ಅಪರಾಧ

ಧರ್ಮಸ್ಥಳ ಪ್ರಕರಣ : ಕುಸುಮಾವತಿ ಅರ್ಜಿ ವಿಚಾರಣೆ ಮುಂದೂಡಿಕೆ

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದಲ್ಲಿ ನಡೆದ 74 ಅಸಹಜ ಸಾವುಗಳ ಬಗ್ಗೆ ಪ್ರತ್ಯೇಕ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ಆಗ್ರಹಿಸಿ ಸೌಜನ್ಯ ತಾಯಿ ಕುಸುಮಾವತಿ ರಾಜ್ಯ ಉಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿ ಫೆ.3ರಂದು ವಿಚಾರಣೆಗೆ ಬಂದಿದ್ದು, ನ್ಯಾಯಾಲಯ ವಿಚಾರಣೆಯನ್ನು ಫೆ 19ಕ್ಕೆ ಮುಂದೂಡಿದೆ. ವಿಚಾರಣೆ ವೇಳೆ ಸರಕಾರದ ಪರವಾಗಿ ಹಾಜರಾದ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ನಾಪತ್ತೆ ಪ್ರಕರಣಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದ್ದು ಈ ಪ್ರಕರಣಗಳ ಬಗ್ಗೆ ತನಿಖೆ ನಡೆಸುವುದಕ್ಕೆ ಆಕ್ಷೇಪವಿಲ್ಲ. ಈ ಬಗ್ಗೆ ಒಂದು ವಾರದಲ್ಲಿ ನ್ಯಾಯಾಲಯಕ್ಕೆ […]

ಧರ್ಮಸ್ಥಳ ಪ್ರಕರಣ : ಕುಸುಮಾವತಿ ಅರ್ಜಿ ವಿಚಾರಣೆ ಮುಂದೂಡಿಕೆ Read More »

ವೃದ್ಧೆಯ ಮೇಲೆ ಅತ್ಯಾಚಾರ, ಹತ್ಯೆ ಮಾಡಿ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡ ಮನೆಕೆಲಸದ ‌ವ್ಯಕ್ತಿ

ಬೆಂಗಳೂರು: ಕಾಮುಕ ‌ಮನೆಗೆಲಸದ ವ್ಯಕ್ತಿಯೊಬ್ಬ ತಾನು ಕೆಲಸ ಮಾಡುತ್ತಿದ್ದ ಮನೆಯ 65 ವರ್ಷದ ವೃದ್ಧೆಯ ಮೇಲೆ ಅತ್ಯಾಚಾರ ಎಸಗಿ, ಅವರನ್ನು ಕೊಂದು ಆ ಬಳಿಕ ತಾನೂ ಅದೇ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಕೋ ‌ಲೇಔಟ್ ನಡೆದಿದೆ. ಆರೋಪಿ ತಮಿಳುನಾಡು ಹೊಸೂರು ಮೂಲದ ದೇವರಾಜ್ (5೦) ಕಳೆದ ಎಂಟು ವರ್ಷಗಳಿಂದ ವೃದ್ಧೆಯ ಮನೆ ಮತ್ತು ಆ‌ ಕಾಲನಿಯಲ್ಲಿರುವ ಇತರ ಮನೆಗಳಲ್ಲಿ ಮನೆ ಕೆಲಸ ಮಾಡಿಕೊಂಡಿದ್ದ. ಅತ್ಯಾಚಾರ ಎಸಗಿದ ಬಳಿಕ ವೃದ್ಧೆಯನ್ನು ಹತ್ಯೆ ಮಾಡಿರುವ ಆರೋಪಿ,

ವೃದ್ಧೆಯ ಮೇಲೆ ಅತ್ಯಾಚಾರ, ಹತ್ಯೆ ಮಾಡಿ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡ ಮನೆಕೆಲಸದ ‌ವ್ಯಕ್ತಿ Read More »

ಆಸ್ತಿಗಾಗಿ ಜಗಳ : ಗಾಯಗೊಂಡಿದ್ದ ಇನ್ನೋರ್ವ ಸಾವು

ಗಂಭೀರ ಗಾಯಗೊಂಡಿದ್ದ ನಾದಿನಿಯ ಪತಿಯೂ ಸಾವು ಮಂಗಳೂರು: ತಲಪಾಡಿ ಸಮೀಪ ತೂಮಿನಾಡಿನಲ್ಲಿ ಕುಟುಂಬದ ಆಸ್ತಿ ಕಲಹದಲ್ಲಿ ಗಾಯಗೊಂಡಿದ್ದ ಇನ್ನೋರ್ವ ವ್ಯಕ್ತಿಯೂ ಇಂದು ಬೆಳಗ್ಗೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದು, ಇದರೊಂದಿಗೆ ಕೊಲೆಯಾದವರ ಸಂಖ್ಯೆ ಎರಡಕ್ಕೇರಿದೆ. ಮಂಜೇಶ್ವರ ತೂಮಿನಾಡುವಿನ ಹಿಲ್‌ಟಾಪ್ ಎಂಬಲ್ಲಿ ಆಸ್ತಿ ವಿವಾದಕ್ಕೆ ಸಂಬಂಧಿಸಿ ನಡೆದ ಕುಟುಂಬ ಕಲಹದಲ್ಲಿ ಕೊಲೆಗಳು ಸಂಭವಿಸಿವೆ. ಮಾರಣಾಂತಿಕವಾಗಿ ಇರಿತಕ್ಕೆ ಒಳಗಾಗಿದ್ದ ಶೇಕುಂಞಿ ಎಂಬವರು ಫೆ.3ರಂದು ಬೆಳಗ್ಗೆ ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇವರ ಪತ್ನಿಯ ಅಕ್ಕನ ಮಗಳು ಜುಮೈಲಾ(17) ಸೋಮವಾರ ಸಂಜೆ ಕೊಲೆಯಾಗಿದ್ದರು. ಘಟನೆಯಲ್ಲಿ

ಆಸ್ತಿಗಾಗಿ ಜಗಳ : ಗಾಯಗೊಂಡಿದ್ದ ಇನ್ನೋರ್ವ ಸಾವು Read More »

ಚುನಾವಣೆಯಲ್ಲಿ ಸ್ಪರ್ಧಿಸಲು ಮಗಳನ್ನೇ ಕೊಂದ ಪಾಪಿ ತಂದೆ

ಅವಳಿ ಮಕ್ಕಳಲ್ಲಿ ಒಬ್ಬಳನ್ನು ಕಾಲುವೆಗೆ ನೂಕಿ ಹತ್ಯೆ ಮುಂಬೈ: ಚುನಾವಣೆಗೆ ಸ್ಪರ್ಧಿಸುವ ಉದ್ದೇಶದಿಂದ ತಂದೆಯೊಬ್ಬ ತನ್ನ ಮಗಳನ್ನೇ ಕೊಲೆ ಮಾಡಿದ ಕ್ರೂರ ಘಟನೆ ಮಹಾರಾಷ್ಟ್ರದಲ್ಲಿ ಸಂಭವಿಸಿದೆ. ಎರಡಕ್ಕಿಂತ ಹೆಚ್ಚು ಮಕ್ಕಳಿದ್ರೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಇಲ್ಲ ಎಂಬ ನಿಯಮ ಇರುವುದರಿಂದ ಮಹಾರಾಷ್ಟ್ರದ ಈ ಪಾಪಿ ತಂದೆ 6 ವರ್ಷದ ಮಗಳನ್ನು ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯ ಬೋಧನ್ ಕಾಲುವೆಗೆ ನೂಕಿ ಹತ್ಯೆ ಮಾಡಿದ್ದಾನೆ. ಪ್ರಾಚಿ ಕೊಲೆಯಾದ ಬಾಲಕಿ. ಹತ್ಯೆಗೈದ ಆರೋಪಿಯನ್ನು ಪಾಂಡುರಂಗ ಕೊಂಡ್ಮಂಗಳೆ (28) ಎಂದು ಗುರುತಿಸಲಾಗಿದೆ. ಈತ

ಚುನಾವಣೆಯಲ್ಲಿ ಸ್ಪರ್ಧಿಸಲು ಮಗಳನ್ನೇ ಕೊಂದ ಪಾಪಿ ತಂದೆ Read More »

ಆಸ್ತಿ ಜಗಳ : ತಂದೆಯಿಂದಲೇ ಮಗಳ ಹತ್ಯೆ

ಮಂಗಳೂರು: ತಂದೆಯೇ 18 ವರ್ಷದ ಮಗಳನ್ನು ಕಡಿದು ಕೊಲೆಗೈದ ದಾರುಣ ಘಟನೆ ಕೇರಳ-ಕರ್ನಾಟಕ ಗಡಿಭಾಗದ ತಲಪಾಡಿ ಸಮೀಪ ತೂಮಿನಾಡು ಎಂಬಲ್ಲಿ ಸೋಮವಾರ ಸಂಜೆ ಸಂಭವಿಸಿದೆ. ತೂಮಿನಾಡಿನ ಜುಮೈಲಾ ಕೊಲೆಗೀಡಾದ ಯುವತಿ. ಕೃತ್ಯ ನಡೆಸಿದ ತಂದೆ ಉಮ್ಮರ್ ಫಾರೂಕ್‌ನನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಕಿರುಚಾಟದ ಶಬ್ದ ಕೇಳಿ ಪರಿಸರ ವಾಸಿಗಳು ಸ್ಥಳಕ್ಕೆ ಬಂದಾಗ ಬಾಲಕಿ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ. ಕೂಡಲೇ ಆಸ್ಪತ್ರೆಗೆ ತಲಪಿಸಿದರೂ ಜೀವ ಉಳಿಸಲಾಗಲಿಲ್ಲ. ಕೃತ್ಯ ನಡೆಯುವ ಸಮಯದಲ್ಲಿ ತಾಯಿ ಕೂಡಾ ಮನೆಯಲ್ಲಿದ್ದರು ಎನ್ನಲಾಗಿದೆ. ಉಮರ್

ಆಸ್ತಿ ಜಗಳ : ತಂದೆಯಿಂದಲೇ ಮಗಳ ಹತ್ಯೆ Read More »

ವರದಕ್ಷಿಣೆ ಕಿರುಕುಳ: ಮಹಿಳೆ ಆತ್ಮಹತ್ಯೆ

ಹಾಸನ: ಗಂಡನ ಅನುಮಾನ ಮತ್ತು ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ವಿಷ ಕುಡಿದು ಮಹಿಳೆಯೊಬ್ಬಳು ಆತ್ಮಹತ್ಯೆಗೆ ಪ್ರಯತ್ನಿಸಿ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಮೈಲಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತರನ್ನು ಎಚ್. ಎಲ್. ಇಂದ್ರ (24) ಎಂದು ಗುರುತಿಸಲಾಗಿದೆ. ಗಂಡನ ಮನೆಯಲ್ಲಿ ವಿಷ ಸೇವನೆ ಮಾಡಿದ್ದ ಅವರನ್ನು ಹಿಮ್ಸ್‌ಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಎಂ. ಎಚ್. ಸ್ವಾಮಿ ಜೊತೆಗೆ ಇಂದ್ರ ಅವರ ವಿವಾಹವಾಗಿತ್ತು. ಮದುವೆ ಸಮಯದಲ್ಲಿ ಮಹಿಳೆಯ ಮನೆಯವರು ಚಿನ್ನ,

ವರದಕ್ಷಿಣೆ ಕಿರುಕುಳ: ಮಹಿಳೆ ಆತ್ಮಹತ್ಯೆ Read More »

ನೀರು ಕೇಳುವ ನೆಪದಲ್ಲಿ ಮನೆಗೆ ನುಗ್ಗಿದ ಅಪರಿಚಿತನಿಂದ ಮಹಿಳೆಯ ಕರಿಮಣಿ ಎಗರಿಸಿ ಪರಾರಿ

ಬಂಟ್ವಾಳ: ಅಪರಿಚಿತ ವ್ಯಕ್ತಿಯೊಬ್ಬ ನೀರು ಕೇಳುವ ನೆಪದಲ್ಲಿ ಬಂದು ಮಹಿಳೆಯ ಕತ್ತಿನಿಂದ ಕರಿಮಣಿ ಸರ ಎಗರಿಸಿದ ಘಟನೆ ಕಾವಳಪಡೂರಿನ ರಾಜಪಲ್ಕೆಯಲ್ಲಿ ನಡೆದಿದೆ. ಡೋಗ್ರ ಮೂಲ್ಯ ಎಂಬವರ ಪತ್ನಿ ಉಷಾಲಕ್ಷ್ಮಿ ಅವರ ಕತ್ತಿನಿಂದ ‌ಎರಡೂವರೆ ಪವನಿನ ಕರಿಮಣಿ ಎಗರಿಸಿರುವುದಾಗಿದೆ. ಸಂಜೆ ನಾಲ್ಕು ಗಂಟೆ ಸುಮಾರಿಗೆ ಅಪರಿಚಿತನೊಬ್ಬ ಬಂದು ಜಗಲಿಯಲ್ಲಿ ಕುಳಿತು ನೀರು ಕೇಳಿದ್ದಾನೆ. ಮನೆಯಲ್ಲಿ ಯಾರೂ ಇಲ್ಲದೇ ಇದ್ದು ಮಹಿಳೆಯೇ ನೀರು ತರಲು ಒಳ ಹೋಗಿದ್ದಾರೆ. ಈ ವೇಳೆ ಅಪರಿಚಿತ ಮಹಿಳೆಯನ್ನು ಹಿಂಬಾಲಿಸಿ ಹೋಗಿ, ಕೈ ಕಾಲು ಕಟ್ಟಿ

ನೀರು ಕೇಳುವ ನೆಪದಲ್ಲಿ ಮನೆಗೆ ನುಗ್ಗಿದ ಅಪರಿಚಿತನಿಂದ ಮಹಿಳೆಯ ಕರಿಮಣಿ ಎಗರಿಸಿ ಪರಾರಿ Read More »

ಎಂಟು ವರ್ಷದ ಹುಡುಗಿಯ ಮೇಲೆ ಎಪ್ಪತೈದು ವರ್ಷದ ಮುದುಕನಿಂದ ಅತ್ಯಾಚಾರ

ಹುಬ್ಬಳ್ಳಿ: ಚಾಕ್ಲೆಟ್ ಆಸೆ ತೋರಿಸಿ, ಎಂಟು ವರ್ಷದ ಹುಡುಗಿಯ ಮೇಲೆ ಎಪ್ಪತೈದು ವರ್ಷದ ವೃದ್ಧ ಅತ್ಯಾಚಾರ ನಡೆಸಿದ ಘಟನೆ ನಡೆದಿದ್ದು, ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ. ಕಾಮುಕ ಆರೋಪಿ ಈಶ್ವರಪ್ಪನನ್ನು ಬಂಧಿಸಲಾಗಿದೆ. ಆರೋಪಿಯು ಡಿ. 30 ರಂದು ಬಾಲಕಿಗೆ ಚಾಕ್ಲೆಟ್ ಕೊಡಿಸುವುದಾಗಿ ಹೇಳಿ, ತನ್ನ ಅಂಗಡಿಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ ಎಂದು ತಿಳಿದು ಬಂದಿದೆ.

ಎಂಟು ವರ್ಷದ ಹುಡುಗಿಯ ಮೇಲೆ ಎಪ್ಪತೈದು ವರ್ಷದ ಮುದುಕನಿಂದ ಅತ್ಯಾಚಾರ Read More »

ಉದ್ಯಮಿ ಸಿ.ಜೆ. ರಾಯ್‌ ಆತ್ಮಹತ್ಯೆ ಕೇಸ್‌ : ಡೈರಿಯಲ್ಲಿದೆ ಸ್ಫೊಟಕ ಮಾಹಿತಿ

ಇಡೀ ತನಿಖೆಯ ದಿಕ್ಕನ್ನೇ ಬದಲಿಸುವ ಮಾಹಿತಿ ಡೈರಿಯಲ್ಲಿ ಪತ್ತೆ ಬೆಂಗಳೂರು: ರಿಯಲ್‌ ಎಸ್ಟೇಟ್‌ ಉದ್ಯಮಿ ಸಿ.ಜೆ.ರಾಯ್‌ ಆತ್ಮಹತ್ಯೆ ಮಾಡಿಕೊಳ್ಳಲು ಮೊದಲೇ ನಿರ್ಧರಿಸಿದ್ದರೇ? ಅವರ ಡೈರಿಯಲ್ಲಿರುವ ಕೆಲವೊಂದು ಮಾಹಿತಿ ಸಿ.ಜೆ.ರಾಯ್‌ ಆತ್ಮಹತ್ಯೆ ಆ ಕ್ಷಣದ ನಿರ್ಧಾರವಲ್ಲ, ಬದಲಾಗಿ ಅವರು ಮೊದಲೇ ಆತ್ಮಹತ್ಯೆಗೆ ತಯಾರಿ ಮಾಡಿಕೊಂಡಿದ್ದರು ಎಂಬ ಸುಳಿವು ನೀಡುತ್ತಿದೆ ಎಂಬುದಾಗಿ ಮೂಲಗಳು ತಿಳಿಸಿವೆ. ಆದಾಯಕರ ಇಲಾಖೆಯ ಕಿರುಕುಳದಿಂದ ಐಟಿ ದಾಳಿ ನಡೆಯುತ್ತಿರುವಾಗಲೇ ಸಿ.ಜೆ.ರಾಯ್‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಡೈರಿಯಲ್ಲಿ ಅವರು ಬರೆದಿಟ್ಟಿರುವ ಕೆಲವು ವಿಚಾರಗಳು ತನಿಖೆಯ

ಉದ್ಯಮಿ ಸಿ.ಜೆ. ರಾಯ್‌ ಆತ್ಮಹತ್ಯೆ ಕೇಸ್‌ : ಡೈರಿಯಲ್ಲಿದೆ ಸ್ಫೊಟಕ ಮಾಹಿತಿ Read More »

ವರನಿಗೆ ಚಾಕು ಇರಿತ ಪ್ರಕರಣ : ವಧುವೇ ಹತ್ಯಾಯತ್ನದ ಸೂತ್ರಧಾರಿ!

ಮದುವೆ ತಪ್ಪಿಸಲು ಪ್ರಿಯತನೊಡನೆ ಸೇರಿ ಮರ್ಡರ್‌ ಪ್ಲಾನ್‌ ಮಾಡಿದ್ದ ಯುವತಿ ಬೆಂಗಳೂರು: ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ಕಲ್ಯಾಣ ಮಂಟಪಕ್ಕೆ ಬರುತ್ತಿದ್ದ ವರನಿಗೆ ಚಾಕು ಇರಿತ ಪ್ರಕರಣ ತಿರುವು ಪಡೆದುಕೊಂಡಿದ್ದು, ಅವನನ್ನು ಮದುವೆಯಾಗಬೇಕಾಗಿದ್ದ ವಧುವೇ ಈ ಹತ್ಯಾಯತ್ನದ ಹಿಂದಿನ ಸೂತ್ರಧಾರಿ ಎನ್ನುವುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ. ಡಿ.30ರಂದು ಕುಣಗಳ್ಳಿ ಗ್ರಾಮದ ರವೀಶ್ ಮತ್ತು ನಯನ ಮದುವೆ ನಡೆಯಬೇಕಿತ್ತು. ರವೀಶ್‌ ಹೊಸ ಜೀವನಕ್ಕೆ ಕಾಲಿಡುವ ಸಂತೋಷದಲ್ಲಿದ್ದರು. ಹಿಂದಿನ ದಿನ ರಿಸೆಪ್ಶನ್‌ಗೆ ರವೀಶ್‌ ಸೇರಿದಂತೆ ಸಂಬಂಧಿಕರು ಕಲ್ಯಾಣ ಮಂಟಪದತ್ತ ಹೊರಟಿದ್ದರು. ಕೊಳ್ಳೇಗಾಲದ

ವರನಿಗೆ ಚಾಕು ಇರಿತ ಪ್ರಕರಣ : ವಧುವೇ ಹತ್ಯಾಯತ್ನದ ಸೂತ್ರಧಾರಿ! Read More »

error: Content is protected !!
Scroll to Top