ಸುದ್ದಿ

ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿ ಕೊಂದು ಸುಟ್ಟು ಹಾಕಿದ ದುರುಳರು

ವಸತಿ ಶಾಲೆಯ ವಿದ್ಯಾರ್ಥಿನಿ ಮೇಲೆ ನಡೆದ ಪೈಶಾಚಿಕ ಕೃತ್ಯಕ್ಕೆ ಆಕ್ರೋಶ ಬೆಂಗಳೂರು: ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಬಳಿಕ ಶವ ಸುಟ್ಟು ಹಾಕಿರುವ ಪೈಶಾಚಿಕ ಕೃತ್ಯ ಚಿತ್ರದುರ್ಗದ ಹಿರಿಯೂರು ಎಂಬಲ್ಲಿ ಸಂಭವಿಸಿದ್ದು, ಈ ಘಟನೆಗೆ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ಕೋವೇರಹಟ್ಟಿ ಮೂಲದ 19 ವರ್ಷದ ವರ್ಷಿತಾ ಎಂಬಾಕೆಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ವರ್ಷಿತಾ ಚಿತ್ರದುರ್ಗ ನಗರದ ಬಾಲಕಿಯರ ವಸತಿ ಶಾಲೆಯ ಪದವಿ ವಿದ್ಯಾರ್ಥಿನಿಯಾಗಿದ್ದು, ಈಕೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ […]

ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿ ಕೊಂದು ಸುಟ್ಟು ಹಾಕಿದ ದುರುಳರು Read More »

ಉಪ್ಪಿನಂಗಡಿ : ಮಹಿಳೆಯ ಸರ ಕಿತ್ತುಕೊಂಡು ಹೋಗಿದ್ದ ಆರೋಪಿ ಬಂಧನ

ಉಪ್ಪಿನಂಗಡಿ: ನೆಲ್ಯಾಡಿ ಗ್ರಾಮದ ಪಡುವೆಟ್ಟು ಎಂಬಲ್ಲಿ ಕಳೆದ ಜೂನ್ 4ರಂದು ಮನೆಯ ಗೇಟು ಮುಂಭಾಗದಲ್ಲಿ ನಿಂತಿದ್ದ ಮಹಿಳೆಯೋರ್ವರ ಕತ್ತಿನಿಂದ 6 ಪವನ್ ತೂಕದ ಚಿನ್ನದ ಸರವನ್ನು ಬೈಕ್‍ನಲ್ಲಿ ಬಂದು ಎಳೆದುಕೊಂಡು ಪರಾರಿಯಾಗಿದ್ದ ಪ್ರಕರಣದ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ಸುಳ್ಯ ಆಲೆಟ್ಟಿ ನಿವಾಸಿ ಅಬ್ದುಲ್ ರಹಿಮಾನ್ ಎಂಬಾತನಾಗಿರುತ್ತಾರೆ. ಆರೋಪಿಯಿಂದ 4,54,000 ರೂ. ಮೌಲ್ಯದ ಚಿನ್ನದ ಸರ ಮತ್ತು ಕೃತ್ಯಕ್ಕೆ ಬಳಸಿದ ಪಲ್ಸರ್ ಬೈಕನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬೈಕ್ ಬಗ್ಗೆ ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣ

ಉಪ್ಪಿನಂಗಡಿ : ಮಹಿಳೆಯ ಸರ ಕಿತ್ತುಕೊಂಡು ಹೋಗಿದ್ದ ಆರೋಪಿ ಬಂಧನ Read More »

5 ಕೋ.ರೂ. ಮೌಲ್ಯದ ಡ್ರಗ್ಸ್‌ ವಶ : ಇಬ್ಬರು ವಿದೇಶಿ ಪ್ರಜೆಗಳ ಬಂಧನ

ಬೆಂಗಳೂರು : ಡ್ರಗ್ಸ್‌ ದಂಧೆ ವಿರುದ್ಧ ನಡೆಸಿದ ಮಹತ್ವದ ಕಾರ್ಯಾಚರಣೆಯಲ್ಲಿ ಬೆಂಗಳೂರು ಪೊಲೀಸರು ಇಬ್ಬರು ವಿದೇಶಿ ಪ್ರಜೆಗಳನ್ನು ಬಂಧಿಸಿ ಅವರಿಂದ ಬರೋಬ್ಬರಿ ಐದು ಕೋಟಿ ರೂ. ಮೌಲ್ಯದ ಮಾದಕ ವಸ್ತು ವಶಪಡಿಸಿಕೊಂಡಿದ್ದಾರೆ. ಆಫ್ರಿಕಾ ಮೂಲದ ಜೊಯಲ್ ಕಾಬೊಂಗ್ ಮತ್ತು ಜೊಯ್ ಸಂಡೇ ಬಂಧಿತ ಆರೋಪಿಗಳು. ಜೊಯಲ್ ಕಾಬೊಂಗ್​ 12 ವರ್ಷಗಳ ಹಿಂದೆ ವಿದ್ಯಾರ್ಥಿ ವೀಸಾದಡಿ ಭಾರತಕ್ಕೆ ಬಂದಿದ್ದ. ಜೊಯ್ ಸಂಡೇ ಮೂರು ವರ್ಷಗಳ ಹಿಂದೆ ಭಾರತಕ್ಕೆ ಬಂದಿದ್ದಳು. ವೀಸಾ ಅವಧಿ ಮುಗಿದಿದ್ದರೂ ಬೆಂಗಳೂರಲ್ಲಿ ವಾಸವಾಗಿದ್ದರು. ಈ ಇಬ್ಬರು

5 ಕೋ.ರೂ. ಮೌಲ್ಯದ ಡ್ರಗ್ಸ್‌ ವಶ : ಇಬ್ಬರು ವಿದೇಶಿ ಪ್ರಜೆಗಳ ಬಂಧನ Read More »

ಮಕ್ಕಳ ನಾಪತ್ತೆ, ಅಪಹರಣ ಪ್ರಕರಣ : ನಾಲ್ಕನೇ ಸ್ಥಾನದಲ್ಲಿ ದಕ್ಷಿಣ ಕನ್ನಡ ಜಿಲ್ಲೆ

5 ವರ್ಷದಲ್ಲಿ ರಾಜ್ಯದಲ್ಲಿ 14,878 ಮಕ್ಕಳು ನಾಪತ್ತೆ ಬೆಂಗಳೂರು : ಕಳೆದ ಐದು ವರ್ಷದ ಅವಧಿಯಲ್ಲಿ ರಾಜ್ಯಾದ್ಯಂತ 14 ಸಾವಿರಕ್ಕಿಂತ ಹೆಚ್ಚು ಮಕ್ಕಳ ಅಪಹರಣವಾಗಿದ್ದು, ಈ ಪೈಕಿ 1,336 ಮಕ್ಕಳ ಅಪಹರಣ ಪ್ರಕರಣಗಳು ಇನ್ನೂ ನಿಗೂಢವಾಗಿ ಉಳಿದಿವೆ ಎಂದು ಗೃಹಸಚಿವ ಜಿ.ಪರಮೇಶ್ವರ್ ಮಂಗಳವಾರ ವಿಧಾನ ಪರಿಷತ್‌ನಲ್ಲಿ ತಿಳಿಸಿದ್ದಾರೆ. ಕಿಡ್ನಾಪ್ ಹಾಗೂ ನಿಗೂಢವಾಗಿ ನಾಪತ್ತೆಯಾದವರ ಪೈಕಿ ಹೆಣ್ಣು ಮಕ್ಕಳೇ ಹೆಚ್ಚು. ಮಕ್ಕಳ ನಾಪತ್ತೆ ಪ್ರಕರಣದಲ್ಲಿ ಬೆಂಗಳೂರು ಅಗ್ರಸ್ಥಾನದಲ್ಲಿದ್ದರೆ ಕರಾವಳಿ ಜಿಲ್ಲೆಗಳಾದ ಉಡುಪಿ ಮತ್ತು ದಕ್ಷಿಣ ಕನ್ನಡ ಕ್ರಮವಾಗಿ 3

ಮಕ್ಕಳ ನಾಪತ್ತೆ, ಅಪಹರಣ ಪ್ರಕರಣ : ನಾಲ್ಕನೇ ಸ್ಥಾನದಲ್ಲಿ ದಕ್ಷಿಣ ಕನ್ನಡ ಜಿಲ್ಲೆ Read More »

9ನೇ ತರಗತಿ ಮಕ್ಕಳಿಗೆ ಓಪನ್‌ ಬುಕ್‌ ಎಕ್ಸಾಮ್‌ ಪದ್ಧತಿ ಅಳವಡಿಸಲು ನಿರ್ಧಾರ

ಪಠ್ಯಪುಸ್ತಕ ನೋಡಿ ಪರೀಕ್ಷೆ ಬರೆಯಬಹುದು ನವದೆಹಲಿ: ಮಕ್ಕಳ ಪರೀಕ್ಷೆ ಒತ್ತಡ ನಿವಾರಿಸಲು ಮಹತ್ವದ ಹೆಜ್ಜೆಯಿಟ್ಟಿರುವ ಕೇಂದ್ರೀಯ ಶಿಕ್ಷಣ ಮಂಡಳಿ (ಸಿಬಿಎಸ್‌ಇ) 2026-27ನೇ ಶೈಕ್ಷಣಿಕ ವರ್ಷದಿಂದ ಜಾರಿಗೆ ಬರುವಂತೆ 9ನೇ ತರಗತಿ ವಿದ್ಯಾರ್ಥಿಗಳಿಗೆ ತೆರೆದ ಪುಸ್ತಕ (ಓಪನ್ ಬುಕ್) ಪರೀಕ್ಷೆ ಜಾರಿಗೊಳಿಸಲು ನಿರ್ಧಾರ ಕೈಗೊಂಡಿದೆ. ಈ ಹೊಸ ನೀತಿಯಲ್ಲಿ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ನೋಡಿಕೊಂಡು ಪರೀಕ್ಷೆ ಬರೆಯಲು ಅವಕಾಶ ಸಿಗಲಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ತೆರೆದ ಪುಸ್ತಕ ಪರೀಕ್ಷಾ ಪದ್ಧತಿ ಜಾರಿ ಮಾಡಲಾಗುತ್ತಿದೆ. ಹಳೆಯ ಪರೀಕ್ಷಾ ಪದ್ಧತಿ ಕಂಠಪಾಠಕ್ಕೆ ಆದ್ಯತೆ

9ನೇ ತರಗತಿ ಮಕ್ಕಳಿಗೆ ಓಪನ್‌ ಬುಕ್‌ ಎಕ್ಸಾಮ್‌ ಪದ್ಧತಿ ಅಳವಡಿಸಲು ನಿರ್ಧಾರ Read More »

ಶಾಲೆಗಳಲ್ಲಿ ಫೇಸ್ ರೆಕಗ್ನಿಷನ್ ವ್ಯವಸ್ಥೆ ಕೈಬಿಡುವಂತೆ ಸರ್ಕಾರಕ್ಕೆ ಪೋಷಕರ ಪತ್ರ

ಬೆಂಗಳೂರು: ಶಾಲೆಗಳಲ್ಲಿ ಮುಖ ಗುರುತಿಸುವಿಕೆ ವ್ಯವಸ್ಥೆಗಳನ್ನು ಜಾರಿಗೆ ತರುವ ಯೋಜನೆಯನ್ನು ಕೈಬಿಡಬೇಕು ‌ಎಂದು ಶಿಕ್ಷಣ ತಜ್ಞರು, ಶಿಕ್ಷಕರ ಸಂಘಗಳು, ಪೋಷಕರ ಗುಂಪುಗಳು, ನಾಗರಿಕ ಸಮಾಜ ಸಂಘಟನೆಗಳ ಒಕ್ಕೂಟ ರಾಜ್ಯ ಸರ್ಕಾರವನ್ನು ಒತ್ತಾಯಿಸಿವೆ‌. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ 2025-26 ನೇ ಸಾಲಿನಲ್ಲಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ವಿದ್ಯಾರ್ಥಿಗಳ ಸಾಧನೆ ಟ್ರ್ಯಾಕಿಂಗ್ ವ್ಯವಸ್ಥೆಗೆ ಲಿಂಕ್ ಮಾಡಲಾದ ಮೊಬೈಲ್ ಆಧಾರಿತ AI ಫೇಸ್ ರೆಕಗ್ನಿಷನ್ ವ್ಯವಸ್ಥೆಯನ್ನು ಜಾರಿ ಮಾಡಬೇಕು ಎಂದು ಘೋಷಿಸಿದೆ. ಆದರೆ ಇದು ದುರುಪಯೋಗವಾಗುವ ಸಾಧ್ಯತೆ

ಶಾಲೆಗಳಲ್ಲಿ ಫೇಸ್ ರೆಕಗ್ನಿಷನ್ ವ್ಯವಸ್ಥೆ ಕೈಬಿಡುವಂತೆ ಸರ್ಕಾರಕ್ಕೆ ಪೋಷಕರ ಪತ್ರ Read More »

ಬಿ.ಎಲ್‌.ಸಂತೋಷ್‌ ನಿಂದನೆ : ತಿಮರೋಡಿ ವಿರುದ್ಧ ದೂರು ದಾಖಲು

ಉಡುಪಿ: ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಅವರನ್ನು ವಾಚಾಮಗೋಚರವಾಗಿ ನಿಂದಿಸಿದ ಮಹೇಶ್‌ ತಿಮರೋಡಿ ವಿರುದ್ಧ ಉಡುಪಿಯ ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಫೇಸ್‌ಬುಕ್‌ ವೀಡಿಯೊದಲ್ಲಿ ಮಹೇಶ್‌ ತಿಮರೋಡಿ ಎಂಬ ವ್ಯಕ್ತಿ ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ಹಿರಿಯ ಹಿಂದೂ ನಾಯಕರಾಗಿರುವ ಬಿ.ಎಲ್‌.ಸಂತೋಷ್‌ ವಿರುದ್ಧ ಅವಾಚ್ಯ ಶಬ್ದಗಳನ್ನು ಬಳಸಿ ನಿಂದಿಸಿ ತೇಜೋವಧೆ ಮಾಡಿದ್ದಾರೆ. ಈ ಮೂಲಕ ವಿಭಿನ್ನ ಧರ್ಮಗಳ ನಡುವೆ ವೈಷಮ್ಯ ಸೃಷ್ಟಿಸಲು ಯತ್ನಿಸಿದ್ದಾರೆ ಎಂದು ಬಿಜೆಪಿ ಉಡುಪಿ ಜಿಲ್ಲೆ ಗ್ರಾಮಾಂತರ ಮಂಡಲಾಧ್ಯಕ್ಷ ರಾಜೀವ್‌ ಕುಲಾಲ್‌ ಎಂಬವರು

ಬಿ.ಎಲ್‌.ಸಂತೋಷ್‌ ನಿಂದನೆ : ತಿಮರೋಡಿ ವಿರುದ್ಧ ದೂರು ದಾಖಲು Read More »

ಸುಜಾತ ಭಟ್‌ ತೋರಿಸಿದ ಫೋಟೊ ಅನನ್ಯಾಳದ್ದಲ್ಲ, ವಾಸಂತಿ ಎಂಬ ಮಹಿಳೆಯದ್ದು!

ಒಂದೇ ದಿನದಲ್ಲಿ ಬಹಿರಂಗವಾಯಿತು ಫೋಟೊ ಅಸಲಿಯತ್ತು ಬೆಂಗಳೂರು: ಧರ್ಮಸ್ಥಳ ಪ್ರಕರಣ ದಿನ ಕಳೆದಂತೆ ಜಟಿಲವಾಗುತ್ತಿದೆ. ನಿನ್ನೆ ಸುಜಾತ ಭಟ್‌ ಎಂಬ ವೃದ್ಧೆ ಧರ್ಮಸ್ಥಳದಲ್ಲಿ 40 ವರ್ಷದ ಹಿಂದೆ ನಾಪತ್ತೆಯಾಗಿರುವ ತನ್ನ ಪುತ್ರಿ ಅನನ್ಯಾ ಭಟ್‌ ಇವಳೇ ಎಂದು ಹೇಳಿ ತೋರಿಸಿದ್ದ ಕಲರ್‌ ಫೋಟ್‌ ಯಾರದ್ದು ಎನ್ನುವುದನ್ನು ಸುದ್ದಿವಾಹಿನಿಯೊಂದು ಪತ್ತೆ ಹಚ್ಚಿ ಧರ್ಮಸ್ಥಳದ ವಿರುದ್ಧ ವ್ಯವಸ್ಥಿತ ಷಡ್ಯಂತ್ರ ನಡೆದಿದೆ ಎಂಬ ಆರೋಪಕ್ಕೆ ಇನ್ನೊಂದು ಪುರಾವೆ ಒದಗಿಸಿದೆ. 2007ರಲ್ಲಿ ಸಾವಿಗೀಡಾಗಿರುವ ಕೊಡಗು ಮೂಲದ ವಾಸಂತಿ ಎಂಬ ಯುವತಿಯ ಕಾಲೇಜು ದಿನಗಳ

ಸುಜಾತ ಭಟ್‌ ತೋರಿಸಿದ ಫೋಟೊ ಅನನ್ಯಾಳದ್ದಲ್ಲ, ವಾಸಂತಿ ಎಂಬ ಮಹಿಳೆಯದ್ದು! Read More »

ತಮಿಳುನಾಡಿನಲ್ಲಿ ತನ್ನನ್ನು ಕೆಲವು ವ್ಯಕ್ತಿಗಳು ಭೇಟಿ ಮಾಡಿದ್ದಾರೆಂದು ಮುಸುಕುಧಾರಿ ಹೇಳಿಲ್ಲ : ಎಸ್‌ಐಟಿ ಸ್ಪಷ್ಟನೆ

ಸುಳ್ಳು ಸುದ್ದಿ, ಭಾವನೆಗಳನ್ನು ಕೆರಳಿಸುವ ವೀಡಿಯೊ ಮಾಡದಂತೆ ಯೂಟ್ಯೂಬರ್‌ಗಳಿಗೆ ಖಡಕ್‌ ಎಚ್ಚರಿಕೆ ಮಂಗಳೂರು: ತಮಿಳುನಾಡಿನಲ್ಲಿದ್ದ ವೇಳೆ ಗುಂಪೊಂದು ತನ್ನನ್ನು ಸಂಪರ್ಕಿಸಿತ್ತು ಎಂದು ದೂರುದಾರ ಮುಸುಕುಧಾರಿ ವ್ಯಕ್ತಿ ಹೇಳಿಲ್ಲ ಎಂದು ಧರ್ಮಸ್ಥಳ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. 2014ರ ನಂತರ ತಮಿಳುನಾಡಿನಲ್ಲಿದ್ದೆ. 2023ರಲ್ಲಿ ಒಂದು ಗುಂಪು ನನ್ನನ್ನು ಸಂಪರ್ಕಿಸಿತ್ತು. ಧರ್ಮಸ್ಥಳದಲ್ಲಿ ಶವ ಹೂತಿರುವ ಬಗ್ಗೆ ನನ್ನನ್ನು ಕೇಳಿತ್ತು. ನಾನು ಕಾನೂನು ಪ್ರಕಾರವೇ ಶವಗಳನ್ನು ಹೂತಿರುವುದಾಗಿ ಹೇಳಿದ್ದೆ. ಆದರೆ ಈ ಗುಂಪು ತಪ್ಪು ಹೇಳಿಕೆ ನೀಡುವಂತೆ ಒತ್ತಡ

ತಮಿಳುನಾಡಿನಲ್ಲಿ ತನ್ನನ್ನು ಕೆಲವು ವ್ಯಕ್ತಿಗಳು ಭೇಟಿ ಮಾಡಿದ್ದಾರೆಂದು ಮುಸುಕುಧಾರಿ ಹೇಳಿಲ್ಲ : ಎಸ್‌ಐಟಿ ಸ್ಪಷ್ಟನೆ Read More »

ಸವಣೂರು : ಪ್ರಚಂಡ ವೇಗದ ಬಿರುಗಾಳಿಗೆ ಅಡಕೆ ಮರಗಳು, ವಿದ್ಯುತ್‌ ಕಂಬಗಳು ಧರಾಶಾಯಿ

ಹಾರಿಹೋದ ಮನೆಗಳ ಛಾವಣಿ; ಅಪಾರ ನಾಶನಷ್ಟ ಕಡಬ: ಕಡಬ ತಾಲೂಕಿನ ಸವಣೂರು ಗ್ರಾಮದಲ್ಲಿ ಮಂಗಳವಾರ ಮುಂಜಾನೆ ಪ್ರಚಂಡ ವೇಗದ ಬಿರುಗಾಳಿ ಬೀಸಿ ಅಪಾರ ನಾಶನಷ್ಟ ಉಂಟಾಗಿದೆ. ಅಡಕೆ ಮರಗಳು, ವಿದ್ಯುತ್‌ ಕಂಬಗಳು ಧರಾಶಾಯಿಯಾಗಿದ್ದು, ಹಲವು ಮನೆಗಳ ಹೆಂಚು, ಶೀಟ್‌ಗಳು ಹಾರಿಹೋಗಿವೆ. ಸವಣೂರು ಮೆಸ್ಕಾಂ ಉಪವಿಭಾಗದ ಕೆಡೆಂಜಿ, ಅರೆಲ್ತಡಿ, ಕುದ್ಮನಮಜಲು, ಪಟ್ಟೆ, ಮಡಕೆ ಮತ್ತು ಕುದ್ಮಾರು ಗ್ರಾಮದ ಅನ್ಯಾಡಿ ಪರಿಸರದಲ್ಲಿ ಮುಂಜಾನೆ 5 ಗಂಟೆ ವೇಳೆಗೆ ಬೀಸಿದ ಬಿರುಗಾಳಿ ವ್ಯಾಪಕವಾಗಿ ನಾಶ ಉಂಟುಮಾಡಿದೆ. ಅರೇಲ್ತಡಿ ಕೊರಗಜ್ಜನ ಕಟ್ಟೆ, ದೈವಸ್ಥಾನದ

ಸವಣೂರು : ಪ್ರಚಂಡ ವೇಗದ ಬಿರುಗಾಳಿಗೆ ಅಡಕೆ ಮರಗಳು, ವಿದ್ಯುತ್‌ ಕಂಬಗಳು ಧರಾಶಾಯಿ Read More »

error: Content is protected !!
Scroll to Top