ಸುದ್ದಿ

ಮಾದಕ ವಸ್ತು ಸೇವನೆಯ ಜೊತೆ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳ ಬಂಧನ

ಮಂಗಳೂರು: ಮಾದಕ ವಸ್ತು ಸೇವನೆ ಹಾಗೂ  ಮಾರಾಟ ಮಾಡಿದ್ದಾರೆ ಎಂಬ  ಎರಡು ಪ್ರತ್ಯೇಕ ಘಟನೆಗೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ವೈಶಾಖ್, ಅರವಿಂದ್, ಇಸ್ಮಾಯಿಲ್ ಸೊಹೈಲ್ ಎಂದು ಪತ್ತೆಹಚ್ಚಲಾಗಿದೆ. ಉಳ್ಳಾಲ ಗ್ರಾಮದ ಮೊಗವೀರಪಟ್ಟ ಬೀಚ್ ಪರಿಸರದ ಸಾರ್ವಜನಿಕ ಸ್ಥಳದಲ್ಲಿ ನಿಷೇಧಿತ ಮಾದಕವಸ್ತುಗಳನ್ನು ಸೇವಿಸಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ ವೈಶಾಖ್ ಎಂಬುವವನನ್ನು ಮಂಗಳೂರಿನ ಸೆನ್ ಪೊಲೀಸರು ಬಂಧಿಸಿದ್ದಾರೆ.  ಜಪ್ಪಿನಮೊಗರು ಸಮೀಪದ ಕುಡ್ಡಾಡಿ ರೈಲ್ವೆ ಅಂಡರ್‌ಪಾಸ್ ರಸ್ತೆಯಿಂದ ಸೂಟರ್‌ಪೇಟೆ ಹಾದು ಹೋಗುವ ರಸ್ತೆಯಲ್ಲಿ ನಿಷೇಧಿತ ಮಾದಕ […]

ಮಾದಕ ವಸ್ತು ಸೇವನೆಯ ಜೊತೆ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳ ಬಂಧನ Read More »

ಆಟೋ ಚಾಲಕ ಕೃಷ್ಣ  ಆತ್ಮಹತ್ಯೆ

ಪುತ್ತೂರು : ಪರಿಯತ್ತೋಡಿ ನಿವಾಸಿಯಾದ ಆಟೋ ಚಾಲಕನೋರ್ವ ಮನೆಯ ಬಳಿಯಲ್ಲಿ  ಆತ್ಮಹತ್ಯೆ ಮಾಡಿಕೊಂಡ ಘಟನೆ ನಿನ್ನೆ ನಡೆದಿದೆ. ಪೆರಿಯತ್ತೋಡಿ ದಿ.ಹುಕ್ರಪ್ಪ ಗೌಡ ಅವರ ಪುತ್ರ ಕೃಷ್ಣ(40)ರವರು ಆತ್ಮಹತ್ಯೆ ಮಾಡಿಕೊಂಡವರು ಎನ್ನಲಾಗಿದೆ. ಬೆಳಿಗ್ಗೆ ಅವರು ರಿಕ್ಷಾದಲ್ಲಿ ಶಾಲಾ ಮಕ್ಕಳನ್ನು ಕರೆದೊಯ್ದಿದ್ದರು. ಮಧ್ಯಾಹ್ನದ ವೇಳೆ ಸಾಲ ವಸೂಲಿಗಾರರ ಕರೆ ಬಂದಿತ್ತು. ಅದಾದ ಬಳಿಕ ಮೃತ ಕೃಷ್ಣ ಅವರು ಮನೆಯ ಬಳಿಯ ಮರವೊಂದರ ಗೆಲ್ಲಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಮೃತರು ಸಹೋದರರಾದ ಕುಶಾಲಪ್ಪ, ರಿಕ್ಷಾ ಚಾಲಕ ಶಿವರಾಮ,

ಆಟೋ ಚಾಲಕ ಕೃಷ್ಣ  ಆತ್ಮಹತ್ಯೆ Read More »

ರೆಸಾರ್ಟ್‌ನಲ್ಲಿ ತಂಗಿದ್ದ ಕುಟುಂಬ ನಿಗೂಢವಾಗಿ ನಾಪತ್ತೆ

ಚಾಮರಾಜನಗರ : ರೆಸಾರ್ಟ್‌ನಲ್ಲಿ ತಂಗಿದ್ದ ಕುಟುಂಬವೊಂದು ನಿಗೂಢವಾಗಿ ನಾಪತ್ತೆಯಾಗಿದೆ. ಗುಂಡ್ಲುಪೇಟೆ ತಾಲೂಕಿನ ಬಂಡೀಪುರಕ್ಕೆ ತೆರಳಿದಿದ್ದ ಕುಟುಂಬ ನಂತರ ಕಾಣೆಯಾಗಿದೆ ಎನ್ನಲಾಗಿದೆ. ಬಂಡೀಪುರ ಬಳಿಯ ಕಂಟ್ರಿ ಕ್ಲಬ್ ರೆಸಾರ್ಟ್‌ನಲ್ಲಿ ಕುಟುಂಬ ಭಾನುವಾರ ರಾತ್ರಿ ವಾಸ್ತವ್ಯ ಹೂಡಿತ್ತು. ಸೋಮವಾರ ಮಧ್ಯಾಹ್ನದಿಂದ ಕುಟುಂಬ ನಾಪತ್ತೆಯಾಗಿದೆ. ಬೆಂಗಳೂರು ಮೂಲದ ಜೆ.ನಿಶಾಂತ್ (40), ಪತ್ನಿ ಚಂದನಾ ಮತ್ತು 10 ವರ್ಷದ ಗಂಡು ಮಗು ನಾಪತ್ತೆಯಾಗಿದ್ದಾರೆ. ಜೆ.ನಿಶಾಂತ್ ಬ್ಯಾಗ್​ ಕಂಟ್ರಿ ಕ್ಲಬ್ ರೆಸಾರ್ಟ್​​ನಲ್ಲೆ ಇದೆ. ರೆಸಾರ್ಟ್​ನಲ್ಲಿ ಲಗೇಜ್ ಬಿಟ್ಟು ಮೂವರು ಕಾರಿನಲ್ಲಿ ಹೊರಗೆ ಹೋಗಿದ್ದಾರೆ. ಬಂಡೀಪುರ

ರೆಸಾರ್ಟ್‌ನಲ್ಲಿ ತಂಗಿದ್ದ ಕುಟುಂಬ ನಿಗೂಢವಾಗಿ ನಾಪತ್ತೆ Read More »

ಪ್ರತಿಷ್ಠಿತ ಮುಳಿಯ ಜ್ಯುವೆಲ್ಲರ್ಸ್ ನಲ್ಲಿ ‘ಡೈಮಂಡ್ ಫೆಸ್ಟ್’ಗೆ ಚಾಲನೆ

ಪುತ್ತೂರು:  ಮುಳಿಯ ಎಂಬುದು ನಂಬಿಕೆಯ ಪ್ರತೀಕ. ಆಭರಣ ಕ್ಷೇತ್ರದಲ್ಲಿ ವಿಶೇಷ ತೋರಿರುವ ಜತೆಗೆ ಸಾಮಾಜಿಕ ಕಾರ್ಯಗಳಲ್ಲೂ ಮುಳಿಯ ಸಂಸ್ಥೆ ತೊಡಗಿರುವುದು ಶ್ಲಾಘನೀಯ ಎಂದು ಸಾಯ ಎಂಟರ್ಪೈಸಸ್ ಮಾಲಕಿ ಸಂಧ್ಯಾ ಸಾಯ ಹೇಳಿದರು. ಅವರು ಮಾ.3ರಿಂದ ಜುವೆಲ್ಲರ್ಸ್ ನಲ್ಲಿ ಆರಂಭೂಂಡಿರುವ ಡೈಮೆಂಡ್ ಫೆಸ್ಟ್ ಅನ್ನು ಉದ್ಘಾಟಿಸಿ ಮಾತನಾಡಿದರು. ಡೈಮಂಡ್ ರೆಸ್ಟ್ ಗ್ರಾಹಕರಿಗೆ ಹತ್ತಾರು ಅವಕಾಶಗಳನ್ನು ತೆರೆದಿಟ್ಟಿದೆ. ಇಲ್ಲಿ ವಜ್ರಗಳ ಖರೀದಿಗೂ ಸಾಕಷ್ಟು ಆಯ್ಕೆಗಳಿವೆ ಎಂದರು. ಗಾಯಕಿ ಚೈತ್ರಿಕಾ ಕೋಡಿಬೈಲು ಮಾತನಾಡಿ, ವಜ್ರ ಹೊಳಪು ಹಾಗೂ ಬಲಕ್ಕೆ ಹೆಸರುವಾಸಿ. ಇದು

ಪ್ರತಿಷ್ಠಿತ ಮುಳಿಯ ಜ್ಯುವೆಲ್ಲರ್ಸ್ ನಲ್ಲಿ ‘ಡೈಮಂಡ್ ಫೆಸ್ಟ್’ಗೆ ಚಾಲನೆ Read More »

ಮೊಯ್ಲಿ ಹೇಳಿದ ಕೂಡಲೇ ಯಾರೂ ಮುಖ್ಯಮಂತ್ರಿಯಾಗುವುದಿಲ್ಲ : ಸಿದ್ದರಾಮಯ್ಯ ತಿರುಗೇಟು

ಬೆಂಗಳೂರು: ಕಾಂಗ್ರೆಸ್‌ನಲ್ಲಿ ಸಿಎಂ ಕುರ್ಚಿ ಫೈಟ್‌ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಅದರಲ್ಲೂ ಭಾನುವಾರ ಕಾರ್ಕಳದಲ್ಲಿ ನಡೆದ ಕಾಂಗ್ರೆಸ್‌ನ ಕುಟುಂಬೋತ್ಸವ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿಯವರು ನೀಡಿದ ಹೇಳಿಕೆಯೊಂದು ಕಾಂಗ್ರೆಸ್‌ನೊಳಗೆ ತಳಮಳಕ್ಕೆ ಕಾರಣವಾಗಿದೆ. ಈ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಮೊಯ್ಲಿ ಹೇಳಿದ ಕೂಡಲೇ ಯಾರೂ ಮುಖ್ಯಮಂತ್ರಿಯಾಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಭಾನುವಾರ ಡಿ.ಕೆ ಶಿವಕುಮಾರ್ ಭಾಗವಹಿಸಿದ ಕುಟುಂಬೋತ್ಸವ ಕಾರ್ಯಕ್ರಮದಲ್ಲಿ ಅವರ ಎದುರೇ ಮೊಯ್ಲಿಯವರು ಡಿ.ಕೆ.ಶಿವಕುಮಾರ್‌ ಮುಖ್ಯಮಂತ್ರಿಯಾಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದ್ದರು. ಈ

ಮೊಯ್ಲಿ ಹೇಳಿದ ಕೂಡಲೇ ಯಾರೂ ಮುಖ್ಯಮಂತ್ರಿಯಾಗುವುದಿಲ್ಲ : ಸಿದ್ದರಾಮಯ್ಯ ತಿರುಗೇಟು Read More »

ಚಾಂಪಿಯನ್ಸ್‌ ಟ್ರೋಫಿ : ಇಂದು ಭಾರತ-ಆಸ್ಟ್ರೇಲಿಯಾ ಸೆಮಿಫೈನಲ್‌ ಫೈಟ್‌

ಆರು ಪ್ರಮುಖ ಆಟಗಾರರಿಲ್ಲದೆ ಆಸೀಸ್‌ ಕಂಗಾಲು, ಇಂಡಿಯಾಕ್ಕೆ ಸೆಲೆಕ್ಷನ್‌ ಕಗ್ಗಂಟು ದುಬೈ : ಚಾಂಪಿಯನ್ಸ್ ಟ್ರೋಫಿಯ ಸೆಮಿ ಫೈನಲ್‌ ಪಂದ್ಯ ಇಂದು ದುಬೈಯಲ್ಲಿ ನಡೆಯಲಿದ್ದು, ಮೊದಲ ಸೆಮಿಫೈನಲ್​ ಪಂದ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಲಿದೆ. ದುಬೈ ಇಂಟರ್​ನ್ಯಾಷನಲ್ ಕ್ರಿಕೆಟ್​​ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಆಸ್ಟ್ರೇಲಿಯಾದ ಪ್ರಮುಖ ಆಟಗಾರರು ಕಾಣಿಸಿಕೊಳ್ಳುವುದಿಲ್ಲ ಎಂಬುದು ವಿಶೇಷ. ಏಕೆಂದರೆ ಆಸೀಸ್ ಪಡೆಯ 6 ಮಂದಿ ಈಗಾಗಲೇ ನಾನಾ ಕಾರಣಗಳಿಂದಾಗಿ ಹೊರಗುಳಿದಿದ್ದಾರೆ. ಟೂರ್ನಿ ಆರಂಭಕ್ಕೂ ಮುನ್ನ ಮತ್ತು ಆ ಬಳಿಕ ತಂಡದಿಂದ

ಚಾಂಪಿಯನ್ಸ್‌ ಟ್ರೋಫಿ : ಇಂದು ಭಾರತ-ಆಸ್ಟ್ರೇಲಿಯಾ ಸೆಮಿಫೈನಲ್‌ ಫೈಟ್‌ Read More »

ಧಾರ್ಮಿಕ ಕಾರ್ಯಕ್ರಮದಲ್ಲಿ ಗಲಾಟೆ : ಶಾಸಕ ವೇದವ್ಯಾಸ್‌ ಕಾಮತ್‌ ವಿರುದ್ಧ ಎಫ್‌ಐಆರ್‌

ಕಾಂಗ್ರೆಸ್‌ ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಿದ ಆರೋಪ ಮಂಗಳೂರು: ಶಕ್ತಿನಗರ ಬಳಿಯ ಶ್ರೀ ಕೃಷ್ಣ ಭಜನಾ ಮಂದಿರದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಮಂಗಳೂರು ನಗರ ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಸೇರಿದಂತೆ 12 ಜನರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಭಾನುವಾರ ತಡರಾತ್ರಿ ಈ ಘಟನೆ ನಡೆದಿದ್ದು, ಕಂಕನಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತ ಯಶವಂತ ಪ್ರಭು ನೀಡಿದ ದೂರಿನ

ಧಾರ್ಮಿಕ ಕಾರ್ಯಕ್ರಮದಲ್ಲಿ ಗಲಾಟೆ : ಶಾಸಕ ವೇದವ್ಯಾಸ್‌ ಕಾಮತ್‌ ವಿರುದ್ಧ ಎಫ್‌ಐಆರ್‌ Read More »

ಕಾರು ಡಿವೈಡರ್‌ಗೆ ಡಿಕ್ಕಿ : ಮೂವರು ಸ್ಥಳದಲ್ಲೇ ಸಾವು

ಮಂಜೇಶ್ವರ: ಕಾಸರಗೋಡಿನ ಮಂಜೇಶ್ವರದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಹೊಸಂಗಡಿ ಹತ್ತಿರ ವಾಮಂಜೂರು ಚೆಕ್​ಪೋಸ್ಟ್ ಬಳಿ ಸೋಮವಾರ ರಾತ್ರಿ ಚಾಲಕನ ನಿಯಂತ್ರಣ ತಪ್ಪಿ ಕಾರು ಡಿವೈಡರ್​ಗೆ ಡಿಕ್ಕಿಯಾಗಿ ಸಂಭವಿಸಿದ ಅಪಘಾತದಲ್ಲಿ ಕಾರಿನಲ್ಲಿದ್ದ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಜನಾರ್ದನ, ಅವರ ಪುತ್ರ ವರುಣ್ ಹಾಗೂ ಕಿಶನ್ ಮೃತ ದುರ್ದೈವಿಗಳು. ರತ್ನಾ ಎಂಬವರಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರು ಉಪ್ಪಳದ ಪೈವಳಿಕೆ ಬಾಯಿಕಟ್ಟೆ ನಿವಾಸಿಗಳು ಎಂದು ತಿಳಿದುಬಂದಿದೆ. ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಮಂಜೇಶ್ವರ ಪೊಲೀಸ್

ಕಾರು ಡಿವೈಡರ್‌ಗೆ ಡಿಕ್ಕಿ : ಮೂವರು ಸ್ಥಳದಲ್ಲೇ ಸಾವು Read More »

ವಿಶ್ವ ವಿಖ್ಯಾತ  ಹಂಪಿ ಉತ್ಸವದಲ್ಲಿ ಡಾ. ಅನುರಾಧಾ ಕುರುಂಜಿಯವರಿಂದ ಪ್ರಬಂಧ ಮಂಡನೆ

ಸುಳ್ಯ : ಅಂತಾರಾಷ್ಟ್ರೀಯ ಖ್ಯಾತಿಯ ವಿಶ್ವ ವಿಖ್ಯಾತ ಹಂಪಿ ಉತ್ಸವವು ಫೆಬ್ರುವರಿ 28 ರಿಂದ ಮಾರ್ಚ್ 2 ರವರೆಗೆ ನಡೆಯುತ್ತಿದ್ದು, ವಿರೂಪಾಕ್ಷೇಶ್ವರ ದೇವಾಲಯ ವೇದಿಕೆಯಲ್ಲಿ ಹಮ್ಮಿಕೊಂಡ ಮಹಿಳಾ ವಿಚಾರ ಗೋಷ್ಠಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕರು, ಲೇಖಕರೂ, ವ್ಯಕ್ತಿತ್ವವವಿಕಸನ ತರಬೇತುದಾರರೂ ಆದ ಡಾ. ಅನುರಾಧಾ ಕುರುಂಜಿಯವರು ಪ್ರಬಂಧ ಮಂಡನೆ ಮಾಡಿದರು. ಮಹಿಳಾ ಚಿಂತಕಿ  ಶೈಲಜ ಹಿರೇಮಠ್ ಉದ್ಘಾಟಿಸಿದ , ಸಾಹಿತಿಗಳಾದ ಎಸ್ ವಿ ಪಾಟೀಲ್ ಅಧ್ಯಕ್ಷತೆ ವಪಿಸಿದ್ದ  ವಿಚಾರ ಗೋಷ್ಠಿಯಲ್ಲಿ 

ವಿಶ್ವ ವಿಖ್ಯಾತ  ಹಂಪಿ ಉತ್ಸವದಲ್ಲಿ ಡಾ. ಅನುರಾಧಾ ಕುರುಂಜಿಯವರಿಂದ ಪ್ರಬಂಧ ಮಂಡನೆ Read More »

ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆ | ಬಂಡಾಯ ಅಭ್ಯರ್ಥಿಗಳಿಗೇ ಗೆಲುವು | 440 ಅನರ್ಹ ಮತದಾರರಿಗೆ ಮತದಾನ ಅವಕಾಶ ನೀಡುವಂತೆ ನ್ಯಾಯಾಲಯದ ಮೊರೆಹೋದ ಸಹಕಾರ ಭಾರತಿ ಅಭ್ಯರ್ಥಿಗಳು | ಅವಕಾಶ ನೀಡಿದಲ್ಲಿ ಸಹಕಾರಿ ಭಾರತಿಗೆ 12 ರಲ್ಲಿ 8 ಸ್ಥಾನಗಳಲ್ಲಿ ಗೆಲುವು

ಕಡಬ: ಆಲಂಕಾರು ಕೃಷಿಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಕೊನೆಗೂ ಸಹಕಾರ ಭಾರತಿ ವಿರುದ್ಧದ ಬಂಡಾಯ ಎದ್ದ ಇನ್ನೊಂದು ತಂಡ ಜಯಗಳಿಸಿದೆ. ಆದರೂ ಅನರ್ಹ 440 ಮತದಾರರಿಗೆ ಅವಕಾಶಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯ ಅವಕಾಶ ನೀಡಿದಲ್ಲಿ 12 ಸ್ಥಾನದಲ್ಲಿ 8 ಸ್ಥಾನ ಸಹಕಾರ ಭಾರತಿ ಪಾಲಾಗಲಿದೆ. ಚುನಾವಣೆಗಾಗಿ ಬಂಡಾಯ ಎದ್ದ ರಮೇಶ್ ಉಪ್ಪಂಗಳ ಅವರ ತಂಡ 10 ಸ್ಥಾನಗಳನ್ನು ಗೆದ್ದರೂ, ಒಂದು ವೇಳೆ ಅನರ್ಹ 440 ಮತದಾರರಿಗೆ ಮತದಾನ ಮಾಡಲು ಅವಕಾಶ

ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆ | ಬಂಡಾಯ ಅಭ್ಯರ್ಥಿಗಳಿಗೇ ಗೆಲುವು | 440 ಅನರ್ಹ ಮತದಾರರಿಗೆ ಮತದಾನ ಅವಕಾಶ ನೀಡುವಂತೆ ನ್ಯಾಯಾಲಯದ ಮೊರೆಹೋದ ಸಹಕಾರ ಭಾರತಿ ಅಭ್ಯರ್ಥಿಗಳು | ಅವಕಾಶ ನೀಡಿದಲ್ಲಿ ಸಹಕಾರಿ ಭಾರತಿಗೆ 12 ರಲ್ಲಿ 8 ಸ್ಥಾನಗಳಲ್ಲಿ ಗೆಲುವು Read More »

error: Content is protected !!
Scroll to Top