ದೇಶ

ಇಂದು ತಮಿಳುನಾಡು ಕರಾವಳಿಗೆ ಅಪ್ಪಳಿಸಲಿದೆ ಫೆಂಗಲ್‌ ಚಂಡಮಾರುತ

ಬೆಂಗಳೂರು ಸಹಿತ ಕರ್ನಾಟಕದ ಹಲವೆಡೆ ಭಾರಿ ಮಳೆಯಾಗುವ ಮುನ್ಸೂಚನೆ ಚೆನ್ನೈ: ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ಫೆಂಗಲ್‌ ಚಂಡಮಾರುತ ತೀವ್ರತೆ ಪಡೆದುಕೊಂಡಿದ್ದು, ಶನಿವಾರ ಉತ್ತರ ತಮಿಳುನಾಡು ಹಾಗೂ ಪುದುಚೇರಿ ಕರಾವಳಿಗೆ ಅಪ್ಪಳಿಸಲಿದೆ. ಚಂಡಮಾರುತದಿಂದ ಈಗಾಗಲೇ ತಮಿಳುನಾಡಿನಲ್ಲಿ ಭಾರಿ ಮಳೆಯಾಗುತ್ತಿದೆ. ಆಂಧ್ರಪ್ರದೇಶದ ಹಲವು ಸ್ಥಳಗಳಲ್ಲಿ ಶನಿವಾರ ಭಾರಿ ಮಳೆಯಾಗುವ ನಿರೀಕ್ಷೆ ಇದೆ. ಚಂಡಮಾರುತದ ಪರಿಣಾಮ ಬೆಂಗಳೂರಿನಲ್ಲೂ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಚೆನ್ನೈ, ತಿರುವಳ್ಳೂರು, ಕಾಂಚೀಪುರಂ, ಕಲ್ಲಕುರಿಚಿ, ಮತ್ತು ತಮಿಳುನಾಡಿನ ಕಡಲೂರು ಜಿಲ್ಲೆಗಳು ಮತ್ತು ಪುದುಚೇರಿಯಲ್ಲಿ ಭಾರಿ ಮಳೆಯಾಗುವ […]

ಇಂದು ತಮಿಳುನಾಡು ಕರಾವಳಿಗೆ ಅಪ್ಪಳಿಸಲಿದೆ ಫೆಂಗಲ್‌ ಚಂಡಮಾರುತ Read More »

ಬಸ್‌ ಪಲ್ಟಿ: 12ಕ್ಕೇರಿದ ಸಾವಿನ ಸಂಖ್ಯೆ

ಪ್ರಧಾನಿ ನರೇಂದ್ರ ಮೋದಿ ವಿಷಾದ ಮುಂಬಯಿ : ಮಹಾರಾಷ್ಟ್ರ ಸಾರಿಗೆ ಬಸ್ಸೊಂದು ಪಲ್ಟಿಯಾಗಿ 12 ಜನ ಸಾವನ್ನಪ್ಪಿದ ಘಟನೆ ಮಹಾರಾಷ್ಟ್ರದ ಗೊಂಡಿಯಾ ಜಿಲ್ಲೆಯಲ್ಲಿ ನಡೆದಿದೆ. ಅಪಘಾತದಲ್ಲಿ 30ಕ್ಕೂ ಅಧಿಕ ಪ್ರಯಾಣಿಕರು ಗಾಯಗೊಂಡಿದ್ದಾರೆ. ಬಸ್ ಭಂಡಾರ ಡಿಪ್ಪೊದಿಂದ ಗೊಂಡಿಯಾಗೆ ತೆರಳುತ್ತಿದ್ದ ಈ ವೇಳೆ ಗೊಂಡಿಯಾ–ಅರ್ಜುನಿ ರಸ್ತೆಯ ಬಿಂದ್ರವನ ಟೋಲಾ ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. 12 ಜನ ಸಾವನ್ನಪ್ಪಿದ್ದು, 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಗೊಂಡಿಯಾ ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ

ಬಸ್‌ ಪಲ್ಟಿ: 12ಕ್ಕೇರಿದ ಸಾವಿನ ಸಂಖ್ಯೆ Read More »

ನಟಿ ಶಿಲ್ಪಾ ಶೆಟ್ಟಿ ಪತಿಯ ಮನೆ, ಕಚೇರಿ ಮೇಲೆ ಇ.ಡಿ.ದಾಳಿ

ಮೂರು ವರ್ಷದ ಹಿಂದೆ ಬಯಲಾದ ಬ್ಲೂಫಿಲ್ಮ್‌ ಪ್ರಕರಣಕ್ಕೆ ಸಂಬಂಧಿಸಿ ದಾಳಿ ಮುಂಬಯಿ: ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿಯ ಪತಿ, ಉದ್ಯಮಿ ರಾಜ್‌ ಕುಂದ್ರಾ ಮನೆ ಮತ್ತು ಕಚೇರಿಗಳಿಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಇಂದು ಮುಂಜಾನೆ ದಾಳಿ ನಡೆಸಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಮೂರು ವರ್ಷದ ಹಿಂದೆ ರಾಜ್‌ ಕುಂದ್ರ ಬ್ಲೂಫಿಲ್ಮ್‌ ತಯಾರಿಸಿದ ಆರೋಪಕ್ಕೆ ಗುರಿಯಾಗಿದ್ದರು. ಈ ಕೇಸಿಗೆ ಸಂಬಂಧಿಸಿ ಸೆರೆಯಾಗಿ ಜೈಲಿನಲ್ಲಿದ್ದ ಅವರು ಈಗ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ. ಬ್ಲೂಫಿಲ್ಮ್‌ ಕೇಸಿನಲ್ಲಿ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ

ನಟಿ ಶಿಲ್ಪಾ ಶೆಟ್ಟಿ ಪತಿಯ ಮನೆ, ಕಚೇರಿ ಮೇಲೆ ಇ.ಡಿ.ದಾಳಿ Read More »

ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ | ವಿಶ್ವ ಹಿಂದೂ ಪರಿಷದ್ ನಿಂದ ಖಂಡನೆ

ಪುತ್ತೂರು: ವಿಶ್ವದ ಹಿಂದೂ ಸಮುದಾಯ ಬಾಂಗ್ಲಾದೇಶದಲ್ಲಿ ಆಗುತ್ತಿರುವ ಹಿಂದೂಗಳ ಮೇಲಿನ ದೌರ್ಜನ್ಯವನ್ನು ಅತ್ಯಂತ ಉಗ್ರವಾಗಿ ಖಂಡಿಸಬೇಕಿದೆ ಎಂದು ವಿಶ್ವ ಹಿಂದೂ ಪರಿಷದ್ ಜಿಲ್ಲಾಧ್ಯಕ್ಷ ಡಾ.ಕೃಷ್ಣ ಪ್ರಸನ್ನ ತಿಳಿಸಿದ್ದಾರೆ. ಇಸ್ಕಾನ್ ನ ಚಿನ್ಮಯ ಕೃಷ್ಣ ದಾಸರನ್ನು ಕೂಡಲೇ ಬಿಡುಗೊಡೆಗೊಳಿಸುವಂತೆ ಬಾಂಗ್ಲಾದ ಮತಾಂಧ ಸರ್ಕಾರವನ್ನು ವಿಶ್ವ ಹಿಂದೂ ಪರಿಷದ್ ಆಗ್ರಹಿಸಿದ್ದು, 70ರ ದಶಕದಲ್ಲಿ ಬಾಂಗ್ಲಾದೇಶ ಪಾಕಿಸ್ತಾನದಿಂದ ವಿಮೋಚನೆಯಾದಾಗ ಕಷ್ಟದಲ್ಲಿದ್ದ ಲಕ್ಷಾಂತರ ಬಾಂಗ್ಲಾದೇಶೀಯರಿಗೆ ಅನ್ನ ನೀಡಿ ಸಹಾಯ ಮಾಡಿದ ಇಸ್ಕಾನ್ ಸಂಸ್ಥೆಯನ್ನು ಗುರಿಯಾಗಿಸಿಕೊಂಡು ಮತಾಂಧ ಜಿಹಾದಿಗಳು ದಾಳಿ ಮಾಡಿ ದೌರ್ಜನ್ಯ ನಡೆಸುತ್ತಿವೆ.

ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ | ವಿಶ್ವ ಹಿಂದೂ ಪರಿಷದ್ ನಿಂದ ಖಂಡನೆ Read More »

ಇ.ಡಿ.ದಾಳಿಯ ಬೆದರಿಕೆಯೊಡ್ಡಿ ಹೆಂಡತಿ ಹೆಸರಿಗೆ ಐಪಿಎಲ್‌ ಷೇರು ಅಕ್ರಮವಾಗಿ ವರ್ಗಾಯಿಸಿಕೊಂಡಿದ್ದ ಶಶಿ ತರೂರು

ಮಾಜಿ ಅಧ್ಯಕ್ಷ ಲಲಿತ್‌ ಮೋದಿ ಬಹಿರಂಗಪಡಿಸಿದ ಮಾಹಿತಿಯಿಂದ ಕೋಲಾಹಲ ಹೊಸದಿಲ್ಲಿ : ಐಪಿಎಲ್‌ ಫ್ರಾಂಚೈಸಿ ಕುರಿತಾಗಿ ಬಹಳ ವರ್ಷಗಳ ಬಳಿಕ ಬಹಿರಂಗವಾದ ವಿಚಾರವೊಂದು ಈಗ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವಿನ ವಾಕ್ಸಮರಕ್ಕೆ ಕಾರಣವಾಗಿದೆ. ಇಂಡಿಯನ್ ಪ್ರೀಮಿಯರ್ ಲೀಗ್​​ನ ಮಾಜಿ ಅಧ್ಯಕ್ಷ ಪರಾರಿಯಾಗಿ ವಿದೇಶದಲ್ಲಿರುವ ಲಲಿತ್ ಮೋದಿ ಕಾಂಗ್ರೆಸ್‌ ಸಂಸದ ಶಶಿ ತರೂರ್ ವಿರುದ್ಧ ಈ ಗಂಭೀರ ಆರೋಪ ಮಾಡಿದ್ದಾರೆ. ಶಶಿ ತರೂರ್ ಅವರ ಪತ್ನಿ ದಿವಂಗತ ಸುನಂದಾ ಪುಷ್ಕರ್ ಐಪಿಎಲ್ ಫ್ರಾಂಚೈಸಿ ಕೊಚ್ಚಿ ಟಸ್ಕರ್ಸ್ ಕೇರಳದಲ್ಲಿ ಶೇ.25ರಷ್ಟು

ಇ.ಡಿ.ದಾಳಿಯ ಬೆದರಿಕೆಯೊಡ್ಡಿ ಹೆಂಡತಿ ಹೆಸರಿಗೆ ಐಪಿಎಲ್‌ ಷೇರು ಅಕ್ರಮವಾಗಿ ವರ್ಗಾಯಿಸಿಕೊಂಡಿದ್ದ ಶಶಿ ತರೂರು Read More »

ಅಜ್ಮೇರ್‌ ದರ್ಗಾದೊಳಗಿದೆ ಶಿವನ ದೇವಾಲಯ : ಸರ್ವೆಗೆ ಒತ್ತಾಯಿಸಿ ಕೋರ್ಟ್‌ನಲ್ಲಿ ದಾವೆ

ಹಿಂದೆ ಸಂಕಟ ಮೋಚನ ಮಹಾದೇವ ದೇವಳವಾಗಿತ್ತು ಎಂದು ವಾದ ಜೈಪುರ: ಉತ್ತರ ಪ್ರದೇಶದ ಬಳಿಕ ಈಗ ರಾಜಸ್ಥಾನದಲ್ಲೂ ಮಂದಿರ-ಮಸೀದಿ ವಿವಾದ ಶುರುವಾಗಿದೆ. ರಾಜಸ್ಥಾನದ ಅಜ್ಮೇರ್‌ನಲ್ಲಿರುವ ಪ್ರಸಿದ್ಧ ದರ್ಗಾ ಹಿಂದೆ ಶಿವನ ದೇವಾಲಯವಾಗಿತ್ತು ಎಂಬ ವಿವಾದ ಕೋರ್ಟ್‌ ಮೆಟ್ಟಿಲೇರಿದ್ದು, ನ್ಯಾಯಾಲಯ ಈ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಿದೆ. ಅಜ್ಮೇರ್‌ನ ಸೂಫಿ ಸಂತ ಮೊಹಿನುದ್ದೀನ್‌ ಚಿಸ್ತಿಯ ದರ್ಗಾದೊಳಗೆ ಶಿವನ ದೇಗುಲ ಇದೆ, ಇದನ್ನು ಹಿಂದುಗಳಿಗೆ ಬಿಟ್ಟುಕೊಡಬೇಕೆಂದು ಹಿಂದು ಸೇನೆಯ ಮುಖ್ಯಸ್ಥ ವಿಷ್ಣು ಗುಪ್ತ ಎಂಬವರು ದಾವೆ ಹೂಡಿದ್ದಾರೆ. ಮನಮೋಹನ್‌ ಚಂಡೇಲ್‌ ಅವರ

ಅಜ್ಮೇರ್‌ ದರ್ಗಾದೊಳಗಿದೆ ಶಿವನ ದೇವಾಲಯ : ಸರ್ವೆಗೆ ಒತ್ತಾಯಿಸಿ ಕೋರ್ಟ್‌ನಲ್ಲಿ ದಾವೆ Read More »

ಐಪಿಎಲ್‌ ತಂಡಗಳಿಗೆ ಬೇಡವಾದ ಬಾಂಗ್ಲಾದೇಶದ ಕ್ರಿಕೆಟಿಗರು

ಹಿಂದೂ ವಿರೋಧಿ ದೇಶದ ಆಟಗಾರರಿಗೆ ಸದ್ದಿಲ್ಲದೆ ಪಂಚ್‌ ಕೊಟ್ಟ ಕೇಂದ್ರ ಸರ್ಕಾರ ಹೊಸದಿಲ್ಲಿ : ಐಪಿಎಲ್‌ ತಂಡಗಳಿಗೆ ಆಟಗಾರರನ್ನು ಖರೀದಿಸುವ ಮೆಗಾ ಹರಾಜು ಪ್ರಕ್ರಿಯೆ ಜೆಡ್ಡಾದಲ್ಲಿ ನಡೆದಿದ್ದು, ಎಲ್ಲ ತಂಡಗಳು ತಮಗೆ ಬೇಕಾದ ಆಟಗಾರರನ್ನು ಕೋಟಿ ಕೋಟಿ ಸುರಿದು ಖರೀದಿಸಿವೆ. ಆದರೆ ಈ ನಡುವೆ ಬಂಗ್ಲಾದೇಶದ ಯಾವೊಬ್ಬ ಆಟಗಾರನನ್ನು ಯಾರೂ ಖರೀದಿಸಿಲ್ಲ ಎಂಬ ವಿಚಾರ ಈಗ ಮುನ್ನೆಲೆಗೆ ಬಂದಿದೆ. ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಒಟ್ಟು 1,574 ಆಟಗಾರರು ನೋಂದಾಯಿಸಿಕೊಂಡಿದ್ದರು. ಈ ಪೈಕಿ 574 ಆಟಗಾರರನ್ನು ಹರಾಜಿನಲ್ಲಿ

ಐಪಿಎಲ್‌ ತಂಡಗಳಿಗೆ ಬೇಡವಾದ ಬಾಂಗ್ಲಾದೇಶದ ಕ್ರಿಕೆಟಿಗರು Read More »

ತಿರುಪತಿ ದೇವಸ್ಥಾನದ ಹುಂಡಿಯಿಂದ ಹಣ ಕದ್ದ ಭಕ್ತ | ಸಿಸಿಟಿವಿನಿಂದ ಪತ್ತೆ ಹಚ್ಚಿ ಕಳ್ಳನ ಸೆರೆ

ತಿರುಪತಿ: ವೆಂಕಟೇಶ್ವರ ಸ್ವಾಮಿಯ ಸನ್ನಿದಾನವಾದ  ತಿರುಮಲ ತಿರುಪತಿ ಕ್ಷೇತ್ರ ಬಹಳ ಪ್ರಸಿದ್ಧವಾದ ಹಿಂದೂ ದೇಗುಲವಾಗಿದೆ.. ಭಾರತದ ಶ್ರೀಮಂತ ದೇವಸ್ಥಾನವಾಗಿರುವ ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕೆ ನಿತ್ಯ ಲಕ್ಷಾಂತರ ಭಕ್ತರು ದೇಶ, ವಿದೇಶದಿಂದ ಬರುತ್ತಾರೆ. ಭಕ್ತರಿಗೆ ಅನುಕೂಲವಾಗಲೆಂದು ತಿರುಪತಿ ವೆಂಕಟರಮಣ ಸನ್ನಿದಾನದಲ್ಲಿ ಪ್ರಮುಖ ಕ್ರಮಗಳನ್ನು ತೆಗೆದುಕೊಳ್ಳುತ್ತಲೇ ಬಂದಿದೆ. ಆದರೂ ಸಹ ಈ ಕ್ಷೇತ್ರದಲ್ಲಿ ಭಕ್ತರೊಬ್ಬರು ಕಾಣಿಕೆ ಹುಂಡಿಗೆ ಕನ್ನ ಹಾಕಿದ್ದಾರೆ. ಈ ಘಟನೆ ನಡೆದ ಬಳಿಕ  ಸಾಕಷ್ಟು ಚರ್ಚೆಗೆ ಒಳಗಾಗಿದೆ,. ತಿರುಮಲ ದೇವರ ದರ್ಶನಕ್ಕೆ ಬಂದ ತಮಿಳುನಾಡಿನ ಭಕ್ತನೊಬ್ಬ ದೇವರ

ತಿರುಪತಿ ದೇವಸ್ಥಾನದ ಹುಂಡಿಯಿಂದ ಹಣ ಕದ್ದ ಭಕ್ತ | ಸಿಸಿಟಿವಿನಿಂದ ಪತ್ತೆ ಹಚ್ಚಿ ಕಳ್ಳನ ಸೆರೆ Read More »

ಶಬರಿಮಲೆಯ ಪವಿತ್ರ 18 ಮೆಟ್ಟಿಲುಗಳಲ್ಲಿ ಪೊಲೀಸರ ಫೋಟೊಶೂಟ್‌

ಸಂವೇದನಾ ರಹಿತ ಪೊಲೀಸರಿಗೆ ಕಠಿಣ ತರಬೇತಿಯ ಶಿಕ್ಷೆ ಶಬರಿಮಲೆ : ಶಬರಿಮಲೆ ಅಯ್ಯಪ್ಪ ಸನ್ನಿಧಾನದ ಪರಮ ಪವಿತ್ರ ಹದಿನೆಂಟು ಮೆಟ್ಟಿಲುಗಳ ಮೇಲೆ ಅಲ್ಲಿ ಕರ್ತವ್ಯದಲ್ಲಿದ್ದ ಪೊಲೀಸರು ಫೋಟೊ ಶೂಟ್‌ ಮಾಡಿರುವುದು ದೇಶವ್ಯಾಪಿ ಆಕ್ರೋಶದ ಕಿಡಿ ಎಬ್ಬಿಸಿದ್ದು, ಈ 23 ಪೊಲೀಸರನ್ನು ಶಬರಿಮಲೆಯ ಬಂದೋಬಸ್ತಿನ ಕರ್ತವ್ಯದಿಂದ ಬಿಡುಗಡೆಗೊಳಿಸಿ ಕಠಿಣ ತರಬೇತಿಗೆ ಕಳುಹಿಸುವ ಶಿಕ್ಷೆಯನ್ನು ನೀಡಲು ತೀರ್ಮಾನಿಸಲಾಗಿದೆ. ಭಾನುವಾರ ಸನ್ನಿಧಾನದಲ್ಲಿ ಕರ್ತವ್ಯದಲ್ಲಿದ್ದ 30 ಪೊಲೀಸರು ಪವಿತ್ರ ಹದಿನೆಂಟು ಮೆಟ್ಟಿಲುಗಳ ಮೇಲೆ ನಿಂತು ಫೋಟೊಶೂಟ್‌ ಮಾಡಿ ಅದನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

ಶಬರಿಮಲೆಯ ಪವಿತ್ರ 18 ಮೆಟ್ಟಿಲುಗಳಲ್ಲಿ ಪೊಲೀಸರ ಫೋಟೊಶೂಟ್‌ Read More »

ಕುಸ್ತಿಪಟು ಬಜರಂಗ್‌ ಪುನಿಯ 4 ವರ್ಷ ಬ್ಯಾನ್‌

ಈ ಕಾರಣಕ್ಕೆ ಪುನಿಯ ಇನ್ನು ಯಾವುದೇ ಕುಸ್ತಿ ಪಂದ್ಯದಲ್ಲಿ ಭಾಗವಹಿಸುವಂತಿಲ್ಲ ಹೊಸದಿಲ್ಲಿ: ಉದ್ದೀಪನ ಮದ್ದು ಪರೀಕ್ಷೆಗೆ ಮಾದರಿ ನೀಡಲು ಅಸಹಕಾರ ತೋರಿದ ಕುಸ್ತಿಪಟು ಬಜರಂಗ್‌ ಪುನಿಯ ಅವರನ್ನು ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಸಂಸ್ಥೆ (NADA) ನಾಲ್ಕು ವರ್ಷಗಳ ಅವಧಿಗೆ ಕಾಲ ಬ್ಯಾನ್‌ ಮಾಡಿದೆ. ಮಾರ್ಚ್ 10ರಂದು ಸೋನೆಪತ್‌ನಲ್ಲಿ ರಾಷ್ಟ್ರೀಯ ತಂಡದ ಆಯ್ಕೆಗೆ ನಡೆದ ಟ್ರಯಲ್ಸ್‌ನಲ್ಲಿ ಆಯ್ಕೆಯಾದ ನಂತರ ಪುನಿಯಾ ಯೂರಿನ್‌ ಸ್ಯಾಂಪಲ್‌ ಪರೀಕ್ಷೆಗೆ ಒಳಪಡಲು ನಿರಾಕರಿಸಿದ್ದಾರೆ. ಇದನ್ನು ನಿಯಮ ಬಾಹಿರ ಎಂದು ಪರಿಗಣಿಸಿರುವ ನಾಡಾ ಪುನಿಯರನ್ನು

ಕುಸ್ತಿಪಟು ಬಜರಂಗ್‌ ಪುನಿಯ 4 ವರ್ಷ ಬ್ಯಾನ್‌ Read More »

error: Content is protected !!
Scroll to Top