ದೇಶ

ಗಡಿ ನುಸುಳಲು ಯತ್ನಿಸಿದ ಇಬ್ಬರು ಉಗ್ರರು ಎನ್‌ಕೌಂಟರ್‌ಗೆ ಬಲಿ

ಶ್ರೀನಗರ: ಜಮ್ಮು-ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಗುರೆಜ್ ಸೆಕ್ಟರ್‌ನ ಗಡಿ ನಿಯಂತ್ರಣಾ ರೇಖೆಯಲ್ಲಿ ಗಡಿ ನುಸುಳಲು ಯತ್ನಿಸಿದ ಇಬ್ಬರು ಉಗ್ರರನ್ನು ಭದ್ರತಾ ಪಡೆ ಹೊಡೆದುರುಳಿಸಿದೆ. ಉಗ್ರರ ಒಳನುಸುಳುವಿಕೆಯ ಬಗ್ಗೆ ಗುಪ್ತಚರ ಮಾಹಿತಿ ಆಧರಿಸಿ ಸೇನಾ ಸಿಬ್ಬಂದಿ ಮತ್ತು ಕಾಶ್ಮೀರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಉಗ್ರರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಈ ಹಿನ್ನೆಲೆ ಭದ್ರತಾ ಪಡೆ ಕೂಡ ಪ್ರತಿದಾಳಿ ನಡೆಸಿ ಇಬ್ಬರು ಉಗ್ರರನ್ನು ಎನ್‌ಕೌಂಟರ್ ಮಾಡಿದ್ದಾರೆ ಎಂದು ಭಾರತೀಯ ಸೇನೆಯ ಚಿನಾರ್ ಕಾರ್ಪ್ಸ್ ಎಕ್ಸ್‌ನಲ್ಲಿ […]

ಗಡಿ ನುಸುಳಲು ಯತ್ನಿಸಿದ ಇಬ್ಬರು ಉಗ್ರರು ಎನ್‌ಕೌಂಟರ್‌ಗೆ ಬಲಿ Read More »

ಲ್ಯಾಂಡಿಂಗ್‌ ಸಮಸ್ಯೆ : ಬೆಂಗಳೂರಿಗೆ ಹೋದ ಮಂಗಳೂರಿನಲ್ಲಿ ಇಳಿಯಬೇಕಾದ ವಿಮಾನ

ತಾಂತ್ರಿಕ ದೋಷದಿಂದ ಮಂಗಳೂರಿನಲ್ಲಿ ಇಳಿಯಲು ಸಾಧ್ಯವಾಗದೆ ಪ್ರಯಾಣಿಕರು ಹೈರಾಣ ಮಂಗಳೂರು: ದುಬೈನಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದ ಏರ್‌ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಪರಿಣಾಮ ಬೆಂಗಳೂರಲ್ಲಿ ಲ್ಯಾಂಡ್‌ ಆದ ಘಟನೆ ಸೋಮವಾರ ಸಂಭವಿಸಿದೆ. ಮಂಗಳೂರಿನಲ್ಲಿ ಮೂರು ಬಾರಿ ಲ್ಯಾಂಡಿಂಗ್‌ಗೆ ಪ್ರಯತ್ನಪಟ್ಟರೂ ವಿಫಲವಾದ ಬಳಿಕ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಿ ಸುರಕ್ಷಿತವಾಗಿ ಲ್ಯಾಂಡ್‌ ಆಗಿದೆ. ವಿಮಾನದಲ್ಲಿ 157 ಮಂದಿ ಪ್ರಯಾಣಿಕರು ಮತ್ತು ಸಿಬ್ಬಂದಿ ಇದ್ದರು. ದುಬೈನಿಂದ ಮಂಗಳೂರಿಗೆ ಭಾನುವಾರ ರಾತ್ರಿ ಹೊರಟಿತ್ತು.

ಲ್ಯಾಂಡಿಂಗ್‌ ಸಮಸ್ಯೆ : ಬೆಂಗಳೂರಿಗೆ ಹೋದ ಮಂಗಳೂರಿನಲ್ಲಿ ಇಳಿಯಬೇಕಾದ ವಿಮಾನ Read More »

ಆರ್‌ಎಸ್‌ಎಸ್‌ ಶತಮಾನೋತ್ಸವ ಸಂಭ್ರಮ : ಇಂದಿನಿಂದ ಉಪನ್ಯಾಸ ಸರಣಿ

ವರ್ಷವಿಡೀ ದೇಶಾದ್ಯಂತ ನಡೆಯಲಿದೆ ವಿಶೇಷ ಕಾರ್ಯಕ್ರಮ ನವದೆಹಲಿ : ರಾಷ್ಟ್ರೀಯ ಸ್ವಯಂಸೇವಕ ಸಂಘ ಶತಮಾನೋತ್ಸವದ ಸಂಭ್ರದಲ್ಲಿದ್ದು, ಇದರಂಗವಾಗಿ ದೇಶಾದ್ಯಂತ ಅನೇಕ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಆಗಸ್ಟ್ 26ರಿಂದ 28 ರವರೆಗೆ ದೆಹಲಿಯಲ್ಲಿ ದೊಡ್ಡ ಕಾರ್ಯಕ್ರಮ ಆಯೋಜಿಸಲಾಗಿದೆ. “ಆರ್‌ಎಸ್‌ಎಸ್‌ನ 100 ವರ್ಷಗಳ ಪಯಣ: ಹೊಸ ದಿಗಂತಗಳು” ಎಂಬ ಶೀರ್ಷಿಕೆಯಲ್ಲಿ 3 ದಿನಗಳ ಉಪನ್ಯಾಸ ಸರಣಿ ಇಂದಿನಿಂದ 28ರ ವರೆಗೆ ದೆಹಲಿಯಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಮಾಧ್ಯಮ, ರಾಜತಾಂತ್ರಿಕತೆ, ಧರ್ಮ ಮತ್ತು ಶೈಕ್ಷಣಿಕ ಕ್ಷೇತ್ರಗಳಂತಹ 17 ಕ್ಷೇತ್ರಗಳ ಗಣ್ಯ ವ್ಯಕ್ತಿಗಳೊಂದಿಗೆ

ಆರ್‌ಎಸ್‌ಎಸ್‌ ಶತಮಾನೋತ್ಸವ ಸಂಭ್ರಮ : ಇಂದಿನಿಂದ ಉಪನ್ಯಾಸ ಸರಣಿ Read More »

ಎಲ್ಲ ರೀತಿಯ ಕ್ರಿಕೆಟ್‌ಗೆ ಚೇತೇಶ್ವರ ಪೂಜಾರ ಗುಡ್‌ಬೈ

ದಿಢೀರ್‌ ಎಂದು ನಿವೃತ್ತಿ ಘೋಷಿಸಿದ ಪರಿಪೂರ್ಣ ಟೆಸ್ಟ್‌ ಬ್ಯಾಟ್ಸ್‌ಮನ್‌ ಮುಂಬೈ: ಪರಿಪೂರ್ಣ ಟೆಸ್ಟ್‌ ಆಟದ ಕೊನೆಯ ಕೊಂಡಿ ಎಂದೇ ಅರಿಯಲ್ಪಡುತ್ತಿದ್ದ ಪ್ರತಿಭಾವಂತ ಟೆಸ್ಟ್‌ ಬ್ಯಾಟ್ಸ್‌ಮನ್‌ ಚೇತೇಶ್ವರ ಪೂಜಾರ ಎಲ್ಲ ಮಾದರಿಯ ಕ್ರಿಕೆಟ್‌ಗೆ ಇಂದು ನಿವೃತ್ತಿ ಘೋಷಿಸಿ ಕ್ರಿಕೆಟ್‌ ಅಭಿಮಾನಿಗಳಿಗೆ ಆಘಾತ ನೀಡಿದ್ದಾರೆ. ಈ ವರ್ಷ ದಿಗ್ಗಜರಾದ ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ, ರವಿಚಂದ್ರನ್‌ ಅಶ್ವಿನ್‌ ಟೆಸ್ಟ್‌ ಕ್ರಿಕೆಟ್‌ಗೆ ಗುಡ್‌ ಬೈ ಹೇಳಿದ ಬಳಿಕ ಈಗ ಪೂಜಾರ ಎಲ್ಲ ಮಾದರಿಯ ಕ್ರಿಕೆಟ್‌ಗೆ ದಿಢೀರ್‌ ಎಂದು ನಿವೃತ್ತಿ ಘೋಷಿಸಿದ್ದಾರೆ. ಈ

ಎಲ್ಲ ರೀತಿಯ ಕ್ರಿಕೆಟ್‌ಗೆ ಚೇತೇಶ್ವರ ಪೂಜಾರ ಗುಡ್‌ಬೈ Read More »

ಸಿದ್ದರಾಮಯ್ಯ ದೇಶದ ಮೂರನೇ ಅತಿ ಶ್ರೀಮಂತ ಮುಖ್ಯಮಂತ್ರಿ

ಎಡಿಆರ್‌ ಪ್ರಕಟಿಸಿದ ಪಟ್ಟಿಯಲ್ಲಿದೆ ಮುಖ್ಯಮಂತ್ರಿಗಳ ಸಂಪತ್ತಿನ ಕುತೂಹಲಕಾರಿ ಮಾಹಿತಿ ಬೆಂಗಳೂರು: ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ದೇಶದ ಮೂರನೇ ಅತ್ಯಂತ ಶ್ರೀಮಂತ ಮುಖ್ಯಮಂತ್ರಿ. ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಈ ಮಾಹಿತಿಯಿದೆ. ದೇಶದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿಗಳ ಪಟ್ಟಿಯನ್ನು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಬಿಡುಗಡೆ ಮಾಡಿದ್ದು, ಎಲ್ಲ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ 30 ಹಾಲಿ ಮುಖ್ಯಮಂತ್ರಿಗಳ ಆಸ್ತಿ ಮಾಹಿತಿ ಇದರಲ್ಲಿದೆ. ಮುಖ್ಯಮಂತ್ರಿಗಳು ಚುನಾವಣೆ ಸಮಯದಲ್ಲಿ ಸಲ್ಲಿಸಿರುವ ಪ್ರಮಾಣಪತ್ರಗಳ ಆಧಾರದಲ್ಲೇ ಅಸೋಸಿಯೇಷನ್ ಫಾರ್

ಸಿದ್ದರಾಮಯ್ಯ ದೇಶದ ಮೂರನೇ ಅತಿ ಶ್ರೀಮಂತ ಮುಖ್ಯಮಂತ್ರಿ Read More »

ಬೀದಿನಾಯಿಗಳ ಸ್ಥಳಾಂತರ : ರಾಜ್ಯಗಳಿಗೆ ಸುಪ್ರೀಂ ಕೋರ್ಟ್‌ ನಿರ್ದೇಶನ

ಸಾರ್ವಜನಿಕ ಸ್ಥಳಗಳಲ್ಲಿ ನಾಯಿಗಳಿಗೆ ಆಹಾರ ನೀಡಬಾರದೆಂದು ಆದೇಶ ನವದೆಹಲಿ : ಬೀದಿನಾಯಿಗಳನ್ನು ಹಿಡಿದು ಆಶ್ರಯತಾಣಗಳಿಗೆ ಬಿಡುವಂತೆ ಇತ್ತೀಚೆಗೆ ಆದೇಶ ಹೊರಡಿಸಿದ್ದ ಸುಪ್ರೀಂ ಕೋರ್ಟ್ ಈ ಆದೇಶಕ್ಕೆ ತುಸು ಮಾರ್ಪಾಡು ಮಾಡಿ ರೇಬೀಸ್ ಇರುವ ನಾಯಿಗಳನ್ನು ಹೊರತುಪಡಿಸಿ ಎಲ್ಲ ಬೀದಿನಾಯಿಗಳನ್ನು ಸ್ಥಳಾಂತರಿಸುವಂತೆ ಆದೇಶಿಸಿದೆ. ಈ ಕುರಿತಾಗಿ ಸೂಕ್ತ ಕ್ರಮ ಕೈಗೊಳ್ಳುವಂತೆ ಎಲ್ಲ ರಾಜ್ಯಗಳಿಗೂ ನಿರ್ದೇಶನ ನೀಡಲಾಗಿದೆ. ಪ್ರತಿ ವಾರ್ಡ್‌ನಲ್ಲಿ ಆಹಾರ ನೀಡುವ ಪ್ರದೇಶಗಳನ್ನು ಗುರುತಿಸಲು ಪುರಸಭೆ ಅಧಿಕಾರಿಗಳಿಗೆ ಸೂಚನೆ ನೀಡಬೇಕು. ಇತರ ಪ್ರದೇಶಗಳಲ್ಲಿ ನಾಯಿಗಳಿಗೆ ಆಹಾರ ನೀಡುವಂತಿಲ್ಲ. ಸಾಮಾನ್ಯ

ಬೀದಿನಾಯಿಗಳ ಸ್ಥಳಾಂತರ : ರಾಜ್ಯಗಳಿಗೆ ಸುಪ್ರೀಂ ಕೋರ್ಟ್‌ ನಿರ್ದೇಶನ Read More »

ಸಂಸತ್ತಿನಲ್ಲಿ ಮತ್ತೆ ಭದ್ರತಾ ಲೋಪ : ಗೋಡೆ ಹಾರಿ ಒಳನುಗ್ಗಿದ ವ್ಯಕ್ತಿ

ಮರ ಏರಿ ಆವರಣದೊಳಗೆ ಜಿಗಿದು ಒಳ ನುಗ್ಗಿದ್ದ ಆಗಂತುಕನ ತೀವ್ರ ವಿಚಾರಣೆ ನವದೆಹಲಿ : ಹೊಸ ಸಂಸತ್ ಭವನದಲ್ಲಿ ಮತ್ತೊಮ್ಮೆ ಭದ್ರತಾ ವೈಫಲ್ಯ ಸಂಭವಿಸಿದೆ. ವ್ಯಕ್ತಿಯೊಬ್ಬ ಮರವನ್ನು ಬಳಸಿ ಗೋಡೆ ದಾಟಿ ಸಂಸತ್ತಿನ ಆವರಣ ಪ್ರವೇಶಿಸಿದ್ದಾನೆ. ಈ ಘಟನೆ ಬೆಳಗ್ಗೆ 6.30ಕ್ಕೆ ನಡೆದಿದ್ದು, ಆತ ರೈಲು ಭವನ ಮೂಲಕವಾಗಿ ಗರುಡ ದ್ವಾರದ ತನಕ ತಲುಪಿದ್ದಾನೆ. ಅಲ್ಲಿದ್ದ ಭದ್ರತಾ ಸಿಬ್ಬಂದಿ ಅವನನ್ನು ಹಿಡಿದು ಪ್ರಶ್ನಿಸಿ ಬಳಿಕ ಬಂಧಿಸಿದ್ದಾರೆ. ಆತನನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಂಸತ್ತಿನ ಮುಂಗಾರು

ಸಂಸತ್ತಿನಲ್ಲಿ ಮತ್ತೆ ಭದ್ರತಾ ಲೋಪ : ಗೋಡೆ ಹಾರಿ ಒಳನುಗ್ಗಿದ ವ್ಯಕ್ತಿ Read More »

ಮಂಗಳಮುಖಿಯನ್ನೂ ಬಿಡದ ಯುವ ಕಾಂಗ್ರೆಸ್‌ ರಾಜ್ಯಾಧ್ಯಕ್ಷ!

ಕಿರುಕುಳ ಆರೋಪ ಹೊತ್ತು ರಾಜೀನಾಮೆ ನೀಡಿರುವ ಕಾಂಗ್ರೆಸ್‌ ಯುವ ನಾಯಕನ ಇನ್ನಷ್ಟು ಕರ್ಮಕಾಂಡಗಳು ಬಯಲು ತಿರುವನಂತಪುರಂ: ಮಲಯಾಳಂ ನಟಿ ರಿನಿ ಆನ್ ಜಾರ್ಜ್ ಅವರಿಗೆ ಕಿರುಕುಳ ನೀಡಿದ ಆರೋಪ ಹೊತ್ತು ಕೇರಳ ಯುವ ಕಾಂಗ್ರೆಸ್‌ ರಾಜ್ಯಾಧ್ಯಕ್ಷ ಪದವಿಗೆ ಗುರುವಾರ ರಾಜೀನಾಮೆ ನೀಡಿರುವ ಶಾಸಕ ರಾಹುಲ್‌ ಮಮಕೂಟತ್ತಿಲ್‌ ತೃತೀಯ ಲಿಂಗಿಗೂ ಲೈಂಗಿಕ ಕಿರುಕುಳ ನೀಡಿದ ವಿಚಾರ ಬೆಳಕಿಗೆ ಬಂದಿದೆ. ನಟಿ ರಿನಿ ಲೈಂಗಿಕ ಕಿರುಕುಳ ಆರೋಪ ಮಾಡಿದ ಬಳಿಕ ಇನ್ನೂ ಹಲವು ಮಹಿಳೆಯರು ರಾಹುಲ್‌ ಮಮಕೂಟತ್ತಿಲ್‌ನ ಕಿರುಕುಳದ ಬಗ್ಗೆ

ಮಂಗಳಮುಖಿಯನ್ನೂ ಬಿಡದ ಯುವ ಕಾಂಗ್ರೆಸ್‌ ರಾಜ್ಯಾಧ್ಯಕ್ಷ! Read More »

ರಾಷ್ಟ್ರೀಯ ಹೆದ್ದಾರಿ, ಎಕ್ಸ್‌ಪ್ರೆಸ್‌ವೇಗಳಲ್ಲಿ ದ್ವಿಚಕ್ರ ವಾಹನಗಳಿಗೆ ಟೋಲ್ ಇಲ್ಲ

ಬೈಕ್‌, ಸ್ಕೂಟರ್‌ಗಳಿಗೆ ಟೋಲ್‌ ವಿಧಿಸಲಾಗುತ್ತದೆ ಎನ್ನುವುದು ಬರೀ ವದಂತಿ ನವದೆಹಲಿ: ದೇಶಾದ್ಯಂತ ಎಲ್ಲ ರಾಷ್ಟ್ರೀಯ ಹೆದ್ದಾರಿಗಳು ಮತ್ತು ಎಕ್ಸ್‌ಪ್ರೆಸ್‌ವೇಗಳಲ್ಲಿ ದ್ವಿಚಕ್ರ ವಾಹನಗಳಿಗೆ ಟೋಲ್ ಶುಲ್ಕ ಪಾವತಿಸುವುದರಿಂದ ವಿನಾಯಿತಿ ನೀಡಲಾಗಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ದೃಢಪಡಿಸಿದೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ದ್ವಿಚಕ್ರ ವಾಹನಗಳ ಮೇಲೆ ಶುಲ್ಕ ವಿಧಿಸಲು ಯೋಜಿಸಿದೆ ಎಂಬ ಸಾಮಾಜಿಕ ಮಾಧ್ಯಮಗಳ ವದಂತಿಗಳ ಹಿನ್ನೆಲೆಯಲ್ಲಿ ಈ ಸ್ಪಷ್ಟೀಕರಣ ನೀಡಲಾಗಿದೆ. ರಾಷ್ಟ್ರೀಯ ಹೆದ್ದಾರಿ ಶುಲ್ಕ ನಿಯಮಗಳು, 2008ರ ಪ್ರಕಾರ ನಾಲ್ಕು ಚಕ್ರಗಳು ಮತ್ತು

ರಾಷ್ಟ್ರೀಯ ಹೆದ್ದಾರಿ, ಎಕ್ಸ್‌ಪ್ರೆಸ್‌ವೇಗಳಲ್ಲಿ ದ್ವಿಚಕ್ರ ವಾಹನಗಳಿಗೆ ಟೋಲ್ ಇಲ್ಲ Read More »

ಮತಕಳ್ಳತನ ಸಿಐಟಿ ತನಿಖೆ ಕೋರಿ ಸುಪ್ರೀಂ ಕೋರ್ಟ್‌ಗೆ ಪಿಐಎಲ್‌ ಸಲ್ಲಿಕೆ

ಮಾಜಿ ನ್ಯಾಯಾಧೀಶರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಲು ಆಗ್ರಹ ನವದೆಹಲಿ: ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಬೆಂಗಳೂರು ಸೆಂಟ್ರಲ್‌ನ ಮಹದೇವಪುರ ವಿಧಾನಸಭಾ ಕ್ಷೇತ್ರ ಮತ್ತು ಇತರ ಕ್ಷೇತ್ರಗಳಲ್ಲಿ ಮತಗಳ್ಳತನ ನಡೆದಿದೆ ಎಂಬ ರಾಹುಲ್ ಗಾಂಧಿ ಆರೋಪ ಸಂಬಂಧ ತನಿಖೆ ನಡೆಸಲು ಮಾಜಿ ನ್ಯಾಯಾಧೀಶರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಬೇಕೆಂದು ಕೋರಿ ವಕೀಲ ಮತ್ತು ಕಾಂಗ್ರೆಸ್ ಸದಸ್ಯ ರೋಹಿತ್ ಪಾಂಡೆ ಎಂಬವರು ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಸಲ್ಲಿಸಿದ್ದಾರೆ. ಅತ್ಯಂತ ಸೂಕ್ಷ್ಮ ಮತ್ತು

ಮತಕಳ್ಳತನ ಸಿಐಟಿ ತನಿಖೆ ಕೋರಿ ಸುಪ್ರೀಂ ಕೋರ್ಟ್‌ಗೆ ಪಿಐಎಲ್‌ ಸಲ್ಲಿಕೆ Read More »

error: Content is protected !!
Scroll to Top