ಸುದ್ದಿ

ಯುವತಿಯ ಪ್ರಾಣಕ್ಕೆ ಕಂಟಕವಾದ ಜ್ಯೋತಿಷಿಯ ಮಾತು

ಬೆಂಗಳೂರು: ಜ್ಯೋತಿಷಿ ಹೇಳಿದ ಭವಿಷ್ಯವಾಣಿಗೆ ಹೆದರಿ ಯುವತಿಯೊಬ್ಬಳು ಆತ್ಮಹತ್ಯೆಗೆ ಶರಣಾದ ಘಟನೆ ಬಾಗಲಕುಂಟೆಯಲ್ಲಿ ನಡೆದಿದೆ. ವಿದ್ಯಾ ಜ್ಯೋತಿ (29) ಎಂಬಾಕೆಯೇ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಯುವತಿ. ಆಕೆಗೆ ಜ್ಯೋತಿಷಿ ಅಲ್ಪಾಯುಷಿ ಎಂದು ಭವಿಷ್ಯ ಹೇಳಿದ್ದು, ಇದರಿಂದಾಗಿ ಹೆದರಿ ಆಕೆ ಆತ್ಮಹತ್ಯೆ ಮಾಡಿಕೊಂಡ ಶಂಕೆ ‌ವ್ಯಕ್ತವಾಗಿದೆ. ಯುವತಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಸದ್ಯ ವರ್ಕ್ ಫ್ರಂ ಹೋಂ ಮಾಡುತ್ತಿದ್ದಳು. ಹೆತ್ತವರು ಸಹ ಮಗಳಿಗಾಗಿ ‌ಎಲ್ಲವನ್ನೂ ಮಾಡಿದ್ದರು. ಅವಳ ಇಷ್ಟದಂತೆ ಆಕೆ ಪ್ರೀತಿಸಿದ ಯುವಕನನ್ನೇ ‌ವಿವಾಹವಾಗುವುದಕ್ಕೂ ಸಮ್ಮತಿ […]

ಯುವತಿಯ ಪ್ರಾಣಕ್ಕೆ ಕಂಟಕವಾದ ಜ್ಯೋತಿಷಿಯ ಮಾತು Read More »

ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಗುದ್ದಿದ ಕಾರು: 2 ಸಾವು, ಓರ್ವ ಗಂಭೀರ

ಹಾಸನ: ಅತಿ ವೇಗದಿಂದ ಹೋಗುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಢಿಕ್ಕಿ ಹೊಡೆದಿದ್ದು, ಗುದ್ದಿದ ರಭಸಕ್ಕೆ ಇಬ್ಬರು ಸ್ಥಳದಲ್ಲೇ ಮೃತರಾಗಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಸಕಲೇಶಪುರದ ಗುಲಗಳಲೆಯಲ್ಲಿ ಬೆಳ್ಳಂಬೆಳಗ್ಗೆ ನಡೆದಿದೆ. ಕಾರು ಬೆಂಗಳೂರಿನಿಂದ ಮಂಗಳೂರಿಗೆ ತೆರಳುತ್ತಿತ್ತು ಎಂದು ತಿಳಿದು ಬಂದಿದೆ. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ಜಖಂಗೊಂಡಿದೆ. ಮೃತಪಟ್ಟವರು ‌ತಮಿಳುನಾಡು ಮತ್ತು ಕೆಜಿಎಫ್ ಮೂಲದವರೆಂದು ತಿಳಿದು ಬಂದಿದೆ‌. ಗಂಭೀರವಾಗಿ ಗಾಯಗೊಂಡ ವ್ಯಕ್ತಿಯನ್ನು ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಗುದ್ದಿದ ಕಾರು: 2 ಸಾವು, ಓರ್ವ ಗಂಭೀರ Read More »

ಶಾಸಕ ಅಶೋಕ್ ರೈ ವಿರುದ್ಧ ಎಂಎಲ್‌ಸಿ ಕಿಶೋರ್ ಕುಮಾರ್ ಗರಂ

ಪುತ್ತೂರು: ಶಾಸಕ ಅಶೋಕ್ ಕುಮಾರ್ ರೈ ವಿರುದ್ಧ ಎಂಎಲ್‌ಸಿ ಕಿಶೋರ್ ಕುಮಾರ್ ಪುತ್ತೂರು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪುತ್ತೂರು ಮಹಿಳಾ ಕಾಲೇಜಿನ ಪ್ರಾಂಶುಪಾಲರ ಅಮಾನತಿಗೆ ಸಂಬಂಧಿಸಿದ ಹಾಗೆ ಶಾಸಕ ರೈ ಅವರನ್ನು ತರಾಟೆಗೆ ತೆಗೆದು ಕೊಂಡಿರುವ ಅವರು, ಕಾಲೇಜಿನ ವಿದ್ಯಾರ್ಥಿನಿಯರು ತಮಗಾಗುತ್ತಿರುವ ಸಮಸ್ಯೆಗಳ ವಿರುದ್ಧ ನ್ಯಾಯಯುತವಾಗಿ ಪ್ರತಿಭಟನೆ ನಡೆಸಿದ್ದಕ್ಕೆ ಆ ಕಾಲೇಜಿನ ಪ್ರಭಾರ ‌ಪ್ರಾಂಶುಪಾಲರನ್ನು ಅಮಾನತು ಮಾಡಿಸಲಾಗಿದೆ ಎಂದು ಹೇಳಿದ್ದಾರೆ. ಮಕ್ಕಳ ಹಿತಾಸಕ್ತಿಗೆ ‌ಸ್ಪಂದಿಸಿದ ಒಬ್ಬ ಪ್ರಾಮಾಣಿಕ ಅಧಿಕಾರಿಯನ್ನು ಬಲಿಪಶು ಮಾಡುವ ಬದಲು ನಿಯಮಗಳನ್ನು ಮುರಿದ ಗುತ್ತಿಗೆದಾರರ

ಶಾಸಕ ಅಶೋಕ್ ರೈ ವಿರುದ್ಧ ಎಂಎಲ್‌ಸಿ ಕಿಶೋರ್ ಕುಮಾರ್ ಗರಂ Read More »

ಕಾರು – ಬೈಕ್ ಢಿಕ್ಕಿ: ದಂಪತಿ ಸ್ಥಳದಲ್ಲೇ ಸಾವು

ಹುಣಸೂರು: ದ್ವಿಚಕ್ರ ವಾಹನಕ್ಕೆ ಕಾರು ಗುದ್ದಿದ ಪರಿಣಾಮ ದಂಪತಿ ಸ್ಥಳದಲ್ಲೇ ಮೃತಪಟ್ಟ ಘಟನೆ ನಾರಾಯಣಪುರದ ಬಳಿ ನಡೆದಿದೆ. ಬೀರನಹಳ್ಳಿಯ ನಂಜುಂಡಸ್ವಾಮಿ(52) ಮತ್ತು ನೇತ್ರಾವತಿ(46) ಎಂಬವರೇ ಮೃತ ದುರ್ದೈವಿಗಳು. ಈ ದಂಪತಿ ಸಂಬಂಧಿಕರ ಸಾವಿಗೆ ತೆರಳುತ್ತಿದ್ದಾಗ ಘಟನೆ ನಡೆದಿದೆ‌. ಮೃತರಿಗೆ ಇಬ್ಬರು ಮಕ್ಕಳಿದ್ದಾರೆ ಎಂದು ತಿಳಿದು ಬಂದಿದೆ. ಕಾರು ಢಿಕ್ಕಿಯಾದ ರಭಸಕ್ಕೆ ದಂಪತಿಯ ತಲೆ, ಕೈ ಕಾಲುಗಳಿಗೆ ‌ಗಂಭೀರ ಪ್ರಮಾಣದ ಗಾಯಗಳಾಗಿ ಅವರು ಸ್ಥಳದಲ್ಲೇ ಕೊನೆಯುಸಿರು ಎಳೆದಿದ್ದಾರೆ ಎಂದು ತಿಳಿದು ಬಂದಿದೆ. ಕೆ. ಆರ್. ನಗರ ಪೊಲೀಸರು ಪ್ರಕರಣ

ಕಾರು – ಬೈಕ್ ಢಿಕ್ಕಿ: ದಂಪತಿ ಸ್ಥಳದಲ್ಲೇ ಸಾವು Read More »

ಗೋ ಹತ್ಯೆ, ಮಾಂಸ ಮಾರಾಟ: ಆರೋಪಿಯ ಮನೆ ಸೀಜ್

ಉಪ್ಪಿನಂಗಡಿ: ಅಕ್ರಮವಾಗಿ ಗೋ ಹತ್ಯೆ ಮಾಡಿ ಮಾಂಸ ಮಾರಾಟ ಮಾಡುತ್ತಿದ್ದ ಪ್ರಕರಣಕ್ಕೆ ‌ಸಂಬಂಧಿಸಿದ ಹಾಗೆ ಉಪ್ಪಿನಂಗಡಿಯ ಬಾರ್ಯದ ಹೊಸವಕ್ಲು ಎಂಬಲ್ಲಿನ ಮನೆಯೊಂದಕ್ಕೆ ದಾಳಿ ನಡೆಸಿ ಗೋಮಾಂಸ ವಶಕ್ಕೆ ಪಡೆದ ಪೊಲೀಸರು ಆರೋಪಿಯ ಮನೆಯನ್ನು ಜಪ್ತಿ ಮಾಡಿದ್ದಾರೆ. ಅಕ್ರಮ ಗೋ ಹತ್ಯೆ, ಮಾರಾಟದ ಖಚಿತ ಮಾಹಿತಿ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಈ ವೇಳೆ ಇಬ್ಬರು ಆರೋಪಿಗಳು ಮನೆಯಿಂದ ಪರಾರಿಯಾಗಿದ್ದಾಗಿ ತಿಳಿದು ಬಂದಿದೆ. ಪರಿಶೀಲನೆ ವೇಳೆ ಗೋಮಾಂಸ‌ವನ್ನು ಪ್ಯಾಕೆಟ್‌ಗಳಾಗಿ ಮಾಡಿಟ್ಟಿರುವುದು ಪತ್ತೆಯಾಗಿದೆ. ಹಾಗೆಯೇ ಸಮೀಪದಲ್ಲೇ ಇದ್ದ ಆಟೋ ರಿಕ್ಷಾದಲ್ಲಿಯೂ

ಗೋ ಹತ್ಯೆ, ಮಾಂಸ ಮಾರಾಟ: ಆರೋಪಿಯ ಮನೆ ಸೀಜ್ Read More »

ಮಾಂಸಕ್ಕಾಗಿ ಅಕ್ರಮ ಗೋ ಸಾಗಾಟ: ವಾಹನ ಜಪ್ತಿ

ಬಂಟ್ವಾಳ: ಕೊಳ್ನಾಡು ಗ್ರಾಮದ ಕರೈ ಎಂಬಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ವಾಹನವನ್ನು ವಿಟ್ಲ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಕ್ರಮವಾಗಿ ಗೋ ಸಾಗಾಟ ನಡೆಯುತ್ತಿದೆ ಎನ್ನುವ ಖಚಿತ ಮಾಹಿತಿಯ ಮೇರೆಗೆ ಕಾರ್ಯಪ್ರವೃತ್ತರಾದ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಈ ವೇಳೆ ಹಿಂಸಾತ್ಮಕ ರೀತಿಯಲ್ಲಿ ಎರಡು ದನಗಳನ್ನು ತುಂಬಿದ್ದ ವಾಹನವೊಂದು ರಸ್ತೆ ಬದಿ ಪತ್ತೆಯಾಗಿದೆ‌. ವಾಹನದ ಚಾಲಕ ಮಂಡ್ಯ ಜಿಲ್ಲೆಯ ನವೀನ್ ಮತ್ತು ಚೇತನ್ ಎಂಬವರನ್ನು ವಿಚಾರಣೆಗೆ ಒಳಪಡಿಸಿದ್ದು, ಆ ಗೋವುಗಳನ್ನು ಚೆನ್ನರಾಯಪಟ್ಟಣದ ಶಂಕರ್ ಎಂಬಾತ ಸಾಲೆತ್ತೂರಿನ ಶಾಫಿಗೆ ಮಾರಾಟ

ಮಾಂಸಕ್ಕಾಗಿ ಅಕ್ರಮ ಗೋ ಸಾಗಾಟ: ವಾಹನ ಜಪ್ತಿ Read More »

ವಿದ್ಯಾರ್ಥಿಗಳ ಬದುಕಿನ ಜೊತೆಗೆ ರಾಜ್ಯ ಸರ್ಕಾರ ಆಟವಾಡುತ್ತಿದೆ: ಎಚ್‌ಡಿ‌ಕೆ

ವಿಜಯಪುರ: ರಾಜ್ಯದ ಕಾಂಗ್ರೆಸ್ ಸರ್ಕಾರ ವಿದ್ಯಾರ್ಥಿಗಳ ಜೀವನದ ಜೊತೆಗೆ ಚೆಲ್ಲಾಟವಾಡುತ್ತಿದೆ ಎಂದು ಕೇಂದ್ರ ಸಚಿವ, ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ. ರಾಜ್ಯದಲ್ಲಿ ಹುದ್ದೆಗಳು ಖಾಲಿ ಇವೆ. ಆದರೆ ಸರ್ಕಾರ ಮಾತ್ರ ಅದನ್ನು ಭರ್ತಿ ಮಾಡಲು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಬದಲಾಗಿ ವಿದ್ಯಾರ್ಥಿಗಳ ಬದುಕಿನಲ್ಲಿ ಆಟವಾಡುತ್ತಿರುವುದಾಗಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಗ್ಯಾರಂಟಿ ಕೆಲಸಗಳಿಂದಾಗಿ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಆದರೆ ಇದರಿಂದಾಗಿ ಹೊರೆಯಾಗುತ್ತಿದೆ ಎನ್ನುವುದು ಸದ್ಯ ಈಗಲಾದರೂ ಡಿಸಿಎಂ ಡಿ. ಕೆ. ಶಿವಕುಮಾರ್ ಅವರಿಗಾದರೂ

ವಿದ್ಯಾರ್ಥಿಗಳ ಬದುಕಿನ ಜೊತೆಗೆ ರಾಜ್ಯ ಸರ್ಕಾರ ಆಟವಾಡುತ್ತಿದೆ: ಎಚ್‌ಡಿ‌ಕೆ Read More »

ಬೆಂಗಳೂರು ಪೊಲೀಸರ ಭರ್ಜರಿ ಕಾರ್ಯಾಚರಣೆ: 16 ಡ್ರಗ್ಸ್ ಪೆಡ್ಲರ್‌ಗಳು ಅಂದರ್

ಬೆಂಗಳೂರು: ಪೊಲೀಸರು ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ 16 ಮಂದಿ ಮಾದಕ ವಸ್ತು ಮಾರಾಟಗಾರರನ್ನು ಬಂಧಿಸಲಾಗಿದೆ. ಬೆಂಗಳೂರಿನ ವಿವಿಧ ನಗರಗಳ ಪೊಲೀಸರು ಮತ್ತು ಸಿಸಿಬಿ ‌ನಡೆಸಿದ ಕಾರ್ಯಾಚರಣೆಯಲ್ಲಿ ಡ್ರಗ್ಸ್ ಪೆಡ್ಲರ್‌ಗಳು ಬಲೆಗೆ ಬಿದ್ದಿರುವುದಾಗಿದೆ. ಆರೋಪಿಗಳಲ್ಲಿ ವಿದೇಶಿಗರು, ಹೊರ ರಾಜ್ಯದವರು ಸೇರಿದಂತೆ ಎಂಟು ಮಂದಿ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತರಿಂದ 5.24 ಕೋಟಿ ರೂ. ಗಳ ಮೌಲ್ಯದ, ಮೂರು ಸಾವಿರ ಎಂಡಿಎಂ, ಗಾಂಜಾ ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ. ಹಾಗೆಯೇ ಖಚಿತ ಮಾಹಿತಿ ಪಡೆದು ಮೇರೆಗೆ ದಾಳಿ ನಡೆಸಿದ್ದಸಿಸಿಬಿ

ಬೆಂಗಳೂರು ಪೊಲೀಸರ ಭರ್ಜರಿ ಕಾರ್ಯಾಚರಣೆ: 16 ಡ್ರಗ್ಸ್ ಪೆಡ್ಲರ್‌ಗಳು ಅಂದರ್ Read More »

ದ್ವಿತೀಯ ಪಿಯುಸಿ ಪರೀಕ್ಷಾ ಹಿನ್ನೆಲೆ ಪರೀಕ್ಷಾ ಬೋರ್ಡ್‌ನಿಂದ ‌ಕಠಿಣ ಕ್ರಮ

ಬೆಂಗಳೂರು: ನಾಳೆಯಿಂದ ರಾಜ್ಯದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗಲಿದ್ದು, ಈ ಸಮಯದಲ್ಲಿ ಯಾವುದೇ ಪರೀಕ್ಷಾ ಅಕ್ರಮ ನಡೆಯದಂತೆ ಎಕ್ಸಾಂ ಬೋರ್ಡ್ ಕಠಿಣ ಕ್ರಮಗಳನ್ನು ತೆಗೆದುಕೊಂಡಿದೆ. ಪರೀಕ್ಷಾ ಬೋರ್ಡ್ ಕೈಗೊಂಡ ಕ್ರಮಗಳ ಪಟ್ಟಿ ಈ ಕೆಳಗಿನಂತಿವೆ:

ದ್ವಿತೀಯ ಪಿಯುಸಿ ಪರೀಕ್ಷಾ ಹಿನ್ನೆಲೆ ಪರೀಕ್ಷಾ ಬೋರ್ಡ್‌ನಿಂದ ‌ಕಠಿಣ ಕ್ರಮ Read More »

ಪತಿ ಮರಣದ ಕೆಲವೇ ದಿನದಲ್ಲಿ ಪತ್ನಿ ಮರು ಮದುವೆ: ಸಂದೇಹದಿಂದ ದೂರು ನೀಡಿದ ಮೃತನ ಸಹೋದರರು

ತುಮಕೂರು: ಪತಿ ಮೃತಪಟ್ಚ ಕೆಲವೇ ದಿನಗಳಲ್ಲಿ ಪತ್ನಿ ಮತ್ತೊಂದು ಮದುವೆಯಾಗಿದ್ದು, ಇದರಿಂದ ಅನುಮಾನಗೊಂಡು ‌ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ ಘಟನೆ ದಾಸರಹಳ್ಳಿಯಲ್ಲಿ ನಡೆದಿದೆ. ಮೃತ ವ್ಯಕ್ತಿಯ ಶವವನ್ನು 23 ದಿನಗಳ ಬಳಿಕ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪರಮೇಶ್ (50) ಎಂಬವರು ಹೃದಯಾಘಾತದಿಂದ ಮೃತಪಟ್ಟಿದ್ದರು. ಇದಾದ ಕೆಲವೇ ದಿನದಲ್ಲಿ ಅವರ ಪತ್ನಿ ಬೇರೊಂದು ಮದುವೆಯಾಗಿದ್ದು, ಕುಟುಂಬಸ್ಥರಲ್ಲಿ ಸಂದೇಹ ಸೃಷ್ಟಿಯಾಗುವಂತೆ ಮಾಡಿದೆ. ಮೃತ ವ್ಯಕ್ತಿಯ ಸಹೋದರರಿಗೆ ತನ್ನ ಅಣ್ಣನಿಗೆ ಹೃದಯಾಘಾತವಾಗಿಲ್ಲ, ಆತನ ಮೂಗಿನ ನಡುವೆ ಗಾಯ ಇತ್ತು.

ಪತಿ ಮರಣದ ಕೆಲವೇ ದಿನದಲ್ಲಿ ಪತ್ನಿ ಮರು ಮದುವೆ: ಸಂದೇಹದಿಂದ ದೂರು ನೀಡಿದ ಮೃತನ ಸಹೋದರರು Read More »

error: Content is protected !!
Scroll to Top