ದೇಶ

ತೆರಿಗೆ ಇಳಿಕೆ : ಇಳಿಯಲಿದೆ ಜನಸಾಮಾನ್ಯರ ಹೊರೆ

ಜಿಎಸ್‌ಟಿ ದರದಲ್ಲಿ ಭಾರಿ ಬದಲಾವಣೆ; ಕೇಂದ್ರದಿಂದ ಜನರಿಗೆ ದೀಪಾವಳಿಗೂ ಮೊದಲೇ ಭರ್ಜರಿ ಉಡುಗೊರೆ ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಅಗತ್ಯ ವಸ್ತುಗಳ ಬೆಲೆ ಇಳಿಕೆ ಮಾಡುವ ಕುರಿತು ನೀಡಿದ ವಾಗ್ದಾನವನ್ನು ಈಡೇರಿಸುವತ್ತ ಕೇಂದ್ರ ಸರ್ಕಾರ ಮುಂದಾಗಿದೆ. ಬುಧವಾರ ನಡೆದ ಕೇಂದ್ರ ಮತ್ತು ರಾಜ್ಯಗಳನ್ನು ಒಳಗೊಂಡ ಜಿಎಸ್​ಟಿ ಮಂಡಳಿ ಸಭೆಯಲ್ಲಿ ಕೇಂದ್ರ ಸರ್ಕಾರ ಸಲ್ಲಿಸಿದ ಜಿಎಸ್‌ಟಿ ಕಡಿತ ಮತ್ತು ಸುಧಾರಣೆಗಳ ಪ್ರಸ್ತಾವನೆಗಳನ್ನು ಸರ್ವಾನುಮತದಿಂದ ಅನುಮೋದಿಸಲಾಗಿದೆ. ಇನ್ನು ಮುಂದೆ ದೇಶದಲ್ಲಿ ಎರಡು ಜಿಎಸ್‌ಟಿ ಸ್ಲ್ಯಾಬ್‌ ಇರಲಿದ್ದು […]

ತೆರಿಗೆ ಇಳಿಕೆ : ಇಳಿಯಲಿದೆ ಜನಸಾಮಾನ್ಯರ ಹೊರೆ Read More »

ಕಾಂಗ್ರೆಸ್‌ ರಾಷ್ಟ್ರೀಯ ವಕ್ತಾರನ ಬಳಿಯಲ್ಲೇ ಇದೆ ಎರಡು ವೋಟರ್‌ ಐಡಿ

ಮತ ಕಳ್ಳತನ ಆರೋಪ ಮಾಡಿದ ಕಾಂಗ್ರೆಸ್‌ಗೆ ತೀವ್ರ ಮುಖಭಂಗವಾದ ಪ್ರಕರಣ ನವದೆಹಲಿ: ಬಿಜೆಪಿ ಮತಗಳ್ಳತನ ಮಾಡುತ್ತಿದೆ ಎಂದು ದೇಶಾದ್ಯಂತ ಗುಲ್ಲೆಬ್ಬಿಸುತ್ತಿರುವ ಕಾಂಗ್ರೆಸ್‌ಗೆ ಈ ಆರೋಪ ತಿರುಗುಬಾಣವಾಗಿ ಪರಿಣಮಿಸಿದೆ. ಕಾಂಗ್ರೆಸ್‌ನ ರಾಷ್ಟ್ರೀಯ ವಕ್ತಾರ ಮತ್ತು ರಾಹುಲ್‌ ಗಾಂಧಿಯ ಪರಮಾಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಪವನ್‌ ಖೇರಾ ಅವರೇ ಎರಡೆರಡು ವೋಟರ್‌ ಐಡಿ ಹೊಂದಿರುವುದು ಬಯಲಾಗಿದ್ದು, ಈ ಕುರಿತು ಚುನಾವಣಾ ಆಯೋಗ ಅವರಿಗೆ ನೋಟಿಸ್‌ ಜಾರಿ ಮಾಡಿದೆ. ಮತ ಕಳ್ಳತನ ಎಸಗುತ್ತಿರುವ ಬಿಜೆಪಿ ಮೇಲೆ ಹೈಡ್ರೋಜನ್‌ ಬಾಂಬ್‌ ಹಾಕಲಾಗುವುದು ಎಂದು ರಾಹುಲ್‌

ಕಾಂಗ್ರೆಸ್‌ ರಾಷ್ಟ್ರೀಯ ವಕ್ತಾರನ ಬಳಿಯಲ್ಲೇ ಇದೆ ಎರಡು ವೋಟರ್‌ ಐಡಿ Read More »

232 ಕೋ. ರೂ. ವಂಚನೆ : ವಿಮಾನ ನಿಲ್ದಾಣ ಪ್ರಾಧಿಕಾರದ ಮ್ಯಾನೇಜರ್‌ ಬಂಧನ

ಸರ್ಕಾರದ ಹಣವನ್ನು ತನ್ನ ಖಾತೆಗಳಿಗೆ ವರ್ಗಾಯಿಸಿಕೊಂಡು ಗೋಲ್‌ಮಾಲ್‌ ನವದೆಹಲಿ: 232 ಕೋಟಿ ರೂ. ವಂಚನೆ ಪ್ರಕರಣದಲ್ಲಿ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಹಿರಿಯ ಮ್ಯಾನೇಜರ್‌ ರಾಹುಲ್ ವಿಜಯ್‌ ಅವರನ್ನು ಸಿಬಿಐ ಬಂಧಿಸಿದೆ. ರಾಹುಲ್ ವಿಜಯ್ ಸುಮಾರು 232 ಕೋಟಿ ರೂ. ಸರ್ಕಾರದ ಹಣವನ್ನು ನೇರವಾಗಿ ತನ್ನ ವೈಯಕ್ತಿಕ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದಾರೆ. ನಂತರ ಆ ಹಣವನ್ನು ಬ್ಯುಸಿನೆಸ್ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ತನಿಖಾಧಿಕಾರಿಗಳು ಈ ಪ್ರಕರಣವನ್ನು ವರ್ಷದ ಅತಿದೊಡ್ಡ ಹಣಕಾಸು ಹಗರಣಗಳಲ್ಲಿ ಒಂದು ಎಂದು ಹೇಳಿದ್ದಾರೆ.

232 ಕೋ. ರೂ. ವಂಚನೆ : ವಿಮಾನ ನಿಲ್ದಾಣ ಪ್ರಾಧಿಕಾರದ ಮ್ಯಾನೇಜರ್‌ ಬಂಧನ Read More »

ರಷ್ಯಾದಿಂದ ಭಾರತ ತೈಲ ಖರೀದಿಸಿದರೆ ಬ್ರಾಹ್ಮಣರು ಶ್ರೀಮಂತರಾಗುತ್ತಾರಂತೆ!

ಎಡಬಿಡಂಗಿ ಹೇಳಿಕೆ ನೀಡಿದ ಟ್ರಂಟ್‌ ಸಲಹೆಗಾರ ಪೀಟರ್ ನವರೊ ವಾಷಿಂಗ್ಟನ್‌: ರಷ್ಯಾ-ಉಕ್ರೇನ್‌ ಯುದ್ಧವನ್ನು ಮೋದಿ ಯುದ್ಧ ಎಂದು ಕರೆದಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ವಾಣಿಜ್ಯ ಸಲಹೆಗಾರ ಪೀಟರ್ ನವರೊ ಈಗ ಭಾರತದವರನ್ನು ಪ್ರಚೋದಿಸಲು ಜಾತಿ ಅಸ್ತ್ರವನ್ನು ಪ್ರಯೋಗಿಸಿದ್ದಾರೆ. ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವ ಮೂಲಕ ಬ್ರಾಹ್ಮಣರು ಭಾರತೀಯ ಜನರ ವೆಚ್ಚದಲ್ಲಿ ಶ್ರೀಮಂತರಾಗುತ್ತಿದ್ದಾರೆ ಎಂದು ಎಡಬಿಡಂಗಿ ಹೇಳಿಕೆ ನೀಡಿದ್ದಾರೆ. ಚೀನದ ಟಿಯಾಂಜಿನ್‌ನಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಶೃಂಗಸಭೆಯಲ್ಲಿ ಮೋದಿ, ಪುಟಿನ್‌, ಕ್ಸಿ ಜಿನ್‌ಪಿಂಗ್‌ ಮಾತುಕತೆ ನಡೆಸುತ್ತಿರುವ

ರಷ್ಯಾದಿಂದ ಭಾರತ ತೈಲ ಖರೀದಿಸಿದರೆ ಬ್ರಾಹ್ಮಣರು ಶ್ರೀಮಂತರಾಗುತ್ತಾರಂತೆ! Read More »

ಎಲ್‍ ಐಸಿ ಸುವರ್ಣ ಮಹೋತ್ಸವದ ಅಂಗವಾಗಿ ವಿದ್ಯಾರ್ಥಿ ವೇತನ ಯೋಜನೆ ಘೋಷಣೆ

ಎಲ್ಐಸಿ ಸುವರ್ಣ ಮಹೋತ್ಸವ್‍ ಪ್ರತಿಷ್ಠಾನವು ಭಾರತದಾದ್ಯಂತ ಎಲ್ ಐಸಿ ಸುವರ್ಣ ಮಹೋತ್ಸವ ಅಂಗವಾಗಿ 2025 ರ ವಿದ್ಯಾರ್ಥಿವೇತನ ಯೋಜನೆಯನ್ನು ಘೋಷಿಸಲು ಸಂತೋಷಪಡುತ್ತಿದೆ. ಆಸಕ್ತ ಮತ್ತು ಅರ್ಹ ವಿದ್ಯಾರ್ಥಿಗಳು ಯಾವುದೇ ವಿಭಾಗದಲ್ಲಿ ವೈದ್ಯಕೀಯ ಎಂಜಿನಿಯರಿಂಗ್ ಪದವಿಯಲ್ಲಿ ಉನ್ನತ ಶಿಕ್ಷಣವನ್ನು ಪಡೆಯಲು, ಯಾವುದೇ ಕ್ಷೇತ್ರದಲ್ಲಿ ಸಂಯೋಜಿತ ಕೋರ್ಸ್‌ಗಳು ಅಥವಾ ಇತರ ಸಮಾನ ಪಡೆಗಳಲ್ಲಿ ಡಿಪ್ಲೊಮಾ  ಹಾಗು ITI ಕೋರ್ಸ್ಗಳನ್ನು ಪಡೆಯಲು ಬಯಸುವವರು ಇದರ ಪ್ರಯೋಜನವನ್ನು ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ಪೋಸ್ಟರನ್ನು ಗಮನಿಸಿ

ಎಲ್‍ ಐಸಿ ಸುವರ್ಣ ಮಹೋತ್ಸವದ ಅಂಗವಾಗಿ ವಿದ್ಯಾರ್ಥಿ ವೇತನ ಯೋಜನೆ ಘೋಷಣೆ Read More »

ಮಳೆಯಿಂದಾಗುತ್ತಿರುವ ಪ್ರಾಕೃತಿಕ ವಿಪತ್ತಿನ ಬಗ್ಗೆ ಪ್ರಧಾನಿ ಮೋದಿ ಬೇಸರ

ನವದೆಹಲಿ: ಪ್ರಧಾನಿ ಮೋದಿ ಅವರು ತಮ್ಮ ತಿಂಗಳ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್’ ನಲ್ಲಿ ದೇಶದಲ್ಲಿ ನಡೆಯುತ್ತಿರುವ ಪ್ರಾಕೃತಿಕ ವಿಕೋಪಗಳ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಇದು ಪ್ರತಿಯೊಬ್ಬ ಭಾರತೀಯನನ್ನೂ ದುಃಖಕ್ಕೆ ದೂಡಿದೆ ಎಂದು ಹೇಳಿದ್ದಾರೆ. ಈ ಬಾರಿಯ ಮಳೆಗಾಲದಲ್ಲಿ ನಡೆಯುತ್ತಿರುವ ಪ್ರಾಕೃತಿಕ ವಿಕೋಪಗಳು ದೇಶವನ್ನು ಪರೀಕ್ಷೆಗೆ ಒಡ್ಡಿದೆ. ಪರಿಸರ ಮತ್ತು ಮಾನವನಿಗೆ ಸಾಕಷ್ಟು ಹಾನಿಗಳಾಗಿವೆ. ಕಳೆದ ಕೆಲವು ವಾರಗಳಲ್ಲಿ ನಾವು ಪ್ರವಾಹ, ಭೂಕುಸಿತದಂತಹ ಹಲವಾರು ಪ್ರಾಕೃತಿಕ ವಿನಾಶ ಕಂಡಿದ್ದೇವೆ. ಜನರ ಜೀವನ ಅಪಾಯದಲ್ಲಿದೆ. ಇದು ಪ್ರತಿಯೊಬ್ಬ

ಮಳೆಯಿಂದಾಗುತ್ತಿರುವ ಪ್ರಾಕೃತಿಕ ವಿಪತ್ತಿನ ಬಗ್ಗೆ ಪ್ರಧಾನಿ ಮೋದಿ ಬೇಸರ Read More »

ಪ್ರಧಾನಿ ನರೇಂದ್ರ ಮೋದಿಯ ಐತಿಹಾಸಿಕ ಚೀನ ಭೇಟಿ ಪ್ರಾರಂಭ

7 ವರ್ಷಗಳ ಬಳಿಕ ಚೀನಕ್ಕೆ ಹೋದ ಮೋದಿ; ಅಧ್ಯಕ್ಷ ಷಿ ಜಿನ್​​ಪಿಂಗ್ ಜೊತೆ ಮಾತುಕತೆ ಬೀಜಿಂಗ್: ಪ್ರಧಾನಿ ನರೇಂದ್ರ ಮೋದಿ ಇಂದು ಚೀನ ಅಧ್ಯಕ್ಷ ಷಿ ಜಿನ್​​ಪಿಂಗ್ ಹಾಗೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜತೆ ಮಾತುಕತೆ ನಡೆಸಲಿದ್ದಾರೆ. ಜಪಾನ್ ಭೇಟಿ ಮುಗಿಸಿ ಪ್ರಧಾನಿ ನರೇಂದ್ರ ಮೋದಿ ಚೀನ ತಲುಪಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸುಂಕ ಬೆದರಿಕೆ ಸಡ್ಡು ಹೊಡೆದು ಪ್ರಧಾನಿ ಮೋದಿ ಚೀನ ಭೇಟಿ ಕೈಗೊಂಡಿದ್ದು, ಇದನ್ನು ಇಡೀ ಜಗತ್ತು ಕುತೂಹಲದಿಂದ ವೀಕ್ಷಿಸುತ್ತಿದೆ.

ಪ್ರಧಾನಿ ನರೇಂದ್ರ ಮೋದಿಯ ಐತಿಹಾಸಿಕ ಚೀನ ಭೇಟಿ ಪ್ರಾರಂಭ Read More »

ಮಗುವಿಗೆ ಜನ್ಮ ನೀಡಿದ 9ನೇ ತರಗತಿ ಬಾಲಕಿ

ಅಣ್ಣನೇ ಎಸಗಿದನೆ ಈ ದುಷ್ಕೃತ್ಯ? ಬೆಂಗಳೂರು: ಒಂಬತ್ತನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಮಗುವಿಗೆ ಜನ್ಮ ನೀಡಿದ ಆಘಾತಕಾರಿ ಘಟನೆ ಶಿವಮೊಗ್ಗದಲ್ಲಿ ಸಂಭವಿಸಿದೆ. 14 ವರ್ಷದ ಬಾಲಕಿ ಹೊಟ್ಟೆನೋವೆಂದು ಕೆಲದಿನಗಳಿಂದ ಶಾಲೆಗೆ ರಜೆ ಹಾಕಿ ಮನೆಯಲ್ಲಿದ್ದಳು. ಎರಡು ದಿನಗಳ ಬಳಿಕ ಬಾಲಕಿ ಮನೆಯಲ್ಲೇ ಮಗುವಿಗೆ ಜನ್ಮ ನೀಡಿದ್ದು, ಕೂಡಲೇ ತಂದೆ ತಾಯಿ ಆಕೆಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅವಧಿ ಪೂರ್ವವಾಗಿ ಏಳು ತಿಂಗಳಲ್ಲೇ ಹೆರಿಗೆಯಾಗಿದ್ದು, ಸದ್ಯ ತಾಯಿ ಮತ್ತು ಆರೋಗ್ಯದಿಂದ ಇದ್ದಾರೆ ಎಂದು ತಿಳಿದುಬಂದಿದೆ. ತನ್ನ ಅಣ್ಣನಿಂದಲೇ ಅತ್ಯಾಚಾರಕ್ಕೊಳಗಾಗಿ ಬಾಲಕಿ

ಮಗುವಿಗೆ ಜನ್ಮ ನೀಡಿದ 9ನೇ ತರಗತಿ ಬಾಲಕಿ Read More »

ಮಾನವ ಜಿಪಿಎಸ್‌ ಕುಖ್ಯಾತಿಯ ಉಗ್ರ ಬಾಗು ಖಾನ್‌ ಎನ್‌ಕೌಂಟರ್‌ಗೆ ಬಲಿ

100ಕ್ಕೂ ಅಧಿಕ ಉಗ್ರರಿಗೆ ಒಳ ನುಸುಳುಲು ಸಹಾಯ ಮಾಡಿದ್ದ ಪಾತಕಿ ಶ್ರೀನಗರ: ನೂರಕ್ಕೂ ಅಧಿಕ ಉಗ್ರರಿಗೆ ಒಳನುಸುಳಲು ಸಹಾಯ ಮಾಡಿದ್ದ, ಉಗ್ರರ ಲೋಕದಲ್ಲಿ ಮಾನವ ಜಿಪಿಎಸ್‌ ಎಂದೇ ಕುಖ್ಯಾತನಾಗಿದ್ದ ಬಾಗು ಖಾನ್‌ ಎಂಬಾತನನ್ನು ಭದ್ರತಾ ಪಡೆ ಶನಿವಾರ ಎನ್‌ಕೌಂಟರ್‌ನಲ್ಲಿ ಸಾಯಿಸಿದೆ. ಇವನ ಜೊತೆಗೆ ಇನ್ನೂ ಓರ್ವ ಉಗ್ರ ಸತ್ತಿದ್ದಾನೆ. ಸಮಂದರ್‌ ಚಾಚಾ ಎಂಬ ಇನ್ನೊಂದು ಹೆಸರನ್ನು ಹೊಂದಿರುವ ಬಾಗು ಖಾನ್‌ 1995ರಿಂದೀಚೆಗೆ ಪಾಕ್‌ ಆಕ್ರಮಿತ ಕಾಶ್ಮೀರವನ್ನು ನೆಲೆ ಮಾಡಿಕೊಂಡಿದ್ದ. ನೌಶೇರಾದಲ್ಲಿ ಇಂದು ಬೆಳಗ್ಗೆ ಅವನನ್ನು ಭದ್ರತಾ ಪಡೆ

ಮಾನವ ಜಿಪಿಎಸ್‌ ಕುಖ್ಯಾತಿಯ ಉಗ್ರ ಬಾಗು ಖಾನ್‌ ಎನ್‌ಕೌಂಟರ್‌ಗೆ ಬಲಿ Read More »

ಜಪಾನ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಅದ್ದೂರಿ ಸ್ವಾಗತ

ವಾಣಿಜ್ಯ, ತಂತ್ರಜ್ಞಾನ ಅಭಿವೃದ್ಧಿ ನಿಟ್ಟಿನಲ್ಲಿ ಎರಡು ದಿನದ ಭೇಟಿ ಟೋಕಿಯೊ: ಎರಡು ದಿನಗಳ ಭೇಟಿಗಾಗಿ ಜಪಾನ್‌ಗೆ ಹೋಗಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಜಪಾನ್‌ನಲ್ಲಿ ಅದ್ದೂರಿಯಾಗಿ ಸ್ವಾಗತ ಕೋರಲಾಗಿದೆ. ಭಾರತ-ಜಪಾನ್ ಪಾಲುದಾರಿಕೆಯನ್ನು ಮುನ್ನಡೆಸಲು ಪ್ರಧಾನಿ ಮೋದಿಯವರು ಇಂದು ಸಂಜೆ ಜಪಾನ್ ಪ್ರಧಾನಿ ಶಿಗೇರು ಇಶಿಬಾ ಅವರೊಂದಿಗೆ ಚರ್ಚೆ ನಡೆಸಲಿದ್ದಾರೆ. ಪ್ರಧಾನಿ ಮೋದಿ ಅವರ ಈ ಭೇಟಿ ಎರಡೂ ದೇಶಗಳ ನಡುವಿನ ನಾಗರೀಕರು ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಬಲಪಡಿಸಲು ಒಂದು ಅವಕಾಶವಾಗಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ. ಆಗಸ್ಟ್ 29ರಿಂದ

ಜಪಾನ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಅದ್ದೂರಿ ಸ್ವಾಗತ Read More »

error: Content is protected !!
Scroll to Top