ದೇಶ

ಮಂಗಳೂರು-ಬೆಂಗಳೂರು ಮಧ್ಯೆ ನಿರ್ಮಾಣವಾಗಲಿದೆ ಎಕ್ಸ್‌ಪ್ರೆಸ್‌ ವೇ

ಪ್ರಯಾಣ ಸಮಯ 3-4 ತಾಸಿಗಿಳಿಸಲು ಹೈಸ್ಪೀಡ್‌ ರೋಡ್‌ ನಿರ್ಮಾಣದ ಪ್ರಸ್ತಾವ ಬೆಂಗಳೂರು : ಎಲ್ಲ ಅಂದುಕೊಂಡಂತೆ ನಡೆದರೆ ಬೆಂಗಳೂರು ಮತ್ತು ಮಂಗಳೂರು ನಡುವಿನ ಪ್ರಯಾಣ ಸುಲಭವಾಗಲಿದೆ. ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಮಾದರಿಯಲ್ಲಿ ಬೆಂಗಳೂರು-ಮಂಗಳೂರು ಎಕ್ಸ್‌ಪ್ರೆಸ್ ವೇ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಮುಂದಾಗಿದ್ದು, ಯೋಜನೆಯ ಡಿಪಿಆರ್ ಸಿದ್ಧಪಡಿಸಲು ಟೆಂಡರ್ ಆಹ್ವಾನಿಸಿದೆ.ಬೆಂಗಳೂರು-ಮಂಗಳೂರು ಮಧ್ಯೆ ಸುಮಾರು 400 ಕಿ.ಮೀ. ಅಂತರವಿದೆ. ಬಸ್‌ನಲ್ಲಿ ಪ್ರಯಾಣಕ್ಕೆ 7-8 ತಾಸು ಸಮಯ ಬೇಕಾಗುತ್ತದೆ. ಈ ಸಮಯವನ್ನು ಕಡಿಮೆ ಮಾಡಲು ಈಗಾಗಲೇ ಕೇಂದ್ರ ಸರ್ಕಾರ ಬೆಂಗಳೂರು-ಮಂಗಳೂರು […]

ಮಂಗಳೂರು-ಬೆಂಗಳೂರು ಮಧ್ಯೆ ನಿರ್ಮಾಣವಾಗಲಿದೆ ಎಕ್ಸ್‌ಪ್ರೆಸ್‌ ವೇ Read More »

ಶಬರಿಮಲೆ ಯಾತ್ರಿಕರು ಆಧಾರ್‌ ಹೊಂದಿರುವುದು ಕಡ್ಡಾಯ

ಯಾತ್ರಿಕ ಎಂದು ನೋಂದಣಿ ಮಾಡಿಕೊಳ್ಳಲು ಆಧಾರ್‌ ಅಗತ್ಯ ಶಬರಿಮಲೆ : ಮಂಡಲ ಮತ್ತು ಮಕರ ವಿಳಕ್ಕು ಸಂದರ್ಭದಲ್ಲಿ ಶಬರಿಮಲೆ ಯಾತೆಗೈಯ್ಯುವ ಎಲ್ಲ ಭಕ್ತರು ಆಧಾರ್‌ ಕಾರ್ಡ್‌ ಒಯ್ಯಬೇಕೆಂದು ದೇವಸ್ವಂ ಬೋರ್ಡ್‌ ಹೇಳಿದೆ. ಶಬರಿಮಲೆ ಯಾತ್ರಿಕ ಎಂದು ನೋಂದಣಿ ಮಾಡಿಕೊಳ್ಳಲು ಆಧಾರ್‌ ಕಾರ್ಡ್‌ ಅಗತ್ಯವಿರುತ್ತದೆ. ಹೀಗಾಗಿ ಎಲ್ಲ ಯಾತ್ರಿಕರು ಯಾವುದಾದರೊಂದು ರೂಪದ ಆಧಾರ್‌ ಕಾರ್ಡ್‌ ಹೊಂದಿರಬೇಕು ಎಂದು ದೇವಸ್ವಂ ಬೋರ್ಡ್‌ ಹೇಳಿದೆ.ಅನಿವಾಸಿ ಭಾರತೀಯ ಭಕ್ತರು ಆಧಾರ್‌ ಬದಲಾಗಿ ಪಾಸ್‌ಪೋರ್ಟನ್ನು ದಾಖಲೆಯಾಗಿ ತೋರಿಸಬಹುದು. ಈ ಸಲ ಶಬರಿಮಲೆ ಯಾತ್ರೆಗಾಗಿ ಕೇರಳ

ಶಬರಿಮಲೆ ಯಾತ್ರಿಕರು ಆಧಾರ್‌ ಹೊಂದಿರುವುದು ಕಡ್ಡಾಯ Read More »

ಹಿರಿಯ ನಟ ಡೆಲ್ಲಿ ಗಣೇಶ್‌ ನಿಧನ

400ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿರುವ ಬಹಭಾಷಾ ಕಲಾವಿದ ಚೆನ್ನೈ : ನೂರಾರು ಸಿನಿಮಾಗಳಲ್ಲಿ ನಟಿಸಿರುವ ತಮಿಳು ನಟ ಡೆಲ್ಲಿ ಗಣೇಶ್ ನಿಧನ ಹೊಂದಿದ್ದಾರೆ. ಡೆಲ್ಲಿ ಗಣೇಶ್ ಅವರ ಪುತ್ರ ಮಹದೇವನ್ ಅವರು ‘ಡೆಲ್ಲಿ ಗಣೇಶ್ ಅವರು, ನಿನ್ನೆ ತಡರಾತ್ರಿ 11 ಗಂಟೆ ಸುಮಾರಿಗೆ ನಿಧನ ಹೊಂದಿದ್ದಾರೆ ಎಂದು ತಿಳಿಸಿದ್ದಾರೆ. ಡೆಲ್ಲಿ ಗಣೇಶನ್ ಅವರಿಗೆ 80 ವರ್ಷ ವಯಸ್ಸಾಗಿತ್ತು. ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಅವರು ಬಳಲುತ್ತಿದ್ದರು. 40 ವರ್ಷಗಳಿಗಿಂತಲೂ ಹೆಚ್ಚು ಸಮಯ ಅವರು ಚಿತ್ರರಂಗದಲ್ಲಿ ಕೆಲಸ ಮಾಡಿದ್ದಾರೆ. 400ಕ್ಕೂ

ಹಿರಿಯ ನಟ ಡೆಲ್ಲಿ ಗಣೇಶ್‌ ನಿಧನ Read More »

ಅದೃಷ್ಟ ತಂದ ಕಾರನ್ನು ಶಾಸ್ತ್ರೋಕ್ತವಾಗಿ ಸಮಾಧಿ ಮಾಡಿದ ಕುಟುಂಬ!

ಗುಜರಾತಿನಲ್ಲೊಂದು ವಿಸ್ಮಯದ ಘಟನೆ ಸೂರತ್‌ : ಮನೆಯಲ್ಲಿರುವ ಪ್ರೀತಿಯ ಪ್ರಾಣಿಗಳು ಮೃತಪಟ್ಟಾಗ ಮನೆಯವರು ಮನುಷ್ಯರಿಗೆ ಮಾಡಿದಂತೆ ವಿಧಿವತ್ತಾಗಿ ಅಂತ್ಯಕ್ರಿಯೆ ಮಾಡುವುದುಂಟು. ಕೆಲವರು ಅಂತ್ಯಕ್ರಿಯೆಯ ಬಳಿಕ ಉತ್ತರಕ್ರಿಯೆಯನ್ನೂ ಮಾಡುತ್ತಾರೆ. ಇದು ಆ ಮನೆಯವರು ಸಾಕುಪ್ರಾಣಿಯ ಮೇಲಿಟ್ಟ ಪ್ರೀತಿಯನ್ನು ತೋರಿಸುತ್ತದೆ. ಆದರೆ ಯಾರಾದರೂ ತಮ್ಮ ಮೆಚ್ಚಿನ ಕಾರಿಗೆ ಅಂತ್ಯಕ್ರಿಯೆ ಮಾಡುವುದನ್ನು ಕೇಳಿದ್ದೀರಾ? ಸಾಮಾನ್ಯವಾಗಿ ವಾಹನಗಳು ಹಳೆಯದಾದರೆ ಮಾರಿ ಹೊಸದು ತರುತ್ತೇವೆ. ಕೆಲವರು ಹಳೆಯ ವಾಹನವನ್ನು ಅಭಿಮಾನದಿಂದ ಮನೆಯಲ್ಲೇ ಇಟ್ಟುಕೊಳ್ಳುವುದೂ ಇದೆ. ಆದರೆ ಗುಜರಾತಿನ ಸೂರತ್‌ನಲ್ಲಿರುವ ಒಂದು ಕುಟಂಬ ತಮಗೆ ಅದೃಷ್ಟ

ಅದೃಷ್ಟ ತಂದ ಕಾರನ್ನು ಶಾಸ್ತ್ರೋಕ್ತವಾಗಿ ಸಮಾಧಿ ಮಾಡಿದ ಕುಟುಂಬ! Read More »

ಮತ್ತೆ ಶತಕದತ್ತ ಮುನ್ನುಗ್ಗುತ್ತಿರುವ ಈರುಳ್ಳಿ ಬೆಲೆ

ಮಳೆಯಿಂದಾಗಿ ಬೆಳೆ ನಾಶವಾಗಿ ಇಳುವರಿ ಕುಂಠಿತ ಬೆಂಗಳೂರು : ಈರುಳ್ಳಿ ಬೆಲೆ ಮತ್ತೆ ಏರುಗತಿಯಲ್ಲಿದ್ದು, ಶತಕದತ್ತ ಮುನ್ನುಗ್ಗುತ್ತಿದೆ. ಸದ್ಯ ರಾಜ್ಯದಲ್ಲಿ‌ ಮಳೆ ತಗ್ಗಿದ್ದರೂ ಕಳೆದ ತಿಂಗಳು ಬಂದ ಅಕಾಲಿಕ ಮಳೆಗೆ ಈರುಳ್ಳಿ ಬೆಳೆ ನೀರು‌ಪಾಲಾಗಿರುವುದರಿಂದ ದಿಢೀರ್‌ ಎಂದು ಬೆಲೆ ಏರಲಾರಂಭಿಸಿದೆ. ಕೆಜಿಗೆ 50-60 ರೂ. ಇದ್ದ ಈರುಳ್ಳಿಯ ಬೆಲೆ ಕಳೆದೊಂದು ವಾರದಿಂದ 70 ರಿಂದ 80 ರೂಪಾಯಿವರೆಗೆ ಏರಿಕೆಯಾಗಿದೆ. ಚಿಲ್ಲರೆ ಬೆಲೆ ಕೆಜಿಗೆ 90 ರೂ. ಇದೆ. ಕಳೆದ ಮೂರು ತಿಂಗಳಿನಿಂದ ಈರುಳ್ಳಿಯ ಬೆಲೆ ಏರಿಕೆಯಾಗುತ್ತಲೇ ಇದೆ.

ಮತ್ತೆ ಶತಕದತ್ತ ಮುನ್ನುಗ್ಗುತ್ತಿರುವ ಈರುಳ್ಳಿ ಬೆಲೆ Read More »

50 ಎಸಿ, 75 ಸೀಲಿಂಗ್‌ ಸ್ಪೀಕರ್‌, 12 ಕೋಟಿ ರೂ. ಮೌಲ್ಯದ ಟಾಯ್ಲೆಟ್‌…

ಆಮ್‌ ಆದ್ಮಿ ಮುಖ್ಯಮಂತ್ರಿ ಅರವಿಂದ ಕೇಂಜ್ರಿವಾಲ್‌ ಬಂಗಲೆಯಲ್ಲಿದ್ದ ಸೌಲಭ್ಯಗಳಿವು ಹೊಸದಿಲ್ಲಿ : 50 ಎಸಿಗಳು, 75 ಬೋಸ್‌ ಸೀಲಿಂಗ್‌ ಸ್ಪೀಕರ್‌ಗಳು, ಜಾಕುಝಿ, ಮಸಾಜ್‌ ಕೇಂದ್ರ, ಟಚ್‌ಸ್ಕ್ರೀನ್‌ ಅಳವಡಿಸಿದ 73 ಲೀಟರ್‌ ಸ್ಟೀಮ್‌ ಓವನ್‌…ಇದು ದಿಲ್ಲಿಯ ಆಮ್‌ ಆದ್ಮಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಬಂಗಲೆಯಲ್ಲಿದ್ದ ಐಷರಾಮಿ ಸೌಲಭ್ಯಗಳು!ಮದ್ಯ ಹಗರಣದಲ್ಲಿ ಸಿಕ್ಕಿಬಿದ್ದು ಜೈಲುಪಾಲಾದ ಬಳಿಕ ಮುಖ್ಯಮಂತ್ರಿ ಹುದ್ದೆಗೆ ಅರವಿಂದ ಕೇಂಜ್ರಿವಾಲ್‌ ರಾಜೀನಾಮೆ ನೀಡಿದ್ದಾರೆ. ಬಳಿಕ ಅವರು ವಾಸವಾಗಿದ್ದ ದಿಲ್ಲಿಯ ಸಿವಿಲ್‌ ಲೈನ್ಸ್‌ನ 6 ಫ್ಲ್ಯಾಗ್‌ಸ್ಟಾಫ್‌ ರಸ್ತೆಯಲ್ಲಿರುವ ಸರಕಾರಿ ಬಂಗಲೆಯಲ್ಲಿದ್ದ ಸೊತ್ತುಗಳ

50 ಎಸಿ, 75 ಸೀಲಿಂಗ್‌ ಸ್ಪೀಕರ್‌, 12 ಕೋಟಿ ರೂ. ಮೌಲ್ಯದ ಟಾಯ್ಲೆಟ್‌… Read More »

ಇಬ್ಬರು ಗ್ರಾಮ ರಕ್ಷಕರನ್ನು ಅಪಹರಿಸಿ ಸಾಯಿಸಿದ ಉಗ್ರರು

ಶ್ರೀನಗರ : ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯಲ್ಲಿ ಉಗ್ರರು ಇಬ್ಬರು ವಿಲೇಜ್ ಡಿಫೆನ್ಸ್ ಗ್ರೂಪ್ (ವಿಡಿಜಿ) ಸದಸ್ಯರನ್ನು ಅಪಹರಿಸಿ ಹತ್ಯೆ ಮಾಡಿದ್ದಾರೆ. ಜೈಶ್-ಎ ಮೊಹಮ್ಮದ್ ಭಯೋತ್ಪಾದಕ ಸಂಘಟನೆ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ. ಹತ್ಯೆಯಾದವರನ್ನು ಓಹ್ಲಿ ಕುಂಟ್ವಾರ ಗ್ರಾಮದ ನಿವಾಸಿಗಳಾದ ನಜೀರ್ ಅಹ್ಮದ್ ಮತ್ತು ಕುಲದೀಪ್ ಕುಮಾರ್ ಎಂದು ಗುರುತಿಸಲಾಗಿದೆ. ಅವರ ಮೃತದೇಹಗಳು ಇನ್ನೂ ಪತ್ತೆಯಾಗಿಲ್ಲ.ಮೃತದೇಹಗಳ ಪತ್ತೆಗೆ ಪೊಲೀಸರು ಭಾರಿ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ನಜೀರ್ ಮತ್ತು ಕುಲದೀಪ್ ಜಾನುವಾರುಗಳನ್ನು ಮೇಯಿಸಲು ಕಾಡಿಗೆ ಹೋದಾಗ ಭಯೋತ್ಪಾದಕರು ಅಪಹರಿಸಿದ್ದಾರೆ.

ಇಬ್ಬರು ಗ್ರಾಮ ರಕ್ಷಕರನ್ನು ಅಪಹರಿಸಿ ಸಾಯಿಸಿದ ಉಗ್ರರು Read More »

ಸರಕಾರದ ಸೂಚನೆಯಂತೆ ಪಹಣಿಯಲ್ಲಿ ವಕ್ಫ್‌ ಹೆಸರು ಸೇರ್ಪಡೆ : ಜಗದಂಬಿಕಾ ಪಾಲ್‌

ರೈತರ ಅಹವಾಲು ಆಲಿಸಲು ಬಂದ ಜಂಟಿ ಸಂಸದೀಯ ಸಮಿತಿ ಅಧ್ಯಕ್ಷ ಬೆಂಗಳೂರು: ರಾಜ್ಯ ಸರಕಾರದ ಸೂಚನೆಯ ಮೇರೆಗೆ ರೈತರ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಿಸಲಾಗಿದೆ, ಆಡಳಿತ ವ್ಯವಸ್ಥೆಯ ಕೈವಾಡ ಇಲ್ಲದೆ ಈ ರೀತಿ ಎಲ್ಲ ಆಗಲು ಸಾಧ್ಯವಿಲ್ಲ ಎಂಬುದಾಗಿ ವಕ್ಫ್‌ ಕಾಯ್ದೆ ತಿದ್ದುಪಡಿ ಜಂಟಿ ಸಂಸದೀಯ ಸಮಿತಿಯ ಅಧ್ಯಕ್ಷ ಜಗದಂಬಿಕಾ ಪಾಲ್ ಆರೋಪಿಸಿದರು.ಇಂದು ಹುಬ್ಬಳ್ಳಿಗೆ ಭೇಟಿ ನೀಡಿ ವಕ್ಫ್‌ ಎಂದು ನಮೂದಾಗಿರುವ ರೈತರ ಅಹವಾಲು ಆಲಿಸಿದ ಬಳಿಕ ಮಾತನಾಡಿದ ಅವರು, ರೈತರ ಜಮೀನು, ದೇಗುಲ, ಪಾರಂಪರಿಕ

ಸರಕಾರದ ಸೂಚನೆಯಂತೆ ಪಹಣಿಯಲ್ಲಿ ವಕ್ಫ್‌ ಹೆಸರು ಸೇರ್ಪಡೆ : ಜಗದಂಬಿಕಾ ಪಾಲ್‌ Read More »

ಜಮ್ಮು-ಕಾಶ್ಮೀರ ವಿಧಾನಸಭೆಯಲ್ಲಿ ಶಾಸಕರ ಹೊಡೆದಾಟ | 370ನೇ ವಿಧಿ ಮರುಜಾರಿ ನಿರ್ಣಯದ ಸಂದರ್ಭದಲ್ಲಿ ಕಿತ್ತಾಟ

ಶ್ರೀನಗರ : ಸಂವಿಧಾನದ 370ನೇ ವಿಧಿ ಮರುಜಾರಿ ನಿರ್ಣಯ ಬೆಂಬಲಿಸಿ ಬ್ಯಾನರ್ ಪ್ರದರ್ಶಿಸಿದ ಹಿನ್ನೆಲೆಯಲ್ಲಿ ಜಮ್ಮು-ಕಾಶ್ಮೀರ ವಿಧಾನಸಭೆಯಲ್ಲಿ ಭಾರಿ ಕೋಲಾಹಲ ಸೃಷ್ಟಿಯಾಗಿ ಶಾಸಕರು ಹೊಡೆದಾಡಿಕೊಂಡ ಘಟನೆ ಸಂಭವಿಸದೆ.ಅವಾಮಿ ಇತ್ತೆಹಾದ್ ಪಕ್ಷದ ಶಾಸಕ ಖುರ್ಷಿದ್ ಅಹಮದ್ 370ನೇ ವಿಧಿ ಮರಳಿ ಜಾರಿಅಗಬೇಕೆಂದು ಆಗ್ರಹಿಸುವ ಬ್ಯಾನರ್ ಪ್ರದರ್ಶಿಸಿದಾಗ ಬಿಜೆಪಿ ಶಾಸಕರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಬ್ಯಾನರ್​ ಕಿತ್ತುಕೊಳ್ಳಲು ಮುಂದಾದಾಗ ಬಿಜೆಪಿ, ಪಿಡಿಪಿ, ಎನ್​ಸಿ ಶಾಸಕರ ನಡುವೆ ಹೊಡೆದಾಟ ನಡೆಯಿತು. ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ

ಜಮ್ಮು-ಕಾಶ್ಮೀರ ವಿಧಾನಸಭೆಯಲ್ಲಿ ಶಾಸಕರ ಹೊಡೆದಾಟ | 370ನೇ ವಿಧಿ ಮರುಜಾರಿ ನಿರ್ಣಯದ ಸಂದರ್ಭದಲ್ಲಿ ಕಿತ್ತಾಟ Read More »

ಕಾಶ್ಮೀರ : ಇನ್ನೋರ್ವ ಉಗ್ರನ ಹತ್ಯೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಭದ್ರತಾ ಪಡೆ ನಡೆಸಿದ ಕಾರ್ಯಾಚರಣೆಯಲ್ಲಿ ಓರ್ವ ಉಗ್ರ ಹತ್ಯೆಯಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಣಿವೆ ರಾಜ್ಯದಲ್ಲಿ ನ್ಯಾಶನಲ್‌ ಕಾನ್ಫರೆನ್ಸ್‌ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಭಯೋತ್ಪಾದನೆ ಚಟುವಟಿಕೆಗಳು ಹೆಚ್ಚಿದ್ದು, ನಿತ್ಯ ಉಗ್ರ ದಾಳಿಯಾಗುತ್ತಿದೆ. ಕಾರ್ಯಾಚರಣೆ ನಡೆದ ಸ್ಥಳದಿಂದ ಎಕೆ 47 ರೈಫಲ್‌, ಎರಡು ಹ್ಯಾಂಡ್ ಗ್ರೆನೇಡ್‌, ನಾಲ್ಕು ಮ್ಯಾಗಜಿನ್‌, ಮದ್ದುಗುಂಡುಗಳು ಸೇರಿದಂತೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಲೋಲಾಬ್ ಪ್ರದೇಶದಲ್ಲಿ ಮಂಗಳವಾರ ಕಾರ್ಯಾಚರಣೆ ಆರಂಭವಾಗಿತ್ತು. ಬುಧವಾರ ಸಹ ಈ

ಕಾಶ್ಮೀರ : ಇನ್ನೋರ್ವ ಉಗ್ರನ ಹತ್ಯೆ Read More »

error: Content is protected !!
Scroll to Top