ಸುದ್ದಿ

ಧರ್ಮಸ್ಥಳ ಪ್ರಕರಣ : ಬುರುಡೆ ದಿಲ್ಲಿ ಪ್ರಯಾಣ ನಿಜ

ಜಯಂತ್‌ ಟಿ. ಮನೆಯಲ್ಲಿ ಎಸ್‌ಐಟಿ ಶೋಧ ವೇಳೆ ಬಯಲಾಯಿತು ಹಲವು ರಹಸ್ಯ ಧರ್ಮಸ್ಥಳ : ಧರ್ಮಸ್ಥಳದಲ್ಲಿ ನೂರಾರು ಶವ ಹೂತು ಹಾಕಿದ್ದೇನೆ ಎಂದು ಹೇಳಿಕೊಂಡು ಮಾಸ್ಕ್‌ಮ್ಯಾನ್‌ ಚಿನ್ನಯ್ಯ ತಂದಿದ್ದ ತಲೆಬುರುಡೆ ದಿಲ್ಲಿವರೆಗೂ ಪ್ರಯಾಣಿಸಿತ್ತು ಎಂಬುದು ಈಗ ದೃಢಪಟ್ಟಿದೆ. ಸ್ವತಹ ಜಯಂತ್‌ ಟಿ. ವಿಚಾರವನ್ನು ಒಪ್ಪಿಕೊಂಡಿದ್ದಾರೆ. ಶನಿವಾರ ಬೆಂಗಳೂರಿನಲ್ಲಿರುವ ಜಯಂತ್‌ ಟಿ. ಅವರ ಬಾಡಿಗೆ ಮನೆಗೆ ಎಸ್‌ಐಟಿ ತಂಡ ಚಿನ್ನಯ್ಯನನ್ನು ಕರೆದುಕೊಂಡು ಹೋಗಿ ಶೋಧ ನಡೆಸಿದೆ. ಈ ಸಂದರ್ಭದಲ್ಲಿ ಕೆಲವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಈ ದಾಳಿಯ […]

ಧರ್ಮಸ್ಥಳ ಪ್ರಕರಣ : ಬುರುಡೆ ದಿಲ್ಲಿ ಪ್ರಯಾಣ ನಿಜ Read More »

ಸೌಪರ್ಣಿಕಾ ನದಿಯಲ್ಲಿ ನಾಪತ್ತೆಯಾಗಿದ್ದ ಮಹಿಳೆಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ

ಸಾವಿನ ಸುತ್ತ ಕವಿದಿದೆ ನಿಗೂಢ ಉಡುಪಿ: ಕೊಲ್ಲೂರಿನಲ್ಲಿ ಸೌಪರ್ಣಿಕಾ ನದಿಗೆ ಈಜಲು ಇಳಿದು ನಾಪತ್ತೆಯಾಗಿದ್ದ ಬೆಂಗಳೂರಿನ ಮಹಿಳೆಯ ಶವ ಶನಿವಾರ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅವರನ್ನು ಬೆಂಗಳೂರು ತ್ಯಾಗರಾಜನಗರ ನಿವಾಸಿ ಸಿ.ಆರ್.ಗೋವಿಂದರಾಜು-ವಿಮಲಾ ಎಂಬವರ ಪುತ್ರಿ ವಸುಧಾ ಚಕ್ರವರ್ತಿ (46) ಎಂದು ಗುರುತಿಸಲಾಗಿದೆ. ಆ. 27ರಂದು ಕೊಲ್ಲೂರಿಗೆ ಕಾರಿನಲ್ಲಿ ಬಂದಿದ್ದ ಅವರು ನಂತರ ಕಾಣೆಯಾಗಿದ್ದರು. ಪೊಲೀಸರು ಅಗ್ನಿಶಾಮಕ ದಳ ಮತ್ತು ಮುಳುಗು ತಜ್ಞ ಈಶ್ವರ್ ಮಲ್ಪೆ ತಂಡ 2 ದಿನ ನದಿಯಲ್ಲಿ ಹುಡುಕಾಡಿದ್ದರು. ಆದರೆ ನದಿಯಲ್ಲಿ ಮಳೆಯ ನೀರು

ಸೌಪರ್ಣಿಕಾ ನದಿಯಲ್ಲಿ ನಾಪತ್ತೆಯಾಗಿದ್ದ ಮಹಿಳೆಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ Read More »

ಡಿ.ಕೆ. ಶಿವಕುಮಾರ್ ಅವರಿಗೆ ಎಲ್ಲಾ ರೀತಿಯ ಜ್ಞಾನವೂ ಇದೆ: ಡಾ. ಜಿ. ಪರಮೇಶ್ವರ್

ಬೆಂಗಳೂರು: ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ರಾಜಕೀಯ ಗೊತ್ತು, ಎಲ್ಲಾ ರೀತಿಯ ಜ್ಞಾನವೂ ಇದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ. ಡಿಕೆಶಿ ‌ನಮ್ಮ ಪಕ್ಷದ ರಾಜ್ಯಾಧ್ಯಕ್ಷರು. ಉಪಮುಖ್ಯಮಂತ್ರಿಗಿಂತಲೂ ಅವರ ಸ್ಥಾನಮಾನ ಹೆಚ್ಚು. ಪಕ್ಷದ ಕಾರ್ಯಕರ್ತರು ಅವರಿಗೆ ಸದಾ ಗೌರವ, ಮರ್ಯಾದೆ ನೀಡುತ್ತಾರೆ ಎಂದು ತಿಳಿಸಿದ್ದಾರೆ. ರಾಜಕೀಯದಲ್ಲಿ ಅವರು ಸಾಕಷ್ಟು ಅನುಭವ ಹೊಂದಿದವರು. ಎಲ್ಲಾ ರೀತಿಯ ಜ್ಞಾನವೂ ಅವರಲ್ಲಿ ಇದೆ. ಅವರನ್ನು ಐಸೋಲೇಶನ್ ಮಾಡಲಾಗಿದೆ ಎನ್ನುವ ಮಾತು ಸುಳ್ಳು. ಇಂತಹ ಅಪಪ್ರಚಾರಕ್ಕೆ ಅರ್ಥ ಇಲ್ಲ

ಡಿ.ಕೆ. ಶಿವಕುಮಾರ್ ಅವರಿಗೆ ಎಲ್ಲಾ ರೀತಿಯ ಜ್ಞಾನವೂ ಇದೆ: ಡಾ. ಜಿ. ಪರಮೇಶ್ವರ್ Read More »

ರೇಣುಕಾಸ್ವಾಮಿ ಕೊಲೆ ಆರೋಪಿಗಳ ಜೈಲು ಶಿಫ್ಟ್ ಅರ್ಜಿ ವಿಚಾರಣೆ ಮುಂದೂಡಿಕೆ

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಆರೋಪಿ ದರ್ಶನ್ ತೂಗುದೀಪ್ ಸೇರಿ ಐವರು ಆರೋಪಿಗಳ ಜೈಲು ಸ್ಥಳಾಂತರ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ಮುಂದೂಡಿದೆ. ಆರೋಪಿಗಳನ್ನು ಬಳ್ಳಾರಿ, ಶಿವಮೊಗ್ಗ, ಕಲ್ಬುರ್ಗಿ, ಬೆಳಗಾವಿ ಜೈಲುಗಳಿಗೆ ‌ಸ್ಥಳಾಂತರ ಮಾಡುವ ಬಗ್ಗೆ ಮನವಿಯನ್ನು ಕುರಿತಾಗಿ ನ್ಯಾಯಾಲಯದಲ್ಲಿ ಚರ್ಚೆ ನಡೆಯಿತು. ದರ್ಶನ್ ಬಳ್ಳಾರಿ ಜೈಲಿಗೆ, ಜಗದೀಶ್ ಮತ್ತು ಲಕ್ಷ್ಮಣ್ ಶಿವಮೊಗ್ಗ ಜೈಲಿಗೆ, ನಾಗರಾಜ್ ಕಲಬುರಗಿ ಜೈಲಿಗೆ ಹಾಗೂ ಪ್ರದೂಷ್ ಬೆಳಗಾವಿ ಜೈಲಿಗೆ ಶಿಫ್ಟ್ ಮಾಡಲು ಪ್ರಸ್ತಾಪ ಮಾಡಲಾಗಿದೆ. ಆದರೆ ದರ್ಶನ್, ಲಕ್ಷಣ್, ನಾಗರಾಜ್

ರೇಣುಕಾಸ್ವಾಮಿ ಕೊಲೆ ಆರೋಪಿಗಳ ಜೈಲು ಶಿಫ್ಟ್ ಅರ್ಜಿ ವಿಚಾರಣೆ ಮುಂದೂಡಿಕೆ Read More »

ಮಾನವ ಜಿಪಿಎಸ್‌ ಕುಖ್ಯಾತಿಯ ಉಗ್ರ ಬಾಗು ಖಾನ್‌ ಎನ್‌ಕೌಂಟರ್‌ಗೆ ಬಲಿ

100ಕ್ಕೂ ಅಧಿಕ ಉಗ್ರರಿಗೆ ಒಳ ನುಸುಳುಲು ಸಹಾಯ ಮಾಡಿದ್ದ ಪಾತಕಿ ಶ್ರೀನಗರ: ನೂರಕ್ಕೂ ಅಧಿಕ ಉಗ್ರರಿಗೆ ಒಳನುಸುಳಲು ಸಹಾಯ ಮಾಡಿದ್ದ, ಉಗ್ರರ ಲೋಕದಲ್ಲಿ ಮಾನವ ಜಿಪಿಎಸ್‌ ಎಂದೇ ಕುಖ್ಯಾತನಾಗಿದ್ದ ಬಾಗು ಖಾನ್‌ ಎಂಬಾತನನ್ನು ಭದ್ರತಾ ಪಡೆ ಶನಿವಾರ ಎನ್‌ಕೌಂಟರ್‌ನಲ್ಲಿ ಸಾಯಿಸಿದೆ. ಇವನ ಜೊತೆಗೆ ಇನ್ನೂ ಓರ್ವ ಉಗ್ರ ಸತ್ತಿದ್ದಾನೆ. ಸಮಂದರ್‌ ಚಾಚಾ ಎಂಬ ಇನ್ನೊಂದು ಹೆಸರನ್ನು ಹೊಂದಿರುವ ಬಾಗು ಖಾನ್‌ 1995ರಿಂದೀಚೆಗೆ ಪಾಕ್‌ ಆಕ್ರಮಿತ ಕಾಶ್ಮೀರವನ್ನು ನೆಲೆ ಮಾಡಿಕೊಂಡಿದ್ದ. ನೌಶೇರಾದಲ್ಲಿ ಇಂದು ಬೆಳಗ್ಗೆ ಅವನನ್ನು ಭದ್ರತಾ ಪಡೆ

ಮಾನವ ಜಿಪಿಎಸ್‌ ಕುಖ್ಯಾತಿಯ ಉಗ್ರ ಬಾಗು ಖಾನ್‌ ಎನ್‌ಕೌಂಟರ್‌ಗೆ ಬಲಿ Read More »

ಕೊಲ್ಲೂರು: ಸೌಪರ್ಣಿಕಾ ನದಿಗೆ ಈಜಲು ಇಳಿದ ಬೆಂಗಳೂರಿನ ಮಹಿಳೆ ನಾಪತ್ತೆ

ಕಾರು ದಡದಲ್ಲಿ ನಿಲ್ಲಿಸಿ ನದಿಯಲ್ಲಿ ಈಜಾಡುತ್ತಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಉಡುಪಿ : ಎರಡು ದಿನಗಳ ಹಿಂದೆ ಕೊಲ್ಲೂರಿಗೆ ಆಗಮಿಸಿದ್ದ ಬೆಂಗಳೂರಿನ ವಿವಾಹಿತ ಮಹಿಳೆಯೊಬ್ಬರು ಸೌಪರ್ಣಿಕಾ ನದಿಯಲ್ಲಿ ಈಜಲು ಇಳಿದು ನಾಪತ್ತೆಯಾಗಿದ್ದು, ಈ ಪ್ರಕರಣ ಅನೇಕ ಊಹಾಪೋಹಗಳಿಎಗ ಕಾರಣವಾಗಿದೆ. ನಾಪತ್ತೆಯಾದ ಮಹಿಳೆಯನ್ನು ಬೆಂಗಳೂರಿನ ತ್ಯಾಗರಾಜ ನಗರದ ನಿವಾಸಿ ಸಿ.ಆರ್. ಗೋವಿಂದರಾಜು ಎಂಬವರ ಪುತ್ರಿ ವಸುಧಾ ಚಕ್ರವರ್ತಿ (46) ಎಂದು ಗುರುತಿಸಲಾಗಿದೆ. ಆಗಸ್ಟ್ 28ರಂದು ಅವರು ಕೊಲ್ಲೂರಿಗೆ ಆಗಮಿಸಿ, ಖಾಸಗಿ ಲಾಡ್ಜ್ ಬಳಿ ತಮ್ಮ ಕಾರನ್ನು ನಿಲ್ಲಿಸಿ ದೇವಸ್ಥಾನಕ್ಕೆ

ಕೊಲ್ಲೂರು: ಸೌಪರ್ಣಿಕಾ ನದಿಗೆ ಈಜಲು ಇಳಿದ ಬೆಂಗಳೂರಿನ ಮಹಿಳೆ ನಾಪತ್ತೆ Read More »

ಆಸ್ತಿ ನೋಂದಣಿ ಶುಲ್ಕ ಏರಿಕೆ ಮಾಡಿ ಆದೇಶ ಹೊರಡಿಸಿದ ಕಂದಾಯ ಇಲಾಖೆ

ಜನರಿಗೆ ಸರ್ಕಾರದಿಂದ ಮತ್ತೊಂದು ಏರಿಕೆ ಬರೆ ಬೆಂಗಳೂರು: ಆಸ್ತಿ ನೋಂದಣಿ ಶುಲ್ಕವನ್ನು ಹೆಚ್ಚಳ ಮಾಡಿ ಕಂದಾಯ ಇಲಾಖೆ ಆದೇಶ ಹೊರಡಿಸಿದೆ. ಆ ಮೂಲಕ ಮೊದಲೇ ಬೆಲೆ ಏರಿಕೆಯಿಂದ ತತ್ತರಿಸಿರುವ ಜನತೆಗೆ ಸರ್ಕಾರ ಮತ್ತೊಂದು ಬರೆ ಎಳೆದಿದೆ. ಆಸ್ತಿ ನೋಂದಣಿ ಶುಲ್ಕ ಶೇ.1ರಿಂದ ಶೇ.2ರಷ್ಟು ಏರಿಕೆ ಮಾಡಲಾಗಿದ್ದು, ಆ.31ರಿಂದ ಅನ್ವಯವಾಗಲಿದೆ. ರಾಜ್ಯದಲ್ಲಿ ಈವರೆಗೆ ನಿವೇಶನ, ಭೂಮಿ, ಫ್ಲ್ಯಾಟ್,​ ಮನೆ ಸೇರಿದಂತೆ ಸ್ಥಿರಾಸ್ತಿ ಖರೀದಿ ವೇಳೆ ಶೇ.1ರಷ್ಟು ನೋಂದಣಿ ಶುಲ್ಕ ಹಾಗೂ ಶೇ.5.6ರಷ್ಟು ಮುದ್ರಾಂಕ ಶುಲ್ಕ ಸೇರಿ ಶೇ.6.6ರಷ್ಟು ಶುಲ್ಕ

ಆಸ್ತಿ ನೋಂದಣಿ ಶುಲ್ಕ ಏರಿಕೆ ಮಾಡಿ ಆದೇಶ ಹೊರಡಿಸಿದ ಕಂದಾಯ ಇಲಾಖೆ Read More »

ಎಸ್‌ಐಟಿ ಕಚೇರಿ ಮೆಟ್ಟಿಲು ಹತ್ತುವಾಗ ಎದೆ ಢವ ಢವ ಆಯಿತು: ಮಟ್ಟಣ್ಣವರ್‌ ಹೇಳಿಕೆ ವೈರಲ್‌

ಎಸ್‌ಐಟಿ ಮುಂದೆ ಸುದೀರ್ಘ ವಿಚಾರಣೆಗೆ ಹಾಜರಾದ ಮಟ್ಟಣ್ಣವರ್‌ ಬೆಳ್ತಂಗಡಿ: ಧರ್ಮಸ್ಥಳ ವಿರುದ್ಧ ಅಪಪ್ರಚಾರ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಗಿರೀಶ್ ಮಟ್ಟಣ್ಣನವರ್ ಅವರನ್ನು ಶುಕ್ರವಾರ ಎಸ್‌ಐಟಿ ಅಧಿಕಾರಿಗಳು ತೀವ್ರ ವಿಚಾರಣೆಗೆ ಗುರಿಪಡಿಸಿದ್ದಾರೆ. ವಿಚಾರಣೆ ಮುಗಿಸಿದ ಬಳಿಕ ಎಸ್‌ಐಟಿ ಕಚೇರಿಯಿಂದ ಹೊರಬಂದ ಅವರು ಮಾಧ್ಯಮದವರ ಜೊತೆ ಮಾತನಾಡಿ ಎಸ್‌ಐಟಿ ಕಚೇರಿ ಮೆಟ್ಟಿಲು ಹತ್ತುತ್ತಿದ್ದಂತೆಯೇ ಎದೆ ಢವ ಢವ ಅಂತಾ ಬಡಿಕೊಳ್ಳಲು ಪ್ರಾರಂಭಿಸಿತು. ಜಗತ್ತಿನಲ್ಲಿ ಎಷ್ಟು ಮುಸ್ಲಿಂ, ಕ್ರಿಶ್ಚಿಯನ್ ರಾಷ್ಟ್ರಗಳಿವೆ ಎಂದು ಕೇಳಿದರು. ನಂತರ ಯಾವ ಯಾವ ಪಾದ್ರಿ, ಮೌಲಿ, ಶೇಟ್‌ಗಳಿಂದ

ಎಸ್‌ಐಟಿ ಕಚೇರಿ ಮೆಟ್ಟಿಲು ಹತ್ತುವಾಗ ಎದೆ ಢವ ಢವ ಆಯಿತು: ಮಟ್ಟಣ್ಣವರ್‌ ಹೇಳಿಕೆ ವೈರಲ್‌ Read More »

ನಟಿ ರಮ್ಯಾಗೆ ಅಶ್ಲೀಲ ಕಮೆಂಟ್‌ : ಮತ್ತೆ ಕೆಲವರ ಬಂಧನ

ಸೋಷಿಯಲ್‌ ಮೀಡಿಯಾದಲ್ಲಿ ಅಸಭ್ಯ ಕಮೆಂಟ್‌ ಹಾಕಿ ತೇಜೋವಧೆ ಮಾಡಿದ ಪ್ರಕರಣ ಬೆಂಗಳೂರು: ನಟಿ ರಮ್ಯಾಗೆ ಸಾಮಾಜಿಕ ಜಾಲಾತಾಣದಲ್ಲಿ ಅಶ್ಲೀಲ ಸಂದೇಶ ಕಳಿಸಿದ್ದ ಮತ್ತಷ್ಟು ಮಂದಿಯನ್ನ ಸಿಸಿಬಿ ಪೊಲೀಸರು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದ್ದಾರೆ‌. ನಟಿಗೆ ಅಶ್ಲೀಲ ಸಂದೇಶ ಮಾಡಿ ಸಿಕ್ಕಿ ಬಿದ್ದವರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ. ಬಿಜಾಪುರ, ಚಿತ್ರದುರ್ಗ, ಬೆಂಗಳೂರು ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಿಂದ 9 ಆರೋಪಿಗಳನ್ನು ಬಂಧಿಸಿದ್ದ ಸಿಸಿಬಿ ಪೊಲೀಸರು ಮತ್ತೆ ಇಬ್ಬರು ಉತ್ತರ ಕರ್ನಾಟಕದ ಮೂಲದ ಯುವಕರನ್ನು ಬಂಧಿಸಿದ್ದಾರೆ. ಬಂಧಿತರಿಬ್ಬರು ಸಣ್ಣಪುಟ್ಟ

ನಟಿ ರಮ್ಯಾಗೆ ಅಶ್ಲೀಲ ಕಮೆಂಟ್‌ : ಮತ್ತೆ ಕೆಲವರ ಬಂಧನ Read More »

ಭಾರಿ ಮಳೆ : ಇಂದು ದ.ಕ.ಜಿಲ್ಲೆಯಲ್ಲಿ ಪ್ರಾಥಮಿಕ, ಪ್ರೌಢಶಾಲೆಗಳಿಗೆ ರಜೆ

ಮಂಗಳೂರು: ನಿರಂತರವಾಗಿ ಭಾರಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಆ.30ರಂದು (ಶನಿವಾರ) ದ.ಕ.ಜಿಲ್ಲೆಯ ಎಲ್ಲ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ ಘೊಷಿಸಿ ದ.ಕ.ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಹವಾಮಾನ ಇಲಾಖೆ ಕರಾವಳಿಯಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಶಾಲೆಗಳಿಗೆ ರಜೆ ಸಾರಲಾಗಿದೆ.

ಭಾರಿ ಮಳೆ : ಇಂದು ದ.ಕ.ಜಿಲ್ಲೆಯಲ್ಲಿ ಪ್ರಾಥಮಿಕ, ಪ್ರೌಢಶಾಲೆಗಳಿಗೆ ರಜೆ Read More »

error: Content is protected !!
Scroll to Top