ದೇಶ

ಕಮ್ಯುನಿಷ್ಟರ ದಾಳಿಯಲ್ಲಿ ಎರಡೂ ಕಾಲು ಕಳೆದುಕೊಂಡ ಸದಾನಂದ ಮಾಸ್ಟರ್ ರಾಜ್ಯಸಭೆಗೆ

ಎರಡೂ ಕಾಲು ಕಳೆದುಕೊಂಡ ಬಳಿಕವೂ ಛಲ ಬಿಡದೆ ಹೋರಾಡಿ ಗೆದ್ದ ಧೀರ ನವದೆಹಲಿ: ರಾಜ್ಯಸಭೆಗೆ ‌ನಾಲ್ವರನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನಿನ್ನೆ ನಾಮನಿರ್ದೇಶನ ಮಾಡಿದ್ದಾರೆ. ಅವರಲ್ಲಿ ಹೆಚ್ಚು ಗಮನ ಸೆಳೆದದ್ದು ಕೇರಳದ ಸಿ. ಸದಾನಂದ ಮಾಸ್ಟರ್. ಇನ್ನುಳಿದವರು ಉಜ್ವಲ್ ನಿಕಮ್, ಹರ್ಷವರ್ಧನ್ ಶ್ರಿಂಗ್ಲಾ, ಮೀನಾಕ್ಷಿ ಜೈನ್ ಅವರನ್ನು ನಾಮ ನಿರ್ದೇಶನಗೊಂಡವರು. ಸಿ. ಸದಾನಂದ ಮಾಸ್ಟರ್ ನಾಮನಿರ್ದೇಶನ ನಿನ್ನೆಯಿಂದೀಚೆಗೆ ಸೋಷಿಯಲ್‌ ಮೀಡಿಯಾದಲ್ಲಿ ಬಹಳ ವೈರಲ್‌ ಆಗಿದೆ. ಸದಾನಂದ ಮಾಸ್ಟರ್ ಅವರು ಕೇರಳದ ಕಣ್ಣೂರಿನವರು. ಮೂರು ದಶಕಗಳ ಹಿಂದೆ […]

ಕಮ್ಯುನಿಷ್ಟರ ದಾಳಿಯಲ್ಲಿ ಎರಡೂ ಕಾಲು ಕಳೆದುಕೊಂಡ ಸದಾನಂದ ಮಾಸ್ಟರ್ ರಾಜ್ಯಸಭೆಗೆ Read More »

ದೇಶದ ಎರಡನೇ ಅತಿ ಉದ್ದದ ಕೇಬಲ್‌ ಸೇತುವೆ ಸಿಗಂದೂರಿನಲ್ಲಿ ಇಂದು ಲೋಕಾರ್ಪಣೆ

ಶರಾವತಿ ಹಿನ್ನೀರಿನ ಜನರ ಆರು ದಶಕಗಳ ಕನಸು ನನಸಾಗುವ ಕ್ಷಣ ಶಿವಮೊಗ್ಗ : ದೇಶದ ಎರಡನೇ ಅತಿ ಉದ್ದದ ಮತ್ತು ರಾಜ್ಯದ ಅತಿ ಉದ್ದದ ಕೇಬಲ್‌ ಸೇತುವೆ ಇಂದು ಸಿಗಂದೂರಿನಲ್ಲಿ ಲೋಕಾರ್ಪಣೆಗೊಳ್ಳಲಿದೆ. ಶರಾವತಿ ಹಿನ್ನೀರಿಗೆ ನಿರ್ಮಿಸಿದ ಈ ಕೇಬಲ್‌ ಬ್ರಿಜ್‌ ಅನೇಕ ವಿಶೇಷತೆಗಳನ್ನು ಒಳಗೊಂಡಿದೆ. ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಸೇತುವೆ ಉದ್ಘಾಟಿಸಲಿದ್ದಾರೆ. ಈ ಮೂಲಕ ಶರಾವತಿ ನದಿ ದಡದ ಜನರ 6 ದಶಕಗಳ ಕನಸು ನನಸಾಗುತ್ತಿದೆ. ಗುಜರಾತ್‌ನ ಓಖಾದಿಂದ ಬೇಯ್ ದ್ವಾರಕೆ ದ್ವೀಪಕ್ಕೆ

ದೇಶದ ಎರಡನೇ ಅತಿ ಉದ್ದದ ಕೇಬಲ್‌ ಸೇತುವೆ ಸಿಗಂದೂರಿನಲ್ಲಿ ಇಂದು ಲೋಕಾರ್ಪಣೆ Read More »

ಭಾರತೀಯ ವಾಯುಸೇನೆಗೆ ‘ಅಸ್ತ್ರ’ ಬಲ

ಡಿಆರ್‌ಡಿಒ ಅಭಿವೃದ್ಧಿಪಡಿಸಿದ ಸ್ವದೇಶಿ ಕ್ಷಿಪಣಿ ನವದೆಹಲಿ: ಭಾರತೀಯ ವಾಯುಸೇನೆಗೆ ಮತ್ತೊಂದು ಶಕ್ತಿ ಸೇರ್ಪಡೆಯಾಗಿದ್ದು, ಡಿಆರ್‌ಡಿಒ ಅಭಿವೃದ್ಧಿ ಮಾಡಿರುವ ಏರ್-ಟು -ಏರ್ ಕ್ವಿಪಣಿ ಅಸ್ತ್ರ ಪರೀಕ್ಷಾರ್ಥ ಉಡಾವಣೆ ಯಶಸ್ವಿಯಾಗಿದೆ. ಇದನ್ನು ಒಡಿಶಾದ ಕರಾವಳಿ ತೀರದಲ್ಲಿ ಭಾರತೀಯ ವಾಯುಪಡೆಯ ಸುಖೋಯ್ 30 MK1 ಯುದ್ಧ ವಿಮಾನದ ಮೂಲಕ ಡಿಆರ್‌ಡಿಒ ಮತ್ತು ಭಾರತೀಯ ವಾಯುಸೇನೆ ಈ ಕ್ಷಿಪಣಿಯ ಪರೀಕ್ಷಾರ್ಥ ಹಾರಾಟವನ್ನು ಯಶಸ್ವಿಯಾಗಿ ನಡೆಸಿದೆ. ಈ ಕ್ಷಿಪಣಿಗಳು ತಮ್ಮ ಗುರಿಗಳನ್ನು ಹೆಚ್ಚಿನ ನಿಖರತೆಯ ಜೊತೆಗೆ ಯಶಸ್ವಿಯಾಗಿ ತಲುಪಿವೆ ಎಂದು ಮೂಲಗಳು ಮಾಹಿತಿ ನೀಡಿವೆ.

ಭಾರತೀಯ ವಾಯುಸೇನೆಗೆ ‘ಅಸ್ತ್ರ’ ಬಲ Read More »

ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಮರಾಠ ಮಿಲಿಟರಿ ಭೂದೃಶ್ಯ

ನವದೆಹಲಿ: ಭಾರತದ ಮರಾಠ ಮಿಲಿಟರಿ ಭೂದೃಶ್ಯಗಳನ್ನು ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸೇರ್ಪಡೆ ಮಾಡಲಾಗಿದ್ದು, ಇದಕ್ಕೆ ಪ್ರಧಾನಿ ಮೋದಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸಂತಸ ಹಂಚಿಕೊಂಜಿರುವ ಪ್ರಧಾನಿ ಮೋದಿ, ಇದು ಭಾರತದ ಸಾಂಸ್ಕೃತಿಕ ಪರಂಪರೆಗೆ ಸಲ್ಲಿಕೆಯಾದ ವಿಶ್ವ ಗೌರವ ಎಂದಿದ್ದಾರೆ. ಇದಕ್ಕಾಗಿ ದೇಶದ ಜನತೆದೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಹನ್ನೆರಡು ಕೋಟೆಗಳನ್ನು ಒಳಗೊಂಡಿರುವ ಈ ಮರಾಠ ಮಿಲಿಟರಿ ಭೂದೃಶ್ಯ ಕ್ರಿ.ಶ. 17 ರಿಂದ 19ನೇ ಶತಮಾನದಲ್ಲಿ ಅಭಿವೃದ್ಧಿ ಮಾಡಲಾಗಿರುವಂತಹವುಗಳಾಗಿವೆ. ಮರಾಠರ ಯುದ್ಧ ತಂತ್ರದ ಸೇನಾ

ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಮರಾಠ ಮಿಲಿಟರಿ ಭೂದೃಶ್ಯ Read More »

ಡೀಸೆಲ್‌ ಸಾಗಿಸುತ್ತಿದ್ದ ರೈಲಿನಲ್ಲಿ ಭಾರಿ ಬೆಂಕಿ ಅವಘಡ

ಧಗಧಗನೆ ಉರಿದ ರೈಲಿನ ವ್ಯಾಗನ್‌ಗಳು ಚೆನ್ನೈ: ಡೀಸೆಲ್ ಸಾಗಿಸುತ್ತಿದ್ದ ಗೂಡ್ಸ್ ರೈಲಿನ 4 ವ್ಯಾಗನ್‌ಗಳು ಬೆಂಕಿ ಹತ್ತಿಕೊಂಡು ಧಗಧಗನೆ ಉರಿದ ಘಟನೆ ತಮಿಳುನಾಡಿನ ತಿರುವಲ್ಲೂರು ರೈಲು ನಿಲ್ದಾಣದ ಬಳಿ ನಡೆದಿದೆ. ಭಾನುವಾರ ಮುಂಜಾನೆ 5.30ರ ಸುಮಾರಿಗೆ ಈ ಘಟನೆ ನಡೆದಿದೆ. ಬೆಂಕಿ ಅವಘಡದಿಂದ ರೈಲು ಹೊತ್ತಿ ಉರಿದಿದ್ದು, ಆಕಾಶದಲ್ಲಿ ಕಪ್ಪು ದಟ್ಟಹೊಗೆ ಕಾಣಿಸಿಕೊಂಡಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ಹಾಗೂ ರಕ್ಷಣಾ ತಂಡಗಳು ಧಾವಿಸಿದ್ದು, ಬೆಂಕಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದೆ. ರೈಲಿನಲ್ಲಿ ಡೀಸೆಲ್ ಇದ್ದ ಕಾರಣ ಅಗ್ನಿಶಾಮಕ ಸಿಬ್ಬಂದಿ ಬೆಂಕಿ

ಡೀಸೆಲ್‌ ಸಾಗಿಸುತ್ತಿದ್ದ ರೈಲಿನಲ್ಲಿ ಭಾರಿ ಬೆಂಕಿ ಅವಘಡ Read More »

ಕಾರವಾರ: ದಟ್ಟ ಕಾಡಿನ ಗುಹೆಯಲ್ಲಿ ಇಬ್ಬರು ಪುಟ್ಟ ಮಕ್ಕಳ ಜೊತೆ ವಾಸವಾಗಿದ್ದ ವಿದೇಶಿ ಮಹಿಳೆಯ ರಕ್ಷಣೆ

ಗುಡ್ಡ ಕುಸಿತದ ತನಿಖೆ ಮಾಡುತ್ತಿದ್ದಾಗ ಪೊಲೀಸರ ಕಣ್ಣಿಗೆ ಬಿದ್ದ ತಾಯಿ-ಮಕ್ಕಳು ಕಾರವಾರ: ವಿದೇಶ ಮಹಿಳೆಯೊಬ್ಬಳು ಇಬ್ಬರು ಪುಟ್ಟ ಮಕ್ಕಳೊಂದಿಗೆ ದಟ್ಟಾರಣ್ಯದೊಳಗೆ ಗುಹೆಯೊಳಗೆ ವಾಸ ಮಾಡುತ್ತಿರುವುದು ಉತ್ತರ ಕನ್ನಡ ಜಿಲ್ಲೆಯಲ್ಲಿ ಪತ್ತೆಯಾಗಿಉದೆ. ಹಿಂದೂ ಧರ್ಮದ ಕಡೆಗೆ ವಾಲಿದ ರಷ್ಯಾ ಮೂಲದ ಮಹಿಳೆ ಇಬ್ಬರು ಪುಟ್ಟ ಮಕ್ಕಳೊಂದಿಗೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ರಾಮತೀರ್ಥದ ಅರಣ್ಯದ ಗುಹೆಯಲ್ಲಿ ವಾಸವಿದ್ದಳು. ಇವರನ್ನು ಪೊಲೀಸರು ರಕ್ಷಿಸಿ ಕರೆದೊಯ್ದಿದ್ದಾರೆ. ಮೋಹಿ (40) ತನ್ನ ಪುಟ್ಟ ಮಕ್ಕಳಾದ ಪ್ರೆಯಾ (6) ಹಾಗೂ ಅಮಾ

ಕಾರವಾರ: ದಟ್ಟ ಕಾಡಿನ ಗುಹೆಯಲ್ಲಿ ಇಬ್ಬರು ಪುಟ್ಟ ಮಕ್ಕಳ ಜೊತೆ ವಾಸವಾಗಿದ್ದ ವಿದೇಶಿ ಮಹಿಳೆಯ ರಕ್ಷಣೆ Read More »

ಏಕದಿನ ತಂಡದ ನಾಯಕತ್ವ ಹೊಣೆಯೂ ಶುಭಮನ್‌ ಗಿಲ್‌ ಹೆಗಲಿಗೆ

ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ ಕ್ರಿಕೆಟ್‌ ಬದುಕು ಅಂತಿಮ ಘಟ್ಟಕ್ಕೆ ನವದೆಹಲಿ: ಮೊದಲ ಬಾರಿ ಟೆಸ್ಟ್‌ ತಂಡದ ನಾಯಕನಾಗಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವ ಶುಭ್‌ಮನ್‌ ಗಿಲ್‌ ಹೆಗಲಿಗೆ ಸದ್ಯದಲ್ಲೇ ಏಕದಿನ ತಂಡದ ನಾಯಕತ್ವದ ಹೊಣೆಯೂ ಬೀಳಲಿದೆ. ಸದ್ಯದಲ್ಲೇ ಭಾರತ ಏಕದಿನ ತಂಡದ ನಾಯಕತ್ವವನ್ನೂ ಶುಭಮನ್‌ ಗಿಲ್‌ ವಹಿಸಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಇದರೊಂದಿಗೆ ರೋಹಿತ್‌ ಶರ್ಮಾ ಮತ್ತು ವಿರಾಟ್‌ ಕೊಹ್ಲಿ ಕ್ರಿಕೆಟ್‌ ಬದುಕು ಬಹುತೇಕ ಕೊನೆಯ ಘಟ್ಟಕ್ಕೆ ತಲುಪಿದಂತಾಗಿದೆ ಎನ್ನಲಾಗುತ್ತಿದೆ. ಶರ್ಮಾ ಮತ್ತು ಕೊಹ್ಲಿ ಇಲ್ಲದ ಟೆಸ್ಟ್‌

ಏಕದಿನ ತಂಡದ ನಾಯಕತ್ವ ಹೊಣೆಯೂ ಶುಭಮನ್‌ ಗಿಲ್‌ ಹೆಗಲಿಗೆ Read More »

ಅಹಮದಾಬಾದ್‌ ವಿಮಾನ ದುರಂತದ ಕಾರಣ ಪತ್ತೆ

ಪ್ರಾಥಮಿಕ ತನಿಖಾ ವರದಿಯಲ್ಲಿದೆ ಬೆಚ್ಚಿಬೀಳಿಸುವ ಮಾಹಿತಿ ನವದೆಹಲಿ : ಅಹಮದಾಬಾದ್‌ನಲ್ಲಿ ಕಳೆದ ಜೂನ್ 12ರಂದು ಏರ್ ಇಂಡಿಯಾ ವಿಮಾನ ಪತನಗೊಂಡ ಕಾರಣ ಬಹಿರಂಗವಾಗಿದೆ. ಈ ಭೀಕರ ಅಪಘಾತದ ಪ್ರಾಥಮಿಕ ತನಿಖಾ ವರದಿಯಲ್ಲಿ ವಿಮಾನ ಪತನವಗಾಲು ಕಾರಣವಾದ ಪರಿಸ್ಥಿತಿಯನ್ನು ವಿವರಿಸಲಾಗಿದೆ. ವಿಮಾನ ಅಪಘಾತ ತನಿಖಾ ಬ್ಯೂರೋ (ಎಎಐಬಿ) ಸಲ್ಲಿಸಿರುವ 15 ಪುಟಗಳ ಪ್ರಾಥಮಿಕ ತನಿಖಾ ವರದಿಯಲ್ಲಿ ಹಲವು ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ. ವರದಿಯ ಪ್ರಕಾರ, ಟೇಕ್ ಆಫ್ ಆದ ಕೆಲವೇ ಸೆಕೆಂಡುಗಳಲ್ಲಿ ವಿಮಾನದ ಎರಡೂ ಇಂಜಿನ್‌ಗಳು ಸ್ಥಗಿತಗೊಂಡವು. ಆ

ಅಹಮದಾಬಾದ್‌ ವಿಮಾನ ದುರಂತದ ಕಾರಣ ಪತ್ತೆ Read More »

ಪ್ರತಿ ತಿಂಗಳು ಗೃಹಲಕ್ಷ್ಮಿ ಹಣ ಕೊಡಲು ಸಾಧ್ಯವಾಗುತ್ತಿಲ್ಲ : ಎಚ್‌.ಎಂ.ರೇವಣ್ಣ

ಗ್ಯಾರಂಟಿ ಕೊಡುವುದಕ್ಕೆ ತೊಡಕುಗಳಿವೆ ಎಂದು ಒಪ್ಪಿಕೊಂಡ ಸಮಿತಿ ಅಧ್ಯಕ್ಷ ಬೆಂಗಳೂರು: ಫಲಾನುಭವಿಗಳಿಗೆ ಗೃಹಲಕ್ಷ್ಮಿಹಣ ಪ್ರತಿ ತಿಂಗಳು ಕೊಡಲು ಸಾಧ್ಯವಾಗುತ್ತಿಲ್ಲ ಎಂದು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಅಧ್ಯಕ್ಷ ಎಚ್.ಎಂ ರೇವಣ್ಣ ಹೇಳಿದ್ದಾರೆ. ಪ್ರತಿ ತಿಂಗಳು ಹಣ ಕೊಡುವುದಕ್ಕೆ ಕೆಲವು ತೊಡಕುಗಳಿವೆ. ಸದ್ಯ 3 ತಿಂಗಳಿಗೊಮ್ಮೆ ಗೃಹಲಕ್ಷ್ಮಿ ಹಣ ಕೊಡ್ತಿದ್ದೇವೆ ಎಂದು ಅವರು ಹೇಳಿದ್ದಾರೆ. ಮೂರು ತಿಂಗಳಿಗೊಮ್ಮೆ ಗೃಹಲಕ್ಷ್ಮಿ ಹಣ ಕೊಡುತ್ತಿದ್ದೇವೆ. ಜಿಎಸ್‌ಟಿ ವಿಚಾರದಲ್ಲಿ 1.20 ಲಕ್ಷ ಜನರಿಗೆ ಹಣ ಹೋಗಿರಲಿಲ್ಲ. ಅದರಲ್ಲಿ ಈಗ 58 ಸಾವಿರ ಜನರ

ಪ್ರತಿ ತಿಂಗಳು ಗೃಹಲಕ್ಷ್ಮಿ ಹಣ ಕೊಡಲು ಸಾಧ್ಯವಾಗುತ್ತಿಲ್ಲ : ಎಚ್‌.ಎಂ.ರೇವಣ್ಣ Read More »

ನಟ ದರ್ಶನ್ ಸ್ವಿಟ್ಜರ್ಲ್ಯಾಂಡ್ ಪ್ರಯಾಣಕ್ಕೆ ವಿಸಾ ನಿರಾಕರಣೆ

ರೇಣುಕಾಸ್ವಾಮಿ ಕೊಲೆ ಆರೋಪದ ಕಾರಣಕ್ಕೆ ವಿಸಾ ತಿರಸ್ಕರಿಸಿದ ಅಧಿಕಾರಿಗಳು ಬೆಂಗಳೂರು: ರೇಣುಕಾಸ್ವಾಮಿ ಮರ್ಡರ್ ಪ್ರಕರಣದಲ್ಲಿ ಸಿಲುಕಿಕೊಂಡಿರುವ ನಟ ದರ್ಶನ್‌ಗೆ ಒಂದರ ಮೇಲೆ ಮತ್ತೊಂದು ಸಮಸ್ಯೆಗಳು ಬಂದೊದಗುತ್ತಿದೆ. ಡೆವಿಲ್ ಚಿತ್ರೀಕರಣದ ಕಾರಣಕ್ಕಾಗಿ ದರ್ಶನ್ ಸ್ವಿಟ್ಜರ್ಲ್ಯಾಂಡ್ ಪ್ರಯಾಣಕ್ಕೆ ವಿಸಾ ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸ್ಥಳೀಯ ಅಧಿಕಾರಿಗಳು ತಿರಸ್ಕರಿಸಿದ್ದು, ಇದು ಚಿತ್ರತಂಡಕ್ಕೆ ಹಿನ್ನಡೆಯಾಗುವಂತೆ ಮಾಡಿದೆ. ದರ್ಶನ್ ಮೇಲಿನ ಕೊಲೆ ಆರೋಪದ ಕಾರಣಕ್ಕೆ ಸ್ವಿಟ್ಜರ್ಲ್ಯಾಂಡ್ ಅಧಿಕಾರಿಗಳು ವಿಸಾ ನಿರಾಕರಿಸಿದ್ದು, ಇದರಿಂದಾಗಿ ಚಿತ್ರತಂಡಕ್ಕೆ ಸಮಸ್ಯೆಯಾಗಿದೆ. ದರ್ಶನ್‌ಗೆ ಜುಲೈ 11 ರಿಂದ 30 ರ

ನಟ ದರ್ಶನ್ ಸ್ವಿಟ್ಜರ್ಲ್ಯಾಂಡ್ ಪ್ರಯಾಣಕ್ಕೆ ವಿಸಾ ನಿರಾಕರಣೆ Read More »

error: Content is protected !!
Scroll to Top