ಸುದ್ದಿ

ಶಾಲಾ ಬಾಲಕನಿಗೆ ಬೆದರಿಕೆ : ಯುವಕನ ಬಂಧನ

ಬಸ್‌ ನಿಲ್ದಾಣದಲ್ಲಿ ಸಹಪಾಠಿಯ ಜೊತೆ ಮಾತನಾಡುತ್ತಿದ್ದ ಬಾಲಕನಿಗೆ ಬೆದರಿಕೆ ವಿಟ್ಲ : ಖಾಸಗಿ ಬಸ್ ನಿಲ್ದಾಣದ ಸಮೀಪ ಶಾಲಾ ಸಹಪಾಠಿಯೊಂದಿಗೆ ಮಾತನಾಡುತ್ತಿದ್ದ ಬಾಲಕನಿಗೆ ಬೆದರಿಕೆಯೊಡ್ಡಿದ ಆರೋಪದಲ್ಲಿ ಯುವಕನನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ. ಬಾಲಕ ತನ್ನ ಸಹಪಾಠಿಯ ಜೊತೆಗೆ ಮಾತನಾಡುತ್ತಾ ನಿಂತಿದ್ದ ವೇಳೆ ಅಲ್ಲಿಗೆ ಬಂದ ವ್ಯಕ್ತಿ ಬಾಲಕನಿಗೆ ಜೀವ ಬೆದರಿಕೆ ಒಡ್ಡಿದ್ದಾನೆ ಎನ್ನಲಾಗಿದೆ. ಮಂಜೇಶ್ವರ ಎಣ್ಮಕಜೆ ನಿವಾಸಿ ಪದ್ಮರಾಜ್ ಬಂಧಿಸಲ್ಪಟ್ಟಿರುವ ಯುವಕ. ಬಾಲಕ ತನ್ನ ಶಾಲಾ ಸಹಪಾಠಿಯೊಂದಿಗೆ ವಿಟ್ಲದ ಖಾಸಗಿ ಬಸ್ ನಿಲ್ದಾಣದಲ್ಲಿ ಮಾತನಾಡುತ್ತಿದ್ದು, ಈ ಸಂದರ್ಭ […]

ಶಾಲಾ ಬಾಲಕನಿಗೆ ಬೆದರಿಕೆ : ಯುವಕನ ಬಂಧನ Read More »

ಮಡಪ್ಪಾಡಿಗೆ ಕೊನೆಗೂ ಸಿಕ್ಕಿತು ಸರ್ಕಾರಿ ಹಾಲ್ಟ್ ಬಸ್ ಸೇವೆ

ಊರವರ ಬಹುಕಾಲದ ಬೇಡಿಕೆ ಈಡೇರಿಕೆ ; ಬಸ್‌ಗೆ ಸಂಭ್ರಮದ ಸ್ವಾಗತ ಸುಳ್ಯ: ತಾಲೂಕಿನ ಮಡಪ್ಪಾಡಿಯಲ್ಲಿ ರಾತ್ರಿ ಹಾಲ್ಟ್‌ ಆಗುವ ಸರ್ಕಾರಿ ಬಸ್‌ ಸೇವೆ ಆರಂಭವಾಗಿದ್ದು, ಈ ಮೂಲಕ ಗ್ರಾಮಸ್ಥರ ಬಹುಕಾಲದ ಬೇಡಿಕೆ ಈಡೇರಿದೆ. 2019-20ರಲ್ಲಿ ಕೊರೋನ ಸಾಂಕ್ರಾಮಿಕ ಬಾಧಿಸಿದ ಸಂದರ್ಭ ಸ್ಥಗಿತಗೊಂಡಿದ್ದ ಮಡಪ್ಪಾಡಿಯ ಸರಕಾರಿ ಬಸ್ ಇದೀಗ ಪುನರಾರಂಭಗೊಂಡಿದೆ. ಮಡಪ್ಪಾಡಿ ಸುಮಾರು 1600 ಜನಸಂಖ್ಯೆ ಇರುವ ಈ ಊರು. ಈ ಊರಿಗೆ ಸಾರಿಗೆಯದ್ದೇ ದೊಡ್ಡ ಸವಾಲು. ಈ ಸಮಸ್ಯೆ ನೀಗಿಸುವ ನಿಟ್ಟಿನಲ್ಲಿ ಇದೀಗ ಸಾಯಂಕಾಲ 6.30ಕ್ಕೆ ಸುಳ್ಯದಿಂದ

ಮಡಪ್ಪಾಡಿಗೆ ಕೊನೆಗೂ ಸಿಕ್ಕಿತು ಸರ್ಕಾರಿ ಹಾಲ್ಟ್ ಬಸ್ ಸೇವೆ Read More »

ಸರ್ಕಾರದ ವಿರುದ್ಧ ಬಿಜೆಪಿಯಿಂದ ಬೂಟ್‌ ಪೇ ಅಭಿಯಾನ

ಶಾಲಾ ಮಕ್ಕಳಿಗೆ ಶೂ ಕೊಡಿಸಲು ದಾನಿಗಳ ಮೊರೆ ಹೋಗಿರುವುದಕ್ಕೆ ಲೇವಡಿ ಬೆಂಗಳೂರು: ಶಾಲಾ ಮಕ್ಕಳ ಶೂ-ಸಾಕ್ಸ್‌ಗಾಗಿ ದಾನಿಗಳ ಮೊರೆಹೋದ ರಾಜ್ಯ ಸರ್ಕಾರದ ನಡೆ ವಿರುದ್ಧ ರಾಜ್ಯಾದ್ಯಂತ ವ್ಯಾಪಕ ಟೀಕೆಗಳು ವ್ಯಕ್ತವಾಗಿದೆ. ಗ್ಯಾರಂಟಿ ಕೊಟ್ಟು ದಿವಾಳಿಯಾಗಿರುವ ಸರ್ಕಾರದ ಬಳಿ ಶಾಲಾ ಮಕ್ಕಳಿಗೆ ಬೂಟು ಕೊಡಲು ಕೂಡ ಗತಿಯಿಲ್ಲ ಎಂದು ವಿಪಕ್ಷಗಳು ಟೀಕಿಸಿವೆ. ಬಿಜೆಪಿ ಬೂಟ್‌ ಪೇ ಹೆಸರಿನಲ್ಲಿ ಹೊಸ ಅಭಿಯಾನ ಆರಂಭಿಸಿದೆ. ಮಕ್ಕಳ ಶೂ ಮೇಲೆ ಬೂಟ್ ಪೇ ಎಂದು ಬರೆದು ಕ್ಯೂಆರ್ ಸ್ಕ್ಯಾನ್‌ ಪೋಸ್ಟರ್ ಮೂಲಕ ಬಿಜೆಪಿ

ಸರ್ಕಾರದ ವಿರುದ್ಧ ಬಿಜೆಪಿಯಿಂದ ಬೂಟ್‌ ಪೇ ಅಭಿಯಾನ Read More »

ಉಗ್ರರಿಗೆ ನೆರವು ನೀಡುತ್ತಿದ್ದ ವೈದ್ಯ, ಎಎಸ್‌ಐ ಬಂಧನ

ಐದು ಕಡೆ ಎನ್‌ಐಎ ದಾಳಿ; ಉಗ್ರ ಜಾಲದ ಮಹತ್ವದ ಸುಳಿವು ಪತ್ತೆ ಬೆಂಗಳೂರು : ರಾಷ್ಟ್ರೀಯ ತನಿಖಾ ದಳ (ಎನ್​ಐಎ) ಬೆಂಗಳೂರು, ಕೋಲಾರದಲ್ಲಿ ಒಟ್ಟು ಐದು ಕಡೆ ದಾಳಿ ಮಾಡಿ ಉಗ್ರರಿಗೆ ನೆರವಾಗುತ್ತಿದ್ದ ಮೂವರನ್ನು ಬಂಧಿಸಿದೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನ ಮನೋವೈದ್ಯ ಡಾ.ನಾಗರಾಜ್, ಪರಪ್ಪನ ಅಗ್ರಹಾರ ಜೈಲಿನ ಎಎಸ್ಐ ಆಗಿದ್ದ ಚಾಂದ್ ಪಾಷಾ ಅನೀಸ್ ಹಾಗೂ ಫಾತಿಮಾ ಎನ್ನುವವರನ್ನು ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಬಂಧಿಸಿದ್ದಾರೆ. ಉಗ್ರರ ಚಟುವಟಿಕೆಗೆ ನೆರವು ನೀಡುತ್ತಿದ್ದ ಆರೋಪದಡಿ ಮೂವರನ್ನು

ಉಗ್ರರಿಗೆ ನೆರವು ನೀಡುತ್ತಿದ್ದ ವೈದ್ಯ, ಎಎಸ್‌ಐ ಬಂಧನ Read More »

ಕೇರಳದ ನರ್ಸ್‌ ನಿಮಿಷಾ ಪ್ರಿಯಾಗೆ ಜು.16ರಂದು ಯೆಮೆನ್‌ನಲ್ಲಿ ಗಲ್ಲು ಶಿಕ್ಷೆ ಜಾರಿ

ಪಾಸ್‌ಪೋರ್ಟ್‌ ಕಿತ್ತುಕೊಂಡು ಕಾಟ ಕೊಡುತ್ತಿದ್ದ ಯೆಮೆನ್‌ ಪಾಲುದಾರನನ್ನು ಕೊಂದ ಪ್ರಕರಣ ನವದೆಹಲಿ : ಯೆಮೆನ್‌ನಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಕೇರಳದ ನರ್ಸ್‌ ನಿಮಿಷಾ ಪ್ರಿಯಾ ಅವರನ್ನು ಉಳಿಸಿಕೊಳ್ಳುವ ಎಲ್ಲ ಪ್ರಯತ್ನಗಳು ವಿಫಲಗೊಂಡಿವೆ. 37 ವರ್ಷದ ನರ್ಸ್ ನಿಮಿಷಾ ಪ್ರಿಯಾ ಅವರನ್ನು ಜುಲೈ 16ರಂದು ಯೆಮೆನ್ ದೇಶದಲ್ಲಿ ಗಲ್ಲಿಗೇರಿಸಲು ನಿರ್ಧರಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಯೆಮೆನ್ ಪ್ರಜೆ ತಲಾಲ್ ಅಬ್ದೋ ಮೆಹ್ದಿ ಎಂಬವರನ್ನು ಕೊಲೆ ಮಾಡಿದ ಆರೋಪದ ಮೇಲೆ ನಿಮಿಷಾ ಪ್ರಿಯಾಗೆ ಮರಣದಂಡನೆ ವಿಧಿಸಲಾಗಿದೆ. ಯೆಮೆನ್‌ನಲ್ಲಿ

ಕೇರಳದ ನರ್ಸ್‌ ನಿಮಿಷಾ ಪ್ರಿಯಾಗೆ ಜು.16ರಂದು ಯೆಮೆನ್‌ನಲ್ಲಿ ಗಲ್ಲು ಶಿಕ್ಷೆ ಜಾರಿ Read More »

ಬಂಟ್ವಾಳ: ಪಿಯುಸಿ ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹತ್ಯೆ

ಬಂಟ್ವಾಳ: ಪಿಯುಸಿ ವಿದ್ಯಾರ್ಥಿಯೊಬ್ಬ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಂಟ್ವಾಳದಲ್ಲಿ ಸೋಮವಾರ ಸಂಜೆ ಸಂಭವಿಸಿದೆ. ತುಂಬೆ ಗ್ರಾಮದ ಪರ್ಲಕ್ಕೆಯ ಕರುಣಾಕರ ಗಟ್ಟಿ ಅವರ ಏಕೈಕ ಪುತ್ರ ತೇಜಸ್ ಆತ್ಮಹತ್ಯೆ ಮಾಡಿಕೊಂಡ ಬಾಲಕ. ತೇಜಸ್ ಮೊಡಂಕಾಪುವಿನ ಕಾಲೇಜಿನಲ್ಲಿ ಪಿಯುಸಿ ವಿದ್ಯಾರ್ಥಿಯಾಗಿದ್ದ. ನಿನ್ನೆ ಆತನಿಗೆ ಪರೀಕ್ಷೆ ಇದ್ದು, ಸಂಜೆ ವೇಳೆ ಕ್ಲಾಸಿನಿಂದ ಮನೆಗೆ ಬಂದಿದ್ದಾನೆ. ತಂದೆ ತಾಯಿ ಇಬ್ಬರು ನೌಕಯಲ್ಲಿದ್ದು, ಅವರು ಮನೆಗೆ ಬರುವಾಗ ರಾತ್ರಿಯಾಗುತ್ತದೆ. ತೇಜಸ್‌ ಎಂದಿನಂತೆ ಸಂಜೆ ಮನೆಗೆ ಬಂದು ನೇಣು ಹಾಕಿಕೊಂಡಿದ್ದ. ತಂದೆ

ಬಂಟ್ವಾಳ: ಪಿಯುಸಿ ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹತ್ಯೆ Read More »

ರಾಷ್ಟ್ರ ರಾಜಕಾರಣಕ್ಕೆ ಹೋಗಲಾರೆ : ಸಿದ್ದರಾಮಯ್ಯ ಸ್ಪಷ್ಟನೆ

ಮುಖ್ಯಮಂತ್ರಿ ಬದಲಾಯಿಸುವ ಹೈಕಮಾಂಡ್‌ ಪ್ರಯತ್ನಕ್ಕೆ ಪರೋಕ್ಷ ಎಚ್ಚರಿಕೆ ಬೆಂಗಳೂರು: ತಾನು ರಾಷ್ಟ್ರ ರಾಜಕಾರಣಕ್ಕೆ ಹೋಗುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೊಂಡಿದ್ದಾರೆ. ಈ ಮೂಲಕ ರಾಷ್ಟ್ರ ರಾಜಕಾರಣಕ್ಕೆ ತನ್ನನ್ನು ಸಾಗಹಾಕಿ ಮುಖ್ಯಮಂತ್ರಿ ಹುದ್ದೆಯನ್ನು ಬದಲಾಯಿಸುವ ಹೈಕಮಾಂಡ್‌ ಪ್ರಯತ್ನಕ್ಕೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ. ಸಿದ್ದರಾಮಯ್ಯನವರನ್ನು ಎಐಸಿಸಿಯಲ್ಲಿ ಒಬಿಸಿ ಸಲಹಾ ಮಂಡಳಿ ಸೃಷ್ಟಿಸಿ ಅದಕ್ಕೆ ಅಧ್ಯಕ್ಷರನ್ನಾಗಿ ಮಾಡುವ ಪ್ರಯತ್ನ ನಡೆದಿತ್ತು. ಆದರೆ ಅಧ್ಯಕ್ಷ ಹುದ್ದೆ ಬೇಡ ಎಂದು ಸಿದ್ದರಾಮಯ್ಯನವರು ಹೇಳಿದ ಬಳಿಕ ಅವರನ್ನು ಈ ಮಂಡಳಿಯ ಸದಸ್ಯರನ್ನಾಗಿ ಮಾಡಲಾಗಿತ್ತು. ಇದು ಅವರನ್ನು

ರಾಷ್ಟ್ರ ರಾಜಕಾರಣಕ್ಕೆ ಹೋಗಲಾರೆ : ಸಿದ್ದರಾಮಯ್ಯ ಸ್ಪಷ್ಟನೆ Read More »

ಶಾಲಾ ವ್ಯಾನಿಗೆ ರೈಲು ಡಿಕ್ಕಿ : ಇಬ್ಬರು ಮಕ್ಕಳು ಸಾವು; ಮೂವರಿಗೆ ಗಂಭೀರ ಗಾಯ

ರೈಲು ಬರುತ್ತಿರುವುದನ್ನು ನೋಡಿಯೂ ದಾಟುವ ಸಾಹಸ ಮಾಡಿದಾಗ ದುರಂತ ಚೆನ್ನೈ : ಲೆವೆಲ್‌ ಕ್ರಾಸಿಂಗ್‌ನಲ್ಲಿ ಶಾಲಾ ವಾಹನಕ್ಕೆ ರೈಲು ಡಿಕ್ಕಿ ಹೊಡೆದು ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ತಮಿಳುನಾಡಿನ ಕಡ್ಡಲೂರು ಎಂಬಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ. ಬೆಳಗ್ಗೆಮಕ್ಕಳನ್ನು ಹತ್ತಿಸಿಕೊಂಡು ಶಾಲೆಗೆ ಹೋಗುತ್ತಿರುವಾಗ ಈ ದುರ್ಘಟನೆ ಸಂಭವಿಸಿದೆ. ಕಡ್ಡಲೂರು ಸಮೀಪ ಸೆಮ್ಮನಕೊಪ್ಪಂ ಎಂಬಲ್ಲಿ ಲೆವೆಲ್‌ ಕ್ರಾಸಿಂಗ್‌ನ್ನು ಶಾಲಾ ವ್ಯಾನ್‌ ದಾಟುತ್ತಿದ್ದಾಗ ವೇಗವಾಗಿ ಬಂದ ರೈಲು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ವ್ಯಾನ್‌ ಪೂರ್ತಿ ಜಖಂಗೊಂಡಿದೆ. ಈ ಸಂದರ್ಭದಲ್ಲಿ

ಶಾಲಾ ವ್ಯಾನಿಗೆ ರೈಲು ಡಿಕ್ಕಿ : ಇಬ್ಬರು ಮಕ್ಕಳು ಸಾವು; ಮೂವರಿಗೆ ಗಂಭೀರ ಗಾಯ Read More »

ಬಾಲಕಿಯನ್ನು ಅಪಹರಿಸಿದ ದಂಪತಿ ಸಹಿತ ಮೂವರ ಸೆರೆ

ಮಂಗಳೂರು: ಉಳ್ಳಾಲದಿಂದ ಬಾಲಕಿಯೊಬ್ಬಳನ್ನು ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿ ದಂಪತಿ ಸಹಿತ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಬಾಲಕಿಯನ್ನು ಅಪಹರಿಸಲು ಪ್ರಮುಖ ಆರೋಪಿಗೆ ದಂಪತಿ ನೆರವಾಗಿದ್ದರು ಎನ್ನಲಾಗಿದೆ. 16ರ ಹರೆಯದ ಮಗಳು ಮನೆಯಿಂದ ಹೊರ ಹೋದವಳು ನಂತರ ನಾಪತ್ತೆಯಾಗಿದ್ದು, ಆಕೆಯನ್ನು ಅಪಹರಿಸಿರುವುದಾಗಿ ಬಾಲಕಿಯ ತಂದೆ ಉಳ್ಳಾಲ ಠಾಣೆಗೆ ದೂರು ನೀಡಿದ್ದರು. ಈ ಬಗ್ಗೆ ತನಿಖೆ ನಡೆಸಿದ ಉಳ್ಳಾಲ ಪೊಲೀಸರು ಬಾಲಕಿಯನ್ನು ಅಪಹರಿಸಿದ ಆರೋಪಿ ದೇರಳಕಟ್ಟೆ ಸಮೀಪದ ರೆಂಜಾಡಿ ನಿವಾಸಿ ಶಹಬಾಝ್ (27) ಹಾಗೂ ಆತನಿಗೆ ಸಹಕರಿಸಿದ ಕೊಣಾಜೆ ನಿವಾಸಿಗಳಾದ ಅಮೀರ್

ಬಾಲಕಿಯನ್ನು ಅಪಹರಿಸಿದ ದಂಪತಿ ಸಹಿತ ಮೂವರ ಸೆರೆ Read More »

ಮಂಗಳೂರು: ಹೃದಯಾಘಾತದಿಂದ ಇಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

ಮಂಗಳೂರು : ಹೃದಯಾಘಾತದಿಂದ ಇಂಜಿನಿಯರಿಂಗ್ ವಿದ್ಯಾರ್ಥಿ ಕುಸಿದು ಬಿದ್ದು ಮೃತಪಟ್ಟ ಘಟನೆ ಸುರತ್ಕಲ್‌ನ ಕೃಷ್ಣಾಪುರ ಹಿಲ್‌ಸೈಡ್ ಬಳಿ ಸಂಭವಿಸಿದೆ.ಮೃತರನ್ನು ಹಿಲ್‌ಸೈಡ್ ನಿವಾಸಿ ಅಸ್ಗರ್ ಅಲಿ ಅವರ ಪುತ್ರ ಅಫ್ತಾಬ್ (18) ಎಂದು ಗುರುತಿಸಲಾಗಿದೆ. ಅವರು ಸುರತ್ಕಲ್‌ನಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಡಿಪ್ಲೊಮಾ ವ್ಯಾಸಂಗ ಮಾಡುತ್ತಿದ್ದರು. ಸೋಮವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಅಫ್ತಾಬ್ ಮನೆಯಲ್ಲಿ ಸ್ನಾನಕ್ಕೆ ಹೋಗುತ್ತಿದ್ದಾಗ ಹೃದಯಾಘಾತದಿಂದ ಕುಸಿದು ಬಿದ್ದಿದ್ದಾರೆ ಎನ್ನಲಾಗಿದೆ. ಅಸ್ಗರ್ ಅಲಿ ಅವರ ನಾಲ್ಕು ಮಕ್ಕಳಲ್ಲಿ ಅಫ್ತಾಬ್ ಏಕೈಕ ಪುತ್ರ. ಅವರ ಮೂವರು ಸಹೋದರಿಯರಿಗೆ

ಮಂಗಳೂರು: ಹೃದಯಾಘಾತದಿಂದ ಇಂಜಿನಿಯರಿಂಗ್‌ ವಿದ್ಯಾರ್ಥಿ ಸಾವು Read More »

error: Content is protected !!
Scroll to Top