ದೇಶ

ಕಾಂಗ್ರೆಸ್‌ ಸದಸ್ಯ ಅಭಿಷೇಕ್‌ ಸಿಂಘ್ವಿ ಸೀಟಿನಡಿ ನೋಟಿನ ಬಂಡಲ್‌ಗಳು ಪತ್ತೆ

ರಾಜ್ಯಸಭೆ ಆಸನದಡಿ ಸಿಕ್ಕಿದ ರಾಶಿ ರಾಶಿ ನೋಟುಗಳು ಯಾರಿಗೆ ಸೇರಿದ್ದು? ಹೊಸದಿಲ್ಲಿ : ಕಾಂಗ್ರೆಸ್‌ನ ರಾಜ್ಯಸಭಾ ಸದಸ್ಯ ಹಾಗೂ ಖ್ಯಾತ ವಕೀಲ ಅಭಿಷೇಕ್‌ ಮನು ಸಿಂಘ್ವಿ ಅವರ ಆಸನದ ಕೆಳಗೆ ಕಂತೆ ಕಂತೆ ನೋಟು ಪತ್ತೆಯಾಗಿರುವುದು ಅಧಿವೇಶನದಲ್ಲಿ ಭಾರಿ ಕೋಲಾಹಲಕ್ಕೆ ಕಾರಣವಾಗಿದೆ. ಸಂಸತ್‌ನ ಚಳಿಗಾಲದ ಅಧಿವೇಶನ ಪ್ರಸ್ತುತ ನಡೆಯುತ್ತಿದ್ದು, ರಾಜ್ಯಸಭೆ ಸಭಾಪತಿ ಜಗದೀಪ್‌ ಧನ್‌ಕರ್‌ ಅವರು ರಾಜ್ಯಸಭೆಗೆ ಅಭಿಷೇಕ್‌ ಆಸನದ ಕೆಳಗೆ ನೋಟಿನ ಬಂಡಲ್‌ಗಳು ಸಿಕ್ಕಿವೆ ಎಂದು ಸದನಕ್ಕೆ ತಿಳಿಸಿದರು.ಇದಕ್ಕೆ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತೀವ್ರ […]

ಕಾಂಗ್ರೆಸ್‌ ಸದಸ್ಯ ಅಭಿಷೇಕ್‌ ಸಿಂಘ್ವಿ ಸೀಟಿನಡಿ ನೋಟಿನ ಬಂಡಲ್‌ಗಳು ಪತ್ತೆ Read More »

ಸತತ 11ನೇ ಸಲ ರೆಪೊ ದರ ಯಥಾಸ್ಥಿತಿ

ಮುಂಬಯಿ: ಭಾರತೀಯ ರಿಸರ್ವ್ ಬ್ಯಾಂಕ್ ಶುಕ್ರವಾರ ತ್ರೈಮಾಸಿಕ ವಿತ್ತೀಯ ನೀತಿ ಪ್ರಕಟಿಸಿದ್ದು, ಸತತ 11ನೇ ಬಾರಿಗೆ ರೆಪೊ ದರವನ್ನು ಬದಲಿಸದೆ ಶೇಕಡಾ 6.5ರಷ್ಟು ಯಥಾಸ್ಥಿತಿ ಕಾಯ್ದಿರಿಸಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಜಿಡಿಪಿ ಬೆಳವಣಿಗೆಯ ಮುನ್ಸೂಚನೆಯಾದ ಶೇಕಡಾ 7.2ರ ಬದಲು ಶೇಕಡಾ 6.6ಕ್ಕೆ ತಗ್ಗಿಸಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಜುಲೈ-ಸೆಪ್ಟೆಂಬರ್ ತ್ರೈಮಾಸಿಕ ಜಿಡಿಪಿ ಬೆಳವಣಿಗೆಯು 7 ತ್ರೈಮಾಸಿಕ ಕನಿಷ್ಠ 5.4 ಶೇಕಡಾಕ್ಕೆ ಕುಸಿದಿದ್ದರೂ ಬಡ್ಡಿದರದ ಯಥಾಸ್ಥಿತಿಯನ್ನು ಕಾಯ್ದುಕೊಂಡಿದೆ, ಪ್ರಸಕ್ತ ಹಣಕಾಸು ವರ್ಷದ ಐದನೇ ದ್ವೈಮಾಸಿಕ ವಿತ್ತೀಯ ನೀತಿಯನ್ನು ಪ್ರಕಟಿಸಿದ

ಸತತ 11ನೇ ಸಲ ರೆಪೊ ದರ ಯಥಾಸ್ಥಿತಿ Read More »

ಗೋಮಾಂಸ ಸೇವನೆ ನಿಲ್ಲಿಸಿ : ಮುಸ್ಲಿಂ ಧರ್ಮಗುರುವಿನ ಅಚ್ಚರಿಯ ಸಲಹೆ

ಇಸ್ಲಾಂನಲ್ಲಿ ಗೋಮಾಂಸ ಸೇವನೆ ಕಡ್ಡಾಯ ಅಲ್ಲ ಎಂದು ಹೇಳಿಕೆ ಲಖನೌ: ಮುಸ್ಲಿಮರು ಗೋಮಾಂಸ ಸೇವನೆ ನಿಲ್ಲಿಸಬೇಕು ಎಂದು ಕರೆ ಕೊಡುವ ಮೂಲಕ ಮುಸ್ಲಿಂ ಧರ್ಮಗುರುವೊಬ್ಬರು ಅಚ್ಚರಿಯುಂಟುಮಾಡಿದ್ದಾರೆ. ಮೌಲಾನಾ ಶಹಾಬುದ್ದೀನ್‌ ರಿಜ್ವಿ ಬರೇಲ್ವಿ ಈ ಕರೆ ನೀಡಿದವರು. ಅಸ್ಸಾಂನಲ್ಲಿ ಹೋಟೆಲ್‌ ಮತ್ತು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಗೋಮಾಂಸ ನಿಷೇಧಿಸಿ ಅಸ್ಸಾಂ ರಾಜ್ಯ ಸರ್ಕಾರ ಆದೇಶ ಹೊರಡಿಸಿದ ಬೆನ್ನಲ್ಲೇ ಮುಸ್ಲಿಂ ಧರ್ಮಗುರು, ಮುಸ್ಲಿಮರು ಗೋಮಾಂಸ ಸೇವನೆ ನಿಲ್ಲಿಸಬೇಕು ಎಂದು ಸಲಹೆ ನೀಡಿದ್ದಾರೆ.ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಮುಸ್ಲಿಂ ವಿರೋಧಿ

ಗೋಮಾಂಸ ಸೇವನೆ ನಿಲ್ಲಿಸಿ : ಮುಸ್ಲಿಂ ಧರ್ಮಗುರುವಿನ ಅಚ್ಚರಿಯ ಸಲಹೆ Read More »

ಡ್ರಗ್ಸ್‌ ಪ್ರಕರಣ : ಖ್ಯಾತ ನಟನ ಮಗ ಸೆರೆ

ಚೆನ್ನೈ : ಕನ್ನಡ, ತಮಿಳು ಸೇರಿದಂತೆ ದಕ್ಷಿಣದ ಕೆಲವು ಭಾಷೆಗಳ ಸಿನಿಮಾದಲ್ಲಿ ನಟಿಸಿರುವ ನಟ ಮನ್ಸೂರ್ ಅಲಿ ಖಾನ್‌ರ ಪುತ್ರ ತುಘಲಕ್‌ನನ್ನು ತಮಿಳುನಾಡು ಪೊಲೀಸರು ಡ್ರಗ್ಸ್‌ ಕೇಸಿನಲ್ಲಿ ಬಂಧಿಸಿದ್ದಾರೆ. ಮನ್ಸೂರ್‌ ಅಲಿ ಖಾನ್‌ ಹೆಚ್ಚಾಗಿ ವಿಲನ್‌ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತಿರುಮಂಗಳಂ ಪೊಲೀಸರು ತುಘಲಕ್‌ನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ 10 ಜನರನ್ನು ಬಂಧಿಸಲಾಗಿತ್ತು. ತನಿಖೆ ಮುಂದುವರಿದಾಗ ಮನ್ಸೂರ್ ಅಲಿ ಖಾನ್ ಪುತ್ರ ತುಘಲಕ್ ಸಹ ಈ ಡ್ರಗ್ಸ್‌ ಜಾಲದಲ್ಲಿ ಶಾಮೀಲಾಗಿರುವುದು ತಿಳಿದುಬಂದಿದೆ. ಹೀಗಾಗಿ ಆತನನ್ನು

ಡ್ರಗ್ಸ್‌ ಪ್ರಕರಣ : ಖ್ಯಾತ ನಟನ ಮಗ ಸೆರೆ Read More »

ಹೋಟೆಲ್‌ಗಳಲ್ಲಿ ಗೋಮಾಂಸ ಖಾದ್ಯ ಮಾರಿದರೆ 8 ವರ್ಷ ಜೈಲು

ಸಾರ್ವಜನಿಕ ಸ್ಥಳಗಳಲ್ಲಿ ಗೋಮಾಂಸ ಮಾರಾಟ, ಸೇವನೆ ನಿಷೇಧ ಗುವಾಹಟಿ: ಅಸ್ಸಾಂನ ಹೋಟೆಲ್‌ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಗೋಮಾಂಸ ಮಾರಾಟ ಮತ್ತು ಸೇವನೆಯನ್ನು ನಿಷೇಧಿಸುವುದಾಗಿ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಘೋಷಿಸಿದ್ದಾರೆ.ಗೋಮಾಂಸ ಸೇವನೆಯ ಬಗ್ಗೆ ಕಾನೂನಿಗೆ ತಿದ್ದುಪಡಿ ತರಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ. ಕಾನೂನು ಉಲ್ಲಂಘಿಸಿದರೆ 3ರಿಂದ 8 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 3ರಿಂದ 5 ಲಕ್ಷ ರೂ. ವರೆಗೆ ದಂಡ ವಿಧಿಸಬಹುದು.ಸರ್ಕಾರದ ನಿರ್ಣಯಕ್ಕೆ ವಿಪಕ್ಷಗಳು ಪ್ರಬಲ ವಿರೋಧ ವ್ಯಕ್ತಪಡಿಸಿವೆ.ಅಸ್ಸಾಂನಲ್ಲಿ ಗೋಮಾಂಸ

ಹೋಟೆಲ್‌ಗಳಲ್ಲಿ ಗೋಮಾಂಸ ಖಾದ್ಯ ಮಾರಿದರೆ 8 ವರ್ಷ ಜೈಲು Read More »

ತೆಲಂಗಾಣದಲ್ಲಿ 5.3 ತೀವ್ರತೆಯ ಭೂಕಂಪ

ಹೈದರಾಬಾದ್‌ : ತೆಲಂಗಾಣದ ಮುಲುಗು ಜಿಲ್ಲೆಯಲ್ಲಿ ಇಂದು ಬೆಳಗ್ಗೆ 5.3 ತೀವ್ರತೆಯ ಭೂಕಂಪ ಸಂಭವಿಸಿದ್ದು, ಹೈದರಾಬಾದ್‌ನಾದ್ಯಂತ ಕಂಪನಗಳ ಅನುಭವಗಳಾಗಿವೆ. ಭೂಕಂಪನ ರಾಷ್ಟ್ರೀಯ ಕೇಂದ್ರದ ಪ್ರಕಾರ ಭೂಕಂಪ ಬೆಳಗ್ಗೆ 7.27ರ ವೇಳೆಗೆ ಸಂಭವಿಸಿದೆ. ಕಂಪನ ಕೇಂದ್ರ ಭೂಮಿಯ 40 ಕಿ. ಮೀ. ಆಳದಲ್ಲಿತ್ತು. ಭೂಕಂಪ ಈ ಪ್ರದೇಶಗಳ ನಿವಾಸಿಗಳಲ್ಲಿ ಭಯವನ್ನು ಉಂಟುಮಾಡಿದೆ. ಯಾವುದೇ ಪ್ರಾಣಹಾನಿ ಅಥವಾ ಗಮನಾರ್ಹ ಹಾನಿಯ ಬಗ್ಗೆ ತಕ್ಷಣದ ವರದಿಗಳು ಬಂದಿಲ್ಲ. ಅಧಿಕಾರಿಗಳು ಪ್ರಸ್ತುತ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ. ಜನರಿಗೆ ಜಾಗರೂಕರಾಗಿರಲು ಮತ್ತು ಕಿಕ್ಕಿರಿದ ಹಾಗೂ ಅಸುರಕ್ಷಿತ

ತೆಲಂಗಾಣದಲ್ಲಿ 5.3 ತೀವ್ರತೆಯ ಭೂಕಂಪ Read More »

ಮುಂಜಾನೆ ತಮಿಳುನಾಡಿಗೆ ಅಪ್ಪಳಿಸಿದ ಫೆಂಗಲ್‌ ಚಂಡಮಾರುತಕ್ಕೆ 4 ಮಂದಿ ಬಲಿ

ಭಾರಿ ಮಳೆಯಿಂದ ಹಲವು ಪ್ರದೇಶ ಜಲಾವೃತ, ಸಂಚಾರ ವ್ಯತ್ಯಯ ಚೆನ್ನೈ : ಫೆಂಗಲ್ ಚಂಡಮಾರುತ ಭಾನುವಾರ ಮುಂಜಾನೆ 2 ಗಂಟೆಗೆ ತಮಿಳುನಾಡು ಕರಾವಳಿಗೆ ಅಪ್ಪಳಿಸಿ ಭಾರಿ ಅನಾಹುತಗಳನ್ನು ಉಂಟುಮಾಡಿದೆ. ವಿದ್ಯುತ್‌ ಆಘಾತ ಹಾಗೂ ಭೂಕುಸಿತದಿಂದಾಗಿ ನಾಲ್ವರು ಸಾವನ್ನಪ್ಪಿದ್ದು, ಹಲವೆಡೆ ಜಲಾವೃತವಾಗಿ ಜನಜೀವನ ಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಮುಂದಿನ 48 ಗಂಟೆಗಳ ಕಾಲ ರಾಜ್ಯದಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ನಿನ್ನೆ ಮುಚ್ಚಲಾಗಿದ್ದ ಚೆನ್ನಯ ಏರ್​ಪೋರ್ಟನ್ನು 16 ಗಂಟೆಗಳ ಬಳಿಕ ತೆರೆಯಲಾಗಿದ್ದು, ವಿಮಾನಗಳ ಕಾರ್ಯಾಚರಣೆ ಆರಂಭವಾಗಿದೆ. ಭಾರತೀಯ

ಮುಂಜಾನೆ ತಮಿಳುನಾಡಿಗೆ ಅಪ್ಪಳಿಸಿದ ಫೆಂಗಲ್‌ ಚಂಡಮಾರುತಕ್ಕೆ 4 ಮಂದಿ ಬಲಿ Read More »

ಶಬರಿಮಲೆ : 12 ದಿನದಲ್ಲಿ 63 ಕೋ.ರೂ. ಸಂಗ್ರಹ; 16 ಕೋ. ರೂ ಹೆಚ್ಚಳ

ಭಾರಿ ಸಂಖ್ಯೆಯಲ್ಲಿ ಅಯ್ಯಪ್ಪನ ದರ್ಶನಕ್ಕೆ ಆಗಮಿಸುತ್ತಿರುವ ಭಕ್ತರು ಶಬರಿಮಲೆ : ಶಬರಿಮಲೆ ಯಾತ್ರಾ ಋತು ಶುರುವಾದ ಬರೀ 12 ದಿನದಲ್ಲೇ ಕ್ಷೇತ್ರದ ಆದಾಯದಲ್ಲಿ 15.89 ಕೋ.ರೂ. ಏರಿಕೆ ಕಂಡುಬಂದಿದೆ. ಪ್ರತಿವರ್ಷದಂತೆ ಈ ವರ್ಷವೂ ಭಾರಿ ಸಂಖ್ಯೆಯಲ್ಲಿ ಅಯ್ಯಪ್ಪ ವ್ರತಧಾರಿಗಳು ಶಬರಿಮಲೆ ಅಯ್ಯಪ್ಪನ ಸನ್ನಿಧಾನಕ್ಕೆ ಆಗಮಿಸುತ್ತಿದ್ದಾರೆ. ಭಕ್ತರಿಗೆ ಅನುಕೂಲವಾಗುವ ಅನೇಕ ಉಪಕ್ರಮಗಳನ್ನು ಕೇರಳದ ದೇವಸ್ವಂ ಬೋರ್ಡ್‌ ಈ ಸಲ ಕೈಗೊಂಡಿರುವುದರಿಂದ ಇಷ್ಟರ ತನಕದ ಯಾತ್ರೆ ಸರಾಗವಾಗಿ ನಡೆದಿದೆ. ಅಂತೆಯೇ ಕ್ಷೇತ್ರದ ಆದಾಯವೂ ಗಣನೀಯವಾಗಿ ಏರಿಕೆಯಾಗಿದೆ.ಕಳೆದ ವರ್ಷ ಆರಂಭದ 12

ಶಬರಿಮಲೆ : 12 ದಿನದಲ್ಲಿ 63 ಕೋ.ರೂ. ಸಂಗ್ರಹ; 16 ಕೋ. ರೂ ಹೆಚ್ಚಳ Read More »

ಬಾಂಗ್ಲಾದೇಶದ ಹಿಂದೂಗಳ ರಕ್ಷಣೆಗೆ ಆರ್‌ಎಸ್‌ಎಸ್‌ ಮನವಿ

ಹಿಂದೂಗಳ ಮೇಲಿನ ಹಿಂಸಾಚಾರಕ್ಕೆ ಜಗತ್ತು ಮೌನವಾಗಿರುವುದಕ್ಕೆ ಖಂಡನೆ ಹೊಸದಿಲ್ಲಿ: ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ನಿರಂತರವಾಗಿ ನಡೆಯುತ್ತಿರುವ ಹಿಂಸಾಚಾರಕ್ಕೆ ಆರ್‌ಎಸ್‌ಎಸ್‌ ಕಳವಳ ವ್ಯಕ್ತಪಡಿಸಿದೆ. ಅಲ್ಲಿನ ಸರ್ಕಾರ ಹಿಂದೂಗಳ ಮೇಲಿನ ದೌರ್ಜನ್ಯದ ಬಗ್ಗೆ ಮೌನವಾಗಿದೆ. ಈ ದಾಳಿಗಳ ವಿರುದ್ಧ ಕ್ರಮ ಕೈಗೊಳ್ಳಲು ವಿಫಲವಾಗಿವೆ ಎಂದು ಆರ್‌ಎಸ್‌ಎಸ್‌ ಆಕ್ರೋಶ ವ್ಯಕ್ತಪಡಿಸಿದೆ.ಇಸ್ಲಾಮಿಕ್ ಉಗ್ರಗಾಮಿಗಳಿಂದ ಬಾಂಗ್ಲಾದೇಶದಲ್ಲಿ ಹಿಂದೂಗಳು ಮತ್ತು ಇತರ ಅಲ್ಪಸಂಖ್ಯಾತರ ವಿರುದ್ಧದ ದಾಳಿ, ಹತ್ಯೆ, ಲೂಟಿಗಳು ಸೇರಿದಂತೆ ಅಮಾನವೀಯ ಕೃತ್ಯಗಳು ನಡೆಯುತ್ತಿವೆ. ಈ ಪರಿಸ್ಥಿತಿ ತೀವ್ರ ಆತಂಕಕಾರಿಯಾಗಿದೆ. ಇದನ್ನು ಖಂಡಿಸುತ್ತದೆ ಎಂದು ಹೇಳಿಕೆಯಲ್ಲಿ

ಬಾಂಗ್ಲಾದೇಶದ ಹಿಂದೂಗಳ ರಕ್ಷಣೆಗೆ ಆರ್‌ಎಸ್‌ಎಸ್‌ ಮನವಿ Read More »

200ಕ್ಕೂ ಅಧಿಕ ದ್ವಿಚಕ್ರ ವಾಹನಗಳು ಬೆಂಕಿಗಾಹುತಿ

ರೈಲು ನಿಲ್ದಾಣದ ಪಾರ್ಕಿಂಗ್‌ ಸ್ಥಳದಲ್ಲಿ ಸಂಭವಿಸಿದ ಅವಘಡ ಲಖನೌ: ಉತ್ತರ ಪ್ರದೇಶದ ವಾರಣಾಸಿಯ ಕ್ಯಾಂಟ್ ರೈಲ್ವೆ ನಿಲ್ದಾಣದ ವಾಹನ ನಿಲುಗಡೆ ಪ್ರದೇಶದಲ್ಲಿ ಬೆಂಕಿ ಅವಘಡ ಸಂಭವಿಸಿ 200ಕ್ಕೂ ಅಧಿಕ ದ್ವಿಚಕ್ರ ವಾಹನಗಳು ಸುಟ್ಟು ಭಸ್ಮವಾಗಿದೆ. ಶನಿವಾರ ಮುಂಜಾನೆ ಘಟನೆ ನಡೆದಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಘಟನಾ ಸ್ಥಳಕ್ಕೆ ಸುಮಾರು 12 ಅಗ್ನಿಶಾಮಕ ದಳ ವಾಹನಗಳು, ಜೊತೆಗೆ ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್‌ಪಿ), ರೈಲ್ವೆ

200ಕ್ಕೂ ಅಧಿಕ ದ್ವಿಚಕ್ರ ವಾಹನಗಳು ಬೆಂಕಿಗಾಹುತಿ Read More »

error: Content is protected !!
Scroll to Top