ದೇಶ

ಇಂದಿನಿಂದ ಮೋದಿ ಅಮೆರಿಕ ಪ್ರವಾಸ

ಹೊಸದಿಲ್ಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಬೆಳಗ್ಗೆ ಮೂರು ದಿನಗಳ ಅಮೆರಿಕ ಪ್ರವಾಸಕ್ಕೆ ತೆರಳಿದ್ದಾರೆ. ವಿಶ್ವದ ಬೇರೆ ನಾಯಕರೊಂದಿಗೆ ಅಮೆರಿಕದ ವಿಲ್ಮಿಂಗ್ಟನ್‌ಗೆ ಆಗಮಿಸಲಿರುವ ಪ್ರಧಾನಿ ಮೋದಿಯವರು ಅಮೆರಿಕ ಅಧ್ಯಕ್ಷ ಜೋ ಬೈಡನ್ ತವರು ರಾಜ್ಯ ಡೆಲವಾರೆಯಲ್ಲಿ ನಡೆಯಲಿರುವ ಕ್ವಾಡ್ ಶೃಂಗ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಭಾರತ, ಆಸ್ಟ್ರೇಲಿಯ ಮತ್ತು ಜಪಾನ್ ನಾಯಕರಿಗೆ ಆತಿಥ್ಯ ನೀಡಲಿರುವ ಅಧ್ಯಕ್ಷ ಜೋ ಬೈಡನ್ ನಂತರ ಪ್ರತ್ಯೇಕ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.ಮೋದಿ ಅಮೆರಿಕ ಪ್ರವಾಸ ಕೈಗೊಳ್ಳುತ್ತಿರುವ ಸಂದರ್ಭದಲ್ಲಿ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಪ್ರಧಾನಮಂತ್ರಿ ಕಚೇರಿ, […]

ಇಂದಿನಿಂದ ಮೋದಿ ಅಮೆರಿಕ ಪ್ರವಾಸ Read More »

ತಿರುಪತಿ ಲಡ್ಡು ವಿವಾದ : ಗುಣಮಟ್ಟ ಪರಿಶೀಲನೆಗೆ ಸಮಿತಿ ರಚನೆ

ಹೈದರಾಬಾದ್‌: ತಿರುಪತಿ ದೇವಳದ ಲಡ್ಡು ಪ್ರಸಾದದಲ್ಲಿ ದನದ ಮತ್ತು ಮೀನಿನ ಕೊಬ್ಬು ಸೇರಿಸಲಾಗಿದೆ ಎಂಬ ವಿಚಾರ ಬಯಲಾಗಿ ಕೋಲಾಹಲ ಉಂಟಾದ ಬೆನ್ನಿಗೆ ಲಡ್ಡು ಪ್ರಸಾದಕ್ಕೆ ಬಳಸುವ ತುಪ್ಪದ ಗುಣಮಟ್ಟ ಪರೀಕ್ಷಿಸಲು ದೇವಸ್ಥಾನದ ಆಡಳಿತ ಮಂಡಳಿ ಸಮಿತಿಯೊಂದನ್ನು ರಚಿಸಿದೆ. ಡಾ.ಸುರೇಂದ್ರನಾಥ್, ಡಾ.ವಿಜಯ್ ಭಾಸ್ಕರ್ ರೆಡ್ಡಿ, ಡಾ.ಸ್ವರ್ಣಲತಾ ಮತ್ತು ಡಾ.ಮಹದೇವನ್ ಅವರನ್ನೊಳಗೊಂಡ ತಜ್ಞರ ಸಮಿತಿಯನ್ನು ರಚಿಸಲಾಗಿದ್ದು, ಒಂದು ವಾರದೊಳಗೆ ವರದಿ ಸಲ್ಲಿಸುವ ನಿರೀಕ್ಷೆಯಿದೆ ಎಂದು ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿ) ಕಾರ್ಯನಿರ್ವಾಹಕ ಅಧಿಕಾರಿ ಜೆ.ಶ್ಯಾಮಲಾ ರಾವ್ ತಿಳಿಸಿದ್ದಾರೆ. ಟೆಂಡರ್‌ಗಳಲ್ಲಿ ಗುಣಮಟ್ಟದ

ತಿರುಪತಿ ಲಡ್ಡು ವಿವಾದ : ಗುಣಮಟ್ಟ ಪರಿಶೀಲನೆಗೆ ಸಮಿತಿ ರಚನೆ Read More »

ತಿರುಪತಿ ಲಡ್ಡಿಗೆ ದನದ ಕೊಬ್ಬು ಮೀನಿನೆಣ್ಣೆ | ವಿಶ್ವ ಹಿಂದೂ ಪರಿಷದ್ ತೀವ್ರ ಖಂಡನೆ | ಕಠಿಣ ಶಿಕ್ಷೆಗೆ ಆಗ್ರಹ

ಮಂಗಳೂರು: ಪ್ರಪಂಚದಾದ್ಯಂತ  ತಿರುಪತಿ ವೆಂಕಟರಮಣನ ಮೇಲೆ ಅತೀವ ಭಕ್ತಿ ಭಾವ ಇದ್ದು ಅಲ್ಲಿಯ ಪ್ರಸಾದವನ್ನು ತಿರುಪತಿ ದೇವರ ಪ್ರತೀಕದಂತೆ ನೋಡುತ್ತಾರೆ. ಪ್ರಸಾದವನ್ನು  ದನದ ಕೊಬ್ಬು ಮತ್ತು ಮೀನಿನೆಣ್ಣೆ ಉಪಯೋಗಿಸಿ ತಯಾರಿಸಿದ್ದು ಸಮಸ್ತ ಹಿಂದೂ ಸಮಾಜಕ್ಕೆ ಅತೀವ ನೋವು ತಂದಿದೆ. ಇದನ್ನು ವಿಶ್ವ ಹಿಂದೂ ಪರಿಷದ್ ತೀವ್ರವಾಗಿ ಖಂಡಿಸುತ್ತದೆ. ಇದಕ್ಕೆ ಕಾರಣಕರ್ತರಾಗಿದ್ದ ಹಿಂದಿನ ಮುಖ್ಯಮಂತ್ರಿ ಜಗನ್ ರವರ ಸರಕಾರದಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆಂದು ಸಿ ಬಿ ಐ ಮೂಲಕ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು

ತಿರುಪತಿ ಲಡ್ಡಿಗೆ ದನದ ಕೊಬ್ಬು ಮೀನಿನೆಣ್ಣೆ | ವಿಶ್ವ ಹಿಂದೂ ಪರಿಷದ್ ತೀವ್ರ ಖಂಡನೆ | ಕಠಿಣ ಶಿಕ್ಷೆಗೆ ಆಗ್ರಹ Read More »

ತಿರುಪತಿ ಲಡ್ಡುವಿನಲ್ಲಿ ದನದ ಕೊಬ್ಬು ಬಳಕೆ ದೃಢ : ಕೋಟ್ಯಂತರ ಭಕ್ತರ ಮನಸ್ಸಿಗೆ ಘಾಸಿ

ತುಪ್ಪದಲ್ಲಿ ಮೀನಿನ ಎಣ್ಣೆ, ಪ್ರಾಣಿಗಳ ಕೊಬ್ಬು, ಹಂದಿಯ ಕೊಬ್ಬು, ಪಾಮಾಯಿಲ್‌, ಸೋಯಾಬಿನ್‌, ಸೂರ್ಯಕಾಂತಿ ಎಣ್ಣೆ, ಮೆಕ್ಕೆಜೋಳ ಎಣ್ಣೆ ಬೆರಕೆ ತಿರುಪತಿ: ಪ್ರಾಣಿಗಳ ಕೊಬ್ಬು ಬಳಸಿ ತಿರುಪತಿ ದೇವಸ್ಥಾನದ ಲಡ್ಡು ತಯಾರಿಕೆ ಮಾಡಲಾಗುತ್ತಿದೆ ಎಂದು ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮಾಡಿದ ಆರೋಪ ನಿಜ ಎನ್ನುವುದು ಲ್ಯಾಬ್‌ ಪರೀಕ್ಷೆಯಲ್ಲಿ ದೃಢಪಟ್ಟಿದೆ. ನಾಯ್ಡು ಹೇಳಿಕೆ ನಿನ್ನೆ ಇಡೀ ದೇಶದಲ್ಲಿ ಸಂಚಲನ ಉಂಟುಮಾಡಿತ್ತು. ತಿರುಪತಿ ತಿಮ್ಮಪ್ಪನ ಕೋಟ್ಯಂತರ ಭಕ್ತರ ಧಾರ್ಮಿಕ ಭಾವನೆಯ ಜೊತೆಗೆ ಹಿಂದಿನ ಆಂಧ್ರ ಪ್ರದೇಶ ಸರಕಾರ ಚೆಲ್ಲಾಟವಾಡಿದ್ದು

ತಿರುಪತಿ ಲಡ್ಡುವಿನಲ್ಲಿ ದನದ ಕೊಬ್ಬು ಬಳಕೆ ದೃಢ : ಕೋಟ್ಯಂತರ ಭಕ್ತರ ಮನಸ್ಸಿಗೆ ಘಾಸಿ Read More »

ಶಾಲೆಯಲ್ಲಿ ಈದ್‌ ಮಿಲಾದ್‌ ಆಚರಣೆ : ಪೋಷಕರ ಆಕ್ಷೇಪ

ಮಕ್ಕಳಿಗೆ ಅರಬ್‌ ಉಡುಪು ಹಾಕಿ ಕುಣಿಸಿದ್ದಕ್ಕೆ ಆಕ್ರೋಶ ಕಾರ್ಕಳ : ತಾಲೂಕಿನ ಸಚ್ಚರಿಪೇಟೆಯ ಖಾಸಗಿ ಶಾಲೆಯೊಂದರಲ್ಲಿ ಈದ್ ಮಿಲಾದ್ ಹಬ್ಬ ಆಚರಿಸಿದ ವಿಡಿಯೋ ವೈರಲ್‌ ಆದ ಬಳಿಕ ವಿವಾದ ಸೃಷ್ಟಿಯಾಗಿದೆ. ಸಚ್ಚರಿಪೇಟೆಯ ಲಯನ್ಸ್ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಪ್ರವಾದಿ ಜನ್ಮದಿನಾಚರಣೆ ಪ್ರಯುಕ್ತ ಈದ್ ಮಿಲಾದ್ ಹಬ್ಬ ಆಚರಿಸಲಾಗಿತ್ತು. ಬಿಜೆಪಿ ಮುಖಂಡರೊಬ್ಬರು ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ. ಇದರ ವಿಡಿಯೋ ಈಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ಅನೇಕ ಹಿಂದೂ ಮಕ್ಕಳ ಪೋಷಕರು ಶಾಲೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಾಲೆಯಲ್ಲಿ ಈದ್‌ ಮಿಲಾದ್‌ ಆಚರಣೆ : ಪೋಷಕರ ಆಕ್ಷೇಪ Read More »

ಈತ ದೇಶದ ಶ್ರೀಮಂತ ಭಿಕ್ಷುಕ!

ಮುಂಬಯಿಯಲ್ಲಿ ಭಿಕ್ಷೆ ಬೇಡುವ ಈತನ ಬಳಿಯಿದೆ 7.5 ಕೋ. ರೂ. ಆಸ್ತಿ ಮುಂಬಯಿ : ಭಿಕ್ಷೆ ಬೇಡುವವರೆಲ್ಲ ಕಡುಬಡವರು, ಒಂದೊತ್ತಿನ ಊಟಕ್ಕೂ ಗತಿಯಿಲ್ಲದವರು ಎನ್ನುವುದು ಸಾಮಾನ್ಯವಾದ ಭಾವನೆ. ಬಹುತೇಕ ಭೀಕ್ಷುಕರು ಇದೇ ರೀತಿ ಇರುತ್ತಾರೆ. ಆದರೆ ಭಿಕ್ಷೆ ಬೇಡಿಯೇ ಕೋಟಿಗಟ್ಟಲೆ ಸಂಪತ್ತು ಗಳಿಸಿದವರೂ ಇದ್ದಾರೆ. ಈ ಪೈಕಿ ಮುಂಬಯಿಯಲ್ಲಿ ಭಿಕ್ಷೆ ಬೇಡುವ ಭರತ್‌ ಜೈನ್‌ ಎಂಬವರು ದೇಶದ ಅತ್ಯಂತ ಶ್ರೀಮಂತ ಭಿಕ್ಷುಕ ಎಂದು ಗುರುತಿಸಲ್ಪಟ್ಟಿದ್ದಾರೆ. ಇವರ ಒಟ್ಟು ಆಸ್ತಿ ಬರೋಬ್ಬರಿ 7.5 ಕೋ. ರೂ.! ಭರತ್‌ ಜೈನ್‌ಗೆ

ಈತ ದೇಶದ ಶ್ರೀಮಂತ ಭಿಕ್ಷುಕ! Read More »

ತಿರುಪತಿ ಲಡ್ಡು ತಯಾರಿಸಲು ಪ್ರಾಣಿಗಳ ಕೊಬ್ಬು ಬಳಕೆ: ನಾಯ್ಡು ಆರೋಪ

ಕ್ಷೇತ್ರದ ಪಾವಿತ್ರ್ಯ ಕೆಡಿಸಲು ಪ್ರಯತ್ನಿಸಿದ್ದಾರೆ ಎಂದ ಆಂಧ್ರ ಸಿಎಂ ಅಮರಾವತಿ: ಕೋಟ್ಯಂತರ ಹಿಂದುಗಳು ಪರಮ ಪವಿತ್ರ ಎಂಬ ನಂಬಿಕೆಯಿಂದ ಸ್ವೀಕರಿಸುವ ತಿರುಪತಿ ದೇವಸ್ಥಾನದ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಬಳಸಲಾಗಿದೆ ಎಂಬ ಆರೋಪವೊಂದು ಭಾರಿ ಕೋಲಾಹಲ ಉಂಟು ಮಾಡಿದೆ. ಹಿಂದಿನ ವೈಎಸ್‌ಆರ್ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರದಲ್ಲಿದ್ದಾಗ ತಿರುಪತಿ ಲಡ್ಡು ತಯಾರಿಸಲು ಪ್ರಾಣಿಗಳ ಕೊಬ್ಬನ್ನು ಬಳಸಲಾಗುತ್ತಿತ್ತು ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಗಂಭೀರ ಆರೋಪ ಮಾಡಿದ ಬಳಿಕ ಈ ಕುರಿತು ದೇಶಾದ್ಯಂತ ಚರ್ಚೆ ಶುರುವಾಗಿದೆ. ಈ

ತಿರುಪತಿ ಲಡ್ಡು ತಯಾರಿಸಲು ಪ್ರಾಣಿಗಳ ಕೊಬ್ಬು ಬಳಕೆ: ನಾಯ್ಡು ಆರೋಪ Read More »

ಇಂದಿನಿಂದ ಭಾರತ-ಬಾಂಗ್ಲಾದೇಶ ಮೊದಲ ಟೆಸ್ಟ್‌

ವಿಶ್ವ ಚಾಂಪಿಯನ್‌ಷಿಪ್‌ ಫೈನಲ್‌ಗೆ ಲಗ್ಗೆಯಿಡಲು ಮಹತ್ವದ ಸರಣಿ ಚೆನ್ನೈ : ಭಾರತ ಮತ್ತು ಬಾಂಗ್ಲಾದೇಶ ನಡುವಿನ ಟೆಸ್ಟ್ ಸರಣಿ ಇಂದಿನಿಂದ ಶುರುವಾಗಲಿದೆ. 5 ಪಂದ್ಯಗಳ ಈ ಸರಣಿಯಲ್ಲಿ ಮೊದಲು ಎರಡು ಟೆಸ್ಟ್ ಪಂದ್ಯಗಳನ್ನಾಡಲಾಗುತ್ತಿದ್ದು, ಇದಾದ ಬಳಿಕ ಟಿ20 ಸರಣಿ ನಡೆಯಲಿದೆ. ಈ ಸರಣಿಯ ಮೊದಲ ಟೆಸ್ಟ್ ಪಂದ್ಯ ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಗುರುವಾರದಿಂದ ಆರಂಭವಾಗಲಿದ್ದು, ಎರಡನೇ ಪಂದ್ಯ ಸೆಪ್ಟೆಂಬರ್ 27ರಿಂದ ಕಾನ್ಪುರದ ಗ್ರೀನ್ ಪಾರ್ಕ್ ಮೈದಾನದಲ್ಲಿ ನಡೆಯಲಿದೆ.ಈ ಎರಡು ಟೆಸ್ಟ್ ಪಂದ್ಯಗಳು ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್​ನ

ಇಂದಿನಿಂದ ಭಾರತ-ಬಾಂಗ್ಲಾದೇಶ ಮೊದಲ ಟೆಸ್ಟ್‌ Read More »

ಕೇರಳದ ಮಲಪ್ಪುರಂನಲ್ಲಿ ಮಾಸ್ಕ್ ಕಡ್ಡಾಯ, ಶಾಲೆಗಳಿಗೆ ರಜೆ ಘೋಷಣೆ | ನಿಫಾ ವೈರಸ್‍ ಗೆ ಇಬ್ಬರು ಬಲಿ

ಕೇರಳ: ನಿಫಾ ವೈರಸ್ ಪರಿಣಾಮ ಕೇರಳದ ಮಲಪ್ಪುರಂ ಜಿಲೆಯಲ್ಲಿ ಮಾಸ್ಕ್ ಕಡ್ಡಾಯಗೊಳಿಸಲಾಗಿದ್ದು, ಈ ಜಿಲ್ಲೆಯ ಹಲವು ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಈ ಬಗ್ಗೆ ಆರೋಗ್ಯ ಇಲಾಖೆ ಮಾರ್ಗಸೂಚಿ ಆದೇಶ ಹೊರಡಿಸಿದೆ. ಕೇರಳದಲ್ಲಿ ನಿಫಾ ವೈರಸ್‌ನಿಂದ 2 ಸಾವು ಖಚಿತವಾಗುತ್ತಿದ್ದಂತೆ ಕೇರಳ ಸರ್ಕಾರ ಅಲರ್ಟ್ ಆಗಿದೆ. ಬೆಳಗ್ಗೆ 10 ಗಂಟೆಯಿಂದ 7 ಗಂಟೆ ವರೆಗೆ ಸಾರ್ವಜನಿಕರಿಗೆ ಓಡಾಟಕ್ಕೆ ಅವಕಾಶ ನೀಡಲಾಗಿದೆ. ಬಳಿಕ ಸಾರ್ವಜನಿಕ ಪ್ರದೇಶಗಳಲ್ಲಿ ಭೇಟಿ ಸೇರಿದಂತೆ ಜನದಟ್ಟಣೆ ನಿಷೇಧಿಸಿದೆ. ಕೆಲ ಅಗತ್ಯ ವಸ್ತುಗಳಾದ ಹಾಲು ಸೇರಿದಂತೆ ಇತರ

ಕೇರಳದ ಮಲಪ್ಪುರಂನಲ್ಲಿ ಮಾಸ್ಕ್ ಕಡ್ಡಾಯ, ಶಾಲೆಗಳಿಗೆ ರಜೆ ಘೋಷಣೆ | ನಿಫಾ ವೈರಸ್‍ ಗೆ ಇಬ್ಬರು ಬಲಿ Read More »

ಜಮ್ಮು-ಕಾಶ್ಮೀರದಲ್ಲಿ ಇಂದು ಮೊದಲ ಹಂತದ ಮತದಾನ

ಕಣಿವೆ ರಾಜ್ಯದಲ್ಲಿ ಹತ್ತು ವರ್ಷದ ಬಳಿಕ ವಿಧಾನಸಭೆ ಚುನಾವಣೆ ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಹತ್ತು ವರ್ಷಗಳ ಬಳಿಕ ಇದೇ ಮೊದಲ ಬಾರಿ ವಿಧಾನಸಭೆ ಚುನಾವಣೆ ನಡೆಯುತ್ತಿದೆ. ಮೊದಲ ಹಂತದ ಮತದಾನ ಇಂದು ನಡೆಯಲಿದ್ದು, ರಾಜ್ಯದ 90 ಕ್ಷೇತ್ರಗಳ ಪೈಕಿ 24 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.ಜಮ್ಮು ಮತ್ತು ಕಾಶ್ಮೀರದಲ್ಲಿ 2014ರ ಬಳಿಕ ಮೊದಲ ಅಸೆಂಬ್ಲಿ ಚುನಾವಣೆ ನಡೆಯುತ್ತಿದೆ. 2019ರಲ್ಲಿ ರಾಜ್ಯಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ್ದ 370ನೇ ವಿಧಿಯನ್ನು ತೆಗೆದುಹಾಕಿದ ನಂತರ ರಾಜ್ಯದಲ್ಲಿ ಮೊದಲ ಬಾರಿ ವಿಧಾನಸಭೆ ಚುನಾವಣೆ

ಜಮ್ಮು-ಕಾಶ್ಮೀರದಲ್ಲಿ ಇಂದು ಮೊದಲ ಹಂತದ ಮತದಾನ Read More »

error: Content is protected !!
Scroll to Top