ದೇಶ

ನಾಳೆ ಖಗ್ರಾಸ ಚಂದ್ರ ಗ್ರಹಣ : 5.27 ಗಂಟೆ ನಭದಲ್ಲಿ ಬೆಳಕು-ನೆರಳಿನ ಕೌತುಕದಾಟ

ಸುಬ್ರಹ್ಮಣ್ಯ, ತಿರುಪತಿ ಸೇರಿ ದೇವಳಗಳಲ್ಲಿ ಪೂಜಾ ಸಮಯ ಬದಲಾವಣೆ ಬೆಂಗಳೂರು: ಭಾನುವಾರ ರಾತ್ರಿ ನಭದಲ್ಲಿ ಕೌತುಕದ ರಕ್ತಚಂದನ ಚಂದ್ರಗ್ರಹಣ ಸಂಭವಿಸಲಿದೆ. ಸುದೀರ್ಘ 5 ಗಂಟೆ 27 ನಿಮಿಷಗಳ ಕಾಲ ನಡೆಯುವ ಭೂಮಿ, ಸೂರ್ಯ ಹಾಗೂ ಚಂದ್ರನ ನಡುವಿನ ನೆರಳಿನಾಟಕ್ಕೆ ಭಾರತ ಕೂಡ ಸಾಕ್ಷಿಯಾಗಲಿದೆ. ನಾಳೆ ರಾತ್ರಿ ವರ್ಷದ ಎರಡನೇ ಮತ್ತು ಕೊನೆಯ ಚಂದ್ರಗ್ರಹಣ ಸಂಭವಿಸಲಿದೆ. ರಾತ್ರಿ ಚಂದ್ರ ಪೂರ್ತಿಯಾಗಿ ಭೂಮಿಯ ನೆರಳಿನಲ್ಲಿ ಬರುವ ಕಾರಣ ಖಗ್ರಾಸ ಚಂದ್ರಗ್ರಹಣ ಎಂದು ಇದನ್ನು ಕರೆಯುತ್ತಾರೆ. ಭೂಮಿಯು ಚಂದ್ರನ ಮೇಲೆ ನೇರವಾಗಿ […]

ನಾಳೆ ಖಗ್ರಾಸ ಚಂದ್ರ ಗ್ರಹಣ : 5.27 ಗಂಟೆ ನಭದಲ್ಲಿ ಬೆಳಕು-ನೆರಳಿನ ಕೌತುಕದಾಟ Read More »

ಡಿ.ಕೆ.ಶಿವಕುಮಾರ್‌ ದೇಶದ ಎರಡನೇ ಶ್ರೀಮಂತ ಸಚಿವ

1413 ಕೋ. ರೂ. ಸಂಪತ್ತು ಹೊಂದಿರುವ ಡಿಕೆಶಿ ನವದೆಹಲಿ: ಕರ್ನಾಟಕದ ಡಿಸಿಎಂ ಡಿ.ಕೆ. ಶಿವಕುಮಾರ್ ದೇಶದ ಎರಡನೇ ಶ್ರೀಮಂತ ಸಚಿವ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ವರದಿ ಹೇಳಿದೆ. ಕನಜಕಪುರ ವಿಧಾನಸಭೆ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಡಿಕೆಶಿ ಒಟ್ಟು ಆಸ್ತಿ 1413 ಕೋ. ರೂ. ಕೇಂದ್ರ ಸಚಿವರಾದ ಆಂಧ್ರದ ಟಿಡಿಪಿಯ 5705 ಕೋ. ರೂ. ಆಸ್ತಿಯೊಂದಿಗೆ ಪ್ರಥಮ ಸ್ಥಾನದಲ್ಲಿದ್ದಾರೆ. ಅವರು ಗುಂಟೂರು ಕ್ಷೇತ್ರದ ಸಂಸದರಾಗಿದ್ದಾರೆ. ರಾಜ್ಯ ವಿಧಾನಸಭೆಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರ ಸಚಿವರು ಚುನಾವಣೆ ಸಂದರ್ಭದಲ್ಲಿ

ಡಿ.ಕೆ.ಶಿವಕುಮಾರ್‌ ದೇಶದ ಎರಡನೇ ಶ್ರೀಮಂತ ಸಚಿವ Read More »

ಧರ್ಮಸ್ಥಳ ಪ್ರಕರಣವನ್ನು ಎನ್‌ಐಎ ತನಿಖೆಗೆ ವಹಿಸುತ್ತಾ ಕೇಂದ್ರ?

ಸ್ವಾಮೀಜಿಗಳ ನಿಯೋಗಕ್ಕೆ ಅಮಿತ್‌ ಶಾ ನೀಡಿದರು ಭರವಸೆ ಧರ್ಮಸ್ಥಳ: ಧರ್ಮಸ್ಥಳ ಪ್ರಕರಣದ ಎಲ್ಲ ಬೆಳವಣಿಗೆಗಳನ್ನು ನಾನೇ ಖುದ್ದಾಗಿ ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಈ ಬಗ್ಗೆ ಸಚಿವ ಸಂಪುಟ ನೇತೃತ್ವದಲ್ಲಿ ಸಭೆ ನಡೆಸುತ್ತೇವೆ. ಬಳಿಕ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಕರ್ನಾಟಕದ ಸ್ವಾಮೀಜಿಗಳ ನಿಯೋಗಕ್ಕೆ ಭರವಸೆ ನೀಡಿದ್ದಾರೆ. ಧರ್ಮಸ್ಥಳದ ಮೇಲಿನ ಅಪಪ್ರಚಾರ ಸಂಬಂಧಿತ ಎಲ್ಲ ಪ್ರಕರಣಗಳ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ (ಎನ್‌ಐಎ) ವಹಿಸಬೇಕೆಂದು ಆಗ್ರಹಿಸಿ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ, ಮಂಗಳೂರಿನ

ಧರ್ಮಸ್ಥಳ ಪ್ರಕರಣವನ್ನು ಎನ್‌ಐಎ ತನಿಖೆಗೆ ವಹಿಸುತ್ತಾ ಕೇಂದ್ರ? Read More »

ತೆರಿಗೆ ಇಳಿಕೆ : ಇಳಿಯಲಿದೆ ಜನಸಾಮಾನ್ಯರ ಹೊರೆ

ಜಿಎಸ್‌ಟಿ ದರದಲ್ಲಿ ಭಾರಿ ಬದಲಾವಣೆ; ಕೇಂದ್ರದಿಂದ ಜನರಿಗೆ ದೀಪಾವಳಿಗೂ ಮೊದಲೇ ಭರ್ಜರಿ ಉಡುಗೊರೆ ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಅಗತ್ಯ ವಸ್ತುಗಳ ಬೆಲೆ ಇಳಿಕೆ ಮಾಡುವ ಕುರಿತು ನೀಡಿದ ವಾಗ್ದಾನವನ್ನು ಈಡೇರಿಸುವತ್ತ ಕೇಂದ್ರ ಸರ್ಕಾರ ಮುಂದಾಗಿದೆ. ಬುಧವಾರ ನಡೆದ ಕೇಂದ್ರ ಮತ್ತು ರಾಜ್ಯಗಳನ್ನು ಒಳಗೊಂಡ ಜಿಎಸ್​ಟಿ ಮಂಡಳಿ ಸಭೆಯಲ್ಲಿ ಕೇಂದ್ರ ಸರ್ಕಾರ ಸಲ್ಲಿಸಿದ ಜಿಎಸ್‌ಟಿ ಕಡಿತ ಮತ್ತು ಸುಧಾರಣೆಗಳ ಪ್ರಸ್ತಾವನೆಗಳನ್ನು ಸರ್ವಾನುಮತದಿಂದ ಅನುಮೋದಿಸಲಾಗಿದೆ. ಇನ್ನು ಮುಂದೆ ದೇಶದಲ್ಲಿ ಎರಡು ಜಿಎಸ್‌ಟಿ ಸ್ಲ್ಯಾಬ್‌ ಇರಲಿದ್ದು

ತೆರಿಗೆ ಇಳಿಕೆ : ಇಳಿಯಲಿದೆ ಜನಸಾಮಾನ್ಯರ ಹೊರೆ Read More »

ಕಾಂಗ್ರೆಸ್‌ ರಾಷ್ಟ್ರೀಯ ವಕ್ತಾರನ ಬಳಿಯಲ್ಲೇ ಇದೆ ಎರಡು ವೋಟರ್‌ ಐಡಿ

ಮತ ಕಳ್ಳತನ ಆರೋಪ ಮಾಡಿದ ಕಾಂಗ್ರೆಸ್‌ಗೆ ತೀವ್ರ ಮುಖಭಂಗವಾದ ಪ್ರಕರಣ ನವದೆಹಲಿ: ಬಿಜೆಪಿ ಮತಗಳ್ಳತನ ಮಾಡುತ್ತಿದೆ ಎಂದು ದೇಶಾದ್ಯಂತ ಗುಲ್ಲೆಬ್ಬಿಸುತ್ತಿರುವ ಕಾಂಗ್ರೆಸ್‌ಗೆ ಈ ಆರೋಪ ತಿರುಗುಬಾಣವಾಗಿ ಪರಿಣಮಿಸಿದೆ. ಕಾಂಗ್ರೆಸ್‌ನ ರಾಷ್ಟ್ರೀಯ ವಕ್ತಾರ ಮತ್ತು ರಾಹುಲ್‌ ಗಾಂಧಿಯ ಪರಮಾಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಪವನ್‌ ಖೇರಾ ಅವರೇ ಎರಡೆರಡು ವೋಟರ್‌ ಐಡಿ ಹೊಂದಿರುವುದು ಬಯಲಾಗಿದ್ದು, ಈ ಕುರಿತು ಚುನಾವಣಾ ಆಯೋಗ ಅವರಿಗೆ ನೋಟಿಸ್‌ ಜಾರಿ ಮಾಡಿದೆ. ಮತ ಕಳ್ಳತನ ಎಸಗುತ್ತಿರುವ ಬಿಜೆಪಿ ಮೇಲೆ ಹೈಡ್ರೋಜನ್‌ ಬಾಂಬ್‌ ಹಾಕಲಾಗುವುದು ಎಂದು ರಾಹುಲ್‌

ಕಾಂಗ್ರೆಸ್‌ ರಾಷ್ಟ್ರೀಯ ವಕ್ತಾರನ ಬಳಿಯಲ್ಲೇ ಇದೆ ಎರಡು ವೋಟರ್‌ ಐಡಿ Read More »

232 ಕೋ. ರೂ. ವಂಚನೆ : ವಿಮಾನ ನಿಲ್ದಾಣ ಪ್ರಾಧಿಕಾರದ ಮ್ಯಾನೇಜರ್‌ ಬಂಧನ

ಸರ್ಕಾರದ ಹಣವನ್ನು ತನ್ನ ಖಾತೆಗಳಿಗೆ ವರ್ಗಾಯಿಸಿಕೊಂಡು ಗೋಲ್‌ಮಾಲ್‌ ನವದೆಹಲಿ: 232 ಕೋಟಿ ರೂ. ವಂಚನೆ ಪ್ರಕರಣದಲ್ಲಿ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಹಿರಿಯ ಮ್ಯಾನೇಜರ್‌ ರಾಹುಲ್ ವಿಜಯ್‌ ಅವರನ್ನು ಸಿಬಿಐ ಬಂಧಿಸಿದೆ. ರಾಹುಲ್ ವಿಜಯ್ ಸುಮಾರು 232 ಕೋಟಿ ರೂ. ಸರ್ಕಾರದ ಹಣವನ್ನು ನೇರವಾಗಿ ತನ್ನ ವೈಯಕ್ತಿಕ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದಾರೆ. ನಂತರ ಆ ಹಣವನ್ನು ಬ್ಯುಸಿನೆಸ್ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ತನಿಖಾಧಿಕಾರಿಗಳು ಈ ಪ್ರಕರಣವನ್ನು ವರ್ಷದ ಅತಿದೊಡ್ಡ ಹಣಕಾಸು ಹಗರಣಗಳಲ್ಲಿ ಒಂದು ಎಂದು ಹೇಳಿದ್ದಾರೆ.

232 ಕೋ. ರೂ. ವಂಚನೆ : ವಿಮಾನ ನಿಲ್ದಾಣ ಪ್ರಾಧಿಕಾರದ ಮ್ಯಾನೇಜರ್‌ ಬಂಧನ Read More »

ರಷ್ಯಾದಿಂದ ಭಾರತ ತೈಲ ಖರೀದಿಸಿದರೆ ಬ್ರಾಹ್ಮಣರು ಶ್ರೀಮಂತರಾಗುತ್ತಾರಂತೆ!

ಎಡಬಿಡಂಗಿ ಹೇಳಿಕೆ ನೀಡಿದ ಟ್ರಂಟ್‌ ಸಲಹೆಗಾರ ಪೀಟರ್ ನವರೊ ವಾಷಿಂಗ್ಟನ್‌: ರಷ್ಯಾ-ಉಕ್ರೇನ್‌ ಯುದ್ಧವನ್ನು ಮೋದಿ ಯುದ್ಧ ಎಂದು ಕರೆದಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ವಾಣಿಜ್ಯ ಸಲಹೆಗಾರ ಪೀಟರ್ ನವರೊ ಈಗ ಭಾರತದವರನ್ನು ಪ್ರಚೋದಿಸಲು ಜಾತಿ ಅಸ್ತ್ರವನ್ನು ಪ್ರಯೋಗಿಸಿದ್ದಾರೆ. ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವ ಮೂಲಕ ಬ್ರಾಹ್ಮಣರು ಭಾರತೀಯ ಜನರ ವೆಚ್ಚದಲ್ಲಿ ಶ್ರೀಮಂತರಾಗುತ್ತಿದ್ದಾರೆ ಎಂದು ಎಡಬಿಡಂಗಿ ಹೇಳಿಕೆ ನೀಡಿದ್ದಾರೆ. ಚೀನದ ಟಿಯಾಂಜಿನ್‌ನಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಶೃಂಗಸಭೆಯಲ್ಲಿ ಮೋದಿ, ಪುಟಿನ್‌, ಕ್ಸಿ ಜಿನ್‌ಪಿಂಗ್‌ ಮಾತುಕತೆ ನಡೆಸುತ್ತಿರುವ

ರಷ್ಯಾದಿಂದ ಭಾರತ ತೈಲ ಖರೀದಿಸಿದರೆ ಬ್ರಾಹ್ಮಣರು ಶ್ರೀಮಂತರಾಗುತ್ತಾರಂತೆ! Read More »

ಎಲ್‍ ಐಸಿ ಸುವರ್ಣ ಮಹೋತ್ಸವದ ಅಂಗವಾಗಿ ವಿದ್ಯಾರ್ಥಿ ವೇತನ ಯೋಜನೆ ಘೋಷಣೆ

ಎಲ್ಐಸಿ ಸುವರ್ಣ ಮಹೋತ್ಸವ್‍ ಪ್ರತಿಷ್ಠಾನವು ಭಾರತದಾದ್ಯಂತ ಎಲ್ ಐಸಿ ಸುವರ್ಣ ಮಹೋತ್ಸವ ಅಂಗವಾಗಿ 2025 ರ ವಿದ್ಯಾರ್ಥಿವೇತನ ಯೋಜನೆಯನ್ನು ಘೋಷಿಸಲು ಸಂತೋಷಪಡುತ್ತಿದೆ. ಆಸಕ್ತ ಮತ್ತು ಅರ್ಹ ವಿದ್ಯಾರ್ಥಿಗಳು ಯಾವುದೇ ವಿಭಾಗದಲ್ಲಿ ವೈದ್ಯಕೀಯ ಎಂಜಿನಿಯರಿಂಗ್ ಪದವಿಯಲ್ಲಿ ಉನ್ನತ ಶಿಕ್ಷಣವನ್ನು ಪಡೆಯಲು, ಯಾವುದೇ ಕ್ಷೇತ್ರದಲ್ಲಿ ಸಂಯೋಜಿತ ಕೋರ್ಸ್‌ಗಳು ಅಥವಾ ಇತರ ಸಮಾನ ಪಡೆಗಳಲ್ಲಿ ಡಿಪ್ಲೊಮಾ  ಹಾಗು ITI ಕೋರ್ಸ್ಗಳನ್ನು ಪಡೆಯಲು ಬಯಸುವವರು ಇದರ ಪ್ರಯೋಜನವನ್ನು ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ಪೋಸ್ಟರನ್ನು ಗಮನಿಸಿ

ಎಲ್‍ ಐಸಿ ಸುವರ್ಣ ಮಹೋತ್ಸವದ ಅಂಗವಾಗಿ ವಿದ್ಯಾರ್ಥಿ ವೇತನ ಯೋಜನೆ ಘೋಷಣೆ Read More »

ಮಳೆಯಿಂದಾಗುತ್ತಿರುವ ಪ್ರಾಕೃತಿಕ ವಿಪತ್ತಿನ ಬಗ್ಗೆ ಪ್ರಧಾನಿ ಮೋದಿ ಬೇಸರ

ನವದೆಹಲಿ: ಪ್ರಧಾನಿ ಮೋದಿ ಅವರು ತಮ್ಮ ತಿಂಗಳ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್’ ನಲ್ಲಿ ದೇಶದಲ್ಲಿ ನಡೆಯುತ್ತಿರುವ ಪ್ರಾಕೃತಿಕ ವಿಕೋಪಗಳ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಇದು ಪ್ರತಿಯೊಬ್ಬ ಭಾರತೀಯನನ್ನೂ ದುಃಖಕ್ಕೆ ದೂಡಿದೆ ಎಂದು ಹೇಳಿದ್ದಾರೆ. ಈ ಬಾರಿಯ ಮಳೆಗಾಲದಲ್ಲಿ ನಡೆಯುತ್ತಿರುವ ಪ್ರಾಕೃತಿಕ ವಿಕೋಪಗಳು ದೇಶವನ್ನು ಪರೀಕ್ಷೆಗೆ ಒಡ್ಡಿದೆ. ಪರಿಸರ ಮತ್ತು ಮಾನವನಿಗೆ ಸಾಕಷ್ಟು ಹಾನಿಗಳಾಗಿವೆ. ಕಳೆದ ಕೆಲವು ವಾರಗಳಲ್ಲಿ ನಾವು ಪ್ರವಾಹ, ಭೂಕುಸಿತದಂತಹ ಹಲವಾರು ಪ್ರಾಕೃತಿಕ ವಿನಾಶ ಕಂಡಿದ್ದೇವೆ. ಜನರ ಜೀವನ ಅಪಾಯದಲ್ಲಿದೆ. ಇದು ಪ್ರತಿಯೊಬ್ಬ

ಮಳೆಯಿಂದಾಗುತ್ತಿರುವ ಪ್ರಾಕೃತಿಕ ವಿಪತ್ತಿನ ಬಗ್ಗೆ ಪ್ರಧಾನಿ ಮೋದಿ ಬೇಸರ Read More »

ಪ್ರಧಾನಿ ನರೇಂದ್ರ ಮೋದಿಯ ಐತಿಹಾಸಿಕ ಚೀನ ಭೇಟಿ ಪ್ರಾರಂಭ

7 ವರ್ಷಗಳ ಬಳಿಕ ಚೀನಕ್ಕೆ ಹೋದ ಮೋದಿ; ಅಧ್ಯಕ್ಷ ಷಿ ಜಿನ್​​ಪಿಂಗ್ ಜೊತೆ ಮಾತುಕತೆ ಬೀಜಿಂಗ್: ಪ್ರಧಾನಿ ನರೇಂದ್ರ ಮೋದಿ ಇಂದು ಚೀನ ಅಧ್ಯಕ್ಷ ಷಿ ಜಿನ್​​ಪಿಂಗ್ ಹಾಗೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜತೆ ಮಾತುಕತೆ ನಡೆಸಲಿದ್ದಾರೆ. ಜಪಾನ್ ಭೇಟಿ ಮುಗಿಸಿ ಪ್ರಧಾನಿ ನರೇಂದ್ರ ಮೋದಿ ಚೀನ ತಲುಪಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸುಂಕ ಬೆದರಿಕೆ ಸಡ್ಡು ಹೊಡೆದು ಪ್ರಧಾನಿ ಮೋದಿ ಚೀನ ಭೇಟಿ ಕೈಗೊಂಡಿದ್ದು, ಇದನ್ನು ಇಡೀ ಜಗತ್ತು ಕುತೂಹಲದಿಂದ ವೀಕ್ಷಿಸುತ್ತಿದೆ.

ಪ್ರಧಾನಿ ನರೇಂದ್ರ ಮೋದಿಯ ಐತಿಹಾಸಿಕ ಚೀನ ಭೇಟಿ ಪ್ರಾರಂಭ Read More »

error: Content is protected !!
Scroll to Top