ದಕ್ಷಿಣ ಕನ್ನಡ

ವಿದ್ಯುತ್ ದುರಸ್ಥಿ ವೇಳೆ ಸಹಾಯಕ ಪವರ್ ಮ್ಯಾನ್ ಮೃತ್ಯು

ಬೆಳ್ತಂಗಡಿ: ಕುವೆಟ್ಟು ಗ್ರಾಮದ ಸಹಾಯಕ ಪವರ್ ಮ್ಯಾನ್ ವಿಜೇಶ್ ಜೈನ್ HT ಲೈನ್ ನಲ್ಲಿ ವಿದ್ಯುತ್ ಶಾಕ್ ಹೊಡೆದು ಸಾವನ್ನಪ್ಪಿದ ಘಟನೆ ನಡೆದಿದೆ. ಬೆಳ್ತಂಗಡಿ ತಾಲೂಕಿನ ಓಡಿನ್ನಾಳ ಗ್ರಾಮದ ಕೆಂಜಿಲ ಮನೆ ನಿವಾಸಿ ಸುಕುಮಾರ್ ಜೈನ್ ಮತ್ತು ಪೂರ್ಣಿಮಾ ಜೈನ್ ದಂಪತಿಗಳ ಎರಡನೇ ಮಗ ವಿಜೇಶ್ ಜೈನ್ (27) ಎಂಬವರು ಓಡಿಲ್ನಾಳ ಗ್ರಾಮದ ಕುಮ್ಮುಂಜ ಎಂಬಲ್ಲಿ HT ಲೈನ್ ನಲ್ಲಿ ಕೆಲಸ ಮಾಡುತ್ತಿದ್ದಾಗ ಮೇ.30 ರಂದು ವಿದ್ಯುತ್ ಶಾಕ್ ತಗುಲಿ ಮೃತಪಟ್ಟಿದ್ದಾರೆ. ಮೃತಪಟ್ಟ ವಿಜೇಶ್ ಜೈನ್ ಶವವನ್ನು […]

ವಿದ್ಯುತ್ ದುರಸ್ಥಿ ವೇಳೆ ಸಹಾಯಕ ಪವರ್ ಮ್ಯಾನ್ ಮೃತ್ಯು Read More »

ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ | ಯುವಕ ಪೋಲಿಸ್‌ ವಶಕ್ಕೆ

ಮೂಲ್ಕಿ : ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿರುವ ಘಟನೆ ಮೇ.೩೦ ಶುಕ್ರವಾರದಂದು  ಮೂಲ್ಕಿಯಲ್ಲಿ ನಡೆದಿದೆ. ಪಕ್ಷಿಕೆರೆ ಮೂಲದ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿರುವ ಆರೋಪದ ಮೇಲೆ ಬಜಪೆಯ ಪ್ರೀತಮ್ ಎಂಬಾತನನ್ನು  ಮೂಲ್ಕಿ ಪೋಲಿಸರು  ಬಂಧಿಸಿದ್ದಾರೆ ಎಂದು ತಿಳಿಸಿದ್ದಾರೆ. ಮೇ 25, 2025ರಂದು ಆರೋಪಿ ಪ್ರೀತಮ್, ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಹಾಸನದ ಉದಯಪುರಕ್ಕೆ ಕರೆದುಕೊಂಡು ಹೋಗಿದ್ದನು. ಬಾಲಕಿಯ ತಾಯಿ, ತನ್ನ ಮಗಳ ಅಪಹರಣದ  ಬಗ್ಗೆ ಮೂಲ್ಕಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಗುರುವಾರ (ಮೇ 29)

ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ | ಯುವಕ ಪೋಲಿಸ್‌ ವಶಕ್ಕೆ Read More »

ನಾಡ ದೋಣಿ ಮಗುಚಿ ಇಬ್ಬರು ನಾಪತ್ತೆ

ಮಂಗಳೂರು: ನಾಡ ದೋಣಿ ಮಗುಚಿ ಇಬ್ಬರು ನಾಪತ್ತೆಯಾದ ಘಟನೆ ಬೆಂಗ್ರೆ ಅಳಿವೆ  ಸಮೀಪ ಮೇ 30ರ ಶುಕ್ರವಾರ ಸಂಭವಿಸಿದೆ. ತೋಟ ಬೆಂಗ್ರೆ ಅಳಿವೆ ಬಾಗಿಲು ಸಮೀಪ ಮೀನು ಹಿಡಿಯುತ್ತಿದ್ದಾಗ ಜೋರಾದ ಮಳೆ, ಗಾಳಿಯ ರಭಸಕ್ಕೆ  ಧೋಣಿ ಮಗುಚಿದ್ದು, ದೋಣಿಯಲ್ಲಿದ್ದವರು ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ. ದೋಣಿಯಲ್ಲಿದ್ದ ಯಶವಂತ, ಕಮಲಾಕ್ಷ ಎಂಬವರು ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.

ನಾಡ ದೋಣಿ ಮಗುಚಿ ಇಬ್ಬರು ನಾಪತ್ತೆ Read More »

ಮಾಣಿ ಹೈಸ್ಕೂಲ್ ಬಳಿ ಗುಡ್ಡ ಕುಸಿತ

ವಿಟ್ಲ: ಅಡ್ಡಹೋಳೆ- ಬಿ ಸಿ.‌ರೋಡ್ ರಾಷ್ಟ್ರೀಯ ಹೆದ್ದಾರಿಯ  ಅಂಡರ್ ಪಾಸ್ ರಸ್ತೆ ಸಂಚಾರಕ್ಕೆ ಮುಕ್ತಗೊಂಡ ಬೆನ್ನಲ್ಲೇ ಮಾಣಿ ಹೈಸ್ಕೂಲ್ ಬಳಿ ಸರ್ವಿಸ್ ರಸ್ತೆಗೆ ಗೋಡೆ ಕುಸಿದ ಪರಿಣಾಮ ಮಣ್ಣು ರಸ್ತೆಗೆ ಬಿದ್ದಿದೆ. ಈ ಭಾಗದಲ್ಲಿ ತಡೆಗೋಡೆ ನಿರ್ಮಿಸದೇ ಇದ್ದದ್ದರಿಂದ ನಿರಂತರ ಸುರಿಯುತ್ತಿರುವ ಮಳೆಗೆ ಗುಡ್ಡ ಕುಸಿದು ಮಣ್ಣು ರಸ್ತೆಗೆ ಬಿದ್ದಿದೆ. ಸರಿಯಾಗಿ ಕಾಮಗಾರಿ ನಿರ್ವಹಿಸದೇ ಇದ್ದುದರಿಂದ ಅಲ್ಲಲ್ಲಿ ಈ ರೀತಿಯ ತೊಂದರೆಗಳು ಉಂಟಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ‌.

ಮಾಣಿ ಹೈಸ್ಕೂಲ್ ಬಳಿ ಗುಡ್ಡ ಕುಸಿತ Read More »

ಲಾರಿ ಪಲ್ಟಿ : ಕಾರ್ಮಿಕ ಮೃತ್ಯು

ಬಂಟ್ವಾಳ : ಲಾರಿ ಪಲ್ಟಿಯಾಗಿ ಮೃತಪಟ್ಟ ಘಟನೆ ಬಂಟ್ವಾಳದಲ್ಲಿ ಇಂದು ಬೆಳಗ್ಗೆ ನಡೆದಿದೆ. ಘಟನೆಯಿಂದಾಗಿ ಜಾರ್ಖಾಂಡ್‌ ಮೂಲದ ನಿರ್ಮಲಾ ಅನ್ಸ್ತಾ ಮೃತಪಟ್ಟ ಕಾರ್ಮಿಕ ಎನ್ನಲಾಗಿದೆ. ಲಾರಿ ಚಾಲಕ ಸುಜಿತ್, ಕ್ಲೀನರ್ ಸಿಮೋಹನ್ ಮುರ್ಮ ಯಾವುದೇ ಗಾಯವಿಲ್ಲದೆ ಅಪಾಯದಿಂದ ಪಾರಾಗಿದ್ದಾರೆ. ಅಕ್ಕಿ ಲೋಡ್ ನ ಲಾರಿ ಬಂಟ್ವಾಳದ ಎಸ್‌ವಿ.ಎಸ್.ಕಾಲೇಜು ಬಳಿ ಬರುವಾಗ ಅತಿಯಾದ ಮಳೆಗೆ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಉಡುಪಿಯಿಂದ ಅಕ್ಕಿ ಲೋಡ್ ಮಾಡಿಕೊಂಡು ಮೂಡಬಿದಿರೆಯಾಗಿ ಬಂಟ್ವಾಳಕ್ಕೆ ಬರುವ ವೇಳೆ ಈ ಘಟನೆ ನಡೆದಿದೆ.ಲಾರಿಯ ಹಿಂಭಾಗದಲ್ಲಿ ಅಕ್ಕಿ

ಲಾರಿ ಪಲ್ಟಿ : ಕಾರ್ಮಿಕ ಮೃತ್ಯು Read More »

ಮನೆ ಮೇಲೆ ಬಿದ್ದ ಧರೆ | ಅವಶೇಷದಡಿ ಸಿಲುಕಿದ ತಾಯಿ, ಮಗು

ಉಳ್ಳಾಲ: ಮಳೆಯಾರ್ಭಟಕ್ಕೆ  ದ.ಕ ಜಿಲ್ಲೆ.ಯ ಜನರಲ್ಲಿ ಆತಂಕ ಹೆಚಾಗುತ್ತಿದ್ದು, ಇದೀಗ  ಉಳ್ಳಾಲದ ಮಂಜನಾಡಿ ಗ್ರಾಮದಲ್ಲಿ ಶುಕ್ರವಾರ ಮುಂಜಾನೆ ಮನೆಯ ಮೇಲೆ ಭಾರೀ ಪ್ರಮಾಣದಲ್ಲಿ ಮಣ್ಣು ಕುಸಿದ ಪರಿಣಾಮ ಮಹಿಳೆ ಮತ್ತು ಮಗು ಅಸುನೀಗಿದ್ದಾರೆ. ಘಟನೆಯಲ್ಲಿ ಇಬ್ಬರನ್ನು ರಕ್ಷಿಸಲಾಗಿದ್ದು, ತಾಯಿ ಮತ್ತು ಒಂದು ಮಗು ಅವಶೇಷದಡಿ ಸಿಲುಕಿದ್ದಾರೆ. ಮಂಜನಾಡಿ ಗ್ರಾಮದ ಉರುಮನೆ ಮದಪಾಡಿಯಲ್ಲಿ ಘಟನೆ ನಡೆದಿದ್ದು, ತೋಟದ ನಡುವಿರುವ ಮನೆಯ ಮೇಲೆ ಬೃಹತ್ ಮರ ಸಹಿತ ಸುಮಾರು 30 ಅಡಿ ದರೆ ಕುಸಿದು ಬಿದ್ದಿದೆ. ಶುಕ್ರವಾರ ಮುಂಜಾನೆ ಸುಮಾರು

ಮನೆ ಮೇಲೆ ಬಿದ್ದ ಧರೆ | ಅವಶೇಷದಡಿ ಸಿಲುಕಿದ ತಾಯಿ, ಮಗು Read More »

ಲಾರಿಗೆ ಡಿಕ್ಕಿ ಹೊಡೆದ ಬೈಕ್ | ಯುವಕ ಮೃತ್ತು

ವಿಟ್ಲ: ಲಾರಿಯ ಹಿಂಬದಿಗೆ ಬೈಕ್‍ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿದ್ದು, ಸಹ ಸವಾರ ಗಂಭೀರ ಗಾಯಗೊಂಡ ಘಟನೆ ಮಂಗಳಪದವುನಲ್ಲಿ ನಡೆದಿದೆ. ಒಕ್ಕೆತ್ತೂರು ಮೂಲದ ಇಬ್ಬರು ಯುವಕರು ಮಂಗಳಪದವು ಕಡೆಗೆ ತೆರಳುತ್ತಿದ್ದ ವೇಳೆ ಕನ್ಯಾನ ಕಡೆಯಿಂದ ಬಾಯ್ಸ್ ಮಣ್ಣು ಸಾಗಾಟ ಮಾಡುತ್ತಿದ್ದ ಅದರ ಚಾಲಕ ಮಂಗಳಪದವು ಎಂಬಲ್ಲಿ ರಸ್ತೆಯಲ್ಲಿಯೇ ಲಾರಿ ನಿಲ್ಲಿಸಿದ್ದು, ಅದಕ್ಕೆ ಢಿಕ್ಕಿ ಹೊಡೆದು ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಡಿಕ್ಕಿಯಾದ ರಭಸಕ್ಕೆ ಇಬ್ಬರಿಗೂ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಯಿತು.  ಆದರೆ ಇರ್ಫಾನ್ (19) ಚಿಕಿತ್ಸೆ

ಲಾರಿಗೆ ಡಿಕ್ಕಿ ಹೊಡೆದ ಬೈಕ್ | ಯುವಕ ಮೃತ್ತು Read More »

ಭಾರಿ ಮಳೆ : ದ.ಕ., ಉಡುಪಿ ಜಿಲ್ಲೆಗಳಲ್ಲಿ ಇಂದು ಶಾಲೆಗಳಿಗೆ ರಜೆ

ಶಾಲಾರಂಭದ ಮೊದಲ ದಿನವೇ ರಜೆ ಮಂಗಳೂರು: ಭಾರಿ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ದಕ್ಷಿನ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಶಾಲೆಗಳಿಗೆ ಇಂದು ರಜೆ ಸಾರಲಾಗಿದೆ. ಎಲ್ಲ ಅಂಗನವಾಡಿ ಹಾಗೂ ಒಂದರಿಂದ ಹತ್ತನೇ ತರಗತಿವರೆಗೆ (ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರಾಥಮಿಕ ಹಾಗೂ ಪ್ರೌಢಶಾಲೆ) ಇಂದು ರಜೆ ಘೋಷಿಸಿ ಉಭಯ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಇದರಿಂದ ಬೇಸಿಗೆ ರಜೆ ಮುಗಿದು ಇಂದಿನಿಂದ ಪುನರಾರಂಭಗೊಳ್ಳಬೇಕಿದ್ದ ಶಾಲೆಗಳು ನಾಳೆ ತೆರೆಯಲಿವೆ. ಎಸ್ .ಎಸ್. ಎಲ್ .ಸಿ ಪೂರಕ ಪರೀಕ್ಷೆ ಎಂದಿನಂತೆ ನಡೆಯಲಿದೆ.

ಭಾರಿ ಮಳೆ : ದ.ಕ., ಉಡುಪಿ ಜಿಲ್ಲೆಗಳಲ್ಲಿ ಇಂದು ಶಾಲೆಗಳಿಗೆ ರಜೆ Read More »

ಮಂಗಳೂರು: ಹಿಂದೂ ಜಾಗರಣ ವೇದಿಕೆ ಮುಖಂಡನಿಗೆ ಜೈಷ್ ಎ ಮೊಹಮ್ಮದ್ ಹೆಸರಿನಲ್ಲಿ ಬೆದರಿಕೆ ಸಂದೇಶ

ನಿನ್ನ ಸ್ನೇಹಿತನ ಕೈ ಕಾಲು ಕಡಿಯುತ್ತೇವೆ, ನಂತರ ತಲೆ ಕಡಿದು ದೆಹಲಿಯ ಮೈನ್ ಗೇಟ್​​ನಲ್ಲಿ ನೇತು ಹಾಕುತ್ತೇವೆ ಎಂದು ಧಮ್ಕಿ ಮಂಗಳೂರು: ಹಿಂದೂ ಜಾಗರಣ ವೇದಿಕೆಯ ದಕ್ಷಿಣ ಕನ್ನಡ ಜಿಲ್ಲಾ ಸಂಯೋಜಕ ನರಸಿಂಹ ಮಾಣಿ ಎಂಬವರಿಗೆ ಪಾಕಿಸ್ತಾನದ ಜೈಷ್ ಎ ಮೊಹಮ್ಮದ್ ಸಂಘಟನೆಯ ಹೆಸರಿನಲ್ಲಿ ಜೀವ ಬೆದರಿಕೆ ಸಂದೇಶ ಬಂದಿದೆ. ನಿನ್ನ ಸ್ನೇಹಿತನ ಕೈ ಕಾಲು ಕಡಿಯುತ್ತೇವೆ. ನಂತರ ತಲೆ ಕಡಿದು ದೆಹಲಿಯ ಮೈನ್ ಗೇಟ್​​ನಲ್ಲಿ ನೇತು ಹಾಕುತ್ತೇವೆ. ನಾವು ಹಿಂದೂ ಮುಖಂಡರ ಲಿಸ್ಟ್ ರೆಡಿ ಮಾಡಿದ್ದೇವೆ.

ಮಂಗಳೂರು: ಹಿಂದೂ ಜಾಗರಣ ವೇದಿಕೆ ಮುಖಂಡನಿಗೆ ಜೈಷ್ ಎ ಮೊಹಮ್ಮದ್ ಹೆಸರಿನಲ್ಲಿ ಬೆದರಿಕೆ ಸಂದೇಶ Read More »

ದಕ್ಷಿಣ ಕನ್ನಡ ಜಿಲ್ಲೆಗೆ ಎಸ್ಪಿಯಾಗಿ ಅರುಣ್‍ ಕುಮಾರ್ ಎಂಟ್ರಿ | ಪೊಲೀಸ್ ಕಮಿಷನರ್ ಆಗಿ ಸುಧೀರ್ ಕುಮಾರ್ ರೆಡ್ಡಿ

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಗೆ ಪವರ್ ಫುಲ್ ಐಪಿಎಸ್ ಅಧಿಕಾರಿಗಳು ಎಂಟ್ರಿ ಪಡೆದುಕೊಂಡಿದ್ದು,  ಈಗಿರುವ ಎಸ್ಪಿ ಯತೀಶ್ ಹಾಗೂ ಕಮೀಷನರ್ ಅಗರ್’ವಾಲ್ ವರ್ಗಾವಣೆಗೊಂಡಿದ್ದಾರೆ. 2017ರಲ್ಲಿ ದ .ಕ ಎಸ್ಪಿಯಾಗಿ ಸುಧೀರ್ ಕುಮಾರ್ ರೆಡ್ಡಿ ಮತ್ತೆ ಮಂಗಳೂರು ಕಮೀಷನರ್ ಆಗಿ ಬರುತ್ತಿದ್ದಾರೆ.  ಉಡುಪಿಯ ಎಸ್ಪಿಯಾಗಿರುವ ಅರುಣ್ ಕುಮಾರ್ ಅವರು ದ. ಕ ಎಸ್ಪಿಯಾಗಿ ವರ್ಗಾವಣೆಗೊಂಡಿದ್ದಾರೆ. ಸುಧೀರ್ ಕುಮಾರ್ ರೆಡ್ಡಿ. ದ.ಕ ಎಸ್ಪಿಯಾಗಿದ್ದ ಸಂದರ್ಭ ಅವರ ಕಾರ್ಯವೈಖರಿಯೇ ಇದಕ್ಕೆ ಕಾರಣ. ಹಲವು ಕಾರ್ಯಾಚರಣೆಗಳ ಮೂಲಕ ಮನೆಮಾತಾಗಿದ್ದರು. ದ.ಕ.ದಿಂದ ಬೆಳಗಾವಿಗೆ ಎಸ್ಪಿಯಾಗಿ ತೆರಳಿದ

ದಕ್ಷಿಣ ಕನ್ನಡ ಜಿಲ್ಲೆಗೆ ಎಸ್ಪಿಯಾಗಿ ಅರುಣ್‍ ಕುಮಾರ್ ಎಂಟ್ರಿ | ಪೊಲೀಸ್ ಕಮಿಷನರ್ ಆಗಿ ಸುಧೀರ್ ಕುಮಾರ್ ರೆಡ್ಡಿ Read More »

error: Content is protected !!
Scroll to Top