ಪಾಕಿಸ್ಥಾನಕ್ಕೆ ಟ್ರಂಪ್ ಹೊಡೆತ : ನೆರವುಗಳೆಲ್ಲ ರದ್ದು
ದಿವಾಳಿಯಾಗಿ ಕಂಗಾಲಾಗಿರುವ ಪಾಕ್‌ಗೆ ಇನ್ನಷ್ಟು ಸಂಕಟ ವಾಷಿಂಗ್ಟನ್: ಎರಡನೇ ಬಾರಿಗೆ ಅಧ್ಯಕ್ಷರಾಗಿರುವ ಡೊನಾಲ್ಡ್ ಟ್ರಂಪ್ ಪಾಕಿಸ್ಥಾನಕ್ಕೆ ಭಾರಿ ಹೊಡೆತವನ್ನೇ ನೀಡಿದ್ದಾರೆ. ಪಾಕಿಸ್ಥಾನಕ್ಕೆ ಅಮೆರಿಕ ನೀಡುತ್ತಿದ್ದ ಕೋಟಿಗಟ್ಟಲೆ ಡಾಲರ್ ನೆರವನ್ನು ಟ್ರಂಪ್ ಸ್ಥಗಿತಗೊಳಿಸಿದ್ದಾರೆ. ಮೊದಲೇ ದಿವಾಳಿಯಾಗಿ ಕಂಗಾಲಾಗಿರುವ ಪಾಕಿಸ್ಥಾನದ ಪಾಲಿಗೆ ಟ್ರಂಪ್ ನಿರ್ಧಾರ ಮರ್ಮಾಘಾತವಾಗಿ ಪರಿಣಮಿಸಿದೆ.ಟ್ರಂಪ್ ಹೊರಡಿಸಿದ ಆದೇಶದ ನಂತರ ಪಾಕಿಸ್ಥಾನಕ್ಕೆ ಅಮೆರಿಕ ನೀಡುತ್ತಿದ್ದ ವಿದೇಶಿ ನೆರವನ್ನು ಮರುಮೌಲ್ಯಮಾಪನದ ಉದ್ದೇಶದಿಂದ ಅಮಾನತುಗೊಳಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಅಮೆರಿಕದ ಈ ನಿರ್ಧಾರದಿಂದ ಸಾಂಸ್ಕೃತಿಕ ಪರಂಪರೆ ಸಂರಕ್ಷಣೆ ಪ್ರೋತ್ಸಾಹಿಸುವ ಸಾಂಸ್ಕೃತಿಕ […]
ಪಾಕಿಸ್ಥಾನಕ್ಕೆ ಟ್ರಂಪ್ ಹೊಡೆತ : ನೆರವುಗಳೆಲ್ಲ ರದ್ದು Read More »