ದಕ್ಷಿಣ ಕನ್ನಡ

ವಿಧಾನ ಪರಿಷತ್ ಉಪಚುನಾವಣೆ : ಬಿರುಸಿನ ಮತದಾನ

ಪುತ್ತೂರು: ದ.ಕ.ಸ್ಥಳೀಯ ಪ್ರಾಧೀಕಾರ ಕ್ಷೇತ್ರದಿಂದ ವಿಧಾನ ಪರಿಷತ್ ಗೆ ನಡೆಯುವ ಉಪ ಚುನಾವಣೆ ಇಂದು ಬೆಳಿಗ್ಗೆಯಿಂದ ಆರಂಭಗೊಂಡಿದ್ದು, ಬಿರುಸಿನಿಂದ ಸಾಗಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ವ್ಯಾಪ್ತಿಯನ್ನೊಳಗೊಂಡ ಈ ಕ್ಷೇತ್ರದಲ್ಲಿ ಒಟ್ಟು 392 ಮತಗಟ್ಟೆಗಳಿದ್ದು, 6032 ಮಂದಿ ಮತದಾರರಿದ್ದಾರೆ. ಉಭಯ ಜಿಲ್ಲೆಗಳ ಗ್ರಾಮ ಪಂಚಾಯತ್ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಚುನಾಯಿತ ಸದಸ್ಯರು, ಶಾಸಕರು ಹಾಗೂ ಸಂಸದರು ಮತದಾನ ಮಾಡಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿರುಸಿನಿಂದ ಮತದಾನ ಆರಂಭಗೊಂಡಿದ್ದು, ಹಲವೆಡೆ ಬಿಜೆಪಿಯ ಚುನಾಯಿತ ಸದಸ್ಯರನ್ನೊಳಗೊಂಡ ಮತದಾರರು […]

ವಿಧಾನ ಪರಿಷತ್ ಉಪಚುನಾವಣೆ : ಬಿರುಸಿನ ಮತದಾನ Read More »

ಕೇರ್ಪಡ ದಲ್ಲಿ ಹಿಂದೂ ಧಾರ್ಮಿಕ  ಶಿಕ್ಷಣ ಪ್ರಾರಂಭ

ಕಡಬ: ಕೇರ್ಪಡ ಧಾರ್ಮಿಕ ಮತ್ತು ಭಜನಾ ಶಿಕ್ಷಣ ಕೇಂದ್ರದ ವತಿಯಿಂದ ಕಡಬ ತಾಲೂಕಿನ ಎಡಮಂಗಲ ಗ್ರಾಮದ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಸಭಾಂಗಣದಲ್ಲಿ ಧಾರ್ಮಿಕ ಶಿಕ್ಷಣ ತರಗತಿಯನ್ನು ಆರಂಭಿಸಲಾಯಿತು. ದೇವಾಲಯಗಳ ಸಂವರ್ಧನಾ ಸಮಿತಿ ಮಂಗಳೂರು ವಿಭಾಗ ಪ್ರಮುಖ್, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷ  ಕೇಶವಪ್ರಸಾದ್ ಮುಳಿಯ ಹಾಗೂ ಮುರಳೀಕೃಷ್ಣ ಹಸಂತಡ್ಕ ಅವರ ಮಾರ್ಗದರ್ಶನದಲ್ಲಿ ಆರಂಭಿಸಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಕೃಷ್ಣವೇಣಿ ಪ್ರಸಾದ್ ಮುಳಿಯ ದೀಪ ಪ್ರಜ್ವಲನೆಗೊಳಿಸಿ ಕಥೆ, ಭಜನೆ ಹಾಗೂ ವಿವಿಧ ಚಟುವಟಿಕೆಗಳ ಮೂಲಕ 100

ಕೇರ್ಪಡ ದಲ್ಲಿ ಹಿಂದೂ ಧಾರ್ಮಿಕ  ಶಿಕ್ಷಣ ಪ್ರಾರಂಭ Read More »

ಬಳ್ಪ ಮನೆಯೊಂದಕ್ಕೆ ನುಗ್ಗಿದ ಕಳ್ಳರು : ಚಿನ್ನಾಭರಣ ಕಳವು

ಸುಬ್ರಹ್ಮಣ್ಯ: ಬಳ್ಪ ಗ್ರಾಮದ ಅಕ್ಕೇಣಿ ಸುಂದರ ಗೌಡ ಎಂಬವರ ಮನೆಯಿಂದ ಅಪಾರ ಪ್ರಮಾಣದ ಚಿನ್ನ ಮತ್ತು ಹಣ ಕಳವು ಮಾಡಿದ ಘಟನೆ ನಡದಿದೆ. 12 ಲಕ್ಷ ರೂಪಾಯಿ ನಗದು ಮತ್ತು 28 ಪವನ್ ಚಿನ್ನ ಕಳ್ಳತನವಾಗಿರುವುದು ಭಾನುವಾರ  ಬೆಳಕಿಗೆ ಬಂದಿದೆ. ಅಕ್ಕೇಣಿ ಸುಂದರ ಗೌಡ ಅವರು ತಮ್ಮ ಕುಟುಂಬದೊಂದಿಗೆ ಅ. 17ರಂದು ಸಂಜೆ ಮನೆಗೆ ಬೀಗ ಹಾಕಿ ತಮ್ಮ ಮಗಳ ಮನೆ ಪೆರಿಗೇರಿಗೆ ಹೋಗಿದ್ದರು. ಭಾನುವಾರ ಮಧ್ಯಾಹ್ನ ಮನೆಗೆ ಹಿಂತಿರುಗಿ ಬಂದಾಗ ಮನೆಯ ಎದುರು ಬಾಗಿಲಿನ ಬೀಗ

ಬಳ್ಪ ಮನೆಯೊಂದಕ್ಕೆ ನುಗ್ಗಿದ ಕಳ್ಳರು : ಚಿನ್ನಾಭರಣ ಕಳವು Read More »

ರೆಂಜಿಲಾಡಿ: ಸೂರ್ಯ-ಚಂದ್ರ ಜೋಡುಕರೆ ಕಂಬಳ ಉದ್ಘಾಟನೆ | ಕಂಬಳ ಆಯೋಜನೆ ಮೂಲಕ ಪ್ರೋತ್ಸಾಹ ಅಭಿನಂದನೀಯ ; ಚಂದ್ರಹಾಸ

ಸುಬ್ರಹ್ಮಣ್ಯ: ಜಾನಪದ ಕ್ರೀಡೆ ಕಂಬಳವನ್ನು ಗ್ರಾಮೀಣ ಭಾಗದಲ್ಲೂ ಆಯೋಜಿಸುವ ಮೂಲಕ ಕಂಬಳವನ್ನು ಪ್ರೋತ್ಸಾಹಿಸುತ್ತಿರುವುದು ಅಭಿನಂದನಾರ್ಹ ಎಂದು  ಪುತ್ತೂರು ಕೋಟಿ ಚೆನ್ನಯ್ಯ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಅವರು ಹೇಳಿದರು. ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ಸಾಕೋಟೆಜಾಲು ದಿ| ಆರ್.ಸಾಂತಪ್ಪ ಗೌಡ ಅವರ ಗದ್ದೆಯಲ್ಲಿ ನಡೆದ ನೂಜಿಬಾಳ್ತಿಲ- ರೆಂಜಿಲಾಡಿ ಗ್ರಾಮಸ್ಥರ ಸಹಕಾರದಲ್ಲಿ ನೂಜಿಬೈಲ್ ತುಳುನಾಡ ತುಡರ್ ಯುವಕ ಮಂಡಲದ ವತಿಯಿಂದ ಯುವಕ ಮಂಡಲದ ಮೂರನೇ ವರ್ಷದ ವಾರ್ಷಿಕ ಕ್ರೀಡಾಕೂಟದ ಅಂಗವಾಗಿ ನಡೆದ ಸಬ್ ಜೂನಿಯರ್ ವಿಭಾಗದ

ರೆಂಜಿಲಾಡಿ: ಸೂರ್ಯ-ಚಂದ್ರ ಜೋಡುಕರೆ ಕಂಬಳ ಉದ್ಘಾಟನೆ | ಕಂಬಳ ಆಯೋಜನೆ ಮೂಲಕ ಪ್ರೋತ್ಸಾಹ ಅಭಿನಂದನೀಯ ; ಚಂದ್ರಹಾಸ Read More »

ಕುಪ್ಪೆಪದವು ರಾಮ್ ಸೇನಾ ವಾಯುಪುತ್ರ ಘಟಕದಿಂದ ಐದು ಕುಟುಂಬಗಳಿಗೆ ಧನ ಸಹಾಯ ಹಸ್ತಾಂತರ

ಕುಪ್ಪೆಪದವು ರಾಮ್ ಸೇನಾ ವಾಯುಪುತ್ರ ಘಟಕದ ವತಿಯಿಂದ ನವರಾತ್ರಿ ಸಂದರ್ಭದಲ್ಲಿ ನಡೆದ ಮೂರನೇ ವರುಷದ ಭವತಿ ಭೀಕ್ಷಂದೆಹಿ ಮೂಲಕ ಸಂಗ್ರಹಿಸಿದ 124,149 ರೂಪಾಯಿ ಒಟ್ಟು 5 ಕುಟುಂಬಗಳಿಗೆ ಕುಪ್ಪೆಪದವು ದುರ್ಗೆಶ್ವರಿ ದೇವಸ್ಥಾನದಲ್ಲಿ ಹಸ್ತಾಂತರ ಮಾಡಲಾಯಿತು ಬಂಟ್ವಾಳ ಪಿಲತ್ತಬೆಟ್ಟು ಗ್ರಾಮದ ವಸಂತಿ ಮತ್ತು ದತ್ತು ಪುತ್ರಿ ಉಮಾವತಿ ಅವರ ಚಿಕಿತ್ಸೆ ಹಾಗೂ ಜೀವನ ನಿರ್ವಹಣೆಗೆ 70,149 ನೀಡಲಾಯಿತು. ಬಂಟ್ವಾಳ ಬಿಳಿಯೂರು ಗ್ರಾಮದ ಯೋಗೀಶ್ ಚಿಕಿತ್ಸೆಗೆ 22,500, ಕುಪ್ಪೆಪದವು ನಿವಾಸಿ ವಸಂತಿ ಅವರಿಗೆ 10500, ಮುತ್ತೂರು ನಿವಾಸಿ ಸುನಂದಾ ಅವರ

ಕುಪ್ಪೆಪದವು ರಾಮ್ ಸೇನಾ ವಾಯುಪುತ್ರ ಘಟಕದಿಂದ ಐದು ಕುಟುಂಬಗಳಿಗೆ ಧನ ಸಹಾಯ ಹಸ್ತಾಂತರ Read More »

ವಿಧಾನ ಪರಿಷತ್ ಉಪಚುನಾವಣೆ | ಉಜಿರೆ, ಬೆಳಾಲು, ಕಳಿಯ ಗ್ರಾಮ ಪಂಚಾಯಿತಿಯಲ್ಲಿ ಚುನಾವಣಾ ಪ್ರಚಾರ ಸಭೆ

ಬೆಳ್ತಂಗಡಿ: ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಉಪ ಚುನಾವಣೆಯ ಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್ ಪುತ್ತೂರು ಪರವಾಗಿ ಉಜಿರೆ, ಬೆಳಾಲು ಹಾಗೂ ಕಳಿಯ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮತಯಾಚನೆ ಹಾಗೂ ಚುನಾವಣಾ ಸಭೆ ನಡೆಸಲಾಯಿತು. ಕಾರ್ಯಕರ್ತರನ್ನು ಉದ್ಧೇಶಿಸಿ ಮಾತನಾಡಿದ ಸಂಸದ ಕ್ಯಾ. ಬ್ರಿಜೇಶ್ ಚೌಟ, ಮತದಾನ ಎನ್ನುವುದು ದೇಶದ ಸಂವಿಧಾನ ನಮಗೆ ಕಲ್ಪಿಸಿದ ಹಕ್ಕು. ಚುನಾವಣೆಯ ದಿನ ನಮ್ಮ ಕರ್ತವ್ಯ ನಿರ್ವಹಿಸಲು ಕಡ್ಡಾಯ ಮತದಾನ ಮಾಡಬೇಕು. ಸ್ಥಳೀಯ ಪ್ರಾಧಿಕಾರದ ಉಪ ಚುನಾವಣೆಯ ದಿನ ಎಲ್ಲಾ

ವಿಧಾನ ಪರಿಷತ್ ಉಪಚುನಾವಣೆ | ಉಜಿರೆ, ಬೆಳಾಲು, ಕಳಿಯ ಗ್ರಾಮ ಪಂಚಾಯಿತಿಯಲ್ಲಿ ಚುನಾವಣಾ ಪ್ರಚಾರ ಸಭೆ Read More »

ಬೈಕ್ ಅಪಘಾತಗೊಂಡು ಶಸ್ತ್ರ ಚಿಕಿತ್ಸೆಗೆ ಒಳಗಾದ ಬಿಜೆಪಿ ಮೊಗರು ಬೂತ್ ನ ಮಾಜಿ ಅಧ್ಯಕ್ಷ ಜಗದೀಶ್ ಇಡ್ಯಾಡಿ | ಸವಣೂರು ಬಿಜೆಪಿ ಶಕ್ತಿ ಕೇಂದ್ರದಿಂದ ಧನಸಹಾಯ ಹಸ್ತಾಂತರ

ಸವಣೂರು: ಬೈಕ್‍ ಅಪಘಾತದಿಂದ ಗಂಭೀರ ಗಾಯಗೊಂಡು ಎರಡು ಬಾಡಿ ಶಸ್ತ್ರ ಚಿಕಿತ್ಸೆಗೆ ಒಳಗಾದ ಬಿಜೆಪಿ ಮೊಗರು ಬೂತ್ ನ ಮಾಜಿ ಅಧ್ಯಕ್ಷ ಜಗದೀಶ್ ಇಡ್ಯಾಡಿ ಅವರಿಗೆ ಸವಣೂರು ಬಿಜೆಪಿ ಶಕ್ತಿ ಕೇಂದ್ರದಿಂದ ಧನಸಹಾಯ ನೀಡಲಾಯಿತು. ಜಗದೀಶ್‍ ಅವರು ಬೈಕ್ ನಲ್ಲಿ ಚಲಾಯಿಸುತ್ತಿದ್ದ ವೇಳೆ ನಾಯಿಯೊಂದು ಅಡ್ಡ ಬಂದು ಬೈಕ್ ಮಗುಚಿದ ಪರಿಣಾಮ ಕಾಲಿಗೆ ಗಂಭೀರ ಗಾಯವಾಗಿತ್ತು. ಈ ಸಂಧರ್ಭದಲ್ಲಿ ಸವಣೂರು ಶಕ್ತಿಕೇಂದ್ರದ ಅಧ್ಯಕ್ಷ ಚೇತನ್ ಕೊಡಿಬೈಲ್, ಸುಳ್ಯ ಮಂಡಲ ಎಸ್.ಟಿ. ಮೋರ್ಚಾದ ಅಧ್ಯಕ್ಷ ಗಂಗಾಧರ ಪೆರಿಯಡ್ಕ, ಸುಳ್ಯ

ಬೈಕ್ ಅಪಘಾತಗೊಂಡು ಶಸ್ತ್ರ ಚಿಕಿತ್ಸೆಗೆ ಒಳಗಾದ ಬಿಜೆಪಿ ಮೊಗರು ಬೂತ್ ನ ಮಾಜಿ ಅಧ್ಯಕ್ಷ ಜಗದೀಶ್ ಇಡ್ಯಾಡಿ | ಸವಣೂರು ಬಿಜೆಪಿ ಶಕ್ತಿ ಕೇಂದ್ರದಿಂದ ಧನಸಹಾಯ ಹಸ್ತಾಂತರ Read More »

ವಿಧಾನ ಪರಿಷತ್ ಚುನಾವಣೆ | ಸುಳ್ಯ ಮಂಡಲ ಚುನಾವಣಾ ಪ್ರಚಾರ ಸಭೆ

ಸುಳ್ಯ: ಸ್ಥಳೀಯ ಪ್ರಾಧಿಕಾರದ ವಿಧಾನ ಪರಿಷತ್ ಉಪ ಚುನಾವಣೆಯ ಸುಳ್ಯ ಮಂಡಲ‌ ಚುನಾವಣಾ ಪ್ರಚಾರ ಸಭೆ ಪೆರುವಾಜೆ ಜೆ.ಡಿ ಆಡಿಟೋರಿಯಂ ನಲ್ಲಿ ನಡೆಯಿತು. ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಸಿ.ಟಿ ರವಿ ಮಾತನಾಡಿ, ಅತಿಯಾದ ಆತ್ಮ ವಿಶ್ವಾಸದಲ್ಲಿ ಮೈಮರೆಯುವುದು ಬೇಡ ಚುನಾವಣೆಯ ವರೆಗೂ ಅವಿರತವಾಗಿ ಶ್ರಮಿಸಿ ಕಿಶೋರ್ ಕುಮಾರ್ ಅವರ ಗೆಲುವು ಖಚಿತಪಡಿಸುವ ಹೊಣೆಗಾರಿಕೆ ನಿಮ್ಮೆಲ್ಲರ ಮೇಲಿದೆ. ಇನ್ನು ಚುನಾವಣೆಗೆ ಕೆಲವೇ ದಿನಗಳು ಬಾಕಿ ಉಳಿದಿದ್ದು ಎಲ್ಲಾ ಮತದಾರರನ್ನೂ ಸಂಪರ್ಕಿಸಬೇಕು ಎಂದು ಹೇಳಿದರು. ಉಡುಪಿ ಸಂಸದ ಕೋಟ

ವಿಧಾನ ಪರಿಷತ್ ಚುನಾವಣೆ | ಸುಳ್ಯ ಮಂಡಲ ಚುನಾವಣಾ ಪ್ರಚಾರ ಸಭೆ Read More »

ಸವಣೂರು ಸೀತಾರಾಮ ರೈಯವರಿಗೆ RUPSA ರಾಜ್ಯ ಪ್ರಶಸ್ತಿ | ಅ.21 ರಂದು ಬೆಂಗಳೂರಿನ ಜುಬ್ಲಿ ಅಂತರಾಷ್ಟ್ರೀಯ ಶಾಲಾ ಆಡಿಟೋರಿಯಂನಲ್ಲಿ ಪ್ರಶಸ್ತಿ ಪ್ರದಾನ

ಸವಣೂರು: ಕರ್ನಾಟಕ ರಾಜ್ಯ ಮಾನ್ಯತೆ ಪಡೆದ ಅನುದಾನರಹಿತ ಶಾಲೆಗಳ ಸಂಘ (Recognised Unaided Private Schools’ Association of Karnataka) ಪ್ರದಾನ ಮಾಡುವ ರಾಜ್ಯಮಟ್ಟದ ಉತ್ತಮ ಶಾಲಾ ಆಡಳಿತಗಾರ ಪ್ರಶಸ್ತಿಯು ಸವಣೂರಿನ ಶಿಲ್ಪಿ, ಸಹಕಾರ ರತ್ನ ಸವಣೂರು ಸೀತಾರಾಮ ರೈಯವರಿಗೆ ಒಲಿದು ಬಂದಿದೆ. ಅಕ್ಟೋಬರ್ 21ರಂದು ಬೆಂಗಳೂರಿನ ಜುಬ್ಲಿ ಅಂತರರಾಷ್ಟ್ರೀಯ ಶಾಲಾ ಆಡಿಟೋರಿಯಂನಲ್ಲಿ ನಡೆಯಲಿರುವ ಅದ್ದೂರಿ ಸಮಾರಂಭದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮತ್ತು ಇತರ ಗಣ್ಯರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಸವಣೂರು ಸೀತಾರಾಮ ರೈ ಅವರು

ಸವಣೂರು ಸೀತಾರಾಮ ರೈಯವರಿಗೆ RUPSA ರಾಜ್ಯ ಪ್ರಶಸ್ತಿ | ಅ.21 ರಂದು ಬೆಂಗಳೂರಿನ ಜುಬ್ಲಿ ಅಂತರಾಷ್ಟ್ರೀಯ ಶಾಲಾ ಆಡಿಟೋರಿಯಂನಲ್ಲಿ ಪ್ರಶಸ್ತಿ ಪ್ರದಾನ Read More »

ಗ್ರಾಮ ದೈವ ಶ್ರೀ ಶಿರಾಡಿ ರಾಜನ್ ದೈವದ ದೈವಸ್ಥಾನ ಅನ್ಯಾಡಿ –ಕುದ್ಮಾರಿನ ಆಡಳಿತ ಮಂಡಳಿ ಸಭೆ | ನೇಮೋತ್ಸವದ ಲೆಕ್ಕಪತ್ರದ ಮಂಡನೆ

ಸವಣೂರು: ಗ್ರಾಮ ದೈವ ಶ್ರೀ ಶಿರಾಡಿ ರಾಜನ್ ದೈವದ ದೈವಸ್ಥಾನ ಅನ್ಯಾಡಿ –ಕುದ್ಮಾರಿನ ಆಡಳಿತ ಮಂಡಳಿ ಸಭೆಯು ಆಡಳಿತ ಮಂಡಳಿಯ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಮಾ.9, 2024 ರಂದು ನಡೆದ ನೇಮೋತ್ಸವದ ಖರ್ಚು ವೆಚ್ಚಗಳನ್ನು ಮಂಡನೆ ಮಾಡಲಾಯಿತು. ನೇಮೋತ್ಸವಕ್ಕೆ ಒಟ್ಟು 1,57,679 ರೂ. ಜಮೆಯಾಗಿದ್ದು, 1,38,609 ರೂ. ಖರ್ಚಾಗಿರುತ್ತದೆ. 19,070 ರೂ. ಉಳಿಕೆಯಾಗಿರುತ್ತದೆ ಎಂದು ಸಭೆಯಲ್ಲಿ ತಿಳಿಸಲಾಯಿತು. ಸಭೆಯಲ್ಲಿ ಕಟ್ಟೆ ಹಾಗೂ ದೈವಸ್ಥಾನದ ಅಭಿವೃದ್ಧಿ ಕೆಲಸಗಳ ಬಗ್ಗೆ ಚರ್ಚಿಸಲಾಯಿತು. ನೇಮೋತ್ಸವಕ್ಕೆ

ಗ್ರಾಮ ದೈವ ಶ್ರೀ ಶಿರಾಡಿ ರಾಜನ್ ದೈವದ ದೈವಸ್ಥಾನ ಅನ್ಯಾಡಿ –ಕುದ್ಮಾರಿನ ಆಡಳಿತ ಮಂಡಳಿ ಸಭೆ | ನೇಮೋತ್ಸವದ ಲೆಕ್ಕಪತ್ರದ ಮಂಡನೆ Read More »

error: Content is protected !!
Scroll to Top