ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತ್ ನ ಪ್ರಶಸ್ತಿಗಳ ಘೋಷಣೆ |ದಕ್ಷಿಣ ಕನ್ನಡ ಜಿಲ್ಲೆಯ ಶಿಕ್ಷಣ ಬ್ರಹ್ಮ ಡಾ. ಮೋಹನ್ ಆಳ್ವ, ಇತಿಹಾಸ ತಜ್ಞ ಡಾ. ತುಕರಾಮ ಪೂಜಾರಿ ಬಂಟ್ವಾಳ, ಬಹುಮುಖ ಸಾಧಕಿ ಡಾ. ಅನುರಾಧಾ ಕುರುಂಜಿಯವರಿಗೆ ಪ್ರಶಸ್ತಿ | ರಾಜ್ಯಮಟ್ಟದ ನಾಲ್ಕನೇ ವೈಜ್ಞಾನಿಕ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರಧಾನ
ಮಂಗಳೂರು : ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತ್ ಬೆಂಗಳೂರು ವತಿಯಿಂದ ಕೊಡಮಾಡುವ 2024 ನೇ ಸಾಲಿನ ರಾಜ್ಯ ಪ್ರಶಸ್ತಿಗಳು ಘೋಷಣೆಯಾಗಿದ್ದು, ಮೂಡಬಿದಿರೆಯ ವಿದ್ಯಾ ನಗರಿಯ ಹರಿಕಾರ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ರೂವಾರಿ ಡಾ ಮೋಹನ ಆಳ್ವ ಪ್ರತಿಷ್ಠಿತ “ಜೀವಮಾನ ಸಾಧಕ” -2024” ಪ್ರಶಸ್ತಿಗೆ ಆಯ್ಕೆಯಾದರೆ, ಅಬ್ಬಕ್ಕನ ಕಲಾ ಗ್ಯಾಲರಿಯ ಸ್ಥಾಪಕ, ವೃತ್ತಿಯಲ್ಲಿ ಉಪನ್ಯಾಸಕ, ಪ್ರವೃತ್ತಿಯಲ್ಲಿ ಇತಿಹಾಸ, ಜಾನಪದ ತಜ್ಞ ಹಾಗೂ ಹಲವು ವಿಚಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಬಂಟ್ವಾಳದ ಡಾ. ತುಕರಾಮ್ ಪೂಜಾರಿಯವರು ಪ್ರತಿಷ್ಠಿತ “ಹೆಚ್ ಎನ್ […]