ದೇಶ

₹100 ಬೆಲೆಯ ಔಷಧಿ ಈಗ ಕೇವಲ 15 ರೂಪಾಯಿಗೆ ಲಭ್ಯ ; ಕೇಂದ್ರ ಸರ್ಕಾರ ಮಹತ್ವದ ಘೋಷಣೆ

ನವದೆಹಲಿ : ಸ್ವಾತಂತ್ರ್ಯ ದಿನದಂದು ಪ್ರಧಾನಿ ನರೇಂದ್ರ ಮೋದಿ ಮತ್ತೊಂದು ಗುಡ್ ನ್ಯೂಸ್ ನೀಡಿದ್ದಾರೆ. ಕಡಿಮೆ ಬೆಲೆಗೆ ಔಷಧಗಳನ್ನು ಮಾರುವ ಮೆಡಿಕಲ್ ಶಾಪ್‌ಗಳನ್ನು ದೇಶಾದ್ಯಂತ ತೆರೆಯಲಾಗುವುದು ಎಂದು ಘೋಷಿಸಿದ್ದಾರೆ. ಕೇಂದ್ರ ಸರ್ಕಾರ ಜನೌಷಧಿ ಕೇಂದ್ರ ಯೋಜನೆ ಮೂಲಕ ಮೆಡಿಕಲ್ ಶಾಪ್’ಗಳನ್ನ ತೆರೆಯುತ್ತಿರುವುದು ಗೊತ್ತೇ ಇದೆ. ಈ ಮೆಡಿಕಲ್ ಶಾಪ್’ಗಳಲ್ಲಿ ಕಡಿಮೆ ದರದಲ್ಲಿ ಔಷಧಗಳು ದೊರೆಯುತ್ತವೆ. ದೇಶದಾದ್ಯಂತ 25,000 ಜನೌಷಧಿ ಕೇಂದ್ರಗಳನ್ನ ತೆರೆಯಲಾಗುವುದು ಎಂದು ನರೇಂದ್ರ ಮೋದಿ ಘೋಷಿಸಿದ್ದಾರೆ. ಜನೌಷಧಿ ಕೇಂದ್ರಗಳು ದೇಶದ ಮಧ್ಯಮ ವರ್ಗದ ಜನರಿಗೆ ಹೊಸ […]

₹100 ಬೆಲೆಯ ಔಷಧಿ ಈಗ ಕೇವಲ 15 ರೂಪಾಯಿಗೆ ಲಭ್ಯ ; ಕೇಂದ್ರ ಸರ್ಕಾರ ಮಹತ್ವದ ಘೋಷಣೆ Read More »

ದೆಹಲಿ ಕೆಂಪು ಕೋಟೆಯಲ್ಲಿ 77ನೇ ಸ್ವಾತಂತ್ರ್ಯೋತ್ಸವ | ಪ್ರಧಾನಿಯವರಿಂದ ಧ್ವಜಾರೋಹಣ

ದೆಹಲಿ: ದೆಹಲಿಯ ಕೆಂಪು ಕೋಟೆಯಲ್ಲಿ ಆಯೋಜಿಸಿದ್ದ 77ನೇ ಸ್ವಾತಂತ್ರ್ಯೋತ್ಸವದಲ್ಲಿ ಪ್ರಧಾನಿ ನರೇಂದ್ರ ಮೋದಿ ಧ್ವಜಾರೋಹಣ ನೆರವೇರಿಸಿದರು. 77ನೇ ಸ್ವಾತಂತ್ರ್ಯ ದಿನದಂದು ರಾಜ್‌ಘಾಟ್‌ನಲ್ಲಿ ಮಹಾತ್ಮ ಗಾಂಧಿ ಪುತ್ಥಳಿಗೆ ಪ್ರಧಾನಿ ಪುಷ್ಪ ನಮನ ಸಲ್ಲಿಸಿದರು. ಬಳಿಕ ಕೆಂಪು ಕೋಟೆ ಕಡೆ ಆಗಮಿಸಿದರು. ಕೆಂಪುಕೋಟೆ ತಲುಪಿದ ಪ್ರಧಾನಿ ಮೋದಿ ಅವರನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಕ್ಷಣಾ ಖಾತೆ ರಾಜ್ಯ ಸಚಿವ ಅಜಯ್ ಭಟ್ ಮತ್ತು ರಕ್ಷಣಾ ಕಾರ್ಯದರ್ಶಿ ಗಿರಿಧರ್ ಆರಾಮ್ನೆ ಸ್ವಾಗತಿಸಿದರು. ಬಳಿಕ ಕೆಂಪು ಕೋಟೆಯಲ್ಲಿ ಪ್ರಧಾನಿ ಮೋದಿ ಧ್ವಜಾರೋಹಣ

ದೆಹಲಿ ಕೆಂಪು ಕೋಟೆಯಲ್ಲಿ 77ನೇ ಸ್ವಾತಂತ್ರ್ಯೋತ್ಸವ | ಪ್ರಧಾನಿಯವರಿಂದ ಧ್ವಜಾರೋಹಣ Read More »

ಹಿಜ್ಬುಲ್ ಮುಜಾಹಿದೀನ್ ಉಗ್ರನ ಮನೆಯವರಿಂದ ತ್ರಿವರ್ಣ ಧ್ವಜ ಹಾರಾಟ| ನಾನು ಭಾರತವನ್ನು ಪ್ರೀತಿಸುತ್ತೇನೆ ಎಂದ ರಯೀಸ್ ಮಟ್ಟು

ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿಯನ್ನು ರದ್ದುಪಡಿಸಿದ ಬಳಿಕ ಬಹಳಷ್ಟು ಬದಲಾವಣೆಗಳು ಕಾಣಿಸಿಕೊಂಡಿವೆ. ಕೆಲ ದಿನಗಳ ಹಿಂದೆ ಯುವತಿಯೊಬ್ಬಳು ಬುಲೆಟ್ ಬೈಕ್ ಸವಾರಿ ಮಾಡಿ ನಾನೀಗ ರಸ್ತೆಯಲ್ಲಿ ಬೈಕ್ ಓಡಿಸುವಷ್ಟು ಸ್ವಾತಂತ್ರ್ಯ ಪಡೆದುಕೊಂಡಿದ್ದೇನೆ ಎಂದು ಹೇಳಿದ್ದು ಬಹಳ ವೈರಲ್ ಆಗಿತ್ತು. ಇದೀಗ ಹಿಜ್ಜುಲ್ ಮುಜಾಹಿದೀನ್ ಉಗ್ರನ ಮನೆಯವರು ತ್ರಿವರ್ಣ ಧ್ವಜ ಹಾರಿಸಿರುವುದು ಸುದ್ದಿಯಾಗಿದೆ. ಉಗ್ರ ಮುದಾಸಿ‌ ಕುಟುಂಬದವರು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವ ‘ಹರ್ ಘರ್ ತಿರಂಗಾ’ ಅಭಿಯಾನಕ್ಕೆ ಓಗೊಟ್ಟು ಭಾನುವಾರ ಮನೆ ಮೇಲೆ ತ್ರಿವರ್ಣಧ್ವಜ

ಹಿಜ್ಬುಲ್ ಮುಜಾಹಿದೀನ್ ಉಗ್ರನ ಮನೆಯವರಿಂದ ತ್ರಿವರ್ಣ ಧ್ವಜ ಹಾರಾಟ| ನಾನು ಭಾರತವನ್ನು ಪ್ರೀತಿಸುತ್ತೇನೆ ಎಂದ ರಯೀಸ್ ಮಟ್ಟು Read More »

ಹಳೆ ಪಿಂಚಣಿ ವ್ಯವಸ್ಥೆಗೆ ಒತ್ತಾಯಿಸಿ ರ್‍ಯಾಲಿ | ರ್‍ಯಾಲಿಯಲ್ಲಿ ಭಾಗವಹಿಸದಂತೆ ಕೇಂದ್ರ ಸರಕಾರ ಎಚ್ಚರಿಕೆ

ದೆಹಲಿ: ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೆ ತರುವಂತೆ ಒತ್ತಾಯಿಸಿ ನವದೆಹಲಿಯಲ್ಲಿ ಸರಕಾರಿ ನೌಕರರು ನಡೆಸುವ ರ್‍ಯಾಲಿ ಯಲ್ಲಿ ಸರಕಾರಿ ನೌಕರರು ಭಾಗವಹಿಸದಂತೆ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ. ಪ್ರತಿಭಟನೆ ಸೇರಿದಂತೆ ಯಾವುದೇ ರೀತಿಯ ಮುಷ್ಕರದಲ್ಲಿ ಭಾಗಿಯಾದರೆ ಆ ನೌಕರರು ಮುಂದಿನ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಇದು ವೇತನ ಕಡಿತದ ಜೊತೆಗೆ, ಸೂಕ್ತ ಶಿಸ್ತು ಕ್ರಮವನ್ನು ಒಳಗೊಂಡಿರುತ್ತದೆ ಎಂದು ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಹೊರಡಿಸಿದ ಆದೇಶದಲ್ಲಿ ತಿಳಿಸಿದೆ. ಹಳೆಯ ಪಿಂಚಣಿ ಯೋಜನೆ ಮರುಸ್ಥಾಪನೆಗಾಗಿ ಜಂಟಿ ವೇದಿಕೆ ಮತ್ತು ರಾಷ್ಟ್ರೀಯ

ಹಳೆ ಪಿಂಚಣಿ ವ್ಯವಸ್ಥೆಗೆ ಒತ್ತಾಯಿಸಿ ರ್‍ಯಾಲಿ | ರ್‍ಯಾಲಿಯಲ್ಲಿ ಭಾಗವಹಿಸದಂತೆ ಕೇಂದ್ರ ಸರಕಾರ ಎಚ್ಚರಿಕೆ Read More »

ಚಂದ್ರನ ಕಕ್ಷೆ ಸೇರಿದ ಚಂದ್ರಯಾನ ಗಗನ ನೌಕೆ | ಟ್ವಿಟರ್ ಖಾತೆಯಲ್ಲಿ  ಹಂಚಿಕೊಂಡ ಚಂದ್ರಯಾನ್-3 ಮಿಷನ್

ದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಚಂದ್ರಯಾನ-3 ನೌಕೆ ವೀಕ್ಷಿಸಿದ ಚಂದ್ರನ ಮೊದಲ ವೀಡಿಯೋ ತುಣುಕನ್ನು ಹಂಚಿಕೊಂಡಿದೆ. ಚಂದ್ರಯಾನ-3 ಗಗನ ನೌಕೆಯು ಭೂಮಿಯಿಂದ ಹಾರಿ 22 ದಿನಗಳ ಬಳಿಕ ಶನಿವಾರ ಚಂದ್ರನ ಕಕ್ಷೆ ಸೇರಿದ ನಂತರ ಚಿತ್ರಗಳನ್ನು ಸೆರೆಹಿಡಿದಿದೆ. ಈ ಕುರಿತ ವೀಡಿಯೋ ತುಣುಕನ್ನು ಚಂದ್ರಯಾನ್-3 ಮಿಷನ್ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಮೂನ್ ಮಿಷನ್ ಕಾರ್ಯಾಚರಣೆ ಇಲ್ಲಿಯವರೆಗೆ ಸುಗಮವಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಆಗಸ್ಟ್ 23 ರಂದು ವಿಕ್ರಮ ಲ್ಯಾಂಡರ್ ಚಂದ್ರನ ಮೇಲೆ ಲ್ಯಾಂಡ್ ಆಗಲಿದೆ. ಚಂದ್ರಯಾನ-3

ಚಂದ್ರನ ಕಕ್ಷೆ ಸೇರಿದ ಚಂದ್ರಯಾನ ಗಗನ ನೌಕೆ | ಟ್ವಿಟರ್ ಖಾತೆಯಲ್ಲಿ  ಹಂಚಿಕೊಂಡ ಚಂದ್ರಯಾನ್-3 ಮಿಷನ್ Read More »

ಮಣಿಪುರದಲ್ಲಿ ಮತ್ತೆ ಹಿಂಸಾಚಾರ | ಗುಂಡಿನ ದಾಳಿಗೆ ಮೂವರು ಮೃತ್ಯು

ಇಂಫಾಲ್ : ಸ್ವಲ್ಪ ಮಟ್ಟಿಗೆ ಶಾಂತವಾಗಿದ್ದ ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ. ಶನಿವಾರ ಮುಂಜಾನೆ ಶಂಕಿತ ವ್ಯಕ್ತಿಗಳು ಬಿಷ್ಣುಪುರದ ಕ್ವಾಕ್ಕಾ ಬಳಿಯ ಉಖಾ ತಂಪಕ್ ಗ್ರಾಮದ ಮೇಲೆ ಮನಬಂದಂತೆ ಗುಂಡಿನ ದಾಳಿ ನಡೆಸಿದ ಪರಿಣಾಮ ತಂದೆ-ಮಗ ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ. ದಾಳಿಕೋರರು ಕೇಂದ್ರ ಭದ್ರತಾ ಪಡೆಯ ನಿಯಂತ್ರಣಲ್ಲಿರುವ ಬೆಟ್ಟ-ಕಣಿವೆಗಳ ನಡುವಿನ ಬಫರ್ ವಲಯದಿಂದ ಕದ್ದುಮುಚ್ಚಿ ಬರುತ್ತಿದ್ದಾರೆ ಎನ್ನಲಾಗಿದ್ದು, ಅಲ್ಲಿಯ ಜನರ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಘಟನೆ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಮಣಿಪುರದಲ್ಲಿ ಮತ್ತೆ ಹಿಂಸಾಚಾರ | ಗುಂಡಿನ ದಾಳಿಗೆ ಮೂವರು ಮೃತ್ಯು Read More »

ಪ್ರಧಾನಿ ಭೇಟಿ ಮಾಡಿದ ಸಿ.ಎಂ.ಸಿದ್ಧರಾಮಯ್ಯ : ಅಂಬಾರಿ ನೀಡಿ ಸನ್ಮಾನ

ಪುತ್ತೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಗುರುವಾರ ಭೇಟಿ ಮಾಡಿ ಮಾತುಕತೆ ನಡೆಸಿದರು. ದೆಹಲಿ ಸಂಸತ್ ಭವನಕ್ಕೆ ಭೇಟಿ ನೀಡಿದ ಹಿನ್ನಲೆಯಲ್ಲಿ ಅವರು ಪ್ರಧಾನಿಯವರನ್ನು ಭೇಟಿ ಮಾಡಿ ಮೋದಿಯವರಿಗೆ ಗಂಧದ ಹಾರ ಹಾಕಿ, ಮೈಸೂರು ಪೇಟ ಧರಿಸಿ, ಅಂಬಾರಿ ಕೊಟ್ಟು ಸನ್ಮಾನಿಸಿದರು. ಎರಡನೇ ಬಾರಿ ಮುಖ್ಯಮಂತ್ರಿಯಾದ ಬಳಿಕ ಸಿದ್ಧರಾಮಯ್ಯ ಪ್ರಥಮ ಬಾರಿಗೆ ಪ್ರಧಾನಿಯವರನ್ನು ಭೇಟಿ ಮಾಡಿದರು. ವಿವಿಧ ಯೋಜನೆಗಳಡಿ ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಬಾಕಿ ಅನುದಾನ ಬಿಡುಗಡೆ ಕುರಿತು ಮೋದಿಯವರ ಬಳಿ ಚರ್ಚೆ

ಪ್ರಧಾನಿ ಭೇಟಿ ಮಾಡಿದ ಸಿ.ಎಂ.ಸಿದ್ಧರಾಮಯ್ಯ : ಅಂಬಾರಿ ನೀಡಿ ಸನ್ಮಾನ Read More »

ದೇಶದ ಎಲ್ಲಾ ಶಾಲೆಗಳಲ್ಲಿ ಸಿಬಿಎಸ್‍ಇ ಪಠ್ಯಕ್ರಮ : ಪ್ರಧಾನಿ ಮೋದಿ

ನವದೆಹಲಿ: ಮುಂಬರುವ ದಿನಗಳಲ್ಲಿ ದೇಶದ ಎಲ್ಲಾ ಶಾಲೆಗಳಲ್ಲಿ ಸಿಬಿಎಸ್‌ಇ ಪಠ್ಯಕ್ರಮವನ್ನು ಜಾರಿಗೆ ತರಲಾಗುವುದು. ಇದಕ್ಕಾಗಿ 22 ಭಾಷೆಗಳಲ್ಲಿ ಪಠ್ಯಪುಸ್ತಕಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿಯ ಮೂರನೇ ವಾರ್ಷಿಕೋತ್ಸವದ ಅಂಗವಾಗಿ ಶನಿವಾರ ನವದೆಹಲಿಯ ಪ್ರಗತಿ ಮೈದಾನದ ಭಾರತ್ ಮಂಟಪದಲ್ಲಿ ಅಖಿಲ ಭಾರತೀಯ ಶಿಕ್ಷಾ ಸಮಾಗಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ದೇಶವನ್ನು ಬದಲಾಯಿಸುವ ಶಕ್ತಿ ಶಿಕ್ಷಣಕ್ಕೆ ಮಾತ್ರ ಇದೆ. ದೇಶವು ಮುಂದುವರಿಯುತ್ತಿರುವ ಗುರಿಯಲ್ಲಿ ಶಿಕ್ಷಣವು ಪ್ರಮುಖ ಪಾತ್ರ ವಹಿಸುತ್ತದೆ. ಮಾತೃಭಾಷೆಯ ಅಧ್ಯಯನದೊಂದಿಗೆ, ಈಗ

ದೇಶದ ಎಲ್ಲಾ ಶಾಲೆಗಳಲ್ಲಿ ಸಿಬಿಎಸ್‍ಇ ಪಠ್ಯಕ್ರಮ : ಪ್ರಧಾನಿ ಮೋದಿ Read More »

ಮೊಬೈಲ್ ಖರೀದಿಗೆ 8 ತಿಂಗಳ ಮಗುವನ್ನೇ ಮಾರಿದ ದಂಪತಿ | ಪೊಲೀಸರ ಅತಿಥಿಯಾದ ದಂಪತಿ

ಕೋಲ್ಕತ್ತ : ಹೊಸ ಮೊಬೈಲ್ ಫೋನ್ ಖರೀದಿಸಲು ತಮ್ಮ 8 ತಿಂಗಳ ಮಗುವನ್ನೇ ಮಾರಿದ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ನಡೆದಿರುವುದು ಪಶ್ಚಿಮ ಬಂಗಾಳದ 24 ಪರಗಣ ಜಿಲ್ಲೆಯಲ್ಲಿ ಮಗುವನ್ನುಮಾರಿ ಹೊಸ ಫೋನ್ ಖರೀದಿಸಿದ್ದು ಮಾತ್ರವಲ್ಲದೆ ಈ ದಂಪತಿ ಜಾಲಿಟ್ರಿಪ್ ಕೂಡ ಮಾಡಿದ್ದರು. ಅವರ ಕೈಯಲ್ಲಿ ದುಬಾರಿ ಬೆಲೆಯ ಫೋನ್ ಕಂಡು ಸಂಶಯಗೊಂಡ ನೆರೆಹೊರೆಯವರು ಗುಸುಗುಸು ಮಾತನಾಡಲು ತೊಡಗಿದಾಗಲೇ ಖತರ್‌ನಾಕ್ ದಂಪತಿಯ ಗುಟ್ಟು ಬಯಲಾದದ್ದು. ದಂಪತಿಗೆ ಓರ್ವ ಪುತ್ರಿಯೂ ಇದ್ದು, 8 ತಿಂಗಳ ಹಿಂದೆ ಜನಿಸಿದ

ಮೊಬೈಲ್ ಖರೀದಿಗೆ 8 ತಿಂಗಳ ಮಗುವನ್ನೇ ಮಾರಿದ ದಂಪತಿ | ಪೊಲೀಸರ ಅತಿಥಿಯಾದ ದಂಪತಿ Read More »

ಲಾಟರಿ ಖರೀದಿಸಿದ ಮಹಿಳಾ ಮುನ್ಸಿಪಾಲಿಟಿ ಕಾರ್ಯಕರ್ತರ ತಂಡ | ತನ್ನದಾಗಿಸಿಕೊಂಡ 10 ಕೋಟಿ ಬಂಪರ್ ಬಹುಮಾನ

ಕೇರಳ : ಕೇರಳದ ಬಡ ಕುಟುಂಬಕ್ಕೆ ಸೇರಿದ 11 ಮಹಿಳಾ ಮುನ್ಸಿಪಾಲಿಟಿ ಕಾರ್ಯಕರ್ತರ ಗುಂಪೊಂದು ಲಾಟರಿ ಖರೀದಿಸಿ 10 ಕೋಟಿ ರೂ. ಬಂಪರ್ ಬಹುಮಾನವನ್ನು ತನ್ನದಾಗಿಸಿಕೊಂಡಿದೆ. ಕೇರಳದ ಮಲಪ್ಪುರಂ ಜಿಲ್ಲೆಯ ಈ ತಂಡದ ನಾಲ್ಕನೇ ಪ್ರಯತ್ನ ಇದಾಗಿದ್ದು, ಇದೀಗ ಭರ್ಜರಿ ಯಶಸ್ಸು ಗಳಿಸಿದ್ದಾರೆ. ತಂಡದ ಯಾರ ಬಳಿಯೂ ಸ್ವತಂತ ಟಿಕೇಟ್ ಖರೀದಿಗೆ ಹಣವಿರಲಿಲ್ಲ. ಹಾಗಾಗಿ ಗುಂಪಾಗಿ 250 ರೂ. ಪಾವತಿಸಿ ಟಿಕೇಟ್ ಖರೀದಿಸಿದ್ದರು. BR-92 ಲಕ್ಕಿ ಡ್ರಾದ ವಿಜೇತ ಟಿಕೇಟ್  Mb200261 ಆಗಿತ್ತು. ಈ ತಂಡ ಕೇರಳ

ಲಾಟರಿ ಖರೀದಿಸಿದ ಮಹಿಳಾ ಮುನ್ಸಿಪಾಲಿಟಿ ಕಾರ್ಯಕರ್ತರ ತಂಡ | ತನ್ನದಾಗಿಸಿಕೊಂಡ 10 ಕೋಟಿ ಬಂಪರ್ ಬಹುಮಾನ Read More »

error: Content is protected !!
Scroll to Top