ಕೇಂದ್ರ ಸರಕಾರ ಜಾರಿಗೆ ತಂದಿರುವ ವಕ್ಫ್ ಕಾಯ್ದೆ ಕುರಿತು ಪುತ್ತೂರು ಶಾಸಕರ ಹೇಳಿಕೆ ಖಂಡನೀಯ : ಅರುಣ್ ಜಿ. ಶೇಟ್ | ಮುಸಲ್ಮಾನರ ತುಷ್ಠೀಕರಣದ ಮೂಲಕ ಓಟ್ ಬ್ಯಾಂಕ್ ನ್ನಾಗಿ ಮಾಡಿ ಮುಗ್ದ ಬಡ ಮುಸ್ಲಿಮರ ತಲೆ ಕೆಡಿಸಲು ಕಾಂಗ್ರೆಸ್ ಹೊರಟಿರುವುದು ಖೇದಕರ
ಪುತ್ತೂರು: ವಕ್ಫ್ ತಿದ್ದುಪಡಿ ಕಾಯ್ದೆ ಸಾಂವಿಧಾನಿಕವಾಗಿ ಅಂಗೀಕಾರಗೊಂಡು, ರಾಷ್ಟ್ರಪತಿಯವರಿಂದಲೂ ಅಂಕಿತಗೊಂಡು ಪೂರ್ಣ ಪ್ರಮಾಣದ ಕಾಯ್ದೆಯಾಗಿ ರೂಪುಗೊಂಡಿದ್ದು, ಈ ಕಾಯ್ದೆ ಜಾರಿಯಾಗುತ್ತಿದ್ದಂತೆ ಸಂವಿಧಾನದ ಬಗ್ಗೆ ಮಾತನಾಡುವ ಕಾಂಗ್ರೆಸ್ ತನ್ನ ಹಿಂಬಾಗಿಲಿನ ಕುಮ್ಮಕ್ಕಿನಿಂದ ಅಲ್ಲಲ್ಲಿ ಪ್ರತಿಭಟನೆ ನಡೆಸಿ ನ್ಯಾಯಾಲಯದ ಪ್ರಕ್ರಿಯೆ ಮೇಲೆ ಪ್ರಭಾವ ಬೀರುವ ಹುನ್ನಾರ ಖಂಡನೀಯ ಎಂದು ದ.ಕ.ಜಿಲ್ಲಾ ಬಿಜೆಪಿ ವಕ್ತಾರ ಅರುಣ್ ಜಿ. ಶೇಟ್ ತಿಳಿಸಿದ್ದಾರೆ. ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಪುತ್ತೂರಿನ ಶಾಸಕರು ತರಾತುರಿಯಲ್ಲಿ ಮುಸಲ್ಮಾನರನ್ನು ತುಷ್ಠೀಕರಣ ಮಾಡುವ ಭರದಲ್ಲಿ ಬಡ ಹಾಗೂ ಹಿಂದುಳಿದ ಮುಸಲ್ಮಾನರಿಗಾಗಿ […]










