ದಕ್ಷಿಣ ಕನ್ನಡ

ಹಿಂದೂಗಳ ಧ್ವನಿ ಅಡಗಿಸಲು ಹೊರಟಿದೆ ಹಿಂದೂ ದ್ವೇಷಿ ಕಾಂಗ್ರೆಸ್ ಸರ್ಕಾರ : ಆರ್‌. ಅಶೋಕ್‌

ಕಲ್ಲಡ್ಕ ಪ್ರಭಾಕರ ಭಟ್‌ ವಿರುದ್ಧ ಎಫ್‌ಐಆರ್‌ ದಾಖಲಿಸಿರುವುದಕ್ಕೆ ಆಕ್ರೋಶ ಬೆಂಗಳೂರು: ಪ್ರಚೋದನಕಾರಿ ಹೇಳಿಕೆ ನೀಡಿರುವ ಆರೋಪದ ಮೇಲೆ ಆರ್​ಎಸ್​ಎಸ್​ ಮುಖಂಡ ಡಾ.ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಎಫ್ಐಆರ್ ದಾಖಲಿಸಿರುವ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ತೀವ್ರವಾಗಿ ಕಿಡಿಕಾರಿದೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಹಿಂದೂಗಳ ಧ್ವನಿ ಅಡಗಿಸಲು ಹೊರಟಿದೆ ಹಿಂದೂ ದ್ವೇಷಿ ಕಾಂಗ್ರೆಸ್ ಸರ್ಕಾರ ಎಂದು ವಾಗ್ದಾಳಿ ನಡೆಸಿದ್ದಾರೆ. ಸರ್ಕಾರಕ್ಕೆ ಸರಣಿ ಪ್ರಶ್ನೆ ಮಾಡಿರುವ ಅವರು, […]

ಹಿಂದೂಗಳ ಧ್ವನಿ ಅಡಗಿಸಲು ಹೊರಟಿದೆ ಹಿಂದೂ ದ್ವೇಷಿ ಕಾಂಗ್ರೆಸ್ ಸರ್ಕಾರ : ಆರ್‌. ಅಶೋಕ್‌ Read More »

ಹಿಂದೂ ನಾಯಕರನ್ನು ದಮನಿಸಲು ಕಾಂಗ್ರೆಸ್ ಸರ್ಕಾರ ಷಡ್ಯಂತ್ರ : ನಳಿನ್‌ ಕುಮಾರ್ ಕಟೀಲ್

ಮಂಗಳೂರು : ಮತಾಂಧರಿಂದ ಹತ್ಯೆಯಾದ ಹಿಂದೂ ನಾಯಕ ಸುಹಾಸ್ ಶೆಟ್ಟಿ ಅವರ ಶ್ರದ್ಧಾಂಜಲಿ ಸಭೆಯಲ್ಲಿ ನುಡಿ ನಮನ ಸಲ್ಲಿಸಿದ  ಆರ್‌ ಎಸ್‌ ಎಸ್ ಮುಖಂಡ ಡಾ.ಪ್ರಭಾಕರ ಭಟ್ ಎಫ್‌ಐಆರ್ ದಾಖಲಿಸಿರುವುದು ಖಂಡನೀಯ.  ಕಾಂಗ್ರೆಸ್ ಸರ್ಕಾರ ಹಿಂದೂಗಳ ಧ್ವನಿ ಅಡಗಿಸಲು ಷಡ್ಯಂತ್ರ ನಡೆಸಿದ್ದು ಇದರ ವಿರುದ್ಧ ಹೋರಾಟ ಅನಿವಾರ್ಯವಾಗಲಿದೆ ಎಂದು ಮಾಜಿ ಸಂಸದ ನಳಿನ್‌ಕುಮಾರ್ ಕಟೀಲ್ ಹೇಳಿದ್ದಾರೆ. ಮುಸ್ಲಿಂ ಸಮುದಾಯವನ್ನು ಓಲೈಸಲು ಸರ್ಕಾರ ಪೊಲೀಸ್ ಇಲಾಖೆಯನ್ನು ದುರ್ಬಳಕೆ ಮಾಡುತ್ತಿದೆ. ಅರುಣ್ ಪುತ್ತಿಲ ಅವರಿಗೆ ವಿನಾ ಕಾರಣ ಗಡಿಪಾರು ನೊಟೀಸ್

ಹಿಂದೂ ನಾಯಕರನ್ನು ದಮನಿಸಲು ಕಾಂಗ್ರೆಸ್ ಸರ್ಕಾರ ಷಡ್ಯಂತ್ರ : ನಳಿನ್‌ ಕುಮಾರ್ ಕಟೀಲ್ Read More »

ಕಡಬ: ಕೊಯಿಲ ಕೆಸಿ ಫಾರ್ಮ್‌ ಸರಕಾರಿ ಶಾಲೆಯಲ್ಲಿ ಎಲ್ಕೆಜಿ ಪ್ರಾರಂಭೋತ್ಸವ

ಕಡಬ: (ಜೂ. 1); ಶಾಲಾ ಅಭಿವೃದ್ಧಿಯನ್ನು ಶಾಲಾ ಹಳೆ ವಿದ್ಯಾರ್ಥಿಗಳ ಸಹಕಾರದಿಂದ ಮಾಡಬೇಕು ಎಂದು ಶಾಲಾಭಿವೃದ್ಧಿ ಅಧ್ಯಕ್ಷ ವಿಶ್ವಾನಾಥ ಪುತ್ಯೆ ಹೇಳಿದರು. ಅವರು ಕೊಯಿಲ ಕೆಸಿ ಫ್ರಾಮ್ ಸರಕಾರಿ ಶಾಲೆಯಲ್ಲಿ ಎಲ್ ಕೆಜಿ ಪ್ರಾರಂಭ ಉತ್ಸವದಲ್ಲಿ ಮಾತನಾಡಿದರು. ಈ ಸಂದರ್ಭದಲ್ಲಿ Lkg, ukg ಪ್ರಾರಂಭದ ಕುರಿತಾಗಿ ಮುಖ್ಯ ಶಿಕ್ಷಕಿ ಸುಜಾತ ಎಂ. ಮಾಹಿತಿ ನೀಡಿದರು. ಕಾರ್ಯಕ್ರಮವನ್ನು ಶಿಕ್ಷಕಿ ಅನುಪಮಾ ಕಾರ್ಯಕ್ರಮ ನಿರೂಪಿಸಿ, ಶಿಕ್ಷಕ ಲಂಕೇಶ್ ಬದಲಾವಣೆಯ ಶಿಕ್ಷಣ ಭವಿಷ್ಯದ ನಿರ್ಮಾಣ ಎಂಬ ಧ್ಯೇಯ ವಾಕ್ಯವನ್ನು ವಿದ್ಯಾರ್ಥಿಗಳಿಗೆ ಹೇಳುತ್ತಾ

ಕಡಬ: ಕೊಯಿಲ ಕೆಸಿ ಫಾರ್ಮ್‌ ಸರಕಾರಿ ಶಾಲೆಯಲ್ಲಿ ಎಲ್ಕೆಜಿ ಪ್ರಾರಂಭೋತ್ಸವ Read More »

ಕುತ್ಯಾರು ಸೂರ್ಯ ಚೈತನ್ಯ ಹೈಸ್ಕೂಲ್‌ನಲ್ಲಿ ಶಾಲಾ ಆರಂಭೋತ್ಸವ

ಆನೆಗುಂದಿ ಶ್ರೀ ಸರಸ್ವತಿ ಪೀಠ ಕುತ್ಯಾರು ಸೂರ್ಯಚೈತನ್ಯ ಸಂಸ್ಥೆಯಲ್ಲಿ ಶಾಲಾ ಆರಂಭೋತ್ಸವವು ನೂತನವಾಗಿ ದಾಖಲಾದ ವಿದ್ಯಾರ್ಥಿಗಳ, ಪೋಷಕರ ಮತ್ತು ಆಡಳಿತ ಮಂಡಳಿಯ ಪದಾಧಿಕಾರಿಗಳ ಜಾಥದೊಂದಿಗೆ ಆರಂಭವಾಯಿತು. ಆಡಳಿತ ಮಂಡಳಿ ಅಸ್ಸೆಟ್ ಗೌರವಾಧ್ಯಕ್ಷರಾದ ಮೋಹನ್ ಕುಮಾರ್ ಬೆಳ್ಳೂರು ಮತ್ತು ಅಧ್ಯಕ್ಷರಾದ ಸೂರ್ಯಕುಮಾರ ಹಳೆಯಂಗಡಿ ಜಾಥಕ್ಕೆ ಚಾಲನೆ ನೀಡಿದರು. ಶಾಲಾ ಅವರಣದಲ್ಲಿ ವಿದ್ಯಾರ್ಥಿಗಳನ್ನು ಆರತಿ ಮಾಡಿ ಪುಷ್ಪವೃಷ್ಠಿಯೊಂದಿಗೆ ಶ್ರೀ ಸರಸ್ವತಿ ಪೀಠ ಮಾತೃ ಮಂಡಳಿ ಅಧ್ಯಕ್ಷ ಸಂಧ್ಯಾ ಲಕ್ಷ್ಮಣ ಆಚಾರ್ಯ, ಉಷಾ ಸುಬ್ರಮಣ್ಯ, ಆಶಾ ನಾಗರಾಜ್, ಪ್ರಶಾಂತಿ ರಾಘವೇಂದ್ರ ಆಚಾರ್ಯ

ಕುತ್ಯಾರು ಸೂರ್ಯ ಚೈತನ್ಯ ಹೈಸ್ಕೂಲ್‌ನಲ್ಲಿ ಶಾಲಾ ಆರಂಭೋತ್ಸವ Read More »

ನಳಿಲು ಸಂತೋಷ್ ಕುಮಾರ್ ರೈಯವರಿಗೆ ಸನ್ಮಾನ

ಬಾರ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನಕ್ಕೆ ಭದ್ರತಾ ಕೋಶವನ್ನು ಸೇವಾ ರೂಪದಲ್ಲಿ ಅರ್ಪಿಸಲು ದೊರೆತ ಅವಕಾಶ ನನ್ನ ಭಾಗ್ಯವೆಂದು  ನಳಿಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಸಂತೋಷ ಕುಮಾರ್ ರೈ ತಿಳಿಸಿ ದೇವಾಲಯದ ಭಕ್ತರ ಸಹಕಾರದಿಂದ ಇನ್ನಷ್ಟು ಕೊಡುಗೆಗಳು ಕ್ಷೇತ್ರಕ್ಕೆ ಒದಗಿ ಬರಲಿಯೆಂದು ಹಾರೈಸಿದರು. ಶ್ರೀ ನಳಿಲು ಕ್ಷೇತ್ರದಲ್ಲಿ    ಬಾರ್ಯ ದೇವಾಲಯದ ಆಡಳಿತ ಸೇವಾ ಟ್ರಸ್ಟ್ ವತಿಯಿಂದ  ಅವರನ್ನು ಈ ಕೊಡುಗೆಗಾಗಿ ಸನ್ಮಾನಿಸಿದ ಸಂದರ್ಭದಲ್ಲಿ ಅವರು ಮಾತನಾಡಿದರು.   ಟ್ರಸ್ಟ್ ಅಧ್ಯಕ್ಷ  ಭಾಸ್ಕರ ಬಾರ್ಯ ಪುತ್ತೂರು ಮತ್ತು ಶ್ರೀ

ನಳಿಲು ಸಂತೋಷ್ ಕುಮಾರ್ ರೈಯವರಿಗೆ ಸನ್ಮಾನ Read More »

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ  ಯೋಜನೆ ಬಿ.ಸಿ ಟ್ರಸ್ಟ್  (ರಿ ) ವಿಟ್ಲ ತಾಲೂಕಿನ  ಅಳಿಕೆ ವಲಯದ   ಕಣ್ಣಿನ ತಪಾಸಣಾ ಶಿಬಿರ

ವಿಟ್ಲ :  ತಾಲೂಕಿನ  ಅಳಿಕೆ ವಲಯದ   ನಿರ್ಕಜೆ   ಕಾರ್ಯ ಕ್ಷೇತ್ರದಲ್ಲಿ  ಉಚಿತ ಕಣ್ಣಿನ ತಪಾಸಣಾ ಶಿಬಿರ ಕಾರ್ಯಕ್ರಮ ನಡೆಯಿತು. ಅಳಿಕೆ ಒಕ್ಕೂಟದ   ನಿಕಟ ಪೂರ್ವ ಅಧ್ಯಕ್ಷರಾದ ಬಾಲಕೃಷ್ಣ ಪೂಜಾರಿಯವರ ನೇತೃತ್ವದಲ್ಲಿ  ವಲಯ ಮಟ್ಟದಲ್ಲಿ  ಆಯೋಜನೆ  ಮಾಡಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೇಪು ಪಂಚಾಯತ್ ಅಧ್ಯಕ್ಷರು ರಾಘವ ಸಾರಡ್ಕ  ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು   ದಕ್ಷಿಣ ಕನ್ನಡ- 2 ಜಿಲ್ಲಾ ನಿರ್ದೇಶಕರಾದ  ಬಾಬು ನಾಯ್ಕ್  ನೆರವೇರಿಸಿದರು.  ಕಾರ್ಯಕ್ರಮದಲ್ಲಿ  ಗೋಕುಲ ದಾಸ್ ಭಕ್ತ, ಸತ್ಯನಾರಾಯಣ ಭಟ್, ಡಾ. ಶಾಂತರಾಜ್, ಡಾ. ಅಶ್ವಿನಿ ಸಾಗರ್,

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ  ಯೋಜನೆ ಬಿ.ಸಿ ಟ್ರಸ್ಟ್  (ರಿ ) ವಿಟ್ಲ ತಾಲೂಕಿನ  ಅಳಿಕೆ ವಲಯದ   ಕಣ್ಣಿನ ತಪಾಸಣಾ ಶಿಬಿರ Read More »

ತರಕಾರಿ ಸಾಗುಸುತ್ತಿದ್ದ ಪಿಕಪ್‌ ಪಲ್ಟಿ : ಚಾಲಕ ಗಂಭೀರ

ಚಿಕ್ಕಮಗಳೂರು : ಮಂಜು ಕವಿದರಿಂದ ಚಾಲಕನ ನಿಯಂತ್ರಣ ತಪ್ಪಿ ಪಿಕಪ್ ವಾಹನ ಪಲ್ಟಿಯಾಗಿರುವ ಚಾರ್ಮಾಡಿ ಘಾಟಿಯ ಮಲೆಯಮಾರುತ ಬಳಿ, ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಚಿಕ್ಕಮಗಳೂರಿನಿಂದ ಮಂಗಳೂರಿಗೆ ತರಕಾರಿ ಸಾಗಿಸುತ್ತಿದ್ದ ವಾಹನದ ಚಾಲಕನಿಗೆ ಗಂಭೀರ ಗಾಯಗಳಾಗಿದ್ದು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಘಾಟಿಯಲ್ಲಿ ಕಾಣದ ಮಟ್ಟಿಗೆ ಮಂಜು ಅವರಿಸಿಕೊಂಡಿದ್ದ ಹಿನ್ನೆಲೆಯಲ್ಲಿ ರಸ್ತೆ ಸ್ಪಷ್ಟವಾಗಿ ಕಾಣದೆ ಈ ಅನಾಹುತ ಸಂಭವಿಸಿದೆ ಎಂದು ತಿಳಿದುಬಂದಿದೆ.

ತರಕಾರಿ ಸಾಗುಸುತ್ತಿದ್ದ ಪಿಕಪ್‌ ಪಲ್ಟಿ : ಚಾಲಕ ಗಂಭೀರ Read More »

ಮಂಗಳೂರು : ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿ ಅವಘಡ

ಮಂಗಳೂರು: ನಗರದ ಅಪಾರ್ಟ್‌ಮೆಂಟ್‌ ಒಂದರಲ್ಲಿ ಸೋಮವಾರ ಮುಂಜಾನೆ ಸಂಭವಿಸಿದ ಬೆಂಕಿ ಅವಘಡದಲ್ಲಿ ಅಪಾರ ಸೊತ್ತುಗಳು ಸುಟ್ಟು ಕರಕಲಾಗಿವೆ. ಸ್ಟೇಟ್‌ಬ್ಯಾಂಕ್‌ನ ರಾವ್‌ ಆಂಡ್‌ ರಾವ್‌ ಸರ್ಕಲ್‌ ಬಳಿ ಇರುವ ಅಪಾರ್ಟ್‌ಮೆಂಟ್‌ನ ಎರಡನೇ ಮಹಡಿಯಲ್ಲಿರುವ ಮನೆಯಲ್ಲಿ ಶಾರ್ಟ್‌ ಸರ್ಕ್ಯೂಟ್‌ನಿಂದ ಬೆಂಕಿ ಅವಘಡ ಸಂಭವಿಸಿದೆ. ಪಾಂಡೇಶ್ವರ ಅಗ್ನಿಶಾಮಕ ಪಡೆಯವರು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ. ಮನೆಯಲ್ಲಿದ್ದ ಸೋಫಾ, ಇಲೆಕ್ಟ್ರಾನಿಕ್‌ ಉಪಕರಣಗಳು ಮತ್ತಿತರ ವಸ್ತುಗಳು ಬೆಂಕಿಗಾಹುತಿಯಾಗಿವೆ. ಈ ಮನೆಯಲ್ಲಿ ವಿದ್ಯಾರ್ಥಿಗಳು ಬಾಡಿಗೆಗೆ ಇದ್ದರು. ಹೀಟರ್‌ನಿಂದಾಗಿ ಶಾರ್ಟ್‌ ಸರ್ಕ್ಯೂಟ್‌ ಆಗಿದೆ ಎನ್ನಲಾಗಿದೆ. ಯಾವುದೆ ಸಾವುನೋವು

ಮಂಗಳೂರು : ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿ ಅವಘಡ Read More »

ಮಂಗಳೂರು : ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿ ಅವಘಡ

ಮಂಗಳೂರು: ನಗರದ ಅಪಾರ್ಟ್‌ಮೆಂಟ್‌ ಒಂದರಲ್ಲಿ ಸೋಮವಾರ ಮುಂಜಾನೆ ಸಂಭವಿಸಿದ ಬೆಂಕಿ ಅವಘಡದಲ್ಲಿ ಅಪಾರ ಸೊತ್ತುಗಳು ಸುಟ್ಟು ಕರಕಲಾಗಿವೆ. ಸ್ಟೇಟ್‌ಬ್ಯಾಂಕ್‌ನ ರಾವ್‌ ಆಂಡ್‌ ರಾವ್‌ ಸರ್ಕಲ್‌ ಬಳಿ ಇರುವ ಅಪಾರ್ಟ್‌ಮೆಂಟ್‌ನ ಎರಡನೇ ಮಹಡಿಯಲ್ಲಿರುವ ಮನೆಯಲ್ಲಿ ಶಾರ್ಟ್‌ ಸರ್ಕ್ಯೂಟ್‌ನಿಂದ ಬೆಂಕಿ ಅವಘಡ ಸಂಭವಿಸಿದೆ. ಪಾಂಡೇಶ್ವರ ಅಗ್ನಿಶಾಮಕ ಪಡೆಯವರು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ. ಮನೆಯಲ್ಲಿದ್ದ ಸೋಫಾ, ಇಲೆಕ್ಟ್ರಾನಿಕ್‌ ಉಪಕರಣಗಳು ಮತ್ತಿತರ ವಸ್ತುಗಳು ಬೆಂಕಿಗಾಹುತಿಯಾಗಿವೆ. ಈ ಮನೆಯಲ್ಲಿ ವಿದ್ಯಾರ್ಥಿಗಳು ಬಾಡಿಗೆಗೆ ಇದ್ದರು. ಹೀಟರ್‌ನಿಂದಾಗಿ ಶಾರ್ಟ್‌ ಸರ್ಕ್ಯೂಟ್‌ ಆಗಿದೆ ಎನ್ನಲಾಗಿದೆ. ಯಾವುದೆ ಸಾವುನೋವು

ಮಂಗಳೂರು : ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿ ಅವಘಡ Read More »

ಕೋಮು ಪ್ರಚೋದನಕಾರಿ ಭಾಷಣ : ಡಾ.ಕಲ್ಲಡ್ಕ ಪ್ರಭಾಕರ ಭಟ್‍ ವಿರುದ್ಧ ಪ್ರಕರಣ ದಾಖಲು

ಬಂಟ್ವಾಳ: ಮಂಗಳೂರಿನಲ್ಲಿ ಇತ್ತೀಚೆಗೆ ಕೊಲೆಯಾದ ಯುವಕನ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಸಮಾಜದ ಸ್ವಾಸ್ಥ್ಯ ಕದಡುವ ಮತ್ತು ಕೋಮು ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಕಲ್ಲಡ್ಕ ಪ್ರಭಾಕರ್ ಭಟ್ ಅವರ ವಿರುದ್ಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಟ್ವಾಳ ತಾಲೂಕಿನ ಕಾವಳಪಡೂರು ಗ್ರಾಮದ ಮಧ್ಯ ಪ್ಯಾಲೇಸ್ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಕಲ್ಲಡ್ಕ ಪ್ರಭಾಕ‌ರ್ ಭಟ್ ಅವರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಅಲ್ಲಿ ನೆರೆದಿದ್ದ ಸುಮಾರು 300 ಜನರನ್ನು ಉದ್ದೇಶಿಸಿ ಅವರು ಮಾತನಾಡಿ.

ಕೋಮು ಪ್ರಚೋದನಕಾರಿ ಭಾಷಣ : ಡಾ.ಕಲ್ಲಡ್ಕ ಪ್ರಭಾಕರ ಭಟ್‍ ವಿರುದ್ಧ ಪ್ರಕರಣ ದಾಖಲು Read More »

error: Content is protected !!
Scroll to Top