ಸುದ್ದಿ

ಗಣೇಶೋತ್ಸವಕ್ಕೆ ಬೆಂಗಳೂರು-ಮಂಗಳೂರು ನಡುವೆ ಎರಡು ವಿಶೇಷ ರೈಲು

ಜನರಿಗೆ ಹಬ್ಬ ಆಚರಣೆಗೆ ಅನುಕೂಲವಾಗಲು ರೈಲ್ವೆಯಿಂದ ವ್ಯವಸ್ಥೆ ಮಂಗಳೂರು: ಮುಂಬರುವ ಗಣೇಶೋತ್ಸವದ ಸಂದರ್ಭದಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗಲಿದ್ದು, ಈ ಹಿನ್ನೆಲೆಯಲ್ಲಿ ಜನರ ಅನುಕೂಲಕ್ಕಾಗಿ ರೈಲ್ವೆ ಇಲಾಖೆ ಬೆಂಗಳೂರು-ಮಂಗಳೂರು ನಡುವೆ ಎರಡು ವಿಶೇಷ ರೈಲು ಸಂಚಾರ ಸೌಲಭ್ಯವನ್ನು ಕಲ್ಪಿಸಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ.ಬ್ರಿಜೇಶ್ ಚೌಟ ತಿಳಿಸಿದ್ದಾರೆ. ತಮ್ಮ ಮನವಿ ಮೇರೆಗೆ ಬೆಂಗಳೂರು ಮತ್ತು ಮಂಗಳೂರು ನಡುವೆ ವಿಶೇಷ ರೈಲುಗಳನ್ನು ಘೋಷಿಸಲಾಗಿದ್ದು, ಚೌತಿಯ ಮುನ್ನಾ ದಿನದಂದು ಊರಿಗೆ ವಾಪಸಾಗಲು ಅನುಕೂಲವಾಗುವಂತೆ ಪ್ರಯಾಣಿಕರಿಗಾಗಿ ಎರಡು ವಿಶೇಷ ರೈಲುಗಳ ವ್ಯವಸ್ಥೆ […]

ಗಣೇಶೋತ್ಸವಕ್ಕೆ ಬೆಂಗಳೂರು-ಮಂಗಳೂರು ನಡುವೆ ಎರಡು ವಿಶೇಷ ರೈಲು Read More »

ಗ್ಯಾರಂಟಿಗೆ ಪರಿಶಿಷ್ಟರ ನಿಧಿಯಿಂದ 13,433 ಕೋ.ರೂ. ಬಳಕೆ

ಉಪಯೋಜನೆ ಮೀಸಲು ಅನುದಾನ ಬಳಸಿರುವುದನ್ನು ಒಪ್ಪಿಕೊಂಡ ಸರ್ಕಾರ ಬೆಂಗಳೂರು: ಗ್ಯಾರಂಟಿ ಯೋಜನೆಗಳಿಗಾಗಿ 2025-26ನೇ ಸಾಲಿನ ಪರಿಶಿಷ್ಟ ಜಾತಿ ಉಪಯೋಜನೆ ಹಾಗೂ ಗಿರಿಜನ ಉಪಯೋಜನೆ ಅನುದಾನದಲ್ಲಿ 13,433 ಕೋಟಿ ರೂಪಾಯಿ ಬಳಕೆ ಮಾಡಲಾಗಿದೆ ಎಂದು ಸರ್ಕಾರ ಒಪ್ಪಿಕೊಂಡಿದೆ. ಈ ಕುರಿತು ಸದನದಲ್ಲಿ ಸಮಾಜ ಕಲ್ಯಾಣ ಸಚಿವ ಎಚ್‌.ಸಿ ಮಹದೇವಪ್ಪ ಬುಧವಾರ ಹೇಳಿಕೆ ನೀಡಿದ್ದಾರೆ. ಪರಿಶಿಷ್ಟರ ಕಲ್ಯಾಣಕ್ಕೆ ಉಪಯೋಜನೆಯ ಸೆಕ್ಷನ್ 7ಸಿ ಅಡಿ ಸಮುದಾಯದ ಕಾರ್ಯಕ್ರಮಗಳನ್ನು ರೂಪಿಸುವ ವೇಳೆ ಜನಸಂಖ್ಯೆಗೆ ಅನುಗುಣವಾಗಿ ಹಣ ಬಳಕೆಗೆ ಅವಕಾಶವಿದೆ. ಅದರಂತೆ ಗ್ಯಾರಂಟಿ ಯೋಜನೆಗಳಿಗೆ

ಗ್ಯಾರಂಟಿಗೆ ಪರಿಶಿಷ್ಟರ ನಿಧಿಯಿಂದ 13,433 ಕೋ.ರೂ. ಬಳಕೆ Read More »

ಮತಕಳ್ಳತನ ಸಿಐಟಿ ತನಿಖೆ ಕೋರಿ ಸುಪ್ರೀಂ ಕೋರ್ಟ್‌ಗೆ ಪಿಐಎಲ್‌ ಸಲ್ಲಿಕೆ

ಮಾಜಿ ನ್ಯಾಯಾಧೀಶರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಲು ಆಗ್ರಹ ನವದೆಹಲಿ: ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಬೆಂಗಳೂರು ಸೆಂಟ್ರಲ್‌ನ ಮಹದೇವಪುರ ವಿಧಾನಸಭಾ ಕ್ಷೇತ್ರ ಮತ್ತು ಇತರ ಕ್ಷೇತ್ರಗಳಲ್ಲಿ ಮತಗಳ್ಳತನ ನಡೆದಿದೆ ಎಂಬ ರಾಹುಲ್ ಗಾಂಧಿ ಆರೋಪ ಸಂಬಂಧ ತನಿಖೆ ನಡೆಸಲು ಮಾಜಿ ನ್ಯಾಯಾಧೀಶರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಬೇಕೆಂದು ಕೋರಿ ವಕೀಲ ಮತ್ತು ಕಾಂಗ್ರೆಸ್ ಸದಸ್ಯ ರೋಹಿತ್ ಪಾಂಡೆ ಎಂಬವರು ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಸಲ್ಲಿಸಿದ್ದಾರೆ. ಅತ್ಯಂತ ಸೂಕ್ಷ್ಮ ಮತ್ತು

ಮತಕಳ್ಳತನ ಸಿಐಟಿ ತನಿಖೆ ಕೋರಿ ಸುಪ್ರೀಂ ಕೋರ್ಟ್‌ಗೆ ಪಿಐಎಲ್‌ ಸಲ್ಲಿಕೆ Read More »

ಮೋದಿ ಫ್ರಾಡ್‌ ಎಂದ ಕಾಂಗ್ರೆಸ್‌ ಸದಸ್ಯ : ವಿಧಾನ ಪರಿಷತ್‌ನಲ್ಲಿ ತಡರಾತ್ರಿ ತನಕ ಕೋಲಾಹಲ

ಬಿಜೆಪಿಯ ಭಾರಿ ಪ್ರತಿಭಟನೆಗೆ ಮಣಿದು ಕ್ಷಮೆ ಕೇಳಿದ ನಜೀರ್‌ ಅಹ್ಮದ್‌ ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಕುರಿತು ಕಾಂಗ್ರೆಸ್‌ ವಿಧಾನ ಪರಿಷತ್‌ ಸದಸ್ಯ ನಜೀರ್‌ ಅಹ್ಮದ್‌ ಹೇಳಿದ ನಿಂದನೆಯ ಮಾತು ನಿನ್ನೆ ತಡರಾತ್ರಿ ತನಕ ವಿಧಾನ ಪರಿಷತ್‌ನಲ್ಲಿ ಹೈಡ್ರಾಮಾಕ್ಕೆ ಕಾರಣವಾಯಿತು. ಪ್ರಧಾನಿ ನರೇಂದ್ರ ಮೋದಿ ಈ ದೇಶದ ದೊಡ್ಡ ಫ್ರಾಡ್‌ ಎಂದು ನಜೀರ್‌ ಅಹ್ಮದ್‌ ನಿಂದಿಸಿದ್ದು, ಬಿಜೆಪಿಯ ಆಕ್ರೋಶಭರಿತ ಪ್ರತಿಭಟನೆಯಿಂದಾಗಿ ಕೋಲಾಹಲಕ್ಕೆ ಕಾರಣವಾಯಿತು. ಬಿಜೆಪಿ ಮತ್ತು ಕಾಂಗ್ರೆಸ್‌ ಸದಸ್ಯರ ನಡುವೆ ಭಾರಿ ವಾಗ್ವಾದ ನಡೆದು ತಡರಾತ್ರಿವರೆಗೂ ಬಿಜೆಪಿ

ಮೋದಿ ಫ್ರಾಡ್‌ ಎಂದ ಕಾಂಗ್ರೆಸ್‌ ಸದಸ್ಯ : ವಿಧಾನ ಪರಿಷತ್‌ನಲ್ಲಿ ತಡರಾತ್ರಿ ತನಕ ಕೋಲಾಹಲ Read More »

ಧರ್ಮಸ್ಥಳ ಅಪಪ್ರಚಾರಕ್ಕೆ ವಿದೇಶದಿಂದ ಹಣ : ಇ.ಡಿ. ಪರಿಶೀಲನೆ

ಯೂಟ್ಯೂಬರ್‌ಗಳಿಗೆ ವಿದೇಶದಿಂದ ಹಣ ಬರುತ್ತಿರುವ ಕುರಿತು ಹಲವು ದೂರು ದಾಖಲು ಧರ್ಮಸ್ಥಳ : ಧರ್ಮಸ್ಥಳದ ಕುರಿತು ಅಪಪ್ರಚಾರ ಮಾಡಲು ಯೂಟ್ಯೂಬರ್‌ಗಳಿಗೆ ವಿದೇಶದಿಂದ ಹಣ ಹರಿದುಬಂದಿದೆ ಎಂಬ ಆರೋಪದ ಬಗ್ಗೆ ಪರಿಶೀಲನೆ ನಡೆಸಲು ಜಾರಿ ನಿರ್ದೇಶನಾಲಯ ಮುಂದಾಗಿದೆ ಎಂದು ತಿಳಿದುಬಂದಿದೆ. ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಂಗಳವಾರ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ಯೂಟ್ಯೂಬರ್‌ಗಳಿಗೆ ವಿದೇಶಗಳಿಂದ ಭಾರಿ ಮೊತ್ತದ ಹಣ ಬಂದಿರುವ ಅನುಮಾನವಿದೆ ಎಂದು ಪತ್ರ ಬರೆದಿದ್ದರು. ಇದರ ಬೆನ್ನಲ್ಲೇ ದಾಖಲೆಗಳ ಪರಿಶೀಲನೆ ಮಾಡುವಂತೆ

ಧರ್ಮಸ್ಥಳ ಅಪಪ್ರಚಾರಕ್ಕೆ ವಿದೇಶದಿಂದ ಹಣ : ಇ.ಡಿ. ಪರಿಶೀಲನೆ Read More »

ಸರ್ಕಾರದಿಂದ ಹಿಂದೂಗಳ ಧಾರ್ಮಿಕ ಭಾವನೆಗೆ ಘಾಸಿ : ಕ್ಯಾ.ಬ್ರಿಜೇಶ್‌ ಚೌಟ ಆರೋಪ

ಕೃಷ್ಣಾಷ್ಟಮಿ ಸಂದರ್ಭ ಧ್ವನಿವರ್ಧಕ ಬಳಕೆ ತಡೆದ ಪೊಲೀಸರ ವಿರುದ್ಧ ಆಕ್ರೋಶ ಮಂಗಳೂರು: ಕಾಂಗ್ರೆಸ್ ಸರ್ಕಾರ ಪೊಲೀಸ್ ಇಲಾಖೆಯ ಮೂಲಕ ಹಬ್ಬಗಳ ಆಚರಣೆಗೆ ಕಠಿಣ ನಿಯಮಗಳನ್ನು ಹೇರಿ ಹಿಂದೂಗಳ ಭಾವನೆಗಳನ್ನು ಘಾಸಿಗೊಳಿಸುವ ಹುನ್ನಾರ ಮಾಡುತ್ತಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ.ಬ್ರಿಜೇಶ್ ಚೌಟ ಆರೋಪಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿ ಸೇರಿದಂತೆ ಹಲವು ಹಬ್ಬದ ಆಚರಣೆ ಸಂದರ್ಭ ಧ್ವನಿವರ್ಧಕ ಬಳಸುವುದಕ್ಕೆ ಪೊಲೀಸರು ಅವಕಾಶ ನೀಡದೆ ಷರತ್ತುಗಳನ್ನು ವಿಧಿಸಿ ತೊಂದರೆ ನೀಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಕ್ಯಾ.ಚೌಟ, ತುಳುನಾಡು ದೈವಾರಾಧನೆ,

ಸರ್ಕಾರದಿಂದ ಹಿಂದೂಗಳ ಧಾರ್ಮಿಕ ಭಾವನೆಗೆ ಘಾಸಿ : ಕ್ಯಾ.ಬ್ರಿಜೇಶ್‌ ಚೌಟ ಆರೋಪ Read More »

ಟೀಕೆಗೆ ಗುರಿಯಾದ ವಯನಾಡು ಭೂಕುಸಿತ ಸಂತ್ರಸ್ತರಿಗೆ 10 ಕೋ. ರೂ. ನೆರವು

ಗಾಂಧಿ ಕುಟುಂಬವನ್ನು ಮೆಚ್ಚಿಸಲು ಸಿದ್ದರಾಮಯ್ಯನವರ ಕೊಡುಗೆ ಎಂಬ ಆರೋಪ ಬೆಂಗಳೂರು: ಕಳೆದ ವರ್ಷ ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂಕುಸಿತ ಘಟನೆಯ ಸಂತ್ರಸ್ತರಿಗೆ ಕರ್ನಾಟಕ ಸರ್ಕಾರ 10 ಕೋ. ರೂ. ನೆರವು ನೀಡಿರುವುದು ಭಾರಿ ಟೀಕೆಗೆ ಗುರಿಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಗಾಂಧಿ ಕುಟುಂಬವನ್ನು ಮೆಚ್ಚಿಸಲು ಕರ್ನಾಟಕದ ಹಿತವನ್ನು ಕಡೆಗಣಿಸಿ ಪಕ್ಕದ ಕೇರಳಕ್ಕೆ ಕೋಟಿಗಟ್ಟಲೆ ನೆರವು ನೀಡಿದ್ದಾರೆ ಎಂಬ ಟೀಕೆಗಳು ಕೇಳಿಬಂದಿವೆ. ವಯನಾಡು ಪ್ರಿಯಾಂಕ ಗಾಂಧಿ ಗೆದ್ದಿರುವ ಲೋಕಸಭಾ ಕ್ಷೇತ್ರ. ನಮ್ಮ ದುಡ್ಡು ಕೇರಳಕ್ಕೆ ನೆರವು. ಇದು ರಾಜ್ಯ

ಟೀಕೆಗೆ ಗುರಿಯಾದ ವಯನಾಡು ಭೂಕುಸಿತ ಸಂತ್ರಸ್ತರಿಗೆ 10 ಕೋ. ರೂ. ನೆರವು Read More »

ಅನನ್ಯಾ ಭಟ್‌ ನಾಪತ್ತೆ ಪ್ರಕರಣ ಎಸ್‌ಐಟಿಗೆ ಹಸ್ತಾಂತರ

ಧರ್ಮಸ್ಥಳದಲ್ಲಿ ನಾಪತ್ತೆಯಾಗಿದ್ದಾರೆ ಎನ್ನಲಾಗಿರುವ ಅನನ್ಯಾ ಭಟ್‌ ಬೆಂಗಳೂರು: ಅನನ್ಯಾ ಭಟ್ ಎಂಬ ವೈದ್ಯಕೀಯ ವಿದ್ಯಾರ್ಥಿನಿ ಧರ್ಮಸ್ಥಳದಲ್ಲಿ ನಾಪತ್ತೆಯಾಗಿದ್ದಾರೆ ಎನ್ನಲಾದ ಪ್ರಕರಣದ ತನಿಖೆಯನ್ನು ಅಧಿಕೃತವಾಗಿ ಎಸ್‌ಐಟಿಗೆ ಹಸ್ತಾಂತರಿಸಲಾಗಿದೆ. ಡಿಜಿ&ಐಜಿಪಿ ಆದೇಶದಂತೆ ಮುಂದಿನ ವಿಚಾರಣೆಗಾಗಿ ಅನನ್ಯಾ ಭಟ್ ಪ್ರಕರಣವನ್ನು ವಿಶೇಷ ತನಿಖಾ ತಂಡಕ್ಕೆ ಹಸ್ತಾಂತರಿಸಲಾಗಿದೆ. 2003ರಲ್ಲಿ ಧರ್ಮಸ್ಥಳ ದೇವಸ್ಥಾನದ ಪರಿಸರದಿಂದ ತನ್ನ ಪುತ್ರಿ ಅನನ್ಯಾ ಭಟ್ ಕಾಣೆಯಾಗಿದ್ದ ಬಗ್ಗೆ ತಾಯಿ ಸುಜಾತ ಭಟ್ ಎಂಬವರು ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತನ್ನ ಮಗಳು ಅನನ್ಯಾ ಭಟ್ ಮಣಿಪಾಲದಲ್ಲಿ ವೈದ್ಯಕೀಯ

ಅನನ್ಯಾ ಭಟ್‌ ನಾಪತ್ತೆ ಪ್ರಕರಣ ಎಸ್‌ಐಟಿಗೆ ಹಸ್ತಾಂತರ Read More »

ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಮೇಲೆ ಹಲ್ಲೆ

ಜನಸಂಪರ್ಕ ಕಾರ್ಯಕ್ರಮದಲ್ಲಿ ಕಪಾಲಕ್ಕೆ ಹೊಡೆದ ವ್ಯಕ್ತಿ ನವದೆಹಲಿ: ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರಿಗೆ ವ್ಯಕ್ತಿಯೊಬ್ಬ ಕಪಾಳಮೋಕ್ಷ ಮಾಡಿದ್ದಾನೆಂದು ದೆಹಲಿ ಬಿಜೆಪಿ ಘಟಕ ತಿಳಿಸಿದೆ. ಸಿವಿಲ್ ಲೈನ್ಸ್‌ ಬಳಿಯಿರುವ ತಮ್ಮ ನಿವಾಸದಲ್ಲಿ ಜನ್ ಸುನ್‌ವಾಯಿ (ಜನಸಂಪರ್ಕ) ಕಾರ್ಯಕ್ರಮದ ವೇಳೆ ಈ ಘಟನೆ ನಡೆದಿದ್ದು, 30 ವರ್ಷದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ರೇಖಾ ಗುಪ್ತಾಗೆ ಯಾವುದೇ ಗಾಯವಾಗದಿದ್ದರೂ, ಈ ಘಟನೆ ಅವರನ್ನು ಆಘಾತಕ್ಕೀಡು ಮಾಡಿದೆ. ದಾಳಿಕೋರನನ್ನು ಈಗ ದೆಹಲಿ ಪೊಲೀಸರು ಬಂಧಿಸಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ. ಜನಸಂಪರ್ಕ

ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಮೇಲೆ ಹಲ್ಲೆ Read More »

ಧರ್ಮಸ್ಥಳ ಅಪಪ್ರಚಾರಕ್ಕೆ ವಿದೇಶಿ ಫಂಡಿಂಗ್‌ : ಇ.ಡಿ. ತನಿಖೆಗೆ ಸಂಸದ ಕೋಟ ಆಗ್ರಹ

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ಪತ್ರ ಬರೆದ ಶ್ರೀನಿವಾಸ ಪೂಜಾರಿ ಉಡುಪಿ: ಧರ್ಮಸ್ಥಳದ ಪಾವಿತ್ರ್ಯಕ್ಕೆ ಧಕ್ಕೆ ತರುವ ಸಲುವಾಗಿ ಅಪಪ್ರಚಾರ ಮಾಡಲು ವಿದೇಶಗಳಿಂದ ಹಣ ಬಂದಿರುವ ಅನುಮಾನ ವ್ಯಕ್ತಪಡಿಸಿರುವ ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿಯವರು ಈ ಕುರಿತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ಪತ್ರ ಬರೆದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಧರ್ಮಸ್ಥಳದ ಕುರಿತಾಗಿ ವ್ಯಾಪಕವಾಗಿ ಅಪಪ್ರಚಾರ ಮಾಡಲಾಗುತ್ತಿದೆ. ಈ ವಿಷಯವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿರುವ

ಧರ್ಮಸ್ಥಳ ಅಪಪ್ರಚಾರಕ್ಕೆ ವಿದೇಶಿ ಫಂಡಿಂಗ್‌ : ಇ.ಡಿ. ತನಿಖೆಗೆ ಸಂಸದ ಕೋಟ ಆಗ್ರಹ Read More »

error: Content is protected !!
Scroll to Top