ದಕ್ಷಿಣ ಕನ್ನಡ

ದ್ವಿಚಕ್ರ ವಾಹನ ಲಾರಿಗೆ ಡಿಕ್ಕಿ : ಸವಾರ ಮೃತ್ಯು

ಮಂಗಳೂರು: ದ್ವಿಚಕ್ರ ವಾಹನವೊಂದು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರ ಮೃತಪಟ್ಟ ಘಟನೆ ಹೇರೂರು ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಹೇರೂರು ನಿವಾಸಿ ಕೃಷ್ಣ ಗಾಣಿಗ ಮೃತಪಟ್ಟವರು ಎಂದು ಗುರುತಿಸಲಾಗಿದೆ. ಸಂತೆಕಟ್ಟೆಯಿಂದ ಬ್ರಹ್ಮಾವರಕ್ಕೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ರಸ್ತೆ ದುರಸ್ತಿ ಕಾಮಗಾರಿಯಿಂದಾಗಿ ಸಂಚಾರ ವ್ಯತ್ಯಯ ಉಂಟಾಗಿ ರಸ್ತೆಯನ್ನು ಏಕ ಪಥಕ್ಕೆ ಪರಿವರ್ತಿಸಲಾಗಿತ್ತು. ಈ ಸಂದರ್ಭ ಎದುರಿನಿಂದ ಬರುತ್ತಿದ್ದ ಲಾರಿಗೆ ಕೃಷ್ಣ ಅವರ ದ್ವಿಚಕ್ರ ವಾಹನ ಡಿಕ್ಕಿ ಹೊಡೆದು ತೀವ್ರ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. […]

ದ್ವಿಚಕ್ರ ವಾಹನ ಲಾರಿಗೆ ಡಿಕ್ಕಿ : ಸವಾರ ಮೃತ್ಯು Read More »

ಏ.21 : ಕಲ್ಕಾರು ಕುಟುಂಬಸ್ಥರ ಶ್ರೀ ನಾಗದೇವರು,  ಶ್ರೀ ಮಹಮ್ಮಾಯ ಅಮ್ಮನವರ, ಶ್ರೀ ಅಣ್ಣಪ್ಪ ಪಂಜುರ್ಲಿ, ಕಲ್ಲುರ್ಟಿ ಪಂಜುರ್ಲಿ ಹಾಗೂ ಪರಿವಾರ ದೈವಗಳ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ

ಬಂಟ್ವಾಳ: ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದ ಕಲ್ಕಾರು ಎಂಬಲ್ಲಿ ಕಲ್ಕಾರು ಕುಟುಂಬಸ್ಕರ ನೂತನವಾಗಿ ನಿರ್ಮಿಸಿರುವ ಚಿತ್ರಕೂಟದಲ್ಲಿ ನಾಗದೇವರು ದೈವಸ್ಥಾನಗಳಲ್ಲಿ ಶ್ರೀ ಮಹಮ್ಮಾಯ ಅಮ್ಮನವರು, ಶ್ರೀ ಅಣ್ಣಪ್ಪ ಪಂಜುರ್ಲಿ, ಕಲ್ಲುರ್ಟಿ ಪಂಜುರ್ಲಿ ಹಾಗೂ ಪರಿವಾರ ದೈವದ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ ಏ.21 ಭಾನುವಾರ ಬೆಳಿಗ್ಗೆ 9.45 ರಿಂದ 10.25 ರ ಮಿಥುನ ಲಗ್ನದಲ್ಲಿ ಬ್ರಹ್ಮಶ್ರೀ ಬಡಾಜೆ ಗೋಪಾಲಕೃಷ್ಣ ತಂತ್ರಿಗಳ ದಿವ್ಯ ಹಸ್ತದಲ್ಲಿ ಜರಗಲಿದೆ ಎಂದು ಕಲ್ಕಾರು ದೈವ ದೇವರುಗಳ ಕಾರ್ಯಕಾರಿ ಸಮಿತಿ ಅಧ್ಯಕ್ಷ ಕೆ.ಸೀತಾರಾಮ ರೈ ಸವಣೂರು ತಿಳಿಸಿದ್ದಾರೆ. ಅವರು

ಏ.21 : ಕಲ್ಕಾರು ಕುಟುಂಬಸ್ಥರ ಶ್ರೀ ನಾಗದೇವರು,  ಶ್ರೀ ಮಹಮ್ಮಾಯ ಅಮ್ಮನವರ, ಶ್ರೀ ಅಣ್ಣಪ್ಪ ಪಂಜುರ್ಲಿ, ಕಲ್ಲುರ್ಟಿ ಪಂಜುರ್ಲಿ ಹಾಗೂ ಪರಿವಾರ ದೈವಗಳ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ Read More »

ಚುನಾವಣಾ ಪ್ರಚಾರ ವೇಳೆ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ನಡುವೆ ವಾಗ್ವಾದ | ಪೊಲೀಸರ ಮಧ್ಯೆ ಪ್ರವೇಶದಿಂದ ಪರಿಸ್ಥಿತಿ ತಿಳಿ

ಮಂಗಳೂರು : ಚುನಾವಣಾ ಪ್ರಚಾರ ವಿಚಾರದಲ್ಲಿ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ನಡುವೆ ವಾಗ್ವಾದ ಉಂಟಾಗಿ ಹೊಯ್ ಕೈ ಹಂತಕ್ಕೆ ತಲುಪಿದ ಘಟನೆ ಮಂಗಳೂರಿನ ಉರ್ವ ಚಿಲಿಂಬಿ ಸಾಯಿಬಾಬ ಮಂದಿರದ ಬಳಿ ನಡೆದಿದೆ. ಚುನಾವಣಾ ಪ್ರಚಾರ ಸಂದರ್ಭದಲ್ಲಿ  ಎರಡು ಪಕ್ಷಗಳ ಕಾರ್ಯಕರ್ತರ ನಡುವೆ ವಾಗ್ವಾದ ನಡೆದು, ಹೊಯ್ ಕೈ ಹಂತಕ್ಕೆ ತಲುಪಿದೆ ಎನ್ನಲಾಗಿದ್ದು, ರಾಮ ನವಮಿ ಉತ್ಸವ ನಡೆಯುತ್ತಿದ್ದ ಮಂದಿರದ ಹೊರ ಭಾಗದಲ್ಲಿರುವ ಮುಖ್ಯ ರಸ್ತೆಯಲ್ಲಿ ಬಿಜೆಪಿ ಕಾರ್ಯಕರ್ತರು ಪ್ರಚಾರ ನಡೆಸುತ್ತಿದ್ದು, ಮಂದಿರದ ಬಳಿ ಪ್ರಚಾರ ನಡೆಸಬಾರದು ಎಂದು ಕಾಂಗ್ರೆಸ್

ಚುನಾವಣಾ ಪ್ರಚಾರ ವೇಳೆ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ನಡುವೆ ವಾಗ್ವಾದ | ಪೊಲೀಸರ ಮಧ್ಯೆ ಪ್ರವೇಶದಿಂದ ಪರಿಸ್ಥಿತಿ ತಿಳಿ Read More »

ನದಿಯಲ್ಲಿ ಮುಳುಗಿ ಓರ್ವ ಮೃತ್ಯು !

ಸುಳ್ಯ: ನೀರಿನಲ್ಲಿ ಮುಳುಗಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಮಂಡೆಕೋಲು ಗ್ರಾಮ ಮುರೂರು ಸಮೀಪ ಪರಪ್ಪ ನದಿಯಲ್ಲಿ ನಡೆದಿದೆ. ಈಶ್ವರಮಂಗಲ ಪ್ರವೀಣ್ ಮೃತಪಟ್ಟವರು ಎಂದು ಗುರುತಿಸಲಾಗಿದೆ. ಈಶ್ವರಮಂಗಲದ ನಾಲ್ಕು ಜನ ಮುರೂರು ಸಮೀಪ ಪರಪ್ಪ ಹೊಳೆಗೆ ಮೀನು ಹಿಡಿಯಲು ಬಂದಿದ್ದರೆನ್ನಲಾಗಿದೆ. ಈ ಸಂದರ್ಭದಲ್ಲಿ ನಾಲ್ವರಲ್ಲಿ ಒಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.  ಮೃತಪಟ್ಟ ವ್ಯಕ್ತಿ ಮೃತದೇಹವನ್ನು ಪೈಚಾರ್ ಮುಳುಗು ತಜ್ಞರ ತಂಡದವರು ನದಿಯಿಂದ ಮೇಲೆತ್ತಿ ಸುಳ್ಯ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದೆ. ಸುಳ್ಯ ಪೋಲಿಸ್ ಸ್ಥಳ ಪರಿಶೀಲಿಸಿ ತನಿಖೆ ನಡೆಸುತ್ತಿದ್ದಾರೆ.

ನದಿಯಲ್ಲಿ ಮುಳುಗಿ ಓರ್ವ ಮೃತ್ಯು ! Read More »

ಯುವಜನತೆ ಪ್ರಜಾಪ್ರಭುತ್ವದಲ್ಲಿ ಹೆಚ್ಚು ತೊಡಗಿಸಿಕೊಂಡರೆ ಪ್ರಜಾತಂತ್ರ ಉತ್ತಮಗೊಳ್ಳಲು ಸಾಧ್ಯ | ಸುಳ್ಯ ಕೆವಿಜಿ ಕ್ಯಾಂಪಸ್‍ ನಲ್ಲಿ ಕ್ಯಾ.ಬ್ರಿಜೇಶ್ ಚೌಟ

ಮಂಗಳೂರು : ದೇಶದಲ್ಲಿ 18ರಿಂದ 40 ವರ್ಷದ ಒಳಗಿನ ಯುವಜನರು 65 ಶೇಕಡಾದಷ್ಟಿದ್ದು ಅವರನ್ನು ಹೆಚ್ಚೆಚ್ಚು ಪ್ರಜಾಪ್ರಭುತ್ವದಲ್ಲಿ ತೊಡಗಿಸಿಕೊಂಡರೆ ಪ್ರಜಾತಂತ್ರ ಉತ್ತಮಗೊಳ್ಳುತ್ತದೆ ಎಂದು ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಹೇಳಿದರು. ಸುಳ್ಯದ ಕೆವಿಜಿ ಕ್ಯಾಂಪಸ್ ನಲ್ಲಿ ಅವರು ಮಾತನಾಡಿದರು. ದೇಶದ ಬೇರೆ ಬೇರೆ ಕಡೆ ಓಡಾಡಿದ್ದೇನೆ. ಎಲ್ಲ ಕಡೆಯ ಸಂಸ್ಕೃತಿ, ನಂಪನ್ಮೂಲ ನೋಡಿದ್ದೇನೆ. ಆದರೆ ನಮ್ಮಲ್ಲಿ ದೇಶದ ಎಲ್ಲ ಕಡೆ ಇರುವ ಸಂಸ್ಕೃತಿ ಮತ್ತು ನಂಪನ್ಮೂಲ ಇದೆ. ನಮ್ಮ ಜನರಲ್ಲಿ

ಯುವಜನತೆ ಪ್ರಜಾಪ್ರಭುತ್ವದಲ್ಲಿ ಹೆಚ್ಚು ತೊಡಗಿಸಿಕೊಂಡರೆ ಪ್ರಜಾತಂತ್ರ ಉತ್ತಮಗೊಳ್ಳಲು ಸಾಧ್ಯ | ಸುಳ್ಯ ಕೆವಿಜಿ ಕ್ಯಾಂಪಸ್‍ ನಲ್ಲಿ ಕ್ಯಾ.ಬ್ರಿಜೇಶ್ ಚೌಟ Read More »

ಹಿಮ್ಮುಖವಾಗಿ ಚಲಿಸಿದ ಪಿಕಪ್ ವಾಹನ : ರಸ್ತೆ ಬದಿ ನಿಂತಿದ್ದ ವ್ಯಕ್ತಿಗೆ ಡಿಕ್ಕಿ ಹೊಡೆದು ಮೃತ್ಯು

ಬೆಳ್ತಂಗಡಿ: ಚಾಲಕನ ಅಜಾಗರೂಕತೆಯಿಂದ ಪಿಕಪ್ ವಾಹನವೊಂದು ಹಿಮ್ಮುಖವಾಗಿ ಚಲಿಸಿದ ಪರಿಣಾಮ ವ್ಯಕ್ತಿಯೊಬ್ಬರಿಗೆ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಶಿಬಾಜೆ ಗ್ರಾಮದ ತಂದ್ಲಾಜೆಯಲ್ಲಿ ನಡೆದಿದೆ. ರುಕ್ಕ ಮುಗೇರ ಮೃತಪಟ್ಟರು ಎಂದು ಗುರುತಿಸಲಾಗಿದೆ. ಪಿಕಪ್ ಚಾಲಕ ಜಯೇಶ್ ಹಿಮ್ಮುಖವಾಗಿ ಚಲಾಯಿಸಿ ರಸ್ತೆ ಬದಿ ನಿಂತಿದ್ದ ರುಕ್ಷ್ಯ ಮುಗೇರ ಅವರಿಗೆ ಢಿಕ್ಕಿ ಹೊಡೆದಿದ್ದಾರೆ. ಅವಘಾತದ ಪರಿಣಾಮ, ರುಕ್ಷ್ಯ ಮುಗೇರ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡಿದ್ದರು. ತಕ್ಷಣ ಅವರಿಗೆ ಉಜಿರೆಯ ಎಸ್‌ಡಿಎಂ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ,

ಹಿಮ್ಮುಖವಾಗಿ ಚಲಿಸಿದ ಪಿಕಪ್ ವಾಹನ : ರಸ್ತೆ ಬದಿ ನಿಂತಿದ್ದ ವ್ಯಕ್ತಿಗೆ ಡಿಕ್ಕಿ ಹೊಡೆದು ಮೃತ್ಯು Read More »

ಕಾರು ಅಪಘಾತ : ನಾಲ್ವರಿಗೆ ಗಾಯ

ಸುಳ್ಯ: ಕಾರೊಂದು ಅಪಘಾತ ಸಂಭವಿಸಿ ನಾಲ್ವರಿಗೆ ಗಾಯವಾಗಿರುವ ಘಟನೆ ಬುಧವಾರ ತಡರಾತ್ರಿ ಸಂಭವಿಸಿದೆ. ಹೇಮಂತ್, ಜೀತೇಶ್ ಕೆರ್ಪಳ, ಗಿರೀಶ್  ಹಾಗೂ ಧನುಷ್ ಗಾಯಗೊಂಡವರು. ಆನೆಗುಂಡಿ ತಿರುವಿನ ಬಳಿ ಈ ಅಪಘಾತ ಸಂಭವಿಸಿದ್ದು, ಚಾಲಕನ ಕಾರು ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿವುದಾಗಿ ತಿಳಿದುಬಂದಿದೆ. ಗಾಯಾ:ಳು ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಾರು ಅಪಘಾತ : ನಾಲ್ವರಿಗೆ ಗಾಯ Read More »

ಏಕಾಏಕಿ ಬ್ರೇಕ್ ಹಾಕಿದ ಆಟೋ ಚಾಲಕ | ನಾಲ್ಕು ವರ್ಷದ ಮಗು ರಸ್ತೆಗೆಸೆಯಲ್ಪಟ್ಟು ಗಂಭೀರ ಗಾಯ

ಕಡಬ:  ಆಟೋ ಚಾಲಕ ಏಕಾಏಕಿ ಬ್ರೇಕ್ ಹಾಕಿದ ಪರಿಣಾಮ ಆಟೋದಲ್ಲಿ ಪ್ರಯಾಣಿಸುತ್ತಿದ್ದ ನಾಲ್ಕು ವರ್ಷ ಮಗುವೊಂದು ರಸ್ತೆಗೆಸೆಯಲ್ಪಟ್ಟು ಗಂಭೀರ ಗಾಯಗೊಂಡ ಘಟನೆ ರಾಮಕುಂಜದಲ್ಲಿ ಇಂದು ನಡೆದಿದೆ. ಸಾತ್ವಿಕ್ (4) ರಸ್ತೆಗೆಸೆಯಲ್ಪಟ್ಟು  ಗಾಯಗೊಂಡ ಮಗು. ಆಟೋರಿಕ್ಷಾ ಚಾಲಕ ಶಿವಪ್ರಸಾದ್ ಎಂಬವರು ಆಟೋವನ್ನು ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ವೇಗವಾಗಿ ಚಲಾಯಿಸಿಕೊಂಡು ಇಳಿಜಾರು ರಸ್ತೆಯಲ್ಲಿ ಬ್ರೇಕ್ ಹಾಕಿದಾಗ ಆಟೋರಿಕ್ಷಾದಲ್ಲಿದ್ದ ಮಗು ಡಾಮಾರು ರಸ್ತೆಗೆ ಬಿದ್ದು ಗಾಯಗೊಂಡಿದೆ ಎನ್ನಲಾಗಿದೆ. ಮಗುವನ್ನು ಪುತ್ತೂರು ಆಸ್ಪತ್ರೆಗೆ ಕರೆದೊಯ್ದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಗಿದೆ.

ಏಕಾಏಕಿ ಬ್ರೇಕ್ ಹಾಕಿದ ಆಟೋ ಚಾಲಕ | ನಾಲ್ಕು ವರ್ಷದ ಮಗು ರಸ್ತೆಗೆಸೆಯಲ್ಪಟ್ಟು ಗಂಭೀರ ಗಾಯ Read More »

ಏ. 22 : ತಮಿಳುನಾಡು ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಅಣ್ಣಾಮಲೈ ಸುಳ್ಯಕ್ಕೆ

ಸುಳ್ಯ: ತಮಿಳುನಾಡಿನ ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಅಣ್ಣಾಮಲೈ ಏ 22 ರಂದು ಸುಳ್ಯಕ್ಕೆ ಆಗಮಿಸಲಿದ್ದಾರೆ . ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬೃಜೇಶ್ ಚೌಟ ಪರ ಪ್ರಚಾರ ಸಭೆ ನಡೆಸಲಿದ್ದಾರೆ. ಈ ಕುರಿತು ಬಿಜೆಪಿ ಜಿಲ್ಲಾ ಅಧ್ಯಕ್ಷ ಸತೀಶ್ ಕುಂಪಲ ತಿಳಿಸಿದ್ದಾರೆ.

ಏ. 22 : ತಮಿಳುನಾಡು ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಅಣ್ಣಾಮಲೈ ಸುಳ್ಯಕ್ಕೆ Read More »

ಪಾಂಡೇಶ್ವರ ಪಿಜಿಯಲ್ಲಿ ಮೃತಪಟ್ಟ ಯುವ ವೈದ್ಯೆ

ಮಂಗಳೂರು : ದಂತ ವೈದ್ಯಕೀಯ ಪದವೀಧರೆ ಯುವತಿಯೋರ್ವರು ನಗರದ ಪಾಂಡೇಶ್ವರದ ಪಿಜಿಯಲ್ಲಿ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.ಉಳ್ಳಾಲ ತಾಲೂಕಿನ ನರಿಂಗಾನ ನಿವಾಸಿ ಸ್ವಾತಿ ಶೆಟ್ಟಿ (24) ಮೃತ ವೈದ್ಯೆ. ಬಿಡಿಎಸ್‌ ಪದವಿ ಪೂರೈಸಿದ್ದ ಸ್ವಾತಿ ಪಾಂಡೇಶ್ವರದ ಕ್ಲಿನಿಕ್‌ವೊಂದರಲ್ಲಿ ಮಂಗಳವಾರದಿಂದ ಕೆಲಸಕ್ಕೆ ಹಾಜರಾಗಬೇಕಿತ್ತು. ಸೋಮವಾರ ತಾಯಿ ಜೊತೆಗೆ ಪಾಂಡೇಶ್ವರ ಕ್ಲಿನಿಕ್‌ಗೆ ಬಂದು ಕೆಲಸದ ಬಗ್ಗೆ ಮಾತನಾಡಿ, ಪಾಂಡೇಶ್ವರ ಪೊಲೀಸ್ ಠಾಣೆ ಹಿಂಭಾಗದ ಪಿಜಿಯಲ್ಲಿ ಸೋಮವಾರ ಸಂಜೆಯಿಂದ ಉಳಿದಿದ್ದರು. ರಾತ್ರಿ ತಾಯಿ ಜೊತೆಗೆ ಮೊಬೈಲ್‌ನಲ್ಲಿ ಮಾತನಾಡಿ ವಿಪರೀತ ತಲೆನೋವು ಎಂಬುದಾಗಿ ಹೇಳಿದ್ದರು

ಪಾಂಡೇಶ್ವರ ಪಿಜಿಯಲ್ಲಿ ಮೃತಪಟ್ಟ ಯುವ ವೈದ್ಯೆ Read More »

error: Content is protected !!
Scroll to Top