ಸುದ್ದಿ

ಮಲ್ಪೆಯ ಮೀನುಗಾರಿಕೆ ದೋಣಿ ಕಾರವಾರದಲ್ಲಿ ಮುಳುಗಡೆ

ಉಡುಪಿ: ಮೀನುಗಾರಿಕೆಗೆ ತೆರಳಿದ್ದ ಮಲ್ಪೆಯ ದೋಣಿ ಕಾರವಾರ ಸಮೀಪ ಮುಳುಗಿ ಅಪಾರ ನಷ್ಟ ಉಂಟಾಗಿದೆ. ಮಲ್ಪೆಯ ಸೀ ಹಂಟರ್ ಹೆಸರಿನ ದೋಣಿಯ ತಳಭಾಗದ ಕಬ್ಬಿಣದ ವೆಲ್ಡಿಂಗ್ ಬಿಟ್ಟುಹೋದ ಪರಿಣಾಮ ನೀರು ತುಂಬಿಕೊಂಡು ಮುಳುಗಿದೆ. ಬೋಟ್‌ನಲ್ಲಿದ್ದ 8 ಮೀನುಗಾರರನ್ನು ಸ್ಥಳೀಯ ಮೀನುಗಾರರು ರಕ್ಷಣೆ ಮಾಡಿದ್ದಾರೆ. ಮಲ್ಪೆಯಿಂದ ಮಹಾರಾಷ್ಟ್ರದ ಕಡೆ ಈ ಬೋಟ್ ಚಲಿಸುತಿತ್ತು. ಕಾರವಾರದಿಂದ 9 ನಾಟಿಕನ್ ಮೈಲು ದೂರದ ಲೈಟ್‌ಹೌಸ್ ಬಳಿ ಬೋಟ್ ತಳಭಾಗದ ಕಬ್ಬಿಣದ ಭಾಗದಲ್ಲಿ ವೆಲ್ಡಿಂಗ್ ಬಿಟ್ಟುಹೋಗಿದೆ. ವೆಲ್ಡಿಂಗ್ ಬಿಟ್ಟುಹೋದ ಪರಿಣಾಮ ಬೋಟ್ ಇಂಜಿನ್ […]

ಮಲ್ಪೆಯ ಮೀನುಗಾರಿಕೆ ದೋಣಿ ಕಾರವಾರದಲ್ಲಿ ಮುಳುಗಡೆ Read More »

ಬೆನ್ನು ಮೂಳೆ ಮುರಿತ : ಸಚಿವೆಗೆ ಒಂದು ತಿಂಗಳು ಬೆಡ್‌ರೆಸ್ಟ್‌

ಕಾರು ಅಪಘಾತದಲ್ಲಿ ಗಾಯಗೊಂಡಿರುವ ಲಕ್ಷ್ಮೀ ಹೆಬ್ಬಾಳ್ಕರ್‌ ಬೆಳಗಾವಿ: ಕಾರು ಅಪಘಾತದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರಿಗೆ ತುಸು ಗಂಭೀರವಾದ ಗಾಯವಾಗಿದೆ. ಎರಡು ಕಡೆ ಬೆನ್ನುಮೂಳೆ ಮುರಿತವಾಗಿದ್ದು, ಕನಿಷ್ಠ ಒಂದು ತಿಂಗಳು ಅತ್ತಿತ್ತ ಓಡಾಡದೆ ವಿಶ್ರಾಂತಿ ಪಡೆಯಬೇಕಾಗುತ್ತದೆ ಎಂದು ಚಿಕಿತ್ಸೆ ನೀಡಿದ ವೈದ್ಯರು ಮಾಹಿತಿ ನೀಡಿದ್ದಾರೆ.ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಸಚಿವೆಗೆ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತದಲ್ಲಿ ಸಚಿವೆಯ ಸಹೋದರ, ಗನ್‌ಮ್ಯಾನ್‌ ಮತ್ತು ಕಾರಿನ ಡ್ರೈವರ್‌ ಕೂಡ ಗಾಯಗೊಂಡಿದ್ದಾರೆ. ಎಲ್ಲರಿಗೂ ಒಂದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಲಕ್ಷ್ಮಿ ಹೆಬ್ಬಾಳ್ಕರ್‌ ಅವರ ಬೆನ್ನುಮೂಳೆಯ ಎಲ್1

ಬೆನ್ನು ಮೂಳೆ ಮುರಿತ : ಸಚಿವೆಗೆ ಒಂದು ತಿಂಗಳು ಬೆಡ್‌ರೆಸ್ಟ್‌ Read More »

ಒಂದನೇ ದಕ್ಷಿಣ ಏಷ್ಯಾ ಮಾಸ್ಟರ್ಸ್ ಅಥ್ಲೆಟಿಕ್ಸ್ ಕ್ರೀಡಾಕೂಟ ಸ್ಪರ್ಧೆಯಲ್ಲಿ ಶಿಕ್ಷಕ  ವೆಂಕಟೇಶ್ ಪ್ರಸಾದ್ ದರ್ಬೆತ್ತಡ್ಕ ರವರಿಗೆ 5ನೇ ಸ್ಥಾನ

ಮಂಗಳೂರು : ದಕ್ಷಿಣ ಭಾರತ ಮಾಸ್ಟರ್ಸ್ ಅಥ್ಲೆಟಿಕ್ಸ್ ಅಸೋಸಿಯೇಷನ್ ವತಿಯಿಂದ ಜ.10ರಿಂದ ಜ.12ರವರೆಗೆ ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ಒಂದನೇ ದಕ್ಷಿಣ ಏಷ್ಯಾ ಮಾಸ್ಟರ್ಸ್ ಅಥ್ಲೆಟಿಕ್ಸ್ ಕ್ರೀಡಾಕೂಟ ನಡೆಯಿತು. ಇದರಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಸ‍ಂಸ್ಕೃತ  ಶಿಕ್ಷಕ  ವೆಂಕಟೇಶ್ ಪ್ರಸಾದ್ ದರ್ಬೆತ್ತಡ್ಕ 45ರ ವಯೋಮಾನದ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿ, 400 ಮೀ ಹರ್ಡಲ್ಸ್ ಮತ್ತು ಹೈಜಂಪ್ ನಲ್ಲಿ 4ನೇ ಸ್ಥಾನ ಹಾಗೂ 110 ಮೀ ಹರ್ಡಲ್ಸ್ ನಲ್ಲಿ 5ನೇ ಸ್ಥಾನ ಗಳಿಸಿದ್ದಾರೆ. ಈ ಕ್ರೀಡಾಕೂಟದಲ್ಲಿ ಭಾರತ ಮಾತ್ರವಲ್ಲದೇ

ಒಂದನೇ ದಕ್ಷಿಣ ಏಷ್ಯಾ ಮಾಸ್ಟರ್ಸ್ ಅಥ್ಲೆಟಿಕ್ಸ್ ಕ್ರೀಡಾಕೂಟ ಸ್ಪರ್ಧೆಯಲ್ಲಿ ಶಿಕ್ಷಕ  ವೆಂಕಟೇಶ್ ಪ್ರಸಾದ್ ದರ್ಬೆತ್ತಡ್ಕ ರವರಿಗೆ 5ನೇ ಸ್ಥಾನ Read More »

ಅಪಘಾತದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಗಾಯ : ಆಸ್ಪತ್ರೆಯಲ್ಲಿ ಚಿಕಿತ್ಸೆ

ಕಾರು ಜಖಂ; ಸಹೋದರ ಚೆನ್ನರಾಜ ಹಟ್ಟಿಹೊಳಿ ತಲೆಗೆ ಗಾಯ ಬೆಳಗಾವಿ: ಕಾರು ಅಪಘಾತದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರ ಮುಖಕ್ಕೆ ಗಾಯವಾಗಿದ್ದು, ಬೆಳಗಾವಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆಯಾಗಿರುವ ಲಕ್ಷ್ಮೀ ಹೆಬ್ಬಾಳ್ಕರ್‌ ಹಾಗೂ ಸಹೋದರ ಚೆನ್ನರಾಜ ಹಟ್ಟಿಹೊಳಿ ಪ್ರಯಾಣಿಸುತ್ತಿರುವ ಕಾರು ಇಂದು ಮುಂಜಾನೆ ಹೊತ್ತು ಬೆಳಗಾವಿ ಸಮೀಪ ಅಪಘಾತಕ್ಕೀಡಾಗಿದೆ. ಅದೃಷ್ಟವಶಾತ್ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಳಗಾವಿ ಜಿಲ್ಲೆ ಕಿತ್ತೂರು ತಾಲೂಕಿನ ಅಂಬಡಗಟ್ಟಿ ಸಮೀಪ ಸಚಿವರು

ಅಪಘಾತದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಗಾಯ : ಆಸ್ಪತ್ರೆಯಲ್ಲಿ ಚಿಕಿತ್ಸೆ Read More »

ಕೊಡಗಿನ ವೀರ ಯೋಧ ಅಜ್ಜಮಾಡ ದೇವಯ್ಯ ಸಾಹಸದ ಮೇಲೆ ನಿರ್ಮಾಣವಾಗಿದೆ ಬಾಲಿವುಡ್‌ ಸಿನೆಮಾ

ಭಾರತ-ಪಾಕ್‌ ಯುದ್ಧದ ಹುತಾತ್ಮ ಯೋಧ; ಜ.24ರಂದು ಸ್ಕೈ ಫೋರ್ಸ್‌ ದೇಶಾದ್ಯಂತ ಬಿಡುಗಡೆ ಮುಂಬಯಿ: ಕೊಡಗಿನ ವೀರಯೋಧ ಅಜ್ಜಮಾಡ ದೇವಯ್ಯ ಅವರ ಸಾಹಸಗಾಥೆಯನ್ನು ಆಧರಿಸಿ ಬಾಲಿವುಡ್‌ನಲ್ಲಿ ಸಿನೆಮಾ ತಯಾರಾಗಿದೆ. 1965ರ ಭಾರತ-ಪಾಕ್ ಯುದ್ಧದಲ್ಲಿ ಶತ್ರುಗಳ ವಿಮಾನವನ್ನು ಹೊಡೆದುರುಳಿಸಿ ದೇಶಕ್ಕಾಗಿ ಪ್ರಾಣತೆತ್ತ ಕೊಡಗಿನ ವೀರ ಯೋಧ ಸ್ಕ್ವಾಡ್ರನ್‌ ಲೀಡ‌ರ್ ಅಜ್ಜಮಾಡ ದೇವಯ್ಯ. ಅಕ್ಷಯ್‌ ಕುಮಾರ್‌ ಅಜ್ಜಮಾಡ ದೇವಯ್ಯ ಪಾತ್ರದಲ್ಲಿ ನಟಿಸುತ್ತಿದ್ದು, ಸ್ಕೈ ಫೋರ್ಸ್‌ ಎಂಬ ಈ ಚಿತ್ರ ಜ.24ರಂದು ತೆರೆಗೆ ಬರಲಿದೆ.ನೈಜ ಘಟನೆಯನ್ನಾಧರಿಸಿ ಈ ಚಿತ್ರವನ್ನು ತಯಾರಿಸಲಾಗಿದೆ. ಕೊಡಗು ಸೇರಿದಂತೆ

ಕೊಡಗಿನ ವೀರ ಯೋಧ ಅಜ್ಜಮಾಡ ದೇವಯ್ಯ ಸಾಹಸದ ಮೇಲೆ ನಿರ್ಮಾಣವಾಗಿದೆ ಬಾಲಿವುಡ್‌ ಸಿನೆಮಾ Read More »

ಅಧಿಕಾರದ ಅಮಲು ನೆತ್ತಿಗೆ ಏರಿದೆ : ಸಿದ್ದರಾಮಯ್ಯ ವರ್ತನೆಗೆ ಬಿಜೆಪಿ ಕಟುಟೀಕೆ

ಜಿಲ್ಲಾಧಿಕಾರಿಯನ್ನು ವೇದಿಕೆಯಿಂದ ಕೆಳಗಿಳಿಸಿದ ಘಟನೆಗೆ ವಿಪಕ್ಷ ಸಿಡಿಮಿಡಿ ಬೆಂಗಳೂರು: ಸಾರ್ವಜನಿಕ ಸಮಾರಂಭದಲ್ಲಿ ವೇದಿಕೆ ಮೇಲೆ ಕುಳಿತಿದ್ದ ಜಿಲ್ಲಾಧಿಕಾರಿಯನ್ನು ಗದರಿಸಿ ಕೆಳಗಿಳಿಯಲು ಸೂಚಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವರ್ತನೆಯನ್ನು ವಿಪಕ್ಷಗಳು ತೀಕ್ಷ್ಣವಾಗಿ ಟೀಕಿಸಿವೆ. ಈ ವೀಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ಎರಡು ದಿನಗಳಿಂದ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದ್ದು, ಸಿದ್ದರಾಮಯ್ಯ ಮತ್ತು ಕಾಂಗ್ರೆಸ್‌ ದಲಿತರನ್ನು ನಡೆಸಿಕೊಳ್ಳುತ್ತಿರುವ ರೀತಿ ಇದು ಎಂದು ಅನೇಕರು ಟೀಕಿಸಿದ್ದಾರೆ. ಜಿಲ್ಲಾಧಿಕಾರಿ ದಲಿತ ಸಮುದಾಯಕ್ಕೆ ಸೇರಿದವರು ಎನ್ನಲಾಗಿದೆ. ಘಟನೆ ಕುರಿತು ಟ್ವೀಟ್‌ ಮಾಡಿರುವ ರಾಜ್ಯ ಬಿಜೆಪಿ ಘಟಕ, ಜಿಲ್ಲಾಧಿಕಾರಿ ಮೇಲೆ

ಅಧಿಕಾರದ ಅಮಲು ನೆತ್ತಿಗೆ ಏರಿದೆ : ಸಿದ್ದರಾಮಯ್ಯ ವರ್ತನೆಗೆ ಬಿಜೆಪಿ ಕಟುಟೀಕೆ Read More »

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಪ್ರಯಾಣಿಸುತ್ತಿದ್ದ ಕಾರು ಅಪಘಾತ

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತೆರಳುತ್ತಿದ್ದ ಕಾರು ಅಪಘಾತವಾಗಿದ್ದು, ಸಚಿವೆ ಅಪಾಯದಿಂದ ಪಾರಾಗಿದ್ದಾರೆ. ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಅಂಬಡಗಟ್ಟಿ ಬಳಿ ಅವಘಡ ಸಂಭವಿಸಿದೆ. ಅದೃಷ್ಟವಶಾತ್ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಸಹೋದರ ಚನ್ನರಾಜ ಹಟ್ಟಿಹೊಳಿ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಪ್ರಯಾಣಿಸುತ್ತಿದ್ದ ಕಾರು ಅಪಘಾತ Read More »

ದೇಶಾದ್ಯಂತ ಸಡಗರ, ಸಂಭ್ರಮದಿಂದ ಆಚರಿಸುವ ಮಕರ ಸಂಕ್ರಾತಿ

ಸೂರ್ಯನ ಪಥವನ್ನು ಒಟ್ಟು 12 ಭಾಗಗಳಾಗಿ ವಿಭಾಗಿಸಲಾಗಿದೆ. ಅವುಗಳಿಗೆ ರಾಶಿಗಳು ಎನ್ನುತ್ತಾರೆ. ಮೇಷ, ವೃಷಭ, ಮಿಥುನ, ಕರ್ಕಾಟಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ಹೀಗೆ ಹನ್ನೆರಡು ರಾಶಿಗಳು. ಪ್ರತಿಯೊಂದು ರಾಶಿಯಲ್ಲಿಯೂ ಸೂರ್ಯನು ಒಂದೊಂದು ತಿಂಗಳು ಇರುತ್ತಾನೆ. ಸೂರ್ಯನು ಒಂದು ರಾಶಿಯನ್ನು ಬಿಟ್ಟು ಇನ್ನೊಂದು ರಾಶಿಯನ್ನು ಪ್ರವೇಶಿಸುವ ದಿನವನ್ನು ಸಂಕ್ರಾಂತಿ ಎನ್ನುತ್ತಾರೆ. ಒಂದು ವರ್ಷಕ್ಕೆ ಒಟ್ಟು 12 ಸಂಕ್ರಾಂತಿಗಳು. ಪ್ರತಿಯೊಂದು ಸಂಕ್ರಾಂತಿಯನ್ನೂ ಅದರ ಮುಂದಿನ ರಾಶಿಯ ಹೆಸರಿನಿಂದ ಕರೆಯುತ್ತಾರೆ. ಅಂತೆಯೇ ಸೂರ್ಯನು

ದೇಶಾದ್ಯಂತ ಸಡಗರ, ಸಂಭ್ರಮದಿಂದ ಆಚರಿಸುವ ಮಕರ ಸಂಕ್ರಾತಿ Read More »

ಮಹಾಭಾರತ ಸರಣಿಯಲ್ಲಿ 60ನೇ ತಾಳ ಮದ್ಧಳೆ – ಸತಿ ಚಿತ್ರಾಂಗದಾ

ಉಪ್ಪಿನಂಗಡಿ : ಶ್ರೀಕಾಳಿಕಾಂಬ ಯಕ್ಷಗಾನ ಕಲಾಸೇವಾ ಸಂಘ ಉಪ್ಪಿನಂಗಡಿ  50ರ ಸಂಭ್ರಮದ ನಿಮಿತ್ತ ನಡೆಸಲಾಗುತ್ತಿರುವ ಶ್ರೀ ಮಹಾಭಾರತ ಸರಣಿಯಲ್ಲಿ 60 ನೇ ಕಾರ್ಯಕ್ರಮವಾಗಿ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ಸತಿ ಚಿತ್ರಾoಗದಾ ತಾಳಮದ್ದಳೆ ಜರಗಿತು. ಭಾಗವತರಾಗಿ ಪದ್ಮನಾಭ ಕುಲಾಲ್,ಶ್ರೀಮತಿ ಮಲ್ಲಿಕಾ ಶೆಟ್ಟಿ ಸಿದ್ದಕಟ್ಟೆ, ಸುರೇಶ ರಾವ್. ಬಿ, ಹಿಮ್ಮೇಳದಲ್ಲಿ ಶ್ರೀಪತಿ ಭಟ್ ಉಪ್ಪಿನಂಗಡಿ, ಗುರುಮೂರ್ತಿ ಅಮ್ಮಣಾಯ, ಅರ್ಥಧಾರಿಗಳಾಗಿ ಶ್ರೀಧರ ಎಸ್ಪಿ ಸುರತ್ಕಲ್ ( ಚಿತ್ರವಾಹನ ), ಪ್ರದೀಪ ಚಾರ( ಶ್ರೀಕೃಷ್ಣ ), ಸತೀಶ್ ಶಿರ್ಲಾಲು( ದುರ್ಜಯ, ದಿವಾಕರ

ಮಹಾಭಾರತ ಸರಣಿಯಲ್ಲಿ 60ನೇ ತಾಳ ಮದ್ಧಳೆ – ಸತಿ ಚಿತ್ರಾಂಗದಾ Read More »

ಕಾರ್ಕಳದ ಉದ್ಯಮಿಗೆ 2 ಕೋಟಿ ರೂ. ವಂಚನೆ

ಪಾಲುದಾರಿಕೆ ವ್ಯವಹಾರದಲ್ಲಿ ಬೆನ್ನಿಗಿರಿದ ಪರಂಗಿಪೇಟೆಯ ಸ್ನೇಹಿತರು ಉಡುಪಿ : ಪಾಲುದಾರಿಕೆಯಲ್ಲಿ ವ್ಯವಹಾರ ನಡೆಸುವ ಭರವಸೆ ನೀಡಿ ಉದ್ಯಮಿಯೋರ್ವರಿಗೆ 2 ಕೋಟಿ ರೂ. ವಂಚಿಸಿದ ಪ್ರಕರಣ ಕಾರ್ಕಳದಲ್ಲಿ ಸಂಭವಿಸಿದೆ. ಈ ಕುರಿತು ಉಡುಪಿ ಸೆನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರ್ಕಳ ಮಾರ್ಕೆಟ್‌ ರಸ್ತೆಯಲ್ಲಿರುವ ಮಹಾಲಕ್ಷ್ಮೀ ಪ್ರಭಾ ಕಾಂಪ್ಲೆಕ್ಸ್‌ನಲ್ಲಿ ಮೊಬೈಲ್‌ ಅಂಗಡಿ ಹೊಂದಿರುವ ಮರ್ಣೆಯ ದಾವುದುಲ್‌ ಹಕೀಂ ಎಂಬವರಿಗೆ ಕಳೆದ 20 ವರ್ಷಗಳಿಂದ ಪರಿಚಯಸ್ಥರಾಗಿರುವ ಫರಂಗಿಪೇಟೆಯ ಅಬ್ದುಲ್‌ ರಹಿಮಾನ್‌, ಹಫೀಜ್ ಟಿ.ಎ., ಅಯ್ಯೂಬ್‌, ಸದಕತ್ತುಲ್ಲಾ, ಮೊಹಮ್ಮದ್‌ ಎಂಬವರು ವಂಚನೆ

ಕಾರ್ಕಳದ ಉದ್ಯಮಿಗೆ 2 ಕೋಟಿ ರೂ. ವಂಚನೆ Read More »

error: Content is protected !!
Scroll to Top