ದೇಶ

ಪ್ರಧಾನಿ ಮೋದಿ ಜನ್ಮದಿನ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಶುಭಾಶಯ

ನವದೆಹಲಿ: ಇಂದು ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವಾಗಿದ್ದು, ಅವರು ತಮ್ಮ 75 ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶುಭಾಶಯಗಳನ್ನು ತಿಳಿಸಿದ್ದಾರೆ. ಈ ಸಂಬಂಧ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿದ್ದು, ಪ್ರಧಾನಿ ಮೋದಿ ಅವರು ತಮ್ಮ ಅಸಾಧಾರಣ ನಾಯಕತ್ವ ಗುಣಗಳ ಮೂಲಕ ಭಾರತದಲ್ಲಿ ಮಹಾನ್ ಗುರಿಗಳನ್ನು ಸಾಧಿಸುವ ಸಂಸ್ಕೃತಿಯನ್ನು ಹುಟ್ಟು ಹಾಕಿದ್ದಾರೆ. ಕಠಿಣ ಪರಿಶ್ರಮದ ಪರಾಕಾಷ್ಠೆಯ ಮೂಲಕ ಮಾದರಿಯಾಗಿದ್ದಾರೆ ಎಂದು ಅವರು ನುಡಿದಿದ್ದಾರೆ.

ಪ್ರಧಾನಿ ಮೋದಿ ಜನ್ಮದಿನ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಶುಭಾಶಯ Read More »

ಇಂದು ಪ್ರಧಾನಿ ಮೋದಿಗೆ 75ನೇ ಹುಟ್ಟುಹಬ್ಬ ಸಂಭ್ರಮ : ದೇಶಾದ್ಯಂತ ಸೇವಾ ಕಾರ್ಯಗಳು

ಶುಭಾಶಯ ಕೋರಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬುಧವಾರ 75 ವರ್ಷ ತುಂಬಿದ್ದು, ಇದರ ಭಾಗವಾಗಿ ಬಿಜೆಪಿ ದೇಶಾದ್ಯಂತ ವಿವಿಧ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ರಕ್ತದಾನ, ಆರೋಗ್ಯ ತಪಾಸಣೆ ಶಿಬಿರಗಳಿಂದ ಹಿಡಿದು ಸರ್ಕಾರಿ ಯೋಜನೆಗಳನ್ನು ಜಾರಿಗೊಳಿಸುವ ತನಕ ವಿವಿಧ ರಾಜ್ಯಗಳು ನಾನಾ ಯೋಜನೆ ಜಾರಿ ಸೇರಿದಂತೆ ಅನೇಕ ಜನಪರವಾದ ಸೇವೆಗಳನ್ನು ಮಾಡಲಾಗುತ್ತದೆ. ಪ್ರತಿವರ್ಷದಂತೆ ಸೆ.17ರಿಂದ ತೊಡಗಿ ಗಾಂಧಿ ಜಯಂತಿ ದಿನವಾದ ಅ.2ರ ತನಕ ಸೇವಾ ಪಾಕ್ಷಿಕ ನಡೆಯಲಿದೆ. ಸ್ವಚ್ಛತೆ ಸೇರಿದಂತೆ

ಇಂದು ಪ್ರಧಾನಿ ಮೋದಿಗೆ 75ನೇ ಹುಟ್ಟುಹಬ್ಬ ಸಂಭ್ರಮ : ದೇಶಾದ್ಯಂತ ಸೇವಾ ಕಾರ್ಯಗಳು Read More »

ಕಾಂಗ್ರೆಸ್, ಆರ್‌ಜೆಡಿ ಮೇಲೆ ಪ್ರಧಾನಿ ಮೋದಿ ಆಕ್ರೋಶ

ನವದೆಹಲಿ: ಕಾಂಗ್ರೆಸ್ ಮತ್ತು ಆರ್‌ಜೆ‌ಡಿ ಪಕ್ಷಗಳು ಅಸ್ಸಾಂ, ಬಿಹಾರ, ಬಂಗಾಳದಲ್ಲಿ ನುಸುಳುಕೋರರನ್ನು ಪೋಷಣೆ ಮಾಡುವ ಕೆಲಸ ಮಾಡುತ್ತಿದೆ ಎಂದು ಪ್ರಧಾನಿ ಮೋದಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನುಸುಳುಕೋರರ ರಕ್ಷಣೆಗಾಗಿ ವಿಪಕ್ಷಗಳಾದ ಆರ್‌ಜೆಡಿ ‌ಮತ್ತು ಕಾಂಗ್ರೆಸ್ ಯಾತ್ರೆಗಳನ್ನು ‌ನಡೆಸುತ್ತಿವೆ ಎಂದು ಅವರು ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಕೆಂಪು ಕೋಟೆಯಲ್ಲಿ ಸ್ವಾತಂತ್ರ್ಯ ದಿನದಂದು ತಾವು ಮಾಡಿದ ಭಾಷಣವನ್ನು ಉಲ್ಲೇಖಿಸಿ ಮಾತನಾಡಿ ರಾಷ್ಟ್ರೀಯ ಜನಸಂಖ್ಯಾ ಮಿಷನ್ ಅನ್ನು ಘೋಷಣೆ ಮಾಡಿದೆ. ಸಿಯಾಚಿನ್ ಮತ್ತು ಪೂರ್ವ ಭಾರತದಲ್ಲಿ ಒಳನುಸುಳುವಿಕೆಯ ಕಾರಣದಿಂದ ಜನಸಂಖ್ಯಾ ಸ್ಫೋಟ

ಕಾಂಗ್ರೆಸ್, ಆರ್‌ಜೆಡಿ ಮೇಲೆ ಪ್ರಧಾನಿ ಮೋದಿ ಆಕ್ರೋಶ Read More »

ವಕ್ಫ್‌ ನಿಬಂಧನೆಗೆ ಸುಪ್ರೀಂ ಕೋರ್ಟ್‌ ತಡೆ

ಐದು ವರ್ಷ ಮುಸ್ಲಿಮ್‌ ಆಗಿದ್ದರೆ ಮಾತ್ರ ವಕ್ಫ್‌ ರಚನೆಗೆ ಅವಕಾಶ ನವದೆಹಲಿ: ವಕ್ಫ್ ತಿದ್ದುಪಡಿ ಕಾಯ್ದೆ 2025ರಲ್ಲಿನ ನಿಬಂಧನೆಯನ್ನು ಸುಪ್ರೀಂ ಕೋರ್ಟ್ ಸೋಮವಾರ ತಡೆಹಿಡಿದಿದ್ದು, ಒಬ್ಬ ವ್ಯಕ್ತಿ ವಕ್ಫ್ ರಚಿಸಲು ಐದು ವರ್ಷಗಳ ಕಾಲ ಮುಸ್ಲಿಂ ಆಗಿರಬೇಕು ಎಂದು ಆದೇಶಿಸಿದೆ. ರಾಜ್ಯ ಸರ್ಕಾರಗಳು ಒಬ್ಬ ವ್ಯಕ್ತಿಯು ಇಸ್ಲಾಂ ಧರ್ಮದ ಅನುಯಾಯಿಯಾಗಿ ಅರ್ಹತೆ ಪಡೆಯುತ್ತಾನೆಯೇ ಎಂದು ನಿರ್ಧರಿಸಲು ನಿಯಮಗಳನ್ನು ರೂಪಿಸುವವರೆಗೆ ಈ ಷರತ್ತು ಅಮಾನತಿನಲ್ಲಿರಲಿದೆ ಎಂದು ನಿರ್ದೇಶಿಸಿದೆ. ವಿಚಾರಣೆಯ ಸಮಯದಲ್ಲಿ, ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ನೇತೃತ್ವದ

ವಕ್ಫ್‌ ನಿಬಂಧನೆಗೆ ಸುಪ್ರೀಂ ಕೋರ್ಟ್‌ ತಡೆ Read More »

ಏಷ್ಯಾಕಪ್‌ : ಭಾರಿ ವಿರೋಧದ ನಡುವೆ ಇಂದು ಭಾರತ-ಪಾಕಿಸ್ತಾನ ಪಂದ್ಯ

ಪಹಲ್ಗಾಮ್‌ ಉಗ್ರ ದಾಳಿಯ ಕರಿನೆರಳಲ್ಲಿ ನಡೆಯುವ ಪಂದ್ಯಕ್ಕೆ ಭಾರತದಲ್ಲಿ ಆಕ್ಷೇಪ ನವದೆಹಲಿ : ಭಾರತೀಯರ ಭಾರಿ ವಿರೋಧದ ನಡುವೆ ಭಾರತ-ಪಾಕಿಸ್ತಾನ ಏಷ್ಯಾಕಪ್‌ನಲ್ಲಿ ಇಂದು ದುಬೈಯಲ್ಲಿ ಮುಖಾಮುಖಿಯಾಗಲಿವೆ.2025ರ ಏಷ್ಯಾಕಪ್‌ನ ತನ್ನ ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾ, ಪಾಕಿಸ್ತಾನವನ್ನು ಎದುರಿಸಲಿದೆ. ಗ್ರೂಪ್ ಎ ನಲ್ಲಿರುವ ಈ ಎರಡೂ ತಂಡಗಳಿಗೆ ಇದು ಎರಡನೇ ಪಂದ್ಯವಾಗಿದೆ. ನಾಯಕ ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಂ ಇಂಡಿಯಾ ಮೊದಲ ಪಂದ್ಯದಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಿ 9 ವಿಕೆಟ್‌ಗಳಿಂದ

ಏಷ್ಯಾಕಪ್‌ : ಭಾರಿ ವಿರೋಧದ ನಡುವೆ ಇಂದು ಭಾರತ-ಪಾಕಿಸ್ತಾನ ಪಂದ್ಯ Read More »

ಇಂದು ಮಣಿಪುರಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ

2023ರಿಂದೀಚೆಗೆ ಹಿಂಸಾಚಾರದಿಂದ ನಲುಗಿರುವ ಮಣಿಪುರ ನವದೆಹಲಿ : 2023ರಿಂದೀಚೆಗೆ ಮೈತಿ ಮತ್ತು ಕುಕಿ ಸಮುದಾಯಗಳ ನಡುವಿನ ಜನಾಂಗೀಯ ಹಿಂಸಾಚಾರದಿಂದ ನಲುಗಿರುವ ಮಣಿಪುರಕ್ಕೆ ಇಂದು ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡುತ್ತಿದ್ದಾರೆ. ಹಿಂಸಾಚಾರದಲ್ಲಿ 260ಕ್ಕೂ ಹೆಚ್ಚು ಜನರ ಹತ್ಯೆಯಾಗಿದೆ. ಸಾಮೂಹಿಕ ಅತ್ಯಾಚಾರಗಳು ನಡೆದಿವೆ. ಜನಾಂಗೀಯ ಹಿಂಸಾಚರಕ್ಕೆ ಕಣಿವೆ ರಾಜ್ಯ ಮಣಿಪುರ ಸಂಪೂರ್ಣ ನಲುಗಿಹೋಗಿದೆ. ಇದರ ನಡುವೆ ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಮಣಿಪುರಕ್ಕೆ ಇಂದು ಭೇಟಿ ನೀಡುತ್ತಿದ್ದಾರೆ. ಆ ಮೂಲಕ ಮಣಿಪುರಕ್ಕೆ ಪ್ರಧಾನಿ ಮೋದಿ ಏಕೆ

ಇಂದು ಮಣಿಪುರಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ Read More »

ಬಾಲಿವುಡ್‌ ನಟಿ ದಿಶಾ ಪಟಾನಿ ಮನೆಗೆ ಗುಂಡು ಹಾರಾಟ

ಬೈಕ್‌ನಲ್ಲಿ ಬಂದು 4 ಸುತ್ತು ಗುಂಡು ಹಾರಿಸಿ ಪಲಾಯನ ಮಾಡಿರುವ ದುಷ್ಕರ್ಮಿಗಳು ಮುಂಬಯಿ : ಬಾಲಿವುಡ್ ನಟಿ ದಿಶಾ ಪಟಾನಿ ಅವರ ಮನೆಯ ಮೇಲೆ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ. ಬೆಳಗಿನ ಜಾವ ಉತ್ತರ ಪ್ರದೇಶದ ಬರೇಲಿಯಲ್ಲಿರುವ ಮನೆ ಮುಂದೆ 3.30ರ ಸುಮಾರಿಗೆ, ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತ ದುಷ್ಕರ್ಮಿಗಳು ದಿಶಾ ಪಟಾನಿ ಅವರ ಮನೆಯ ಮೇಲೆ ಮೂರರಿಂದ ನಾಲ್ಕು ಸುತ್ತು ಗುಂಡು ಹಾರಿಸಿದ್ದಾರೆ. ಈ ಘಟನೆಯು ಪ್ರದೇಶದಲ್ಲಿ ಕೋಲಾಹಲ ಸೃಷ್ಟಿಸಿದ್ದು ಮಾಹಿತಿ ಪಡೆದ

ಬಾಲಿವುಡ್‌ ನಟಿ ದಿಶಾ ಪಟಾನಿ ಮನೆಗೆ ಗುಂಡು ಹಾರಾಟ Read More »

ಉಪರಾಷ್ಟ್ರಪತಿಯಾಗಿ ಸಿ.ಪಿ.ರಾಧಾಕೃಷ್ಣನ್‌ ಇಂದು ಪದಗ್ರಹಣ

ಹಲವು ಮುಖ್ಯಮಂತ್ರಿಗಳ ಸಹಿತ ಗಣ್ಯರು ಭಾಗಿಯಾಗುವ ನಿರೀಕ್ಷೆ ನವದೆಹಲಿ: ಎನ್‌ಡಿಎ ಅಭ್ಯರ್ಥಿ, ಮಹಾರಾಷ್ಟ್ರದ ಮಾಜಿ ರಾಜ್ಯಪಾಲ ಸಿ.ಪಿ ರಾಧಾಕೃಷ್ಣನ್ ಅವರು ಇಂದು ದೇಶದ 15ನೇ ಉಪರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಮಂಗಳವಾರ (ಸೆ.9) ನಡೆದ ಉಪರಾಷ್ಟ್ರಪತಿ ಚುನಾವಣೆಯಲ್ಲಿ 452 ಮತಗಳಿಸುವ ಮೂಲಕ ಗೆಲವು ಸಾಧಿಸಿದ್ದರು. ಶುಕ್ರವಾರ ಬೆಳಗ್ಗೆ 10 ಗಂಟೆಗೆ 15ನೇ ಉಪರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸಿ, ಪದಗ್ರಹಣ ಮಾಡಲಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಮಾಣ ವಚನ ಬೋಧಿಸಲಿದ್ದಾರೆ. ಪ್ರಮಾಣವಚನ ಕಾರ್ಯಕ್ರಮದಲ್ಲಿ ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ, ಕರ್ನಾಟಕ

ಉಪರಾಷ್ಟ್ರಪತಿಯಾಗಿ ಸಿ.ಪಿ.ರಾಧಾಕೃಷ್ಣನ್‌ ಇಂದು ಪದಗ್ರಹಣ Read More »

ಬಲವಂತವಾಗಿ ಇಸ್ಲಾಂ‌ಗೆ ಮತಾಂತರ: ಆರೋಪಿಗಳ ಬಂಧನ

ಚೆನ್ನೈ: ವಿವಾಹಿತ ಮಹಿಳೆಯೊಬ್ಬಳನ್ನು ಇಸ್ಲಾಂ ಮತಕ್ಕೆ ಮತಾಂತರ ಮಾಡಿ, ವಿವಾಹವಾಗುವಂತೆ ಪೀಡಿಸಿದ ಆರೋಪದಲ್ಲಿ ಮೂವರು ಆರೋಪಿಗಳನ್ನು ಬಂಧಿಸಿರುವುದಾಗಿ ‌ನೊಯ್ಡಾ ಪೊಲೀಸರು ತಿಳಿಸಿದ್ದಾರೆ. ತನ್ನ ಮಗಳನ್ನು ಈ ಸಂಕಷ್ಟದಿಂದ ಪಾರು ಮಾಡುವಂತೆ ಆಕೆಯ ತಾಯಿ ಅಲಹಾಬಾದ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದು, ಆ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ. ಕೋರ್ಟ್ ಆದೇಶದಂತೆ ಆರು ವರ್ಷದ ಮಗುವನ್ನು ಹೊಂದಿರುವ ಮಹಿಳೆಯನ್ನು ಪೊಲೀಸರು ಚೆನ್ನೈನಲ್ಲಿ ಪತ್ತೆಹಚ್ಚಿ ಮರಳಿ ಕರೆತಂದಿದ್ದಾರೆ. ಆರೋಪಿಗಳು ಮಹಿಳೆಯನ್ನು ಸಂಬಂಧಕ್ಕೆ ಆಮಿಷವೊಡ್ಡಿ, ಬಲವಂತವಾಗಿ ಮತಾಂತರಿಸಿದ ನಂತರ ಆಕೆಯ ಹೆಸರನ್ನು

ಬಲವಂತವಾಗಿ ಇಸ್ಲಾಂ‌ಗೆ ಮತಾಂತರ: ಆರೋಪಿಗಳ ಬಂಧನ Read More »

ಪ್ರಧಾನಿ ಮೋದಿ ದೇಶದ ಯುವ ಜನಾಂಗಕ್ಕೆ ಸ್ಪೂರ್ತಿ: ವಿವೇಕ್ ಒಬೆರಾಯ್

ಮುಂಬೈ: ದೇಶದ ಯುವ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಸ್ಪೂರ್ತಿ ಎಂದು ನಟ ವಿವೇಕ್ ಒಬೆರಾಯ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸೆ. 17 ರಂದು ಪ್ರಧಾನಿ ಮೋದಿ ಅವರ ಜನ್ಮದಿನ ಮತ್ತು ಅಖಿಲ ಭಾರತೀಯ ತೇರಾಪಂತ್ ಯುವಕ್ ಪರಿಷತ್ (ABTYP) ನ ಸಂಸ್ಥಾಪನಾ ದಿನ ಎರಡೂ ಆಗಿದ್ದು, ಈ ಹಿನ್ನೆಲೆಯಲ್ಲಿ ನಾವು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ದೊಡ್ಡ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದೇವೆ ಎಂದು ವಿವೇಕ್ ಒಬೆರಾಯ್ ತಿಳಿಸಿದ್ದಾರೆ. ಪ್ರತಿ ವರ್ಷ ಸೆಪ್ಟೆಂಬರ್ 17 ರಂದು ರಕ್ತದಾನ, ನೇತ್ರದಾನ,

ಪ್ರಧಾನಿ ಮೋದಿ ದೇಶದ ಯುವ ಜನಾಂಗಕ್ಕೆ ಸ್ಪೂರ್ತಿ: ವಿವೇಕ್ ಒಬೆರಾಯ್ Read More »

error: Content is protected !!
Scroll to Top