ದಕ್ಷಿಣ ಕನ್ನಡ

ಸೌಜನ್ಯ ಅತ್ಯಾಚಾರ, ಕೊಲೆ | ನ್ಯಾಯೋಚಿತ ತನಿಖೆಗೆ ಆಗ್ರಹಿಸಿ ಫೆ.18 ರಂದು ಬೃಹತ್ ಜನಾಂದೋಲನ

ಉಪ್ಪಿನಂಗಡಿ: ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ನ್ಯಾಯೋಚಿತ ತನಿಖೆ ನಡೆಸಬೇಕೆಂದು ಆಗ್ರಹಿಸಿ ಫೆ.18 ರಂದು ಅಪರಾಹ್ನ 3 ಗಂಟೆಗೆ ಉಪ್ಪಿನಂಗಡಿಯ ಎಚ್‌. ಎಂ. ಅಡಿಟೋರಿಯಂನ ವಠಾರದಲ್ಲಿ ಬೃಹತ್ ಜನಾಂದೋಲನ ಸಭೆ ನಡೆಯಲಿದೆ ಎಂದು ಸಾಮಾಜಿಕ ಹೋರಾಟಗಾರ ಅಲಿಮಾರ ಜತೀಂದ್ರ ಶೆಟ್ಟಿ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸೌಜನ್ಯ ಎಂಬ ಅಮಾಯಕ ವಿದ್ಯಾರ್ಥಿನಿಯ ಬರ್ಬರ ಹತ್ಯೆ, ಅತ್ಯಾಚಾರ ಪ್ರಕರಣದ ಬಗ್ಗೆ ಸರಕಾರ ಮರು ತನಿಖೆಯನ್ನು ನಡೆಸಬೇಕು. ಪ್ರಕರಣದ ನೈಜ ಆರೋಪಿಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮಕ್ಕೆ ಒಳಪಡಿಸಬೇಕು. […]

ಸೌಜನ್ಯ ಅತ್ಯಾಚಾರ, ಕೊಲೆ | ನ್ಯಾಯೋಚಿತ ತನಿಖೆಗೆ ಆಗ್ರಹಿಸಿ ಫೆ.18 ರಂದು ಬೃಹತ್ ಜನಾಂದೋಲನ Read More »

ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಮೋರ್ಚಾಗಳ ಪದಾಧಿಕಾರಿಗಳ ನೇಮಕ | ಪಟ್ಟಿ ಬಿಡುಗಡೆ

ಮಂಗಳೂರು: ಭಾರತೀಯ ಜನತಾ ಪಾರ್ಟಿ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಮೋರ್ಚಾಗಳ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಿದೆ. ಬಿಜೆಪಿಯ ದ.ಕ.ಜಿಲ್ಲೆಯ ಜಿಲ್ಲಾ ವಕ್ತಾರರಾಗಿ ಕೃಷ್ಣಪ್ಪ ಪೂಜಾರಿ, ಹಿಂದುಳಿದ ವರ್ಗ ಮೋರ್ಚಾಕ್ಕೆ ಜಿಲ್ಲಾಧ್ಯಕ್ಷರಾಗಿ ಮಹೇಶ್ ಜೋಗಿ, ಪ್ರಧಾನ ಕಾರ್ಯದರ್ಶಿಗಳಾಗಿ ಮೋನಪ್ಪ ದೇವಸ್ಯ, ಶಶಿಧರ ಕಲ್ಮಂಜ, ಮಹಿಳಾ ಮೋರ್ಚಾಕ್ಕೆ ಪ್ರಧಾನ ಕಾರ್ಯದರ್ಶಿಗಳಾಗಿ ಸಂಧ್ಯಾ ವೆಂಕಟೇಶ್, ಲಿಖಿತಾ ಆರ್‍. ಶೆಟ್ಟಿ, ಯುವ ಮೋರ್ಚಾಕ್ಕೆ ಪ್ರಧಾನ ಕಾರ್ಯದರ್ಶಿಗಳಾಗಿ ಭರತ್ ರಾಜ್ ಕೃಷ್ಣಾಪುರ, ಉಮೇಶ್ ಕುಲಾಲ್, ಎಸ್‍.ಟಿ. ಮೋರ್ಚಾಕ್ಕೆ ಪ್ರಧಾನ ಕಾರ್ಯದರ್ಶಿಗಳಾಗಿ ಜಯರಾಮ ಕಂಟ್ರಕಲ,

ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಮೋರ್ಚಾಗಳ ಪದಾಧಿಕಾರಿಗಳ ನೇಮಕ | ಪಟ್ಟಿ ಬಿಡುಗಡೆ Read More »

ಹೃದಯಾಘಾತದಿಂದ ವಿದ್ಯಾರ್ಥಿನಿ ಮೃತ್ಯು!

ಉಪ್ಪಿನಂಗಡಿ: ಕಾಲೇಜು ವಿದ್ಯಾರ್ಥಿನಿಯೋರ್ವಳು ಹೃದಯಾಘಾತದಿಂದ ಮಲಗಿದ್ದಲ್ಲೇ ಮೃತ ಪಟ್ಟ ಘಟನೆ 34 ನೆಕ್ಕಿಲಾಡಿ ಗ್ರಾಮದ ಕರ್ವೇಲು ಬಳಿ ನಡೆದಿದೆ. ಕೆ.ಎ. ಸ್ಟೋರ್ ಮಾಲಕ ದಾವೂದು ಎಂಬವರ ಪುತ್ರಿ ಹಫೀಝ (17) ಮೃತ ಬಾಲಕಿ. ಪುತ್ತೂರಿನ ಸೈಂಟ್ ಫಿಲೋಮಿನಾ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾದ ಈಕೆ ನಿನ್ನೆ ರಾತ್ರಿ ಮನೆಯಲ್ಲಿ ಮಲಗಿದ್ದು, ಫೆ.15ರಂದು ಬೆಳಗ್ಗೆ ಎದ್ದೇಳುವಾಗ ಮೃತಪಟ್ಟಿದ್ದಳು. ಮಲಗಿದಲ್ಲೇ ಹೃದಯಾಘಾತಕ್ಕೀಡಾಗಿ ಈಕೆ ಮೃತಪಟ್ಟಿದ್ದಾಳೆ ಎನ್ನಲಾಗಿದೆ. ಮೃತಳು ತಂದೆ, ತಾಯಿ ಹಾಗೂ ಮೂವರು ಸಹೋದರರನ್ನು ಅಗಲಿದ್ದಾಳೆ.

ಹೃದಯಾಘಾತದಿಂದ ವಿದ್ಯಾರ್ಥಿನಿ ಮೃತ್ಯು! Read More »

ನೇತ್ರಾವತಿ ನದಿಗೆ ಹಾರಿ ಯುವತಿ ಆತ್ಮಹತ್ಯೆ !

ಬಂಟ್ವಾಳ: ಯುವತಿಯೋರ್ವಳು ಚಲಿಸುತ್ತಿದ್ದ ರೈಲಿನಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಮುಂಜಾನೆ ನಡೆದಿದೆ. ತುಮಕೂರು ಮೂಲದ ನಯನ (25) ಆತ್ಮಹತ್ಯೆ ಮಾಡಿಕೊಂಡವರು. ನಯನ ಇಂದು ಮುಂಜಾನೆ 6.30 ವೇಳೆಗೆ ಸಂಚರಿಸುತ್ತಿದ್ದ ರೈಲಿನಿಂದ ನೇತ್ರಾವತಿ ನದಿಗೆ ಹಾರಿದ್ದಾಳೆ ಎನ್ನಲಾಗಿದೆ. ಇತರ ಪ್ರಯಾಣಿಕರು ನೀಡಿದ ಮಾಹಿತಿಯಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಘಟನೆಯನ್ನು ಖಚಿತಪಡಿಸಿಕೊಂಡಿದ್ದಾರೆ. ತಕ್ಷಣ ನದಿಯಲ್ಲಿ ದೋಣಿ ಮೂಲಕ ಕಾರ್ಯಾಚರಣೆ ನಡೆಸಿದ ಗೂಡಿಬಳಿ ನಿವಾಸಿ ಮುಹಮ್ಮದ್ ಹಾಗೂ ಜೀವರಕ್ಷಕ ತಂಡ ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ. ಘಟನಾ ಸ್ಥಳಕ್ಕೆ ಬಂಟ್ವಾಳ

ನೇತ್ರಾವತಿ ನದಿಗೆ ಹಾರಿ ಯುವತಿ ಆತ್ಮಹತ್ಯೆ ! Read More »

ಸತ್ಯ, ಧರ್ಮ, ನಿಷ್ಠೆಯಲ್ಲಿ ನಡೆಯುವ ಒಕ್ಕಲಿಗ ಸಮುದಾಯ ರಾಜಪರಂಪರೆಯ ಹಿನ್ನಲೆಯ ಸಮುದಾಯ : ಡಿ.ಬಿ.ಬಾಲಕೃಷ್ಣ | ಎಲ್ಲ ಸಮುದಾಯವನ್ನು ಅಪ್ಪಿಕೊಂಡು ಒಪ್ಪಿಕೊಂಡು ಬಂದಿರುವಂತಹ  ಸಮುದಾಯ |ದಕ್ಷಿಣ ಕನ್ನಡ ಜಿಲ್ಲಾ ಒಕ್ಕಲಿಗ ಸೇವಾ ಸಂಘ (ರಿ.) ಮಂಗಳೂರು ಅಸ್ಥಿತ್ವಕ್ಕೆ

ಮಂಗಳೂರು: ಸತ್ಯ, ಧರ್ಮ, ನಿಷ್ಠೆಯಲ್ಲಿ ನಡೆಯುವ ಒಕ್ಕಲಿಗ ಸಮುದಾಯ ರಾಜಪರಂಪರೆಯ ಹಿನ್ನಲೆಯ ಸಮುದಾಯವಾಗಿದ್ದು ಕೇವಲ ಕೃಷಿಕರಾಗಿ ಮಾತ್ರ ಗುರುತಿಸಿಕೊಂಡಿಲ್ಲ. ಬದಲಾಗಿ ಶೈಕ್ಷಣಿಕ, ವೈದ್ಯಕೀಯ, ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿಯೂ ಬಹಳಷ್ಟು ಕೊಡುಗೆ ನೀಡಿದೆ ಎಂದು ಬಾಲಕೃಷ್ಣ ಡಿ.ಬಿ. ತಿಳಿಸಿದ್ದಾರೆ. ಅವರು ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಒಕ್ಕಲಿಗ ಸಮುದಾಯ ಪ್ರಪ್ರಥಮ ಸ್ವಾತಂತ್ರ್ಯ ಹೋರಾಟಗಾರರಾಗಿದ್ದು, ಕೆದಂಬಾಡಿ ರಾಮಯ್ಯ ಗೌಡ, ಗುಡ್ಡೆಮನೆ ಅಪ್ಪಯ್ಯ ಗೌಡ, ಬೆಂಗಳೂರು ನಿರ್ಮಾತೃ ನಾಡ ಪ್ರಭು ಕೆಂಪೇಗೌಡ, ದೇಶಕ್ಕೆ ಪ್ರಧಾನಿ, ರಾಜ್ಯದ ಮೊದಲನೇ, ಎರಡನೇ ಮುಖ್ಯಮಂತ್ರಿ ಹಾಗೂ

ಸತ್ಯ, ಧರ್ಮ, ನಿಷ್ಠೆಯಲ್ಲಿ ನಡೆಯುವ ಒಕ್ಕಲಿಗ ಸಮುದಾಯ ರಾಜಪರಂಪರೆಯ ಹಿನ್ನಲೆಯ ಸಮುದಾಯ : ಡಿ.ಬಿ.ಬಾಲಕೃಷ್ಣ | ಎಲ್ಲ ಸಮುದಾಯವನ್ನು ಅಪ್ಪಿಕೊಂಡು ಒಪ್ಪಿಕೊಂಡು ಬಂದಿರುವಂತಹ  ಸಮುದಾಯ |ದಕ್ಷಿಣ ಕನ್ನಡ ಜಿಲ್ಲಾ ಒಕ್ಕಲಿಗ ಸೇವಾ ಸಂಘ (ರಿ.) ಮಂಗಳೂರು ಅಸ್ಥಿತ್ವಕ್ಕೆ Read More »

ಸಹಕಾರ ರತ್ನ ಬಿ. ನಿರಂಜನ ಬಾವಂತಬೆಟ್ಟು ನಿಧನ

ಬೆಳ್ತಂಗಡಿ: ಸಹಕಾರ ರತ್ನ ಬಿ. ನಿರಂಜನ ಬಾವಂತಬೆಟ್ಟು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ನಿಧನರಾದರು. ಬಿ. ನಿರಂಜನ ಅವರು ತಣ್ಣೀರುಪಂಥ ಬಾವಂತಬೆಟ್ಟು ನಿವಾಸಿಯಾಗಿದ್ದು, ಜಿಲ್ಲಾ ಪಂಚಾಯಿತಿ ಸದಸ್ಯರಾಗಿ, ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ತಣ್ಣೀರುಪಂಥ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಸ್ಥಾಪನೆಯಾದ ಆರಂಭದಲ್ಲಿ ಅಧ್ಯಕ್ಷರಾಗಿ ಸುದೀರ್ಘ 41 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾಗಿ, ದ. ಕ. ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕರಾಗಿ ಸಹಕಾರಿ ರಂಗದಲ್ಲಿ ಸೇವೆ ಸಲ್ಲಿಸಿದ್ದರು.  ಮರಿಪಾದೆ ಬ್ರಹ್ಮ

ಸಹಕಾರ ರತ್ನ ಬಿ. ನಿರಂಜನ ಬಾವಂತಬೆಟ್ಟು ನಿಧನ Read More »

ವಿಷ ಸೇವಿಸಿದ್ದ ವಿದ್ಯಾರ್ಥಿನಿ ತ್ರಿಶಾ ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು !

ಬೆಳ್ತಂಗಡಿ: ವಿಷ ಸೇವಿಸಿದ್ದ ವಿದ್ಯಾರ್ಥಿನಿಯೋರ್ವಳು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ. ಧರ್ಮಸ್ಥಳದ ಪಿಜತ್ತಡ್ಕ ನಿವಾಸಿ ಕಿಶೋರ್ ಹಾಗೂ ಸೌಮ್ಯ ದಂಪತಿ ಪುತ್ರಿ ತ್ರಿಶಾ (16) ಮೃತ ವಿದ್ಯಾರ್ಥಿನಿ. ಬೆಳ್ತಂಗಡಿಯ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ 10ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು ಎನ್ನಲಾಗಿದೆ. ಫೆ.7 ರಂದು ವಿಷ ಸೇವಿಸಿದ್ದ ತ್ರಿಶಾಳನ್ನು ಮಂಗಳೂರಿನ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದರೂ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಕುರಿತು ಧರ್ಮಸ್ಥಳ ಠಾಣೆಯಲ್ಲಿ

ವಿಷ ಸೇವಿಸಿದ್ದ ವಿದ್ಯಾರ್ಥಿನಿ ತ್ರಿಶಾ ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು ! Read More »

ಚಿಂತೆಯ ಬದಲು ಚಿಂತನೆ ಮಾಡೋಣ: ಕೊಂಡೆವೂರು ಶ್ರೀಗಳು | ಬಂಟ್ವಾಳ ಮೆಲ್ಕಾರ್ ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ಮೆಲ್ಕಾರ್ ಕೇಂದ್ರ ಸಮಿತಿ ಸಭೆ

ಬಂಟ್ವಾಳ: ಹಿರಿಯರ ಅನುಭವವು ನಂಬಿಕೆಯ ಜೊತೆಗೆ ಮಿಳಿತವಾದಾಗ ಜೀವನವು ಅರ್ಥಪೂರ್ಣವಾಗುತ್ತದೆ. ಚಿಂತೆಯ ಬದಲು ಎಲ್ಲರೂ ಚಿಂತನೆಯನ್ನು ಮಾಡಲು ಹಿರಿಯರ ಪ್ರತಿಷ್ಠಾನ ನಡೆಸುವ ಕಾರ್ಯಗಳು ಸಮಾಜದ ಒಳಿತಿಗೆ ದೊಡ್ಡ ಕೊಡುಗೆಯಾಗಿದೆ.  ಸಂಸ್ಕೃತಿಯ ರಕ್ಷಣೆಗೆ ಹಿರಿಯರ ಮಾರ್ಗದರ್ಶನವು ಇಂದಿನ ಅಗತ್ಯವಾಗಿದೆ ಎಂದು ಕೊಂಡೆವೂರು ನಿತ್ಯಾನಂದ ಯೋಗಾಶ್ರಮದ ಪರಮಪೂಜ್ಯ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ತಿಳಿಸಿದರು. ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ಮೆಲ್ಕಾರ್ ಬಂಟ್ವಾಳದ ಕೇಂದ್ರ ಸಮಿತಿ ಸಭೆಯನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿ, ಆಶೀರ್ವಚನ ನೀಡಿದರು. ಆಶ್ರಮದ ಮೂಲಕ

ಚಿಂತೆಯ ಬದಲು ಚಿಂತನೆ ಮಾಡೋಣ: ಕೊಂಡೆವೂರು ಶ್ರೀಗಳು | ಬಂಟ್ವಾಳ ಮೆಲ್ಕಾರ್ ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ಮೆಲ್ಕಾರ್ ಕೇಂದ್ರ ಸಮಿತಿ ಸಭೆ Read More »

ಕಡಬದಲ್ಲಿ ಸ್ಪಂದನಾ ಸಮುದಾಯ ಸಹಕಾರ ಸಂಘದ ಶುಭಾರಂಭ | ಸಹಕಾರಿ ಸಂಘಗಳು ಸಮಾಜದಲ್ಲಿ ಸಹಕಾರಿಯಾಗಿ ಕೆಲಸ ಮಾಡುತ್ತಿದೆ – ಭಾಗೀರಥಿ ಮುರುಳ್ಯ | ಇತರ ಸಮುದಾಯದವರಿಗೂ ಸಹಕಾರ ಸಂಘ ಸೇವೆ ನೀಡಲಿದೆ : ಕೇಶವ ಎ.

ಕಾಣಿಯೂರು: ಸಹಕಾರಿ ಸಂಘಗಳು ಸಮಾಜದಲ್ಲಿ ಸಹಕಾರಿಯಾಗಿ ಕೆಲಸ ಮಾಡುತ್ತಿದೆ. ಸಹಕಾರ ಸಂಘಗಳ ಮೂಲಕ ಸದಸ್ಯರು ತಾವು ಪಡೆದ ಸಾಲವನ್ನು ಸಮರ್ಪಕವಾಗಿ ಸಕಾಲದಲ್ಲಿ ಮರುಪಾವತಿ ಮಾಡಿದಲ್ಲಿ ಸಂಘ ಅಭಿವೃದ್ದಿ ಹೊಂದಲು ಸಾಧ್ಯ. ಸ್ವಾಭಿಮಾನದ ಬದುಕು ಕಟ್ಟಿಕೊಂಡು ಜೀವನ ನಡೆಸಲು ಸಹಕಾರ ಸಂಘಗಳು ಸಹಕಾರಿ ಎಂದು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು. ಅವರು ಕಡಬ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಫೆ ೧೧ರಂದು ನಡೆದ ಸ್ಪಂದನಾ ಸಮುದಾಯ ಸಹಕಾರ ಸಂಘದ ಶುಭಾರಂಭ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಕಡಬದಲ್ಲಿ ಸ್ಪಂದನಾ ಸಮುದಾಯ ಸಹಕಾರ ಸಂಘದ ಶುಭಾರಂಭ | ಸಹಕಾರಿ ಸಂಘಗಳು ಸಮಾಜದಲ್ಲಿ ಸಹಕಾರಿಯಾಗಿ ಕೆಲಸ ಮಾಡುತ್ತಿದೆ – ಭಾಗೀರಥಿ ಮುರುಳ್ಯ | ಇತರ ಸಮುದಾಯದವರಿಗೂ ಸಹಕಾರ ಸಂಘ ಸೇವೆ ನೀಡಲಿದೆ : ಕೇಶವ ಎ. Read More »

ಬೈಕ್ – ಕಾರುಗಳ ಮಧ್ಯೆ ಸರಣಿ ಅಪಘಾತ | ಬೈಕ್ ಸಹಸವಾರೆಗೆ ಗಂಭೀರ ಗಾಯ

ಸುಳ್ಯ: ತಾಲೂಕಿನ ಬೊಳುಬೈಲಿನಲ್ಲಿ ನಡೆದ ಸರಣಿ ಅಪಘಾತದಲ್ಲಿ ಮಹಿಳೆಯೋರ್ವರು ಗಂಭೀರ ಗಾಯಗೊಂಡ ಘಟನೆ ಭಾನುವಾರ ಸಂಜೆ ನಡೆದಿದೆ. ಎರಡು ಕಾರು ಹಾಗೂ ಬೈಕ್ ಮತ್ತು ಸ್ಕೂಟಿಯ ಮಧ್ಯೆ ನಡೆದ ಸರಣಿ ಅಪಘಾತ ಸಂಭವಿಸಿದ್ದು, ಜಾಲ್ಸೂರು ಕಡೆಯಿಂದ ಸುಳ್ಯ ಕಡೆಗೆ ಬರುತ್ತಿದ್ದ ಸುನಿಲ್ ಕುಮಾರ್ ಮೋಂಟಡ್ಕ ಅವರು ಚಲಾಯಿಸುತ್ತಿದ್ದ ಬೈಕ್ ಮುಂಭಾಗದಲ್ಲಿ ಹೋಗುತ್ತಿದ್ದ ಕಾರೊಂದಕ್ಕೆ ಢಿಕ್ಕಿ ಹೊಡೆದು, ರಸ್ತೆ ಬದಿ ನಿಲ್ಲಿಸಿದ್ದ ಸ್ಕೂಟಿಯೊಂದಕ್ಕೆ ಢಿಕ್ಕಿ ಹೊಡೆದಿದೆ. ಈ ಸಂದರ್ಭದಲ್ಲಿ ರಸ್ತೆಯಲ್ಲಿ ತೆರಳುತ್ತಿದ್ದ ಇನ್ನೊಂದು ಬೈಕ್ ಗೆ ಢಿಕ್ಕಿ ಹೊಡೆದಿದೆ.

ಬೈಕ್ – ಕಾರುಗಳ ಮಧ್ಯೆ ಸರಣಿ ಅಪಘಾತ | ಬೈಕ್ ಸಹಸವಾರೆಗೆ ಗಂಭೀರ ಗಾಯ Read More »

error: Content is protected !!
Scroll to Top