ಸುದ್ದಿ

ಇಸ್ರೇಲ್‌ ಕ್ಷಿಪಣಿ ದಾಳಿಯಲ್ಲಿ ಅಲ್‌ ಜಜೀರಾದ ಐವರು ಪತ್ರಕರ್ತರು ಸಾವು

ಪತ್ರಕರ್ತರ ಸೋಗಿನಲ್ಲಿದ್ದ ಹಮಾಸ್‌ ಉಗ್ರರು ಎಂದು ದಾಳೀಗೆ ವಿವರಣೆ ನೀಡಿದ ಇಸ್ರೇಲ್‌ ಟೆಲ್‌ ಅವೀವ್‌ : ಗಾಜಾ ನಗರದ ಮೇಲೆ ಇಸ್ರೇಲ್ ಭಾನುವಾರ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಅಲ್‌ ಜಜೀರಾ ಸುದ್ದಿ ವಾಹಿನಿಯ ಒಬ್ಬ ಪ್ರಮುಖ ವರದಿಗಾರ ಸೇರಿದಂತೆ ಇಬ್ಬರು ವರದಿಗಾರರು ಮತ್ತು ಮೂವರು ಕ್ಯಾಮೆರಾಮೆನ್‌ಗಳು ಸಾವನ್ನಪ್ಪಿದ್ದಾರೆ. ಗಾಜಾ ನಗರದಲ್ಲಿ ಪತ್ರಕರ್ತರಿಗೆ ವಸತಿ ಕಲ್ಪಿಸಲಾಗಿದ್ದ ಟೆಂಟ್ ಮೇಲೆ ಇಸ್ರೇಲ್ ದಾಳಿ ನಡೆಸಿದ್ದು, ಪರಿಣಾಮ ಅಲ್ ಜಜೀರಾದ ಪತ್ರಕರ್ತ ಅನಾಸ್ ಅಲ್-ಶರೀಫ್ ಜೊತೆಗೆ ನಾಲ್ವರು ಸಹೋದ್ಯೋಗಿಗಳು ಸಾವನ್ನಪ್ಪಿದ್ದಾರೆಂದು ವರದಿಗಳು […]

ಇಸ್ರೇಲ್‌ ಕ್ಷಿಪಣಿ ದಾಳಿಯಲ್ಲಿ ಅಲ್‌ ಜಜೀರಾದ ಐವರು ಪತ್ರಕರ್ತರು ಸಾವು Read More »

ಮಂಗಳೂರು : ನಿವೃತ್ತ ಮಹಿಳೆಯನ್ನು ಡಿಜಿಟಲ್‌ ಅರೆಸ್ಟ್‌ ಮಾಡಿ 3.9 ಕೋ. ರೂ. ಲಪಟಾಯಿಸಿದ ವಂಚಕರು

ಚೀನಕ್ಕೆ ಕಳುಹಿಸಿದ ಪಾರ್ಸೆಲ್‌ನಲ್ಲಿ ಡ್ರಗ್ಸ್‌ ಇದೆ ಎಂದು ಹೆದರಿಸಿ ಮೋಸ ಮಂಗಳೂರು: ನಗರದ ವೃದ್ಧ ಮಹಿಳೆಯೊಬ್ಬರನ್ನು ಡಿಜಿಟಲ್‌ ಅರೆಸ್ಟ್‌ ಮಾಡಿ ಬರೋಬ್ಬರಿ 3.9 ಕೋ. ರೂ. ಸುಲಿಗೆ ಮಾಡಿರುವ ಕೃತ್ಯವೊಂದು ಬೆಳಕಿಗೆ ಬಂದಿದೆ. ಸೇವಾ ನಿವೃತ್ತಿ ಹೊಂದಿದ್ದ ಲೆನಿ ಪ್ರಭು ಎಂಬ ಮಹಿಳೆ ವಂಚನೆಗೊಳಗಾಗಿದ್ದು, ಈ ಕುರಿತು ಅವರು ಸೆನ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಲೆನಿ ಪ್ರಭು ಅವರಿಗೆ ಕಳೆದ ಜನವರಿ 15ರಂದು ಅಪರಿಚಿತ ಸಂಖ್ಯೆಯೊಂದರಿಂದ ಮಿಸ್‌ ಕಾಲ್‌ ಬಂದಿದ್ದು, ಸ್ವಲ್ಪ ಹೊತ್ತಾದ ಬಳಿಕ ಈ

ಮಂಗಳೂರು : ನಿವೃತ್ತ ಮಹಿಳೆಯನ್ನು ಡಿಜಿಟಲ್‌ ಅರೆಸ್ಟ್‌ ಮಾಡಿ 3.9 ಕೋ. ರೂ. ಲಪಟಾಯಿಸಿದ ವಂಚಕರು Read More »

ತಾಂತ್ರಿಕ ದೋಷದಿಂದ ವಿಮಾನ ತುರ್ತು ಲ್ಯಾಂಡಿಂಗ್‌ : ಕೂದಲೆಳೆ ಅಂತರದಲ್ಲಿ ಬಚಾವಾದ ಸಂಸದರು, ಪ್ರಯಾಣಿಕರು

ಕಾಂಗ್ರೆಸ್‌ ಎಂಪಿ ಕೆ.ಸಿ.ವೇಣುಗೋಪಾಲ್‌ ಸಹಿತ ಹಲವು ಸಂಸದರು, ನೂರಾರು ಪ್ರಯಾಣಿಕರಿದ್ದ ಏರ್‌ ಇಂಡಿಯಾ ವಿಮಾನ ಚೆನ್ನೈ : ಕೇರಳದ ಕಾಂಗ್ರೆಸ್‌ ಸಂಸದ ಮತ್ತು ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಅಧ್ಯಕ್ಷ ಕೆ.ಸಿ.ವೇಣುಗೋಪಾಲ್ ಸೇರಿದಂತೆ ಹಲವಾರು ಸಂಸದರು ಮತ್ತು ನೂರಾರು ಪ್ರಯಾಣಿಕರಿದ್ದ ಏರ್ ಇಂಡಿಯಾ ವಿಮಾನ ತಾಂತ್ರಿಕ ದೋಷದ ಕಾರಣ ಚೆನ್ನೈಯಲ್ಲಿ ತುರ್ತು ಲ್ಯಾಂಡಿಂಗ್ ಮಾಡಿದೆ. ಭಾನುವಾರ ಸಂಜೆ ತಿರುವನಂತಪುರಂನಿಂದ ದೆಹಲಿಗೆ ಹೊರಟಿದ್ದ ವಿಮಾನ AI2455ರಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಅಲ್ಲದೆ, ಹವಾಮಾನ ವೈಪರೀತ್ಯವೂ ತುರ್ತು ಲ್ಯಾಂಡಿಂಗ್​ಗೆ ಕಾರಣವಾಯಿತು

ತಾಂತ್ರಿಕ ದೋಷದಿಂದ ವಿಮಾನ ತುರ್ತು ಲ್ಯಾಂಡಿಂಗ್‌ : ಕೂದಲೆಳೆ ಅಂತರದಲ್ಲಿ ಬಚಾವಾದ ಸಂಸದರು, ಪ್ರಯಾಣಿಕರು Read More »

ಧರ್ಮಸ್ಥಳ : ಮೂವರು ಯೂಟ್ಯೂಬರ್‌ಗಳ ವಿರುದ್ಧ ಹಲ್ಲೆ ಕೇಸ್‌ ದಾಖಲು

ಬೆಳ್ತಂಗಡಿ: ಬೈಕ್ ಸವಾರನನ್ನು ತಡೆದು ನಿಲ್ಲಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಮೂವರು ಯೂಟ್ಯೂಬರ್‌ಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆ.6ರಂದು ಘಟನೆ ನಡೆದಿದ್ದು, ಈ ಬಗ್ಗೆ ಹರೀಶ್ ನಾಯ್ಕ ಎಂಬವರು ಧರ್ಮಸ್ಥಳ ಪೊಲೀಸರಿಗೆ ದೂರು ನೀಡಿದ್ದಾರೆ. ತಾನು ಬೈಕ್‌ನಲ್ಲಿ ಹೋಗುತ್ತಿದ್ದ‌ ವೇಳೆ ಪಾಂಗಳ ಕ್ರಾಸ್ ಬಳಿ ತಡೆದು ನಿಲ್ಲಿಸಿದ ಯುಟ್ಯೂಬರ್‌ಗಳು ತಾವು ಕುಡ್ಲ ರಾಂಪೇಜ್‌ನವರು ಎಂದು ಹೇಳಿದ್ದು, ಈ ರಸ್ತೆಯ ಪಕ್ಕದಲ್ಲಿ ಹೆಣಗಳನ್ನು ಹೂತು ಹಾಕಿದ್ದೀರಾ? ಇದರ ಬಗ್ಗೆ ನಿಮಗೆ ಗೊತ್ತಿದೆಯಾ

ಧರ್ಮಸ್ಥಳ : ಮೂವರು ಯೂಟ್ಯೂಬರ್‌ಗಳ ವಿರುದ್ಧ ಹಲ್ಲೆ ಕೇಸ್‌ ದಾಖಲು Read More »

ಪುತ್ತೂರು : 10 ಕೆಜಿ ಭಾರದ ಘಂಟೆ ಕದ್ದವ ಸೆರೆ

ಪುತ್ತೂರು : ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ತಾಮ್ರದ ಗಂಟೆ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಪುತ್ತೂರು, ಕಬಕ ನಿವಾಸಿ ಸಂಶುದ್ದೀನ್ ಯಾನೆ ಸಂಶು (50) ಬಂಧಿತ ಆರೋಪಿ. 10 ಕೆಜಿ ತೂಕದ ಸುಮಾರು 8,000 ರೂ. ಬೆಲೆ ಬಾಳುವ ತಾಮ್ರದ ಗಂಟೆ ಕಳವು ಘಟನೆಗೆ ಸಂಬಂಧಿಸಿದಂತೆ ಜುಲೈ 26ರಂದು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಪುತ್ತೂರು ನಗರ ಠಾಣಾ ಪೊಲೀಸರು ಆರೋಪಿಯನ್ನು ದಸ್ತಗಿರಿ ಮಾಡಿದ್ದಾರೆ.

ಪುತ್ತೂರು : 10 ಕೆಜಿ ಭಾರದ ಘಂಟೆ ಕದ್ದವ ಸೆರೆ Read More »

ಮಂಗಳೂರು : ಈಜು ಕೋಚ್‌ ಈಜುಕೊಳದಲ್ಲಿ ಮುಳುಗಿ ಸಾವು

ಈಜುವಾಗಲೇ ಹೃದಯಾಘಾತವಾಗಿ ಉಸಿರುಕಟ್ಟಿ ಮೃತ್ಯು ಮಂಗಳೂರು: ಈಜು ಕೋಚ್‌ ಈಜುಕೊಳದಲ್ಲೇ ಮುಳುಗಿ ಸಾವನ್ನಪ್ಪಿದ ದುರಂತ ಘಟನೆ ಮಂಗಳೂರಿನಲ್ಲಿ ಸಂಭವಿಸಿದೆ. ಈಜುಕೊಳದ ಲೈಫ್‌ಗಾರ್ಡ್ ಕೂಡ ಆಗಿದ್ದ ಅವರು ಹೃದಯಾಘಾತದಿಂದಾಗಿ ಮಂಗಳೂರಿನ ಲೇಡಿಹಿಲ್‌ನಲ್ಲಿರುವ ಮಹಾನಗರ ಪಾಲಿಕೆಯ ಈಜುಕೊಳದಲ್ಲಿ ಭಾನುವಾರ ಈಜುವಾಗಲೇ ಮುಳುಗಿ ಸಾವನ್ನಪ್ಪಿದ್ದಾರೆ. ಮೃತರನ್ನು ಬಂಟ್ವಾಳ ತಾಳುಕಿನ ಕಲ್ಲಡ್ಕದ ಸಮೀಪದ ಸೂರಿಕುಮೇರಿನ ಕೆ. ಚಂದ್ರಶೇಖರ್ ರೈ ಸೂರಿಕುಮೇರು (52) ಎಂದು ಗುರುತಿಸಲಾಗಿದೆ. ನಿರ್ವಹಣೆ ಕೆಲಸಗಳು ನಡೆಯುತ್ತಿದ್ದರಿಂದ ಭಾನುವಾರ ಈಜುಕೊಳಕ್ಕೆ ರಜೆ ಇತ್ತು. ಈ ಸಮಯದಲ್ಲಿ ಈಜಲು ನೀರಿಗಿಳಿದ ಅವರಿಗೆ ನೀರಿನೊಳಗೆ

ಮಂಗಳೂರು : ಈಜು ಕೋಚ್‌ ಈಜುಕೊಳದಲ್ಲಿ ಮುಳುಗಿ ಸಾವು Read More »

ಇಂದಿನಿಂದ ವಿಧಾನ ಮಂಡಲದ ಮುಂಗಾರು ಅಧಿವೇಶನ

ವಿಪಕ್ಷ ಬತ್ತಳಿಕೆಯಲ್ಲಿ ಧರ್ಮಸ್ಥಳ ಪ್ರಕರಣ, ಆರ್‌ಸಿಬಿ ಕಾಲ್ತುಳಿತ ಸಹಿತ ಹಲವು ಪ್ರಬಲ ಅಸ್ತ್ರಗಳು ಬೆಂಗಳೂರು : ವಿಧಾನ ಮಂಡಲದ ಮುಂಗಾರು ಅಧಿವೇಶನ ಇಂದಿನಿಂದ ಶುರುವಾಗುತ್ತಿದೆ. ಆಗಸ್ಟ್ 22ವರೆಗೆ ಅಧಿವೇಶನ ನಡೆಯಲಿದ್ದು, ಈ ಬಾರಿಯೂ ಹತ್ತು ಹಲವು ವಿಚಾರ ಮುಂದಿಟ್ಟು ಸರ್ಕಾರದ ವಿರುದ್ಧ ಹೋರಾಟಕ್ಕೆ ವಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಸಜ್ಜಾಗಿವೆ. ಆರ್‌ಸಿಬಿ ಸಂಭ್ರಮಾಚರಣೆ ಸಂದರ್ಭ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ 11 ಮಂದಿ ಅಮಾಯಕರ ಸಾವಿನ ವಿಚಾರ ಮುಂದಿಟ್ಟು ವಿಪಕ್ಷಗಳು ಮುಗಿಬೀಳುವ ಸಾಧ್ಯತೆಯಿದೆ. ಪೊಲೀಸ್ ಅಧಿಕಾರಿಗಳ ಅಮಾನತು ಹಾಗೂ

ಇಂದಿನಿಂದ ವಿಧಾನ ಮಂಡಲದ ಮುಂಗಾರು ಅಧಿವೇಶನ Read More »

ಭಾರತ ವಿಶ್ವಗುರವಾಗಲು ಸಂಸ್ಕೃತಿಯನ್ನು ಕಾಪಾಡಬೇಕಿದೆ – ಭವ್ಯಾ ನಿಡ್ಪಳ್ಳಿ

ಪುತ್ತೂರು: ಬನ್ನೂರಿನ ಅಲುಂಬುಡದಲ್ಲಿರುವ ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್’ನಲ್ಲಿ ನಡೆದ ಆಟಿ ಆಚರಣೆ ಕೂಟ ಮತ್ತು ಬನ್ನೂರು ಒಕ್ಕಲಿಗ ಗ್ರಾಮ ಸಮಿತಿಯ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ವಿವೇಕಾನಂದ ಮಹಾವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕಿ ಭವ್ಯಾ ಪಿ.ಆರ್. ನಿಡ್ಪಳ್ಳಿ ಅವರು ಶಿಖರೋಪನ್ಯಾಸ ನೀಡಿದರು.  ಇಂದಿನ ಕಾರ್ಯಕ್ರಮವು ಭಾರತ ವಿಶ್ವಗುರುವಾಗಲು ನೆರವಾಗುವ ಕಾರ್ಯಕ್ರಮವಾಗಿದೆ ಏಕೆಂದರೆ ಭಾರತ ಗಟ್ಟಿಯಾಗಬೇಕಾದರೆ ಪ್ರತಿಯೊಂದು ಸಮುದಾಯವೂ ತಳಮಟ್ಟದಲ್ಲಿ ಗಟ್ಟಿಯಾಗಬೇಕು. ಆ ಕೆಲಸ ಇಂದು ಇಲ್ಲಿ ಆಗಿದೆ ಎಂದರು. ಆಟಿ ಆಚರಣೆಯ ನೆಪದಲ್ಲಿ

ಭಾರತ ವಿಶ್ವಗುರವಾಗಲು ಸಂಸ್ಕೃತಿಯನ್ನು ಕಾಪಾಡಬೇಕಿದೆ – ಭವ್ಯಾ ನಿಡ್ಪಳ್ಳಿ Read More »

ಧರ್ಮಸ್ಥಳ ಪ್ರಕರಣ : ಗಲಭೆಗೆ ಸಂಬಂಧಿಸಿ ಆರು ಮಂದಿ ಬಂಧನ, ಬಿಡುಗಡೆ

ಪತ್ರಕರ್ತ ವಸಂತ ಗಿಳಿಯಾರ್‌ ವಿರುದ್ಧ ಎಫ್‌ಐಆರ್‌ ಬೆಳ್ತಂಗಡಿ: ಧರ್ಮಸ್ಥಳದ ಪಾಂಗಳ ಕ್ರಾಸ್ ಬಳಿ ಎರಡು ಗುಂಪುಗಳ ನಡುವೆ ನಡೆದ ಗಲಾಟೆ ಪ್ರಕರಣ‌ಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳ ಪೊಲೀಸರು 6 ಜನರನ್ನು ಶನಿವಾರ ಬಂಧಿಸಿದ್ದಾರೆ. ನ್ಯಾಯಾಲಯ ಎಲ್ಲರನ್ನು ಷರತ್ತುಬದ್ಧ ಜಾಮೀನಿನಲ್ಲಿ ಬಿಡುಗಡೆಗೊಳಿಸಿದೆ. ಪದ್ಮಪ್ರಸಾದ್, ಸುಹಾಸ್, ಗುರುಪ್ರಸಾದ್, ಶಶಿಕುಮಾರ್, ಕಲಂದರ್, ಚೇತನ್ ಬಂಧಿತ ಆರೋಪಿಗಳು. ಯೂಟ್ಯೂಬರ್‌ಗಳ ಮೇಲೆ ಹಲ್ಲೆ ನಡೆದ ಬಳಿಕ ನಡೆದ ಗುಂಪು ಘರ್ಷಣೆ ನಡೆದಿತ್ತು. ಈ ಸಂದರ್ಭದಲ್ಲಿ ನಿಯಂತ್ರಣ ಮಾಡಲು ಪೊಲೀಸರು ಲಾಠಿಚಾರ್ಜ್ ಮಾಡಿದ್ದರು. ಪೊಲೀಸ್‌ ಅಧಿಕಾರಿಯಿಂದ ದೂರು

ಧರ್ಮಸ್ಥಳ ಪ್ರಕರಣ : ಗಲಭೆಗೆ ಸಂಬಂಧಿಸಿ ಆರು ಮಂದಿ ಬಂಧನ, ಬಿಡುಗಡೆ Read More »

ಹಬ್ಬಕ್ಕಾಗಿ ರೈಲ್ವೆಯಿಂದ ಭರ್ಜರಿ ಕೊಡುಗೆ : ಟಿಕೆಟ್‌ಗಳ ಮೇಲೆ ಶೇ.20 ಡಿಸ್ಕೌಂಟ್‌

ರಿಟರ್ನ್‌ ಟಿಕೆಟ್‌ಗಳ ಮೇಲೆ ಸಿಗಲಿದೆ ಈ ವಿಶೇಷ ರಿಯಾಯಿತಿ ನವದೆಹಲಿ: ಸಾಲು ಸಾಲು ಹಬ್ಬಗಳು ಬರುತ್ತಿದ್ದಂತೆ ಭಾರತೀಯ ರೈಲ್ವೆ ಮುಂಗಡವಾಗಿ ಬುಕ್ ಮಾಡುವ ರಿಟರ್ನ್ ಜರ್ನಿ ಟಿಕೆಟ್‌ಗಳ ಮೇಲೆ ಭಾರಿ ರಿಯಾಯಿತಿಯನ್ನು ಘೋಷಿಸಿದೆ. ರೌಂಡ್ ಟ್ರಿಪ್ ಪ್ಯಾಕೇಜ್ ಫಾರ್ ಫೆಸ್ಟಿವಲ್ ರಶ್ ಯೋಜನೆಯಡಿಯಲ್ಲಿ ಇದನ್ನು ಜಾರಿಗೆ ತರಲಾಗಿದ್ದು, ಅಕ್ಟೋಬರ್ 13ರಿಂದ 26 ರವರೆಗೆ ನಿಗದಿಪಡಿಸಲಾಗುವ ಪ್ರಯಾಣಗಳಿಗೆ ಬುಕ್ಕಿಂಗ್ ಆಗಸ್ಟ್ 14ರಿಂದ ಶೇ.20ರಷ್ಟು ಡಿಸ್ಕೌಂಟ್‌ ಸಿಗಲಿದೆ. ಹಬ್ಬದ ಋತುವಿನಲ್ಲಿ ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡಿ ಸುಗಮ ಪ್ರಯಾಣಕ್ಕೆ ಅನುಕೂಲ

ಹಬ್ಬಕ್ಕಾಗಿ ರೈಲ್ವೆಯಿಂದ ಭರ್ಜರಿ ಕೊಡುಗೆ : ಟಿಕೆಟ್‌ಗಳ ಮೇಲೆ ಶೇ.20 ಡಿಸ್ಕೌಂಟ್‌ Read More »

error: Content is protected !!
Scroll to Top