ಸುದ್ದಿ

ಮಾದಕ ವಸ್ತು ಮಾರಾಟ : ಏಳು ಆರೋಪಿಗಳ ಬಂಧನ

ಇಂಜಿನಿಯರಿಂಗ್‌ ವಿದ್ಯಾರ್ಥಿಯಿಂದಲೂ ಡ್ರಗ್ಸ್‌ ದಂಧೆ ಮಂಗಳೂರು : ಡ್ರಗ್ಸ್‌ ವಿರುದ್ಧ ಕಾರ್ಯಾಚರಣೆ ತೀವ್ರಗೊಳಿಸಿರುವ ಮಂಗಳೂರು ಪೊಲೀಸರು ಪ್ರತ್ಯೇಕ ಪ್ರಕರಣಗಳಲ್ಲಿ ಕಳೆದ ಶುಕ್ರವಾರದಿಂದೀಚೆಗೆ 7 ಮಂದಿಯನ್ನು ಬಂಧಿಸಿ ಕೇಸ್‌ ದಾಖಲಿಸಿಕೊಂಡಿದ್ದಾರೆ. ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಕಾಲೇಜು ವಿದ್ಯಾರ್ಥಿಗಳು, ಯುವಕರು ಮತ್ತು ಸಾರ್ವಜನಿಕರನ್ನು ಗುರಿಯಾಗಿಸಿಕೊಂಡು ಮಾದಕವಸ್ತು ಮಾರಾಟ ಮಾಡುತ್ತಿದ್ದವರ ಮೇಲೆ ಕಾರ್ಯಾಚರಣೆ ನಡೆಸಿರುವ ಪೊಲೀಸರು 5 ಕೆಜಿಯಷ್ಟು ಗಾಂಜಾ ವಶಪಡಿಸಿಕೊಂಡಿದ್ದಾರೆ. ಶೈಕ್ಷಣಿಕ ಮತ್ತು ವಸತಿ ಪ್ರದೇಶಗಳಲ್ಲಿ ಮತ್ತು ಸುತ್ತಮುತ್ತ ಗಾಂಜಾ ಮಾರಾಟ ಮಾಡುತ್ತಿರುವ ವ್ಯಕ್ತಿಗಳ ಬಗ್ಗೆ ನಿರ್ದಿಷ್ಟ […]

ಮಾದಕ ವಸ್ತು ಮಾರಾಟ : ಏಳು ಆರೋಪಿಗಳ ಬಂಧನ Read More »

ಧರ್ಮಸ್ಥಳ ಪ್ರಕರಣ : 11 ದಿನ 16 ಗುಂಡಿ ಅಗೆದರೂ ಸಿಕ್ಕಿದ್ದು ಬರೀ ಕಲ್ಲುಮಣ್ಣು!

20 ಅಡಿ ಅಗಲ, 10 ಅಡಿ ಆಳಕ್ಕೆ ಗುಂಡಿ ತೋಡಿದರೂ ಸಿಕ್ಕಿಲ್ಲ ಯಾವುದೇ ಕುರುಹು ಧರ್ಮಸ್ಥಳ: ಧರ್ಮಸ್ಥಳ ಶವಗಳನ್ನು ಹೂತಿಟ್ಟ ಪ್ರಕರಣದಲ್ಲಿ 11 ದಿನಗಳಿಂದ ದೂರುದಾರ ಮುಸುಕುಧಾರಿ ವ್ಯಕ್ತಿ ತೋರಿಸಿದ ಎಲ್ಲ ಸ್ಥಳಗಳನ್ನು ಅಗೆದರೂ ಯಾವುದೇ ಸಾಕ್ಷ್ಯಗಳು ಲಭ್ಯವಾಗಿಲ್ಲ. ಆದರೂ ದೂರುದಾರ ತೋರಿಸುವ ಎಲ್ಲ ಸ್ಥಳಗಳನ್ನು ಪರೀಶೀಲಿಸಲು ಅಧಿಕಾರಿಗಳು ಮುಂದಾಗಿದ್ದಾರೆ. ಭಾನುವಾರ ಕಾರ್ಯಾಚರಣೆ ಸ್ಥಗಿತ ಮಾಡಲಿರುವ ಎಸ್‌ಐಟಿ ಸೋಮವಾರ ಕಾರ್ಯಾಚರಣೆ ಮುಂದುವರಿಸಲಿದೆ. 11 ದಿನದಲ್ಲಿ 16ಕ್ಕೂ ಹೆಚ್ಚು ಜಾಗ ತೋರಿಸಿದ ಸ್ಥಳಗಳಲ್ಲಿ ಸಿಕ್ಕಿದ್ದು ಕಲ್ಲು, ಮಣ್ಣು, ಬಂಡೆಮಾತ್ರ.

ಧರ್ಮಸ್ಥಳ ಪ್ರಕರಣ : 11 ದಿನ 16 ಗುಂಡಿ ಅಗೆದರೂ ಸಿಕ್ಕಿದ್ದು ಬರೀ ಕಲ್ಲುಮಣ್ಣು! Read More »

ಮೆಟ್ರೊ ಯೆಲ್ಲೊ ಲೈನ್‌ ಉದ್ಘಾಟಿಸಲು ಇಂದು ಬೆಂಗಳೂರಿಗೆ ಮೋದಿ ಆಗಮನ

ಕನ್ನಡದಲ್ಲೇ ಟ್ವೀಟ್‌ ಮಾಡಿ ಬೆಂಗಳೂರಿಗೆ ಬರುತ್ತಿರುವುದಾಗಿ ಕನ್ನಡಿಗರಿಗೆ ತಿಳಿಸಿದ ಪ್ರಧಾನಿ ಬೆಂಗಳೂರು: ಮಟ್ರೊ ಯೆಲ್ಲೊ ಲೈನ್‌ಗೆ ಚಾಲನೆ ನೀಡಲು ಪ್ರಧಾನಿ ನರೇಂದ್ರ ಮೋದಿ ಇಂದು (ಆಗಸ್ಟ್ 10) ಬೆಂಗಳೂರಿಗೆ ಆಗಮಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ರಾಗಿಗುಡ್ಡ ಮೆಟ್ರೊ ನಿಲ್ದಾಣದಲ್ಲಿ ಹಳದಿ ಮಾರ್ಗಕ್ಕೆ ಚಾಲನೆ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಹಳದಿ ಮಾರ್ಗದ ರಾಗಿಗುಡ್ಡ ಮೆಟ್ರೊ ನಿಲ್ದಾಣವನ್ನು ವಿದ್ಯುತ್​ ದೀಪ, ಹೂಗಳಿಂದ ಭರ್ಜರಿಯಾಗಿ ಅಲಂಕರಿಸಲಾಗಿದೆ. ಪ್ರಧಾನಿ ಮೋದಿಯವರು ತಾವು ರಾಜ್ಯಕ್ಕೆ ಬರುವ ವಿಚಾರವನ್ನು ಕನ್ನಡದಲ್ಲೇ ಟ್ವೀಟ್​ ಮಾಡಿ ತಿಳಿಸಿದ್ದಾರೆ. ಆಗಸ್ಟ್

ಮೆಟ್ರೊ ಯೆಲ್ಲೊ ಲೈನ್‌ ಉದ್ಘಾಟಿಸಲು ಇಂದು ಬೆಂಗಳೂರಿಗೆ ಮೋದಿ ಆಗಮನ Read More »

ನಟ ಧ್ರುವ ಸರ್ಜಾ ವಿರುದ್ಧ 3.15 ಕೋ. ರೂ. ವಂಚನೆ ಆರೋಪ

ನಿರ್ಮಾಪಕರಿಂದ ಮುಂಬೈಯ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲು ಬೆಂಗಳೂರು: ಕನ್ನಡ ನಟ ಧ್ರುವ ಸರ್ಜಾ ವಿರುದ್ಧ ಜಗ್ಗು ದಾದ ಸಿನಿಮಾದ ನಿರ್ದೇಶಕ ಹಾಗೂ ನಿರ್ಮಾಪಕ ರಾಘವೇಂದ್ರ ಹೆಗ್ಡೆ 9.58 ಕೋ. ರೂ. ವಂಚಿಸಿದ ಕುರಿತು ದೂರು ನೀಡಿದ್ದಾರೆ. ಮುಂಬೈಯ ಅಂಬೋಲಿ ಪೊಲೀಸ್​ ಠಾಣೆಯಲ್ಲಿ ರಾಘವೇಂದ್ರ ಹೆಗ್ಡೆ ದೂರು ದಾಖಲಿಸಿದ್ದಾರೆ. 3.15 ಕೋಟಿ ರೂಪಾಯಿ ವಂಚನೆ ಕೇಸ್ ಇದಾಗಿದ್ದು, ಬಡ್ಡಿ ಸೇರಿ ಆ ಹಣ ಈಗ 9 ಕೋಟಿ ರೂಪಾಯಿ ಆಗಿದೆ ಎಂದು ನಿರ್ಮಾಪಕ ಆರೋಪಿಸಿದ್ದಾರೆ. 2016ರಲ್ಲಿ ನನ್ನ

ನಟ ಧ್ರುವ ಸರ್ಜಾ ವಿರುದ್ಧ 3.15 ಕೋ. ರೂ. ವಂಚನೆ ಆರೋಪ Read More »

ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್’ನಲ್ಲಿ ‘ಡಿಕ್ಷನ್’ ಲೋಕಾರ್ಪಣೆ

ಪುತ್ತೂರು: ಶಾಲಾ ಮಕ್ಕಳ ಪ್ರತಿಭಾ ದರ್ಪಣವಾದ ಭಿತ್ತಿಪತ್ರ ‘ಡಿಕ್ಷನ್’ಇದನ್ನು ಪುತ್ತೂರಿನ ಹಿರಿಯ ಪತ್ರಕರ್ತ ಲೋಕೇಶ್ ಬನ್ನೂರು ಅವರು ಲೋಕಾರ್ಪಣೆಗೊಳಿಸಿದರು. ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್’ನಲ್ಲಿ ನಡೆದ ಸುಂದರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮಕ್ಕಳು ಗೋಡೆಯಲ್ಲಿ ಗೀಚಿದ್ದಕ್ಕೆ ಅವರಿಗೆ ಗದರಿಸಬಾರದು, ಬದಲಾಗಿ ಗೀಚುವಿಕೆಯನ್ನು ಪುಸ್ತಕಕ್ಕೆ ವರ್ಗಾಯಿಸಬೇಕು ಎಂದರು. ಇದು ಪೋಷಕರ ಜವಾಬ್ದಾರಿಯಾಗಬೇಕು ಎಂದು ಕಿವಿಮಾತು ಹೇಳಿದರು. ‘ಡಿಕ್ಷನ್’ ಎಂಬ ಹೆಸರು ಸೂಚಿಸಿದ ಶಾಲಾಡಳಿತ ಮಂಡಳಿಯ ನಿರ್ದೇಶಕ ಸೀತಾರಾಮ ಕೇವಳ ಅವರು ಮಾತನಾಡಿ ಸರಳ ಬರವಣಿಗೆಯ ಕುರಿತು ಮಕ್ಕಳಿಗೆ ಸಲಹೆ

ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್’ನಲ್ಲಿ ‘ಡಿಕ್ಷನ್’ ಲೋಕಾರ್ಪಣೆ Read More »

ಆಪರೇಷನ್‌ ಅಖಾಲ್‌ : ಇಬ್ಬರು ಸೈನಿಕರು ಹುತಾತ್ಮ

ಒಂಬತ್ತನೆ ದಿನಕ್ಕೆ ಪ್ರವೇಶಿಸಿದ ಉಗ್ರ ನಿಗ್ರಹ ಕಾರ್ಯಾಚರಣೆ ಶ್ರೀನಗರ : ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್‌ನಲ್ಲಿ ನಿನ್ನೆ ರಾತ್ರಿ ಭಯೋತ್ಪಾದಕರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಸೈನಿಕರು ಹುತಾತ್ಮರಾಗಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ. ಮೂವರು ಸೈನಿಕರು ಗಾಯಗೊಂಡಿದ್ದು, ಇದರೊಂದಿಗೆ ಕಳೆದ ಒಂಬತ್ತು ದಿನಗಳಿಂದ ನಡೆಯುತ್ತಿರುವ ಆಪರೇಷನ್‌ನಲ್ಲಿ ಗಾಯಗೊಂಡ ಸೈನಿಕರ ಸಂಖ್ಯೆ ಹತ್ತಕ್ಕೇರಿದೆ. ಶುಕ್ರವಾರ ನಡೆದ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ಇಬ್ಬರು ಸೈನಿಕರು ಗಾಯಗೊಂಡಿದ್ದಾರೆ. ಮಡಿದ ವೀರ ಯೋಧರನ್ನು ಕೆ.ಪ್ರೀತ್‌ಪಾಲ್ ಸಿಂಗ್ ಮತ್ತು ಹರ್ಮಿಂದರ್‌ ಸಿಂಗ್ ಎಂದು

ಆಪರೇಷನ್‌ ಅಖಾಲ್‌ : ಇಬ್ಬರು ಸೈನಿಕರು ಹುತಾತ್ಮ Read More »

ಪುತ್ತೂರು ಲಕ್ಷ್ಮೀದೇವಿ ಬೆಟ್ಟದಲ್ಲಿರುವ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಶ್ರೀ ವರಮಹಾಲಕ್ಷ್ಮೀ ಪೂಜೆ

ಪುತ್ತೂರು: ಶ್ರೀ ಮಹಾಲಕ್ಷ್ಮೀ ದೇವಸ್ಥಾನ, ಶ್ರೀ ಲಕ್ಷ್ಮೀ ದೇವಿ ಬೆಟ್ಟದಲ್ಲಿ ವರಮಹಾಲಕ್ಷ್ಮೀ ಪೂಜೆಯ ಪ್ರಯುಕ್ತ ಶುಕ್ರವಾರ ಶ್ರೀ ಮಹಾಲಕ್ಷ್ಮೀಗೆ ವಿಶೇಷ ಅಲಂಕಾರ, ಮಹಾಪೂಜೆ ಜರಗಿತು.ಬಳಿಕ ಶ್ರೀಕೃಷ್ಣ ಉಪಾಧ್ಯಾಯ ಅವರ ಪುರೋಹಿತ್ಯದಲ್ಲಿ ವರಮಹಾಲಕ್ಷ್ಮೀ ಪೂಜೆ ನೆರವೇರಿತು. ಈ ಸಂದರ್ಭದಲ್ಲಿ ಕ್ಷೇತ್ರದ ಧರ್ಮದರ್ಶಿ ಎನ್. ಐತ್ತಪ್ಪ ಸಪಲ್ಯರವರು ಮುತ್ತೈದೆಯರಿಗೆ ಬಳೆ, ರವಿಕೆ ಕಣ, ಹೂವು, ದಾರ ನೀಡುವುದರ ಮೂಲಕ ವಾಯನ ದಾನ ಮಾಡಿದರು.ಭಕ್ತಾದಿಗಳಿಗೆ ಸುಖ, ಶಾಂತಿ, ನೆಮ್ಮದಿ, ಸಕಲ ಐಶ್ವರ್ಯವನ್ನು ನೀಡಲಿ ಎಂದು ಹಾರೈಸಿದರು. ನಂತರ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನೆರವೇರಿತು.

ಪುತ್ತೂರು ಲಕ್ಷ್ಮೀದೇವಿ ಬೆಟ್ಟದಲ್ಲಿರುವ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಶ್ರೀ ವರಮಹಾಲಕ್ಷ್ಮೀ ಪೂಜೆ Read More »

10*15 ಅಡಿ ದೊಡ್ಡ ಮನೆಯಲ್ಲಿ 80 ಜನ ವಾಸ ಮಾಡುವುದು ಸಾಧ್ಯವೆ? : ಕಾಂಗ್ರೆಸ್‌ಗೆ ಮನೆ ಮಾಲೀಕನ ಪ್ರಶ್ನೆ

ಮೂವರು ವಾಸವಿರುವ ಮನೆಯಲ್ಲಿ 80 ಜನ ಮತದಾರರು ಇದ್ದಾರೆ ಎಂದು ಹೇಳಿದ್ದ ರಾಹುಲ್‌ ಗಾಂಧಿಗೆ ತಿರುಗೇಟು ಬೆಂಗಳೂರು: ಬೆಂಗಳೂರಿನಲ್ಲಿ ಲೋಕಸಭೆ ಚುನಾವಣೆ ವೇಳೆ ಮತ ಕಳ್ಳತನವಾಗಿದೆ ಎಂದು ಆರೋಪಿಸಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮೇಲೆ ಬಿಜೆಪಿ ಮುಗಿಬಿದ್ದಿರುವಂತೆಯೇ ಮನೆ ಮಾಲೀಕರೊಬ್ಬರು 10*15 ಅಡಿ ದೊಡ್ಡದಿರುವ ಮನೆಯಲ್ಲಿ 80 ಮಂದಿ ವಾಸ ಮಾಡಲು ಸಾಧ್ಯವೇ ಎಂಬ ಪ್ರಾಕ್ಟಿಕಲ್‌ ಪ್ರಶ್ನೆಯನ್ನು ಕೇಳಿದ್ದಾರೆ. ಬೆಳ್ಳಂದೂರಿನ ಮನೆ ನಂ.35ರ ವಿಳಾಸದಲ್ಲಿ 80 ಮಂದಿಗೆ ವೋಟರ್‌ ಐಡಿ ಕಾರ್ಡ್‌ ನೀಡಲಾಗಿದೆ ಎಂದು ರಾಹುಲ್‌

10*15 ಅಡಿ ದೊಡ್ಡ ಮನೆಯಲ್ಲಿ 80 ಜನ ವಾಸ ಮಾಡುವುದು ಸಾಧ್ಯವೆ? : ಕಾಂಗ್ರೆಸ್‌ಗೆ ಮನೆ ಮಾಲೀಕನ ಪ್ರಶ್ನೆ Read More »

ಪುತ್ತಿಲ ಪರಿವಾರ ಟ್ರಸ್ಟ್ ನಿಂದ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆ

ಪುತ್ತೂರು: ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ವತಿಯಿಂದ ಸಾಮೂಹಿಕ ಶ್ರೀ ವರಮಹಾ ಲಕ್ಷ್ಮಿ ಪೂಜೆ ಶುಕ್ರವಾರ ಮುಕ್ರಂಪಾಡಿ ಸುಭದ್ರ ಕಲ್ಯಾಣ ಮಂಟಪದಲ್ಲಿ ಜರಗಿತು. ಪೂಜೆಯ ಅಂಗವಾಗಿ ಬೆಳಿಗ್ಗೆ 7.30ಕ್ಕೆ ಭಜನಾ ಸಂಕೀರ್ತನೆ ಕಾರ್ಯಕ್ರಮ ನಡೆದು, ಮಧ್ಯಾಹ್ನ ಮಹಾಪೂಜೆ ನಡೆಯಿತು. ಬಳಿಕ ಅನ್ನಸಂತರ್ಪಣೆ ಜರಗಿತು. ಈ ಸಂದರ್ಭದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಜಯಶ್ರೀ ಆಚಾರ್ಯ ಕೆಮ್ಮಿಂಜೆ ದೀಪ ಬೆಳಗಿ ಉದ್ಘಾಟಿಸಿದರು. ಪುತ್ತಿಲ ಪರಿವಾರ ಟ್ರಸ್ಟ್ ಸಂಸ್ಥಾಪಕ ಅರುಣ್ ಕುಮಾರ್ ಪುತ್ತಿಲ, ಅಧ್ಯಕ್ಷ ಮಹೇಂದ್ರ ವರ್ಮ ಬಜತ್ತೂರು, ಕೋಶಾಧಿಕಾರಿ ಗಣೇಶ್

ಪುತ್ತಿಲ ಪರಿವಾರ ಟ್ರಸ್ಟ್ ನಿಂದ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆ Read More »

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಗೆ ಫಿಲೋ ಪ್ರತಿಭಾ ಪ್ರಶಸ್ತಿ

ಪುತ್ತೂರು: ಸೈಂಟ್ ಫಿಲೋಮಿನಾ ಪದವಿಪೂರ್ವ ಕಾಲೇಜು ನಡೆಸಿದ ’ಫಿಲೋ ಪ್ರತಿಭಾ’ಸ್ಪರ್ಧೆಗಳಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ಪ್ರಶಸ್ತಿ ಗಳಿಸಿದೆ. ಶಾಲಾ ವಿದ್ಯಾರ್ಥಿಗಳಾದ ಕುಶಿತಾ ಮತ್ತು ಶ್ರೇಯಾ ರಂಗೋಲಿಯಲ್ಲಿ ಪ್ರಥಮ, ಸಾಯೀಶ್ವರಿ ಮತ್ತು ದೀಕ್ಷಾ ಎಂ. ಮುಖವರ್ಣಿಕೆಯಲ್ಲಿ ದ್ವಿತೀಯ ಹಾಗೂ ಅದ್ವಿಜ್ ಜಿ. ಚಿತ್ರಕಲೆಯಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ. ಪ್ರಶಸ್ತಿ ಪಡೆದ ವಿದ್ಯಾರ್ಥಿಗಳನ್ನು ಶಾಲಾ ಆಡಳಿತ ಮಂಡಳಿ, ಮುಖ್ಯ ಶಿಕ್ಷಕರು, ಶಿಕ್ಷಕ ವೃಂದ ಹಾಗೂ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಗೆ ಫಿಲೋ ಪ್ರತಿಭಾ ಪ್ರಶಸ್ತಿ Read More »

error: Content is protected !!
Scroll to Top