ತಂದಿಟ್ಟ ಆಭರಣ, ಹಣ ದೋಚಿಕೊಂಡು ಹೋದ ತಾಯಿ ಲಖನೌ: ಮಗಳ ಮದುವೆಗೆ ಒಂಬತ್ತು ದಿನಗಳಷ್ಟೇ ಬಾಕಿಯಿರುವಾಗ ಭಾವಿ ಅಳಿಯನ ವಧುವಿನ ತಾಯಿ ಪಲಾಯನ ಮಾಡಿರುವ ವಿಚಿತ್ರ ಘಟನೆಯೊಂದು ಉತ್ತರ ಪ್ರದೇಶದ ಅಲಿಘಡದಲ್ಲಿ ಸಂಭವಿಸಿದೆ. ಮದುವೆಯ ತಯಾರಿಗಳೆಲ್ಲ ಮುಗಿದಿದ್ದವು, ಆಭರಣ, ಉಡುಪು ಖರೀದಿಸಿಯಾಗಿತ್ತು. ನಿಶ್ಚಿತಾರ್ಥವೂ ನಡೆದುಹೋಗಿತ್ತು. ಹೀಗಿರುವಾಗ ಮದುವೆ ಹೆಣ್ಣಿನ ತಾಯಿಯೇ ಮಗಳ ಮದುವೆಗಾಗಿ ಮಾಡಿಟ್ಟ ಆಭರಣಗಳನ್ನು ದೋಚಿಕೊಂಡು ಭಾವಿ ಅಳಿಯನ ಜತೆ ಪರಾರಿಯಾಗಿದ್ದಾಳೆ. ಭಾವಿ ಅಳಿಯ ಅತ್ತೆಯನ್ನು ಪ್ರೀತಿಸುತ್ತಿದ್ದ, ಮತ್ತು ಆ ಜೋಡಿ ಓಡಿ

ಮದುವೆಗೆ 9 ದಿನ ಬಾಕಿಯಿರುವಾಗ ಭಾವಿ ಅಳಿಯನ ಜೊತೆ ಅತ್ತೆ ಪರಾರಿ! Read More »

7 ದಿನಗಳಲ್ಲಿ 3,450 ರೂ. ಇಳಿಕೆಯಾದ ಚಿನ್ನದ ಬೆಲೆ

ಬಂಗಾರ ಖರೀದಿಸುವವರಿಗೆ ಈಗ ಉತ್ತಮ ಅವಕಾಶ ಬೆಂಗಳೂರು: ಚಿನ್ನ ಖರೀದಿಸುವವರಿಗೆ ಈಗ ಉತ್ತಮ ಅವಕಾಶ. ಭಾರತದಲ್ಲಿ ಕಳೆದ ಏಳು ದಿನಗಳಲ್ಲಿ ಚಿನ್ನದ ಬೆಲೆ ಬರೋಬ್ಬರಿ 3,450 ರೂಪಾಯಿ ಕಡಿಮೆಯಾಗಿದೆ. ಇತ್ತೀಚೆಗಿನ ವರ್ಷಗಳಲ್ಲಿ ಚಿನ್ನದ ಬೆಲೆ ಇಷ್ಟು ಕ್ಷಿಪ್ರವಾಗಿ ಇಳಿಕೆಯಾದದ್ದು ಇದೇ ಮೊದಲು ಎನ್ನಲಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ ಸುಂಕ ಸಮರದ ಪರಿಣಾಮವಾಗಿ ಜಗತ್ತಿನ ಷೇರು ಮಾರುಕಟ್ಟೆಗಳೆಲ್ಲ ತಲ್ಲಣಿಸಿ ಹೋಗಿದ್ದು, ಇದರಿಂದಾಗಿ ಚಿನ್ನದ ಬೆಲೆ ಸತತವಾಗಿ ಕುಸಿಯುತ್ತಿದೆ. ಕಳೆದ ಏಳು ದಿನಗಳಲ್ಲಿ 22 ಕ್ಯಾರಟ್ 10

7 ದಿನಗಳಲ್ಲಿ 3,450 ರೂ. ಇಳಿಕೆಯಾದ ಚಿನ್ನದ ಬೆಲೆ Read More »

ಬಿಜೆಪಿಯನ್ನು ಉಭಯ ಸಂಕಟಕ್ಕೆ ಸಿಲುಕಿಸಿದ ಕೇಂದ್ರದ ನಿರ್ಧಾರ

ಕಾಂಗ್ರೆಸ್‌ ಪಾಲಿಗೆ ವರವಾದ ನಿರ್ಧಾರ ಮಂಗಳೂರು : ಬೆಲೆ ಏರಿಕೆಯನ್ನು ಪ್ರಧಾನ ವಿಷಯವಾಗಿಟ್ಟುಕೊಂಡು ಜನಾಕ್ರೋಶ ಯಾತ್ರೆ ಪ್ರಾರಂಭಿಸಿರುವ ರಾಜ್ಯ ಬಿಜೆಪಿಗೆ ಕೇಂದ್ರ ಸರಕಾರ ನಿನ್ನೆ ಕೈಗೊಂಡ ನಿರ್ಧಾರವೊಂದು ಇಕ್ಕಟ್ಟಿನ ಪರಿಸ್ಥಿತಿ ತಂದೊಡ್ಡಿದೆ. ನಿನ್ನೆ ದಿಢೀರ್‌ ಎಂದು ಕೇಂದ್ರ ಸರಕಾರ ಗೃಹ ಬಳಕೆಯ ಅಡುಗೆ ಅನಿಲ ಸಿಲಿಂಡರ್‌ ಬೆಲೆಯನ್ನು 50 ರೂ. ಹೆಚ್ಚಿಸಿದೆ. ಇದರ ಜೊತೆಗೆ ಪೆಟ್ರೋಲು ಮತ್ತು ಡೀಸೆಲ್‌ ಮೇಲಿನ ಸುಂಕವನ್ನು ತಲಾ 2 ರೂ.ಯಂತೆ ಹೆಚ್ಚಿಸಿದೆ. ಜನಾಕ್ರೋಶ ಯಾತ್ರೆ ಹೊರಟ ದಿನವೇ ಕೇಂದ್ರದ ವತಿಯಿಂದ ಆಗಿರುವ

ಬಿಜೆಪಿಯನ್ನು ಉಭಯ ಸಂಕಟಕ್ಕೆ ಸಿಲುಕಿಸಿದ ಕೇಂದ್ರದ ನಿರ್ಧಾರ Read More »

ಷೇರು ಮಾರುಕಟ್ಟೆ ಭಾರಿ ಕುಸಿತ : 19 ಲಕ್ಷ ಕೋಟಿ ರೂಪಾಯಿ ನಷ್ಟ

ಹೂಡಿಕೆದಾರ ಪಾಲಿಗೆ ಇಂದು ಬ್ಲ್ಯಾಕ್‌ ಮಂಡೆ ನವದೆಹಲಿ: ಜಾಗತಿಕ ಷೇರು ಮಾರುಕಟ್ಟೆಗಳ ಪಾಲಿಗೆ ಇಂದಿನ ದಿನ ಅಕ್ಷರಶಃ ಬ್ಲ್ಯಾಕ್‌ ಮಂಡೆಯಾಗಿ ಪರಿಣಮಸಿದೆ. ಮುಂಬಯಿ ಷೇರು ಮಾರುಕಟ್ಟೆಯೂ ಸೇರಿದಂತೆ ಎಲ್ಲ ಮಾರುಕಟ್ಟೆಗಳ ಸೂಚ್ಯಂಕ ಪಾತಾಳಕ್ಕಿಳಿದು ಷೇರು ಮಾರುಕಟ್ಟೆಯಲ್ಲಿ ಅಕ್ಷರಶಃ ರಕ್ತದೋಕುಳಿ ಆಗುತ್ತಿದೆ. ಯದ್ವಾತದ್ವಾ ಕರಡಿ ಕುಣಿತದಿಂದ ಹೂಡಿಕೆದಾರರು ಲಕ್ಷ ಕೋಟಿಗಳಲ್ಲಿ ಹಣ ಕಳೆದುಕೊಂಡು ತಲೆ ಮೇಲೆ ಕೈಹೊತ್ತು ಕೂರುವ ಸ್ಥಿತಿ ನಿರ್ಮಾಣವಾಗಿದೆ.ಭಾರತದಲ್ಲಿ 23,000 ಗಡಿದಾಟಿ ಮುನ್ನುಗ್ಗುವ ಸೂಚನೆ ನೀಡಿದ್ದ ಷೇರು ಗೂಳಿ ಈಗ ಪ್ರಪಾತಕ್ಕೆ ಬೀಳುತ್ತಿದೆ. ಸೆನ್ಸೆಕ್ಸ್​ನಲ್ಲೂ ಕೂಡ

ಷೇರು ಮಾರುಕಟ್ಟೆ ಭಾರಿ ಕುಸಿತ : 19 ಲಕ್ಷ ಕೋಟಿ ರೂಪಾಯಿ ನಷ್ಟ Read More »

ದೇಶದ ಮೊದಲ ವರ್ಟಿಕಲ್ ಲಿಫ್ಟ್ ಸೇತುವೆ ಇಂದು ಮೋದಿಯಿಂದ ಉದ್ಘಾಟನೆ

ತಮಿಳುನಾಡಿನ ರಾಮೇಶ್ವರಂನಲ್ಲಿ ನಿರ್ಮಿಸಿದ ಪಂಬನ್‌ ಸೇತುವೆ ನವದೆಹಲಿ: ರಾಮನವಮಿ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿ ಭಾರತದ ಮೊದಲ ವರ್ಟಿಕಲ್ ಲಿಫ್ಟ್ ಸಮುದ್ರ ಸೇತುವೆಯನ್ನು ತಮಿಳುನಾಡಿನ ರಾಮೇಶ್ವರಂನಲ್ಲಿ ಉದ್ಘಾಟಿಸಲಿದ್ದಾರೆ. ಪಂಬನ್ ಎಂದು ಕರೆಯಲ್ಪಡುವ ಈ ರೈಲು ಸೇತುವೆಯನ್ನು 550 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ.‌ಮಧ್ಯಾಹ್ನ 12 ಗಂಟೆಗೆ ಪಂಬನ್ ಮತ್ತು ರಾಮೇಶ್ವರಂ ನಡುವಿನ ದೇಶದ ಮೊದಲ ವರ್ಟಿಕಲ್ ಲಿಫ್ಟ್ ಸಮುದ್ರ ಸೇತುವೆಯನ್ನು ಮೋದಿ ಉದ್ಘಾಟಿಸಲಿದ್ದಾರೆ. ಆ ಮೂಲಕ ಅವರು ರಸ್ತೆ ಸೇತುವೆಯಿಂದ ರೈಲು ಮತ್ತು ಹಡಗು ಸಂಚಾರಕ್ಕೆ

ದೇಶದ ಮೊದಲ ವರ್ಟಿಕಲ್ ಲಿಫ್ಟ್ ಸೇತುವೆ ಇಂದು ಮೋದಿಯಿಂದ ಉದ್ಘಾಟನೆ Read More »

error: Content is protected !!
Scroll to Top