ದೇಶ

ಎಐಸಿಸಿ ಆಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಸ್ಪತ್ರೆಗೆ ದಾಖಲು

ಉಸಿರಾಟದ ಸಮಸ್ಯೆಗೆ ಚಿಕಿತ್ಸೆ ಬೆಂಗಳೂರು : ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅನಾರೋಗ್ಯಕ್ಕೀಡಾಗಿದ್ದು, ಬೆಂಗಳೂರಿನ ಎಂಎಸ್ ರಾಮಯ್ಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಿಗೆ ಸಾಮಾನ್ಯ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಆರೋಗ್ಯದ ಮೇಲೆ ಹಿರಿಯ ವೈದ್ಯರು ನಿಗಾ ಇರಿಸಿದ್ದಾರೆ. ಖರ್ಗೆ ಅವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಹೀಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಮೂಲಗಳು ತಿಳಿಸಿವೆ. ಮಲ್ಲಿಕಾರ್ಜುನ ಖರ್ಗೆ ಮಂಗಳವಾರ ಎಂದಿನಂತೆಯೇ ರಾಜಕೀಯ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರು. ಉತ್ತರ ಕರ್ನಾಟಕದಲ್ಲಿ ಉಂಟಾಗಿರುವ ಭಾರಿ ಪ್ರವಾಹ ಮತ್ತು ಬೆಳೆ ಹಾನಿ ಬಗ್ಗೆ […]

ಎಐಸಿಸಿ ಆಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಸ್ಪತ್ರೆಗೆ ದಾಖಲು Read More »

ವಿದ್ಯುತ್‌ ಸ್ಥಾವರದ ಕಮಾನು ಕುಸಿದು ಬಿದ್ದು 9 ಕಾರ್ಮಿಕರ ಸಾವು

ನಿರ್ಮಾಣ ಹಂತದ ಉಷ್ಣ ವಿದ್ಯುತ್‌ ಸ್ಥಾವರದಲ್ಲಿ ಸಂಭವಿಸಿದ ದುರಂತ ಚೆನ್ನೈ : ತಮಿಳುನಾಡಿನ ತಿರುವಲ್ಲೂರು ಜಿಲ್ಲೆಯ ಎನ್ನೋರ್‌ನಲ್ಲಿ ನಿರ್ಮಾಣ ಹಂತದ ಉಷ್ಣ ವಿದ್ಯುತ್ ಸ್ಥಾವರದ ಕಮಾನು ಕುಸಿದು ಬಿದ್ದು ಸಂಭವಿಸಿದ ದುರ್ಘಟನೆಯಲ್ಲಿ 9 ಮಂದಿ ಕಾರ್ಮಿಕರು ಮೃತಪಟ್ಟಿದ್ದಾರೆ. ಅವಘಡದಲ್ಲಿ ಮೃತಪಟ್ಟ ಎಲ್ಲ ಕಾರ್ಮಿಕರು ಅಸ್ಸಾಂನವರು. ಈ ಸಂದರ್ಭ ನಿವೇಶನದಲ್ಲಿ ಭಾರತ್ ಹೆವಿ ಇಲೆಕ್ಟ್ರಿಕಲ್ಸ್ ಲಿಮಿಡೆಟ್ (ಬಿಎಚ್‌ಇಎಲ್)ನ ಅಧಿಕಾರಿಗಳು ಇದ್ದರು ಎಂದು ತಮಿಳುನಾಡು ಜನರೇಷನ್ ಆ್ಯಂಡ್ ಡಿಸ್ಟ್ರಿಬ್ಯುಷನ್ ಕಾರ್ಪೊರೇಷನ್(ಟಿಎಎನ್‌ಜಿಇಡಿಸಿಒ)ನ ಅಧ್ಯಕ್ಷ ಡಾ. ಜೆ. ರಾಧಾಕೃಷ್ಣನ್ ಹೇಳಿದ್ದಾರೆ. ಗಾಯಗೊಂಡ ಕಾರ್ಮಿಕರನ್ನು

ವಿದ್ಯುತ್‌ ಸ್ಥಾವರದ ಕಮಾನು ಕುಸಿದು ಬಿದ್ದು 9 ಕಾರ್ಮಿಕರ ಸಾವು Read More »

ಹಿಂದು ಮುಖಂಡರ ಹತ್ಯೆಗೆ ಮುಜಾಹಿದಿನ್‌ ಆರ್ಮಿ ರಚಿಸಿದ ನಾಲ್ವರ ಬಂಧನ

ಆನ್‌ಲೈನ್‌ ಗ್ರೂಪ್‌ಗಳ ಮೂಲಕ ರಹಸ್ಯ ಸಂದೇಶಗಳ ರವಾನೆ ಲಖನೌ: ಹಿಂದೂ ಧಾರ್ಮಿಕ ನಾಯಕರ ಹತ್ಯೆಗೆ ಸಂಚು ರೂಪಿಸಿದ್ದ ಮತ್ತು ಮುಜಾಹಿದ್ದೀನ್ ಆರ್ಮಿ ಎಂಬ ಮೂಲಭೂತವಾದಿ ಸಂಘಟನೆಯನ್ನು ರಚಿಸಲು ಯತ್ನಿಸಿದ ಆರೋಪದ ಮೇಲೆ ಉತ್ತರ ಪ್ರದೇಶ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ನಾಲ್ವರು ವ್ಯಕ್ತಿಗಳನ್ನು ಬಂಧಿಸಿದೆ. ಈ ಗುಂಪು ಹಿಂಸಾತ್ಮಕ ಚಟುವಟಿಕೆಗಳಿಗೆ ತಯಾರಿ ನಡೆಸುತ್ತಿದ್ದು, ಸಾಮಾಜಿಕ ಮಾಧ್ಯಮಗಳ ಮೂಲಕ ಜನರನ್ನು ನೇಮಕ ಮಾಡಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉತ್ತರ ಪ್ರದೇಶದ ವಿವಿಧ ಜಿಲ್ಲೆಗಳ ಕೆಲವು ವ್ಯಕ್ತಿಗಳು ಉಗ್ರಗಾಮಿ

ಹಿಂದು ಮುಖಂಡರ ಹತ್ಯೆಗೆ ಮುಜಾಹಿದಿನ್‌ ಆರ್ಮಿ ರಚಿಸಿದ ನಾಲ್ವರ ಬಂಧನ Read More »

ಏಷ್ಯಾಕಪ್‌ ಕಪ್‌ ಗೆದ್ದ ಟೀಂ ಇಂಡಿಯಾಕ್ಕೆ ಬಿಸಿಸಿಐನಿಂದ ಸಿಕ್ಕಿತು ಭರ್ಜರಿ ಬಹುಮಾನ

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹೈಡ್ರಾಮಾ ದುಬೈ: ಇಲ್ಲಿನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಏಷ್ಯಾ ಕಪ್ ಗೆದ್ದ ಭಾರತ ತಂಡದ ಆಟಗಾರರು ಹಾಗೂ ಸಹಾಯಕ ಸಿಬ್ಬಂದಿಗೆ ಬಿಸಿಸಿಐ ಬರೋಬ್ಬರಿ 21 ಕೋಟಿ ನಗದು ಬಹುಮಾನ ಘೋಷಿಸಿದೆ. ಇದಲ್ಲದೇ ಏಷ್ಯನ್‌ ಕ್ರಿಕೆಟ್‌ ಕೌನ್ಸಿಲ್‌ನಿಂದ ಚಾಂಪಿಯನ್‌ ತಂಡಕ್ಕೆ 2.6 ಕೋಟಿ ರೂ. ಟೂರ್ನಿಯ ಬಹುಮಾನ ಸಿಕ್ಕಿದೆ. ರನ್ನರ್‌ ಅಪ್‌ ಪಾಕಿಸ್ತಾನ ತಂಡ ಕೇವಲ 1.3 ಕೋಟಿ ರೂ. ಬಹುಮಾನ ಪಡೆದುಕೊಂಡಿದೆ. ಏಷ್ಯಾ ಕಪ್ ಫೈನಲ್‌ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಗೆದ್ದರೂ ಏಷ್ಯಾ ಕಪ್‌

ಏಷ್ಯಾಕಪ್‌ ಕಪ್‌ ಗೆದ್ದ ಟೀಂ ಇಂಡಿಯಾಕ್ಕೆ ಬಿಸಿಸಿಐನಿಂದ ಸಿಕ್ಕಿತು ಭರ್ಜರಿ ಬಹುಮಾನ Read More »

ಕಾಲ್ತುಳಿತ ದುರಂತ ಬೆನ್ನಲ್ಲೇ ವಿಜಯ್‌ ಮನೆಗೆ ಬಾಂಬ್‌ ಬೆದರಿಕೆ

ಭದ್ರತೆಗೆ ಸಿಆರ್‌ಪಿಎಫ್‌ ಸಿಬ್ಬಂದಿ ನಿಯೋಜನೆ ಚೆನ್ನೈ: ಶನಿವಾರ ರಾತ್ರಿ ಕರೂರಿನ ರ‍್ಯಾಲಿಯಲ್ಲಿ ಸಂಭವಿಸಿದ ಕಾಲ್ತುಳಿತ ದುರಂತದ ಬೆನ್ನಲ್ಲೇ ನಟ ಹಾಗೂ ಟಿವಿಕೆ ಪಕ್ಷದ ಮುಖ್ಯಸ್ಥ ದಳಪತಿ ವಿಜಯ್‌ ನಿವಾಸಕ್ಕೆ ಬಾಂಬ್‌ ಬೆದರಿಕೆ ಬಂದಿದೆ. ಚೆನ್ನೈಯಲ್ಲಿರುವ ವಿಜಯ್‌ ನಿವಾಸಕ್ಕೆ ಬಾಂಬ್‌ ಬೆದರಿಕೆ ಬಂದ ಬೆನ್ನಲ್ಲೇ ಸ್ಥಳೀಯ ಚೆನ್ನೈ ನಗರ ಮತ್ತು ಸಿಆರ್‌ಪಿಎಫ್ ಸಿಬ್ಬಂದಿಯನ್ನು ಮನೆಯ ಸುತ್ತಲೂ ನಿಯೋಜಿಸಲಾಗಿದೆ. ಕಾಲ್ತುಳಿತದಲ್ಲಿ ಸಾವುನೋವು ಸಂಭವಿಸಿದ ಹಿನ್ನೆಲೆ ಶನಿವಾರ ಮಧ್ಯರಾತ್ರಿಯಿಂದಲೇ ವಿಜಯ್‌ ಅವರ ನಿವಾಸಕ್ಕೆ ಹೆಚ್ಚಿನ ಭದ್ರತೆ ನಿಯೋಜಿಸಲಾಗಿದೆ. ಬೆದರಿಕೆ ಬಂದ ಹಿನ್ನೆಲೆ

ಕಾಲ್ತುಳಿತ ದುರಂತ ಬೆನ್ನಲ್ಲೇ ವಿಜಯ್‌ ಮನೆಗೆ ಬಾಂಬ್‌ ಬೆದರಿಕೆ Read More »

39 ಜನರ ಪ್ರಾಣಕ್ಕೆ ಎರವಾದ ಸೌಲಭ್ಯಗಳ ಕೊರತೆ

ವಿಜಯ್‌ ರ‍್ಯಾಲಿಯಲ್ಲಿ ನೀರು, ಊಟದ ಕನಿಷ್ಠ ವ್ಯವಸ್ಥೆಯೂ ಇರಲಿಲ್ಲ ಚೆನ್ನೈ : ತಮಿಳುನಾಡಿನ ಕರೂರ್‌ನಲ್ಲಿ ಶನಿವಾರ ನಟ ವಿಜಯ್ ಅವರ ರಾಜಕೀಯ ರ‍್ಯಾಲಿಯಲ್ಲಿ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ ಮೃತಪಟ್ಟವರ ಸಂಖ್ಯೆ 39ಕ್ಕೇರಿದ್ದು, 100 ಹೆಚ್ಚು ಜನರು ಗಾಯಗೊಂಡು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 39 ಜನರ ಸಾವಿಗೆ ಕಾರಣವಾದ ಲೋಪಗಳು ಈಗ ಒಂದೊಂದಾಗಿ ಬೆಳಕಿಗೆ ಬರುತ್ತಿವೆ. ಈ ನಡುವೆ ನಟ ದುರಂತದಲ್ಲಿ ಮೃತಪಟ್ಟ ಎಲ್ಲ 39 ಮಂದಿಯ ಪರಿವಾರಗಳಿಗೆ ತಲಾ 20 ಲ.ರೂ. ಪರಿಹಾರ ಕೊಡುವುದಾಗಿ ಘೋಷಿಸಿದ್ದಾರೆ. ಶನಿವಾರ

39 ಜನರ ಪ್ರಾಣಕ್ಕೆ ಎರವಾದ ಸೌಲಭ್ಯಗಳ ಕೊರತೆ Read More »

17 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಸ್ವಾಮೀಜಿ ಆಗ್ರಾದಲ್ಲಿ ಸೆರೆ

ಲಖನೌ: 17 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿದ್ದ ಸ್ವಾಮಿ ಚೈತನ್ಯಾನಂದ ಸರಸ್ವತಿ ಅಲಿಯಾಸ್ ಪಾರ್ಥ ಸಾರಥಿಯನ್ನು ಉತ್ತರ ಪ್ರದೇಶದ ಆಗ್ರಾದಲ್ಲಿ ಪೊಲೀಸರು ಬಂಧಿಸಿದ್ದಾರೆ. ಚೈತನ್ಯಾನಂದ ಸರಸ್ವತಿ ವಿರುದ್ಧ ವಿದ್ಯಾರ್ಥಿನಿಯರಿಗೆ ಅಶ್ಲೀಲ ಸಂದೇಶ, ಬಲವಂತದ ದೈಹಿಕ ಸಂಪರ್ಕ ನಡೆಸಿದ ಆರೋಪಗಳಿವೆ. ದೆಹಲಿಯ ಶಾರದಾ ಇನ್‌ಸ್ಟಿಟ್ಯೂಟ್‌ ಆಫ್ ಇಂಡಿಯನ್ ಮ್ಯಾನೇಜ್ಮೆಂಟ್‌ನ ನಿರ್ವಹಣಾ ಸಮಿತಿಯ ಸದಸ್ಯನಾಗಿರುವ ಆರೋಪಿ ಸ್ವಾಮೀಜಿ ಈ ಪ್ರಕರಣ ಬೆಳಕಿಗೆ ಬಂದ ಬಳಿಕ ತಲೆಮರೆಸಿಕೊಂಡಿದ್ದರು. ಇವರ ವಿರುದ್ಧ 2009 ಮತ್ತು 2016ರಲ್ಲಿ ಸಹ ಎರಡು ಲೈಂಗಿಕ

17 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಸ್ವಾಮೀಜಿ ಆಗ್ರಾದಲ್ಲಿ ಸೆರೆ Read More »

ನಟ ವಿಜಯ್‌ ರ‍್ಯಾಲಿಯಲ್ಲಿ ಭೀಕರ ಕಾಲ್ತುಳಿತ : ಮೃತರ ಸಂಖ್ಯೆ 38ಕ್ಕೇರಿಕೆ

ನೂಕು ನುಗ್ಗಲು ಸಂಭವಿಸಲು ಕಾರಣ ಬಹಿರಂಗಪಡಿಸಿದ ಪ್ರಾಥಮಿಕ ತನಿಖೆ ಚೆನ್ನೈ: ತಮಿಳುನಾಡಿನ ಕರೂರಿನಲ್ಲಿ ಶನಿವಾರ ನಡೆದ ತಮಿಳು ನಟ-ರಾಜಕಾರಣಿ ವಿಜಯ್ ದಳಪತಿಯ ರ‍್ಯಾಲಿಯಲ್ಲಿ ಭೀಕರ ಕಾಲ್ತುಳೀತ ಸಂಭವಿಸಲು ಮಿತಿಗಿಂತ ಹಲವು ಪಟ್ಟು ಜನರು ಸೇರಿದ್ದೇ ಕಾರಣ ಎನ್ನುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಸುಮಾರು 10 ಸಾವಿರ ಜನರು ಸೇರಿಸಲು ಅನುಮತಿ ಪಡೆಯಲಾಗಿತ್ತು. ಮೈದಾನದಲ್ಲಿ ಗರಿಷ್ಠ ಎಂದರೆ 50 ಸಾವಿರ ಜನರು ಹಿಡಿಸಬಹುದು. ಆದರೆ ಗಾಗಿ ಬರೋಬ್ಬರಿ 1 ಲಕ್ಷಕ್ಕೂ ಅಧಿಕ ಮಂದಿ ಅಲ್ಲಿ ಸೇರಿದ್ದರು ಹಾಗೂ ಅವರೆಲ್ಲ

ನಟ ವಿಜಯ್‌ ರ‍್ಯಾಲಿಯಲ್ಲಿ ಭೀಕರ ಕಾಲ್ತುಳಿತ : ಮೃತರ ಸಂಖ್ಯೆ 38ಕ್ಕೇರಿಕೆ Read More »

ಭಾರತದ ಮೇಲೆ ಟ್ರಂಪ್‌ ಇನ್ನೊಂದು ಸುಂಕ ಪ್ರಹಾರ

ಬ್ರಾಂಡೆಡ್ ಮತ್ತು ಪೇಟೆಂಟ್ ಪಡೆದ ಔಷಧಗಳ ಮೇಲೆ ಶೇ.100 ಸುಂಕ ವಾಷಿಂಗ್ಟನ್ : ಭಾರತದ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಮತ್ತೊಂದು ಸುಂಕ ದಾಳಿ ನಡೆಸಿದ್ದಾರೆ. ಅಮೆರಿಕಕ್ಕೆ ಪ್ರವೇಶಿಸುವ ಭಾರತದ ಎಲ್ಲ ಬ್ರಾಂಡೆಡ್ ಮತ್ತು ಪೇಟೆಂಟ್ ಪಡೆದ ಔಷಧಗಳು ಶೇ.100 ಸುಂಕಕ್ಕೆ ಒಳಪಡುತ್ತವೆ ಎಂದು ಟ್ರಂಪ್ ಘೋಷಿಸಿದ್ದಾರೆ. ಈ ಸುಂಕ ಅಕ್ಟೋಬರ್ 1ರಿಂದ ಜಾರಿಗೆ ಬರಲಿದೆ. ಆದರೆ ಔಷಧ ಕಂಪನಿಗಳು ಅಮೆರಿಕದಲ್ಲಿ ಔಷಧ ಉತ್ಪಾದನಾ ಘಟಕ ಸ್ಥಾಪಿಸಿದರೆ ಸುಂಕ ಅನ್ವಯಿಸುವುದಿಲ್ಲ ಎಂದು ಟ್ರಂಪ್ ಹೇಳಿದ್ದಾರೆ. ಟ್ರಂಪ್

ಭಾರತದ ಮೇಲೆ ಟ್ರಂಪ್‌ ಇನ್ನೊಂದು ಸುಂಕ ಪ್ರಹಾರ Read More »

ಏಷ್ಯಾಕಪ್‌ : ಭಾನುವಾರ ನಡೆಯಲಿದೆ ಭಾರತ-ಪಾಕಿಸ್ತಾನ ನಡುವೆ ಹೈ ವೋಲ್ಟೇಜ್‌ ಫೈನಲ್‌

ಬದ್ಧ ಎದುರಾಳಿಗಳ ಇನ್ನೊಂದು ಮುಖಾಮುಖಿಯತ್ತ ಎಲ್ಲರ ಚಿತ್ತ ದುಬೈ: ಮುಂದಿನ ಭಾನುವಾರ ಇನ್ನೊಮ್ಮೆ ಭಾರತ ಮತ್ತು ಪಾಕಿಸ್ತಾನದ ನಡುವೆ ಇನ್ನೊಂದು ಹೈವೋಲ್ಟೇಜ್‌ ಪಂದ್ಯ ನಡೆಯಲು ವೇದಿಕೆ ಸಿದ್ಧವಾಗಿದೆ. ನಿರ್ಣಾಯಕ ಸೂಪರ್ 4 ಪಂದ್ಯದಲ್ಲಿ ಬಾಂಗ್ಲಾದೇಶ ತಂಡಕ್ಕೆ ಪಾಕಿಸ್ತಾನ 11 ರನ್‌ಗಳ ಸೋಲುಣಿಸಿ ಏಷ್ಯಾಕಪ್ ಫೈನಲ್ ಪ್ರವೇಶಿಸಿದೆ. ಹೀಗಾಗಿ ಭಾನುವಾರ ಭಾರತ ಮತ್ತು ಪಾಕಿಸ್ತಾನ ನಡುವೆ ಫೈನಲ್‌ ನಡೆಯುವುದು ಪಕ್ಕಾ ಆಗಿದೆ. ಇದೇ ಮೊದಲ ಬಾರಿಗೆ ಏಷ್ಯಾ ಕಪ್‌ ಟೂರ್ನಿಯ ಇತಿಹಾಸದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಫೈನಲ್‌

ಏಷ್ಯಾಕಪ್‌ : ಭಾನುವಾರ ನಡೆಯಲಿದೆ ಭಾರತ-ಪಾಕಿಸ್ತಾನ ನಡುವೆ ಹೈ ವೋಲ್ಟೇಜ್‌ ಫೈನಲ್‌ Read More »

error: Content is protected !!
Scroll to Top