ದೇಶ

ಬಗೆಹರಿಯದ ಇಂಡಿಗೋ ತಾಂತ್ರಿಕ ಅಡಚಣೆ : 300ಕ್ಕೂ ಅಧಿಕ ವಿಮಾನ ಯಾನ ರದ್ದು

ಮೂರನೇ ದಿನವೂ ಪ್ರಯಾಣಿಕರ ಪರದಾಟ ; ಸಂಸ್ಥೆಯ ಉನ್ನತಾಧಿಕಾರಿಗಳಿಗೆ ಸರ್ಕಾರದ ಬುಲಾವ್‌ ಬೆಂಗಳೂರು : ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆಯಾದ ಇಂಡಿಗೋದಲ್ಲಿ ಉಂಟಾಗಿರುವ ಭಾರಿ ಅಡಚಣೆ ಮೂರನೇ ದಿನವಾದ ಗುರುವಾರವೂ ಮುಂದುವರಿದಿದೆ. ನಿನ್ನೆ ದೆಹಲಿ, ಮುಂಬೈ, ಬೆಂಗಳೂರು ಏರ್‌ಪೋರ್ಟ್‌ ಸೇರಿದಂತೆ ವಿವಿಧ ವಿಮಾನ ನಿಲ್ದಾಣಗಳಿಂದ ಸುಮಾರು 200 ವಿಮಾನಗಳ ಹಾರಾಟ ರದ್ದುಗೊಳಿಸಲಾಗಿತ್ತು. ಇನ್ನು ಕೆಲ ವಿಮಾನಗಳ ಹಾರಾಟದಲ್ಲಿ ವಿಳಂಬ ಕಂಡುಬಂದಿತ್ತು. ಈ ಸಮಸ್ಯೆ ಸತತ ಮೂರನೇ ದಿನಕ್ಕೆ ಕಾಲಿಟ್ಟಿದೆ. ವಿಮಾನದಲ್ಲಿನ ತಾಂತ್ರಿಕ ದೋಷ ಹಾಗೂ ಸಿಬ್ಬಂದಿ ಕೊರತೆ […]

ಬಗೆಹರಿಯದ ಇಂಡಿಗೋ ತಾಂತ್ರಿಕ ಅಡಚಣೆ : 300ಕ್ಕೂ ಅಧಿಕ ವಿಮಾನ ಯಾನ ರದ್ದು Read More »

ಇಂದು ರಷ್ಯಾ ಅಧ್ಯಕ್ಷ ಪುಟಿನ್‌ ಭಾರತ ಭೇಟಿ

ಹೀಗಿದೆ ರಷ್ಯಾ ಅಧ್ಯಕ್ಷರ ಬಂದೋಬಸ್ತ್‌ ವ್ಯವಸ್ಥೆ ನವದೆಹಲಿ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ ವಾರ್ಷಿಕ ಶೃಂಗಸಭೆಯಲ್ಲಿ ಭಾಗವಹಿಸಲು ಇಂದು ಭಾರತಕ್ಕೆ ಆಗಮಿಸುತ್ತಿದ್ದಾರೆ. ಗುರುವಾರ ಸಂಜೆಯ ವೇಳೆ ಪುಟಿನ್‌ ಅವರ ವಿಮಾನ ದೆಹಲಿಯಲ್ಲಿ ಲ್ಯಾಂಡ್‌ ಆಗಲಿದೆ. ಐದು ಸ್ತರದ ರಕ್ಷಣಾ ವ್ಯವಸ್ಥೆಯೊಂದಿಗೆ ಪುಟಿನ್‌ 2 ದಿನಗಳ ಭಾರತದಲ್ಲಿ ತಂಗಲಿದ್ದಾರೆ. ಪುಟಿನ್‌ ಆಗಮನಕ್ಕೆ ಮೊದಲೇ ಭದ್ರತಾ ವ್ಯವಸ್ಥೆ ಬಗ್ಗೆ ಪರಿಶೀಲನೆ ನಡೆಸಲು 50ಕ್ಕೂ ಹೆಚ್ಚು ರಷ್ಯಾದ ಭದ್ರತಾ ಸಿಬ್ಬಂದಿ ತಂಡ ದೆಹಲಿಗೆ ಆಗಮಿಸಿದೆ. ಪುಟಿನ್ ಭದ್ರತೆಯ ಹೊಣೆ ಪ್ರೆಸಿಡೆನ್ಶಿಯಲ್‌ ಸೆಕ್ಯೂರಿಟಿ

ಇಂದು ರಷ್ಯಾ ಅಧ್ಯಕ್ಷ ಪುಟಿನ್‌ ಭಾರತ ಭೇಟಿ Read More »

ದೆಹಲಿ ಕಾರು ಬಾಂಬ್‌ ಸ್ಫೋಟ : ಬೆಂಗಳೂರು ಜೈಲಿನಲ್ಲಿ ಎನ್‌ಐಎ ತನಿಖೆ

ಜೈಲಿನಲ್ಲಿರುವ ಉಗ್ರನಿಗೆ ಡಾಕ್ಟರ್‌ ಟೆರರ್‌ಗಳ ಜೊತೆ ಸಂಪರ್ಕದ ಅನುಮಾನ ಬೆಂಗಳೂರು : ದೆಹಲಿ ಕಾರು ಬಾಂಬ್‌ಸ್ಫೋಟ ಪ್ರಕರಣದ ತನಿಖೆ ನಡೆಸುತ್ತಿರುವ ಎನ್‌ಐಎ ತಂಡ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಸ್ಫೋಟಕ್ಕೂ ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಂಕಿತ ಉಗ್ರ ಮೊಬೈಲ್ ಬಳಕೆ ಮಾಡಿರುವುದಕ್ಕೂ ಸಂಬಂಧ ಇದೆಯಾ ಎಂಬ ಅನುಮಾನ ಮೂಡಿದೆ. ಈಗಾಗಲೇ ಎನ್ಐಎ ದೇಶದ ಹಲವು ಕಡೆ ದಾಳಿಯನ್ನು ನಡೆಸಿ, ಹಲವು ದಾಖಲೆಗಳು ವಶಪಡಿಸಿಕೊಂಡ ತನಿಖೆ ನಡೆಸುತ್ತಿದೆ. ಇತ್ತೀಚೆಗೆ

ದೆಹಲಿ ಕಾರು ಬಾಂಬ್‌ ಸ್ಫೋಟ : ಬೆಂಗಳೂರು ಜೈಲಿನಲ್ಲಿ ಎನ್‌ಐಎ ತನಿಖೆ Read More »

ದುರ್ಬಲ ಬೌಲಿಂಗ್‌, ಕಳಪೆ ಫೀಲ್ಡಿಂಗ್‌ನಿಂದಾಗಿ ಸೋತ ಭಾರತ

358 ರನ್‌ ಮಾಡಿದರೂ ಗೆಲ್ಲಲಾಗದೆ ಸರಣಿ 1-1 ಸಮಬಲ ರಾಯ್‌ಪುರ : ಬರೋಬ್ಬರಿ ಎರಡು ಶತಕಗಳ ನೆರವಿನೊಂದಿಗೆ 358 ರನ್‌ಗಳ ಬೃಹತ್‌ ಮೊತ್ತ ಕಲೆ ಹಾಕಿದರೂ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ಸೋತಿದೆ. ರಾಂಚಿಯಲ್ಲಿ ನಡೆದಿದ್ದ ಮೊದಲ ಏಕದಿನ ಪಂದ್ಯವನ್ನು ಕೊನೆಯ ಓವರ್​ನಲ್ಲಿ ಗೆದ್ದಿಕೊಂಡಿದ್ದ ಟೀಂ ಇಂಡಿಯಾ ರಾಯ್‌ಪುರದಲ್ಲಿ ನಡೆದ ಎರಡನೇ ಏಕದಿನ ಪಂದ್ಯವನ್ನು ಕೊನೆಯ ಓವರ್​ನಲ್ಲಿ ಸೋತಿದೆ. ಕಳಪೆ ಫೀಲ್ಡಿಂಗ್, ಬೌಲಿಂಗ್‌ಗೆ ಭಾರತ ಭಾರಿ ಬೆಲೆತೆತ್ತಿದೆ. ಟೀಂ ಇಂಡಿಯಾ ಬ್ಯಾಟರ್​ಗಳು ಕಲೆಹಾಕಿದ್ದ 358 ರನ್​ಗಳನ್ನು ತಂಡದ

ದುರ್ಬಲ ಬೌಲಿಂಗ್‌, ಕಳಪೆ ಫೀಲ್ಡಿಂಗ್‌ನಿಂದಾಗಿ ಸೋತ ಭಾರತ Read More »

ಜಾರ್ಖಂಡ್‌ನಲ್ಲಿ ಸದ್ಯದಲ್ಲೇ ಸರ್ಕಾರ ಬದಲು : ಎನ್‌ಡಿಎ ಸೇರಲು ಜೆಎಂಎಂ ಉತ್ಸುಕ

ಬಿಹಾರದ ಹೀನಾಯ ಸೋಲಿನ ಬಳಿಕ ಇಂಡಿ ಒಕ್ಕೂಟಕ್ಕೆ ಇನ್ನೊಂದು ಹಿನ್ನಡೆಯಾಗುವ ಸಾಧ್ಯತೆ ನವದೆಹಲಿ: ಬಿಹಾರದಲ್ಲಿ ಹೀನಾಯವಾಗಿ ಸೋತು ಹೋಗಿರುವ ಕಾಂಗ್ರೆಸ್‌ ನೇತೃತ್ವದ ಇಂಡಿ ಮೈತ್ರಿಕೋಟಕ್ಕೆ ಈಗ ಜಾರ್ಖಂಡ್‌ನಲ್ಲೂ ಭಾರಿ ಹಿನ್ನಡೆಯಾಗುವ ಸಾಧ್ಯತೆಯೊಂದು ಗೋಚರಿಸುತ್ತಿದೆ. ಜಾರ್ಖಂಡ್‌ನಲ್ಲಿ ಇಂಡಿ ಒಕ್ಕೂಟದ ಪ್ರಮುಖ ಪಾಲುದಾರನಾಗಿರುವ ಹೇಮಂತ್‌ ಸೊರೇನ್‌ ನೇತೃತ್ವದ ಜಾರ್ಖಂಡ್‌ ಮುಕ್ತಿ ಮೋರ್ಚಾ ಪಕ್ಷವೇ ಬಿಜೆಪಿ ನೇತೃತ್ವದ ಎನ್‌ಡಿಎ ತೆಕ್ಕೆಗೆ ಬೀಳಲು ತಯಾರಿ ನಡೆಸಿದೆ ಎನ್ನಲಾಗುತ್ತಿದೆ. ಅಂದ ಹಾಗೇ ಈ ದಿಢೀರ್‌ ರಾಜಕೀಯ ಬೆಳವಣೆಗೆಗೂ ಕಾರಣ ಬಿಹಾರದ ಫಲಿತಾಂಶವೇ ಆಗಿದೆ. ಜಾರ್ಖಂಡ್‌

ಜಾರ್ಖಂಡ್‌ನಲ್ಲಿ ಸದ್ಯದಲ್ಲೇ ಸರ್ಕಾರ ಬದಲು : ಎನ್‌ಡಿಎ ಸೇರಲು ಜೆಎಂಎಂ ಉತ್ಸುಕ Read More »

ಇಂದು ಎರಡನೇ ಏಕದಿನ : ಸರಣಿ ಗೆಲುವಿಗೆ ಭಾರತ ಯತ್ನ

ಭಾರತಕ್ಕೆ ಸರಣಿ ಗೆಲುವಿಗೆ ; ದಕ್ಷಿಣ ಆಫ್ರಿಕಾಕ್ಕೆ ಸರಣಿ ಸಮಬಲಗೊಳಿಸಲು ನಿರ್ಣಾಯಕ ಪಂದ್ಯ ರಾಯ್‌ಪುರ : ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯ ಡಿ.3ರಂದು ರಾಯ್‌ಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ. ರಾಂಚಿ ಪಂದ್ಯವನ್ನು ಗೆದ್ದ ನಂತರ 1-0 ಮುನ್ನಡೆ ಸಾಧಿಸಿರುವ ಟೀಂ ಇಂಡಿಯಾ ಸರಣಿಯಲ್ಲಿ ಅಜೇಯ ಮುನ್ನಡೆ ಸಾಧಿಸಲು ಪ್ರಯತ್ನಿಸುತ್ತಿದೆ. ಸುಮಾರು ಮೂರು ವರ್ಷಗಳ ನಂತರ ರಾಯ್‌ಪುರ ಏಕದಿನ ಪಂದ್ಯವನ್ನು ಆಯೋಜಿಸುತ್ತಿದೆ, ಆದ್ದರಿಂದ

ಇಂದು ಎರಡನೇ ಏಕದಿನ : ಸರಣಿ ಗೆಲುವಿಗೆ ಭಾರತ ಯತ್ನ Read More »

ಮೊಬೈಲ್‌ಗಳಲ್ಲಿ ಸಂಚಾರ್‌ ಸಾಥಿ ಆ್ಯಪ್ ಕಡ್ಡಾಯ

ಮೊಬೈಲ್‌ ಕಳ್ಳತನವಾದರೆ, ಕಳೆದುಹೋದರೆ ಪತ್ತೆಹಚ್ಚಲು ನೆರವಾಗುವ ಆ್ಯಪ್ ನವದೆಹಲಿ: ಭಾರತದಲ್ಲಿ ಮಾರಾಟವಾಗುವ ಎಲ್ಲ ಹೊಸ ಮೊಬೈಲ್ ಫೋನ್‌ಗಳಲ್ಲಿ ಸಂಚಾರ್ ಸಾಥಿ ಅಪ್ಲಿಕೇಶನ್‌ಗಳನ್ನು ಕಡ್ಡಾಯವಾಗಿ ಇನ್‌ಸ್ಟಾಲ್‌ ಮಾಡಬೇಕೆಂದು ದೂರಸಂಪರ್ಕ ಇಲಾಖೆ ಮೊಬೈಲ್‌ ಹ್ಯಾಂಡ್‌ಸೆಟ್‌ ತಯಾರಕರಿಗೆ ಸೂಚಿಸಿದೆ. ಆ್ಯಪ್ ಇನ್‌ಸ್ಟಾಲ್ ಮಾಡಲು 90 ದಿನಗಳ ಗಡುವು ನೀಡಲಾಗಿದ್ದು ಅದನ್ನು ಅನ್‌ ಇನ್‌ಸ್ಟಾಲ್ ಮಾಡುವ ಆಯ್ಕೆ ನೀಡಬಾರದು. ಈಗಾಗಲೇ ಬಳಕೆಯಲ್ಲಿರುವ ಮೊಬೈಲ್‌ಗಳಿಗೆ ಸಾಫ್ಟ್‌ವೇರ್ ಅಪ್‌ಡೇಟ್‌ ನೀಡುವಾಗ ಈ ಆ್ಯಪ್ ಲಭ್ಯವಾಗುವಂತೆ ಮಾಡಬೇಕು ಎಂದು ಸೂಚಿಸಿದೆ. ಕೇಂದ್ರ ಸರ್ಕಾರ ಈ ಆದೇಶವನ್ನು ಸ್ಮಾರ್ಟ್‌ಫೋನ್

ಮೊಬೈಲ್‌ಗಳಲ್ಲಿ ಸಂಚಾರ್‌ ಸಾಥಿ ಆ್ಯಪ್ ಕಡ್ಡಾಯ Read More »

ವಿದೇಶಗಳಿಂದ ಅಡಿಕೆ ಆಮದು ನಿಯಂತ್ರಿಸಲು ಕ್ಯಾ. ಬ್ರಿಜೇಶ್‌ ಚೌಟ ಆಗ್ರಹ

ಸಂಸತ್‌ ಅಧಿವೇಶನದಲ್ಲಿ ಅಡಿಕೆ ಬೆಳೆಗಾರರ ಸಮಸ್ಯೆಗಳ ಕುರಿತು ಗಮನ ಸೆಳೆದ ಸಂಸದ ಮಂಗಳೂರು : ಭೂತಾನ್, ಮಯನ್ಮಾರ್ ಮತ್ತು ಶ್ರೀಲಂಕಾದಂತಹ ದೇಶಗಳಿಂದ ಭಾರತಕ್ಕೆ ದೊಡ್ಡ ಪ್ರಮಾಣದಲ್ಲಿ ಅಡಿಕೆ ಆಮದು ಆಗುತ್ತಿರುವುದರಿಂದ ನಮ್ಮ ಬೆಳೆಗಾರರಿಗೆ ಎದುರಾಗಿರುವ ಗಂಭೀರ ಪರಿಣಾಮಗಳ ಬಗ್ಗೆ ದಕ್ಷಿಣ ಕನ್ನಡ ಸಂಸದ ಕ್ಯಾ.ಬ್ರಿಜೇಶ್ ಚೌಟ ಸಂಸತ್‌ ಅಧಿವೇಶನದಲ್ಲಿ ಮಾತನಾಡಿದ್ದಾರೆ. ಲೋಕಸಭೆಯಲ್ಲಿ ಈ ತುರ್ತು ವಿಚಾರವನ್ನು ಪ್ರಸ್ತಾಪಿಸಿದ ಸಂಸದ ಕ್ಯಾ.ಚೌಟ ಅವರು ನೆರೆಯ ಸಣ್ಣ ದೇಶಗಳಿಂದ ಸುಂಕ ಮುಕ್ತ ಅಡಿಕೆ ಆಮದು ನೀತಿಯಿಂದಾಗಿ ಕರ್ನಾಟಕ ಸೇರಿ ನಮ್ಮ

ವಿದೇಶಗಳಿಂದ ಅಡಿಕೆ ಆಮದು ನಿಯಂತ್ರಿಸಲು ಕ್ಯಾ. ಬ್ರಿಜೇಶ್‌ ಚೌಟ ಆಗ್ರಹ Read More »

ಅಡುಗೆ ಗ್ಯಾಸ್‌ ಬೆಲೆ ತುಸು ಇಳಿಕೆ

ನವದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಪ್ರಸ್ತುತ ಕಡಿಮೆಯಾದ ಪರಿಣಾಮವಾಗಿ ಅದರ ಉಪಉತ್ಪನ್ನವಾದ ದ್ರವೀಕೃತ ಪೆಟ್ರೋಲಿಯಂ ಅನಿಲದ (ಎಲ್‌ಪಿಜಿ) ಬೆಲೆ ಸಹ ಕಡಿಮೆಯಾಗುತ್ತಿವೆ. ಹೀಗಾಗಿ ಭಾರತದ ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳು ಎಲ್‌ಪಿಜಿ ವಾಣಿಜ್ಯ ಸಿಲಿಂಡರ್‌ ಬೆಲೆಯನ್ನು ತುಸು ಕಡಿಮೆ ಮಾಡಿವೆ. 19 ಕೆಜಿ ವಾಣಿಜ್ಯ ಸಿಲಿಂಡರ್‌ ಬೆಲೆ 10 ರೂಪಾಯಿಗಳಷ್ಟು ಕಡಿಮೆ ಆಗಿದೆ. ಹೊಸ ಬೆಲೆ ಡಿಸೆಂಬರ್ 1ರಿಂದಲೇ ಜಾರಿಗೆ ಬಂದಿದೆ. ಒಂದು ತಿಂಗಳ ಹಿಂದೆ, ಬೆಲೆಯನ್ನು 5 ರೂಪಾಯಿಗಳಷ್ಟು ಕಡಿಮೆ ಮಾಡಲಾಗಿತ್ತು. ಸರ್ಕಾರಿ

ಅಡುಗೆ ಗ್ಯಾಸ್‌ ಬೆಲೆ ತುಸು ಇಳಿಕೆ Read More »

ಇಂದಿನಿಂದ ಸಂಸತ್ತಿನ ಚಳಿಗಾಲದ ಅಧಿವೇಶನ : ಎಸ್‌ಐಆರ್‌ ಬಿರುಗಾಳಿ ಎಬ್ಬಿಸುವ ನಿರೀಕ್ಷೆ

10 ಮಸೂದೆ ಮಂಡನೆಗೆ ಸರ್ಕಾರ ಸಜ್ಜು; ವಿಪಕ್ಷದ ಬತ್ತಳಿಕೆಯಲ್ಲಿದೆ ಹಲವು ಅಸ್ತ್ರ ನವದೆಹಲಿ : ಸಂಸತ್ತಿನ ಚಳಿಗಾಲದ ಅಧಿವೇಶನ ಇಂದಿನಿಂದ ಆರಂಭವಾಗಲಿದೆ. ಮತದಾರರ ಪಟ್ಟಿಗೆ ವಿಶೇಷ ತಿದ್ದುಪಡಿಗಳನ್ನು ಸೂಚಿಸುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ವಿಚಾರದಲ್ಲಿ ಸರ್ಕಾರವನ್ನು ಸಿಲುಕಿಸಲು ವಿರೋಧ ಪಕ್ಷಗಳು ಸಂಪೂರ್ಣವಾಗಿ ಸಿದ್ಧವಾಗಿವೆ. ಭಾನುವಾರ ನಡೆದ ಸರ್ವಪಕ್ಷ ಸಭೆಯಲ್ಲಿ ಎಸ್​ಐಆರ್ ಕುರಿತು ಚರ್ಚಿಸದಿದ್ದರೆ ಅಧಿವೇಶನ ನಡೆಸಲು ಅವಕಾಶ ನೀಡುವುದಿಲ್ಲ ಎಂದು ವಿರೋಧ ಪಕ್ಷಗಳು ಹೇಳಿವೆ. ಈ ವಿಷಯದ ಬಗ್ಗೆ ವಿರೋಧ ಪಕ್ಷಗಳು ಒಗ್ಗಟ್ಟಿನಿಂದ ವರ್ತಿಸುತ್ತಿರುವಂತೆ ಮೇಲ್ನೋಟಕ್ಕೆ

ಇಂದಿನಿಂದ ಸಂಸತ್ತಿನ ಚಳಿಗಾಲದ ಅಧಿವೇಶನ : ಎಸ್‌ಐಆರ್‌ ಬಿರುಗಾಳಿ ಎಬ್ಬಿಸುವ ನಿರೀಕ್ಷೆ Read More »

error: Content is protected !!
Scroll to Top