ಸುದ್ದಿ

ಮಂಗಳೂರು ಕಾರಾಗೃಹದಲ್ಲಿ ಮೊಬೈಲ್‌ಗಳು, ಸಿಮ್, ಚಾರ್ಜರ್ ಪತ್ತೆ

ಮಂಗಳೂರು: ಬೆಂಗಳೂರಿನಲ್ಲಿ ಬಂಧೀಖಾನೆ ಡಿಜಿಪಿಯಾಗಿ ಅಲೋಕ್ ‌ಕುಮಾರ್ ಅವರು ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ‌ಬಂಧೀಖಾನೆ ಭದ್ರತೆ ಹೆಚ್ಚಿಸಲಾಗಿದೆ. ಅವರು ಮಂಗಳೂರಿನ ಕಾರಾಗೃಹಕ್ಕೂ ‌ತೆರಳಿ ಪರಿಶೀಲನೆ ನಡೆಸಿ, ಎಚ್ಚರಿಕೆ ನೀಡಿದ್ದರು. ಇದರ ಬೆನ್ನಲ್ಲೇ ಮಂಗಳೂರು ಬಂಧೀಖಾನೆಯಲ್ಲಿ ಮೂರು ಮೊಬೈಲ್ ಫೋನ್, ಸಿಮ್ ಪತ್ತೆಯಾಗಿದೆ. ಜೈಲಧಿಕಾರಿಗಳು ಜ. 14 ರಂದು ಕಾರಾಗೃಹದಲ್ಲಿ ತಪಾಸಣೆ ನಡೆಸಿದ್ದು, ಈ ವೇಳೆ A ವಿಭಾಗದ ಮೂರನೇ ಕೊಠಡಿಯಲ್ಲಿ ಸಿಮ್ ಸಹಿತ ಮೊಬೈಲ್ ಫೋನ್, ಕೀ ಪ್ಯಾಡ್ ಫೋನ್, ಸಿನ್, ಚಾರ್ಜರ್, ಅಡಾಪ್ಟರ್, ಚಾರ್ಜರ್ ಕೇಬಲ್ […]

ಮಂಗಳೂರು ಕಾರಾಗೃಹದಲ್ಲಿ ಮೊಬೈಲ್‌ಗಳು, ಸಿಮ್, ಚಾರ್ಜರ್ ಪತ್ತೆ Read More »

ರಂಗ ವಿಧಾತ ಭರತ್ ಎಸ್ ಕರ್ಕೇರರಿಗೆ ರಾಷ್ಟ್ರ ಮಟ್ಟದ “ಕಲಾವಿಭೂಷಣ” ಗೌರವ ಪ್ರಶಸ್ತಿ

ಮಂಗಳೂರು ತಾಲೂಕು ಕಂದಾವರ ಪದವು ನಿವಾಸಿ ಖ್ಯಾತ ನಾಟಕಕಾರರು, ಕಲಾವಿದರು, ಸಾಮಾಜಿಕ ಕಾರ್ಯಕರ್ತರಾದ ಶ್ರೀ ಭರತ್ ಎಸ್. ಕರ್ಕೇರ ಇವರು ಭಾರತದ ಅತ್ಯಂತ ಪ್ರಸಿದ್ದ ಮತ್ತು ಪ್ರಭಾವಶಾಲಿ ತತ್ವಜ್ಞಾನಿಗಳಲ್ಲಿ ಒಬ್ಬರಾದ ಸ್ವಾಮಿ ವಿವೇಕಾನಂದರ ಜನ್ಮ ದಿನವಾದ “ರಾಷ್ಟ್ರೀಯ ಯುವ ದಿನಾಚರಣೆ”ಯ ನಿಮಿತ್ತ ಕವಿತ್ತ ಕರ್ಮಮಣಿ ಫೌಂಡೇಶನ್ (ರಿ.) ನಾಗರಮುನ್ನೋಳಿ ವತಿಯಿಂದ ಕೊಡಲ್ಪಡುವ ರಾಷ್ಟ್ರ ಮಟ್ಟದ ಗೌರವ ಪ್ರಶಸ್ತಿ”ಕಲಾ ವಿಭೂಷಣ ಪ್ರಶಸ್ತಿ – 2026 ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಕಲಾ ಕ್ಷೇತ್ರದಲ್ಲಿ ಮತ್ತು ಸಮಾಜ ಸೇವಾ ಕಾರ್ಯದಲ್ಲಿ ತಮ್ಮದೇ ಆದ

ರಂಗ ವಿಧಾತ ಭರತ್ ಎಸ್ ಕರ್ಕೇರರಿಗೆ ರಾಷ್ಟ್ರ ಮಟ್ಟದ “ಕಲಾವಿಭೂಷಣ” ಗೌರವ ಪ್ರಶಸ್ತಿ Read More »

ಗೋವಾ : ಇಬ್ಬರು ಮಹಿಳೆಯರನ್ನು ಕತ್ತು ಸೀಳಿ ಕೊಂದ ರಷ್ಯಾ ಪ್ರವಾಸಿಗ

ಪಣಜಿ: ಗೋವಾದಲ್ಲಿ ರಷ್ಯಾದ ವ್ಯಕ್ತಿಯೊಬ್ಬ ತನ್ನದೇ ದೇಶದ ಇಬ್ಬರು ಮಹಿಳೆಯರನ್ನು ಕತ್ತು ಸೀಳಿ ಬರ್ಬರವಾಗಿ ಕೊಂದಿರುವ ಘಟನೆ ಸಂಭವಿಸಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಉತ್ತರ ಗೋವಾದ ಅರಾಂಬೋಲ್ ಮತ್ತು ಮೊರ್ಜಿಮ್ ಗ್ರಾಮದಲ್ಲಿ ವಾಸವಾಗಿದ್ದ ಎಲೆನಾ ವನೀವಾ (37) ಮತ್ತು ಎಲೆನಾ ಕಸ್ತನೋವಾ (37) ಅವರನ್ನು ಅಲೆಕ್ಸಿ ಲಿಯೊನೊವ್ ಎಂಬಾತ ಕೊಲೆಗೈದಿದ್ದಾನೆ. ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜನವರಿ 14 ರಂದು ಆರೋಪಿ ಮೊರ್ಜಿಮ್‌ನಲ್ಲಿ ವಾಸವಾಗಿದ್ದ ಸ್ನೇಹಿತೆ ಎಲೆನಾ ವನೀವಾ ಅವರ ಕುತ್ತಿಗೆಯನ್ನು ಸೀಳಿ ಕೊಂದಿದ್ದಾನೆ. ಜನವರಿ

ಗೋವಾ : ಇಬ್ಬರು ಮಹಿಳೆಯರನ್ನು ಕತ್ತು ಸೀಳಿ ಕೊಂದ ರಷ್ಯಾ ಪ್ರವಾಸಿಗ Read More »

ಅವಧಿ ಮೀರಿದ ಬಿಯರ್‌ ಕುಡಿದು ಯುವಕರು ಅಸ್ವಸ್ಥ

ಜನಪ್ರಿಯ ಬ್ರಾಂಡ್‌ನ ಅವಧಿ ಮೀರಿದ ಬಿಯರ್‌ ಪೂರೈಸಿದ ಬಾರ್‌ನವರು ಬೆಂಗಳೂರು : ಅವಧಿ ಮೀರಿದ ಬಿಯರ್ ಕುಡಿದ ಪರಿಣಾಮ ಕೆಲವರು ವಾಂತಿ ಮಾಡಿಕೊಂಡು ಅಸ್ವಸ್ಥರಾಗಿ ಆಸ್ಪತ್ರೆ ಪಾಲಾದ ಘಟನೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಹುಳದೇನಹಳ್ಳಿಯ ವೆಂಕಟ್ ಬಾರ್ ಅಂಡ್ ರೆಸ್ಟೋರೆಂಟ್‌ನಲ್ಲಿ ನಡೆದಿದೆ. ಗುರುವಾರ ಸಂಜೆ ಯುವಕರ ಗುಂಪೊಂದು ಒಂದು ಕೇಸ್ ಬಡ್‌ವೈಸರ್‌ ಬಿಯರ್ ಖರೀದಿಸಿ ಸೇವಿಸಿದ ನಂತರ ವಾಂತಿ ಆಗಿದ್ದು, ಅವರನ್ನು ತಕ್ಷಣ ಮಾಲೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಂಬ್ಯುಲೆನ್ಸ್ ಬಳಸಿದರೆ ಮುಜುಗರ ಆಗುತ್ತದೆ ಎಂಬ ಕಾರಣಕ್ಕಾಗಿ

ಅವಧಿ ಮೀರಿದ ಬಿಯರ್‌ ಕುಡಿದು ಯುವಕರು ಅಸ್ವಸ್ಥ Read More »

ಪುನೀತ್‌ ಕೆರೆಹಳ್ಳಿ ಮತ್ತೆ ಬಂಧನ

ವಲಸೆ ಕಾರ್ಮಿಕರ ದಾಖಲೆ ಪತ್ರಗಳನ್ನು ಪರಿಶೀಲಿಸಿದ ಆರೋಪ ಹೊರಿಸಿ ಬಂಧನ ಬೆಂಗಳೂರು: ವಲಸೆ ಕಾರ್ಮಿಕರ ಪೌರತ್ವ ಹಾಗೂ ಗುರುತಿನ ದಾಖಲೆಗಳನ್ನು ಪರಿಶೀಲಿಸುತ್ತಿದ್ದ ಹಿಂದೂ ಪರ ಹೋರಾಟಗಾರ ಪುನೀತ್‌ ಕೆರೆಹಳ್ಳಿಯನ್ನು ಪೊಲೀಸರು ಶುಕ್ರವಾರ ತಡರಾತ್ರಿ ಬಂಧಿಸಿದ್ದಾರೆ. ವಲಸಿಗರಿಗೆ ಬೆದರಿಕೆ ಹಾಗೂ ಭೀತಿಯನ್ನುಂಟುಮಾಡುತ್ತಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪುನೀತ್ ಕೆರೆಹಳ್ಳಿಯನ್ನು ಬನ್ನೇರುಘಟ್ಟ ಪೊಲೀಸ್ ಠಾಣಾ ಪೊಲೀಸರು ಶುಕ್ರವಾರ ತಡರಾತ್ರಿ ಬಂಧಿಸಿದ್ದಾರೆ. ನಿನ್ನೆ ರಾತ್ರಿ ಪುನೀತ್ ಕೆರೆಹಳ್ಳಿ ಮನೆಯ ಬಳಿಯೇ ಪೊಲೀಸರು ವಶಕ್ಕೆ ಪಡೆದಿದ್ದು, ಪೊಲೀಸ್​ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸುತ್ತಿದ್ದಾರೆ.

ಪುನೀತ್‌ ಕೆರೆಹಳ್ಳಿ ಮತ್ತೆ ಬಂಧನ Read More »

ಟೋಲ್‌ಗೇಟ್‌ಗಳಲ್ಲಿ ನಗದು ಪಾವತಿ ನಿಷೇಧ

ಏಪ್ರಿಲ್‌ 1ರಿಂದ ಹೊಸ ನಿಯಮ ಜಾರಿಗೆ ತರಲು ತೀರ್ಮಾನ ನವದೆಹಲಿ: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಏಪ್ರಿಲ್ 1ರಿಂದ ರಾಷ್ಟ್ರೀಯ ಹೆದ್ದಾರಿ ಟೋಲ್ ಪ್ಲಾಜಾಗಳಲ್ಲಿ ನಗದು ಪಾವತಿಯನ್ನು ಸಂಪೂರ್ಣವಾಗಿ ನಿಷೇಧಿಸಲು ತೀರ್ಮಾನಿಸಿದೆ. ವಾಹನ ದಟ್ಟಣೆ ಕಡಿಮೆ ಮಾಡಲು ಮತ್ತು ಪ್ರಯಾಣವನ್ನು ಸುಗಮಗೊಳಿಸುವ ಉದ್ದೇಶದಿಂದ ಪ್ರಯಾಣಿಕರು ಟೋಲ್‌ಗಳನ್ನು ಪಾವತಿಸಲು FASTag ಅಥವಾ UPI ಬಳಸಬೇಕಾಗುತ್ತದೆ. ಈ ಬಗ್ಗೆ ಯಾವುದೇ ಅಧಿಕೃತ ಅಧಿಸೂಚನೆಯನ್ನು ಹೊರಡಿಸಲಾಗಿಲ್ಲವಾದರೂ, ಸಚಿವಾಲಯವು ಸುಗಮ ಪರಿವರ್ತನೆಗೆ ಸಿದ್ಧತೆ ನಡೆಸುತ್ತಿದೆ. ಈ ಕ್ರಮವು ದೀರ್ಘ ಸರತಿ

ಟೋಲ್‌ಗೇಟ್‌ಗಳಲ್ಲಿ ನಗದು ಪಾವತಿ ನಿಷೇಧ Read More »

ಪರ್ಯಾಯ ಸಂಭ್ರಮದಲ್ಲಿ ಉಡುಪಿ : ಇಂದು ರಾತ್ರಿಯಿಂದ ಧಾರ್ಮಿಕ ವಿಧಿಗಳು ಆರಂಭ

ಮೊದಲ ಸಲ ಪರ್ಯಾಯ ಪೀಠವೇರಲಿರುವ ಶೀರೂರು ಮಠಾಧೀಶ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಉಡುಪಿ: ಶೀರೂರು ಮಠಾಧೀಶ ಶ್ರೀ ವೇದವರ್ಧನ ತೀರ್ಥ ಶ್ರೀಪಾದರ ಪ್ರಥಮ ಪರ್ಯಾಯ ಮಹೋತ್ಸವದ ಸರ್ವ ಸಿದ್ಧತೆಗಳು ಪೂರ್ಣಗೊಂಡಿದ್ದು, ಉಡುಪಿ ಜನತೆಯ ಸಹಕಾರದೊಂದಿಗೆ ಶ್ರದ್ಧಾ–ಭಕ್ತಿಯಿಂದ, ಅತ್ಯಂತ ವ್ಯವಸ್ಥಿತ ಹಾಗೂ ವೈಭವಯುತವಾಗಿ ಪರ್ಯಾಯ ಮಹೋತ್ಸವವನ್ನು ನಡೆಸಲು ಪೊಡವಿಗೊಡೆಯ ಶ್ರೀಕೃಷ್ಣನ ನಗರಿ ಉಡುಪಿ ಸಜ್ಜಾಗಿದೆ. ಪರ್ಯಾಯ ಮಹೋತ್ಸವದಲ್ಲಿ ಸುಮಾರು 2 ಲಕ್ಷಕ್ಕೂ ಅಧಿಕ ಭಕ್ತರು ಭಾಗವಹಿಸುವ ನಿರೀಕ್ಷೆ ಇದ್ದು, ಜನವರಿ 17ರ ರಾತ್ರಿ ಸಹ ಸಾರ್ವಜನಿಕ ಅನ್ನ

ಪರ್ಯಾಯ ಸಂಭ್ರಮದಲ್ಲಿ ಉಡುಪಿ : ಇಂದು ರಾತ್ರಿಯಿಂದ ಧಾರ್ಮಿಕ ವಿಧಿಗಳು ಆರಂಭ Read More »

ಇಂದು, ನಾಳೆ ತಣ್ಣೀರುಬಾವಿ ಬೀಚ್‌ನಲ್ಲಿ ವಿಶ್ವವಿಖ್ಯಾತ ಗಾಳಿಪಟ ಉತ್ಸವ

15 ದೇಶಗಳ 30 ಅಂತಾರಾಷ್ಟ್ರೀಯ ತಂಡಗಳಿಂದ ಆಕರ್ಷಕ ಗಾಳಿಪಟಗಳ ಹಾರಾಟ ಮಂಗಳೂರು : ಕರಾವಳಿ ಉತ್ಸವದ ಅಂಗವಾದ ಮಂಗಳೂರಿನ ವಿಶ್ವವಿಖ್ಯಾತ ಗಾಳಿಪಟ ಉತ್ಸವ ಇಂದು ಮತ್ತು ನಾಳೆ ತಣ್ಣೀರುಬಾವಿ ಬ್ಲೂ ಬೇ ಬೀಚ್‌ಲ್ಲಿ ನಡೆಯಲಿದೆ. 9ನೇ ಅವೃತ್ತಿಯ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಸಂಜೆ 3 ಗಂಟೆಗೆ ಆರಂಭವಾಗಲಿದ್ದು, ಇದರಲ್ಲಿ 15 ದೇಶಗಳ 30 ಅಂತಾರಾಷ್ಟ್ರೀಯ ಗಾಳಿಪಟುಗಳು ಈಗಾಗಲೇ ಮಂಗಳೂರಿಗೆ ಆಗಮಿಸಿದ್ದಾರೆ. ಭಾರತ ಮತ್ತು ವಿದೇಶಗಳ ಒಟ್ಟು 62 ನುರಿತ ಗಾಳಿಪಟ ಹಾರಾಟಗಾರರು ತಮ್ಮ ವೈವಿಧ್ಯಮಯ ಗಾಳಿಪಟಗಳನ್ನು ಬಾನಂಗಳದಲ್ಲಿ

ಇಂದು, ನಾಳೆ ತಣ್ಣೀರುಬಾವಿ ಬೀಚ್‌ನಲ್ಲಿ ವಿಶ್ವವಿಖ್ಯಾತ ಗಾಳಿಪಟ ಉತ್ಸವ Read More »

ವಿವಾದದ ಕಿಡಿ ಹೊತ್ತಿಸಿದ ಎ.ಆರ್‌.ರೆಹಮಾನ್‌ ಹೇಳಿಕೆ

ಕೋಮುವಾದಿ ಮನಸ್ಥಿತಿಯಿಂದಾಗಿ ಬಾಲಿವುಡ್‌ನಲ್ಲಿ ಅವಕಾಶ ಸಿಗುತ್ತಿಲ್ಲ ಎಂದ ಸಂಗೀತ ನಿರ್ದೇಶಕ ಮುಂಬೈ: ಆಸ್ಕರ್ ಅವಾರ್ಡ್ ಗೆದ್ದಿರುವ ಸಂಗೀತ ಸಂಯೋಜಕ ಎ.ಆರ್. ರೆಹಮಾನ್ ಅವರ ಒಂದು ಹೇಳಿಕೆ ಬಾಲಿವುಡ್‌ನಲ್ಲಿ ವಿವಾದದ ಅಲೆ ಎಬ್ಬಿಸಿದೆ. ಬಾಲಿವುಡ್‌ನಲ್ಲಿ ನನಗೆ 8 ವರ್ಷಗಳಿಂದ ಅವಕಾಶ ಸಿಗ್ತಿಲ್ಲ. ಕೋಮುವಾದಿ ಮನಸ್ಥಿತಿಯೂ ಇದಕ್ಕೆ ಕಾರಣವಿರಬಹುದು ಎಂದು ರೆಹಮಾನ್‌ ಹೇಳಿದ್ದಾರೆ. ಬಿಬಿಸಿ ಏಷ್ಯನ್ ನೆಟ್ವರ್ಕ್ ಸಂದರ್ಶನದಲ್ಲಿ ಮಾತಾಡಿರುವ ರೆಹಮಾನ್, ನಾನು ಕೆಲಸ ಹುಡುಕಿ ಹೋಗಲ್ಲ. ನನ್ನನ್ನ ಅರಸಿ ಬರುವ ಕೆಲಸವನ್ನು ಅತ್ಯಂತ ಶ್ರದ್ಧೆ, ಪ್ರಾಮಾಣಿಕವಾಗಿ ಮಾಡ್ತೇನೆ. 90ರ

ವಿವಾದದ ಕಿಡಿ ಹೊತ್ತಿಸಿದ ಎ.ಆರ್‌.ರೆಹಮಾನ್‌ ಹೇಳಿಕೆ Read More »

ಮುಂಬಯಿ ಮಹಾನಗರಪಾಲಿಕೆಯಲ್ಲಿ ಬಿಜೆಪಿ ಆಡಳಿತದತ್ತ ದಾಪುಗಾಲು : ಠಾಕ್ರೆ ಪರಿವಾರದ ಕಾರುಬಾರು ಅಂತ್ಯ

ಮಹಾರಾಷ್ಟ್ರದ ಮಹಾನಗರಪಾಲಿಕೆ ಚುನಾವಣೆಯಲ್ಲೂ ಕೇಸರಿ ಅಲೆ ಕಮಾಲ್‌ ಮುಂಬಯಿ : ಮಹಾರಾಷ್ಟ್ರದ ನಗರಪಾಲಿಕೆ ಚುನಾವಣೆಯಲ್ಲೂ ಕೇಸರಿ ಅಲೆ ಮುಂದುವರಿದಿದೆ. ಇಡೀ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮುನ್ನಡೆ ಕಾಯ್ದುಕೊಂಡಿದೆ. ಅದರಲ್ಲೂ ಮುಂಬಯಿ ಮಹಾನಗರಪಾಲಿಕೆಯ;ಲ್ಲಿ ಹಲವು ದಶಕಗಳ ಶಿವಸೇನೆಯ ಆಡಳಿತ ಮುಕ್ತಾಯಗೊಂಡಿದೆ. ಶಿವಸೇನೆಯ ಸಂಸ್ಥಾಪಕ ಬಾಳಾ ಸಾಹೇಬ್ ಠಾಕ್ರೆ ಕಾಲದಿಂದಲೂ ತಮ್ಮ ಕುಟುಂಬದ ಹಿಡಿತದಲ್ಲಿ ಇಟ್ಟುಕೊಂಡಿದ್ದ ಮುಂಬೈ ಮಹಾನಗರ ಪಾಲಿಕೆಯಲ್ಲಿ ಶಿವಸೇನೆಯ ಉದ್ದವ್ ಠಾಕ್ರೆ ಮತ್ತು ಎಂಎನ್ಎಸ್ ಸಂಸ್ಥಾಪಕ ರಾಜ್ ಠಾಕ್ರೆ ಆಧಿಪತ್ಯಕ್ಕೆ ಮತದಾರ ಮಂಗಳ ಹಾಡಿದ್ದಾನೆ. ಮುಂಬೈ

ಮುಂಬಯಿ ಮಹಾನಗರಪಾಲಿಕೆಯಲ್ಲಿ ಬಿಜೆಪಿ ಆಡಳಿತದತ್ತ ದಾಪುಗಾಲು : ಠಾಕ್ರೆ ಪರಿವಾರದ ಕಾರುಬಾರು ಅಂತ್ಯ Read More »

error: Content is protected !!
Scroll to Top