ಅಪರಾಧ

ಮಲ್ಪೆಯ ಮೀನುಗಾರಿಕೆ ದೋಣಿ ಕಾರವಾರದಲ್ಲಿ ಮುಳುಗಡೆ

ಉಡುಪಿ: ಮೀನುಗಾರಿಕೆಗೆ ತೆರಳಿದ್ದ ಮಲ್ಪೆಯ ದೋಣಿ ಕಾರವಾರ ಸಮೀಪ ಮುಳುಗಿ ಅಪಾರ ನಷ್ಟ ಉಂಟಾಗಿದೆ. ಮಲ್ಪೆಯ ಸೀ ಹಂಟರ್ ಹೆಸರಿನ ದೋಣಿಯ ತಳಭಾಗದ ಕಬ್ಬಿಣದ ವೆಲ್ಡಿಂಗ್ ಬಿಟ್ಟುಹೋದ ಪರಿಣಾಮ ನೀರು ತುಂಬಿಕೊಂಡು ಮುಳುಗಿದೆ. ಬೋಟ್‌ನಲ್ಲಿದ್ದ 8 ಮೀನುಗಾರರನ್ನು ಸ್ಥಳೀಯ ಮೀನುಗಾರರು ರಕ್ಷಣೆ ಮಾಡಿದ್ದಾರೆ. ಮಲ್ಪೆಯಿಂದ ಮಹಾರಾಷ್ಟ್ರದ ಕಡೆ ಈ ಬೋಟ್ ಚಲಿಸುತಿತ್ತು. ಕಾರವಾರದಿಂದ 9 ನಾಟಿಕನ್ ಮೈಲು ದೂರದ ಲೈಟ್‌ಹೌಸ್ ಬಳಿ ಬೋಟ್ ತಳಭಾಗದ ಕಬ್ಬಿಣದ ಭಾಗದಲ್ಲಿ ವೆಲ್ಡಿಂಗ್ ಬಿಟ್ಟುಹೋಗಿದೆ. ವೆಲ್ಡಿಂಗ್ ಬಿಟ್ಟುಹೋದ ಪರಿಣಾಮ ಬೋಟ್ ಇಂಜಿನ್ […]

ಮಲ್ಪೆಯ ಮೀನುಗಾರಿಕೆ ದೋಣಿ ಕಾರವಾರದಲ್ಲಿ ಮುಳುಗಡೆ Read More »

ದುಷ್ಕರ್ಮಿಗಳಿಂದ ಕೆಎಸ್‍ ಆರ್ ಟಿಸಿ ಬಸ್ ಚಾಲಕ-ನಿರ್ವಾಹಕರಿಗೆ ಹಲ್ಲೆ | ದುಷ್ಕರ್ಮಿಗಳನ್ನು ಬಂಧಿಸುವಂತೆ ಪ್ರಯಾಣಿಕರಿಂದ ಒತ್ತಾಯ

ಕಬಕ: ಕೆಎಸ್‌ಆರ್‌ಟಿಸಿ ಸಿಬ್ಬಂದಿಗಳ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ ಘಟನೆ ಕಬಕದಲ್ಲಿ ಇಂದು ನಡೆದಿದೆ. ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿ ಈ ಹಲ್ಲೆ ನಡೆದಿದ್ದು, ಉರಿಮಜಲು ಬಳಿ ಕಬಕ-ವಿಟ್ಲ ರಸ್ತೆಯಲ್ಲಿನ ಹಾರ್ಡ್ ವೇ‌ರ್ ಅಂಗಡಿಯೊಂದಕ್ಕೆ ಸೇರಿದ ಪಿಕಪ್ ವಾಹನದಲ್ಲಿ ಕಬಕದಿಂದ ಹಿಂಬಾಲಿಸಿಕೊಂಡು ಬಂದು ಉರಿಮಜಲು ಎಂಬಲ್ಲಿ ಕೆಎಸ್‌ಆರ್‌ಟಿಸಿ ಚಾಲಕ-ನಿರ್ವಾಹಕನ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿ ಪ್ರಯಾಣಿಕರ ಮುಂದೆಯೇ ಬಸ್ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡಿ ಜೀವಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಕೆಎಸ್‌ಆರ್‌ಟಿಸಿ ಬಸ್‌ ಸೈಡ್ ಕೊಡಲಿಲ್ಲ

ದುಷ್ಕರ್ಮಿಗಳಿಂದ ಕೆಎಸ್‍ ಆರ್ ಟಿಸಿ ಬಸ್ ಚಾಲಕ-ನಿರ್ವಾಹಕರಿಗೆ ಹಲ್ಲೆ | ದುಷ್ಕರ್ಮಿಗಳನ್ನು ಬಂಧಿಸುವಂತೆ ಪ್ರಯಾಣಿಕರಿಂದ ಒತ್ತಾಯ Read More »

ಅಕ್ರಮ ದನ ಸಾಗಾಟ ಲಾರಿಯನ್ನು ತಡೆ ಹಿಡಿದ ಪೊಲೀಸರು | ವಾಹನ ವಶಕ್ಕೆ

ಕಡಬ: ಅಕ್ರಮ ದನ ಸಾಗಾಟದ ಲಾರಿಯನ್ನು ಕಡಬ ಠಾಣಾ ಪೊಲೀಸರು ತಡೆಹಿಡಿದ ಘಟನೆ ಕಡಬ ಠಾಣಾ ವ್ಯಾಪ್ತಿಯ ಕೊಯಿಲ ಬಳಿ ನಡೆದಿದೆ. ಲಾರಿ ತಡೆಹಿಡಿದ ಸಂದರ್ಭ ಲಾರಿ ಚಾಲಕ ಪರಾರಿಯಾಗಿರುವುದಾಗಿ ತಿಳಿದು ಬಂದಿದೆ. ಇಂದು ಮುಂಜಾನೆ ಘಟನೆ ನಡೆದಿದ್ದು, ಸ್ಥಳದಲ್ಲಿ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಜಮಾಯಿಸಿದ್ದಾರೆ. ಪಿಕಪ್ ವಾಹನದಲ್ಲಿ ಸುಮಾರು ಎಂಟು ಜಾನುವಾರುಗಳಿದ್ದು, ಒಂದು ದನ ಮೃತಪಟ್ಟಿರುವುದಾಗಿ ಮಾಹಿತಿ ಲಭಿಸಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಲ್ಲದೆ ಅಕ್ರಮ ಜಾನುವಾರು ಸಾಗಾಟಕ್ಕೆ ಬಳಸಿದ ವಾಹನವನ್ನು ವಶಕ್ಕೆ

ಅಕ್ರಮ ದನ ಸಾಗಾಟ ಲಾರಿಯನ್ನು ತಡೆ ಹಿಡಿದ ಪೊಲೀಸರು | ವಾಹನ ವಶಕ್ಕೆ Read More »

ಹಾಡುಹಗಲೇ ಮನೆಗೆ ನುಗ್ಗಿದ ಕಳ್ಳರು| ಪ್ರಕರಣ ದಾಖಲು

ಕಡಬ : ಹಾಡುಹಗಲೇ ಮನೆಯೊಂದರ ಬಾಗಿಲು ಮುರಿದು ಒಳ ನುಗ್ಗಿದ ಕಳ್ಳರು ನಗದು ಮತ್ತು ಚಿನ್ನಾಭರಣವನ್ನು ಕಳವು ಮಾಡಿಕೊಂಡು ಪರಾರಿಯಾದ ಘಟನೆ ಕಡಬ ಠಾಣಾ ವ್ಯಾಪ್ತಿಯ ನೆಕ್ಕಿಲಾಡಿ ಗ್ರಾಮದ ಬಜಕೆರೆ ಎಂಬಲ್ಲಿ ನಿನ್ನೆ ನಡೆದಿದೆ. ಬಜಕೆರೆ ನಿವಾಸಿ ಜೇಮ್ಸ್ ಹಾಗೂ ಮನೆಯವರು ನೆಲ್ಯಾಡಿಯಲ್ಲಿ ಕಾರ್ಯಕ್ರಮಕ್ಕೆಂದು ತೆರಳಿದ್ದರು. ಸಂಜೆ ವೇಳೆಗೆ ಮನೆಗೆ ಹಿಂತಿರುಗಿದಾಗ ಮನೆಯ ಹಿಂಬಾಗಿಲ ಬೀಗ ಮುರಿದು ಕಳ್ಳತನ ನಡೆದಿರುವುದು ತಿಳಿದು ಬಂದಿದೆ. ಕಳ್ಳರು ಮನೆಯ ಕಪಾಟಿನಲ್ಲಿದ್ದ 10 ಪವನ್ ಚಿನ್ನಾಭರಣ ಹಾಗೂ ಒಂದು ಲಕ್ಷ ನಗದು

ಹಾಡುಹಗಲೇ ಮನೆಗೆ ನುಗ್ಗಿದ ಕಳ್ಳರು| ಪ್ರಕರಣ ದಾಖಲು Read More »

ಮಹಾಕುಂಭ ಮೇಳಕ್ಕೆ ಹೋಗುವ ಭಕ್ತರಿದ್ದ ರೈಲಿಗೆ ಕಲ್ಲು ತೂರಾಟ

ಮುಂಬಯಿ: ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳಕ್ಕೆ ಭಕ್ತರನ್ನು ಕರೆದೊಯ್ಯುತ್ತಿದ್ದ ರೈಲಿಗೆ ಮಹಾರಾಷ್ಟ್ರದಲ್ಲಿ ಕಲ್ಲುತೂರಲಾಗಿದೆ. ತಪತಿ ಗಂಗಾ ಎಕ್ಸ್‌ಪ್ರೆಸ್‌ ರೈಲಿಗೆ ಮಾಹಾರಾಷ್ಟ್ರದ ಜಲಗಾಂವ್‌ನಲ್ಲಿ ಭಾನುವಾರ ರಾತ್ರಿ ಕಲ್ಲು ತೂರಾಟ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ರೈಲಿನಲ್ಲಿ ಗುಜರಾತ್‌ನಿಂದ ಕುಂಭಮೇಳಕ್ಕೆ ಭಕ್ತರು ಪ್ರಯಾಣಿಸುತ್ತಿದ್ದರು. ರೈಲು ಸೂರತ್‌ನಿಂದ ಛಾಪ್ರಾಕ್ಕೆ ಹೋಗುತ್ತಿದ್ದ ವೇಳೆ ಜಲಗಾಂವ್‌ನಲ್ಲಿ ಕಿಡಿಗೇಡಿಯೋರ್ವ ಕಲ್ಲುತೂರಿದ್ದಾನೆ. ರೈಲಿನ ಕಿಟಿಕಿ ಗಾಜು ಒಡೆದಿದ್ದು, ಯಾರಿಗೂ ಗಾಯವಾಗಿಲ್ಲ ಎಂದು ತಿಳಿಸಿದ್ದಾರೆ. ಬಾಬಾ ಬನಾರಸ್‌ ಎಂಬ ಎಕ್ಸ್‌ ಪೇಜ್‌ನಲ್ಲಿ ಕಲ್ಲುತೂರಾಟ ಮಾಡಿದ ವೀಡಿಯೊ ಮತ್ತು ಫೋಟೊ

ಮಹಾಕುಂಭ ಮೇಳಕ್ಕೆ ಹೋಗುವ ಭಕ್ತರಿದ್ದ ರೈಲಿಗೆ ಕಲ್ಲು ತೂರಾಟ Read More »

ಹಸುಗಳ ಕೆಚ್ಚಲು ಕತ್ತರಿಸಿದ ಪ್ರಕರಣ : ಓರ್ವ ಆರೋಪಿ ಸೆರೆ

ರಾಜ್ಯಾದ್ಯಂತ ಆಕ್ರೋಶದ ಅಲೆಯೆಬ್ಬಿಸಿದ ದುರುಳರ ವಿಕೃತಿ ಬೆಂಗಳೂರು: ಚಾಮರಾಜಪೇಟೆಯ ಓಲ್ಡ್​ ಪೆನ್ಶನ್​ ಮೊಹಲ್ಲಾದ ವಿನಾಯಕನಗರದಲ್ಲಿ ಹಸುಗಳ ಕೆಚ್ಚಲು ಕೊಯ್ದು ಕ್ರೌರ್ಯ ಮೆರೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಕಾಟನ್ ​ಪೇಟೆ ಪೊಲೀಸರು ಬಂಧಿಸಿ ಸ್ಥಳ ಮಹಜರು ನಡೆಸಿದ್ದಾರೆ. ನಿನ್ನೆ ತಡರಾತ್ರಿಯಿಂದಲೇ ಆರೋಪಿಯ ವಿಚಾರಣೆ ನಡೆಸಲಾಗುತ್ತಿದೆ. ಚಾಮರಾಜಪೇಟೆಯ ಓಲ್ಡ್ ಪೆನ್ಶನ್ ಮೊಹಲ್ಲಾದ ವಿನಾಯಕನಗರ ನಿವಾಸಿ ಕರ್ಣ ಎಂಬುವರ ಮೂರು ಹಸುಗಳ ಕೆಚ್ಚಲನ್ನು ಕತ್ತರಿಸಿ, ಕಾಲಿಗೆ ಮಚ್ಚಿನಿಂದ ಹಲ್ಲೆ ಮಾಡಿ ದುಷ್ಕರ್ಮಿಗಳು ವಿಕೃತಿ ಮೆರೆದಿದ್ದರು. ಕರ್ಣ ನೀಡಿದ ​ದೂರು ಆಧರಿಸಿ

ಹಸುಗಳ ಕೆಚ್ಚಲು ಕತ್ತರಿಸಿದ ಪ್ರಕರಣ : ಓರ್ವ ಆರೋಪಿ ಸೆರೆ Read More »

ಹಸುಗಳ ಕೆಚ್ಚಲು ಕೊಯ್ದು ವಿಕೃತಿ ಮೆರೆದ ದುರುಳರು

ರಸ್ತೆಯಲ್ಲಿ ಮೇಲೆ ಮಲಗಿದ್ದ ದನಗಳ ಮೇಲೆ ಕ್ರೌರ್ಯ ಬೆಂಗಳೂರು: ಹಸುಗಳ ಕೆಚ್ಚಲು ಕೊಯ್ದು ವಿಕೃತಿ ಮೆರೆದಿರುವ ಘಟನೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ನಿನ್ನೆ ತಡರಾತ್ರಿ ನಡೆದಿದೆ. ಚಾಮರಾಜಪೇಟೆಯ ಓಲ್ಡ್ ಪೆನ್ಶನ್ ಮೊಹಲ್ಲಾದಲ್ಲಿ ಮಲಗಿದ್ದ ಮೂರು ಹಸುಗಳ ಕೆಚ್ಚಲು ಕೊಯ್ದ ರಕ್ತದ ಕೋಡಿಯನ್ನೇ ಹರಿಸಿದ್ದಾರೆ. ಇಂದು ಬೆಳಗ್ಗೆ ಘಟನೆ ಬೆಳಕಿಗೆ ಬಂದಿದ್ದು, ಹಸುಗಳಿಗೆ ಚಾಮರಾಜಪೇಟೆ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಚಾಮರಾಜಪೇಚೆಯ ಕರ್ಣ ಎಂಬುವವರಿಗೆ ಸೇರಿದ ಹಸುಗಳ ಕೆಚ್ಚಲನ್ನು ಕೊಯ್ದು ದುರುಳರು ವಿಕೃತಿ ಮೆರೆದಿದ್ದಾರೆ. ಅವರ ಬಳಿ 8 ಹಸುಗಳಿದ್ದು, ಈ

ಹಸುಗಳ ಕೆಚ್ಚಲು ಕೊಯ್ದು ವಿಕೃತಿ ಮೆರೆದ ದುರುಳರು Read More »

ಅಪ್ರಾಪ್ತ ಬಾಲಕಿ ಮೇಲೆ 64 ಜನರಿಂದ ಅತ್ಯಾಚಾರ : ಕೇರಳದಲ್ಲಿ ಬೆಳಕಿಗೆ ಬಂದ ಆಘಾತಕಾರಿ ಲೈಂಗಿಕ ಶೋಷಣೆ ಪ್ರಕರಣ

ಪತ್ತನಂತಿಟ್ಟ : ಲೈಂಗಿಕ ಹಗರಣಗಳಿಗೆ ಕುಖ್ಯಾತವಾಗಿರುವ ಕೇರಳದಲ್ಲಿ ಇನ್ನೊಂದು ಬೆಚ್ಚಿಬೀಳಿಸುವ ಪ್ರಕರಣ ಬೆಳಕಿಗೆ ಬಂದಿದೆ.ಈಗ 18 ವರ್ಷ ಪ್ರಾಯವಾಗಿರುವ ದಲಿತ ಸಮುದಾಯದ ಕ್ರೀಡಾಪಟುವೊಬ್ಬಳ ಮೇಲೆ ಕಳೆದ ಐದು ವರ್ಷಚಗಳಿಂದ 60ಕ್ಕೂ ಹೆಚ್ಚು ಮಂದಿ ಅತ್ಯಾಚಾರ ಎಸಗಿರುವ ಘಟನೆ ಸಂಭವಿಸಿದೆ. ಅಪ್ರಾಪ್ತ ವಯಸ್ಸಿನವಳ ಆಕೆಯ ಕ್ರೀಡಾ ಕೋಚ್‌ಗಳು, ಸಹ ಆಟಗಾರರು ಸೇರಿದಂತೆ 64 ಪುರುಷರು 5 ವರ್ಷಗಳಿಂದ ಅತ್ಯಾಚಾರ ಎಸಗಿದ್ದಾರೆ. ಸಂತ್ರಸ್ತೆ ಇದೀಗ ದೂರು ನೀಡಿದ್ದು, ಇದರನ್ವಯ ಪೊಲೀಸರು ಆರೋಪಿಗಳ ವಿರುದ್ಧ 4 ಎಫ್‌ಐಆರ್‌ ದಾಖಲಿಸಿ 15 ಮಂದಿಯನ್ನು

ಅಪ್ರಾಪ್ತ ಬಾಲಕಿ ಮೇಲೆ 64 ಜನರಿಂದ ಅತ್ಯಾಚಾರ : ಕೇರಳದಲ್ಲಿ ಬೆಳಕಿಗೆ ಬಂದ ಆಘಾತಕಾರಿ ಲೈಂಗಿಕ ಶೋಷಣೆ ಪ್ರಕರಣ Read More »

ತಂಡದಿಂದ ಹಲ್ಲೆ : ಗಾಯಾಳು ಆಸ್ಪತ್ರೆಗೆ ದಾಖಲು

ಬೆಳ್ಳಾರೆ: ಯುವಕನೊಬ್ಬನ ಮೇಲೆ ತಂಡವೊಂದು ಹಲ್ಲೆ ನಡೆಸಿದ ಘಟನೆ ಶನಿವಾರ ರಾತ್ರಿ ಬೆಳ್ಳಾರೆ ಪೇಟೆಯಲ್ಲಿ ನಡೆದಿದೆ.. ಆಶೀರ್ ಬೆಳ್ಳಾರೆ ಹಲ್ಲೆಯಿಂದ ಗಾಯಗೊಂಡಿದ್ದು, ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗಿದೆ. ರಾತ್ರಿ 9:30 ಸಮಯಕ್ಕೆ ಬೆಳ್ಳಾರ ಪೇಟೆಯಲ್ಲಿ ಅಜರುದ್ದೀನ್ ಮತ್ತು ಜಮಾಲ್ ಬೆಳ್ಳಾರೆ ಎಂಬವರು ಆಶೀರ್ ಎಂಬ ಯುವಕ ಬೈಕ್ ನಲ್ಲಿ ಬರುವ ವೇಳೆ ಕಬ್ಬಿಣದ ರಾಡಿನಿಂದ ತಲೆಗೆ ಹೊಡೆದು ಕೊಲೆಗೆ ಯತ್ನಿಸಿದ್ದಾರೆ ಎಂಬ ಆರೋಪವು ಕೇಳಿ ಬಂದಿದೆ. ಹೆಚ್ಚಿನ ಮಾಹಿತಿ ತಿಳಿದು ಬರಬೇಕ

ತಂಡದಿಂದ ಹಲ್ಲೆ : ಗಾಯಾಳು ಆಸ್ಪತ್ರೆಗೆ ದಾಖಲು Read More »

ಸಿ.ಟಿ.ರವಿಗೆ ಜೀವ ಬೆದರಿಕೆ ಪತ್ರ : ಬಿಜೆಪಿ ಕಿಡಿ

ಕ್ಷಮೆ ಕೇಳದಿದ್ದರೆ ನಿಮ್ಮನ್ನು ಮತ್ತು ನಿಮ್ಮ ಪುತ್ರನನ್ನು ಸಾಯಿಸುತ್ತೇವೆ ಎಂದು ಬೆದರಿಕೆ ಬೆಂಗಳೂರು: ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಅವರಿಗೆ ಜೀವ ಬೆದರಿಕೆ ಒಡ್ಡಿ ಬಂದಿರುವ ಪತ್ರ ರಾಜ್ಯ ರಾಜಕೀಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ಇನ್ನೊಂದು ಸಮರಕ್ಕೆ ಕಾರಣವಾಗಿದೆ. ಬೆದರಿಕೆ ಒಡ್ಡುತ್ತಿರುವ ಶಕ್ತಿಗಳು ಯಾವುದು ಎಂಬುದು ಸರ್ಕಾರ ಹಾಗೂ ಪೊಲೀಸರಿಗೆ ತಿಳಿದೇ ಇದೆ, ಇಷ್ಟಾಗಿಯೂ ದುಷ್ಟಶಕ್ತಿಗಳ ಮೇಲೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಬಿಜೆಪಿ ಕಿಡಿಕಾರಿದೆ.ಈ ಕುರಿತು ಟ್ವೀಟ್‌ ಮಾಡಿರುವ ಬಿಜಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ,

ಸಿ.ಟಿ.ರವಿಗೆ ಜೀವ ಬೆದರಿಕೆ ಪತ್ರ : ಬಿಜೆಪಿ ಕಿಡಿ Read More »

error: Content is protected !!
Scroll to Top