ದಕ್ಷಿಣ ಕನ್ನಡ

ನಾವು ಯಾರನ್ನೂ ದ್ವೇಷಿಸಿಲ್ಲ. ಪ್ರೀತಿಯಿಂದಲೇ ಜನರ ಬಳಿಗೆ ಹೋಗಿದ್ದೇವೆ : ಪದ್ಮರಾಜ್ ಆರ್. ಪೂಜಾರಿ

ಬೆಳ್ತಂಗಡಿ : ನಾವು ಯಾರನ್ನೂ ದ್ವೇಷಿಸಿಲ್ಲ. ಪ್ರೀತಿಯಿಂದಲೇ ಜನರ ಬಳಿಗೆ ಹೋಗಿದ್ದೇವೆ. ಹಾಗಾಗಿ ಮುವತ್ತ್ಮೂರು ವರ್ಷಗಳ ಸರಪಳಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮುರಿಯಲಿದೆ. ಕಾಂಗ್ರೆಸ್ ಜಿಲ್ಲೆಯಲ್ಲಿ ಗೆಲುವು ಪಡೆಯುವುದು ನಿಶ್ಚಿತ  ಎಂದು  ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಹೇಳಿದರು. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ನಗರ ಹಾಗೂ ಗ್ರಾಮೀಣ ಘಟಕದ ಮುಖಂಡರು, ಕಾರ್ಯಕರ್ತರ ಸಭೆ ಬೆಳ್ತಂಗಡಿ ಕಾಂಗ್ರೆಸ್ ಕಚೇರಿಯ ಸಭಾಂಗಣದಲ್ಲಿ ನಡೆಯಿತು. ಹಿಂದುಳಿದ ವರ್ಗದ ಸಮುದಾಯಗಳ ಸಭೆಯನ್ನು ಮಂಗಳೂರಿನಲ್ಲಿ ಕರೆದಿದ್ದೇವು. ಎಲ್ಲಾ […]

ನಾವು ಯಾರನ್ನೂ ದ್ವೇಷಿಸಿಲ್ಲ. ಪ್ರೀತಿಯಿಂದಲೇ ಜನರ ಬಳಿಗೆ ಹೋಗಿದ್ದೇವೆ : ಪದ್ಮರಾಜ್ ಆರ್. ಪೂಜಾರಿ Read More »

ಕಾರಿನಲ್ಲಿ ಬಂದ ತಂಡವೊಂದು ಯುವಕನ ಮೇಲೆ ಚೂರಿ ಇರಿತ

ಉಪ್ಪಿನಂಗಡಿ : ಕಾರಿನಲ್ಲಿ ಬಂದ ತಂಡವೊಂದು ಯುವಕನಿಗೆ ಚೂರಿ ಇರಿದು ಪರಾರಿಯಾದ ಘಟನೆ ಬಿಳಿಯೂರು ಗ್ರಾಮದ ಕರ್ವೇಲು ಬಳಿ ಎ.12ರಂದು ನಡೆದಿದೆ. ಕರ್ವೇಲು ಜನತಾ ಕಾಲನಿ ನಿವಾಸಿ ಹಕೀಂ (34) ಇವರು ಜಂಕ್ಷನ್ ಬಳಿ ನಿಂತಿದ್ದ ಸಂದರ್ಭ ಅಲ್ಲಿಗೆ ಕಾರಿನಲ್ಲಿ ಬಂದ ತಂಡ ಚೂರಿಯಿಂದ ಇರಿದು ಪರಾರಿಯಾಗಿರುವುದಾಗಿ ತಿಳಿದು ಬಂದಿದೆ.ಚೂರಿ ಇರಿತಕ್ಕೆ ಒಳಗಾಗಿ, ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರಿನಲ್ಲಿ ಬಂದ ತಂಡವೊಂದು ಯುವಕನ ಮೇಲೆ ಚೂರಿ ಇರಿತ Read More »

ಕೋಳಿ ಅಂಗಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿದ ಘಟನೆ

ಕನಕಮಜಲು: ಕನಕಮಜಲು ಗ್ರಾಮದ ಸುಣ್ಣಮೂಲೆ ಬಾಡಿಗೆ ಕೊಠಡಿಯಲ್ಲಿ ವಾಸಿಸುತ್ತಿದ್ದ ವ್ಯಕ್ತಿಯೋರ್ವ ಕೋಳಿ ಅಂಗಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ.  ನೇಣು ಬಿಗಿದುಕೊಂಡ ವ್ಯಕ್ತಿ ಬಾಬಣ್ಣ ಎಂದು ಗುರುತಿಸಲಾಗಿದೆ.ಕೋಳಿ ಅಂಗಡಿಯ ಹತ್ತಿರದಲ್ಲಿ ಇವರ ರೂಮ್ ಇದ್ದು ಅಲ್ಲಿಂದ ಕೋಳಿ ಅಂಗಡಿಗೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರಿಗೆ ಆರೋಗ್ಯ ಸಮಸ್ಯೆ ಇತ್ತು ಎಂದು ಹೇಳಲಾಗುತ್ತಿದ್ದು ರೂಮ್ ನಲ್ಲಿ ಇವರು ಒಬ್ಬರೇ ವಾಸಿಸುತ್ತಿದ್ದರು. ಇದೀಗ ಸ್ಥಳಕ್ಕೆ ಪೋಲಿಸ್ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

ಕೋಳಿ ಅಂಗಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿದ ಘಟನೆ Read More »

ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದಲ್ಲಿ  ಏಕಾಹ ಭಜನೋತ್ಸವದ ಸಂಭ್ರಮ

ಕಡಬ : ಕಡಬದಲ್ಲಿ ಜರಗುವ ಏಕಾಹ ಭಜನಾ ಮಹೋತ್ಸವ ಜಿಲ್ಲೆಯಲ್ಲಿಯೇ ವಿಶಿಷ್ಟ ಸ್ಥಾನ ಪಡೆದಿದೆ. ಊರ ಜಾತ್ರೆಯಂತೆ ನಡೆಯುವ ಈ ಏಕಾಹ ಭಜನೆಗೆ ಶುಕ್ರವಾರದಂದು ಜನ ಸಾಗರವೇ ಹರಿದು ಬಂದಿದೆ.  ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದಲ್ಲಿ ನಡೆಯುವ ಈ ಏಕಾಹ ಭಜನೋತ್ಸವದ ಸಂಭ್ರಮದಲ್ಲಿ ದ.ಕ.ಜಿಲ್ಲೆಯ ಹಲವು ಕಡೆಗಳಿಂದ ಭಜನಾ ಸಂಘಗಳು ಕಡಬದ ಏಕಾಹ ಭಜನೆಗೆ ಆಗಮಿಸಿ ಭಜನಾ ಸೇವೆಯನ್ನು ಸಲ್ಲಿಸುವುದು ಇಲ್ಲಿನ ಮೆಚ್ಚಿಗೆಗೆ  ಪಾತ್ರವಾಗಿದೆ. ಏಕಾಹ ಭಜನೆ ಆರಂಭವಾದಗಿನಿಂದಲೂ  ರಾತ್ರಿ ನಡೆಯುವ ಧಾರ್ಮಿಕ ಸಭೆಯಲ್ಲಿ ಶ್ರೀ ಸುಬ್ರಹ್ಮಣ್ಯ

ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದಲ್ಲಿ  ಏಕಾಹ ಭಜನೋತ್ಸವದ ಸಂಭ್ರಮ Read More »

ಜಮೀನಿಗೆ ಅಕ್ರಮ ಪ್ರವೇಶ : ದೂರು ದಾಖಲು

ಕಡಬ : ಜಮೀನಿಗೆ ಅಕ್ರಮ ಪ್ರವೇಶಗೈದು ತಂತಿಬೇಲಿ ಹಾಗೂ ತಡೆಗೋಡೆ ಧ್ವಂಸಗೈದ ಘಟನೆ ದೇವರಹಳ್ಳಿ ಏನೇಕಲ್ಲು ಗ್ರಾಮದಲ್ಲಿ ನಡೆದಿದೆ. ಏನೆಕಲ್ಲು ಗ್ರಾಮದ ನಿವಾಸಿ ರಜನಿರವರ ಏನೆಕಲ್ಲು ಗ್ರಾಮದಲ್ಲಿರುವ ಜಮೀನಿಗೆ ಗುರುವಾರ ಸಂಜೆ ಆರೋಪಿಗಳಾದ ರಾಮಣ್ಣ ಗೌಡ ಹಾಗೂ ಯದುಚಂದ್ರ ಎಂಬವರು ಅಕ್ರಮ ಪ್ರವೇಶಗೈದು, ಜಾಗದಲ್ಲಿದ್ದ ತಂತಿಬೇಲಿ ಹಾಗೂ ತಡೆಗೋಡೆಗಳನ್ನು ಜೆಸಿಬಿ ಮೂಲಕ ಬಲಾತ್ಕಾರವಾಗಿ ಧ್ವಂಸಗೊಳಿಸಿ, ಜೀವ ಬೆದರಿಕೆ ಒಡ್ಡಿದ್ದಾರೆ. ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 25/2024 ಕಲಂ 447, 506 ಐಪಿಸಿಯಂತೆ ಪ್ರಕರಣ

ಜಮೀನಿಗೆ ಅಕ್ರಮ ಪ್ರವೇಶ : ದೂರು ದಾಖಲು Read More »

ಕ್ಯಾಂಟಿನ್ ಗೆ ನುಗ್ಗಿದ ಕಾರು : ಮೂವರಿಗೆ ಗಾಯ, ಓರ್ವ ಗಂಭೀರ

ಸುಳ್ಯ: ಕಾರೊಂದು ಕ್ಯಾಂಟಿನ್‌ಗೆ ನುಗ್ಗಿದ ಪರಿಣಾಮ ಮೂರು ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ. ಪೆರಾಜೆ ಪೀಚೆಯ ಲಿಖಿತ್, ಪೀಚೆ ಸುಮನ್ ಹಾಗೂ ಹೋಟೆಲ್ ಮಾಲಕ ನೌಫಲ್ ಗಾಯಗೊಂಡವರು. ಕ್ಯಾಂಟಿನ್‌ಗೆ ನುಗ್ಗಿ ಡಿಕ್ಕಿ ಹೊಡೆದ ಕಾರಣ ಚಹಾ ಕುಡಿಯುತ್ತಿದ್ದ ಇಬ್ಬರು ಹಾಗೂ ಕ್ಯಾಂಟೀನ್ ಮಾಲಕರು ಗಾಯಗೊಂಡಿದ್ದಾರೆ. ಅರಂತೋಡು ಕಡೆಗೆ ಹೋಗಿದ್ದ ಪೀಚೆ ಮನೆ ಲಿಖಿತ್ ಮತ್ತು ಸುಮನ್  ನೌಫಲ್ ರ ಹೋಟೆಲ್ ನಲ್ಲಿ ಚಾ ಕುಡಿಯುತ್ತಿದ್ದ ವೇಳೆ  ವೇಗವಾಗಿ ಬಂದ ರಿಡ್ಜ್ ಕಾರು ಕ್ಯಾಂಟಿನ್ ಗೆ ನುಗ್ಗಿ ಅನಾಹುತ

ಕ್ಯಾಂಟಿನ್ ಗೆ ನುಗ್ಗಿದ ಕಾರು : ಮೂವರಿಗೆ ಗಾಯ, ಓರ್ವ ಗಂಭೀರ Read More »

ಬೊಂಡ ಫ್ಯಾಕ್ಟರಿ ಬಂದ್ ಆದೇಶ- ಡಾ.ತಿಮ್ಮಯ್ಯ

ಮಂಗಳೂರು: ಅಡ್ಯಾರ್‌ನಲ್ಲಿರುವ ಬೊಂಡ ಫ್ಯಾಕ್ಟರಿಯಲ್ಲಿ ಎಳನೀರು ಕುಡಿದು ಹಲವು ಮಂದಿ ಅಸ್ವಸ್ಥರಾಗಿರುವ ಘಟನೆಯೊಂದು ನಡೆದಿತ್ತು. ಒಟ್ಟು 137 ಮಂದಿ ಅಸ್ವಸ್ಥರಾಗಿರುವ ಕುರಿತು ವರದಿಯಾಗಿದೆ. ಎಳನೀರು ಮತ್ತು ನ್ಯಾಚುರಲ್‌ ಐಸ್‌ಕ್ರೀಂ ಮಾರಾಟ ಸಂಸ್ಥೆಯಾದ ʼಬೊಂಡ ಫ್ಯಾಕ್ಟರಿʼ ಯನ್ನು ಬಂದ್‌ ಮಾಡುವಂತೆ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಡಾ.ತಿಮ್ಮಯ್ಯ ಆದೇಶ ನೀಡಿದ್ದಾರೆ. ತಾತ್ಕಾಲಿಕವಾಗಿ ಮತ್ತು ಮುಂದಿನ ಆದೇಶದವರೆಗೆ ಬೊಂಡ ನೀರು ಮತ್ತು ಇತರೆ ಆಹಾರ ಪದಾರ್ಥಗಳನ್ನು ಮಾರಾಟ ಮಾಡದಂತೆ ನೋಟಿಸ್‌ ನೀಡಲಾಗಿದೆ.ಹೊರರೋಗಿಗಳಾಗಿ 84 ಮಂದಿ ಒಳರೋಗಿಗಳಾಗಿ ಹಾಗೂ 53 ಮಂದಿಗೆ

ಬೊಂಡ ಫ್ಯಾಕ್ಟರಿ ಬಂದ್ ಆದೇಶ- ಡಾ.ತಿಮ್ಮಯ್ಯ Read More »

ರಾಜಾಪುರ ಸಾರಸ್ವತ ಕ್ರೆಡಿಟ್ ಕೋ ಅಪರೇಟಿವ್‌ ಸೊಸೈಟಿಗೆ ರೂ. 4.57 ಕೋಟಿ ಲಾಭ

ಕಾರ್ಕಳ : ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಕಾರ್ಯವ್ಯಾಪ್ತಿ ಹೊಂದಿರುವ ಸಹಕಾರಿ ಸಂಸ್ಥೆ ಕಾರ್ಕಳದ ರಾಜಾಪುರ ಸಾರಸ್ವತ ಕ್ರೆಡಿಟ್ ಕೋ ಅಪರೇಟಿವ್‌ ಸೊಸೈಟಿಯು 2023-24ನೇ ಸಾಲಿನಲ್ಲಿ ರೂ. 885.55 ಕೋಟಿ ವ್ಯವಹಾರ ನಡೆಸಿ ರೂ. 4.57 ಕೋಟಿ ಲಾಭ ಗಳಿಸಿದೆ ಎಂದು ಸೊಸೈಟಿಯ ಅಧ್ಯಕ್ಷ ಕಡಾರಿ ರವೀಂದ್ರ ಪ್ರಭು ಹೇಳಿದರು. ಅವರು ಏ. 11 ರಂದು ಸೊಸೈಟಿಯ ಪ್ರಧಾನ ಕಛೇರಿ ಜೋಡುರಸ್ತೆಯ ಸಾರಸ್ವತ ಸೌಧದಲ್ಲಿ ನಡೆದ 2023-24ನೇ ಸಾಲಿನ ಆಯವ್ಯಯ ಪರಿಶೀಲನೆ ಹಾಗೂ 2024-25ನೇ ಸಾಲಿನ

ರಾಜಾಪುರ ಸಾರಸ್ವತ ಕ್ರೆಡಿಟ್ ಕೋ ಅಪರೇಟಿವ್‌ ಸೊಸೈಟಿಗೆ ರೂ. 4.57 ಕೋಟಿ ಲಾಭ Read More »

ಬೈಹುಲ್ಲು ತರುತ್ತಿದ್ದ ಲಾರಿಗೆ ಆಕಸ್ಮಿಕ ಬೆಂಕಿ

ಬೆಳ್ತಂಗಡಿ:  ಮಿನಿ ಲಾರಿಯೊಂದು ಬೈಹುಲ್ಲು ಮಾರಾಟಕ್ಕೆ ಆಗಮಿಸುತ್ತಿದ್ದ ವೇಳೆ ಆಕಸ್ಮಿಕ ಬೆಂಕಿ ಬಿದ್ದ ಘಟನೆ  ಬೆಳ್ತಂಗಡಿ ತಾಲ್ಲೂಕಿನ ಕಳಿಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಟ್ಟೆಮಾರು ಎಂಬಲ್ಲಿ ನಡೆದಿದೆ. ಸ್ಥಳೀಯರು ಸಾಹಸ ಪ್ರದರ್ಶಿಸಿ ಬೆಂಕಿಯನ್ನು ನಂದಿಸಿ ಲಾರಿಯನ್ನು ಉಳಿಸಿದ್ದಾರೆ. ಹಾಸನದ ಸಕಲೇಶಪುರದ ಬೈಹುಲ್ಲು ವ್ಯಾಪಾರಸ್ಥರೋರ್ವರು ಹೈನುಗಾರಿಕೆ ಮಾಡುವ ಕೃಷಿಕರ ಮನೆ ಮನೆಗೆ ಬೈಹುಲ್ಲನ್ನು ಹಾಕಲು ತನ್ನ ಮಿನಿ ಲಾರಿಯಲ್ಲಿ ಹುಲ್ಲನ್ನು ತರುವಾಗ  ಏಕಾಏಕಿ ಬೆಂಕಿ ಹತ್ತಿಕೊಂಡಿದೆ. ಈ ವೇಳೆ ಸ್ಥಳೀಯವರೊಬ್ಬರು ಬೊಬ್ಬೆ ಹಾಕಿ ಲಾರಿ ಚಾಲಕನಿಗೆ ಮಾಹಿತಿ ನೀಡಿದರು.

ಬೈಹುಲ್ಲು ತರುತ್ತಿದ್ದ ಲಾರಿಗೆ ಆಕಸ್ಮಿಕ ಬೆಂಕಿ Read More »

ಬೈಕ್ – ಪಿಕಪ್‌ ಡಿಕ್ಕಿ : ಬೈಕ್ ಸವಾರನಿಗೆ‌ ಗಾಯ

ಬೆಳ್ಳಾರೆ:ಪೇಟೆಯಲ್ಲಿ ಬೈಕ್‌ ಹಾಗೂ ಪಿಕಪ್ ಡಿಕ್ಕಿ ಹೊಡೆದುಕೊಂಡು ಬೈಕ್ ಸವಾರನಿಗೆ ಗಂಭೀರ ಗಾಯವಾದ ಘಟನೆ ಇಂದು ಬೆಳಿಗ್ಗೆ ನಡೆದಿದೆ. ಬೈಕ್‌ ಸವಾರ ಪುಡ್ಕಜೆವರಾಗಿದ್ದು ಅವರಿಗೆ ತಲೆಗೆ ಗಾಯವಾಗಿದ್ದು ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿರುವುದಾಗಿ ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ.

ಬೈಕ್ – ಪಿಕಪ್‌ ಡಿಕ್ಕಿ : ಬೈಕ್ ಸವಾರನಿಗೆ‌ ಗಾಯ Read More »

error: Content is protected !!
Scroll to Top