ಸುದ್ದಿ

ಐಪಿಎಲ್‌ ಪಂದ್ಯಗಳ ವೇಳಾಪಟ್ಟಿ ಮರು ನಿಗದಿ : ಮೇ 17ರಂದು ಬೆಂಗಳೂರಿನಲ್ಲಿ ಮೊದಲ ಮ್ಯಾಚ್‌

ಆರ್‌ಸಿಬಿ-ಕೆಕೆಆರ್‌ ಮುಖಾಮುಖಿಯೊಂದಿಗೆ ಐಪಿಎಲ್‌ ಮರಳಿ ಅರಂಭ ಮುಂಬಯಿ: ಯುದ್ಧದ ಕಾರಣದಿಂದ ರದ್ದುಪಡಿಸಲಾಗಿದ್ದ ಇಂಡಿಯನ್ ಪ್ರೀಮಿಯರ್ ಲೀಗ್​ನ ಉಳಿದ ಪಂದ್ಯಗಳನ್ನು ಮುಂದುವರಿಸಲು ಬಿಸಿಸಿಐ ನಿರ್ಧರಿಸಿದೆ. ಇದಕ್ಕಾಗಿ ಹೊಸ ವೇಳಪಟ್ಟಿಯನ್ನು ರಚಿಲಾಗಿದೆ. ಅದರಂತೆ ಮೇ 17ರಿಂದ ಐಪಿಎಲ್​ಗೆ ಮತ್ತೆ ಚಾಲನೆ ದೊರೆಯಲಿದೆ. ಆದರೆ ಐಪಿಎಲ್‌ ಪಂದ್ಯಗಳು ನಡೆಯುವ ಸ್ಥಳಗಳು ಬದಲಾಗಲಿವೆ ಮತ್ತು ಪಂದ್ಯಗಳ ನಡುವಿನ ಅಂತರವೂ ವ್ಯತ್ಯಾಸವಾಗಲಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಈಗಾಗಲೇ 57 ಪಂದ್ಯಗಳು ಪೂರ್ಣಗೊಂಡಿದ್ದು, ಇದೀಗ ಉಳಿದ ಪಂದ್ಯಗಳಿಗೆ ದಿನಾಂಕ ನಿಗದಿ ಮಾಡಲಾಗಿದೆ. ಮೇ 9ರ […]

ಐಪಿಎಲ್‌ ಪಂದ್ಯಗಳ ವೇಳಾಪಟ್ಟಿ ಮರು ನಿಗದಿ : ಮೇ 17ರಂದು ಬೆಂಗಳೂರಿನಲ್ಲಿ ಮೊದಲ ಮ್ಯಾಚ್‌ Read More »

ತೆಂಗಿನಮರದಿಂದ ಬಿದ್ದು ವ್ಯಕ್ತಿ ಮೃತ್ಯು

ಸುಳ್ಯ: ತೆಂಗಿನ ಮರದಿಂದ ಬಿದ್ದು ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ಅರಂತೋಡು ಗ್ರಾಮದ ಕಿರ್ಲಾಯದಲ್ಲಿ ನಡೆದಿದೆ. ಮೃತಪಟ್ಟವರು ಅಡಬಳೆ ವಾಸುದೇವ ಎನ್ನಲಾಗಿದೆ.  ತೆಂಗಿನಕಾಯಿ ತೆಗೆಯಲೆಂದು ಮರಕ್ಕೆ ಹತ್ತಿದ್ದ ವೇಳೆ ಆಯತಪ್ಪಿ ಕೆಳಕ್ಕೆ ಬಿದ್ದು ತೀವ್ರ ಗಾಯಗೊಂಡಿದ್ದರು. ತಕ್ಷಣ ವಾಸುದೇವ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.  ಮೃತರು ಪತ್ನಿ ಹಾಗೂ ನಾಲ್ವರು ಮಕ್ಕಳನ್ನು ಅಗಲಿದ್ದಾರೆ.

ತೆಂಗಿನಮರದಿಂದ ಬಿದ್ದು ವ್ಯಕ್ತಿ ಮೃತ್ಯು Read More »

ತಾಲೂಕಿನ ಎಸ್ ಎಸ್ ಎಲ್ ಸಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮ

ಪುತ್ತೂರು: ಎಸ್ ಎಸ್ ಎಲ್ ಸಿ ಪ್ರತೀಯೊಬ್ಬ ವಿದ್ಯಾರ್ಥಿಯ ಮೊದಲ ನಿರ್ಣಾಯ ಘಟ್ಟವಾಗಿದೆ. ಈ ಪರೀಕ್ಷೆಯಲ್ಲಿ ಪಡೆದ ಅಂಕವು ವಿದ್ಯಾರ್ಥಿಯನ್ನು ಉನ್ನತದತ್ತ ಕೊಂಡೊಯ್ಯುತ್ತದೆ. ಬಳಿಕ ಪಿಯುಸಿ ಪರೀಕ್ಷೆಯಲ್ಲೂ ಉತ್ತಮ ಸಾಧನೆ ಮಾಡಿ ಪದವಿ ಪರಿಕ್ಷೆ ಮುಗಿಸುವುದರ ಒಳಗಾಗಿ ವಿದ್ಯಾರ್ಥಿಗಳು ಐಎಎಸ್, ಐಪಿಎಇಸ್ ಸ್ಪರ್ಧಾತ್ಮಕ ಪರಿಕ್ಷೆಗಳನ್ನು ಎದುರಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಶಾಸಕರಾದ ಅಶೋಕ್ ರೈ ಹೇಳಿದರು. ಅವರು ಸೋಮವಾರ ಶಾಸಕರ ಭವನದಲ್ಲಿ ಈ ಬಾರಿಯ ಎಸ್ ಎಸ್ ಎಲ್ ಸಿ ಪರಿಕ್ಷೆಯಲ್ಲಿ ಸಾಧನೆ ಮಾಡಿದ ಪುತ್ತೂರು ವಿಧಾನಸಭಾ

ತಾಲೂಕಿನ ಎಸ್ ಎಸ್ ಎಲ್ ಸಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮ Read More »

ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ನಲ್ಲಿ ‘ಕೃಷಿ ಗೋಷ್ಠಿ’ ಸಂವಾದ ಕಾರ್ಯಕ್ರಮ

ಪುತ್ತೂರು: ಕೃಷಿಯಷ್ಟೇ ಅಲ್ಲ ಕೃಷಿ ವಸ್ತುಗಳ ಮಾರುಕಟ್ಟೆ ಹಾಗೂ ಕೃಷಿ ಬೆಳವಣಿಗೆಯ ಬಗ್ಗೆ ಪುತ್ತೂರಿನ ಮುಳಿಯ ಗೋಲ್ಡ್ ಮತ್ತು ಡೈಮಂಡ್ ವತಿಯಿಂದ ಕೃಷಿ ಕುರಿತು  ಸಂವಾದ ‘ಕೃಷಿ ಗೋಷ್ಠಿ’ ಸಂಸ್ಥೆಯ ಸುಲೋಚನಾ ಟವರ್ಸ್ನ ಅಪರಂಜಿ ರೂಫ್ ಗಾರ್ಡನ್ನಲ್ಲಿ ಭಾನುವಾರ ನಡೆಯಿತು. ಮುಳಿಯ ನೂತನ ನವೀಕೃತ ವಿಸ್ತ್ರತ ಆಭರಣ ಮಳಿಗೆಯ ಅನಾವರಣ ಪ್ರಯುಕ್ತ ಕೃಷಿ ಬೆಳವಣಿಗೆಗೆ ಸಂವಾದ ವೇದಿಕೆಯನ್ನು ಸೃಷ್ಟಿಸಲಾಗಿದ್ದು, ಮುಳಿಯ ಗೋಲ್ಡ್ ಮತ್ತು ಡೈಮಂಡ್ ಆಡಳಿತ ಮಂಡಳಿಯ ಕೃಷ್ಣ ನಾರಾಯಣ ಮುಳಿಯ ಉದ್ಘಾಟಿಸಿ ಮಾತನಾಡಿ, ಕೃಷಿ ಬೆಳವಣಿಗೆಗೆ

ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ನಲ್ಲಿ ‘ಕೃಷಿ ಗೋಷ್ಠಿ’ ಸಂವಾದ ಕಾರ್ಯಕ್ರಮ Read More »

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯಕ್ಕೆ ವ್ಯವಸ್ಥಾಪನಾ ಸಮಿತಿಯ ನೂತನ ಅಧ್ಯಕ್ಷರಾಗಿ ಹರೀಶ್‍ ಇಂಜಾಡಿ ಅವಿರೋಧವಾಗಿ ಆಯ್ಕೆ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯಕ್ಕೆ ವ್ಯವಸ್ಥಾಪನಾ ಸಮಿತಿಯ ನೂತನ ಅಧ್ಯಕ್ಷರಾಗಿ ಹರೀಶ್‍ ಇಂಜಾಡಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಭಾನುವಾರದಂದು ಮಹೇಶ್‍ ಕುಮಾರ್‍ ಕರಿಕ್ಕಳ ಅವರ ಅಧ್ಯಕ್ಷತೆಯನ್ನು ಹೈಕಮಾಂಡ್‍ ಸೂಚಿಸಿದ್ದಾರೆ. ಇಂದು ಅದಕ್ಕೆ ಹರೀಶ್‍ ಇಂಜಾಡಿ, ಅಶೋಕ್‍ ನೆಕ್ರಾಜೆ ಬಂಡೆದ್ದು ಸ್ಪರ್ಧೆ ನಡೆಸುವ ಸಾಧ್ಯತೆಯನ್ನು ಹುಟ್ಟುಹಾಕಿತು. ಈ ಹಿನ್ನಲೆಯಲ್ಲಿ ನೇಮಕಗೊಂಡ ಸದಸ್ಯರು ಮಾತ್ರ ಇದ್ದು ಸಮಾಲೋಚನೆ ನಡೆಯಿತು. ಇದು ಒಂದು ಗಂಟೆಯಾದರೂ ಮುಗಿಯದಿದ್ದಾಗ ಹೊರಗೆ ಕಾಯುತ್ತಿದ್ದ ಕೆಲವರು ಒಳಗೆ ಬಂದು ಮಾತನಾಡಿದರು. ಈ ವೇಳೆ ಇ.ಒ.ರವರು ಒಳ ಬಂದು ಅವರನ್ನು

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯಕ್ಕೆ ವ್ಯವಸ್ಥಾಪನಾ ಸಮಿತಿಯ ನೂತನ ಅಧ್ಯಕ್ಷರಾಗಿ ಹರೀಶ್‍ ಇಂಜಾಡಿ ಅವಿರೋಧವಾಗಿ ಆಯ್ಕೆ Read More »

ಪುತ್ತೂರು: ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಭಗವಾನ್‍ ಶ್ರೀ ಬುದ್ಧ ಜಯಂತಿ ಆಚರಣೆ

ಪುತ್ತೂರು : ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಭಗವಾನ್ ಶ್ರೀ ಬುದ್ಧ ಜಯಂತಿ ಆಚರಣೆ ತಾಲೂಕು ಆಡಳಿತ ಸೌಧದಲ್ಲಿರುವ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ  ಸೋಮವಾರ ನಡೆಯಿತು. ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷ, ತಹಸೀಲ್ದಾರ್‍  ಪುರಂದರ ಹೆಗಡೆ ಕಾರ್ಯಕ್ರಮ ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಮಾತನಾಡಿ, ತನ್ನ ಎಳೆಯ  ವಯಸ್ಸಿನಲ್ಲೇ ಎಲ್ಲವನ್ನೂ ತ್ಯಜಿಸಿ ತಪಸ್ಸನ್ನಾಚರಿಸಿ ಸಮಾಜ, ದೇಶದ ಉದ್ಘಾರ ಆಗಬೇಕು ಎಂಬುದನ್ನು ಜಗತ್ತಿಗೆ ಸಾರಿದವರು. ಇಂತಹ ಮಾಹಾತ್ಮರ ಸ್ಮರಣೆ ಮೂಲಕ ಜಯಂತಿ ಆಚರಣೆ ಮಾಡುವುದು

ಪುತ್ತೂರು: ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಭಗವಾನ್‍ ಶ್ರೀ ಬುದ್ಧ ಜಯಂತಿ ಆಚರಣೆ Read More »

ಶ್ರೀ ಮಹಾಭಾರತ ಸರಣಿಯ 75ನೇ ತಾಳಮದ್ದಳೆ ಮತ್ತು ಸನ್ಮಾನ

ಉಪ್ಪಿನಂಗಡಿ : ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘದ ಸುವರ್ಣ ಮಹೋತ್ಸವದ ನಿಮಿತ್ತ ನಡೆಸಲಾಗುತ್ತಿರುವ ಶ್ರೀ ಮಹಾಭಾರತ ಸರಣಿಯ 75ನೇ ಕಾರ್ಯಕ್ರಮವಾಗಿ ಗಾಂಡಿವ ನಿಂದನೆ ತಾಳಮದ್ದಳೆ ಇಚ್ಚ್ಯೂರು  ಶ್ರೀಬಾಲಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಜರಗಿತು. ಶ್ರೀ ನರಸಿಂಹ ಜಯಂತಿಯ ಪ್ರಯುಕ್ತ ಆಯೋಜಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ಭಾಗವತರಾಗಿ ಸುರೇಶ್ ರಾವ್ ಬಿ, ನಿತೀಶ್ ಕುಮಾರ್ ವೈ, ಪದ್ಮನಾಭ ಕುಲಾಲ್ ಇಳಂತಿಲ ಹೀಮ್ಮೆಳದಲ್ಲಿ ಲಕ್ಷ್ಮೀಶ ಅಮ್ಮಣ್ಣಾಯ, ಶ್ರೀಪತಿ ಭಟ್ ಉಪ್ಪಿನಂಗಡಿ  ಹಾಗೂ ಅರ್ಥಧಾರಿಗಳಾಗಿ ಜಬ್ಬಾರ್ ಸಮೊ (ಅರ್ಜುನ), ದಿವಾಕರ ಆಚಾರ್ಯ

ಶ್ರೀ ಮಹಾಭಾರತ ಸರಣಿಯ 75ನೇ ತಾಳಮದ್ದಳೆ ಮತ್ತು ಸನ್ಮಾನ Read More »

30 ಶತಕ, 31 ಅರ್ಧಶತಕ, 9230 ರನ್ : ಟೆಸ್ಟ್‌ನಲ್ಲಿ ಕೊಹ್ಲಿ ಸಾಧನೆ

ಟೆಸ್ಟ್‌ ಪಂದ್ಯಗಳಿಗೆ ವಿದಾಯ ದೃಢಪಡಿಸಿದ ಕಿಂಗ್‌ ಕೊಹ್ಲಿ ಮುಂಬಯಿ: ವಿರಾಟ್‌ ಕೊಹ್ಲಿ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳುತ್ತಿರುವುದು ದೃಢಪಟ್ಟಿದೆ. ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಕೊಹ್ಲಿ ಅಧಿಕೃತವಾಗಿ ನಿವೃತ್ತಿ ಘೋಷಿಸಿದ್ದು, ಕಿಂಗ್ ಕೊಹ್ಲಿಯ 14 ವರ್ಷದ ಟೆಸ್ಟ್ ಕೆರಿಯರ್ ಅಂತ್ಯಗೊಂಡಂತಾಗಿದೆ. ಕೆಲ ದಿನಗಳ ಹಿಂದೆ ಕೊಹ್ಲಿ ಟೆಸ್ಟ್​ ಕ್ರಿಕೆಟ್​ಗೆ ವಿದಾಯ ಹೇಳಲಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು. ಹೀಗಾಗಿ ಬಿಸಿಸಿಐ ಅವರ ಮನವೊಲಿಸಲು ಮುಂದಾಗಿತ್ತು. ಆದರೆ ಈ ಮಾತುಕತೆ ಫಲಪ್ರದವಾಗಿಲ್ಲ. ಹೀಗಾಗಿ ಕೊಹ್ಲಿ ಟೆಸ್ಟ್ ಕ್ರಿಕೆಟ್​ಗೆ ನಿವೃತ್ತಿ

30 ಶತಕ, 31 ಅರ್ಧಶತಕ, 9230 ರನ್ : ಟೆಸ್ಟ್‌ನಲ್ಲಿ ಕೊಹ್ಲಿ ಸಾಧನೆ Read More »

ಸರಕಾರಿ ಬಸ್ಸಿನಿಂದ ಎಸೆಯಲ್ಪಟ್ಟ ಪ್ರಯಾಣಿಕ

ಪುತ್ತೂರು: ಪ್ರಯಾಣಿಕರೋರ್ವರು ಕೆಎಸ್ ಆರ್ ಟಿಸಿ ಬಸ್ ನಿಂದ ಎಸೆಯಲ್ಪಟ್ಟ ಘಟನೆ ಸೋಮವಾರ ದರ್ಬೆಯಲ್ಲಿ ನಡೆದಿದೆ. ದರ್ಬೆ ಜಂಕ್ಷನ್ ಬಳಿ ಪ್ರಯಾಣಿಕರೋರ್ವರು ಬಸ್ ಗೆ ಹತ್ತಿದ್ದರು. ಬಸ್ ಸ್ವಲ್ಪ ಮುಂದೆ ಹೋಗಿತ್ತಷ್ಟೇ, ಅಷ್ಟರಲ್ಲೇ ಪ್ರಯಾಣಿಕ ಬಸ್ ನಿಂದ ಎಸೆಯಲ್ಪಟ್ಟಿದ್ದಾರೆ. ಗಾಯಗೊಂಡ ಅವರನ್ನು ಬಸ್ ಚಾಲಕ, ನಿರ್ವಾಹಕರು ಆಸ್ಪತ್ರೆಗೆ ಸಾಗಿಸಲು ವ್ಯವಸ್ಥೆ ಮಾಡಿದರು.

ಸರಕಾರಿ ಬಸ್ಸಿನಿಂದ ಎಸೆಯಲ್ಪಟ್ಟ ಪ್ರಯಾಣಿಕ Read More »

ನಾಳೆ (ಮೇ. 13) :  ಪುತ್ತೂರು ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ಸ್ ನಲ್ಲಿ –  ಯಕ್ಷಗಾನ ಬೊಂಬೆಯಾಟ – ದೇವಿ ಮಹಾತ್ಮೆ

ಪುತ್ತೂರು : ಮುಳಿಯದ ಹೊಸ ವಿನೂತನ ಶೋರೂಮ್ ಉದ್ಘಾಟನಾ ಸಮಾರಂಭದ ಅಂಗವಾಗಿ ಕಾಸರಗೋಡಿನ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ  ಸಂಘ ಇವರಿಂದ ಮೇ 13 ರಂದು ಸಂಜೆ .6.30 ಕ್ಕೆ ಶ್ರೀದೇವಿ ಮಹಾತ್ಮೆ ಯಕ್ಷಗಾನ ಬೊಂಬೆಯಾಟ ನಡೆಯಲಿದೆ . ಗೊಂಬೆಯಾಟ  ಅತೀ ಪುರಾತನ ಜಾನಪದ ಕಲೆಯಾಗಿದೆ. ನೂರು ವರ್ಷಗಳ ಹಿಂದೆ ನಮ್ಮ ಕರಾವಳಿಯಲ್ಲಿ ಮೂವತ್ತಕ್ಕಿಂತಲೂ ಹೆಚ್ಚು ಬೊಂಬೆಯಾಟ ತಂಡಗಳಿದ್ದುವು. ಆದರೆ  ಆಧುನಿಕ ಮಾಧ್ಯಮಗಳ ಹಾವಳಿಯಿಂದ ಈ ಜಾನಪದ ಕಲೆಯೂ ಅವನತಿಯ ಅಂಚಿನತ್ತ ಧಾವಿಸುತ್ತಿದೆ. ಇಂದು ಕೇವಲ ಎರಡು ತಂಡಗಳು

ನಾಳೆ (ಮೇ. 13) :  ಪುತ್ತೂರು ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ಸ್ ನಲ್ಲಿ –  ಯಕ್ಷಗಾನ ಬೊಂಬೆಯಾಟ – ದೇವಿ ಮಹಾತ್ಮೆ Read More »

error: Content is protected !!
Scroll to Top