ಸುದ್ದಿ

ಕಿನ್ನಿಗೋಳಿಯ ಉಳವಾಡಿಯಲ್ಲಿ ಚಿರತೆಯ ಶವ ಪತ್ತೆ

ಮಂಗಳೂರು : ಚಿರತೆಯೊಂದು ಅಸಹಜ ರೀತಿಯಲ್ಲಿ ಸಾವನ್ನಪ್ಪಿದ ಘಟನೆ ಇಂದು ಬೆಳಗ್ಗೆ (ಮಾ.೧೬) ಕಿನ್ನಿಗೋಳಿ ಸಮೀಪದ ಉಳವಾಡಿಯಲ್ಲಿ ನಡೆದಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ವೈದ್ಯರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕಿನ್ನಿಗೋಳಿ ಸುತ್ತಮುತ್ತ ಹಲವು ಬಾರಿ ಚಿರತೆ ಕಂಡು ಬಂದಿದ್ದು, ಸಾಕು ನಾಯಿಗಳು ಚಿರತೆಗೆ ಆಹಾರವಾಗಿವೆ ಎನ್ನಲಾಗಿದೆ. ಚಿರತೆ ಓಡಾಡುವ ದೃಶ್ಯಗಳು ಸಿ.ಸಿ. ಟಿವಿಯಲ್ಲಿ ಸೆರೆಯಾಗಿದ್ದು, ಕೆಲ ತಿಂಗಳ ಹಿಂದೆ ಮೂಲ್ಕಿಯಲ್ಲಿ ಮನೆಯೊಳಗೆ ಚಿರತೆ ನುಗ್ಗಿದೆ ಎಂದು ತಿಳಿದು ಬಂದಿದೆ.

ಕಿನ್ನಿಗೋಳಿಯ ಉಳವಾಡಿಯಲ್ಲಿ ಚಿರತೆಯ ಶವ ಪತ್ತೆ Read More »

ಕೆರೆಗೆ ಸ್ನಾನಕ್ಕೆಂದು ತೆರಳಿದ ಬಾಲಕ ಮೃತ್ಯು

ಗದಗ: ಹೋಳಿ ಹಬ್ಬದ ಸಂದರ್ಭದಲ್ಲಿ ಗ್ರಾಮದ ತುಂಬೆಲ್ಲಾ ರಂಗುರಂಗಿನ ಹೋಳಿ ಆಟವಾಡಿ ಕೆರೆಯಲ್ಲಿ ಸ್ನಾನಕ್ಕೆ ಹೋದ ಬಾಲಕ ನೀರಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಗದಗ ಜಿಲ್ಲೆಯ ಲಕ್ಷೇಶ್ವರ ತಾಲೂಕಿನ ಯಳವತ್ತಿ ಗ್ರಾಮದಲ್ಲಿ ನಡೆದಿದೆ. ಮೃತಪಟ್ಟ ಬಾಲಕನನ್ನು ಗ್ರಾಮದ ಗುಂಡೇಶ್ವರ ಕೆರೆಯಲ್ಲಿ ದೇವೇಂದ್ರ ರಾಚನಗೌಡ (16) ಎಂದು ಪತ್ತೆ ಹಚ್ಚಲಾಗಿದೆ. ದೇವೇಂದ್ರ ಬೆಳಗ್ಗೆಯಿಂದ ಸ್ನೇಹಿತರೊಂದಿಗೆ ಊರಲ್ಲಿ ಬಣ್ಣದ ಹೋಳಿ ಆಟವಾಡಿದ್ದಾನೆ. ನಂತರ ನಾಲ್ಕು ಜನ ಸ್ನೇಹಿತರು ಒಟ್ಟಾಗಿ ಕೆರೆಗೆ ಈಜಲು ಹೋಗಿದ್ದರು.  ಮೂರು ಜನ ದಡದಲ್ಲಿ ಸ್ನಾನ ಮಾಡಿದ್ದು,

ಕೆರೆಗೆ ಸ್ನಾನಕ್ಕೆಂದು ತೆರಳಿದ ಬಾಲಕ ಮೃತ್ಯು Read More »

ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆಯ ಪ್ರಫುಲ್ಲ ಗಣೇಶ್ ರವರಿಗೆ IMRF ಇನ್ಸ್ಟಿಟ್ಯೂಟ್ ಆಫ್ ಹೈಯರ್ ಎಜುಕೇಶನ್ & ರಿಸರ್ಚ್ ಇಂಡಿಯಾದಿಂದ ಗ್ಲೋಬಲ್ ಬೆಸ್ಟ್ ವುಮೆನ್ ಟೀಚರ್ ಅವಾರ್ಡ್-2025

ಪುತ್ತೂರು:  ಅಬಾಕಸ್ ಮತ್ತು ವೇದ ಗಣಿತದಲ್ಲಿ ಸ್ಥಿರವಾದ ಉನ್ನತ ಸಾಧನೆಯನ್ನು ಗುರುತಿಸಿ  ಜಾಗತಿಕ ಅತ್ಯುತ್ತಮ ಮಹಿಳಾ ಶಿಕ್ಷಕಿ ಅವಾರ್ಡ್ -2025 ಅನ್ನು  IMRF ಇನ್ಸ್ಟಿಟ್ಯೂಟ್ ಆಫ್ ಹೈಯರ್ ಎಜುಕೇಶನ್ & ರಿಸರ್ಚ್ ಇಂಡಿಯಾ, ವಿಜಯವಾಡ ಇವರು ಪುತ್ತೂರಿನ ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥೆ ಪ್ರಫುಲ್ಲ ಗಣೇಶ್ ಅವರಿಗೆ ನೀಡಿ ಗೌರವಿಸಲಾಯಿತು.  2021ರಲ್ಲಿ ಇಂಟರ್ನ್ಯಾಷನಲ್ ಅವಾರ್ಡ್, 2022ರಲ್ಲಿ 2 ಸಲ ನ್ಯಾಷನಲ್ ಅವಾರ್ಡ್, 2023ರಲ್ಲಿ ತಿಪಟೂರಿನಲ್ಲಿ ನಡೆದ ರಾಜ್ಯಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ 15ಕ್ಕೂ ಹೆಚ್ಚು ಪ್ರಶಸ್ತಿ, 2023ರಲ್ಲಿ ಕರ್ನಾಟಕ

ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆಯ ಪ್ರಫುಲ್ಲ ಗಣೇಶ್ ರವರಿಗೆ IMRF ಇನ್ಸ್ಟಿಟ್ಯೂಟ್ ಆಫ್ ಹೈಯರ್ ಎಜುಕೇಶನ್ & ರಿಸರ್ಚ್ ಇಂಡಿಯಾದಿಂದ ಗ್ಲೋಬಲ್ ಬೆಸ್ಟ್ ವುಮೆನ್ ಟೀಚರ್ ಅವಾರ್ಡ್-2025 Read More »

ವಿದ್ಯಾ ಭಾರತಿ ಜಿಲ್ಲಾ ಸಮೀಕ್ಷಾ ಯೋಜನೆಯ ವಾರ್ಷಿಕ ಸಭೆ

 ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲಾ ಸಮೀಕ್ಷಾ ಯೋಜನೆಯ ವಾರ್ಷಿಕ ಸಬೆ  ಬೈಠಕ್ ಮುಂಡ್ಕಿನ ಜೆಡ್ಡು   ಆರ್. ಕೆ .ಪಾಟ್ಕರ್ ಹಿರಿಯ ಪ್ರಾಥಮಿಕ ಶಾಲೆ ಚೇರ್ಕಾಡಿಯಲ್ಲಿ ನಡೆಯಿತು. ವಿದ್ಯಾ ಭಾರತಿ ಜಿಲ್ಲಾ ಸಮೀಕ್ಷಾ ಯೋಜನೆಯ ವಾರ್ಷಿಕ ಸಭೆ ಉಡುಪಿ ಜಿಲ್ಲಾ ಅಧ್ಯಕ್ಷ ಪಾಂಡುರಂಗ ಪೈ ಸಿದ್ದಾಪುರ  ಅಧ್ಯಕ್ಷತೆಯಲ್ಲಿ  ಜರಗಿತು. ವಿದ್ಯಾಭಾರತಿ ಕರ್ನಾಟಕ ಪ್ರಾಂತ ಸಂಘಟನ ಕಾರ್ಯದರ್ಶಿ ಉಮೇಶ ಎಮ್ .ಸರಸ್ವತಿ ವಂದನೆಯ ಮೂಲಕ ದೀಪ ಬೆಳಗಿಸಿ ಬೈಠಕ್ ಗೆ ಚಾಲನೆ ನೀಡಿದರು.  ಆರಂಭದಲ್ಲಿ ಸಂಯೋಜಿತ ಶಿಕ್ಷಣ ಸಂಸ್ಥೆಗಳ ವಾರ್ಷಿಕ

ವಿದ್ಯಾ ಭಾರತಿ ಜಿಲ್ಲಾ ಸಮೀಕ್ಷಾ ಯೋಜನೆಯ ವಾರ್ಷಿಕ ಸಭೆ Read More »

75 ಕೋಟಿ ರೂ. ಮೌಲ್ಯದ ಡ್ರಗ್ಸ್‌ ವಶ : ಇಬ್ಬರು ವಿದೇಶಿ ಮಹಿಳೆಯರ ಬಂಧನ

ಬೆಂಗಳೂರಿನಲ್ಲಿ ಮಂಗಳೂರು ಪೊಲೀಸರ ಕಾರ್ಯಾಚರಣೆ ಮಂಗಳೂರು : ಮಂಗಳೂರು ಸಿಸಿಬಿ ಪೊಲೀಸರು ಬೆಂಗಳೂರಿನಲ್ಲಿ 75 ಕೋಟಿ ರೂ. ಮೌಲ್ಯದ 37.87 ಕೆಜಿ ಡ್ರಗ್ಸ್​ ವಶಪಡಿಸಿಕೊಂಡು ಇಬ್ಬರು ವಿದೇಶಿ ಮಹಿಳೆಯರನ್ನು ಬಂಧಿಸಿದ್ದಾರೆ. ಇದು ಕರ್ನಾಟಕದ ಇತಿಹಾಸದಲ್ಲಿ ಅತಿದೊಡ್ಡ ಡ್ರಗ್ಸ್ ವಶ ಕಾರ್ಯಾಚರಣೆ ಎನ್ನಲಾಗಿದೆ. ಸಿಸಿಬಿ ಪೊಲೀಸರು ಕಳೆದ ಐದು ತಿಂಗಳಿಂದ ಈ ಡ್ರಗ್ಸ್‌ ಜಾಲದ ಬೆನ್ನುಹತ್ತಿದ್ದರು.ಎಂಡಿಎಂಎ ಡ್ರಗ್ಸ್ ದೆಹಲಿಯ ಲ್ಯಾಬ್​ನಲ್ಲಿ ನಿತ್ಯ ತಯಾರಾಗುತ್ತಿತ್ತು. ವಾರಕ್ಕೊಮ್ಮೆ ಬೆಂಗಳೂರಿಗೆ ವಿಮಾನದಲ್ಲಿ ಮೂಟೆಗಟ್ಟಲೆ ಬರುತ್ತಿತ್ತು. ವಾರಕ್ಕೆ 15-30 ಕೆಜಿ ಮತ್ತು ತಿಂಗಳಿಗೆ ಕನಿಷ್ಠ

75 ಕೋಟಿ ರೂ. ಮೌಲ್ಯದ ಡ್ರಗ್ಸ್‌ ವಶ : ಇಬ್ಬರು ವಿದೇಶಿ ಮಹಿಳೆಯರ ಬಂಧನ Read More »

ಸಂಗೀತ ನಿರ್ದೇಶಕ ಎ.ಆರ್‌.ರೆಹಮಾನ್‌ ಅಸ್ವಸ್ಥ : ಆಸ್ಪತ್ರೆಗೆ ದಾಖಲು

ಚೆನ್ನೈ : ಆಸ್ಕರ್ ಪ್ರಶಸ್ತಿ ವಿಜೇತ ಪ್ರಸಿದ್ಧ ಸಂಗೀತ ನಿರ್ದೇಶಕ ಎ.ಆರ್ ರೆಹಮಾನ್‌ಗೆ ದಿಢೀರ್‌ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಚೆನ್ನೈಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಎ.ಆರ್ ರೆಹಮಾನ್ ಅವರಿಗೆ ಇಂದು ಬೆಳಗ್ಗೆ ಹಠಾತ್ತನೆ ಎದೆ ನೋವು ಕಾಣಿಸಿಕೊಂಡಿದ್ದು, ಶೀಘ್ರವೇ ಅವರನ್ನು ಚೆನ್ನೈಯ ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳಿಗ್ಗೆ 7.30ಕ್ಕೆ ಎಆರ್ ರೆಹಮಾನ್ ಆಸ್ಪತ್ರೆಗೆ ಬಂದಿದ್ದು, ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಎ.ಆರ್ ರೆಹಮಾನ್ ಅವರಿಗೆ ಇಸಿಜಿ ಸೇರಿದಂತೆ ಹಲವು ಬೇರೆ ಬೇರೆ ಪರೀಕ್ಷೆಗಳನ್ನು ಮಾಡಿಸಲಾಗಿದೆ. ಅವರ ಹೃದಯನಾಳದ ಕೆಲವೆಡೆ

ಸಂಗೀತ ನಿರ್ದೇಶಕ ಎ.ಆರ್‌.ರೆಹಮಾನ್‌ ಅಸ್ವಸ್ಥ : ಆಸ್ಪತ್ರೆಗೆ ದಾಖಲು Read More »

ಕಾಲೇಜು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ : ಅಪರಾಧಿಗೆ 20 ವರ್ಷ ಜೈಲು

ಕಲಿಯಲು ಬಂದಿದ್ದ ಸ್ನೇಹಿತನ ಮಗಳ ಮೇಲೆಯೇ ಅತ್ಯಾಚಾರ ಎಸಗಿದ್ದ ಪಾಪಿ ಮಂಗಳೂರು: ಕಾರ್ಕಳ ತಾಲೂಕಿನ ಇನ್ನಾದಲ್ಲಿ ಎರಡು ವರ್ಷದ ಹಿಂದೆ ಕಾಲೇಜು ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿ ಆಕೆ ಗರ್ಭಿಣಿಯಾಗುವಂತೆ ಮಾಡಿದ್ದ ಅಪರಾಧಿಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಪೋಕ್ಸೊ ವಿಶೇಷ ನ್ಯಾಯಾಲಯ 20 ವರ್ಷಗಳ ಕಠಿಣ ಕಾರಾಗೃಹ ವಾಸದ ಶಿಕ್ಷೆ ವಿಧಿಸಿದೆ. ಮೂಲ್ಕಿ ತಾಲೂಕು ಏಳಿಂಜೆಯ ರವಿ (35) ಎಂಬಾತ ಶಿಕ್ಷೆಗೊಳಗಾದ ಅಪರಾಧಿ.ಅಪರಾಧಿ ರವಿ 2023ರ ಜೂನ್‌ನಿಂದ ಡಿಸೆಂಬರ್‌ವರೆಗೆ ಇನ್ನಾದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ.

ಕಾಲೇಜು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ : ಅಪರಾಧಿಗೆ 20 ವರ್ಷ ಜೈಲು Read More »

ಲಷ್ಕರ್‌ನ ಮೋಸ್ಟ್‌ ವಾಂಟೆಡ್‌ ಉಗ್ರ ಅಬ್ದುಲ್‌ ಖತಲ್‌ನ ಹತ್ಯೆ

ರಾತ್ರಿ ಅಜ್ಞಾತ ವ್ಯಕ್ತಿಗಳ ಗುಂಡಿಗೆ ಬಲಿಯಾದ ಉಗ್ರ ಸಂಘಟನೆಯ ಕಮಾಂಡರ್‌ ಇಸ್ಲಾಮಾಬಾದ್‌ : ಪಾಕಿಸ್ಥಾನದ ಉಗ್ರ ಸಂಘಟನೆ ಲಷ್ಕರ್‌ ಇ ತಯ್ಯಬದ ಕಮಾಂಡರ್‌, ಮೋಸ್ಟ್‌ ವಾಂಟೆಡ್‌ ಲಿಸ್ಟ್‌ನಲ್ಲಿದ್ದ ಉಗ್ರನೊಬ್ಬನನ್ನು ಅಜ್ಞಾತ ವ್ಯಕ್ತಿಗಳು ನಿನ್ನೆ ರಾತ್ರಿ ಸಾಯಿಸಿದ್ದಾರೆ. ಕೊಲೆಯಾಗಿರುವ ಅಬ್ದುಲ್‌ ಖತಲ್‌ ಜಮ್ಮು-ಕಾಶ್ಮೀರದಲ್ಲಿ ನಡೆದ ಹಲವು ಉಗ್ರ ದಾಳಿಗಳ ರೂವಾರಿಯಾಗಿದ್ದ. ಭಾರತದ ಪಾಲಿಗೆ ಅವನು ತಲೆನೋವಾಗಿದ್ದ. ಶನಿವಾರ ರಾತ್ರಿ ಅವನನ್ನು ಅಜ್ಞಾತ ವ್ಯಕ್ತಿಗಳು ಗುಂಡಿಕ್ಕಿ ಸಾಯಿಸಿದ್ದಾರೆ ಎಂದು ವರದಿಯಾಗಿದೆ.ಲಷ್ಕರ್‌ನ ಸ್ಥಾಪಕ ಹಾಗೂ ಮುಂಬಯಿ ಮೇಲೆ ನಡೆದ ಭಯೋತ್ಪಾದಕ ದಾಳಿಯ

ಲಷ್ಕರ್‌ನ ಮೋಸ್ಟ್‌ ವಾಂಟೆಡ್‌ ಉಗ್ರ ಅಬ್ದುಲ್‌ ಖತಲ್‌ನ ಹತ್ಯೆ Read More »

ಹೋಳಿ ಗಮ್ಮತ್ತಿನಲ್ಲಿ ಹೊಡೆದಾಟ : ಮೂವರ ಹತ್ಯೆ

ನಶೆ ಏರಿದ ಬಳಿಕ ರಾಡ್‌, ದೊಣ್ಣೆಯಿಂದ ಬಡಿದಾಡಿಕೊಂಡ ಸ್ನೇಹಿತರು ಬೆಂಗಳೂರು: ಹೋಳಿ ಗಮ್ಮತ್ತಿನಲ್ಲಿ ಕಂಠಮಟ್ಟ ಶರಾಬು ಕುಡಿದು ನಶೆ ತಲೆಗೇರಿಸಿಕೊಂಡಿದ್ದ ಬಿಹಾರ ಮೂಲದ ಆರು ಕಾರ್ಮಿಕರು ಪರಸ್ಪರ ಹೊಡೆದಾಡಿಕೊಂಡ ಪರಿಣಾಮ ಮೂವರು ಸಾವನ್ನಪ್ಪಿದ ಘಟನೆ ಬೆಂಗಳೂರಿನಲ್ಲಿ ಸಂಭವಿಸಿದೆ. ಓರ್ವನಿಗೆ ಗಂಭೀರ ಗಾಯವಾಗಿದ್ದು, ಇಬ್ಬರು ಪರಾರಿ ಆಗಿದ್ದಾರೆ. ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಸರ್ಜಾಪುರದ ನಿರ್ಮಾಣ ಹಂತದ ಫೋರ್‌ವಾಲ್ ಅವೆನ್ಯೂ ಅಪಾರ್ಟ್​ಮೆಂಟ್​ನ​ 3ನೇ ಮಹಡಿಯಲ್ಲಿ ಘಟನೆ ನಡೆದಿದೆ. ಕೊಲೆಯಾದ ಇಬ್ಬರನ್ನು ಅನ್ಸು(19) ಮತ್ತು ರಾಧೆ ಶ್ಯಾಮ್(20) ಎಂದು

ಹೋಳಿ ಗಮ್ಮತ್ತಿನಲ್ಲಿ ಹೊಡೆದಾಟ : ಮೂವರ ಹತ್ಯೆ Read More »

ಗೋಲ್ಡ್‌ ಸ್ಮಗ್ಲಿಂಗ್‌ ಕೇಸ್‌ : ಡಿಜಿಪಿ ರಾಮಚಂದ್ರ ರಾವ್‌ಗೆ ಕಡ್ಡಾಯ ರಜೆ ನೀಡಿದ ಸರಕಾರ

ಪ್ರಭಾವಿ ನಾಯಕರೊಬ್ಬರ ಜರ್ಮನಿ ಟೂರ್‌ ಬಗ್ಗೆ ಅನುಮಾನ ವ್ಯಕ್ತಪಡಿಸಿದ ತನಿಖಾಧಿಕಾರಿಗಳು ಬೆಂಗಳೂರು: ಕನ್ನಡ ನಟಿ ರನ್ಯಾ ರಾವ್‌ ಗೋಲ್ಡ್‌ ಸ್ಮಗ್ಲಿಂಗ್‌ ಪ್ರಕರಣದ ತನಿಖೆ ತೀವ್ರಗೊಂಡಿರುವಂತೆ ಸರಕಾರ ಆಕೆಯ ಮಲತಂದೆ ಡಿಜಿಪಿ ದರ್ಜೆಯ ಐಪಿಎಸ್‌ ಅಧಿಕಾರಿ ಡಾ.ರಾಮಚಂದ್ರ ರಾವ್‌ ಅವರನ್ನು ಕಡ್ಡಾಯ ರಜೆಯಲ್ಲಿ ಕಳಿಸಿದೆ. ಡಾ.ರಾಮಚಂದ್ರ ರಾವ್‌ ಪ್ರಸ್ತುತ ಪೊಲೀಸ್‌ ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ.ರನ್ಯಾ ರಾವ್‌ ಕಳೆದ ಮಾ.3ರಂದು ದುಬೈಯಿಂದ 12.56 ಕೋಟಿ ರೂ. ಮೌಲ್ಯದ 14.2 ಕೆಜಿ ಚಿನ್ನವನ್ನು ಕಳ್ಳ ಮಾರ್ಗದಿಂದ

ಗೋಲ್ಡ್‌ ಸ್ಮಗ್ಲಿಂಗ್‌ ಕೇಸ್‌ : ಡಿಜಿಪಿ ರಾಮಚಂದ್ರ ರಾವ್‌ಗೆ ಕಡ್ಡಾಯ ರಜೆ ನೀಡಿದ ಸರಕಾರ Read More »

error: Content is protected !!
Scroll to Top