ದೇಶ

ಆಯುಷ್ಮಾನ್‌ ವಯ ವಂದನಾ : ಹಿರಿಯರಿಗೆ ವರದಾನ

70 ವರ್ಷ ಮೇಲ್ಪಟ್ಟವರಿಗೆ ಉಚಿತ ವೈದ್ಯಕೀಯ ಶುಶ್ರೂಷೆ ಸೌಲಭ್ಯ ಬೆಂಗಳೂರು: 70 ವರ್ಷಕ್ಕೂ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಆಯುಷ್ಮಾನ್ ಭಾರತ್ ಆರೋಗ್ಯ ವಿಮಾ ಯೋಜನೆಯನ್ನು ಪ್ರಧಾನಿ ನರೇಂದ್ರ ಕಳೆದ ವಾರ ಚಾಲನೆ ನೀಡಿದರು. ಇದು ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯ ವಿಸ್ತರಿತ ಆರೋಗ್ಯ ವಿಮೆ ಯೋಜನೆಯಾಗಿದೆ. ಈಗ 70 ವರ್ಷಕ್ಕೂ ಮೇಲ್ಪಟ್ಟ ಎಲ್ಲ ಹಿರಿಯ ನಾಗರಿಕರು ಆಯುಷ್ಮಾನ್ ವಯ ವಂದನಾ ಕಾರ್ಡ್ ಪಡೆಯಲು ಅರ್ಹರಾಗಿದ್ದಾರೆ. ಈ ಯೋಜನೆಯಲ್ಲಿ ಹಿರಿಯ ನಾಗರಿಕರು 5 ಲಕ್ಷ […]

ಆಯುಷ್ಮಾನ್‌ ವಯ ವಂದನಾ : ಹಿರಿಯರಿಗೆ ವರದಾನ Read More »

ಈ ಸೀಸನ್‌ನಲ್ಲಿ ನಡೆಯಲಿವೆ 40 ಲಕ್ಷ ಮದುವೆಗಳು!

ಮದುವೆಯೊಂದರಿಂದಲೇ 6 ಲಕ್ಷ ಕೋಟಿ ರೂ. ವಹಿವಾಟು ಬೆಂಗಳೂರು : ಮಳೆಗಾಲ ಮುಗಿದದ್ದೇ ತಡ ಮದುವೆ ಸೀಸನ್‌ ಶುರುವಾಗಿದೆ. ಈಗ ಮದುವೆ ಕೂಡ ಪ್ರತಿಷ್ಠೆಯ ಸಂಕೇತವಾಗಿದೆ. ಎಷ್ಟು ದುಡ್ಡು ಇದ್ದರೂ ಮದುವೆ ಖರ್ಚಿಗೆ ಸಾಕಾಗುವುದಿಲ್ಲ ಎಂಬ ಪರಿಸ್ಥಿತಿಯಿದೆ. ಸಾಲಸೋಲ ಮಾಡಿಯಾದರೂ ಅದ್ದೂರಿಯಾಗಿ ಮದುವೆಯಾಗುವ ಶೋಕಿ ಎಲ್ಲೆಡೆ ಕಾಣಿಸುತ್ತದೆ. ಮಂಟಪದಲ್ಲಿ ಶಾಸ್ತ್ರೋಕ್ತವಾಗಿ ನಡೆಯುತ್ತಿದ್ದ ಮದುವೆಗಳು ಈಗ ಈವೆಂಟ್‌ ಮ್ಯಾನೇಜ್‌ಮೆಂಟ್‌ ಬದಲಾಗಿವೆ. ಎಂಗೇಜ್‌ಮೆಂಟ್‌ನಿಂದ ಹಿಡಿದು ಮೊದಲ ರಾತ್ರಿಯ ತನಕದ ಮದುವೆಗೆ ಸಂಬಂಧಪಟ್ಟ ಎಲ್ಲ ವಿಚಾರಗಳನ್ನು ನಿರ್ವಹಿಸುವ ಈವೆಂಟ್‌ ಮ್ಯಾನೇಜ್‌ಮೆಂಟ್‌ ಸಂಸ್ಥೆಗಳು

ಈ ಸೀಸನ್‌ನಲ್ಲಿ ನಡೆಯಲಿವೆ 40 ಲಕ್ಷ ಮದುವೆಗಳು! Read More »

ಲಷ್ಕರ್‌ ಕಮಾಂಡರ್‌ ಹತ್ಯೆಗೆ ಯೋಧರು ಬಳಸಿದ್ದು ಬಿಸ್ಕಿಟ್‌!

ಹಲವು ಭಯೋತ್ಪಾದಕ ದಾಳಿಗಳನ್ನು ನಡೆಸಿದ್ದ ಉಗ್ರ ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಶ್ರೀನಗರದಲ್ಲಿ ಶನಿವಾರ ಪಾಕ್ ಮೂಲದ ಲಷ್ಕರ್ ಉಗ್ರ ಸಂಘಟನೆಯ ಕಮಾಂಡರ್ ಉಸ್ಮಾನ್ ಭಾಯಿಯನ್ನು ಸಾಯಿಸಲು ಯೋಧರು ಬಳಸಿದ್ದು ಬಿಸ್ಕಿಟ್‌ಗಳನ್ನು! ಇದು ಶ್ರೀನಗರದಲ್ಲಿ 2 ವರ್ಷದಲ್ಲಿ ನಡೆದ ಮೊದಲ ಉಗ್ರ ನಿಗ್ರಹ ಕಾರ್ಯಾಚರಣೆ ಆಗಿದೆ. ಉಸ್ಮಾನ್ ಹತ್ಯೆಯಲ್ಲಿ ‘ಬಿಸ್ಕೆಟ್’ ಮಹತ್ವದ ಪಾತ್ರ ವಹಿಸಿದೆ. ಆತ ವಾಸವಿದ್ದ ಸ್ಥಳದಲ್ಲಿ ಅಪಾರ ಸಂಖ್ಯೆಯಲ್ಲಿ ಬೀದಿ ನಾಯಿಗಳು ಇದ್ದು, ಅವುಗಳ ಬೊಗಳುವಿಕೆಯಿಂದ ಉಗ್ರ ಎಚ್ಚೆತ್ತುಕೊಂಡು ಪರಾರಿಯಾಗುವ ಸಾಧ್ಯತೆಯಿತ್ತು. ಹೀಗಾಗಿ ಯೋಧರು ಬಿಸ್ಕೆಟ್‌ ನೀಡಿ

ಲಷ್ಕರ್‌ ಕಮಾಂಡರ್‌ ಹತ್ಯೆಗೆ ಯೋಧರು ಬಳಸಿದ್ದು ಬಿಸ್ಕಿಟ್‌! Read More »

ಎಕ್ಸ್ ಪ್ರೆಸ್ ರೈಲು ಡಿಕ್ಕಿ : ನಾಲ್ವರು ಕಾರ್ಮಿಕರು ಮೃತ್ಯು

ತಿರುವನಂತಪುರಂ: ಎಕ್ಸ್ ಪ್ರೆಸ್ ರೈಲು ಡಿಕ್ಕಿ ಹೊಡೆದು ನಾಲ್ವರು ಕಾರ್ಮಿಕರು ಮೃತಪಟ್ಟ ಘಟನೆ ಕೇರಳದ ಚೋರನೂರ್ ರೈಲು ನಿಲ್ದಾಣದಲ್ಲಿ ಶನಿವಾರ ಸಂಜೆ ನಡೆದಿದೆ. ತಿರುವನಂತಪುರಂ ಕಡೆಗೆ ಸಾಗುತ್ತಿದ್ದ ಕೇರಳ ಎಕ್ಸ್‌ಪ್ರೆಸ್ ಡಿಕ್ಕಿ ಹೊಡೆದ ಪರಿಣಾಮ ತಮಿಳುನಾಡಿನ ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರು ಪೌರ ಕಾರ್ಮಿಕರು ಮೃತಪಟ್ಟಿದ್ದಾರೆ. ರೈಲು ನಿಲ್ದಾಣದಿಂದ ಕೆಲವೇ ಕಿ.ಮೀ. ದೂರದಲ್ಲಿರುವ ತೋರನೂರ್ ಸೇತುವೆ ಬಳಿ ಹಳಿಯಿಂದ ಕಸವನ್ನು ತೆರವುಗೊಳಿಸುತ್ತಿದ್ದಾಗ ನವದೆಹಲಿ- ತಿರುವನಂತಪುರಂ ಮಾರ್ಗದ ಎಕ್ಸ್ ಪ್ರೆಸ್ ರೈಲು ಮಧ್ಯಾಹ್ನ ಕಾರ್ಮಿಕರಿಗೆ ಡಿಕ್ಕಿ ಹೊಡೆದಿದೆ ಎಂದು

ಎಕ್ಸ್ ಪ್ರೆಸ್ ರೈಲು ಡಿಕ್ಕಿ : ನಾಲ್ವರು ಕಾರ್ಮಿಕರು ಮೃತ್ಯು Read More »

ಗ್ಯಾಸ್‌ ಸಿಲಿಂಡರ್‌ ಬೆಲೆ ಸದ್ದಿಲ್ಲದೆ 62 ರೂ. ಏರಿಕೆ

ಹೊಸದಿಲ್ಲಿ : ದೀಪಾವಳಿ ಹಬ್ಬದ ಸಂದರ್ಭದಲ್ಲೇ ತೈಲ ಕಂಪನಿಗಳು ವಾಣಿಜ್ಯ ಸಿಲಿಂಡರ್‌ ಬೆಲೆಯನ್ನು ಸದ್ದಿಲ್ಲದೆ ಏರಿಸಿವೆ. ನಿನ್ನೆ ವಾಣಿಜ್ಯ ಸಿಲಿಂಡರ್‌ ಬೆಲೆ 62 ರೂ. ಏರಿಕೆಯಾಗಿದೆ. ಇದರೊಂದಿಗೆ ಸತತ 3ನೇ ತಿಂಗಳು ಎಲ್‌ಪಿಜಿ ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆಯಾದಂತಾಗಿದೆ. ಆದರೆ 14 ಕೆಜಿಯ ಗೃಹ ಸಿಲಿಂಡರ್ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ.ಸೆಪ್ಟೆಂಬರ್, ಅಕ್ಟೋಬರ್ ತಿಂಗಳಲ್ಲೂ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆ ಮಾಡಲಾಗಿತ್ತು. ಅಕ್ಟೋಬರ್ ತಿಂಗಳಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ 48 ರೂಪಾಯಿ ಏರಿಕೆಯಾಗಿತ್ತು. ಸೆಪ್ಟೆಂಬರ್ ತಿಂಗಳಲ್ಲಿ 19

ಗ್ಯಾಸ್‌ ಸಿಲಿಂಡರ್‌ ಬೆಲೆ ಸದ್ದಿಲ್ಲದೆ 62 ರೂ. ಏರಿಕೆ Read More »

ಹತ್ತು ತಿಂಗಳಲ್ಲಿ 2,140 ಕೋ.ರೂ. ಸೈಬರ್‌ ಚೋರರ ಪಾಲು

ಡಿಜಿಟಲ್‌ ಅರೆಸ್ಟ್‌ ಮೂಲಕ ನಡೆಯುತ್ತಿದೆ ಆನ್‌ಲೈನ್‌ ದರೋಡೆ ಹೊಸದಿಲ್ಲಿ : ಸೈಬರ್‌ ಚೋರರು ಕಳೆದ ಹತ್ತು ತಿಂಗಳಲ್ಲಿ ದೋಚಿದ ಮೊತ್ತ ಬರೋಬ್ಬರಿ 2,140 ಕೋ. ರೂ. ಕೇಂದ್ರ ಗೃಹ ಸಚಿವಾಲಯದ ಸೈಬರ್‌ ವಿಭಾಗ ಈ ಮಾಹಿತಿಯನ್ನು ಬಹಿರಂಗಪಡಿಸಿದೆ. ಆನ್‌ಲೈನ್‌ ವಂಚನೆ ಮತ್ತು ಸೈಬರ್‌ ಅರೆಸ್ಟ್‌ನಂತಹ ತಂತ್ರಗಳಿಂದ ಸೈಬರ್‌ ಚೋರರು ಈ ವರ್ಷದ ಹತ್ತು ತಿಂಗಳಲ್ಲೇ 2,140 ಕೋ. ರೂ. ಲಪಟಾಯಿಸಿದ್ದಾರೆ ಎಂದು ಸೈಬರ್‌ ವಿಭಾಗ ಮಾಹಿತಿ ನೀಡಿದೆ.ಪ್ರತಿ ತಿಂಗಳು ಸರಾಸರಿ 214 ಕೋ.ರೂ.ಯಂತೆ ದೇಶದ ಜನರು ಸೈಬರ್‌

ಹತ್ತು ತಿಂಗಳಲ್ಲಿ 2,140 ಕೋ.ರೂ. ಸೈಬರ್‌ ಚೋರರ ಪಾಲು Read More »

ಕನ್ನಡ ರಾಜ್ಯೋತ್ಸವಕ್ಕೆ ಮೋದಿ ಶುಭಾಶಯ

ಹೊಸದಿಲ್ಲಿ: ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದ ಜನತೆಗೆ ಶುಭ ಹಾರೈಸಿದ್ದಾರೆ. ಸಾಮಾಜಿಕ ಮಾಧ್ಯಮ ಎಕ್ಸ್​​​ನಲ್ಲಿ ಕನ್ನಡದಲ್ಲೇ ಸಂದೇಶ ಪ್ರಕಟಿಸುವ ಪ್ರಧಾನಿ ಕರ್ನಾಟಕದ ಜತೆ ಸದಾ ಸಂತೋಷ, ಯಶಸ್ಸು ಗಳಿಸುವಂತಾಗಲಿ ಎಂದು ಹಾರೈಸಿದ್ದಾರೆ. ಕನ್ನಡ ರಾಜ್ಯೋತ್ಸವವು ಅತ್ಯಂತ ವಿಶೇಷವಾದ ಸಂದರ್ಭವಾಗಿದ್ದು, ಇದು ಕರ್ನಾಟಕದ ಅನುಕರಣೀಯ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಗುರುತಿಸುತ್ತದೆ. ರಾಜ್ಯವು ಮಹಾನ್ ವ್ಯಕ್ತಿಗಳನ್ನು ಪಡೆದಿದ್ದು, ಅವರು ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿ ಮತ್ತು ನಾವೀನ್ಯಕ್ಕೆ ಶಕ್ತಿ ತುಂಬುತ್ತಿದ್ದಾರೆ. ಕರ್ನಾಟಕದ ಜನರು ಸದಾ ಸಂತೋಷ

ಕನ್ನಡ ರಾಜ್ಯೋತ್ಸವಕ್ಕೆ ಮೋದಿ ಶುಭಾಶಯ Read More »

ಮಹಿಳೆ ನಾಪತ್ತೆ : ಪ್ಲಾಸ್ಟಿಕ್ ಚೀಲದಲ್ಲಿ ಮೃತದೇಹ ಪತ್ತೆ

ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ಮಹಿಳೆಯ ದೇಹದ ಭಾಗಗಳು ಪ್ಲಾಸ್ಟಿಕ್ ಚೀಲದಲ್ಲಿ ಪತ್ತೆಯಾದ ಘಟನೆ ರಾಜಸ್ಥಾನದ ಜೋದ್‌ಪುರದಲ್ಲಿ ನಡೆದಿದೆ. ಮೃತಪಟ್ಟವರು ಜೋದ್‌ಪುರದಲ್ಲಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದ ಅನಿತಾ ಚೌಧರಿ (50) ಮೃತದೇಹ ಪತ್ತೆಯಾಗಿದೆ. ಅ.27 ರಂದು ಬ್ಯೂಟಿ ಪಾರ್ಲರ್ ಗೆ ಹೋಗಿದ್ದ ಅನಿತಾ ಮಧ್ಯಾಹ್ನ 2:30 ರ ಸುಮಾರಿಗೆ ಸಲೂನ್ ಬಾಗಿಲು ಹಾಕಿ ನಾಪತ್ತೆಯಾಗಿದ್ದರು. ರಾತ್ರಿಯಾದರೂ ಅನಿತಾ ಮನೆಗೆ ಬಾರದೇ ಇದ್ದುದರಿಂದ ಗಾಬರಿಗೊಂಡ ಪತಿ ಮನಮೋಹನ್‌ ಚೌಧರಿ ಪೊಲೀಸರಿಗೆ ನಾಪತ್ತೆ ದೂರು ನೀಡಿದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು

ಮಹಿಳೆ ನಾಪತ್ತೆ : ಪ್ಲಾಸ್ಟಿಕ್ ಚೀಲದಲ್ಲಿ ಮೃತದೇಹ ಪತ್ತೆ Read More »

ಮಗನ ಕೊಳೆತ ಮೃತದೇಹದ ಜೊತೆ ಐದು ದಿನ ಕಳೆದ ಅಂಧ ತಂದೆ-ತಾಯಿ

ಹೈದರಾಬಾದ್: ಮಗ ಮೃತಪಟ್ಟಿರುವುದು ತಿಳಿಯದೆ ಅಂಧ ವೃದ್ಧ ದಂಪತಿ ಮೃತದೇಹದ ಜೊತೆಗೆ 5 ದಿನ ಕಳೆದ ದಾರುಣ ಘಟನೆಯೊಂದು ಹೈದರಾಬಾದ್‌ ಬ್ಲೈಂಡ್ಸ್‌ ಕಾಲೋನಿಯಲ್ಲಿ ಸಂಭವಿಸಿದೆ. ಮೃತ ವ್ಯಕ್ತಿಯನ್ನು 30 ವರ್ಷದ ಪ್ರಮೋದ್ ಎಂದು ಗುರುತಿಸಲಾಗಿದೆ.ಪತಿ ನಿವೃತ್ತ ಸರ್ಕಾರಿ ನೌಕರ ಕಾಲುವ ರಮಣ ಮತ್ತು ಅವರ ಪತ್ನಿ ಶಾಂತಿಕುಮಾರಿ ಇಬ್ಬರೂ 60 ವರ್ಷ ಮೇಲ್ಪಟ್ಟವರು ಮತ್ತು ಇಬ್ಬರೂ ಅಂಧರು. ದಂಪತಿ ತಮ್ಮ ಮಗ ಪ್ರಮೋದ್‌ನೊಂದಿಗೆ ಹೈದರಾಬಾದ್‌ನ ಬ್ಲೈಂಡ್ಸ್‌ ಕಾಲೋನಿಯ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದರು. ಅಕ್ಕಪಕ್ಕದವರು ಅವರ ಮನೆಯಿಂದ ವಿಪರೀತ ದುರ್ವಾಸನೆ

ಮಗನ ಕೊಳೆತ ಮೃತದೇಹದ ಜೊತೆ ಐದು ದಿನ ಕಳೆದ ಅಂಧ ತಂದೆ-ತಾಯಿ Read More »

ಧಗಧಗಿಸುತ್ತಿದ್ದ ಬೆಂಕಿಯ ನಡುವಿನಿಂದ ಮಗುವನ್ನು ರಕ್ಷಿಸಿದ ʼದೈವʼ!

ಕಾಸರಗೋಡು: ನೀಲೇಶ್ವರದ ಅಂಜೂತಾಂಬಲಂ ವೀರರ್ಕಾವು ದೈವಸ್ಥಾನದಲ್ಲಿ ನಿನ್ನೆ ತಡರಾತ್ರಿ ವಾರ್ಷಿಕ ಕಳಿಯಾಟ್ಟಂ ಸಂದರ್ಭದಲ್ಲಿ ಸಂಭವಿಸಿದ ಭೀಕರ ಪಟಾಕಿ ದುರಂತದಲ್ಲಿ ಜನರನ್ನು ರಕ್ಷಿಸಲು ತಮ್ಮ ಪ್ರಾಣದ ಹಂಗು ತೊರೆದು ಶ್ರಮಿಸಿದವರ ಕಥೆಗಳು ಬೆಳಕಿಗೆ ಬರುತ್ತಿವೆ. ಎಲ್ಲಕ್ಕೂ ಮಿಗಿಲಾಗಿ ದೈವ ನರ್ತಕನೇ ತನ್ನ ಪ್ರಾಣಕ್ಕೆ ಅಪಾಯವಿದ್ದರೂ ಲೆಕ್ಕಿಸದೆ ಬೆಂಕಿಯ ನಡುವೆ ಸಿಕ್ಕಿಬಿದ್ದಿದ್ದ ಮಗುವೊಂದನ್ನು ರಕ್ಷಿಸಿದ್ದು ಸುದ್ದಿಯಾಗುತ್ತಿದೆ.ರಾತ್ರಿ 12.30 ವೇಳೆಗೆ ದೈವಸ್ಥಾನದಲ್ಲಿ ಭೀಕರ ದುರಂತ ಸಂಭವಿಸಿದೆ. ಈ ವೇಳೆ ತೆಯ್ಯಂ (ದೈವ) ಆವೇಶವಾಗಿ ನರ್ತನ ನಡೆಯುತ್ತಿತ್ತು. ಕಿವಿಗಡಚಿಕ್ಕುವ ಶಬ್ದದೊಂದಿಗೆ ದೈವಸ್ಥಾನದ ಪಕ್ಕವೇ

ಧಗಧಗಿಸುತ್ತಿದ್ದ ಬೆಂಕಿಯ ನಡುವಿನಿಂದ ಮಗುವನ್ನು ರಕ್ಷಿಸಿದ ʼದೈವʼ! Read More »

error: Content is protected !!
Scroll to Top