ದೇಶ

ಭದ್ರತಾ ಪಡೆ ಗುಂಡಿಗೆ 11 ಉಗ್ರರು ಬಲಿ

ಹೊಸದಿಲ್ಲಿ : ಮಣಿಪುರದ ಜಿರಿಬಾಮ್‌ ಎಂಬಲ್ಲಿ ಭದ್ರತಾ ಪಡೆಗಳು 11 ಕುಕಿ ಉಗ್ರರನ್ನು ಹತ್ಯೆ ಮಾಡಿದೆ. ಭದ್ರತಾ ಪಡೆ ಶಿಬಿರದ ಮೇಲೆ ನಿನ್ನೆ ರಾತ್ರಿ ಕುಕಿ ಉಗ್ರರು ದಾಳಿ ಮಾಡಿದ್ದು, ಈ ಸಂದರ್ಭದಲ್ಲಿ ನಡೆದ ಭೀಕರ ಗುಂಡಿನ ಕಾಳದಲ್ಲಿ 11 ಕುಕಿ ಉಗ್ರರು ಹತ್ಯೆಯಾಗಿ ಓರ್ವ ಸಿಆರ್‌ಪಿಎಫ್‌ ಜವಾನ ಗಂಭೀರವಾಗಿ ಗಾಯಗೊಂಡಿದ್ದಾರೆ.ಭದ್ರತಾ ಪಡೆ ಶಿಬಿರಕ್ಕೆ ಸಮೀಪವಿದ್ದ ಜಾಕರ್‌ಧುರ್‌ ಎಂಬಲ್ಲಿ ಕುಕಿ ಉಗ್ರರು ಜನವಸತಿಯಿಲ್ಲದ ಮೈತೇಯಿ ಸಮುದಾಯದವರ ನಾಲ್ಕು ಮನೆಗಳನ್ನು ಸುಟ್ಟು ಹಾಕಿದ್ದಾರೆ. ಭಾನುವಾರದಿಂದೀಚೆಗೆ ಮಣಿಪುರದಲ್ಲಿ ಮತ್ತೆ ಹಿಂಸಾಚಾರ […]

ಭದ್ರತಾ ಪಡೆ ಗುಂಡಿಗೆ 11 ಉಗ್ರರು ಬಲಿ Read More »

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಾಧೀಶರಾಗಿ ನ್ಯಾ.ಸಂಜೀವ್‌ ಖನ್ನ ಪ್ರಮಾಣ

ಭಾರತದ 51ನೇ ಮುಖ್ಯ ನ್ಯಾಯಮೂರ್ತಿ ಹೊಸದಿಲ್ಲಿ: ನ್ಯಾಯಮೂರ್ತಿ ಸಂಜೀವ್ ಖನ್ನಾ ಇಂದು ಭಾರತದ 51ನೇ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಷ್ಟ್ರಪತಿ ಭವನದಲ್ಲಿ ನಡೆದ ಪ್ರಮಾಣ ವಚನ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ನ್ಯಾಯಮೂರ್ತಿ ಖನ್ನಾ ಅವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು. ಅವರು ಮೇ 13, 2025 ರವರೆಗೆ ಅಧಿಕಾರದಲ್ಲಿರುತ್ತಾರೆ. ನ್ಯಾಯಮೂರ್ತಿ ಖನ್ನಾ ಚುನಾವಣಾ ಬಾಂಡ್‌ ಯೋಜನೆಯನ್ನು ರದ್ದುಗೊಳಿಸುವುದು, ಆರ್ಟಿಕಲ್ 370 ರದ್ದತಿಯನ್ನು ಎತ್ತಿಹಿಡಿಯುವುದು ಸೇರಿದಂತೆ ಸುಪ್ರೀಂ ಕೋರ್ಟ್‌ನ ಹಲವಾರು ಮಹತ್ವದ

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಾಧೀಶರಾಗಿ ನ್ಯಾ.ಸಂಜೀವ್‌ ಖನ್ನ ಪ್ರಮಾಣ Read More »

28 ಬಂಡಾಯ ಅಭ್ಯರ್ಥಿಗಳು ಅಮಾನತು : ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ಗೆ ಶಾಕ್‌

ಚುನಾವಣೆ ಹೊಸ್ತಿಲಲ್ಲಿ ಭಾರಿ ಹಿನ್ನಡೆ ಅನುಭವಿಸಿದ ಕಾಂಗ್ರೆಸ್‌ ಮುಂಬಯಿ: ಮಹಾರಾಷ್ಟ್ರದ ವಿಧಾನಸಭಾ ಚುನಾವಣೆ ಹೊಸ್ತಿಲಲ್ಲೇ ಕಾಂಗ್ರೆಸ್‌ ಭಾರಿ ಹಿನ್ನಡೆ ಅನುಭವಿಸಿದೆ. ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದ 7 ಬಂಡಾಯ ಅಭ್ಯರ್ಥಿಗಳನ್ನು ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಸಮಿತಿ (ಎಂಪಿಸಿಸಿ) ಭಾನುವಾರ ರಾತ್ರಿ ಅಮಾನತುಗೊಳಿಸಿದೆ. ಈ ಮೂಲಕ ಚುನಾವಣೆ ಘೋಷಣೆಯಾದ ಬಳಿಕ ಅಮಾನತುಗೊಂಡ ನಾಯಕರ ಸಂಖ್ಯೆ 28ಕ್ಕೇರಿದೆ.ಅಮಾನತುಗೊಂಡಿರುವ ನಾಯಕರಲ್ಲಿ ಶಾಮಕಾಂತ್ ಸನೇರ್, ರಾಜೇಂದ್ರ ಠಾಕೂರ್, ಅಬಾ ಬಾಗುಲ್, ಮನೀಶ್ ಆನಂದ್, ಸುರೇಶ್ ಕುಮಾರ್ ಜೇತ್ಲಿಯಾ, ಕಲ್ಯಾಣ್ ಬೋರಾಡೆ ಮತ್ತು ಚಂದ್ರಪಾಲ್

28 ಬಂಡಾಯ ಅಭ್ಯರ್ಥಿಗಳು ಅಮಾನತು : ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ಗೆ ಶಾಕ್‌ Read More »

ವೋಟು ಬೇಕಾ ಆರ್‌ಎಸ್‌ಎಸ್‌ ನಿಷೇಧಿಸಿ, 1000 ಕೋ. ರೂ. ಕೊಡಿ!

ಕಾಂಗ್ರೆಸ್‌ ಮೈತ್ರಿಕೂಟಕ್ಕೆ ಬೆಂಬಲ ನೀಡಲು ಷರತ್ತು ಹಾಕಿದ ಉಲೇಮಾ ಬೋರ್ಡ್‌ ಮುಂಬಯಿ: ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆ ಕಣ ಕಾವೇರಿದ್ದು ವಿವಿಧ ಸಮುದಾಯಗಳ ಬೆಂಬಲ ಗಳಿಸಲು ಪಕ್ಷಗಳು ನಾನಾ ರೀತಿಯ ಕಸರತ್ತು ನಡೆಸುತ್ತಿವೆ. ಈ ನಡುವೆ ಕಾಂಗ್ರೆಸ್-ಶಿವಸೇನೆ ಉದ್ಧವ್ ಠಾಕ್ರೆ ಬಣ, ಸಮಾಜವಾದಿ ಪಕ್ಷಗಳ ಮಹಾವಿಕಾಸ್ ಅಘಾಡಿ ಮೈತ್ರಿಕೂಟಕ್ಕೆ (ಎಂವಿಎ) ಬೆಂಬಲ ಸೂಚಿಸಲು ಆಲ್‌ ಇಂಡಿಯಾ ಉಲೇಮಾ ಬೋರ್ಡ್‌ ಆರ್‌ಎಸ್‌ಎಸ್ ನಿಷೇಧ, 1000 ಕೋ. ರೂ. ಅನುದಾನ ಸೇರಿದಂತೆ 17 ಷರತ್ತುಗಳನ್ನು ಮುಂದಿಟ್ಟು ಪತ್ರ ಬರೆದಿರುವುದು ಇಡೀ ದೇಶದಲ್ಲಿ

ವೋಟು ಬೇಕಾ ಆರ್‌ಎಸ್‌ಎಸ್‌ ನಿಷೇಧಿಸಿ, 1000 ಕೋ. ರೂ. ಕೊಡಿ! Read More »

ಮಂಗಳೂರು-ಬೆಂಗಳೂರು ಮಧ್ಯೆ ನಿರ್ಮಾಣವಾಗಲಿದೆ ಎಕ್ಸ್‌ಪ್ರೆಸ್‌ ವೇ

ಪ್ರಯಾಣ ಸಮಯ 3-4 ತಾಸಿಗಿಳಿಸಲು ಹೈಸ್ಪೀಡ್‌ ರೋಡ್‌ ನಿರ್ಮಾಣದ ಪ್ರಸ್ತಾವ ಬೆಂಗಳೂರು : ಎಲ್ಲ ಅಂದುಕೊಂಡಂತೆ ನಡೆದರೆ ಬೆಂಗಳೂರು ಮತ್ತು ಮಂಗಳೂರು ನಡುವಿನ ಪ್ರಯಾಣ ಸುಲಭವಾಗಲಿದೆ. ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಮಾದರಿಯಲ್ಲಿ ಬೆಂಗಳೂರು-ಮಂಗಳೂರು ಎಕ್ಸ್‌ಪ್ರೆಸ್ ವೇ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಮುಂದಾಗಿದ್ದು, ಯೋಜನೆಯ ಡಿಪಿಆರ್ ಸಿದ್ಧಪಡಿಸಲು ಟೆಂಡರ್ ಆಹ್ವಾನಿಸಿದೆ.ಬೆಂಗಳೂರು-ಮಂಗಳೂರು ಮಧ್ಯೆ ಸುಮಾರು 400 ಕಿ.ಮೀ. ಅಂತರವಿದೆ. ಬಸ್‌ನಲ್ಲಿ ಪ್ರಯಾಣಕ್ಕೆ 7-8 ತಾಸು ಸಮಯ ಬೇಕಾಗುತ್ತದೆ. ಈ ಸಮಯವನ್ನು ಕಡಿಮೆ ಮಾಡಲು ಈಗಾಗಲೇ ಕೇಂದ್ರ ಸರ್ಕಾರ ಬೆಂಗಳೂರು-ಮಂಗಳೂರು

ಮಂಗಳೂರು-ಬೆಂಗಳೂರು ಮಧ್ಯೆ ನಿರ್ಮಾಣವಾಗಲಿದೆ ಎಕ್ಸ್‌ಪ್ರೆಸ್‌ ವೇ Read More »

ಶಬರಿಮಲೆ ಯಾತ್ರಿಕರು ಆಧಾರ್‌ ಹೊಂದಿರುವುದು ಕಡ್ಡಾಯ

ಯಾತ್ರಿಕ ಎಂದು ನೋಂದಣಿ ಮಾಡಿಕೊಳ್ಳಲು ಆಧಾರ್‌ ಅಗತ್ಯ ಶಬರಿಮಲೆ : ಮಂಡಲ ಮತ್ತು ಮಕರ ವಿಳಕ್ಕು ಸಂದರ್ಭದಲ್ಲಿ ಶಬರಿಮಲೆ ಯಾತೆಗೈಯ್ಯುವ ಎಲ್ಲ ಭಕ್ತರು ಆಧಾರ್‌ ಕಾರ್ಡ್‌ ಒಯ್ಯಬೇಕೆಂದು ದೇವಸ್ವಂ ಬೋರ್ಡ್‌ ಹೇಳಿದೆ. ಶಬರಿಮಲೆ ಯಾತ್ರಿಕ ಎಂದು ನೋಂದಣಿ ಮಾಡಿಕೊಳ್ಳಲು ಆಧಾರ್‌ ಕಾರ್ಡ್‌ ಅಗತ್ಯವಿರುತ್ತದೆ. ಹೀಗಾಗಿ ಎಲ್ಲ ಯಾತ್ರಿಕರು ಯಾವುದಾದರೊಂದು ರೂಪದ ಆಧಾರ್‌ ಕಾರ್ಡ್‌ ಹೊಂದಿರಬೇಕು ಎಂದು ದೇವಸ್ವಂ ಬೋರ್ಡ್‌ ಹೇಳಿದೆ.ಅನಿವಾಸಿ ಭಾರತೀಯ ಭಕ್ತರು ಆಧಾರ್‌ ಬದಲಾಗಿ ಪಾಸ್‌ಪೋರ್ಟನ್ನು ದಾಖಲೆಯಾಗಿ ತೋರಿಸಬಹುದು. ಈ ಸಲ ಶಬರಿಮಲೆ ಯಾತ್ರೆಗಾಗಿ ಕೇರಳ

ಶಬರಿಮಲೆ ಯಾತ್ರಿಕರು ಆಧಾರ್‌ ಹೊಂದಿರುವುದು ಕಡ್ಡಾಯ Read More »

ಹಿರಿಯ ನಟ ಡೆಲ್ಲಿ ಗಣೇಶ್‌ ನಿಧನ

400ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿರುವ ಬಹಭಾಷಾ ಕಲಾವಿದ ಚೆನ್ನೈ : ನೂರಾರು ಸಿನಿಮಾಗಳಲ್ಲಿ ನಟಿಸಿರುವ ತಮಿಳು ನಟ ಡೆಲ್ಲಿ ಗಣೇಶ್ ನಿಧನ ಹೊಂದಿದ್ದಾರೆ. ಡೆಲ್ಲಿ ಗಣೇಶ್ ಅವರ ಪುತ್ರ ಮಹದೇವನ್ ಅವರು ‘ಡೆಲ್ಲಿ ಗಣೇಶ್ ಅವರು, ನಿನ್ನೆ ತಡರಾತ್ರಿ 11 ಗಂಟೆ ಸುಮಾರಿಗೆ ನಿಧನ ಹೊಂದಿದ್ದಾರೆ ಎಂದು ತಿಳಿಸಿದ್ದಾರೆ. ಡೆಲ್ಲಿ ಗಣೇಶನ್ ಅವರಿಗೆ 80 ವರ್ಷ ವಯಸ್ಸಾಗಿತ್ತು. ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಅವರು ಬಳಲುತ್ತಿದ್ದರು. 40 ವರ್ಷಗಳಿಗಿಂತಲೂ ಹೆಚ್ಚು ಸಮಯ ಅವರು ಚಿತ್ರರಂಗದಲ್ಲಿ ಕೆಲಸ ಮಾಡಿದ್ದಾರೆ. 400ಕ್ಕೂ

ಹಿರಿಯ ನಟ ಡೆಲ್ಲಿ ಗಣೇಶ್‌ ನಿಧನ Read More »

ಅದೃಷ್ಟ ತಂದ ಕಾರನ್ನು ಶಾಸ್ತ್ರೋಕ್ತವಾಗಿ ಸಮಾಧಿ ಮಾಡಿದ ಕುಟುಂಬ!

ಗುಜರಾತಿನಲ್ಲೊಂದು ವಿಸ್ಮಯದ ಘಟನೆ ಸೂರತ್‌ : ಮನೆಯಲ್ಲಿರುವ ಪ್ರೀತಿಯ ಪ್ರಾಣಿಗಳು ಮೃತಪಟ್ಟಾಗ ಮನೆಯವರು ಮನುಷ್ಯರಿಗೆ ಮಾಡಿದಂತೆ ವಿಧಿವತ್ತಾಗಿ ಅಂತ್ಯಕ್ರಿಯೆ ಮಾಡುವುದುಂಟು. ಕೆಲವರು ಅಂತ್ಯಕ್ರಿಯೆಯ ಬಳಿಕ ಉತ್ತರಕ್ರಿಯೆಯನ್ನೂ ಮಾಡುತ್ತಾರೆ. ಇದು ಆ ಮನೆಯವರು ಸಾಕುಪ್ರಾಣಿಯ ಮೇಲಿಟ್ಟ ಪ್ರೀತಿಯನ್ನು ತೋರಿಸುತ್ತದೆ. ಆದರೆ ಯಾರಾದರೂ ತಮ್ಮ ಮೆಚ್ಚಿನ ಕಾರಿಗೆ ಅಂತ್ಯಕ್ರಿಯೆ ಮಾಡುವುದನ್ನು ಕೇಳಿದ್ದೀರಾ? ಸಾಮಾನ್ಯವಾಗಿ ವಾಹನಗಳು ಹಳೆಯದಾದರೆ ಮಾರಿ ಹೊಸದು ತರುತ್ತೇವೆ. ಕೆಲವರು ಹಳೆಯ ವಾಹನವನ್ನು ಅಭಿಮಾನದಿಂದ ಮನೆಯಲ್ಲೇ ಇಟ್ಟುಕೊಳ್ಳುವುದೂ ಇದೆ. ಆದರೆ ಗುಜರಾತಿನ ಸೂರತ್‌ನಲ್ಲಿರುವ ಒಂದು ಕುಟಂಬ ತಮಗೆ ಅದೃಷ್ಟ

ಅದೃಷ್ಟ ತಂದ ಕಾರನ್ನು ಶಾಸ್ತ್ರೋಕ್ತವಾಗಿ ಸಮಾಧಿ ಮಾಡಿದ ಕುಟುಂಬ! Read More »

ಮತ್ತೆ ಶತಕದತ್ತ ಮುನ್ನುಗ್ಗುತ್ತಿರುವ ಈರುಳ್ಳಿ ಬೆಲೆ

ಮಳೆಯಿಂದಾಗಿ ಬೆಳೆ ನಾಶವಾಗಿ ಇಳುವರಿ ಕುಂಠಿತ ಬೆಂಗಳೂರು : ಈರುಳ್ಳಿ ಬೆಲೆ ಮತ್ತೆ ಏರುಗತಿಯಲ್ಲಿದ್ದು, ಶತಕದತ್ತ ಮುನ್ನುಗ್ಗುತ್ತಿದೆ. ಸದ್ಯ ರಾಜ್ಯದಲ್ಲಿ‌ ಮಳೆ ತಗ್ಗಿದ್ದರೂ ಕಳೆದ ತಿಂಗಳು ಬಂದ ಅಕಾಲಿಕ ಮಳೆಗೆ ಈರುಳ್ಳಿ ಬೆಳೆ ನೀರು‌ಪಾಲಾಗಿರುವುದರಿಂದ ದಿಢೀರ್‌ ಎಂದು ಬೆಲೆ ಏರಲಾರಂಭಿಸಿದೆ. ಕೆಜಿಗೆ 50-60 ರೂ. ಇದ್ದ ಈರುಳ್ಳಿಯ ಬೆಲೆ ಕಳೆದೊಂದು ವಾರದಿಂದ 70 ರಿಂದ 80 ರೂಪಾಯಿವರೆಗೆ ಏರಿಕೆಯಾಗಿದೆ. ಚಿಲ್ಲರೆ ಬೆಲೆ ಕೆಜಿಗೆ 90 ರೂ. ಇದೆ. ಕಳೆದ ಮೂರು ತಿಂಗಳಿನಿಂದ ಈರುಳ್ಳಿಯ ಬೆಲೆ ಏರಿಕೆಯಾಗುತ್ತಲೇ ಇದೆ.

ಮತ್ತೆ ಶತಕದತ್ತ ಮುನ್ನುಗ್ಗುತ್ತಿರುವ ಈರುಳ್ಳಿ ಬೆಲೆ Read More »

50 ಎಸಿ, 75 ಸೀಲಿಂಗ್‌ ಸ್ಪೀಕರ್‌, 12 ಕೋಟಿ ರೂ. ಮೌಲ್ಯದ ಟಾಯ್ಲೆಟ್‌…

ಆಮ್‌ ಆದ್ಮಿ ಮುಖ್ಯಮಂತ್ರಿ ಅರವಿಂದ ಕೇಂಜ್ರಿವಾಲ್‌ ಬಂಗಲೆಯಲ್ಲಿದ್ದ ಸೌಲಭ್ಯಗಳಿವು ಹೊಸದಿಲ್ಲಿ : 50 ಎಸಿಗಳು, 75 ಬೋಸ್‌ ಸೀಲಿಂಗ್‌ ಸ್ಪೀಕರ್‌ಗಳು, ಜಾಕುಝಿ, ಮಸಾಜ್‌ ಕೇಂದ್ರ, ಟಚ್‌ಸ್ಕ್ರೀನ್‌ ಅಳವಡಿಸಿದ 73 ಲೀಟರ್‌ ಸ್ಟೀಮ್‌ ಓವನ್‌…ಇದು ದಿಲ್ಲಿಯ ಆಮ್‌ ಆದ್ಮಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಬಂಗಲೆಯಲ್ಲಿದ್ದ ಐಷರಾಮಿ ಸೌಲಭ್ಯಗಳು!ಮದ್ಯ ಹಗರಣದಲ್ಲಿ ಸಿಕ್ಕಿಬಿದ್ದು ಜೈಲುಪಾಲಾದ ಬಳಿಕ ಮುಖ್ಯಮಂತ್ರಿ ಹುದ್ದೆಗೆ ಅರವಿಂದ ಕೇಂಜ್ರಿವಾಲ್‌ ರಾಜೀನಾಮೆ ನೀಡಿದ್ದಾರೆ. ಬಳಿಕ ಅವರು ವಾಸವಾಗಿದ್ದ ದಿಲ್ಲಿಯ ಸಿವಿಲ್‌ ಲೈನ್ಸ್‌ನ 6 ಫ್ಲ್ಯಾಗ್‌ಸ್ಟಾಫ್‌ ರಸ್ತೆಯಲ್ಲಿರುವ ಸರಕಾರಿ ಬಂಗಲೆಯಲ್ಲಿದ್ದ ಸೊತ್ತುಗಳ

50 ಎಸಿ, 75 ಸೀಲಿಂಗ್‌ ಸ್ಪೀಕರ್‌, 12 ಕೋಟಿ ರೂ. ಮೌಲ್ಯದ ಟಾಯ್ಲೆಟ್‌… Read More »

error: Content is protected !!
Scroll to Top