ದಕ್ಷಿಣ ಕನ್ನಡ

ಹಿಂದುತ್ವದ ಕಟ್ಟಾಳು ಕಿಶೋರ್ ಕುಮಾರ್ ವಿಧಾನ ಪರಿಷತ್ತಿಗೆ ಹೋದರೆ ಪಕ್ಷಕ್ಕೆ ದೊಡ್ಡ ಬಲ ಬರಲಿದೆ : ಡಿ.ವಿ.ಸದಾನಂದ ಗೌಡ

ಬಂಟ್ವಾಳ: : ಜನಸಂಘಕ್ಕೆ ತಮ್ಮ ಕುಟುಂಬವನ್ನು ಮುಡಿಪಾಗಿಟ್ಟಿದ್ದ ಹಿಂದುತ್ವದ ಕಟ್ಟಾಳು ಕಿಶೋರ್ ಕುಮಾರ್ ಪುತ್ತೂರು ವಿಧಾನ ಪರಿಷತ್ತಿಗೆ ಹೋದರೆ ಪಕ್ಷಕ್ಕೆ ದೊಡ್ಡ ಬಲ ಬರಲಿದ್ದು, ಮುಂದೆ ಯಾರಾದ್ರೂ ವಿಧಾನಸೌಧದಲ್ಲಿ ಪಾಕಿಸ್ತಾನಕ್ಕೆ ಜೈ ಹಾಕಿದರೆ ಅವರ ಮಂಡೆ ಒಡೆಯುತ್ತಾರೆಂಬ ನಂಬಿಕೆ ನನಗಿದೆ ಎಂದು ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಹೇಳಿದ್ದಾರೆ. ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ವತಿಯಿಂದ ಬಂಟ್ವಾಳದ ಬಂಟರ ಭವನದಲ್ಲಿ ಹಮ್ಮಿಕೊಂಡ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಡಿ.ವಿ ಸದಾನಂದ ಗೌಡ ಮಾತನಾಡಿದರು. ಕಿಶೋರ್ […]

ಹಿಂದುತ್ವದ ಕಟ್ಟಾಳು ಕಿಶೋರ್ ಕುಮಾರ್ ವಿಧಾನ ಪರಿಷತ್ತಿಗೆ ಹೋದರೆ ಪಕ್ಷಕ್ಕೆ ದೊಡ್ಡ ಬಲ ಬರಲಿದೆ : ಡಿ.ವಿ.ಸದಾನಂದ ಗೌಡ Read More »

ಯಕ್ಷ ಭಾರತಿ ಸಂಸ್ಥೆಯ ಸೇವಾ ಕಾರ್ಯ ಅಭಿನಂದನೀಯ: ಮೋಹನ್ ಕುಮಾರ್. ಕೆ. | ಉಚಿತ ಆರೋಗ್ಯ, ಕ್ಯಾನ್ಸರ್ ತಪಾಸಣಾ ಶಿಬಿರ 

ಬೆಳ್ತಂಗಡಿ: ಕನ್ಯಾಡಿ ಯಕ್ಷ ಭಾರತಿಯ ದಶಮಾನೋತ್ಸವ ಪ್ರಯುಕ್ತ ಬೆಳ್ತಂಗಡಿ ತುಳು ಶಿವಳ್ಳಿ ಸಭಾ ಆಶ್ರಯದಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್, ಲಯನ್ಸ್ ಕ್ಲಬ್, ಶ್ರೀ ಕೃಷ್ಣ ಆಸ್ಪತ್ರೆ ಕಕ್ಕಿಂಜೆ, ಯೆನಪೋಯ ಮೆಡಿಕಲ್ ಕಾಲೇಜ್ ಆಸ್ಪತ್ರೆ ಮತ್ತು ಜುಲೈಕಾ ಕ್ಯಾನ್ಸರ್ ಆಸ್ಪತ್ರೆ ದೇರಳಕಟ್ಟೆ ಸಹಕಾರದಲ್ಲಿ ಉಚಿತ ಆರೋಗ್ಯ ಮತ್ತು ಕ್ಯಾನ್ಸರ್ ತಪಾಸಣಾ ಶಿಬಿರ ಕನ್ಯಾಡಿಯ ಹರಿಹರಾನುಗ್ರಹ ಕಲ್ಯಾಣ ಮಂಟಪದಲ್ಲಿ ಜರಗಿತು.  ಉಜಿರೆಯ ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ಮತ್ತು ಲಕ್ಷ್ಮಿ ಗ್ರೂಪ್ಸ್  ಮಾಲಕ ಮೋಹನ್ ಕುಮಾರ್ ಕೆ. ಶಿಬಿರ

ಯಕ್ಷ ಭಾರತಿ ಸಂಸ್ಥೆಯ ಸೇವಾ ಕಾರ್ಯ ಅಭಿನಂದನೀಯ: ಮೋಹನ್ ಕುಮಾರ್. ಕೆ. | ಉಚಿತ ಆರೋಗ್ಯ, ಕ್ಯಾನ್ಸರ್ ತಪಾಸಣಾ ಶಿಬಿರ  Read More »

ದ್ವಿಚಕ್ರ ವಾಹನಗಳ ನಡುವೆ ಅಪಘಾತ : ಓರ್ವ ಮೃತ್ಯು

ಸುಳ್ಯ : ದ್ವಿಚಕ್ರ ವಾಹನ ಅಪಘಾತದ ಸಂಭವಿಸಿದ ಪರಿಣಾಮ ಒಬ್ಬರು ಮೃತಪಟ್ಟ ಘಟನೆ ಸುಳ್ಯದ ಪೈಚಾರು ಸೋಣಂಗೇರಿ ಎಂಬಲ್ಲಿಯ ಆರ್ತಾಜೆಯಲ್ಲಿ ನಡೆದಿದೆ. ಐವರ್ನಾಡು ಗ್ರಾಮದ ಪಾಲೆಪ್ಪಾಡಿ ನಿವಾಸಿ, ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉದ್ಯೋಗಿ ಭೋಜಪ್ಪ  (50) ಮೃತಪಟ್ಟವರು. ಸುಳ್ಯ ಕಡೆಯಿಂದ ಸೋಣಂಗೇರಿ ಕಡೆಗೆ ಸಂಚರಿಸುತ್ತಿದ್ದ ಬುಲೆಟ್ ಹಾಗೂ ಐವರ್ನಾಡಿನಿಂದ ಸುಳ್ಯ ಕಡೆಗೆ ಸಾಗುತ್ತಿದ್ದ ಭೋಜಪ್ಪ ಅವರ ಹೋಂಡ ಬೈಕ್ ನಡುವೆ ಡಿಕ್ಕಿಯಾಗಿದೆ. ಬುಲೆಟ್‌ನಲ್ಲಿದ್ದ ನೆಲ್ಲೂರು ಕೆಮ್ರಾಜಿಯ ಮಂದ್ರಪ್ಪಾಡಿ ಅರುಣ್ ಹಾಗೂ ವಸಂತ ಅವರು

ದ್ವಿಚಕ್ರ ವಾಹನಗಳ ನಡುವೆ ಅಪಘಾತ : ಓರ್ವ ಮೃತ್ಯು Read More »

ಬಂಟ್ವಾಳದಲ್ಲಿ ಬಿಜೆಪಿ ಮತದಾರರ ಸಮಾವೇಶ | ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರರಿಂದ ಚಾಲನೆ

ಬಂಟ್ವಾಳ: ಬಿಜೆಪಿ ಮತದಾರರ ಸಮಾವೇಶಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬಂಟ್ವಾಳ ಬಂಟರ ಭವನದಲ್ಲಿ ಮಂಗಳವಾರ ಚಾಲನೆ ನೀಡಿದರು. ಬಳಿಕ ಅವರು ವಿಧಾನಪರಿಷತ್‍ ಚುನಾವಣೆಗೆ ಇನ್ನೇನು ಕ್ಷಣಗಣನೆ ಆರಂಭವಾಗುತ್ತಿದ್ದು, ಯುವ ನಾಯಕ, ಅಭ್ಯರ್ಥಿ ಕಿಶೋರ್ ಬೊಟ್ಯಾಡಿ ಅವರನ್ನು ಗೆಲ್ಲಿಸಿಕೊಡಬೇಕೆಂದು ಸ್ಥಳೀಯ ಜನಪ್ರತಿನಿಧಿಗಳು, ಕಾರ್ಯಕರ್ತರಲ್ಲಿ ಮನವಿ ಮಾಡಿದರು. ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಸಚಿವ ಸುನಿಲ್ ಕುಮಾರ್‍, ಸಂಸದರಾದ ಕ್ಯಾ.ಬ್ರಿಜೇಶ್‍ ಚೌಟ, ಕೋಟಾ ಶ್ರೀನಿವಾಸ ಪೂಜಾರಿ, ಶಾಸಕರಾದ ವೇದವ್ಯಾಸ ಕಾಮತ್, ರಾಜೇಶ್‍ ನಾಯ್ಕ್‍, ಭಾಗೀರಥಿ ಮುರುಳ್ಯ, ಭರತ್

ಬಂಟ್ವಾಳದಲ್ಲಿ ಬಿಜೆಪಿ ಮತದಾರರ ಸಮಾವೇಶ | ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರರಿಂದ ಚಾಲನೆ Read More »

ಅಕ್ರಮ ದನ ಸಾಗಾಟ ಸ್ಥಳಕ್ಕೆ ಪೊಲೀಸರಿಂದ ದಾಳಿ : ಆರೋಪಿಗಳು ಪರಾರಿ

ಬೆಳ್ಳಾರೆ: ಅಕ್ರಮ ದನ ಸಾಗಾಟ ಮಾಡಲು ಯತ್ನಿಸುತ್ತಿದ್ದ ಸ್ಥಳಕ್ಕೆ ಪೊಲೀಸರು ದಾಳಿ ನಡೆಸಿದ ಘಟನೆ ಸುಳ್ಯ ತಾಲೂಕು ಕಲ್ಮಡ್ಕ ಗ್ರಾಮದ ಮುಚ್ಚಿಲ ಎಂಬಲ್ಲಿ ನಡೆದಿದೆ. ಸ್ಕ್ರಿಪ್ಟ್ ಕಾರೊಂದರಲ್ಲಿ ಅಕ್ರಮವಾಗಿ ದನಗಳನ್ನು ತುಂಬಿಸಿ ಸಾಗಾಟ ಮಾಡಲು ಪ್ರಯತ್ನಿಸುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಬೆಳ್ಳಾರೆ ಪೊಲೀಸ್ ಠಾಣೆಯ ಉಪ ನಿರೀಕ್ಷಕರಾದ ಈರಯ್ಯ ಡಿ.ಎನ್. ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ತೆರಳಿದಾಗ ರಸ್ತೆ ಬದಿಯಲ್ಲಿ ಬಿಳಿ ಬಣ್ಣದ ಕಾರೊಂದು ನಿಂತಿದ್ದು, ಕಾರನ್ನು ಪರಿಶೀಲಿಸಿದಾಗ ಕಾರಿನೊಳಗೆ ಹಿಂಸಾತ್ಮಕವಾಗಿ ಮೂರು ದನಗಳನ್ನು ತುಂಬಿಸಿರುವುದು ಕಂಡು

ಅಕ್ರಮ ದನ ಸಾಗಾಟ ಸ್ಥಳಕ್ಕೆ ಪೊಲೀಸರಿಂದ ದಾಳಿ : ಆರೋಪಿಗಳು ಪರಾರಿ Read More »

ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಮಹಿಳೆ ಹತ್ಯೆಗೆ ಯತ್ನ : ಪ್ರಕರಣ ದಾಖಲು

ಸುಳ್ಯ: ಮಹಿಳೆ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿರುವ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುಳ್ಯ ತಾಲೂಕಿನ ಕೊಡಿಯಾಲ ಗ್ರಾಮದ ಕಲ್ಕರ್ವೆ ಜಯಭಾರತಿ (56) ಅವರ ಕೊಲೆಗೆ ಯತ್ನಿಸಲಾಗಿದೆ ಎಂದು ತಿಳಿದು ಬಂದಿದೆ. ಜಯಭಾರತಿ  ಮನೆಯಲ್ಲಿ ಶನಿವಾರ ರಾತ್ರಿ ಮಲಗಿದ್ದ ಸಂದರ್ಭದಲ್ಲಿ ಮಹಿಳೆಯ ಬಾವ ಶಂಕರ ಎಂಬವರು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ ಎಂದು ಆರೋಪಿಸಲಾಗಿದೆ. ಗಂಭೀರ ಗಾಯಗೊಂಡಿರುವ ಮಹಿಳೆಯನ್ನು ಸಂಬಂಧಿಕರು ಸುಳ್ಯದ ಆಸ್ಪತ್ರೆಗೆ ಕರೆತಂದು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಮಹಿಳೆ ಹತ್ಯೆಗೆ ಯತ್ನ : ಪ್ರಕರಣ ದಾಖಲು Read More »

ವಿಧಾನ ಪರಿಷತ್ ಉಪಚುನಾವಣೆ | ಬಂಟ್ವಾಳದಲ್ಲಿ ಜನಪ್ರತಿನಿಧಿಗಳ ಸಮಾವೇಶ

ಬಂಟ್ವಾಳ : ಭಾರತೀಯ ಜನತಾ ಪಾರ್ಟಿ ಬಂಟ್ವಾಳ ಮಂಡಲ ವತಿಯಿಂದ ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರ ಕ್ಷೇತ್ರದ  ವಿಧಾನ ಪರಿಷತ್ ನ ಉಪಚುನಾವಣೆಯ ಜನಪ್ರತಿನಿಧಿಗಳ ಸಮಾವೇಶ ಇಂದು ಬಂಟ್ವಾಳ ದ ಸ್ಪರ್ಶ ಸಭಾಂಗಣದಲ್ಲಿ ನಡೆಯಿತು. ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಮಾತನಾಡಿ, ಎಂದೂ ಅಧಿಕಾರಕ್ಕಾಗಿ ಆಸೆ ಪಡದ ಸಂಘದ ಶಿಸ್ತಿನ ಸಿಪಾಯಿಗೆ ಪಕ್ಷ ಟಿಕೆಟ್ ನೀಡಿದೆ ಅವರನ್ನು ನಾವೆಲ್ಲರೂ ಸೇರಿಸಿ ಗೆಲ್ಲಿಸಬೇಕು. ಪುತ್ತೂರು ಹಾಗೂ ಉಳ್ಳಾಲದಲ್ಲಿ ನಮ್ಮ ಶಾಸಕರಿಲ್ಲ ಎಂಬ ಕೊರಗನ್ನು ನೀಗಿಸುವ  ಶಕ್ತಿ ಕಿಶೋರ್ ಗೆ

ವಿಧಾನ ಪರಿಷತ್ ಉಪಚುನಾವಣೆ | ಬಂಟ್ವಾಳದಲ್ಲಿ ಜನಪ್ರತಿನಿಧಿಗಳ ಸಮಾವೇಶ Read More »

ಬೆಳ್ಳಾರೆ ಶ್ರೀ ಜಲದುರ್ಗಾದೇವಿ ಪ್ರಸನ್ನ ಅರ್ಥ್ ಮೂವರ್ಸ್‍, ಟ್ರಾನ್ಸ್ ಪೋರ್ಟ್ & ಬೋರ್ ವೆಲ್ಸ್ ಸಂಸ್ಥೆಯಿಂದ ಆಯುಧಪೂಜೆ

ಬೆಳ್ಳಾರೆ: ಜಲದುರ್ಗಾದೇವಿ ಪ್ರಸನ್ನ ಅರ್ಥ್‍ ಮೂವರ್ಸ್‍, ಟ್ವಾನ್ಸ್‍ ಪೋರ್ಟ್‍ & ಬೋರ್‍ ವೆಲ್ಸ್‍ ಸಂಸ್ಥೆಯ ವತಿಯಿಂದ ಆಯುಧಪೂಜೆ ಬೆಳ್ಳಾರೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ಇಂದು ಬೆಳಿಗ್ಗೆ ನಡೆಯಿತು. ಶ್ರೀ ದೇವಸ್ಥಾನದ ಅರ್ಚಕರು ಪೂಜಾ ವಿದಿವಿಧಾನಗಳನ್ನು ನೆರವೇರಿಸಿದರು. ಸಂಸ್ಥೆಯ ಜೆಸಿಬಿ, ಹಿಟಾಚಿ ಮುಂತಾದ ವಾಹನಗಳಿಗೆ ಪೂಜೆ ನಡೆಯಿತು.

ಬೆಳ್ಳಾರೆ ಶ್ರೀ ಜಲದುರ್ಗಾದೇವಿ ಪ್ರಸನ್ನ ಅರ್ಥ್ ಮೂವರ್ಸ್‍, ಟ್ರಾನ್ಸ್ ಪೋರ್ಟ್ & ಬೋರ್ ವೆಲ್ಸ್ ಸಂಸ್ಥೆಯಿಂದ ಆಯುಧಪೂಜೆ Read More »

ಜರ್ಮನಿಯ ಸಾಫ್ಟ್ ವೇರ್ ಇಂಜಿನಿಯರ್ ಆದಿತ್ಯ ಭಟ್‍ ಹೃದಯಾಘಾತದಿಂದ ನಿಧನ

ಬೆಳ್ತಂಗಡಿ: ಹೃದಯಾಘಾತದಿಂದ ಯುವಕ ಮೃತಪಟ್ಟ ಘಟನೆ ಉಜಿರೆಯಲ್ಲಿ ನಡೆದಿದೆ. ಉಜಿರೆ ಗ್ರಾಮದ ಅತ್ತಾಜೆ ನಿವಾಸಿ, ಜರ್ಮನಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ಆದಿತ್ಯ ಭಟ್ (28) ಮೃತಪಟ್ಟ ಯುವಕ ರಮೇಶ್ ಭಟ್ ಎಂಬವರ ಪುತ್ರ ಆದಿತ್ಯ ಭಟ್‍ ಶುಕ್ರವಾರ ಮನೆಯಲ್ಲಿ ನಡೆದ ಆಯುಧ ಪೂಜೆಯ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭ ಅವರಿಗೆ ಎದೆನೋವು ಕಾಣಿಸಿಕೊಂಡು ಅಸ್ವಸ್ಥರಾದ ತಕ್ಷಣ ಮನೆಯವರು ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದುಕೊಂಡು ಹೋಗಿದ್ದಾರೆ. ಅದರೆ ಅಷ್ಟೊತ್ತಿಗಾಗಲೇ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಮೃತರು ತಂದೆ, ತಾಯಿ, ಸಹೋದರಿ

ಜರ್ಮನಿಯ ಸಾಫ್ಟ್ ವೇರ್ ಇಂಜಿನಿಯರ್ ಆದಿತ್ಯ ಭಟ್‍ ಹೃದಯಾಘಾತದಿಂದ ನಿಧನ Read More »

ವಿಧಾನಪರಿಷತ್ ಉಪಚುನಾವಣೆ : ಮಂಗಳೂರಿನಲ್ಲಿ ಪ್ರಚಾರ ಸಭೆ

ಮಂಗಳೂರು: ವಿಧಾನ ಪರಿಷತ್ತಿನ ಉಪಚುನಾವಣೆಯ ಮಂಗಳೂರು ವಿಧಾನಸಭಾ ಕ್ಷೇತ್ರದ ಚುನಾವಣಾ ಪ್ರಚಾರ ಸಭೆ ಇಂದು ಮಂಗಳೂರಿನ ಅಸೈಗೋಳಿ ಬಂಟರ ಭವನದಲ್ಲಿ ನಡೆಯಿತು. ಸಭೆಯನ್ನುದ್ದೇಶಿಸಿ ಸಂಸದ ಬ್ರಿಜೇಶ್ ಚೌಟ ಮಾತನಾಡಿ,, ಯುವ ನಾಯಕನಿಗೆ, ಅತ್ಯಂತ ಹಿಂದುಳಿದ ಜಾತಿಯ ಬಿಜೆಪಿ ಕಾರ್ಯಕರ್ತನಿಗೆ ಪಕ್ಷ ಟಿಕೆಟ್ ನೀಡಿದೆ, ನಾವೆಲ್ಲರೂ ಸೇರಿ ಕಿಶೋರ್ ಕುಮಾರ್ ಪುತ್ತೂರು ಅವರ ಗೆಲುವಿಗಾಗಿ ಶ್ರಮಿಸೋಣ ಎಂದರು. ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ ಮಾತನಾಡಿ, ಪಕ್ಷ ಸಂಘಟನೆಯ ಹಲವಾರು ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಿರುವ ಸಮರ್ಥವಾದ  ಅಭ್ಯರ್ಥಿಯನ್ನೇ ಬಿಜೆಪಿ ಇಂದು ವಿಧಾನ

ವಿಧಾನಪರಿಷತ್ ಉಪಚುನಾವಣೆ : ಮಂಗಳೂರಿನಲ್ಲಿ ಪ್ರಚಾರ ಸಭೆ Read More »

error: Content is protected !!
Scroll to Top