ದಕ್ಷಿಣ ಕನ್ನಡ

ದಕ್ಷಿಣ ಕನ್ನಡ ಉಸ್ತುವಾರಿ ಬೇಡ ಎಂದಿಲ್ಲ : ದಿನೇಶ್‌ ಗುಂಡೂರಾವ್‌

ಉಸ್ತುವಾರಿ ಹೊರೆಯಲ್ಲ, ಲಾಬಿ ನಡೆಯುತ್ತಿಲ್ಲ ಎಂದು ಸ್ಪಷ್ಟನೆ ಬೆಂಗಳೂರು: ನನಗೆ ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಬೇಡವೆಂದು ಹೇಳಿಲ್ಲ ಎಂದು ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದ್ದಾರೆ. ದಿನೇಶ್‌ ಗುಂಡೂರಾವ್‌ಗೆ ದಕ್ಷಿಣ ಕನ್ನಡದ ಉಸ್ತುವಾರಿ ಜವಾಬ್ದಾರಿ ಹೊರೆಯಾಗಿದೆ, ಹೀಗಾಗಿ ಅವರು ಉಸ್ತುವಾರಿ ಬದಲಾಯಿಸಲು ಮುಖ್ಯಮಂತ್ರಿಯನ್ನು ಕೋರಿದ್ದಾರೆ ಎಂಬ ಸುದ್ದಿ ಕಳೆದ ಕೆಲವು ದಿನಗಳಿಂದ ಹರಿದಾಡುತ್ತಿತ್ತು. ಇದಕ್ಕೆ ಬೆಂಗಳೂರಿನಲ್ಲಿ ಸ್ಪಷ್ಟನೆ ನೀಡಿದ ಅವರು, ನನ್ನ ವಿರುದ್ಧ ಸ್ಥಳೀಯ ಲಾಬಿ ಇಲ್ಲ. ಕೆಲವರು ಏನೋ ಹೇಳಬಹುದು, ಮೃತನ ಮನೆಗೆ ಹೋಗಿದ್ದೆ, ಅವನು […]

ದಕ್ಷಿಣ ಕನ್ನಡ ಉಸ್ತುವಾರಿ ಬೇಡ ಎಂದಿಲ್ಲ : ದಿನೇಶ್‌ ಗುಂಡೂರಾವ್‌ Read More »

ಕೃಷಿಕ ಮಹಾಬಲ ಶೆಟ್ಟಿ ಪಡ್ಡಾಯಿ ನಿಧನ

ಪುತ್ತೂರು: ಬಂಟ್ವಾಳ ತಾಲೂಕಿನ ಸರಪಾಡಿ ನಿವಾಸಿ ಮಹಾಬಲ ಶೆಟ್ಟಿ ಪಡ್ಡಾಯಿ ಇಂದು ಮುಂಜಾನೆ ನಿಧನರಾದರು. ಕೃಷಿಕರಾಗಿದ್ದ ಅವರು ಅಲ್ಪ ಕಾಲದ ಅಸೌಖ್ಯದಿಂದ ಇಂದು ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಮೃತರು ಪತ್ನಿ, ಮೂರು ಗಂಡು ಹಾಗೂ ನಾಲ್ವರು ಪುತ್ರಿಯರು, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.

ಕೃಷಿಕ ಮಹಾಬಲ ಶೆಟ್ಟಿ ಪಡ್ಡಾಯಿ ನಿಧನ Read More »

ಮಂಜನಾಡಿ ಭೂಕುಸಿತ ದುರಂತ : ಎರಡೂ ಕಾಲುಗಳನ್ನು ಕಳೆದುಕೊಂಡ ಮಹಿಳೆ

ಸ್ವಾಧೀನ ಕಳೆದುಕೊಂಡ ಕಾಲುಗಳನ್ನು ಶಸ್ತ್ರಚಿಕಿತ್ಸೆ ಮಾಡಿ ತೆಗೆದ ವೈದ್ಯರು ಮಂಗಳೂರು: ಉಳ್ಳಾಲದ ಮಂಜನಾಡಿ ಸಮೀಪ ಮೊಂಟೆಪದವು ಕೋಡಿಯಲ್ಲಿ ಮನೆ ಮೇಲೆ ಗುಡ್ಡ ಕುಸಿದು ಅಜ್ಜಿ ಮತ್ತು ಇಬ್ಬರು ಮೊಮ್ಮಕ್ಕಳು ಬಲಿಯಾದ ಘಟನೆಯಲ್ಲಿ ಬದುಕುಳಿದವರ ಬದುಕು ಇನ್ನಷ್ಟು ಯಾತನಾಮಯವಾಗಿದೆ. ಮಣ್ಣಿನಡಿ ಸಿಲುಕಿ ಮೃತಪಟ್ಟ ಇಬ್ಬರು ಮಕ್ಕಳು ಮತ್ತು ಹಿರಿಯ ಮಹಿಳೆಯ ಅಂತ್ಯಸಂಸ್ಕಾರವನ್ನು ಶನಿವಾರ ಕಣ್ಣೀರಕೋಡಿಯ ನಡುವೆಯೇ ಮಾಡಲಾಗಿದೆ. ಸರ್ವಧರ್ಮದವರು ಸೇರಿ ಅಂತ್ಯಕ್ರಿಯೆ ನೆರವೇರಿಸಿದ್ದು, ಈ ಸಂದರ್ಭದಲ್ಲಿ ಅಲ್ಲಿದ್ದ ಎಲ್ಲರೂ ಕಣ್ಣೀರು ಸುರಿಸಿದ್ದಾರೆ. ಘಟನೆಯಲ್ಲಿ ಮೃತಪಟ್ಟ ಮೂವರನ್ನು ಮನೆ ಕುಸಿದ

ಮಂಜನಾಡಿ ಭೂಕುಸಿತ ದುರಂತ : ಎರಡೂ ಕಾಲುಗಳನ್ನು ಕಳೆದುಕೊಂಡ ಮಹಿಳೆ Read More »

ಐದು ತಿಂಗಳ ಹಿಂದೆ ನಡೆದ ಹಲ್ಲೆಯ ಕುರಿತು ದೂರು

ಬೈಕಿನಲ್ಲಿ ಹೋಗುವಾಗ ಕಲ್ಲಿನಿಂದ ದಾಳಿ ಮಾಡಿದ ಆರೋಪ ಬಂಟ್ವಾಳ : ಐದು ತಿಂಗಳ ಹಿಂದೆ ಕಲ್ಲಿನಿಂದ ದಾಳಿ ಮಾಡಿದ್ದಾರೆ ಎಂದು ಬಂಟ್ವಾಳ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಗ್ರಾಮದ ಕೊಲತ್ತಮಜಲು ಎಂಬಲ್ಲಿ ಯುವಕನೊಬ್ಬ ಕಲ್ಲು ತೂರಾಟದಿಂದ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಡಿಸೆಂಬರ್ 29, 2024ರಂದು ನಡೆದ ಘಟನೆಯ ಬಗ್ಗೆ ಬಂಟ್ವಾಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಬಡಗಬೆಳ್ಳೂರು ನಿವಾಸಿ ಶಮೀರ್ (31) ಎಂಬ ಯುವಕ ದೂರು ನೀಡಿದ್ದು, ತೇಜಾಕ್ಷ

ಐದು ತಿಂಗಳ ಹಿಂದೆ ನಡೆದ ಹಲ್ಲೆಯ ಕುರಿತು ದೂರು Read More »

ಹರಿನಗರದಲ್ಲಿ ಧರೆಕುಸಿತ | ಮಾಜಿ ಶಾಸಕ ಸಂಜೀವ ಮಠಂದೂರು ಭೇಟಿ

ಉಪ್ಪಿನಂಗಡಿಯ ಹರಿನಗರ ಎಂಬಲ್ಲಿ ಧರೆಕುಸಿದ ಘಟನೆ ನಡೆದಿದೆ. ಧರೆಕುಸಿದ ಪರಿಣಾಮ ೨೦ಕ್ಕು ಹೆಚ್ಚು ಮನೆಗಳಿಗೆ ಹಾನಿಯುಂಟಾಗಿದೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಮಾಜಿ ಶಾಸಕ ಸಂಜೀವ ಮಠಂದೂರು ಭೇಟಿ ನೀಡಿ ಪರಿಶೀಲಿಸಿದ್ದಲ್ಲದೆ, ಅಧಿಕಾರಿಗಳನ್ನು ತಕ್ಷಣ ಘಟನಾ ಸ್ಥಳಕ್ಕೆ ಬರಲು ಸೂಚನೆ ನೀಡಿದ್ದಾರೆ.

ಹರಿನಗರದಲ್ಲಿ ಧರೆಕುಸಿತ | ಮಾಜಿ ಶಾಸಕ ಸಂಜೀವ ಮಠಂದೂರು ಭೇಟಿ Read More »

ಪತ್ರಿಕಾ ವಿತರಕ ಜಗದೀಶ್ ಭಟ್ ನಿಧನ

ವಿಟ್ಲ: ಕಳೆದ 50 ವರ್ಷಗಳಿಂದ ದಿನಪತ್ರಿಕೆ ಮಾರಾಟ ಮಾಡುತ್ತಿದ್ದ ಜಗದೀಶ್ ಭಟ್ (86) ನಿಧನರಾಗಿದ್ದಾರೆ. ವಿಟ್ಲ ಪರಿಸರದಲ್ಲಿ ಪೇಪ‌ರ್ ಭಟ್ರು ಎಂದೇ ಹೆಸರುವಾಸಿಯಾಗಿದ್ದ ಜಗದೀಶ್‌ ಭಟ್‌ ರವರು ಮೊದಲು ಗಣೇಶ್ ಬೀಡಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರು.  ಅವರು ಬಳಿಕ ಪತ್ರಿಕಾ ವಿತರಕರಾಗಿ ಸೇವೆಯನ್ನು ಸಲ್ಲಿಸುತ್ತಿದ್ದರು. ವಿಟ್ಲ ಜಾತ್ರಾ ಸಂದರ್ಭ ದೇವಸ್ಥಾನದ ಆನೆ ಬಾಗಿಲು ಸಮೀಪ ಸೂಜಿ ವ್ಯಾಪಾರ ಮಾಡಿ ಜನರ ಪ್ರೀತಿ ಪಾತ್ರರಾಗಿದ್ದರು. ಮೃತರು ಪತ್ನಿ ಹಾಗು ಮೂವರು ಪುತ್ರರು, ಪುತ್ರಿ, ಮೊಮ್ಮಕ್ಕಳನ್ನು ಅಗಲಿದ್ದಾರೆ.

ಪತ್ರಿಕಾ ವಿತರಕ ಜಗದೀಶ್ ಭಟ್ ನಿಧನ Read More »

ಮೊಂಟೆಪದವು ಗುಡ್ಡಕುಸಿತಕ್ಕೆ ನಿರ್ಲಕ್ಷ್ಯ ಕಾರಣ : ಪಿಡಿಒ, ಕೆಆರ್​ಡಿಐಎಲ್ ಅಧಿಕಾರಿಗಳ ವಿರುದ್ಧ ದೂರು

ಮೂವರು ಸಾವನ್ನಪ್ಪಿದ ದಾರುಣ ಘಟನೆ ಮಂಗಳೂರು : ಮಂಜನಾಡಿಯ ಮೊಂಟೆಪದವಿನಲ್ಲಿ ಶುಕ್ರವಾರ ನಸುಕಿನ ಹೊತ್ತು ಗುಡ್ಡಕುಸಿತವಾಗಲು ಗುಡ್ಡದ ಮೇಲೆ ನಡೆಸಿರುವ ಅವೈಜ್ಞಾನಿಕ ರಸ್ತೆ ನಿರ್ಮಾಣ ಕಾಮಗಾರಿ ಕಾರಣವೆಂಬ ಆರೋಪ ಕೇಳಿಬಂದಿದ್ದು, ಈ ಕುರಿತಾಗಿ ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ದುರ್ಘಟನೆಯಲ್ಲಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ. ಗುಡ್ಡಕುಸಿತಕ್ಕೆ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಅವೈಜ್ಞಾನಿಕ ಕಾಮಗಾರಿ ಕಾರಣ ಎಂದು ಗಾಯಾಳು ಅಶ್ವಿನಿ ಸಹೋದರ ತೇಜು ಕುಮಾರ್ ಆರೋಪಿಸಿದ್ದಾರೆ.ಈ ಕುರಿತಾಗಿ ಕೊಣಾಜೆ ಪೊಲೀಸ್

ಮೊಂಟೆಪದವು ಗುಡ್ಡಕುಸಿತಕ್ಕೆ ನಿರ್ಲಕ್ಷ್ಯ ಕಾರಣ : ಪಿಡಿಒ, ಕೆಆರ್​ಡಿಐಎಲ್ ಅಧಿಕಾರಿಗಳ ವಿರುದ್ಧ ದೂರು Read More »

ಗೌರಿ ಹೊಳೆ ಮುಳುಗಡೆ | ಸವಣೂರು ಸಂಪರ್ಕ ಕಡಿತ

ಪುತ್ತೂರು:  ಭಾರೀ ಮಳೆಯಿಂದಾಗಿ ಗೌರಿ ಹೊಳೆ ತುಂಬಿ ಹರಿಯುತ್ತಿದ್ದು ಸರ್ವೆ ಸೇತುವೆ ಸಂಪೂರ್ಣ ಮುಳುಗಡೆ ಹೊಂದಿದೆ. ಸರ್ವೆ ಸೇತುವೆ ಸಂಪೂರ್ಣ ಮುಳುಗಡೆಯಾದ  ಪರಿಣಾಮ ಸವಣೂರು ಸಂಪರ್ಕ ಸಂಪೂರ್ಣ ಕಡಿತ ಗೊಂಡಿದೆ. ಸಂಪರ್ಕ ಕಡಿತಗೊಂಡ ಹಿನ್ನಲೆಯಲ್ಲಿ ವಾಹನ ಸವಾರರು ಪರದಾಡುವಂತಾಯಿತು. ಗೌರಿ ಹೊಳೆ ತುಂಬಿ ಸೇತುವೆ ಮುಳುಗಡೆಯಾಗಿ ಅಪಾಯ ಪರಿಸ್ಥಿತಿ ಉಂಟಾದರೂ ಸ್ಥಳಕ್ಕೆ ಪೊಲೀಸರು ಬರಲಿಲ್ಲ. ಮುಳುಗಡೆಯಾದ ಸ್ಥಳಕ್ಕೆ ಭಾರೀ ಸಂಖ್ಯೆಯಲ್ಲಿ ಜನ ಆಗಮಿಸಿದ್ದರು.

ಗೌರಿ ಹೊಳೆ ಮುಳುಗಡೆ | ಸವಣೂರು ಸಂಪರ್ಕ ಕಡಿತ Read More »

ಅಬ್ದುಲ್‌ ರಹಿಮಾನ್‌ ಕೊಲೆ ಪ್ರಕರಣ : ಮತ್ತಿಬ್ಬರು ಪೊಲೀಸರ ವಶಕ್ಕೆ

ಬಂಟ್ವಾಳ: ಇಲ್ಲಿನ ಗ್ರಾಮಾಂತರ ಠಾಣಾ ವ್ಯಾಪ್ತಿಯ ಕುರಿಯಾಳ ಗ್ರಾಮದ ಇರಾಕೋಡಿ ಎಂಬಲ್ಲಿ ಮೇ 27ರಂದು ನಡೆದ ಅಬ್ದುಲ್ ರಹಿಮಾನ್ ಕೊಲೆ ಮತ್ತು ಕಲಂದರ್ ಶಾಫಿ ಎಂಬವರ ಮೇಲೆ ನಡೆದ ಗಂಭೀರ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಮತ್ತೆ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಮೊದಲು ಮೂವರು ಆರೋಪಿಗಳನ್ನು ಬಂಧಿಸಲಾಗಿತ್ತು. ಬಂಟ್ವಾಳದ ತೆಂಕಬೆಳ್ಳೂರು ಗ್ರಾಮದ ಸುಮಿತ್ ಆಚಾರ್ಯ (27) ಹಾಗೂ ಬಂಟ್ವಾಳದ ಬಡಗಬೆಳ್ಳೂರು ಗ್ರಾಮದ ರವಿರಾಜ್ (23) ಎಂಬುವವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಈಗಾಗಲೇ

ಅಬ್ದುಲ್‌ ರಹಿಮಾನ್‌ ಕೊಲೆ ಪ್ರಕರಣ : ಮತ್ತಿಬ್ಬರು ಪೊಲೀಸರ ವಶಕ್ಕೆ Read More »

ಮನೆ ಮೇಲೆ ಕುಸಿದ ಗುಡ್ಡ | ಮೂವರು ಬಲಿ, ನಾಲ್ವರ ರಕ್ಷಣೆ

ಮಂಗಳೂರು : ಈ ಭಾರಿಯ ವರ್ಷಧಾರೆ ನಿರೀಕ್ಷೆಕ್ಕಿಂತಲೂ ಸುರಿಯುತ್ತಿದ್ದು, ಮಳೆಯಿಂದಾಗಿ ಎಲ್ಲೆಡೆ ಅವಘಡಗಳು ಸಂಭವಿಸಿದೆ. ಇದಿಗ ಅಂತದ್ದೇ ಹೃದಯವಿದ್ರಕವಾದ ಘಟನೆ ಮಂಗಳೂರಿನ ಉಳ್ಳಾಲದಲ್ಲಿ ನಡೆದಿದೆ. ಹೌದು ಮಂಗಳೂರು  ಉಳ್ಳಾಲದಲ್ಲಿ ಭೂ ಕುಸಿತಕ್ಕೆ ಸಿಲುಕಿ ಮನೆಯಲ್ಲಿ ಮಲಗಿದ್ದ 3 ಜನರ ಪೈಕಿ ಮೂವರು ಸಾವನ್ನಪ್ಪಿದ್ದಾರೆ. ಆದರೆ, ಮನೆ ಕುಸಿತವಾದಾಗ ತನ್ನ ಪ್ರಾಣ ಹೋದರೂ ಸರಿ ಮಕ್ಕಳನ್ನು ಉಳಿಸೋಣವೆಂದು ಗೋಡೆಯ ಭಾರ ತಾನು ತಡೆದುಕೊಂಡು ಮಕ್ಕಳನ್ನು ಉಳಿಸಿದ್ದಳು. ಗೋಡೆಯ ಭಾರಕ್ಕೆ ದೇಹ ಜರ್ಜಿರಿತವಾಗಿ ಪ್ರಜ್ಞೆ ಕಳೆದುಕೊಂಡಿದ್ದಳು. ಗೋಡೆ ಬಿದ್ದ ಕ್ಷಣದಲ್ಲಿ

ಮನೆ ಮೇಲೆ ಕುಸಿದ ಗುಡ್ಡ | ಮೂವರು ಬಲಿ, ನಾಲ್ವರ ರಕ್ಷಣೆ Read More »

error: Content is protected !!
Scroll to Top