ದೇಶ

ಭಾರತದ ಉಪರಾಷ್ಟ್ರಪತಿಯಾಗಿ ಸಿ.ಪಿ. ರಾಧಾಕೃಷ್ಣನ್ ಆಯ್ಕೆ

ನವದೆಹಲಿ: ಭಾರತದ ನೂತನ ಉಪರಾಷ್ಟ್ರಪತಿಯಾಗಿ ಮಹಾರಾಷ್ಟ್ರದ ಹಾಲಿ ರಾಜ್ಯಪಾಲ ಸಿ.ಪಿ. ರಾಧಾಕೃಷ್ಣನ್ ಅವರು ಆಯ್ಕೆಯಾಗಿದ್ದಾರೆ. ಮಾಜಿ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಅವರು ತಮ್ಮ ಹುದ್ದೆಗೆ ನೀಡಿದ್ದ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಎನ್.ಡಿ.ಎ. ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ‌ರಾಧಾಕೃಷ್ಣನ್ ಅವರು ಸ್ಪಷ್ಟ ಬಹುಮತ ಪಡೆದು ಉಪರಾಷ್ಟ್ರಪತಿ ಸ್ಥಾನವನ್ನು ಅಲಂಕರಿಸಿದ್ದಾರೆ. ಭಾರತದ 15 ನೇ ಉಪರಾಷ್ಟ್ರಪತಿಯಾಗಿ ಆಯ್ಕೆಯಾಗಿರುವ ರಾಧಾಕೃಷ್ಣನ್ ಅವರಿಗೆ 452 ಮತಗಳು ಲಭಿಸಿದ್ದು, ಆವರು ತಮ್ಮ ಪ್ರತಿಸ್ಪರ್ಧಿ ಇಂಡಿ ಒಕ್ಕೂಟದ ಅಭ್ಯರ್ಥಿ, ಸುಪ್ರೀಂ ಕೋರ್ಟ್‌ನ ಮಾಜಿ ಜಡ್ಜ್ […]

ಭಾರತದ ಉಪರಾಷ್ಟ್ರಪತಿಯಾಗಿ ಸಿ.ಪಿ. ರಾಧಾಕೃಷ್ಣನ್ ಆಯ್ಕೆ Read More »

ಇಂದಿನಿಂದ ಏಷ್ಯಾ ಕಪ್‌ ಟಿ20 ಕ್ರಿಕೆಟ್‌ ಸಮರ

ದುಬೈ, ಅಬುಧಾಬಿ ಕ್ರೀಡಾಂಗಣದಲ್ಲಿ 20 ದಿನ 8 ದೇಶಗಳು, 19 ಪಂದ್ಯ ದುಬೈ: ಏಷ್ಯಾ ಕಪ್‌ ಟಿ20 ಕ್ರಿಕೆಟ್‌ ಟೂರ್ನಿ ಇಂದಿನಿಂದ ಆರಂಭವಾಗಲಿದೆ. ದುಬೈ, ಅಬುಧಾಬಿ ಕ್ರೀಡಾಂಗಣದಲ್ಲಿ 20 ದಿನಗಳ ಕಾಲ 8 ದೇಶಗಳು ಒಟ್ಟು 19 ಪಂದ್ಯಗಳನ್ನು ಆಡಲಿವೆ. ಉದ್ಘಾಟನಾ ಪಂದ್ಯ ಅಫ್ಘಾನಿಸ್ತಾನ ಮತ್ತು ಹಾಂಕಾಂಗ್‌ ಮಧ್ಯೆ ನಡೆದರೆ ಸೆ.28ರಂದು ಫೈನಲ್‌ ಪಂದ್ಯ ನಡೆಯಲಿದೆ. ಹಾಲಿ ಚಾಂಪಿಯನ್‌ ಭಾರತ ಬುಧವಾರ ಯುಎಇ ವಿರುದ್ಧ ತನ್ನ ಮೊದಲ ಪಂದ್ಯವಾಡಲಿದೆ. ತಂಡಗಳನ್ನು 2 ಗುಂಪುಗಳನ್ನಾಗಿ ವಿಂಗಡಿಸಲಾಗಿದ್ದು ಭಾರತ, ಪಾಕಿಸ್ತಾನ,

ಇಂದಿನಿಂದ ಏಷ್ಯಾ ಕಪ್‌ ಟಿ20 ಕ್ರಿಕೆಟ್‌ ಸಮರ Read More »

ಇಂದು ಉಪರಾಷ್ಟ್ರಪತಿ ಚುನಾವಣೆ : ರಾಧಾಕೃಷ್ಣನ್‌-ಸುದರ್ಶನ್‌ ರೆಡ್ಡಿ ನಡುವೆ ಸ್ಪರ್ಧೆ

ಎನ್‌ಡಿಎ ಅಭ್ಯರ್ಥಿ ರಾಧಾಕೃಷ್ಣನ್‌ ಗೆಲುವು ಬಹುತೇಕ ಖಚಿತ ನವದೆಹಲಿ: ಜಗದೀಪ್ ಧನ್‌ಕರ್ ರಾಜೀನಾಮೆಯಿಂದ ತೆರವಾಗಿರುವ ಉಪರಾಷ್ಟ್ರಪತಿ ಸ್ಥಾನಕ್ಕೆ ಇಂದು (ಸೆ.9) ಚುನಾವಣೆ ನಡೆಯಲಿದೆ. ಆಡಳಿತ-ವಿರೋಧ ಪಕ್ಷದ ನಡುವೆ ಪ್ರತಿಷ್ಠೆಯ ಕಣವಾಗಿದ್ದು, ಎನ್‌ಡಿಎ ಅಭ್ಯರ್ಥಿ ಮಹಾರಾಷ್ಟ್ರದ ಹಾಲಿ ರಾಜ್ಯಪಾಲ ಸಿ.ಪಿ.ರಾಧಾಕೃಷ್ಣನ್, ಇಂಡಿ ಒಕ್ಕೂಟದ ಅಭ್ಯರ್ಥಿ ಮತ್ತು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬಿ.ಸುದರ್ಶನ್ ರೆಡ್ಡಿ ಮಧ್ಯೆ ಸ್ಪರ್ಧೆ ಏರ್ಪಟ್ಟಿದೆ. ಮಂಗಳವಾರ ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ. ಲೋಕಸಭೆ ಹಾಗೂ ರಾಜ್ಯಸಭೆ ಸದಸ್ಯರು ಉಪರಾಷ್ಟ್ರಪತಿ ಚುನಾವಣೆಯಲ್ಲಿ

ಇಂದು ಉಪರಾಷ್ಟ್ರಪತಿ ಚುನಾವಣೆ : ರಾಧಾಕೃಷ್ಣನ್‌-ಸುದರ್ಶನ್‌ ರೆಡ್ಡಿ ನಡುವೆ ಸ್ಪರ್ಧೆ Read More »

ಮಲ್ಲಿಗೆ ಮುಡಿದದ್ದಕ್ಕೆ 1 ಲ.ರೂ. ದಂಡ ತೆತ್ತ ನಟಿ!

ಸಿಡ್ನಿ: ದಕ್ಷಿಣ ಭಾರತದ ಜನಪ್ರಿಯ ನಟಿ ನವ್ಯಾ ನಾಯರ್‌ ಮಲ್ಲಿಗೆ ಮುಡಿದ ಕಾರಣಕ್ಕೆ 1 ಲಕ್ಷ ರೂ.ಗೂ ಅಧಿಕ ಮೊತ್ತವನ್ನು ದಂಡದ ರೂಪದಲ್ಲಿ ತೆರಬೇಕಾಗಿ ಬಂದಿದೆ. ಆದರೆ ದಂಡ ಹಾಕಿರುವುದು ಭಾರತದಲ್ಲಿ ಅಲ್ಲ, ಬದಲಾಗಿದೆ ಆಸ್ಟ್ರೇಲಿಯಲ್ಲಿ. ಇತ್ತೀಚೆಗೆ ಆಸ್ಟ್ರೇಲಿಯದ ಮಲಯಾಳಂ ಸಂಘಟನೆಯವರು ಏರ್ಪಡಿಸಿದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವ ಸಲುವಾಗಿ ನವ್ಯಾ ನಾಯರ್‌ ಹೋಗಿದ್ದರು. ಮೆಲ್ಬೋರ್ನ್ ಏರ್‌ಪೋರ್ಟ್‌ಗೆ ಬಂದಿಳಿದ ನಟಿ ನವ್ಯಾ ನಾಯರ್‌ಗೆ ಅಲ್ಲಿನ ಅಧಿಕಾರಿಗಳು 1.14 ಲ.ರೂ. ದಂಡ ಹಾಕಿದ್ದಾರೆ. ಕೇರಳದ ಕೊಚ್ಚಿಯಿಂದ ನಟಿ ನವ್ಯಾ ನಾಯರ್ ಓಣಂ

ಮಲ್ಲಿಗೆ ಮುಡಿದದ್ದಕ್ಕೆ 1 ಲ.ರೂ. ದಂಡ ತೆತ್ತ ನಟಿ! Read More »

ರಕ್ತ ವರ್ಣದಲ್ಲಿ ಕಾಣಿಸಿದ ಚಂದಿರ

ಪೂರ್ಣ ಖಗ್ರಾಸ ಚಂದ್ರ ಗ್ರಹಣವನ್ನು ಕಣ್ತಂಬಿಕೊಂಡ ಜನ ಬೆಂಗಳೂರು : ಭಾನುವಾರ ರಾತ್ರಿ ನಭೋಮಂಡಲದಲ್ಲಿ ನಡೆದ ರಕ್ತ ಚಂದಿರನ ಚಮತ್ಕಾರವನ್ನು ಜಗತ್ತಿನಾದ್ಯಂತ ಜನರು ಕಣ್ತುಂಬಿಕೊಂಡು ಖುಷಿಪಟ್ಟರು. ಚಂದ್ರ ಭಾನುವಾರ ಅಕ್ಷರಶಃ ಬೆಂಕಿಚೆಂಡಿನಂತೆ ಗೋಚರಿಸಿತು. ಅತ್ಯಂತ ಅಪರೂಪದ, ಸುದೀರ್ಘ 3 ಗಂಟೆಗೂ ಹೆಚ್ಚು ಕಾಲ ರಾಹುಗ್ರಸ್ಥ ಚಂದ್ರ ಗ್ರಹಣ ಗೋಚರಿಸಿತು. ವರ್ಷದ 2ನೇ ಮತ್ತು ಕೊನೆಯ ಚಂದ್ರಗ್ರಹಣಕ್ಕೆ ಇಡೀ ವಿಶ್ವ ಸಾಕ್ಷಿಯಾಯಿತು. ಸೂರ್ಯ, ಭೂಮಿ ಮತ್ತು ಚಂದ್ರರು ಒಂದೇ ಸಾಲಿನಲ್ಲಿ ಬಂದಿದ್ದ ಈ ನೆರಳು ಬೆಳಕಿನಾಟ ಜನರನ್ನು ನಿಬ್ಬೆರಗುಗೊಳಿಸಿತು.

ರಕ್ತ ವರ್ಣದಲ್ಲಿ ಕಾಣಿಸಿದ ಚಂದಿರ Read More »

ಇಂದು ಚಂದ್ರ ಗ್ರಹಣ : ಬರೋಬ್ಬರಿ 82 ನಿಮಿಷ ಕಡುಕೆಂಪು ಬಣ್ಣದಲ್ಲಿ ಕಂಗೊಳಿಸಲಿರುವ ಚಂದ್ರಮ

ಅಪರೂಪದ ಖಗೋಲ ವಿದ್ಯಮಾನವನ್ನು ವೀಕ್ಷಿಸಲು ಜಗತ್ತಿನಾದ್ಯಂತ ಕುತೂಹಲ ಮಂಗಳೂರು : ಇಂದು ರಾತ್ರಿ ಪೂರ್ಣ ಖಗ್ರಾಸ ಚಂದ್ರಗ್ರಹಣ ಸಂಭವಿಸಲಿದ್ದು, ಈ ಖಗೋಲ ವಿದ್ಯಮಾನವನ್ನು ವೀಕ್ಷಿಸಲು ಜಗತ್ತಿನಾದ್ಯಂತ ಖಗೋಲ ಆಸಕ್ತರು ಬಹಳ ಕುತೂಹಲದಿಂದ ಕಾಯುತ್ತಿದ್ದಾರೆ. ಇಂದಿನ ಚಂದ್ರ ಗ್ರಹಣದ ವೇಳೆ ಚಂದ್ರ ಬರೋಬ್ಬರಿ 82 ನಿಮಿಷಗಳಷ್ಟು ಹೊತ್ತು ಕಡುಕೆಂಪು ಬಣ್ಣದಲ್ಲಿ ಗೋಚರಿಸಲಿದ್ದಾನೆ. ಹೀಗಾಗಿ ಈ ಚಂದ್ರಗ್ರಹಣವನ್ನು ರಕ್ತಚಂದನ ಗ್ರಹಣ ಎಂದೂ ಕರೆಯುತ್ತಾರೆ. ಇದು ಒಂದು ಅಪರೂಪದ ಖಗೋಲ ವಿದ್ಯಮಾನವಾಗಿದೆ. ಇಷ್ಟು ದೀರ್ಘ ಹೊತ್ತು ಚಂದ್ರ ಕೆಂಬಣ್ಣದಲ್ಲಿ ಕಾಣುವುದು ಬಹಳ

ಇಂದು ಚಂದ್ರ ಗ್ರಹಣ : ಬರೋಬ್ಬರಿ 82 ನಿಮಿಷ ಕಡುಕೆಂಪು ಬಣ್ಣದಲ್ಲಿ ಕಂಗೊಳಿಸಲಿರುವ ಚಂದ್ರಮ Read More »

ಪರೀಕ್ಷೆ ಬರೆಯಲು ಹೆಲಿಕಾಪ್ಟರ್‌ನಲ್ಲಿ ಬಂದ ವಿದ್ಯಾರ್ಥಿಗಳು!

ಮಳೆಯಿಂದ ರಸ್ತೆ ಬಂದ್‌ ಆದ ಕಾರಣ ಬಾಡಿಗೆ ಹೆಲಿಕಾಪ್ಟರ್‌ ಪ್ರಯಾಣ ಉತ್ತರಾಖಂಡ: ಉತ್ತರ ಭಾರತಾದ್ಯಂತ ಕಳೆದ ಒಂದು ತಿಂಗಳಿನಿಂದ ಭಾರಿ ಮಳೆಯಾಗುತ್ತಿದ್ದು, ಅನೇಕ ಅನಾಹುತಗಳನ್ನು ಸೃಷ್ಟಿಸಿದೆ. ಉತ್ತರಾಖಂಡದಲ್ಲಿ ಭೂಕುಸಿತ, ರಸ್ತೆ ಬಂದ್ ಮತ್ತಿತರ ಅನಾಹುತಗಳಿಂದ ಜನರು ಸಮಸ್ಯೆ ಎದುರಿಸುತ್ತಿದ್ದಾರೆ. ಈ ನಡುವೆ ಪಿಥೋರ್​ಗಢದ ಪರೀಕ್ಷಾ ಕೇಂದ್ರದಲ್ಲಿ ಬಿ.ಇಡಿ ಪರೀಕ್ಷೆ ನಿಗದಿಯಾಗಿತ್ತು. ಯಾವ ಕಾರಣಕ್ಕೂ ಈ ಪರೀಕ್ಷೆಯಿಂದ ತಪ್ಪಿಸಿಕೊಳ್ಳಬಾರದು ಎಂದು ನಾಲ್ವರು ವಿದ್ಯಾರ್ಥಿಗಳು ಖಾಸಗಿ ಹೆಲಿಕಾಪ್ಟರ್‌ ಬಾಡಿಗೆಗೆ ಪಡೆದು ಪರೀಕ್ಷಾ ಕೇಂದ್ರಕ್ಕೆ ಬಂದಿರುವುದು ಈಗ ಸುದ್ದಿಯಾಗಿದೆ. ಮಳೆಯಿಂದಾಗಿ ಉತ್ತರಾಖಂಡದಲ್ಲಿ

ಪರೀಕ್ಷೆ ಬರೆಯಲು ಹೆಲಿಕಾಪ್ಟರ್‌ನಲ್ಲಿ ಬಂದ ವಿದ್ಯಾರ್ಥಿಗಳು! Read More »

ನಾಳೆ ಖಗ್ರಾಸ ಚಂದ್ರ ಗ್ರಹಣ : 5.27 ಗಂಟೆ ನಭದಲ್ಲಿ ಬೆಳಕು-ನೆರಳಿನ ಕೌತುಕದಾಟ

ಸುಬ್ರಹ್ಮಣ್ಯ, ತಿರುಪತಿ ಸೇರಿ ದೇವಳಗಳಲ್ಲಿ ಪೂಜಾ ಸಮಯ ಬದಲಾವಣೆ ಬೆಂಗಳೂರು: ಭಾನುವಾರ ರಾತ್ರಿ ನಭದಲ್ಲಿ ಕೌತುಕದ ರಕ್ತಚಂದನ ಚಂದ್ರಗ್ರಹಣ ಸಂಭವಿಸಲಿದೆ. ಸುದೀರ್ಘ 5 ಗಂಟೆ 27 ನಿಮಿಷಗಳ ಕಾಲ ನಡೆಯುವ ಭೂಮಿ, ಸೂರ್ಯ ಹಾಗೂ ಚಂದ್ರನ ನಡುವಿನ ನೆರಳಿನಾಟಕ್ಕೆ ಭಾರತ ಕೂಡ ಸಾಕ್ಷಿಯಾಗಲಿದೆ. ನಾಳೆ ರಾತ್ರಿ ವರ್ಷದ ಎರಡನೇ ಮತ್ತು ಕೊನೆಯ ಚಂದ್ರಗ್ರಹಣ ಸಂಭವಿಸಲಿದೆ. ರಾತ್ರಿ ಚಂದ್ರ ಪೂರ್ತಿಯಾಗಿ ಭೂಮಿಯ ನೆರಳಿನಲ್ಲಿ ಬರುವ ಕಾರಣ ಖಗ್ರಾಸ ಚಂದ್ರಗ್ರಹಣ ಎಂದು ಇದನ್ನು ಕರೆಯುತ್ತಾರೆ. ಭೂಮಿಯು ಚಂದ್ರನ ಮೇಲೆ ನೇರವಾಗಿ

ನಾಳೆ ಖಗ್ರಾಸ ಚಂದ್ರ ಗ್ರಹಣ : 5.27 ಗಂಟೆ ನಭದಲ್ಲಿ ಬೆಳಕು-ನೆರಳಿನ ಕೌತುಕದಾಟ Read More »

ಡಿ.ಕೆ.ಶಿವಕುಮಾರ್‌ ದೇಶದ ಎರಡನೇ ಶ್ರೀಮಂತ ಸಚಿವ

1413 ಕೋ. ರೂ. ಸಂಪತ್ತು ಹೊಂದಿರುವ ಡಿಕೆಶಿ ನವದೆಹಲಿ: ಕರ್ನಾಟಕದ ಡಿಸಿಎಂ ಡಿ.ಕೆ. ಶಿವಕುಮಾರ್ ದೇಶದ ಎರಡನೇ ಶ್ರೀಮಂತ ಸಚಿವ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ವರದಿ ಹೇಳಿದೆ. ಕನಜಕಪುರ ವಿಧಾನಸಭೆ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಡಿಕೆಶಿ ಒಟ್ಟು ಆಸ್ತಿ 1413 ಕೋ. ರೂ. ಕೇಂದ್ರ ಸಚಿವರಾದ ಆಂಧ್ರದ ಟಿಡಿಪಿಯ 5705 ಕೋ. ರೂ. ಆಸ್ತಿಯೊಂದಿಗೆ ಪ್ರಥಮ ಸ್ಥಾನದಲ್ಲಿದ್ದಾರೆ. ಅವರು ಗುಂಟೂರು ಕ್ಷೇತ್ರದ ಸಂಸದರಾಗಿದ್ದಾರೆ. ರಾಜ್ಯ ವಿಧಾನಸಭೆಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರ ಸಚಿವರು ಚುನಾವಣೆ ಸಂದರ್ಭದಲ್ಲಿ

ಡಿ.ಕೆ.ಶಿವಕುಮಾರ್‌ ದೇಶದ ಎರಡನೇ ಶ್ರೀಮಂತ ಸಚಿವ Read More »

ಧರ್ಮಸ್ಥಳ ಪ್ರಕರಣವನ್ನು ಎನ್‌ಐಎ ತನಿಖೆಗೆ ವಹಿಸುತ್ತಾ ಕೇಂದ್ರ?

ಸ್ವಾಮೀಜಿಗಳ ನಿಯೋಗಕ್ಕೆ ಅಮಿತ್‌ ಶಾ ನೀಡಿದರು ಭರವಸೆ ಧರ್ಮಸ್ಥಳ: ಧರ್ಮಸ್ಥಳ ಪ್ರಕರಣದ ಎಲ್ಲ ಬೆಳವಣಿಗೆಗಳನ್ನು ನಾನೇ ಖುದ್ದಾಗಿ ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಈ ಬಗ್ಗೆ ಸಚಿವ ಸಂಪುಟ ನೇತೃತ್ವದಲ್ಲಿ ಸಭೆ ನಡೆಸುತ್ತೇವೆ. ಬಳಿಕ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಕರ್ನಾಟಕದ ಸ್ವಾಮೀಜಿಗಳ ನಿಯೋಗಕ್ಕೆ ಭರವಸೆ ನೀಡಿದ್ದಾರೆ. ಧರ್ಮಸ್ಥಳದ ಮೇಲಿನ ಅಪಪ್ರಚಾರ ಸಂಬಂಧಿತ ಎಲ್ಲ ಪ್ರಕರಣಗಳ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ (ಎನ್‌ಐಎ) ವಹಿಸಬೇಕೆಂದು ಆಗ್ರಹಿಸಿ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ, ಮಂಗಳೂರಿನ

ಧರ್ಮಸ್ಥಳ ಪ್ರಕರಣವನ್ನು ಎನ್‌ಐಎ ತನಿಖೆಗೆ ವಹಿಸುತ್ತಾ ಕೇಂದ್ರ? Read More »

error: Content is protected !!
Scroll to Top