ದೇಶ

ಭಾರತೀಯ ಸೇನೆಯ ಸಾಮರ್ಥ್ಯದ ಬಗ್ಗೆ ಸೇನಾ ಮುಖ್ಯಸ್ಥರು ಹೇಳಿದ್ದೇನು ಗೊತ್ತಾ?

ನವದೆಹಲಿ: ಪಾಕಿಸ್ತಾನದ ಗಡಿ ಭಾಗಗಳಲ್ಲಿ ಭಾರತದ ಎಚ್ಚರಿಕಾ ಕಣ್ಗಾವಲು ನಿರಂತರವಾಗಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರು ತಿಳಿಸಿದ್ದಾರೆ. ಭಾರತೀಯ ಸೇನಾ ದಿನಾಚರಣೆಗೆ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ‌ಮಾತನಾಡಿದ ಅವರು, ದೇಶದ ಭದ್ರತಾ ವ್ಯವಸ್ಥೆಯ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಭಯೋತ್ಪಾದನೆಯ ‌ವಿರುದ್ಧದ ಕಾರ್ಯಾಚರಣೆ ಮತ್ತು ಸೇನೆಯ ಭವಿಷ್ಯದ ಯೋಜನೆಗಳ ಕುರಿತು ಅವರು ಸ್ಪಷ್ಟ ಮಾಹಿತಿ ನೀಡಿರುವುದಾಗಿದೆ. ಅಂತರಾಷ್ಟ್ರೀಯ ಗಡಿ ನಿಯಂತ್ರಣ ರೇಖೆಯ ಸಮೀಪ ಎಂಟು ಭಯೋತ್ಪಾದಕ ಶಿಬಿರಗಳು ನಡೆಯುತ್ತಿರುವ ಮಾಹಿತಿ ಇದ್ದು, ಅವುಗಳ ಮೇಲೆ […]

ಭಾರತೀಯ ಸೇನೆಯ ಸಾಮರ್ಥ್ಯದ ಬಗ್ಗೆ ಸೇನಾ ಮುಖ್ಯಸ್ಥರು ಹೇಳಿದ್ದೇನು ಗೊತ್ತಾ? Read More »

ರಸ್ತೆಯಲ್ಲಿ ಸಿಕ್ಕಿದ 45 ಲ.ರೂ. ಮೌಲ್ಯದ ಚಿನ್ನ ಮರಳಿಸಿ ಪ್ರಾಮಾಣಿಕತೆ ಮೆರೆದ ಮಹಿಳೆ

ಬಡ ಪೌರ ಕಾರ್ಮಿಕ ಮಹಿಳೆಯ ಪ್ರಾಮಾಣಿಕತೆಗೆ ಮುಖ್ಯಮಂತ್ರಿಯಿಂದಲೇ ಮೆಚ್ಚುಗೆ ಚೆನ್ನೈ : ರಸ್ತೆಯಲ್ಲಿ ಒಂದು ರೂಪಾಯಿ ನಾಣ್ಯ ಬಿದ್ದು ಸಿಕ್ಕಿದರೂ ಮೆಲ್ಲಗೆ ಜೇಬಿಗಿಳಿಸುವವರ ನಡುವೆ ಪೌರ ಕಾರ್ಮಿಕ ಮಹಿಳೆಯೊಬ್ಬರು ರಸ್ತೆಯಲ್ಲಿ ಬಿದ್ದಿದ್ದ ಸುಮಾರು 45 ಲ. ರೂ. ಮೌಲ್ಯದ ಆಭರಣವನ್ನು ವಾರೀಸುದಾರರಿಗೆ ಮರಳಿಸಿ ಅಪೂರ್ವವಾದ ಪ್ರಾಮಾಣಿಕತೆ ಮೆರೆದಿದ್ದಾರೆ. ನಗರದಲ್ಲಿ ಕಸ ಸ್ವಚ್ಛಗೊಳಿಸುವ ವೇಳೆ ರಸ್ತೆ ಬದಿಯಲ್ಲಿ ಬಿದ್ದಿದ್ದ ಬರೋಬ್ಬರಿ 45 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಆಭರಣಗಳನ್ನು ಪೊಲೀಸರಿಗೆ ಒಪ್ಪಿಸಿ ಪೌರ ಕಾರ್ಮಿಕ ಮಹಿಳೆಯೊಬ್ಬರು ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ರಸ್ತೆಯಲ್ಲಿ ಸಿಕ್ಕಿದ 45 ಲ.ರೂ. ಮೌಲ್ಯದ ಚಿನ್ನ ಮರಳಿಸಿ ಪ್ರಾಮಾಣಿಕತೆ ಮೆರೆದ ಮಹಿಳೆ Read More »

ನಿತಿನ್‌ ನಬಿನ್‌ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ : ಜ.20ರಂದು ಅಧಿಕಾರ ಸ್ವೀಕಾರ

ಜೆ.ಪಿ.ನಡ್ಡಾ ಉತ್ತರಾಧಿಕಾರಿಯಾಗಿ ಪಕ್ಷವನ್ನು ಮುನ್ನಡೆಸಲಿರುವ ಯುವ ನಾಯಕ ನವದೆಹಲಿ: ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಯಲ್ಲಿ ಬಿಜೆಪಿ ಎಂದಿನಂತೆ ಅಚ್ಚರಿಯೊಂದನ್ನು ನೀಡಿದೆ. ಬಿಜೆಪಿ ಕಾರ್ಯಕಾರಿ ಅಧ್ಯಕ್ಷ ನಿತಿನ್ ನಬಿನ್ ಜನವರಿ 20ರಂದು ಪಕ್ಷದ ಪೂರ್ಣ ಪ್ರಮಾಣದ ರಾಷ್ಟ್ರೀಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ನಿಬಿನ್‌ ನಿತಿನ್‌ ಕಾರ್ಯಕಾರಿ ಅಧ್ಯಕ್ಷರಾಗಿ ಆಯ್ಕೆಯಾದದ್ದೇ ಅಚ್ಚರಿಯಾಗಿತ್ತು. ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿಗಳು, ರಾಷ್ಟ್ರೀಯ ಪದಾಧಿಕಾರಿಗಳು, ರಾಜ್ಯಾಧ್ಯಕ್ಷರು ಮತ್ತು ರಾಷ್ಟ್ರೀಯ ಕಾರ್ಯಕಾರಿ ಮಂಡಳಿ ಸದಸ್ಯರು ಸೇರಿದಂತೆ ಇತರ ಹಿರಿಯ ನಾಯಕರ ಸಮ್ಮುಖದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆ.

ನಿತಿನ್‌ ನಬಿನ್‌ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ : ಜ.20ರಂದು ಅಧಿಕಾರ ಸ್ವೀಕಾರ Read More »

ಗಡಿಭಾಗದಲ್ಲಿ ಪಾಕಿಸ್ತಾನದ ಶಸ್ತ್ರಾಸ್ತ್ರ ಹೊತ್ತ ಡ್ರೋನ್‌ಗಳ ಹಾರಾಟ ಪತ್ತೆ

ಭಾರತಕ್ಕೆ ನುಗ್ಗಲು ಯತ್ನಿಸಿದ 5ಕ್ಕೂ ಅಧಿಕ ಡ್ರೋನ್‌ಗಳನ್ನು ಹೊಡೆದುರುಳಿಸಿದ ಸೇನೆ ನವದೆಹಲಿ: ಸಾವಿರಕ್ಕೂ ಹೆಚ್ಚು ಆತ್ಮಹತ್ಯಾ ಬಾಂಬರ್‌ಗಳು ಸಿದ್ಧರಿದ್ದಾರೆ ಮತ್ತು ಭಾರತಕ್ಕೆ ನುಸುಳಲು ಅವಕಾಶ ನೀಡುವಂತೆ ತನ್ನ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಪಾಕಿಸ್ತಾನದ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್‌ ಹೇಳಿದ ಆಡಿಯೋ ಸಂದೇಶವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ವೈರಲ್ ಆಗಿದ್ದು, ಇದರ ಬೆನ್ನಲ್ಲೇ ಜಮ್ಮು ಮತ್ತು ಕಾಶ್ಮೀರದ ನೌಶೇರಾ ಸೆಕ್ಟರ್‌ನಲ್ಲಿ ಗಡಿ ನಿಯಂತ್ರಣ ರೇಖೆ ಬಳಿ ಭಾನುವಾರ ಸಂಜೆ ಪಾಕಿಸ್ತಾನದ ಡ್ರೋನ್‌ಗಳ ಹಾರಾಟ

ಗಡಿಭಾಗದಲ್ಲಿ ಪಾಕಿಸ್ತಾನದ ಶಸ್ತ್ರಾಸ್ತ್ರ ಹೊತ್ತ ಡ್ರೋನ್‌ಗಳ ಹಾರಾಟ ಪತ್ತೆ Read More »

ವರ್ಷದ ಮೊದಲ ಗೆಲುವಿನೊಂದಿಗೆ ಟೀಮ್‌ ಇಂಡಿಯಾ ಶುಭಾರಂಭ

7 ರನ್‌ಗಳಿಂದ ಶತಕ ಮಿಸ್‌ ಮಾಡಿಕೊಂಡ ಕೊಹ್ಲಿ ವಡೋದರ: ವರ್ಷದ ಮೊದಲ ಅಂತಾರಾಷ್ಟ್ರೀಯ ಪಂದ್ಯವನ್ನು ಗೆದ್ದುಕೊಳ್ಳುವ ಮೂಲಕ ಭಾರತ ಶುಭಾರಂಭ ಮಾಡಿದೆ. ವಡೋದರದ ಬಿಸಿಎ ಮೈದಾನದಲ್ಲಿ ನಿನ್ನೆ ನಡೆದ ಪ್ರಥಮ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್‌ ವಿರುದ್ಧ ಟೀಂ ಇಂಡಿಯಾ 4 ವಿಕೆಟ್‌ಗಳ ಜಯ ಸಾಧಿಸಿದೆ. ಆ ಮೂಲಕ 3 ಪಂದ್ಯಗಳ ಸರಣಿಯಲ್ಲಿ 1-0 ಅಂತರದ ಮುನ್ನಡೆ ಕಾಯ್ದುಕೊಂಡಿದೆ. ಸುಮಾರು 15 ವರ್ಷಗಳ ನಂತರ ವಡೋದರದಲ್ಲಿ ಏಕದಿನ ಪಂದ್ಯವನ್ನಾಡಿದ ಟೀಮ್ ಇಂಡಿಯಾ ಮತ್ತೊಮ್ಮೆ ವಿರಾಟ್ ಕೊಹ್ಲಿ ಅವರ ಅದ್ಭುತ

ವರ್ಷದ ಮೊದಲ ಗೆಲುವಿನೊಂದಿಗೆ ಟೀಮ್‌ ಇಂಡಿಯಾ ಶುಭಾರಂಭ Read More »

ಸೋಮನಾಥ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಮೋದಿ

ಸೋಮನಾಥ ಸ್ವಾಭಿಮಾನ ಪರ್ವದಲ್ಲಿ ಪ್ರಧಾನಿ ಭಾಗಿ ಗಾಂಧಿನಗರ: ಮೂರು ದಿನಗಳ ಕಾಲ ತವರು ರಾಜ್ಯ ಗುಜರಾತ್‌ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಐತಿಹಾಸಿಕ ಸೋಮನಾಥ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ದೇಶದ ಒಳಿತಿಗಾಗಿ ಪ್ರಾರ್ಥನೆ ಮಾಡಿದ್ದಾರೆ. ಜ್ಯೋತಿರ್ಲಿಂಗಗಳಲ್ಲಿ ಒಂದಾದ ಗುಜರಾತ್‌ನ ಶ್ರೀ ಸೋಮನಾಥ ದೇವಾಲಯದ ಮೇಲೆ 1026ರ ಜನವರಿಯಲ್ಲಿ ಮಹಮ್ಮದ್‌ ಘಜ್ನಿ ಮೊದಲ ಬಾರಿಗೆ ದಾಳಿ ನಡೆಸಿ ಜ.10ಕ್ಕೆ (ನಿನ್ನೆ) 1,000 ವರ್ಷಗಳು ಕಳೆದಿವೆ. 1 ಸಾವಿರ ವರ್ಷಗಳ ನಂತರವೂ ಈ ದೇವಾಲಯ ಇಂದಿಗೂ ವೈಭವದಿಂದ ಕಂಗೊಳಿಸುತ್ತಿದೆ.

ಸೋಮನಾಥ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಮೋದಿ Read More »

ವೃದ್ಧ ವೈದ್ಯ ದಂಪತಿಯನ್ನು ಡಿಜಿಟಲ್‌ ಅರೆಸ್ಟ್‌ ಮಾಡಿ 15 ಕೋಟಿ ರೂ. ಲಪಟಾಯಿಸಿದ ಸೈಬರ್‌ ವಂಚಕರು

ಅಮೆರಿಕದಲ್ಲಿ ದುಡಿದು ಗಳೆಸಿದ್ದೆಲ್ಲವನ್ನು ಎರಡು ವಾರದಲ್ಲಿ ಕಳೆದುಕೊಂಡ ವೈದ್ಯ ದಂಪತಿ ನವದೆಹಲಿ : ಅನಿವಾಸಿ ಭಾರತೀಯ ವೃದ್ಧ ದಂಪತಿಯನ್ನು ಡಿಜಿಟಲ್‌ ಅರೆಸ್ಟ್‌ ಮಾಡಿ ಸುಮಾರು 15 ಕೋ. ರೂ. ಲಪಟಾಯಿಸಿದ ಪ್ರಕರಣ ದೆಹಲಿಯಲ್ಲಿ ಬೆಳಕಿಗೆ ಬಂದಿದೆ. ನಾಲ್ಕು ದಶಕಕ್ಕೂ ಹೆಚ್ಚು ಕಾಲ ಅಮೆರಿಕದಲ್ಲಿ ವೈದ್ಯರಾಗಿ ದುಡಿದು ಗಳಿಸಿದ್ದನ್ನೆಲ್ಲ ಈ ವೃದ್ಧ ವೈದ್ಯರು ಬರೀ ಎರಡು ವಾರದಲ್ಲಿ ಕಳೆದುಕೊಂಡಿದ್ದಾರೆ. ಡಾ.ಓಂ ತನೇಜಾ ಮತ್ತು ಡಾ.ಇಂದಿರಾ ತನೇಜಾ ಅವರನ್ನು ಸೈಬರ್‌ ವಂಚಕರು ಎರಡು ವಾರಕ್ಕೂ ಅಧಿಕ ಕಾಲ ಬೆದರಿಸಿ ಡಿಜಿಟಲ್‌

ವೃದ್ಧ ವೈದ್ಯ ದಂಪತಿಯನ್ನು ಡಿಜಿಟಲ್‌ ಅರೆಸ್ಟ್‌ ಮಾಡಿ 15 ಕೋಟಿ ರೂ. ಲಪಟಾಯಿಸಿದ ಸೈಬರ್‌ ವಂಚಕರು Read More »

ಉತ್ತರ ಭಾರತ ಚಳಿಗೆ ಗಢಗಢ : 1.1 ಡಿಗ್ರಿ ಸೆಲ್ಸಿಯಸ್‌ಗೆ ಕುಸಿತದ ತಾಪಮಾನ

ರಸ್ತೆ ಗೋಚರಿಸದೆ ಹಲವೆಡೆ ಸರಣಿ ಅಪಘಾತ ನವದೆಹಲಿ: ಉತ್ತರ ಭಾರತದಲ್ಲಿ ಶೀತ ವಾತಾವರಣ ತೀವ್ರಗೊಂಡಿದೆ. ದಟ್ಟಮಂಜಿನಿಂದ ರಸ್ತೆಗಳೇ ಕಾಣದಂತೆ ಆಗಿದೆ. ಕಡಿಮೆ ಗೋಚರತೆಯಿಂದಾಗಿ ಅಲ್ಲಲ್ಲಿ ಅಪಘಾತ ನಾಲ್ವರು ಸಾವನ್ನಪ್ಪಿದ್ದು, ಸುಮಾರು 30 ಮಂದಿ ಗಾಯಗೊಂಡಿದ್ದಾರೆ. ಪಂಜಾಬ್ ಮತ್ತು ಹರ್ಯಾಣದಲ್ಲಿ ಅಕ್ಕಪಕ್ಕದಲ್ಲಿರುವವರೂ ಕಾಣದಷ್ಟು ದಟ್ಟ ಮಂಜು ಆವರಿಸುತ್ತಿದೆ. ಭಾನುವಾರ, ಸೋಮವಾರ ಉತ್ತರ ಭಾರತದಲ್ಲಿ ಶೀತಗಾಳಿ ಮತ್ತಷ್ಟು ತೀವ್ರಗೊಳ್ಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕಳೆದ ಕೆಲ ದಿನಗಳಿಂದ ಕಾಶ್ಮೀರ ಕಣಿವೆ ಪ್ರದೇಶದಲ್ಲಿ ಶೂನ್ಯಕ್ಕಿಂತಲೂ ಕಡಿಮೆ ತಾಪಮಾನ

ಉತ್ತರ ಭಾರತ ಚಳಿಗೆ ಗಢಗಢ : 1.1 ಡಿಗ್ರಿ ಸೆಲ್ಸಿಯಸ್‌ಗೆ ಕುಸಿತದ ತಾಪಮಾನ Read More »

ಅಯೋಧ್ಯೆ ರಾಮ ಮಂದಿರದ 15 ಕಿ.ಮೀ. ಸುತ್ತಮುತ್ತ ಮಾಂಸಾಹಾರ ನಿಷೇಧ

ಆನ್‌ಲೈನ್‌ನಲ್ಲೂ ಮಾಂಸಾಹಾರ, ಮದ್ಯ ತರಿಸಿಕೊಳ್ಳಲು ಅವಕಾಶವಿಲ್ಲ ಲಖನೌ: ಅಯೋಧ್ಯೆಯ ರಾಮ ಮಂದಿರದ 15 ಕಿ.ಮೀ ವ್ಯಾಪ್ತಿಯಲ್ಲಿ ಮಾಂಸಾಹಾರ ಪದಾರ್ಥಗಳ ವಿತರಣೆಯನ್ನ ನಿಷೇಧಿಸಲಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಮಾಂಸಾಹಾರ ಪದಾರ್ಥಗಳನ್ನ ಪೂರೈಕೆ ಮಾಡುತ್ತಿರುವ ಬಗ್ಗೆ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ʻಪಂಚಕೋಶ ಪರಿಕ್ರಮʼದ ಅಡಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ. ಅಯೋಧ್ಯೆಯ ಕೆಲವು ಹೋಟೆಲ್‌ಗಳು ಮತ್ತು ಹೋಂ ಸ್ಟೇಗಳು ಅತಿಥಿಗಳಿಗೆ ಮಾಂಸಾಹಾರ ಮತ್ತು ಮದ್ಯ ಪೂರೈಕೆ ಮಾಡುತ್ತಿವೆ ಎನ್ನುವ ಆರೋಪ ಕೇಳಿಬಂದಿದೆ. ಅಂತಹ ಚಟುವಟಿಕೆಗಳಿಂದ ದೂರ ಇರುವಂತೆ ಅಧಿಕಾರಿಗಳು

ಅಯೋಧ್ಯೆ ರಾಮ ಮಂದಿರದ 15 ಕಿ.ಮೀ. ಸುತ್ತಮುತ್ತ ಮಾಂಸಾಹಾರ ನಿಷೇಧ Read More »

ಈ ಸಲ ಭಾನುವಾರ ಕೇಂದ್ರ ಬಜೆಟ್‌ ಮಂಡನೆ

ಜನವರಿ 28ರಿಂದ ಸಂಸತ್ತಿನ ಬಜೆಟ್‌ ಅಧಿವೇಶನ ಪ್ರಾರಂಭ ನವದೆಹಲಿ: ಕೇಂದ್ರ ಬಜೆಟನ್ನು ಫೆ.1ರಿಂದ ಮಂಡಿಸುವುದು ಕಳೆದ ಕೆಲವು ವರ್ಷಗಳಿಂದ ಪಾಲಿಸಿಕೊಂಡು ಬಂದ ವಾಡಿಕೆ. ಆದರೆ ಈ ಸಲ ಫೆ.1 ಭಾನುವಾರ ಬರಲಿದೆ. ಹೀಗಾಗಿ ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾನುವಾರ ಬಜೆಟ್‌ ಮಂಡನೆಯಾಗಲಿದೆ. 2025-26ನೇ ಸಾಲಿನ ಬಜೆಟನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಫೆಬ್ರವರಿ 1ರ ಭಾನುವಾರದಂದೇ ಸಂಸತ್ತಿನಲ್ಲಿ ಮಂಡಿಸಲಿದ್ದಾರೆ. ಬಜೆಟ್ ದಾಖಲೆಯ ಪೂರ್ವಗಾಮಿಯಾಗಿರುವ ಆರ್ಥಿಕ ಸಮೀಕ್ಷೆಯನ್ನು ಜನವರಿ 29ರಂದು ಮುಖ್ಯ ಆರ್ಥಿಕ ಸಲಹೆಗಾರ ವಿ

ಈ ಸಲ ಭಾನುವಾರ ಕೇಂದ್ರ ಬಜೆಟ್‌ ಮಂಡನೆ Read More »

error: Content is protected !!
Scroll to Top